ಹಳದಿ ಪತ್ರಿಕೋದ್ಯಮ
Journalism |
---|
|
Areas |
|
Genres |
|
Social impact |
|
News media |
|
Roles |
|
ಹಳದಿ ಪತ್ರಿಕೋದ್ಯಮ ಅಥವಾ ಹಳದಿ ಮಾಧ್ಯಮ ವು ಪತ್ರಿಕೋದ್ಯಮದ ಪ್ರಕಾರವಾಗಿದ್ದು, ಅದು ಸ್ವಲ್ಪವೇ ಸುದ್ದಿಯನ್ನು ಅಥವಾ ಯಾವುದೇ ಸಮರ್ಥನೀಯವಲ್ಲದ ಚೆನ್ನಾಗಿ ಸಂಶೋಧನೆ ಮಾಡದ ಸುದ್ದಿಗಳನ್ನು ಪ್ರಸ್ತುತಪಡಿಸುತ್ತದೆ ಮತ್ತು ಬದಲಿಗೆ ಹೆಚ್ಚು ಸುದ್ದಿ ಪತ್ರಿಕೆಗಳನ್ನು ಮಾರಾಟ ಮಾಡಲು ಆಕರ್ಷಣೀಯವಾದ ಮುಖ್ಯ ಸುದ್ದಿಗಳನ್ನು ಬಳಸುತ್ತದೆ. ಸುದ್ದಿ ಘಟನೆಗಳನ್ನು ವೈಭವೀಕರಿಸುವುದು, ದೂಷಣೆ ಮಾಡುವುದು ಅಥವಾ ಉದ್ರೇಕಗೊಳಿಸುವುದನ್ನು ಒಳಗೊಂಡಿರುತ್ತದೆ. ಆದರೆ "ಹಳದಿ ಪತ್ರಿಕೋದ್ಯಮ"ದ ವಿಸ್ತರಣೆಯನ್ನು ಇಂದು ಸುದ್ದಿಗಳನ್ನು ಯಾವುದೇ ವೃತ್ತಿಪರವಲ್ಲದ ಅಥವಾ ಅನೈತಿಕ ಮಾರ್ಗದಲ್ಲಿ ಪರಿಗಣಿಸುವ ಯಾವುದ ಪತ್ರಿಕೋದ್ಯಮವನ್ನು ಹೀಗಳೆಯಲು ಹೀನಾರ್ಥಕ ಪದವಾಗಿ ಬಳಸಲಾಗುತ್ತದೆ.
ಕ್ರೀಡೆಗಳು ಮತ್ತು ಹಗರಣಗಳಂತಹ ಬಹು ವಿಧದ ವಿಷಯವಸ್ತುಗಳನ್ನು ಒಳಗೊಂಡಿರುವ, ದಪ್ಪನೆಯ ವಿನ್ಯಾಸಗಳನ್ನು ಬಳಸಿದ (ದೊಡ್ಡ ಸಚಿತ್ರ ವಿವರಣೆಗಳು ಮತ್ತು ಬಣ್ಣಗಳೊಂದಿಗೆ), ಹೆಸರಿಸದ ಮೂಲಗಳನ್ನು ಬಹುವಾಗಿ ಆಧರಿಸಿದ, ಮುಜುಗರವಿಲ್ಲದಂತೆ ಸ್ವಯಂ-ಪ್ರಚಾರಪಡಿಸಿಕೊಳ್ಳುವ ದೈನಂದಿನ ಬಹು-ಕಾಲಂಗಳ ಮುಂದಿನ-ಪುಟದ ಮುಖ್ಯಸುದ್ದಿಗಳನ್ನು ಹೊಂದಿರುವುದನ್ನು ಹಳದಿ ಮಾಧ್ಯಮ ಸುದ್ದಿಪತ್ರಿಕೆಗಳೆಂದು Campbell (2001) ವಿವರಿಸುತ್ತದೆ. ಈ ಪದವನ್ನು ವಿಸ್ತ್ರತವಾಗಿ ಪ್ರಸರಣಕ್ಕೋಸ್ಕರ ಸೆಣಸಿದ ಕೆಲವು ಪ್ರಮುಖ ಅಂದರೆ ಸುಮಾರು 1900 ರಷ್ಟು ನ್ಯೂಯಾರ್ಕ್ ನಗರದ ಸುದ್ದಿಪತ್ರಿಕೆಗಳನ್ನು ವಿವರಿಸಲು ಬಳಸಲಾಗುತ್ತದೆ.
ಫ್ರಾಂಕ್ ಲೂಥರ್ ಮೋಟ್ (1941) ಅವರು ಹಳದಿ ಪತ್ರಿಕೋದ್ಯಮವನ್ನು ಐದು ವಿಶಿಷ್ಟ ಗುಣಲಕ್ಷಣಗಳಲ್ಲಿ ವಿವರಿಸುತ್ತಾರೆ:[೧]
- ಭಾರಿ ಮುದ್ರಣದಲ್ಲಿ ದಿಗಿಲುಗೊಳಿಸುವ ಮುಖ್ಯ ಸುದ್ದಿಗಳು, ಆಗಾಗ್ಗೆ ಅಪ್ರಧಾನ ಸುದ್ದಿಗಳು
- ಚಿತ್ರಗಳು ಅಥವಾ ಕಾಲ್ಪನಿಕ ಚಿತ್ರಗಳ ಅದ್ದೂರಿಯ ಬಳಕೆ
- ನಕಲಿ ಸಂದರ್ಶನಗಳ ಬಳಕೆ, ಹಾದಿ ತಪ್ಪಿಸುವ ಮುಖ್ಯ ಸುದ್ದಿಗಳು, ಹುಸಿ-ವಿಜ್ಞಾನ, ಮತ್ತು ಅನುಭವಿಗಳು ಎಂದು ಕರೆಸಿಕೊಳ್ಳುವವರಿಂದ ತಪ್ಪು ಕಲಿಕೆಯ ಪ್ರದರ್ಶನ
- ಪೂರ್ಣ-ವರ್ಣದ ಭಾನುವಾರದ ಪುರಣಿಗಳ ಮೇಲೆ ಪ್ರಾಧಾನ್ಯತೆ, ಸಾಮಾನ್ಯವಾಗಿ ಹಾಸ್ಯಚಿತ್ರ ಮಾಲೆ (ಇದು ಅಮೇರಿಕದಲ್ಲಿ ಇದೀಗ ಸಾಮಾನ್ಯವಾಗಿದೆ.)
- ವ್ಯವಸ್ಥೆಯ ವಿರುದ್ಧ "ಪರಾಧೀನತೆ"ಯೊಂದಿಗೆ ನಾಟಕೀಯ ಸಹಾನುಭೂತಿ.
