ವಿಷಯಕ್ಕೆ ಹೋಗು

ಸ್ವರ್ಣಮಂದಿರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸ್ವರ್ಣಮಂದಿರ, ಅಮೃತಸರ ಇಂದ ಪುನರ್ನಿರ್ದೇಶಿತ)
ಸ್ವರ್ಣಮಂದಿರದ ವಿಹಂಗಮ ನೋಟ
ಸ್ವರ್ಣಮಂದಿರ
The Harmandir Sahib (The abode of God),
informally known as the Golden Temple[][]
ಸಾಮಾನ್ಯ ಮಾಹಿತಿ
ವಾಸ್ತುಶಾಸ್ತ್ರ ಶೈಲಿSikh architecture
ನಗರ ಅಥವಾ ಪಟ್ಟಣಅಮೃತಸರ
ದೇಶಭಾರತ
ನಿರ್ದೇಶಾಂಕ31°37′12″N 74°52′37″E / 31.62000°N 74.87694°E / 31.62000; 74.87694
ನಿರ್ಮಾಣ ಪ್ರಾರಂಭDecember ೧೫೮೫ AD
ಮುಕ್ತಾಯAugust ೧೬೦೪ AD
ವಿನ್ಯಾಸ ಮತ್ತು ನಿರ್ಮಾಣ
ClientGuru Arjan Dev & Sikhs
ವಾಸ್ತುಶಿಲ್ಪಿGuru Arjan Dev

ಶ್ರೀ ಹರ್ಮಂದಿರ್ ಸಾಹಿಬ್ [] (ಪಂಜಾಬಿಯಲ್ಲಿ : ) ಅಥವ ದರ್ಬಾರ್ ಸಾಹಿಬ್ [](ಪಂಜಾಬಿಯಲ್ಲಿ{ : ), ಅಸಂಪ್ರದಾಯಕವಾಗಿ ಚಿನ್ನದ ದೇವಸ್ಥಾನವೆಂದು ಹೇಳಲಾಗುತ್ತದೆ,[] ಇದು ಸಿಖ್ ಧರ್ಮದ ಅತ್ಯಂತ ಪವಿತ್ರವಾದ ಮಂದಿರ. ಸಿಖ್ಬರ ನಾಲ್ಕನೆಯ ಗುರು, ಗುರು ರಾಮ್ ದಾಸ್ ರಿಂದ ಸ್ಥಾಪಿಸಲ್ಪಟ್ಟ ಈ ಮಂದಿರ, ಅಮೃತಸರ್ ನಗರದಲ್ಲಿದೆ, ಹಾಗೂ ಸಿಖ್ ಗುರುವಿನ ನಗರವೆಂದು ಅರ್ಥವಿರುವ "ಗುರು ಡಿ ನರ್ಗಿ" ಎಂದು ಹೆಸರಾಗಿದೆ.

ಪೀಠಿಕೆ

[ಬದಲಾಯಿಸಿ]

ಸಿಖ್ ಜನತೆಯ ಐದನೆಯ ಗುರು, ಶ್ರೀ ಗುರು ಅರ್ಜುನ್ ದೇವ್ ಜಿ ಯವರು, ಈ ಚಿನ್ನದ ದೇವಸ್ಥಾನದ ವಾಸ್ತುಶಿಲ್ಪಿ.

ಜನರಲ್ (ಸಾಮಾನ್ಯ)

[ಬದಲಾಯಿಸಿ]

