ವಿಷಯಕ್ಕೆ ಹೋಗು

ಹಣತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಣತೆಯು (ಪ್ರಣತಿ) ಭಾರತೀಯ ಉಪಖಂಡದಲ್ಲಿ, ವಿಶೇಷವಾಗಿ ಭಾರತ ಮತ್ತು ನೇಪಾಳದಲ್ಲಿ ಬಳಸಲ್ಪಡುವ ಎಣ್ಣೆ ದೀಪ. ಇದನ್ನು ಸಾಮಾನ್ಯವಾಗಿ ಮಣ್ಣಿನಿಂದ ತಯಾರಿಸಲಾಗುತ್ತದೆ, ಮತ್ತು ತುಪ್ಪ ಅಥವಾ ಎಣ್ಣೆಯಲ್ಲಿ ನೆನೆಸಿದ ಹತ್ತಿಯ ಬತ್ತಿಯನ್ನು ಹೊಂದಿರುತ್ತದೆ. ಹಣತೆಗಳು ಭಾರತೀಯ ಉಪಖಂಡಕ್ಕೆ ಸ್ಥಳೀಯವಾಗಿವೆ ಮತ್ತು ಇವನ್ನು ಹಲವುವೇಳೆ ದೀಪಾವಳಿ[೧] ಅಥವಾ ಕುಶ್ತಿ ಸಮಾರಂಭದಂತಹ ಹಿಂದೂ, ಸಿಖ್, ಜೈನ ಹಾಗೂ ಪಾರಸಿ ಧಾರ್ಮಿಕ ಹಬ್ಬಗಳಲ್ಲಿ ಬಳಸಲಾಗುತ್ತದೆ.

ಸಾಂಪ್ರದಾಯಿಕ ಬಳಕೆ[ಬದಲಾಯಿಸಿ]

ಮಣ್ಣಿನ ಹಣತೆಗಳನ್ನು ಹಲವುವೇಳೆ ವಿಶೇಷ ಸಂದರ್ಭಗಳಲ್ಲಿ ಬೆಳಗಲು ತಾತ್ಕಾಲಿಕವಾಗಿ ಬಳಸಲಾಗುತ್ತದೆ, ಮತ್ತು ಹಿತ್ತಾಳೆಯಿಂದ ತಯಾರಿಸಿದ ಹಣತೆಗಳು ಮನೆಗಳು ಹಾಗೂ ದೇವಸ್ಥಾನಗಳಲ್ಲಿ ಶಾಶ್ವತವಾದ ನೆಲೆವಸ್ತುಗಳಾಗಿರುತ್ತವೆ.

ಹಣತೆಗಳನ್ನು ಹಚ್ಚುವುದು ದೀಪಾವಳಿ ಹಬ್ಬದ ಸಂಭ್ರಮ ಹಾಗೂ ಕ್ರಿಯಾವಿಧಿಗಳ ಭಾಗವಾಗಿರುತ್ತದೆ. ಸಣ್ಣ ಹಣತೆಗಳನ್ನು ಸೀಮೆಗಳು ಹಾಗೂ ಪ್ರವೇಶದ್ವಾರಗಳಲ್ಲಿ ಇಟ್ಟು ಮನೆಗಳನ್ನು ಅಲಂಕರಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "Diwali: Significance of a Diya". Zee Media Corporation Ltd. Retrieved July 19, 2013.
"https://kn.wikipedia.org/w/index.php?title=ಹಣತೆ&oldid=903933" ಇಂದ ಪಡೆಯಲ್ಪಟ್ಟಿದೆ