ಹುಟ್ಟು: ಪುಲಿಟ್ಚರ್ ವಿರುದ್ಧವಾಗಿ ಹರ್ಸ್ಟ್
[ಬದಲಾಯಿಸಿ]ಹತ್ತೊಂಬತ್ತನೇ ಶತಮಾನದ ಕೊನೆಗೆ ಅಮೇರಿಕದ ಸ್ವರ್ಣ ಕಾಲದ ಸಂದರ್ಭದಲ್ಲಿ ಜೋಸೆಫ್ ಪುಲಿಟ್ಚರ್ ಅವರ ನ್ಯೂಯಾರ್ಕ್ ವರ್ಲ್ಡ್ ಮತ್ತು ವಿಲಿಯಂ ರಾಂಡೋಲ್ಫ್ ಹರ್ಸ್ಟ್ ಅವರ ನ್ಯೂಯಾರ್ಕ್ ಜರ್ನಲ್ ನಡುವಿನ ಪ್ರಸರಣ ಪ್ರತಿಸ್ಪರ್ಧೆಯೊಂದಿಗೆ ಪದವು ಉತ್ಪನ್ನವಾಯಿತು. 1895 ರಿಂದ ಸುಮಾರು 1898 ರವರೆಗೆ ಪ್ರತಿಸ್ಪರ್ಧೆಯು ಉಚ್ಛ್ರಾಯ ಸ್ಥಿತಿಯಲ್ಲಿತ್ತು ಮತ್ತು ಐತಿಹಾಸಿಕ ಬಳಕೆಯು ಸಾಮಾನ್ಯವಾಗಿ ನಿರ್ದಿಷ್ಟವಾಗಿ ಈ ಕಾಲಾವಧಿಯನ್ನು ಉಲ್ಲೇಖಿಸುತ್ತದೆ. ಸುದ್ದಿ ಪತ್ರಿಕೆಗಳು ಗಂಭೀರವಾದ ವರದಿಗಾರಿಕೆಯನ್ನು ಮಾಡಿದರೂ ಸಹ ಪ್ರಸರಣವನ್ನು ಹೆಚ್ಚಿಸಲು ಸುದ್ದಿಗಳನ್ನು ಭಾವೋದ್ರೇಕಗೊಳಿಸಿದುದರ ಬಗ್ಗೆ ವಿಮರ್ಶಕರು ಎರಡೂ ಪತ್ರಿಕೆಗಳ ಮೇಲೆ ಆರೋಪ ಮಾಡಿದ್ದರು. 1897 ರ ಪ್ರಾರಂಭದಲ್ಲಿ ಪುಲಿಟ್ಚರ್ ಮತ್ತು ಹರ್ಸ್ಟ್ ಎರಡೂ ಸುದ್ದಿ ಪತ್ರಿಕೆಗಳು ಪ್ರಸರಣ ಪ್ರತಿಸ್ಪರ್ಧೆಯ ಸಮಯದಲ್ಲಿ ಹಾಸ್ಯ ಚಿತ್ರ ಮಾಲೆಯ ಆವೃತ್ತಿಯನ್ನು ಪ್ರಕಟಿಸಿದ್ದು, ಅವುಗಳ ಕೆಳ ಮಾರುಕಟ್ಟೆಯನ್ನು ವಿವರಿಸುವ ಆ ಜನಪ್ರಿಯ ಹಾಸ್ಯ ಚಿತ್ರಮಾಲೆಯ ನಂತರ "ಹಳದಿ ವಂಚನೆಯ ಪತ್ರಿಕೋದ್ಯಮ" ಎಂಬ ಪದವನ್ನು ನ್ಯೂಯಾರ್ಕ್ ಪ್ರೆಸ್ ಸೃಷ್ಟಿಸಿತು.[೨] ನ್ಯೂಯಾರ್ಕ್ ಹೆರಾಲ್ಡ್ ನ ಪ್ರಕಾಶಕರಾದ ಎರ್ವಿನ್ ವಾರ್ಡ್‌ಮನ್ ಅವರು ಪದವನ್ನು ಸೃಷ್ಟಿಸಿದರು.[೩]
ಸೇಂಟ್ ಲೂಯಿಸ್ ಪೋಸ್ಟ್-ಡಿಸ್ಪ್ಯಾಚ್ ಅನ್ನು ಆ ನಗರದಲ್ಲಿ ಪ್ರಭಾವಶಾಲಿ ದಿನಪತ್ರಿಕೆಯಾಗಿ ಮಾಡಿದ ನಂತರ ಜೋಸೆಫ್ ಪುಲಿಟ್ಚರ್ ಅವರು 1883 ರಲ್ಲಿ ನ್ಯೂಯಾರ್ಕ್ ವರ್ಲ್ಡ್ ಅನ್ನು ಖರೀದಿಸಿದರು. ನ್ಯೂಯಾರ್ಕ್ ವರ್ಲ್ಡ್ ಅನ್ನು ಮನರಂಜನೆಯ ಓದುವಾಗಿ ಮಾಡಲು ಪುಲಿಟ್ಚರ್ ಅವರು ಶ್ರಮಿಸಿದರು ಮತ್ತು ಪತ್ರಿಕೆಯಲ್ಲಿ ಚಿತ್ರಗಳು, ಆಟಗಳು ಮತ್ತು ಸ್ಪರ್ಧೆಗಳಿಂದ ಆಕರ್ಷಣೀಯವಾಗಿಸಿದರು, ಮತ್ತು ಅದು ಹೊಸ ಓದುಗರ ಮನಸೆಳೆಯಿತು. ಹಲವು ಪುಟಗಳಲ್ಲಿ "ಅವರು ಆತ್ಮಹತ್ಯೆ ಮಾಡಿಕೊಂಡರೇ?" ಮತ್ತು "ಕ್ಷಮೆಗಾಗಿ ಕೂಗಾಟ" ಎಂಬಂತಹ ಶೀರ್ಷಿಕೆಗಳಿಂದ ಅಪರಾಧ ಸುದ್ದಿಗಳು ತುಂಬಿದವು.[೪] ಇದಕ್ಕೆ ಜೊತೆಯಾಗಿ, ಪುಲಿಟ್ಚರ್ ಅವರು ಓದುಗರಿಗೆ ಪ್ರತಿ ಸಂಚಿಕೆಗೆ ಕೇವಲ ಎರಡು ಸೆಂಟ್ಸ್‌ನಷ್ಟು ಮಾತ್ರ ದರ ವಿಧಿಸಿದರು ಮತ್ತು ಓದುಗರಿಗೆ ಎಂಟು ಮತ್ತು ಕೆಲವೊಮ್ಮೆ 12 ಪುಟಗಳ ಮಾಹಿತಿಯನ್ನು ನೀಡಿದರು (ನಗರದಲ್ಲಿ ಮತ್ತೊಂದು ಎರಡು ಸೆಂಟ್ ಪತ್ರಿಕೆಯು ಎಂದಿಗೂ ನಾಲ್ಕು ಪುಟಗಳನ್ನು ಮೀರಲಿಲ್ಲ).[೫]
ನ್ಯೂಯಾರ್ಕ್ ವರ್ಲ್ಡ್ ನಲ್ಲಿ ಹಲವು ರೋಚಕ ಸುದ್ದಿಗಳಿದ್ದರೂ, ಅವುಗಳು ಯಾವುದೇ ಕಾರಣದಿಂದಲೂ ಒಂದೇ ನಮೂನೆಯಾಗಿರಲ್ಲಿ, ಅಥವಾ ಶಕ್ತಿಯುತವೂ ಆಗಿರಲಿಲ್ಲ. ಸುದ್ದಿಪತ್ರಿಕೆಗಳು ಸಮಾಜವನ್ನು ಸುಧಾರಿಸುವ ಕರ್ತವ್ಯದೊಡನೆ ಸಾರ್ವಜನಿಕ ವಸ್ತುಗಳಾಗಿವೆ ಎಂದು ಪುಲಿಟ್ಚರ ಅವರು ನಂಬಿದ್ದರು ಮತ್ತು ಅವರು ವರ್ಲ್ಡ್ ಅನ್ನು ಸಾಮಾಜಿಕ ಸುಧಾರಣೆಯ ಸೇವೆಯಲ್ಲಿ ತೊಡಗಿಸಿದರು.
