ವಿಷಯಕ್ಕೆ ಹೋಗು

ಹಳದಿ ಕೊಕ್ಕಿನ ಹರಟೆಮಲ್ಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಹಳದಿ ಕೊಕ್ಕಿನ ಹರಟೆಮಲ್ಲ ಪಕ್ಷಿ ಇಂದ ಪುನರ್ನಿರ್ದೇಶಿತ)
Yellow-billed Babbler
in Hyderabad, India.
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
T. affinis
Binomial name
Turdoides affinis
(Jerdon, 1845)

ಹಳದಿ ಕೊಕ್ಕಿನ ಹರಟೆಮಲ್ಲ ಅಥವಾ ಬಿಳಿತಲೆಯ ಹರಟೆಮಲ್ಲ (ಟರ್ಡಾಯ್ಡೆಸ್ ಅಫಿನಿಸ್) ಒಂದು ಪುರಾತನ ಕಾಲದ ಹರಟೆಮಲ್ಲ ಪಕ್ಷಿಯಾಗಿದ್ದು, ಇದು ಮೂಲತಃ ದಕ್ಷಿಣ ಭಾರತ ಮತ್ತು ಶ್ರೀಲಂಕಾಗಳಲ್ಲಿ ಕಂಡುಬರುವ ಪಕ್ಷಿಯಾಗಿದೆ. ಹಳದಿ ಕೊಕ್ಕಿನ ಹರಟೆಮಲ್ಲ ಪಕ್ಷಿಗಳು ಶ್ರೀಲಂಕಾ ಮತ್ತು ದಕ್ಷಿಣ ಭಾರತಗಳಲ್ಲಿ ಸಾಮಾನ್ಯವಾಗಿ ಕಂಡುಬರುವುದಲ್ಲದೆ ಅಲ್ಲಿ ಮರಿ ಹಾಕಿ ಸಂತಾನವನ್ನು ಸಹ ಬೆಳೆಸುತ್ತವೆ. ಇವು ಪೊದೆಗಳು, ಸಾಗುವಳಿ ಪ್ರದೇಶಗಳು ಮತ್ತು ತೋಟಗಳಲ್ಲಿ ಕಂಡುಬರುತ್ತವೆ. ಹಲವಾರು ಹರಟೆಮಲ್ಲ ಜಾತಿಯ ಪಕ್ಷಿಗಳಂತೆಯೇ ಈ ಹರಟೆಮಲ್ಲ ಪಕ್ಷಿಗಳೂ ವಲಸೆ ಹೋಗುವ ಜಾತಿಯದ್ದವಲ್ಲವಾಗಿದ್ದು, ಚಿಕ್ಕ ದುಂಡಾಗಿರುವ ರೆಕ್ಕೆಗಳನ್ನು ಹೊಂದಿದ್ದು, ಹೆಚ್ಚು ಹಾರುವಷ್ಟು ಬಲಶಾಲಿಯಲ್ಲವಾಗಿವೆ. ಸಾಮಾನ್ಯವಾಗಿ ಈ ಪಕ್ಷಿಗಳು ಆಹಾರಕ್ಕಾಗಿ ಮತ್ತು ಚಿಲಿಪಿಲಿಗುಟ್ಟುವುದಕ್ಕಾಗಿ ಹಿಂಡುಹಿಂಡಾಗಿಯೇ ಸಾಗುತ್ತವೆ. ಹಲವಾರು ಬಾರಿ ಈ ಪಕ್ಷಿಗಳನ್ನು ಕಾಡು ಹರಟೆಮಲ್ಲಗಳೆಂದು ತಪ್ಪಾಗಿ ಗ್ರಹಿಸಲಾಗುತ್ತದೆ. ಆ ಪಕ್ಷಿಗಳೂ ದಕ್ಷಿಣಭಾರತದ ಪ್ರಾಂತ್ಯದಲ್ಲಿ ಸಾಕಷ್ಟು ವಾಸಿಸುತ್ತವೆ. ಆದರೆ ಅವುಗಳ ಉಲುಹು ವಿಶೇಷವಾಗಿ ಗುರುತಿಸುವಂತಿರುತ್ತದೆ ಮತ್ತು ಅವುಗಳು ಹೆಚ್ಚು ಸಸ್ಯಾವೃತ ಪ್ರದೇಶಗಳಲ್ಲಿ ವಾಸಿಸುತ್ತವೆ.[]

ವಿವರಣೆ

[ಬದಲಾಯಿಸಿ]
ಭಾರತದ ಹೈದರಾಬಾದ್ ನಲ್ಲಿ.