ಸಿಖ್ ಧರ್ಮದ ಶಾಶ್ವತ ಗುರು, ಶ್ರೀ ಗುರು ಗ್ರಂಥ್ ಸಾಹಿಬ್, ಯಾವಾಗಲೂ ಅದರೊಳಗೆ ಇರುವ ಕಾರಣ ಸಿಖ್ಬರು ಚಿನ್ನದ ದೇವಸ್ಥಾನವನ್ನು ತುಂಬಾ ಪವಿತ್ರವೆಂದು ಪರಿಗಣಿಸುತ್ತಾರೆ ಹಾಗೂ ಅದರ ರಚನೆಯು ಜೀವನದ ಎಲ್ಲಾ ರಂಗಗಳ ಮತ್ತು ಎಲ್ಲಾ ಧರ್ಮದ ಸ್ರೀ - ಪುರುಷರು ಸೇರಿ, ಸರಿ ಸಮನಾಗಿ ದೇವರನ್ನು ಆರಾಧಿಸುವ ಒಂದು ಪೂಜಾ ಮಂದಿರವನ್ನು ನಿರ್ಮಿಸುವುದು ಮುಖ್ಯ ಉದ್ದೇಶವಾಗಿತ್ತು.[][] ಶ್ರೀ ಗುರು ಗ್ರಂಥ್ ಸಾಹಿಬ್ ಸಿಖ್ ಧರ್ಮದಲ್ಲಿ ಅತ್ಯಂತ ಪವಿತ್ರ ಸಾಹಿತ್ಯವಾಗಿದೆ,[] ಸಿಖ್ ಧರ್ಮದ ಹತ್ತನೆಯ ಗುರು, ಗುರು ಗೋವಿಂದ್ ಸಿಂಗ್ ಅವರು, ೭ ನೇ ಅಕ್ಟೋಬರ್, ೧೭೦೮ ರಲ್ಲಿ, ನಾಂದೇಡ್ ನಲ್ಲಿ ಅದನ್ನು ಆನಂತ ಸನಾತನ ಗುರು ಮತ್ತು ಸಿಖ್ ಧರ್ಮದ ಮುಖಂಡನೆಂದು ಕಾರ್ಯರೂಪಕ್ಕೆ ತಂದರು.[] ಗುರು ಗ್ರಂಥ್ ಸಾಹಿಬ್ ವಿಶ್ವದಲ್ಲಿ ಎಲ್ಲಿಯೇ ಇರಲಿ ಸಿಖ್ ಜನತೆಗೆ ಸರಿ ಸಮನಾಗಿ ಪವಿತ್ರ ಹಾಗೂ ಬಹು ಅಮೂಲ್ಯವಾಗಿದ್ದಾಗಿದೆ. ಅಮೃತಸರವು ಹರ್ಮಂದಿರ್ ಸಾಹಿಬ್ ನ ಪವಿತ್ರ ಸ್ಥಾನವಾಗಿದೆ.

ಇತಿಹಾಸ

[ಬದಲಾಯಿಸಿ]

ವಾಸ್ತವವಾಗಿ ಅದರ ಹೆಸರು ಪವಿತ್ರವಾದ ದೇವಮಂದಿರವೆಂದು ತಿಳಿಪಡಿಸುತ್ತದೆ. ಕ್ರಿ.ಶ. ೧೫೭೭ ರಲ್ಲಿ, ಸಿಖ್ ಧರ್ಮದ ನಾಲ್ಕನೆಯ ಗುರುವಾದ, ಗುರು ರಾಮ್ ದಾಸರು ಒಂದು ಕೆರೆಯನ್ನು ತೋಡಿಸಿದರು, ಇದು ಅನಂತರದಲ್ಲಿ ಅದರ ಸುತ್ತಲೂ ಬೆಳೆದಂತಹ ನಗರಕ್ಕೆ ಅದರದೇ ಹೆಸರನ್ನು ಕೊಟ್ಟು, ಅಮೃತಸರ್ (ಅಮರತ್ವದ ಅಮೃತದ ಕೆರೆ ಎಂದರ್ಥ)[] ವೆಂದು ಹೆಸರಾಯಿತು. ಕಾಲಕ್ರಮೇಣ, ಒಂದು ವೈಭವೋಪೇತ ಸಿಖ್ ಮಂದಿರ, ಶ್ರೀ ಹರ್ಮಂದಿರ್ ಸಾಹಿಬ್ (ದೇವರ ಮನೆ ಎಂದರ್ಥ)[] ಈ ಕೆರೆಯ ಮಧ್ಯದಲ್ಲಿ ಕಟ್ಟಲ್ಪಟ್ಟ, ಸಿಖ್ ಧರ್ಮದ ಪರಮಶ್ರೇಷ್ಠ ಕೇಂದ್ರವಾಯಿತು. ಉದಾಹರಣೆಗೆ ಬಾಬಾ ಫರೀದ್, ಹಾಗೂ ಕಬೀರ್ ಅವರ ಸಿಖ್ ಧರ್ಮದ ಮೌಲ್ಯಗಳ, ಮತ್ತು ತತ್ವ ಶಾಸ್ತ್ರಗಳನ್ನು ಹೊಂದಿರುವುದೆಂದು ಪರಿಣಗಣಿಸಲ್ಪಟ್ಟ, ಸಿಖ್ ಗುರುಗಳು ಹಾಗೂ ಸನ್ಯಾಸಿಗಳ ರಚನೆಗಳನ್ನು ಒಳಗೊಂಡಿರುವ ಆದಿಗ್ರಂಥ್ ಗೆ ಅದರ ಗರ್ಭಗುಡಿಯು ಆಶ್ರಯ ಸ್ಥಾನವಾಗಿದೆ. ಆದಿಗ್ರಂಥ್ ನ ವಿಷಯ ಸಂಗ್ರಹಣೆಯು ಸಿಖ್ ಧರ್ಮದ ಐದನೆಯ ಗುರು, ಗುರು ಅರ್ಜುನ್ ದೇವ್ ಅವರಿಂದ ಪ್ರಾರಂಭಿಸಲ್ಪಟ್ಟಿತು.