ಪುಲಿಟ್ಚರ್ ಅವರು ಅದನ್ನು ವಹಿಸಿಕೊಂಡ ಕೇವಲ ಎರಡು ವರ್ಷಗಳಲ್ಲೇ, ಡೆಮೋಕ್ರಾಟಿಕ್ ಪಕ್ಷ ದೊಂದಿಗೆ ಅದರ ಬಲವಾದ ಸಂಬಂಧದ ಭಾಗಶಃ ಸಹಕಾರದೊಂದಿಗೆ ವರ್ಲ್ಡ್ ನ್ಯೂಯಾರ್ಕ್‌ನಲ್ಲೇ ಅತ್ಯಧಿಕ ಪ್ರಸಾರದ ಸುದ್ದಿಪತ್ರಿಕೆಯಾಯಿತು.[೬] ಪುಲಿಟ್ಚರ್ ಅವರ ಯಶಸ್ಸಿನ ಕುರಿತಂತೆ ಅಸೂಯೆ ಪಟ್ಟ ಹಳೆಯ ಪ್ರಕಾಶಕರು, ವರ್ಲ್ಡ್ ನ ಗಂಭೀರ ವರದಿಗಳನ್ನು ನಿರ್ಲಕ್ಷಿಸುತ್ತಾ ಅದರ ಅಪರಾಧ ಸುದ್ದಿಗಳು ಮತ್ತು ತಂತ್ರಗಳನ್ನು ಪ್ರಸ್ತಾಪಿಸಿ ಅದನ್ನು ಟೀಕಿಸಲು ಪ್ರಾರಂಭಿಸಿದರು - ಈ ಬೆಳವಣಿಗೆಯು ಪೀತ ಪತ್ರಿಕೋದ್ಯಮದ ಜನಪ್ರಿಯ ಕಲ್ಪನೆಗೆ ಪ್ರಭಾವ ಬೀರಿತು. ನ್ಯೂಯಾರ್ಕ್ ಸನ್ ನ ಸಂಪಾದಕರಾದ ಚಾರ್ಲ್ಸ್ ಡಾನಾ ಅವರು ದಿ ವರ್ಲ್ಡ್ ಮೇಲೆ ಟೀಕಾ ಪ್ರಹಾರ ನಡೆಸಿ ಪುಲಿಟ್ಚರ್ ಅವರು "ನಿರ್ಣಯದಲ್ಲಿ ಮತ್ತು ಅಧಿಕಾರದಲ್ಲಿ ಉಳಿಯಲು ಕೊರತೆಯುಳ್ಳವರು" ಎಂದು ಹೇಳಿದರು.[೭]
1887 ರಲ್ಲಿ ತಮ್ಮ ತಂದೆಯಿಂದ ಸ್ಯಾನ್ ಫ್ರಾನ್ಸಿಸ್ಕೋ ಎಕ್ಸಾಮಿನರ್ ಅವರು ಗಳಿಸಿದ ಗಣಿಗಾರಿಕೆಯ ವಾರಸುದಾರರಾದ ವಿಲಿಯಂ ರಾಂಡೋಲ್ಫ್ ಹರ್ಸ್ಟ್ ಅವರು ಪುಲಿಟ್ಚರ್ ಅವರ ಕಾರ್ಯಗಳಿಂದ ಪ್ರಭಾವಿತರಾದರು. ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವಾಗ ಹರ್ಸ್ಟ್ ಅವರು ವರ್ಲ್ಡ್ ಓದುತ್ತಿದ್ದರು ಮತ್ತು ಪುಲಿಟ್ಚರ್ ಅವರ ಪತ್ರಿಕೆಯ ವಿಖ್ಯಾತಿಯಂತೆಯೇ ಎಕ್ಸಾಮಿನರ್ ಅನ್ನು ಮಾಡಲು ದೃಢ ನಿಶ್ಚಯ ಮಾಡಿದರು.[೮] ಅವರ ನೇತೃತ್ವದಲ್ಲಿ ಎಕ್ಸಾಮಿನರ್ ಪತ್ರಿಕೆಯು ತನ್ನ ಸ್ಥಳಾವಕಾಶದಲ್ಲಿ ಶೇಕಡಾ 24 ರಷ್ಟು ಅಪರಾಧದ ಸುದ್ದಿಗಳಿಗೆ ಮೀಸಲಾಗಿರಿಸಿದ ಜೊತೆಗೆ ಸುದ್ದಿಗಳನ್ನು ನೀತಿ ನಾಟಗಳಾಗಿ ಪ್ರಸ್ತುತ ಪಡಿಸಿತು ಮತ್ತು ಅದರ ಮುಖ್ಯ ಪುಟದಲ್ಲಿ ವಯಸ್ಕ ವಿಷಯಗಳು ಮತ್ತು "ನಗ್ನತೆ" (19 ನೇ ಶತಮಾನದ ಗುಣಮಟ್ಟಗಳಿಗೆ) ಯನ್ನು ಸಿಂಪಡಿಸಿತು.[೯] ಸುದ್ದಿಪತ್ರಿಕೆಯನ್ನು ಹರ್ಸ್ಟ್ ಅವರು ವಹಿಸಿಕೊಂಡ ತಿಂಗಳ ನಂತರ, ಹೋಟೆಲ್‌ನಲ್ಲಿನ ಅಗ್ನಿದುರಂತದ ಬಗ್ಗೆ ಈ ಮುಖ್ಯ ಸುದ್ದಿಯನ್ನು ಎಕ್ಸಾಮಿನರ್ ಪ್ರಕಟಿಸಿತು:
ಕಂಗೆಟ್ಟ, ಕೆರಳಿದ ಜ್ವಾಲೆಗಳು. ಮಾಂಟೆರರಿ ಕೊಲ್ಲಿಯ ಸ್ಪ್ಲೆಂಡಿಡ್ ಪ್ಲೆಷರ್ ಪ್ಯಾಲೇಸ್ ಮೇಲೆ ಅತಿ ವೇಗದಿಂದ ಚಿಮ್ಮುತ್ತಿದ್ದು, ಬಾನಿನಿಂದ ಭೂಮಿಗೆ ಸೂರೆ ಮಾಡಲು ತಬ್ಬಿಕೊಳ್ಳುತ್ತಿರುವಂತೆ ಡೆಲ್ ಮಾಂಟೋವನ್ನು ಸುತ್ತುವರೆದಿದೆ. ಘೋರವಾದ ಅಪೇಕ್ಷೆಯಿಂದ ಇನ್ನಷ್ಟು, ಇನ್ನಷ್ಟು, ಇನ್ನಷ್ಟು ಎತ್ತರಕ್ಕೇರುತ್ತಿದೆ. ಕೋರ್ನಿಸ್, ಆರ್ಚ್‌ವೇ ಮತ್ತು ಫ್ಯಾಕೇಡ್ ಮೂಲಕ ಹುಚ್ಚಾಪಟ್ಟೆಯಾಗಿ ಓಡುತ್ತಿದೆ. ನಡುಗುತ್ತಿರುವ ಅತಿಥಿಗಳ ಮೇಲೆ ಕೋಪೋದ್ರೇಕದಲ್ಲಿ ಎಗರಿ ಬರುತ್ತಿದೆ. ಭೀತಿ ಮತ್ತು ದಿಗಿಲುಗೊಂಡ, ಏದುಸಿರು ಬಿಡುತ್ತಿರುವ ಜನರು ಘಟನೆಯ ಸ್ಥಳದಿಂದ ಪಲಾಯನಗೈಯುತ್ತಿದ್ದಾರೆ. ಅತ್ಯದ್ಭುತ ಹೋಟೆಲ್ ಮತ್ತು ಅದರ ಶ್ರೀಮಂತ ಅಲಂಕಾರಗಳು ಬೂದಿಯ ರಾಶಿಯಲ್ಲಿ ಹೊಗೆಯಾಡುತ್ತಿವೆ. ಭಯಂಕರ ಘಟನೆಯ ಪೂರ್ಣ ವರದಿಯನ್ನು ಪಡೆದುಕೊಳ್ಳಲು ವಿಶೇಷ ರೈಲನ್ನು ಮಾಂಟೆರೇಗೆ ಎಕ್ಸಾಮಿನರ್ ಕಳುಹಿಸುತ್ತದೆ. ಬೆಳಗ್ಗಿನ ರೈಲಿನಲ್ಲಿ ಆಗಮನಿಸಿದ ಅದೃಷ್ಟಹೀನ ಬಲಿಯಾದ ವ್ಯಕ್ತಿಗಳು - ಹೋಟೆಲ್ ಡೆಲ್ ಮಾಂಟೆಯ ಇತಿಹಾಸ - ಪ್ರವಾಸಿ ನಿಲಯದ ಮರುನಿರ್ಮಾಣದ ಯೋಜನೆಗಳು -ಬೆಂಕಿಯ ಸಂಭಾವ್ಯ ಮೂಲ ಮತ್ತು ಇತರ ವಿವರಗಳು.[೧೦]