ಈ ಪಕ್ಷಿಗಳ ಮೇಲ್ಭಾಗವು ಕಂದು ಬಣ್ಣದ್ದಾಗಿದ್ದು, ಕೊರಳು ಮತ್ತು ಎದೆ ಬೂದು ಬಣ್ಣದ್ದಾಗಿರುತ್ತದೆ, ಕೆಲವು ಗಂಟುಗಂಟಾದಂತಹ ಚಿತ್ರವಿಚಿತ್ರ ತ್ವಕ್ವಿನ್ಯಾಸಗಳಿರುತ್ತವೆ ಮತ್ತು ಪೇಲವ ಹಳದಿ ಬಣ್ಣದ ಮೃದುತೊಗಲಿನ ಹೊಟ್ಟೆಯನ್ನು ಹೊಂದಿರುತ್ತವೆ. ಇವುಗಳ ತಲೆ ಮತ್ತು ಹಿಂಗತ್ತು ಊದಾ ಬಣ್ಣದ್ದಾಗಿರುತ್ತದೆ. ಶ್ರೀಲಂಕಾದಲ್ಲಿ ಕಾಣಬರುವ T. a. ಟ್ಯಾಪ್ರೋಬಾನಸ್ ಜಾತಿಯ ಪಕ್ಷಿಯು ಆಕರ್ಷಕವಲ್ಲದ ಪೇಲವ ಊದಾ ಬಣ್ಣದ್ದಾಗಿರುತ್ತದೆ. ದಕ್ಷಿಣ ಭಾರತದ ಸೂಚಿತ ಜಾತಿಯವು ನೆತ್ತಿ ಮತ್ತು ಹಿಂಗತ್ತಿನ ಭಾಗದಲ್ಲಿ ಬಿಳಿಯ ಬಣ್ಣವನ್ನೂ, ಹಣೆಯ ಭಾಗದಲ್ಲಿ ಕಡು ಬಣ್ಣವನ್ನೂ ಹೊಂದಿರುತ್ತವೆ. ಪೃಷ್ಠವು ಪೇಲವವಾಗಿದ್ದು, ಬಾಲವು ಅಗಲವಾಗಿದ್ದು, ದಟ್ಟಬಣ್ಣದ ತುದಿಯನ್ನು ಹೊಂದಿರುತ್ತದೆ. ದಕ್ಷಿಣಭಾರತದ ತುತ್ತತುದಿಯಲ್ಲಿನ ಹಾಗೂ ಶ್ರೀಲಂಕಾದ ಉಪಜಾತಿಗಳು ಒಂದೇ ರೀತಿ ಇರುತ್ತವೆ; ನೆತ್ತಿಯ ಮತ್ತು ಬೆನ್ನಿನ ಬಣ್ಣ ಹೆಚ್ಚು ಗಾಢವಾದ ಊದಾ ವರ್ಣದ್ದಾಗಿರುತ್ತದೆ. ಕಣ್ಣು ನೀಲಿ-ಬಿಳಿ ಮಿಶ್ರಿತವಾಗಿರುತ್ತದೆ. ಭಾರತೀಯ ಪಕ್ಷಿಗಳ ಕತ್ತು ಮತ್ತು ಎದೆಯ ಮೇಲೆ ಹೆಚ್ಚು ರೇಖೆಗಳಿರುತ್ತವೆ.[] ಶ್ರೀಲಂಕಾದ ಉಪಜಾತಿಯು ಕಾಡು ಹರಟೆಮಲ್ಲ,ಟರ್ಡಾಯ್ಡೆಸ್ ಸ್ಟ್ರೇಯ್ಟಸ್ ಜಾತಿಯನ್ನು ಹೋಲುತ್ತದಾದರೂ ಕಾಡುಹರಟೆಮಲ್ಲಗಳು ಈ ದ್ವೀಪದ ಭಾಗದಲ್ಲಿ ಕಾಣಬರುವುದಿಲ್ಲವೆಂಬುದು ನಿಶ್ಚಿತ.[]

