ಸ್ವಾತಿ. ಪಿ. ಭಾರದ್ವಾಜ್
ಗೋಚರ
ಗಿನ್ನಿಸ್ ದಾಖಲೆ ಸೇರಿದ ಕನ್ನಡದ ಬಾಲಕಿ ಕುಮಾರಿ ಸ್ವಾತಿ
[ಬದಲಾಯಿಸಿ]- ಕುಮಾರಿ ಸ್ವಾತಿ. ಪಿ. ಭಾರದ್ವಾಜ್ ತನ್ನ ನಾಲ್ಕನೇ ವರ್ಷಕ್ಕೆ ಭರತನಾಟ್ಯ ಕಲಿಯಲು ಪ್ರಾರಂಭಿಸಿದಳು. ತಂದೆ ಪ್ರಕಾಶ್ ಮತ್ತು ತಾಯಿ ಅನಿತಾ; ತಮ್ಮ ಮಗಳ ಕಲಾಸಕ್ತಿಗೆ ಪ್ರೋತ್ಸಾಹ ನೀಡಿದ್ದಾರೆ
- ಬೆಂಗಳೂರಿನ ವಿದುಷಿ ರೇಖಾ ಜಗದೀಶ್‌ರವರಿಂದ ಭರತನಾಟ್ಯವನ್ನು ಕಲಿತು ಇಂದು ಚಿಕ್ಕವಯಸ್ಸಿನಲ್ಲಿಯೇ ಸ್ವಾತಿ ಅದ್ಭುತ ಸಾಧನೆ ಮಾಡಿದ್ದಾರೆ.
- ಹೈದರಾಬಾದಿನ ಗಾಚಿಬೋಲಿ ಕ್ರೀಡಾಂಗಣದಲ್ಲಿ . ಡಿಸೆಂಬರ್ 26. 2010ರಲ್ಲಿ ಜರುಗಿದ ದ್ವಿತೀಯ ಅಂತಾರಾಷ್ಟ್ರೀಯ ಕೂಚುಪುಡಿ ನೃತ್ಯೋತ್ಸವದಲ್ಲಿ 2850 ನೃತ್ಯ ಗಾತಿಯರೊಡನೆ ನೃತ್ಯ ಪ್ರದರ್ಶನ ನೀಡಿದ್ದು ಬರೋಬ್ಬರಿ ನಾಲ್ಕು ಗಂಟೆ 26 ನಿಮಿಷಗಳು. ನೃತ್ಯದ ಮೂಲಕ ಗಿನ್ನಿಸ್ ಪುಸ್ತಕಕ್ಕೆ ದಾಖಲಾಗಿದ್ದಾರೆ.
- ಹನ್ನೆರಡು ವರ್ಷದ(2010) ಬಾಲಕಿಯೊಬ್ಬಳು ನೃತ್ಯದ ಮೂಲಕ ಗಿನ್ನಿಸ್ ಪುಸ್ತಕಕ್ಕೆ ದಾಖಲಾದ ಏಕೈಕ ಬಾಲ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಓದಿನಲ್ಲಿಯೂ ಮಂದಿರುವರು .
- ಸ್ವಾತಿ ಇದುವರೆಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ 850ಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ನೀಡಿ ಮನ್ನಣೆ ಗಳಿಸಿದ್ದಾರೆ.
- ಅನೇಕ ಏಕವ್ಯಕ್ತಿ ಕಾರ್ಯಕ್ರಮಗಳನ್ನು ನೀಡಿ ಕಲಾ ಸಕ್ತರ ಮನಸೆಳೆದಿದ್ದಾರೆ. ಇವರ ಅನೇಕ ಕಾರ್ಯಕ್ರಮಗಳು ದೂರದರ್ಶನದ ವಿವಿಧ ಚಾನೆಲ್‌ಗಳಲ್ಲಿ ಪ್ರಸಾರವಾಗಿದೆ. ನೂರಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಸಿದ್ದಾರೆ
- ತಾನು ಕಲಿತಿರುವ ಕಲೆಯನ್ನು ಅವಕಾಶ ವಂಚಿತ ಮಕ್ಕಳಿಗೂ ಕಲಿಸಿಕೊಡಬೇಕೆಂಬುದು. ಅದಕ್ಕಾಗಿ ಶ್ರೀ ನಾಟ್ಯ ಭೈರವಿ ಸಂಗೀತ ಮತ್ತು ಭರತನಾಟ್ಯ ಶಾಲೆಯನ್ನು ಚನ್ನರಾಯಪಟ್ಟಣದಲ್ಲಿ ಸ್ಥಾಪಿಸಿ, ಸುಮಾರು 450 ಮಕ್ಕಳಿಗೆ ಉಚಿತವಾಗಿ ಭರತನಾಟ್ಯವನ್ನು ಕಲಿಸುತ್ತಿದ್ದಾಳೆ.
- ಈ ಬಗ್ಗೆ ಸ್ವಾತಿಯವರು, ದೇವರು ನೀಡಿರುವ ಈ ಪ್ರತಿಭೆಯನ್ನು ಸಮಾಜಕ್ಕೆ ಸೇವೆ ಸಲ್ಲಿಸುವುದರ ಮೂಲಕ ಸದುಪಯೋಗ ಪಡಿಸಿಕೊಳ್ಳಲು ಈ ಕಾರ್ಯಕ್ರಮ ನೆಡೆಸುತ್ತೇನೆ ಎನ್ನುತ್ತಾರೆ.
ನೋಡಿ
[ಬದಲಾಯಿಸಿ]ಆಧಾರ
[ಬದಲಾಯಿಸಿ]- Kannada prabha(ಪುರವಣಿ >> ಸಾಧನೆ-ಹಿರಿತನ)-15 Nov 2014
[[೧]]---