ತಮ್ಮ ಅಪರಾಧಿ ಸುದ್ದಿಗಳ ಪ್ರಸಾರದಲ್ಲಿ ಹರ್ಸ್ಟ್ ಅವರು ಉತ್ಪ್ರೇಕ್ಷೆಯಿಂದ ಕೂಡಿರಬಹುದು: ಅವರ ಮೊದಲಿನ ವಿಭಾಗಗಳಲ್ಲಿ "ಕೊಲೆಗಾರರ ಸಮೂಹದ" ಕುರಿತಂತೆ, ಎಕ್ಸಾಮಿನರ್ ವರದಿಗಾರರನ್ನು ಪೊಲೀಸರು ಅವರಿಗಾಗಿ ಕಾರ್ಯನಿರ್ವಹಿಸಲು ಒತ್ತಾಯಿಸಿದ್ದಕ್ಕೆ ಪೊಲೀಸರ ಮೇಲೆ ಆಕ್ರಮಣ ಮಾಡಿದರು. ಈ ಪ್ರಕಾರದ ತಂತ್ರಗಳಲ್ಲಿ ಒಳಗೊಂಡಿದ್ದರೂ ಸಹ, ಅಂತರಾಷ್ಟ್ರೀಯ ಸುದ್ದಿಗಳಿಗೆ ಎಕ್ಸಾಮಿನರ್ ತನ್ನ ಸ್ಥಳಾವಕಾಶವನ್ನು ಹೆಚ್ಚಿಸಿತು ಮತ್ತು ಮುನ್ಸಿಪಲ್ ಭ್ರಷ್ಟಾಚಾರ ಮತ್ತು ಅದಕ್ಷತೆಯನ್ನು ಬಯಲು ಮಾಡಲು ವರದಿಗಾರರನ್ನು ಕಳುಹಿಸಿತು. ಒಂದು ನೆನಪಿಡುವ ಸುದ್ದಿಗಳಲ್ಲಿ, ಎಕ್ಸಾಮಿನರ್ ವರದಿಗಾರರಾದ ವಿನಿಫ್ರೆಡ್ ಬ್ಲಾಕ್ ಅವರನ್ನು ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಅವರು ಬಡ ಮಹಿಳೆಯನ್ನು "ಅಮಾನುಷವಾಗಿ" ನಡೆಸಿಕೊಂಡಿದ್ದನ್ನು ಪತ್ತೆ ಹಚ್ಚಿದರು. ಆ ಸುದ್ದಿ ಪ್ರಕಟವಾದೊಡನೆಯೇ ಆಸ್ಪತ್ರೆಯ ಸಂಪೂರ್ಣ ಸಿಬ್ಬಂದಿಯನ್ನು ವಜಾ ಮಾಡಲಾಯಿತು.[೧೧]
ನ್ಯೂಯಾರ್ಕ್
[ಬದಲಾಯಿಸಿ]1890 ರ ಪ್ರಾರಂಭದಲ್ಲಿ ಎಕ್ಸಾಮಿನರ್ನ ಯಶಸ್ಸು ನೆಲೆಗೊಂಡ ಬಳಿಕ, ಹರ್ಸ್ಟ್ ಅವರು ಖರೀದಿಸಲು ನ್ಯೂಯಾರ್ಕ್ ಸುದ್ದಿಪತ್ರಿಕೆಯನ್ನು ಖರೀದಿಸಲು ಬಯಸಿದರು ಮತ್ತು ಪುಲಿಟ್ಚರ್‌ನ ಸಹೋದರನು ವರ್ಷದ ಹಿಂದೆ ಸಿನ್ಸಿನಾಟಿಯ ಪ್ರಕಾಶಕನಿಗೆ ಮಾರಾಟ ಮಾಡಿದ್ದ ಅಗ್ಗದ ಪತ್ರಿಕೆ ನ್ಯೂಯಾರ್ಕ್ ಜರ್ನಲ್ ಅನ್ನು 1895 ರಲ್ಲಿ ತಮ್ಮ ಸುಪರ್ದಿಗೆ ತೆಗೆದುಕೊಂಡರು.
1890 ರಲ್ಲಿ ಮೆಟ್ರೋಪಾಲಿಟನ್ ಸುದ್ದಿಪತ್ರಿಕೆಗಳು ಡಿಪಾರ್ಟ್‌ಮೆಂಟ್ ಸ್ಟೋರ್ ಜಾಹೀರಾತುಗಳ ಬೆನ್ನಿಗೆ ಬಿದ್ದರು ಮತ್ತು ಉತ್ತಮವಾದ ಬಹು ದೊಡ್ಡ ಪ್ರಮಾಣದ ಪ್ರಸರಣ ಮೂಲವನ್ನು ಕಂಡುಕೊಂಡರು. ಇದು ಹರ್ಸ್ಟ್ ಅವರನ್ನು ಮುನ್ನಡೆಸಿತು: ಪುಲಿಟ್ಚರ್ ಅವರ ಮೊದಲಿನ ನೀತಿಯಂತೆ, ಅವರು ಜರ್ನಲ್ ನ ದರವನ್ನು ಒಂದು ಸೆಂಟ್ ಎಂದು ನಿಗದಿಪಡಿಸಿದರು (ದಿ ವರ್ಲ್ಡ್ ನ ಎರಡು ಸೆಂಟ್‌ಗೆ ಹೋಲಿಸಿದರೆ) ಮತ್ತು ಪ್ರತಿಸ್ಪರ್ಧಿಗಳ ಸುದ್ದಿಪತ್ರಿಕೆಗಳಷ್ಟೇ ಮಾಹಿತಿಯನ್ನು ನೀಡಲು ಪ್ರಾರಂಭಿಸಿದರು.[೫] ಈ ವಿಧಾನವು ಯಶಸ್ವಿಯಾಯಿತು ಮತ್ತು ಜರ್ನಲ್‌ನ ಪ್ರಸಾರವು 150,000 ಗೆ ನೆಗೆದಂತೆ, ಪುಲಿಟ್ಚರ್ ಅವರು ತಮ್ಮ ಕಿರಿಯ ಪ್ರತಿಸ್ಪರ್ಧಿಯನ್ನು (ಅವರು ತಮ್ಮ ಕುಟುಂಬದ ಸಂಪತ್ತಿನ ಕಾರಣದಿಂದ ರಿಯಾಯತಿಯನ್ನು ನೀಡಿದ್ದರು) ದಿವಾಳಿಯೆಬ್ಬಿಸುವ ಉದ್ದೇಶದಿಂದ ದರವನ್ನು ಪೆನ್ನಿಗೆ ಕಡಿತಗೊಳಿಸಿದರು. ಎದುರೇಟಾಗಿ, ಹರ್ಸ್ಟ್ ಅವರು 1896 ರಲ್ಲಿ ವರ್ಲ್ಡ್ ಸಿಬ್ಬಂದಿಯನ್ನು ಅತಿಕ್ರಮಿಸಿದರು. ಹೆಚ್ಚಿನ ಮೂಲಗಳ ಪ್ರಕಾರ, ಹರ್ಸ್ಟ್ ಅವರು ಹೆಚ್ಚಿಗೆ ಹಣವನ್ನು ನೀಡಿದರು ಮತ್ತು ತಮ್ಮ ಉದ್ಯೋಗಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನಿಂದನೆ ಮಾಡುತ್ತಿದ್ದ ಪುಲಿಟ್ಚರ್ ಅವರಡಿಯಲ್ಲಿ ಕಾರ್ಯನಿರ್ವಹಿಸುವುದು ಬಹು ಕಠಿಣವಾಗಿತ್ತು ಹಾಗೂ ಹೆಚ್ಚಿನ ವರ್ಲ್ಡ್ ಉದ್ಯೋಗಿಗಳು ಅವರಿಂದ ದೂರವುಳಿಯಲು ಬೇರೆ ಕಡೆ ತೆರಳಲು ಬಯಸಿದ್ದರು.[೧೨]
ವರ್ಲ್ಡ್ ಮತ್ತು ಜರ್ನಲ್ ನಡುವಿನ ಪ್ರತಿಸ್ಪರ್ಧೆಯು ಪ್ರಬಲವಾಗಿದ್ದರೂ, ಸುದ್ದಿಪತ್ರಿಕೆಗಳು ಮನೋಧರ್ಮದಿಂದ ಒಂದೇ ತೆರನಾಗಿದ್ದವು. ಎರಡೂ ಸಹ ಡೆಮೋಕ್ರಾಟಿಕ್ ಆಗಿದ್ದವು, ಎರಡೂ ಸಹ ಕಾರ್ಮಿಕರು ಮತ್ತು ವಲಸೆಗಾರರ ಪರವಾಗಿ ಸಹಾನುಭೂತಿಯನ್ನು ಹೊಂದಿದ್ದವು (ನೈತಿಕ ಕೊರತೆಗಳ ಆಧಾರದಲ್ಲಿ ಅವರ ಬಡತನವನ್ನು ಟೀಕಿಸಿದ ಪ್ರಕಾಶಕರಾದ ನ್ಯೂಯಾರ್ಕ್ ಟ್ರಿಬ್ಯೂನ್ನ ವೈಟ್‌ಲಾ ರೀಡ್ ನಂತಹವರಿಗೆ ಭಾರಿ ತದ್ವಿರುದ್ದವಾಗಿ), ಮತ್ತು ಇಬ್ಬರೂ ಸಹ ತಮ್ಮ ಭಾನುವಾರದ ಪ್ರಕಟಣೆಗಳಿಗೆ ಅಗಾಧವಾದ ಸಂಪನ್ಮೂಲಗಳನ್ನು ಹೂಡಿದರು ಮತ್ತು ಇವುಗಳು ದೈನಂದಿನ ಪತ್ರಿಕೋದ್ಯಮದ ಸಾಮಾನ್ಯ ಧ್ಯೇಯವನ್ನು ಮೀರಿ ಸಾಪ್ತಾಹಿಕ ಪತ್ರಿಕೆಗಳಂತೆ ಕಾರ್ಯನಿರ್ವಹಿಸಿದವು.[೧೩]