ಈ ಜಾತಿಯ ಹಕ್ಕಿಗಳು ಏಳು ವಿಶಿಷ್ಟ ವಿಧಗಳ ಉಲುಹುಗಳನ್ನು ಹೊಂದಿರುವುದು ಕಂಡುಬಂದಿದೆ; ಕಾಡು ಹರಟೆಮಲ್ಲಗಳಿಗಿಂತಲೂ ಇವುಗಳ ಕೂಗು ಹೆಚ್ಚಿನ ಸ್ಥಾಯಿಯದ್ದಾಗಿರುತ್ತದೆ. ಕಾಡು ಹರಟೆಮಲ್ಲಗಳ ಕೂಗು ಮೂಗಿನಿಂದ ಹೊರಟಂತಿರುತ್ತದೆ ಮತ್ತು ಅವುಗಳ ಕೂಗಿನಲ್ಲಿ ಕರ್ಕಶತೆ ಹೆಚ್ಚಾಗಿ ಕಂಡುಬರುತ್ತದೆ.[]

ಹರಡುವಿಕೆ ಮತ್ತು ಆವಾಸಸ್ಥಾನ

[ಬದಲಾಯಿಸಿ]

ಈ ಜಾತಿಯ ಪಕ್ಷಿಗಳು ದಕ್ಷಿಣಭಾರತ ಮತ್ತು ಶ್ರೀಲಂಕಾಗಳಲ್ಲಿ ಅಲ್ಲಲ್ಲಿ ಕಾಣಬರುತ್ತವೆ. ಇಲ್ಲಿ ಉಲ್ಲೇಖಸಿದ ಉಪಜಾತಿಯು ಆಂಧ್ರಪ್ರದೇಶದ ಗೋದಾವರಿ ನದಿಯ ದಕ್ಷಿಣ ಭಾಗಗಳಲ್ಲಿ, ಕರ್ನಾಟಕದ ಬೆಳಗಾವಿಯ ದಕ್ಷಿಣ ಪ್ರಾತ್ಯಗಳಲ್ಲಿಂದು ತಮಿಳುನಾಡಿನವರೆಗೆ ಕಂಡುಬರುತ್ತದೆ. ಈ ಪಕ್ಷಿಗಳು ಕಾಡು ಹರಟೆಮಲ್ಲಗಳು ವಾಸಿಸುವುದಕ್ಕಿಂತಲೂ ಕಡಿಮೆ ಎತ್ತರಗಳು ಮತ್ತು ಒಣ ಆವಾಸಸ್ಥಾನಗಳಲ್ಲಿ ವಾಸಿಸಲು ಒಲವು ತೋರುವಂತಹವಾದರೂ, ಕೆಲವೊಮ್ಮೆ ಕಾಡು ಹರಟೆಮಲ್ಲಗಳ ಜೊತೆಜೊತೆಗೂ ಕಂಡುಬರುತ್ತವೆ. ಶ್ರೀಲಂಕಾದಲ್ಲಿ ಕಂಡು ಬರುವ ಉಪಜಾತಿಯು ತಗ್ಗುಪ್ರದೇಶಗಳಲ್ಲಿ ಮತ್ತು ೧೫೦೦ ಮೀಟರ್ ಗಳಿಗಿಂತಲೂ ಕಡಿಮೆ ಎತ್ತರದಲ್ಲಿನ ಬೆಟ್ಟ ಪ್ರದೇಶಗಳಲ್ಲಿ ವಾಸಿಸುತ್ತದೆ ಹಾಗೂ ದಟ್ಟವಾದ ವನಗಳಿಂದ ದೂರವಿರುತ್ತದೆ.[]

ನಡಾವಳಿ ಮತ್ತು ಪರಿಸರವಿಜ್ಞಾನ

[ಬದಲಾಯಿಸಿ]
ನೀರು ಕುಡಿಯುತ್ತಾ (ಶಮೀರ್ ಪೇಟ್, ಭಾರತ)