ಅವರ ಭಾನುವಾರದ ಮನರಂಜನಾ ಪುರವಣಿಗಳು ಮೊದಲ ಬಣ್ಣದ ಹಾಸ್ಯ ಚಿತ್ರ ಮಾಲೆ ಪುಟಗಳನ್ನು ಒಳಗೊಂಡಿದ್ದಿತು, ಮತ್ತು ಪೀತ ಪತ್ರಿಕೋದ್ಯಮವು ಇಲ್ಲೇ ಜನ್ಮ ತಾಳಿತು ಎಂದು ಕೆಲವರು ಊಹಿಸುತ್ತಾರೆ, ಆದರೆ ಮೇಲೆ ತಿಳಿಸಿದಂತೆ, ನ್ಯೂಯಾರ್ಕ್ ಪ್ರೆಸ್ ತಾನು ಸಂಶೋಧಿಸಿದ ಪದವನ್ನು ನಿಷ್ಕೃಷ್ಟವಾಗಿ ಹೇಳಲಿಲ್ಲ. ಹೋಗನ್ಸ್ ಅಲೇ, ಅವರ ಹಳದಿ ನೈಟ್‌ಶರ್ಟ್ ಧರಿಸಿದ ಬಕ್ಕ ತಲೆಯ ಮಗುವಿನ (ಹಳದಿ ಮಗು ಎಂಬ ಕಿರು ಹೆಸರಿನ) ಬಗ್ಗೆಯ ಹಾಸ್ಯ ಚಿತ್ರ ಮಾಲೆಯು 1896 ರ ಮೊದಲಿನಲ್ಲಿ ವ್ಯಂಗಚಿತ್ರಕಾರರಾದ ರಿಚರ್ಡ್ ಎಫ್. ಔಟ್‌ಕಾಲ್ಟ್ ಅವರು ವರ್ಲ್ಡ್ ನಲ್ಲಿ ಬರೆಯಲು ಪ್ರಾರಂಭಿಸಿದಾಗ ಭಾರಿ ಜನಪ್ರಿಯವಾಯಿತು. ಹರ್ಸ್ಟ್ ಅವರು ಭವಿಷ್ಯನುಡಿಯಂತೆ ಔಟ್‌ಕಾರ್ಟ್ ಅವರನ್ನು ತಮ್ಮತ್ತ ಸೆಳೆದುಕೊಂಡಾಗ, ಪುಲಿಟ್ಚರ್ ಅವರು ಕಲಾವಿದ ಜಾರ್ಜ್ ಲುಕ್ಸ್ ಅವರಿಗೆ ತಮ್ಮ ಪಾತ್ರಗಳೊಂದಿಗೆ ಹಾಸ್ಯ ಚಿತ್ರಮಾಲೆಯನ್ನು ಮುಂದುವರಿಸಲು ತಿಳಿಸಿ, ನಗರಕ್ಕೆ ಎರಡು ಹಳದಿ ಮಗುಗಳನ್ನು ನೀಡಿದರು.[೧೪] "ಪೀತ ಪತ್ರಿಕೋದ್ಯಮ"ದ ಬಳಕೆಯು ಅಮೇರಿಕದಲ್ಲಿ ಮೇಲ್ಮಟ್ಟದ ಉದ್ರೇಕಗೊಳಿಸುವ ಪ್ರವೃತ್ತಿಗೆ ಸಮಾನಾರ್ಥಕವಾಗಿದ್ದು, ಸ್ಪಷ್ಟವಾಗಿ "ಹಳದಿ ಮಗು ಸುದ್ದಿಪತ್ರಿಕೆಗಳ" ಮಿತಿ ಮೀರುವಿಕೆಯ ಬಗ್ಗೆ ಹೆಚ್ಚು ಗಂಭೀರ ಪತ್ರಿಕೆಗಳು ಟೀಕೆ ಮಾಡುವ ಮೂಲಕ ಪ್ರಾರಂಭವಾಯಿತು.
1890 ರಲ್ಲಿ, ಸಾಮ್ಯುಯೆಲ್ ವಾರೆನ್ ಮತ್ತು ಲೂಯಿಸ್ ಬ್ರಾಂಡೀಸ್ ಅವರುಗಳು ವೈಯಕ್ತಿಕ ಗೌಪ್ಯತೆಗೆ ಹಿಂದೆಂದೂ ಕಾಣದ ಬೆದರಿಕೆಯನ್ನು ಮನಗಂಡು ಪತ್ರಿಕೋದ್ಯಮದ ಸಂವೇದನಶೀಲ ರೂಪಗಳಿಗೆ ನಿರ್ಣಾಯಕ ಪ್ರತಿಕ್ರಿಯೆಯಾಗಿ ಎಲ್ಲಾ ಸಮಯದ ಅತೀ ಹೆಚ್ಚು ಪ್ರಭಾವಶಾಲಿ ಕಾನೂನು ವಿಮರ್ಶಾ ಲೇಖನವೆಂದು ಪರಿಗಣಿಸಲ್ಪಟ್ಟಿರುವ "ದಿ ರೈಟ್ ಟು ಪ್ರೈವೆಸಿ,"[೧೫] ಅನ್ನು ಪ್ರಕಟಿಸಿದರು. ಈ ಲೇಖನವು ಕ್ರಿಯೆಗಳ ಹೊಸ ಸಾಮಾನ್ಯ ಕಾನೂನು ಗೌಪ್ಯತೆಯ ಹಕ್ಕುಗಳ ಮಾನ್ಯತೆಗೆ ಕಾರಣವಾಯಿತು ಎಂದು ಪರಿಗಣಿಸಲಾಗಿದೆ.
ಸ್ಪ್ಯಾನಿಷ್-ಅಮೇರಿಕನ್ ಯುದ್ದ
[ಬದಲಾಯಿಸಿ]ಉದ್ರೇಕಕಾರಿ ಸುದ್ದಿಗಳು ಅಥವಾ ಸಾರಾಸಗಟಾದ ಸುಳ್ಳಿನೊಂದಿಗೆ ರಾಷ್ಟ್ರವನ್ನು ಸ್ಪ್ಯಾನಿಷ್-ಅಮೇರಿಕನ್ ಯುದ್ಧಕ್ಕೆ ಎಳೆದುತಂದ ಕೀರ್ತಿಯನ್ನು (ಅಥವಾ ಆರೋಪವನ್ನು) ಆಗ್ಗಿಂದ್ದಾಗ್ಗೆ ಪುಲಿಟ್ಚರ್ ಮತ್ತು ಹರ್ಸ್ಟ್ ಅವರಿಗೆ ನೀಡಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಆದರೆ, ಬಹುಪಾಲು ಅಮೇರಿಕನ್ನರು ನ್ಯೂಯಾರ್ಕ್ ನಗರದಲ್ಲಿ ವಾಸವಾಗಿರಲಿಲ್ಲ ಮತ್ತು ಅಲ್ಲಿ ನೆಲೆಸಿದ್ದ ನಿರ್ಧಾರ ತೆಗೆದುಕೊಳ್ಳುವವರು ಬಹುತೇಕ ಟೈಮ್ಸ್, ದಿ ಸನ್ ಅಥವಾ ಪೋಸ್ಟ್ ನಂತಹ ನಿರುದ್ವೇಗದ ಸುದ್ದಿಪತ್ರಿಕೆಗಳ ಮೇಲೆ ಹೆಚ್ಚಾಗಿ ಭರವಸೆ ಇಟ್ಟಿರಬಹುದು. ಉತ್ಪ್ರೇಕ್ಷೆಯ ಬಹು ಪ್ರಸಿದ್ಧ ಉದಾಹರಣೆಯೆಂದರೆ ಕಲಾವಿದ ಫ್ರೆಡೆರಿಕ್ ರೆಮಿಂಗ್ಟನ್ ಅವರು ಕ್ಯೂಬಾದಲ್ಲಿ ಎಲ್ಲವೂ ಸರಿಯಾಗಿದೆ ಮತ್ತು "ಯಾವುದೇ ಯುದ್ಧ ನಡೆಯುವುದಿಲ್ಲ" ಎಂದು ಹರ್ಸ್ಟ್ ಅವರಿಗೆ ತಿಳಿಸಲು ಟೆಲಿಗ್ರಾಮ್ ಮಾಡಿದ ನಕಲಿ ಸುದ್ದಿಯಾಗಿದೆ. ಹರ್ಸ್ಟ್ ಅವರು ಪ್ರತಿಕ್ರಯಿಸುತ್ತಾ "ದಯವಿಟ್ಟು ಅಲ್ಲಿರು. ನೀವು ಚಿತ್ರವನ್ನು ಅಣಿಗೊಳಿಸು ಮತ್ತು ನಾನು ಯುದ್ದವನ್ನು ಅಣಿಗೊಳಿಸುತ್ತೇನೆ". ಕಥೆಯು (ಇದರ ಆವೃತ್ತಿಯೊಂದು ಹರ್ಸ್ಟ್ ಪ್ರೇರಣೆಯ ಓರ್ಸನ್ ವೆಲ್ಲೆಸ್ ಅವರ ಚಿತ್ರ ಸಿಟಿಜನ್ ಕೇನ್ ನಲ್ಲಿ ಕಂಡುಬಂದಿದೆ) ಮೊದಲು 1901 ರಲ್ಲಿ ವರದಿಗಾರರಾದ ಜೇಮ್ಸ್ ಕ್ರೀಲ್‌ಮ್ಯಾನ್ ಅವರ ಸ್ಮರಣೆಗಳಲ್ಲಿ ಕಂಡುಬಂದಿತು.
ಆದರೆ 1895 ರಲ್ಲಿ ಕ್ಯೂಬಾದಲ್ಲಿ ಬಂಡುಕೋರರು ದಂಗೆ ಎದ್ದಾಗ ಹರ್ಸ್ಟ್ ಅವರು ಯುದ್ಧ ಪ್ರಚೋದಕರಾದರು. ಕ್ಯೂಬನ್ನರ ಸದ್ಗುಣ ಮತ್ತು ಸ್ಪ್ಯಾನಿಷರ ಕ್ರೌರ್ಯವು ಶೀಘ್ರದಲ್ಲೇ ಅವರ ಪತ್ರಿಕೆಯ ಮುಖಪುಟದಲ್ಲಿ ರಾರಾಜಿಸಿದವು. ವಿವರಣೆಗಳು ಸಂಶಯಾಸ್ಪದ ನಿಖರತೆಯವು ಆಗಿದ್ದರೂ, 19 ನೇ ಶತಮಾನದ ಪತ್ರಿಕಾ ಓದುಗರು, ಹರ್ಸ್ಟ್ ಅವರ ಸುದ್ದಿಗಳು ಶುದ್ಧ ಕಪೋಕಲ್ಪಿತವಾಗಿರುವುದನ್ನು ನಿರೀಕ್ಷಿಸಿರಲಿಲ್ಲ ಅಥವಾ ಅಗತ್ಯವಾಗಿ ಬಯಸಿರಲಿಲ್ಲ. ಇತಿಹಾಸಕಾರರಾದ ಮೈಕೆಲ್ ರಾಬರ್ಟ್‌ಸನ್ ಅವರು "1890 ರ ಪತ್ರಿಕಾ ವರದಿಗಾರರು ಮತ್ತು ಓದುಗರು ವಿಷಯಾಧಾರಿತ ವರದಿಗಾರಿಕೆಗಳು, ಅಭಿಪ್ರಾಯ ಮತ್ತು ಸಾಹಿತ್ಯದಲ್ಲಿ ವ್ಯತ್ಯಾಸ ಕಾಣುವುದರ ಬಗ್ಗೆ ಹೆಚ್ಚು ಆಸಕ್ತರಾಗಿರಲಿಲ್ಲ" ಎಂದು ಹೇಳಿದ್ದಾರೆ.[೧೬]
ಹರ್ಸ್ಟ್ ಅವರಷ್ಟು ಸಂಪನ್ಮೂಲಗಳನ್ನು ಹೊಂದಿರದಿದ್ದರೂ, ಪುಲಿಟ್ಚರ್ ಅವರು ಮುಖಪುಟದಲ್ಲಿ ಸುದ್ದಿಯನ್ನು ಕಾಪಾಡಿಕೊಂಡರು. ಪೀತ ಮಾಧ್ಯಮಗಳು ಕ್ರಾಂತಿಯನ್ನು ವ್ಯಾಪಕವಾಗಿ ಮತ್ತು ಆಗಾಗ್ಗೆ ನಿಖರವಾಗಿರದೇ ವರದಿ ಮಾಡಿದವು, ಆದರೆ ಕ್ಯೂಬಾದ ಪರಿಸ್ಥಿತಿಗಳು ದಿಗಿಲು ಹುಟ್ಟಿಸುವಂತಿತ್ತು. ದ್ವೀಪವು ಭಯಂಕರವಾದ ಆರ್ಥಿಕ ಕುಸಿತದಲ್ಲಿತ್ತು ಮತ್ತು ಸ್ಪ್ಯಾನಿಷ್ ಜನರಲ್ ಆದ ವ್ಯಾಲೆರಿಯಾನೋ ವೇಲರ್ ಅವರನ್ನು ಬಂಡುಕೋರರನ್ನು ಬಗ್ಗು ಬಡಿಯಲು, ಒಗ್ಗೂಡಿದ ಕ್ಯೂಬಾದ ರೈತರನ್ನು ರಾಜಕೀಯ ಕೈದಿಗಳ ಶಿಬಿರಕ್ಕೆ ಅಟ್ಟಲು ಕಳುಹಿಸಲಾಯಿತು, ಇದು ನೂರಾರು ಕ್ಯೂಬನ್ನರ ಸಾವಿಗೆ ಕಾರಣವಾಯಿತು. ಎರಡು ವರ್ಷಗಳ ತನಕ ಹೋರಾಟಕ್ಕಾಗಿ ದಾಂಧಳೆ ಮಾಡಿದ ನಂತರ ಹರ್ಸ್ಟ್ ಅವರು ಸಂಘರ್ಷದ ಖ್ಯಾತಿಯನ್ನು ಪಡೆದುಕೊಂಡರು: ವಾರದ ನಂತರ ಅಮೇರಿಕವು ಸ್ಪೇನ್ ವಿರುದ್ಧ ಯುದ್ದವನ್ನು ಘೋಷಿಸಿತು, ಅವರು ತಮ್ಮ ಮುಖ ಪುಟದಲ್ಲಿ "ನೀವು [೧೭] ಜರ್ನಲ್‌ನ[೧೭] ಯುದ್ಧವನ್ನು ಹೇಗೆ ಬಯಸುತ್ತೀರಿ?" ಎಂದು ಬರೆದರು. ನಿಜವಾಗಿ, ಅಧ್ಯಕ್ಷರಾದ ವಿಲಿಯಂ ಮ್ಯಾಕ್‌ಕಿನ್ಲೀ ಅವರು ಎಂದಿಗೂ ಜರ್ನಲ್ ಅನ್ನು, ಮತ್ತು ಟ್ರಿಬ್ಯೂನ್ ಮತ್ತುನ್ಯೂಯಾರ್ಕ್ ಇವನಿಂಗ್ ಪೋಸ್ಟ್ ನಂತಹ ಸುದ್ದಿಪತ್ರಿಕೆಗಳನ್ನು ಓದಿರಲಿಲ್ಲ. ಹೆಚ್ಚಿನದಾಗಿ, ಪತ್ರಿಕೋದ್ಯಮದ ಇತಿಹಾಸಕಾರರು ಹೇಳುವಂತೆ ಪೀತ ಪತ್ರಿಕೋದ್ಯಮವು ಬಹುಪಾಲು ನ್ಯೂಯಾರ್ಕ್ ನಗರಕ್ಕೆ ಸೀಮಿತವಾಗಿತ್ತು ಮತ್ತು ದೇಶದ ಉಳಿದ ಭಾಗಗಳ ಸುದ್ದಿ ಪತ್ರಿಕೆಗಳು ಅವುಗಳನ್ನು ಅನುಸರಿಸಲಿಲ್ಲ. ಪ್ರಾಂತೀಯ ಪತ್ರಿಕೆಗಳಲ್ಲಿ ಜರ್ನಲ್ ಮತ್ತು ವರ್ಲ್ಡ್ , ಸುದ್ದಿಗಳ ಅಗ್ರ ಹತ್ತು ಮೂಲಗಳಾಗಿರಲಿಲ್ಲ ಮತ್ತು ಸುದ್ದಿಗಳು ನ್ಯೂಯಾರ್ಕ್ ನಗರದ ಹೊರಗೆ ಕಣ್ಣು ಸೆಳೆಯಲಿಲ್ಲ.[೧೮] ಸಾರ್ವಜನಿಕ ಅಭಿಪ್ರಾಯವು ರಕ್ತಪಾತದಿಂದ ಅಸಹ್ಯಗೊಂಡ ಪರಿಣಾಮವಾಗಿ ಮತ್ತು ಕ್ಯೂಬಾದ ಮೇಲೆ ಸ್ಪೇನ್ ನಿಯಂತ್ರಣವನ್ನು ಕಳೆದುಕೊಂಡಿತು ಎಂದು ಮ್ಯಾಕ್‌ಕಿನ್ಲೀಯಂತಹ ನಾಯಕರು ಕಂಡುಕೊಂಡ ಪರಿಣಾಮವಾಗಿ ಯುದ್ಧವು ಸಂಭವಿಸಿತು. [ಸೂಕ್ತ ಉಲ್ಲೇಖನ ಬೇಕು]ನ್ಯೂಯಾರ್ಕ್ ಜರ್ನಲ್ ನ ಭಾವಾತಿರೇಕಕ್ಕಿಂತ ಹೆಚ್ಚಾಗಿ ಈ ವಿಷಯಗಳು ಅಧ್ಯಕ್ಷರ ಮನಸ್ಸನ್ನು ತುಂಬಿತ್ತು.[೧೯]