ಹಳದಿ ಕೊಕ್ಕಿನ ಹರಟೆಮಲ್ಲ ಪಕ್ಷಿಗಳು ಏಳರಿಂದ ಹತ್ತರವರೆಗಿನ ಅಥವಾ ಇನ್ನೂ ಹೆಚ್ಚಿನ ಸಂಖ್ಯೆಯ ಹಿಂಡುಗಳಲ್ಲಿ ವಾಸಿಸುತ್ತವೆ. ಈ ಪಕ್ಷಿಗಳು ಬಹಳ ಸದ್ದುಮಾಡುವ ಪಕ್ಷಿಗಳಾದ್ದರಿಂದ ಅವುಗಳು ಎಡೆಬಿಡದೆ ಕೂಗು, ಉಲುಹಿನ, ವಿಲಿಪಿಲಿಗುಟ್ಟುವ ಸದ್ದಿನಿಂದ ದೂರದಿಂದಲೇ ಅವುಗಳ ಹಿಂಡುಗಳ ಇರುವಿಕೆಯನ್ನು ಅರಿಯಬಹುದು. ಈ ಹಿಂಡಿನ ಒಂದು ಪಕ್ಷಿಯು ಹಾರಿ ಎತ್ತರದ ಕೊಂಬೆ/ಸ್ಥಳದಲ್ಲಿ ಕಾವಲುಗಾರನಂತೆ ಕುಳಿತುಕೊಳ್ಳುತ್ತದೆ ಮತ್ತು ಹಿಂಡಿನ ಇತರ ಪಕ್ಷಿಗಳು ಆಹಾರವನ್ನು ಹುಡುಕುತ್ತಾ ಭೂಮಿಗೆ ಹತ್ತಿರದಲ್ಲಿ ಅಥವಾ ನೆಲದ ಮೇಲೆ ಉಳಿದಿರುತ್ತವೆ. ಈ ಪಕ್ಷಿಗಳು ಸಾಮಾನ್ಯವಾಗಿ ಕೀಟಗಳನ್ನು ತಿನ್ನುತ್ತವಾದರೂ ಹಣ್ಣು, ಜೇನುತುಪ್ಪ ಮತ್ತು ಮನುಷ್ಯರು ಬಿಸಾಡಿದ ಆಹಾರ ಪದಾರ್ಥಗಳನ್ನೂ ಇವು ಸೇವಿಸುತ್ತವೆ..[] ಕಾರ್ಲೋಟ್ಸ್ ವೆರ್ಸಿಕಲರ್ ಹಲ್ಲಿಗಳು ಮತ್ತು ವಿಪ್-ಚೇಳುಗಳನ್ನು ಸಹ ಇವು ಆಹಾರವಾಗಿ ಸೇವಿಸುತ್ತವೆ.[] ಈ ಪಕ್ಷಿಗಳು ಬಹಳ ದೂರ ಹಾರುವುದಿಲ್ಲ, ಇವುಗಳು ಎಡೆಬಿಡದೆ ಹಾರಿದ ಅತಿ ಹೆಚ್ಚು ದೂರವೆಂದರೆ 180 ಕಿಲೋಮೀಟರ್ ಗಳು; ಹಾರುವ ಮುನ್ನ ಇವು ಮರವನ್ನೋ ಅಥವಾ ಎತ್ತರದ ಪೊದೆಯನ್ನೋ ಏರಿ, ಸಾಕಷ್ಟು ಮೇಲೆ ಹೋದ ನಂತರ, ಆ ಎತ್ತರದಿಂದ ಹಾರುತ್ತವೆ. ಕರಿ ಕಾಜಾಣs, ಕೆಂಪು ಮಟಪಕ್ಷಿsಮತ್ತು Iಭಾರತದ ತಾಳೆ ಅಳಿಲುಗಳು ಈ ಪಕ್ಷಿಗಳ ಆಸುಪಾಸಿನಲ್ಲೇ ಆಹಾರವನ್ನು ಅರಸುವುದು ಸರ್ವೇಸಾಮಾನ್ಯವಾಗಿ ಕಂಡುಬರುತ್ತದೆ.[][]