ದಾಳಿಯು ಪ್ರಾರಂಭವಾದಾಗ ಯುದ್ಧ ವರದಿಗಾರರಾಗಿ ಹರ್ಸ್ಟ್‌ರವರು ನೇರವಾಗಿ ಕ್ಯೂಬಾಗೆ ನೌಕಾಯಾನ ಕೈಗೊಂಡರು ಮತ್ತು ಸಂಘರ್ಷದ ವಾಸ್ತವಿಕವಾದ ಮತ್ತು ನಿಖರವಾದ ಸಂಗತಿಗಳನ್ನು ಒದಗಿಸಿದರು.[೨೦] ಪೀತ ಪತ್ರಿಕೋದ್ಯಮಿಗಳ , ಅವರಲ್ಲಿ ಬಹಳಷ್ಟು ಜನರು ನೆನಸಿಕೊಳ್ಳಲಾಗದ ಸ್ಮಾರಕದಲ್ಲಿದ್ದಾರೆ, ದಿಟ್ಟತನ ಮತ್ತು ಕೂಡಿಕೊಂಡಿರುವಿಕೆಯ ಕಾರಣದಿಂದಲೇ, ಸ್ಪ್ಯಾನಿಷ್-ಅಮೇರಿಕ ಯುದ್ದದಿಂದ ನ್ಯಾಯ ಮತ್ತು ಸ್ವಾತಂತ್ರ್ಯ ಮತ್ತು ಬೆಳವಣಿಗೆಯಯನ್ನುಸಾಧಿಸಲು ಸಾಧ್ಯವಾಯಿತು ಎನ್ನುವುದು ಒಪ್ಪಿಕೊಳ್ಳದ ಹೊರತು ಯುದ್ಧದ ಯಾವುದೇ ನೈಜ ಇತಿಹಾಸವನ್ನು ಬರೆಯುವುದಕ್ಕಾಗುವುದಿಲ್ಲ" ಎಂದು ವಾದಿಸಿದ ಕ್ರೀಲ್‌ಮ್ಯಾನ್ ಅವರು ಸ್ಪ್ಯಾನಿಷ್ ದುರಾಡಳಿತದ ಭಯಾನಕತೆಯನ್ನು ಬಹಿರಂಗ ಪಡಿಸಿದ್ದಕ್ಕಾಗಿ ವರದಿಗಾರರ ಕಾರ್ಯವನ್ನು ಶ್ಲಾಘಿಸಿದರು.[೧೮]
ಯುದ್ಧದ ನಂತರ
[ಬದಲಾಯಿಸಿ]ಹರ್ಸ್ಟ್ ಅವರು ಪ್ರಮುಖ ಡೆಮೋಕ್ರಾಟ್ ಆಗಿದ್ದರು ಮತ್ತು ಅವರು 1896 ಮತ್ತು 1900 ರಲ್ಲಿ ಅಧ್ಯಕ್ಷ ಪದವಿಗೆ ವಿಲ್ಲಿಯಂ ಜೆನ್ನಿಂಗ್ಸ್ ಬ್ರಯಾನ್ ಅವರನ್ನು ಬೆಂಬಲಿಸಿದರು. ನಂತರ ಅವರು ಮೇಯರ್, ಗವರ್ನರ್ ಹುದ್ದೆಗೆ ಮತ್ತು ಅಧ್ಯಕ್ಷ ಪದವಿಯ ನಾಮಕರಣಕ್ಕೂ ಪ್ರಯತ್ನಿಸಿದರು, ಆದರೆ ಅಂಕಣಕಾರರಾದ ಆಂಬ್ರೋಸ್ ಬೀರ್ಸ್ ಮತ್ತು ಸಂಪಾದಕರಾದ ಆರ್ಥರ್ ಬ್ರಿಸ್ಬೇನ್ ಅವರು ಮ್ಯಾಕ್‌ಕಿನ್ಲೀ ಅವರ ಹತ್ಯೆಯನ್ನು ಸೂಚಿಸುವ ಎರಡು ಪ್ರತ್ಯೇಕ ಅಂಕಣಗಳನ್ನು ತಿಂಗಳ ಅಂತರದಲ್ಲಿ ಪ್ರಕಟಿಸಿದಾಗ 1901 ರಲ್ಲಿ ಉಂಟಾದ ದಂಗೆಯ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಪ್ರತಿಷ್ಠೆಯನ್ನು ಕಳೆದುಕೊಂಡರು. 1901 ರ ಸೆಪ್ಟೆಂಬರ್ 6 ರಂದು ಮ್ಯಾಕ್‌ಕಿನ್ಲೀ ಅವರನ್ನು ಗುಂಡಿಕ್ಕಿ ಕೊಂದಾಗ, ಲಿಯೋನ್ ಜೋಯೋಜ್ ಅವರನ್ನು ಈ ಕಾರ್ಯಕ್ಕೆ ಪ್ರೇರೇಪಿಸಿರುವುದಾಗಿ ಹರ್ಸ್ಟ್ ಅವರ ಪೀತ ಪತ್ರಿಕೋದ್ಯಮವನ್ನು ವಿಮರ್ಶಕರು ಟೀಕಿಸಿದರು. ಹರ್ಸ್ಟ್ ಅವರಿಗೆ ಬೀರ್ಸ್ ಅವರ ಅಂಕಣದ ಬಗ್ಗೆ ತಿಳಿದಿರಲಿಲ್ಲ ಮತ್ತು ಅದರ ಮೊದಲ ಆವೃತ್ತಿಯು ಪ್ರಕಟವಾದಾಗ ಅವರು ಬ್ರಿಸ್ಬೇನ್ ಅವರನ್ನು ತರಾಟೆಗೆ ತೆಗೆದುಕೊಂಡರು ಎಂದು ಹೇಳಲಾಗಿದೆ, ಆದರೆ ಘಟನೆಯು ಅವರ ಜೀವನ ಪರ್ಯಂತ ಕಾಡುವುದರ ಜೊತೆಗೆ ಅವರ ಅಧ್ಯಕ್ಷೀಯ ಪದವಿಯ ಆಕಾಂಕ್ಷೆಯನ್ನೂ ಹಾಳುಗೆಡವಿತು.[೨೧]
ಅವರ "ಹಳದಿ ಪಾಪಗಳಿಂದ" ಗೀಳು ಹಿಡಿದಂತಾದ ಪುಲಿಟ್ಚರ್ [೨೨] ಅವರು ಹೊಸ ಶಕೆಯು ಪ್ರಾರಂಭವಾದಂತೆ ವರ್ಲ್ಡ್ ಅನ್ನು ಅದರ ಸುಧಾರಣಾ ಮೂಲಗಳಿಗೆ ಹಿಂದಿರುಗಿಸಿದರು. 1911 ರಲ್ಲಿ ಅವರ ಸಾವಿನ ಸಮಯದೊಳಗೆ, ವರ್ಲ್ಡ್ ವ್ಯಾಪಕವಾಗಿ ಗೌರವಿಸಿದ ಪ್ರಕಟಣೆಯಾಗಿತ್ತು, ಮತ್ತು ಅವರ 1931 ರಲ್ಲಿ ಅವರ ಅಂತ್ಯದವರೆಗೆ ಅದು ಅಗ್ರಗಣ್ಯ ಪ್ರಗತಿಶೀಲ ಸುದ್ದಿಪತ್ರಿಕೆಯಾಗಿ ಉಳಿಯಿತು.