ಹರಟೆಮಲ್ಲಗಳು ಬೆಳಗಿನ ಜಾವದಲ್ಲಿ ಆರು ಗಂಟೆಗೆ ಮುಂಚೆಯೇ ಎದ್ದು ತಮ್ಮ ಆಹಾರವನ್ನು ಹುಡುಕತೊಡಗುತ್ತವೆ. ಬಿಸಿಲಿನ ಸಮಯವಾದ 13.30 ರಿಂದ 16.30 ರ ವರೆಗೆ ಇವು ಹೆಚ್ಚಾಗಿ ಚಟುವಟಿಕೆಯಿಲ್ಲದೆ ಇರುತ್ತವೆ. ಸುಮಾರು 19.00 ಗಂಟೆಗೆ ಇವು ಗುಂಪುಗುಂಪಾಗಿ ಒಂದೆಡೆ ಸೇರಿ ಗರಿರೆದರಿ ಓರಣಗೊಳ್ಳುವುದರಲ್ಲಿ ತೊಡಗಿ, ನಂತರ ಮಲಗಲು ತೆರಳುತ್ತವೆ. ಹಿಂಡಿನ ಹಕ್ಕಿಗಳು ಒಂದರ ಪಕ್ಕದಲ್ಲಿ ಒಂದು ಮಲಗುತ್ತವೆ ಹಾಗೂ ಈ ಗುಂಪಿನ ಮಧ್ಯದಲ್ಲಿಯೇ ಹಕ್ಕಿಮರಿಗಳು ತೂರಿ ಜಾಗಮಾಡಿಕೊಂಡು ಆ ಇಕ್ಕಟ್ಟಿನಲ್ಲಿಯೇ ಮಲಗುತ್ತವೆ. ಆಹಾರ ಹುಡುಕುವ ಸಮಯದಲ್ಲಿ ಪ್ರಹರಿ ಪಕ್ಷಿಯು ರೆಕ್ಕೆಗಳನ್ನು ಬೀಸುತ್ತಾ, ಅತ್ತಿಂದಿತ್ತ ಕುಪ್ಪಳಿಸುತ್ತಾ ಕೂಗತೊಡಗುತ್ತದೆ. ಪರಸ್ಪರ ಗರಿಗೆದರಿಕೆಯ ಓರಣವು, ವಿಶೇಷತಃ ಚಳಿಗಾಲದಲ್ಲಿ, ಇವುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಚಟುವಟಿಕೆಯಾಗಿದೆ,[] ಮತ್ತು ಹಿಂಡಿನ ಕೆಲವು ಪಕ್ಷಿಗಳು ಹಿಂಡಿನ ಇತರ ಪಕ್ಷಿಗಳಿಂದ ಆಹಾರವನ್ನು ಬೇಡಿ ಪಡೆಯಬಹುದಾಗಿದೆ.[]

ಹಳದಿ ಕೊಕ್ಕಿನ ಹರಟೆಮಲ್ಲಗಳಿಗೆ ನೀರಿನಲ್ಲಿ ಮುಳುಗಿ ಸ್ನಾನ ಮಾಡುವುದೆಂದರೆ ಬಹಳ ಇಷ್ಟ; ಅವುಗಳು ಸಾಮಾನ್ಯವಾಗಿ ಮಧ್ಯಾಹ್ನದ ಇಳಿಹೊತ್ತು ಅಥವಾ ಸಂಜೆಯಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹಕ್ಕಿಗಳಿಗೆಂದೇ ಇರಿಸಿದ ಬೋಣಿಗೆಗಳಲ್ಲಿ ಸ್ನಾನಮಾಡಲು ಧಾವಿಸುತ್ತವೆ. ಕೆಲವೊಮ್ಮೆ ಈ ಪಕ್ಷಿಗಳು ಸುಮಾರು 18:30 ಗಂಟೆಗೆ ಪಕ್ಷಿಬೋಣಿಗೆಗಳಲ್ಲಿ ಸ್ನಾನ ಮಾಡಲು ಬರುವುದನ್ನು ಗಮನಿಸಲಾಗಿದೆ; ಸೂರ್ಯ ಮುಳುಗಿ ಕತ್ತಲೆ ಕವಿಯುವ ಸಮಯದಲ್ಲಿ ಇವು ಶುಚಿರ್ಭೂತವಾಗಲು ಹಾತೊರೆದು ಧಾವಿಸುತ್ತವೆ.

ಗೃಹೋದ್ಯಾನಕ್ಕೆ ಭೇಟಿ ನೀಡಿದ ಹಳದಿ ಕೊಕ್ಕಿನ ಹರಟೆಮಲ್ಲಗಳ ಒಂದು ಗುಂಪು (ಶ್ರೀಲಂಕಾದ ಕೊಲಂಬೋದಲ್ಲಿ). ಜುಲೈ 2007

ಶಿವಕಾಶಿ ಬಯಲುಪ್ರದೇಶದಲ್ಲಿ ನಡೆಸಿದ ಅಧ್ಯಯನದ ಮೇರೆಗೆ ಇವುಗಳ ಗೂಡುಗಳು 0.4 km2 ನ ವ್ಯಾಪ್ತಿಯಲ್ಲಿ ಇರುವುದು ಕಂಡುಬಂದಿದೆ ಹಾಗೂ ಇವುಗಳ ಸಂಖ್ಯಾಸಾಂದ್ರತೆಯು ಪ್ರತಿ ಕಿ.ಮೀ.2 ಗೆ 55 ಪಕ್ಷಿಗಳು ಎಂದು ತಿಳಿದುಬಂದಿದೆ .[]

ಗ್ಯಾಲರಿ

[ಬದಲಾಯಿಸಿ]

ಸಂತಾನವೃದ್ಧಿ

[ಬದಲಾಯಿಸಿ]
ಸಂಪರ್ಕ ಕರೆಗಳು

ಈ ಪಕ್ಷಿಗಳ ಗೂಡುಗಳು ವರ್ಷವಿಡೀ ಕಂಡುಬರುವುವಾದರೂ, ಮರಿ ಹಾಕುವ ಗರಿಷ್ಠ ಸಮಯವೆಂದರೆ ವಾಯುವ್ಯದ ಮುಂಗಾರಿನ ಅವಧಿ ಅರಂಭವಾಗುವ ಮುನ್ನಾದಿನಗಳು. ದಟ್ಟವಾದ ಗಿಡದ ಎಲೆಗಳು ಮತ್ತು ಪೊದೆಗಳಲ್ಲಿ ಅಡಗಿರುವ ರೀತಿಯಲ್ಲಿ ಈ ಪಕ್ಷಿಗಳು ಗೂಡುಗಳನ್ನು ಮರಗಳಲ್ಲಿ ಕಟ್ಟುತ್ತವೆ. ಹೀಗೆ ಕಟ್ಟಲ್ಪಟ್ಟ ಗೂಡುಗಳಲ್ಲಿ ಬಹುತೇಕ ನಾಲ್ಕು ಮೀಟರ್ ಗಳಿಗಿಂತಲೂ ಕಡಿಮೆ ಎತ್ತರದಲ್ಲಿಯೇ ಕಟ್ಟಲ್ಪಡುತ್ತವೆ. ಈ ಗೂಡುಗಳು ರೆಂಬೆಗಳ ಕವಲಿನಲ್ಲಿ ಇರಿಸಿದಂತಹ ಸಣ್ಣ ಬಟ್ಟಲುಗಳ ಮಾದರಿ ಇರುತ್ತವೆ. ಸಾಮಾನ್ಯವಾಗಿ ಒಂದು ಬಾರಿಗೆ ಎರಡರಿಂದ ನಾಲ್ಕು ನೀಲಿಯ ರಂಗಿನ ಮೊಟ್ಟೆಗಳನ್ನಿಡುತ್ತವೆ; ಶ್ರೀಲಂಕಾದ ಬೆಟ್ಟಗಳಲ್ಲಿನ ಹರಟೆಮಲ್ಲಗಳು ಐದು ಮೊಟ್ಟೆಗಳನ್ನು ಇಡುವುದೂ ಕಂಡುಬಂದಿದೆ. ಮೊಟ್ಟೆಗಳು 14ರಿಂದ 16 ದಿನಗಳಲ್ಲಿ ಒಡೆದು ಮರಿ ಹೊರಬರುತ್ತದೆ.[] ಕಾವು ಕೊಡುವ ಅಮ್ಮ/ಅಪ್ಪ ಪಕ್ಷಿಯು ಮೊಟ್ಟೆಗಳ ಮೇಲೆ ಕುಳಿತುಕೊಳ್ಳದೆ ಗೂಡಿನ ತುದಿಗಳ ಮೇಲೆಯೇ ಹರಡಿಕೊಂಡು ನಿಲ್ಲುತ್ತದೆ. ಭಾರತ ಮತ್ತು ಶ್ರೀಲಂಕಾ ಪ್ರಾಂತ್ಯಗಳೆರಡೂ ಕಡೆಗಳಲ್ಲಿ ಕಾವು ಪರಾವಲಂಬತ್ವವನ್ನು ಕಪ್ಫ್ಪುಬಿಳುಪು ಕೋಗಿಲೆಗಳು (ಕ್ಲಾಮಾಟರ್ ಜಾಕೋಬೈನಸ್ ) ಹೊಂದಿರುವುವೆಂಬುದನ್ನು ಗಮನಿಸಲಾಗಿದೆ.[][೧೦][೧೧] ದೊಡ್ಡ ಕೋಗಿಲೆಚಾಣವೂ ಕಾವು ಪರಾಧೀನತೆಗೆ ಹೆಸರುವಾಸಿಯಾಗಿದೆ.[][೧೨] ಕೆಲವು ಅಪರೂಪದ ಸಂದರ್ಭಗಳಲ್ಲಿ ಕಾಡು ಹರಟೆಮಲ್ಲಗಳು ಹಳದಿ ಕೊಕ್ಕಿನ ಹರಟೆಮಲ್ಲಗಳ ಮರಿಗಳಿಗೆ ಗುಟುಕು ನೀಡುವುದು ಕಂಡುಬಂದಿದೆ.[೧೩] ಮರಿಗಳಿಗೆ ಸಾಮಾನ್ಯವಾಗಿ ಹುಳುಗಳನ್ನು ತಿನ್ನಿಸಲಾಗುತ್ತದೆ; ಕೆಲವೊಮ್ಮೆ ಹಲ್ಲಿಗಳನ್ನೂ ಸಹ. ಗೂಡುಕಟ್ಟುವ ಹಲವಾರು ಹಕ್ಕಿಗಳಂತೆಯೇ, ಅಪ್ಪ-ಅಮ್ಮ ಹಕ್ಕಿಗಳು ಮರಿಗಳ ಮಲಗಳನ್ನು ತಿಂದುಬಿಡುವುದರ ಮೂಲಕ ಗೂಡಿನ ಸ್ವಚ್ಛತೆಯನ್ನು ಕಾಪಾಡುತ್ತವೆ.[೧೪][೧೫] ಸಹಾಯಕ ಪಕ್ಷಿಗಳು ಈ ಹಿರಿಯ ಹಕ್ಕಿಗಳು ಗೂಡು ಕಟ್ಟಲು[] ಮತ್ತು ಗೂಡಿನಲ್ಲಿ ಮರಿಗಳಿಗೆ ಗುಟುಕು ಕೊಡುವುದಕ್ಕೆ ಸಹಾಯ ನೀಡುತ್ತವೆ.[೧೬]