ಇವನ್ನೂ ನೋಡಿ
[ಬದಲಾಯಿಸಿ]- ಜೇಮ್ಸ್ ಕ್ರೀಲ್ಮನ್
- ಹಳದಿ ಪತ್ರಿಕೆ
- ಯುನೈಟೆಡ್ ಸ್ಟೇಟ್ಸ್ ನ ಪತ್ರಿಕಾ ಹಗರಣಗಳು
ಟಿಪ್ಪಣಿಗಳು
[ಬದಲಾಯಿಸಿ]- ↑ ಫ್ರಾಂಕ್ ಲೂಥರ್ ಮೋಟ್, ಅಮೇರಿಕನ್ ಜರ್ನಲಿಸಂ (1941) ಪು. 539 ಆನ್‌ಲೈನ್
- ↑ Wood 2004
- ↑ ಡಬ್ಲೂ. ಜೋಸೆಫ್ ಕ್ಯಾಂಪ್‌ಬೆಲ್, ಯೆಲ್ಲೋ ಜರ್ನಲಿಸಂ: ಪಂಕ್ಚರಿಂಗ್ ದಿ ಮಿತ್ಸ್, ಡಿಫೈನಿಂಗ್ ದಿ ಲೆಗಸೀಸ್ (2003) ಪು. 37-38 ಆನ್‌ಲೈನ್
- ↑ Swanberg 1967, pp. 74–75
- ↑ ೫.೦ ೫.೧ Nasaw 2000, p. 100
- ↑ Swanberg 1967, p. 91
- ↑ Swanberg 1967, p. 79
- ↑ Nasaw 2000, pp. 54–63
- ↑ Nasaw 2000, pp. 75–77
- ↑ Nasaw 2000, p. 75
- ↑ Nasaw 2000, pp. 69–77
- ↑ Nasaw 2000, p. 105
- ↑ Nasaw 2000, p. 107
- ↑ Nasaw 2000, p. 108
- ↑ "ಲಾರೆನ್ಸ್ ವಿಶ್ವವಿದ್ಯಾನಿಲಯ". Archived from the original on 2009-03-01. Retrieved 2010-11-11.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Nasaw 2000, quoted on p. 79
- ↑ ೧೭.೦ ೧೭.೧ Nasaw 2000, p. 132
- ↑ ೧೮.೦ ೧೮.೧ Smythe 2003, p. 191
- ↑ Nasaw 2000, p. 133
- ↑ Nasaw 2000, p. 138
- ↑ Nasaw 2000, pp. 156–158
- ↑ Emory & Emory 1984, p. 295
ಉಲ್ಲೇಖಗಳು
[ಬದಲಾಯಿಸಿ]- Auxier, George W. (March 1940), "Middle Western Newspapers and the Spanish American War, 1895–1898", Mississippi Valley Historical Review, vol. 26, no. 4, Organization of American Historians, p. 523, doi:10.2307/1896320, JSTOR 10.2307/1896320
- Campbell, W. Joseph (2005), The Spanish-American War: American Wars and the Media in Primary Documents, Greenwood Press
- Campbell, W. Joseph (2001), Yellow Journalism: Puncturing the Myths, Defining the Legacies, Praeger
- Emory, Edwin; Emory, Michael (1984), The Press and America (4th ed.), Prentice Hall
- Milton, Joyce (1989), The Yellow Kids: Foreign correspondents in the heyday of yellow journalism, Harper & Row
- Nasaw, David (2000), The Chief: The Life of William Randolph Hearst, Houghton Mifflin
- Procter, Ben (1998), William Randolph Hearst: The Early Years, 1863–1910, Oxford University Press
- Rosenberg, Morton; Ruff, Thomas P. (1976), Indiana and the Coming of the Spanish-American War, Ball State Monograph, No. 26, Publications in History, No. 4, Muncie, IN: Ball State University (ಭಾರತೀಯ ಸುದ್ದಿಪತ್ರಿಕೆಗಳು ಅದರ ಪ್ರಾಚ್ಯ ಪತ್ರಿಕೆಗಳಿಗೆ ಹೋಲಿಸಿದರೆ "ಹೆಚ್ಚು ಮಿತವಾದ, ಹೆಚ್ಚು ಜಾಗರೂಕತೆಯ, ಕಡಿಮೆ ಸಾಮ್ರಾಜ್ಯಶಾಹಿಯ ಮತ್ತು ಕಡಿಮೆ ರಾಷ್ಟ್ರಪ್ರೇಮವುಳ್ಳವುಗಳಾಗಿದೆ ಎಂದು ಸಮರ್ಥಿಸಲಾಗಿದೆ.")
- Smythe, Ted Curtis (2003), Sloan, W. David; Startt, James D. (eds.), The Gilded Age Press, 1865–1900, The History of American Journalism, Number 4, Westport, CT: Praeger
{{citation}}
: Missing|editor2=
(help) - Swanberg, W.A (1967), Pulitzer, Charles Scribner's Sons
- Sylvester, Harold J. (February 1969), "The Kansas Press and the Coming of the Spanish-American War", The Historian, 31 (ಕನ್ಸಾಸ್‌ನಲ್ಲಿನ ಸುದ್ದಿಪತ್ರಿಕೆಗಳಲ್ಲಿ ಸಿಲ್ವೆಸ್ಟರ್ ಅವರು ಯಾವುದೇ ಹಳದಿ ಪತ್ರಿಕೋದ್ಯಮದ ಪ್ರಭಾವವನ್ನು ಕಾಣಲಿಲ್ಲ.)
- Welter, Mark M. (Winter 1970), "The 1895–1898 Cuban Crisis in Minnesota Newspapers: Testing the 'Yellow Journalism' Theory", Journalism Quarterly, vol. 47, pp. 719–724
- Winchester, Mark D. (1995), "Hully Gee, It's a WAR! The Yellow Kid and the Coining of Yellow Journalism", Inks: Cartoon and Comic Art Studies, vol. 2.3, pp. 22–37
- Wood, Mary (February 2, 2004), "Selling the Kid: The Role of Yellow Journalism", The Yellow Kid on the Paper Stage: Acting out Class Tensions and Racial Divisions in the New Urban Environment, American Studies at the University of Virginia, archived from the original on ನವೆಂಬರ್ 7, 2014, retrieved ನವೆಂಬರ್ 11, 2010
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Campbell, W. Joseph (Summer 2000), "Not likely sent: The Remington-Hearst 'telegrams'", Journalism and Mass Communication Quarterly, retrieved 2008-09-06
- (French) Charte de Munich (1971) Déclaration des devoirs et des droits des journalistes
- Pages using the JsonConfig extension
- CS1 errors: redundant parameter
- Articles with hatnote templates targeting a nonexistent page
- Articles with unsourced statements from May 2010
- Articles with unsourced statements from May 2009
- CS1 errors: missing name
- Articles with French-language external links
- ಅಮೆರಿಕದ ಮಾಧ್ಯಮ ಇತಿಹಾಸ
- ಪತ್ರಿಕೋದ್ಯಮದ ಟೀಕೆ
- ಪತ್ರಿಕೋದ್ಯಮದ ಪ್ರಕಾರಗಳು
- ರಾಜಕೀಯ ಸಂಬಂಧಿತ ಪದಗಳು
- ಮಾಧ್ಯಮದ ಸಮಸ್ಯೆಗಳು
- ಪತ್ರಿಕೋದ್ಯಮ