ಮರಣಪ್ರಮಾಣ/ಸಾವಿನ ದರ

[ಬದಲಾಯಿಸಿ]

ಮೊಟ್ಟೆಗಳನ್ನು ತಿಂದುಬಿಡುವ ಬೇಟೆಗಾರರ ಪೈಕಿ ಮುಂಗಸಿ, ಕಾಗೆಗಳು ಮತ್ತು ಕೆಂಬೂತಗಳು ಪ್ರಮುಖವಾದವು. ಈ ಬೇಟೆ ಪ್ರಾಣಿ ಮತ್ತು ಹಕ್ಕಿಗಳು ಮರಿಗಳನ್ನೂ ತಿಂದುಬಿಡುತ್ತವೆ; ಮೂಷಿಕಸರ್ಪ ಪ್ಟ್ಯಾಸ್ ಮ್ಯೂಕೋಸಸ್ ಸಹ ಇವುಗಳನ್ನು ತಿಂದುಬಿಡುವುದೆಂದು ದಾಖಲಾಗಿದೆ.[]

ಸಂಸ್ಕೃತಿಯಲ್ಲಿ

[ಬದಲಾಯಿಸಿ]

ಶ್ರೀಲಂಕಾ ದಲ್ಲಿ ಈ ಪಕ್ಷಿಯನ್ನು ಸಿಂಹಳಿ ಭಾಷೆಯಲ್ಲಿ ಡೆಮಲಿಚ್ಚ ಎಂದು ಕರೆಯುತ್ತಾರೆ.[೧೭]

ಉಲ್ಲೇಖಗಳು

[ಬದಲಾಯಿಸಿ]
  1. BirdLife International (2009). "Turdoides affinis". IUCN Red List of Threatened Species. Version 2009.2. International Union for Conservation of Nature. Retrieved 2010-05-03. {{cite web}}: Invalid |ref=harv (help)
  2. ೨.೦ ೨.೧ ೨.೨ ೨.೩ ೨.೪ Zacharias, V.J & Anil Mathew, D.N. (1988). "Ecology of Babblers (Turdoides spp.)". J. Bombay Nat. Hist. Soc. 85 (1): 50–63.{{cite journal}}: CS1 maint: multiple names: authors list (link)
  3. Rasmussen, PC & JC Anderton (2005). Birds of South Asia: The Ripley Guide. Vol. 2. Smithsonian Institution & Lynx Edicions. p. 447.
  4. ೪.೦ ೪.೧ ೪.೨ Ali, S & S D Ripley (1996). Handbook of the birds of India and Pakistan. Vol. 6 (2 ed.). Oxford University Press. pp. 232–234.
  5. ೫.೦ ೫.೧ Zacharias,VJ; Mathew,DN (1998). "Behaviour of the Whiteheaded Babbler Turdoides affinis Jerdon". J. Bombay Nat. Hist. Soc. 95 (1): 8–14.{{cite journal}}: CS1 maint: multiple names: authors list (link)
  6. Davidar,ERC (1994). "Exotic diet of Whiteheaded Babblers Turdoides affinis (Jerdon)". J. Bombay Nat. Hist. Soc. 91 (2): 321.
  7. ೭.೦ ೭.೧ ೭.೨ Jose, Boby (2001). Ecological isolation of Babblers (Turdoides spp.). Mahatma Gandhi University. Ph.D. Thesis. Archived from the original on 2011-07-27. Retrieved 2011-03-19. {{cite book}}: More than one of |accessdate= and |access-date= specified (help); More than one of |archivedate= and |archive-date= specified (help); More than one of |archiveurl= and |archive-url= specified (help)
  8. Johnsingh,AJT; Paramanandham,K; Murali,S (1982). "Foraging behaviour and interactions of Whiteheaded Babbler Turdoides affinis with other species". J. Bombay Nat. Hist. Soc. 79 (3): 503–514.{{cite journal}}: CS1 maint: multiple names: authors list (link)
  9. Johnsingh,AJT; Paramanandham,K (1982). "Group care of White-headed Babblers Turdoides affinis for a Pied Crested Cuckoo Clamator jacobinus chick". Ibis. 124 (2): 179–183. doi:10.1111/j.1474-919X.1982.tb03758.x.{{cite journal}}: CS1 maint: multiple names: authors list (link)
  10. Raj,PJ Sanjeeva (1964). "Communal breeding in the Whiteheaded Babbler [Turdoides affinis (Jerdon)] in Tambaram, Madras State". J. Bombay Nat. Hist. Soc. 61 (1): 181–183.
  11. Perera, M. Sandun J. (2007). "Brood Parasitism by Pied Cuckoos on the Yellow-billed Babbler" (PDF). Siyoth. 2 (2): 42–43. Archived from the original (PDF) on 2016-03-03. Retrieved 2011-03-19.
  12. Prasad G, Nameer PO and MV Reshmi (2001). "Brood parasitism by Indian Hawk-cuckoo (Hierococcyx varius Vahl)" (PDF). Zoos' Print Journal. 16 (8): 554–556. Archived from the original (PDF) on 2011-09-29. Retrieved 2011-03-19.
  13. Zacharias,VJ; Mathew,DN (1977). "Malabar Jungle Babbler Turdoides striatus malabaricus (Jerdon) and Whiteheaded Babbler Turdoides affinis affinis (Jerdon) jointly caring for the chicks of the latter". J. Bombay Nat. Hist. Soc. 74 (3): 529–530.{{cite journal}}: CS1 maint: multiple names: authors list (link)
  14. Jeyasingh,DEJ (1976). "Faecal feeding in the Whiteheaded Babbler Turdoides affinis (Jerdon)". J. Bombay Nat. Hist. Soc. 73 (1): 218–219.
  15. Khacher,Lavkumar (1978). "Faecal feeding in the Whiteheaded Babbler, Turdoides affinis (Jerdon) - a rejoinder". J. Bombay Nat. Hist. Soc. 75 (2): 490–491.
  16. Gaston, A.J Matthew, D.N. & Zacharias, V.J. (1979). "Regional variation in the breeding seasons of Babblers in India". Ibis. 121: 512–516. doi:10.1111/j.1474-919X.1979.tb06695.x.{{cite journal}}: CS1 maint: multiple names: authors list (link)
  17. Anonymous (1998). "Vernacular Names of the Birds of the Indian Subcontinent" (PDF). Buceros. 3 (1): 53–109. Archived from the original (PDF) on 2010-04-01. Retrieved 2011-03-19.


ಇತರ ಮೂಲಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು‌

[ಬದಲಾಯಿಸಿ]