ಅಮೃತಸರ್ ದ ಕ್ಷೇತ್ರಫಲ

[ಬದಲಾಯಿಸಿ]

ಸಿಖ್ ಧರ್ಮದ ತೊಟ್ಟಿಲೆಂದು ಅನೇಕ ಬಾರಿ ಆಗಾಗ್ಗೆ ಕರೆಯಲಾಗುವ ಮಝಹ್ ದಲ್ಲಿ ಅಮೃತಸರ್ ನಗರವಿದೆ.ಅಮೃತಸರ್ ನಗರವು ಆ ಪಂಜಾಬ್ ನಲ್ಲಿನ ಮಝಹ್ ಪ್ರದೇಶದಲ್ಲಿ ನೆಲಸಿದೆ. ಮಝಹ್ ಬಾರಿ ದೋಆಬ್ ಎಂದೂ ಸಹ ಹೆಸರಾಗಿದೆ, ಏಕೆಂದರೆ ಅದು ದೋಆಬ್ (ದೋ = ಎರಡು, ಆಬ್ = ನದಿಗಳು) ಅಥವ ಆ ಪ್ರಾಂತದ ಐದು ದೊಡ್ಡ ನದಿಗಳಲ್ಲಿ ಎರಡು ನದಿಗಳಾದ ರಾವಿ ಮತ್ತು ಬೀಯಾಸ್ ಗಳ ನಡುವೆ ನೆಲಸಿರುವ ಭೂಮಿಯ ನದಿಯ ಪ್ರದೇಶ ವೆಂದಾಗಿದೆ. ಹಾಗಾಗಿ, ಅಮೃತಸರ್ ವಲ್ಲದೆ ಗುರುದಾಸ್ ಪುರ್, ಬಟಲ ಹಾಗೂ ತರ್ನ್ ತರ್ನ್ ಸಾಹಿಬ್ ಅನ್ನು ಒಳಗೊಂಡಿರುವ ಪುರಾತನ ಪಂಜಾಬ್ ಪ್ರದೇಶದ ಮಧ್ಯದಲ್ಲಿ ಮಝಹ ನೆಲಸಿದೆ.

ಶ್ರೀ ಹರ್ಮಂದಿರ್ ಸಾಹಿಬ್ ನ ನಿರ್ಮಾಣ

[ಬದಲಾಯಿಸಿ]
ರಾತ್ರ ವೇಳೆಯಲ್ಲಿ ಶ್ರೀ ಹರ್ಮಂದಿರ್ ಸಾಹಿಬ್
ಬೆರ್ ಬಾಬಾ ಬುದ್ಧು ಜೈ--- http://www.goldentempleamritsar.org/
ದುಖ್ ಬನಜಾನಿ ಬೇರಿ & ಅಥ್ ಸಥ್ ತಿರಂಥ್ --- http://www.goldentempleamritsar.org/

ಮೂಲತಃ ೧೫೭೪ ರಲ್ಲಿ ಕಟ್ಟಿದ, ವಿರಳವಾದ ಕಾಡಿನಲ್ಲಿ ಒಂದು ಸಣ್ಣ ಸರೋವರದಿಂದ ದೇವಾಲಯದ ತಾಣವು ಸುತ್ತುವರಿಯಲ್ಪಟ್ಟಿತ್ತು. ಆರು ಭವ್ಯ ಮೊಗಲರಲ್ಲಿ ಮೂರನೆಯ, ಚಕ್ರವರ್ತಿ ಅಕ್ಬರನು, ಮೂರನೆಯ ಸಿಖ್ ಗುರು, ಗುರು ಅಮರ್ ದಾಸ್ ರನ್ನು ಪಕ್ಕದ ಗೋಯಿಂದವಲ್ ಎಂಬ ಪಕ್ಕದ ಪಟ್ಟಣದಲ್ಲಿನ ಮಾರ್ಗದಿಂದ ಭೇಟಿಮಾಡಿದನು. ರಾಜನು ಆ ಟ್ಟಣದಲ್ಲಿನ ಜೀವನ ಮಾರ್ಗದಿಂದ ವಿಪರೀತ ಪ್ರಭಾವಿತನಾಗಿ, ಅವನು ಭಾಯಿ ಜೇಟನ ಜೊತೆ ಗುರುಗಳ ಮಗಳು ಭಾವಿಯ ವಿವಾಹದ ಕೊಡುಗೆಯಾಗಿ ಒಂದು ಜಹಗೀರನ್ನು ಕೊಟ್ಟನು, [ಭೂಮಿ ಹಾಗೂ ನೆರೆಹೊರೆಯಲ್ಲಿನ ಅನೇಕ ಹಳ್ಳಿಗಳ ವಾರ್ಷಿಕ ಆದಾಯ], ಭಾಯಿ ಜೇಟ ಮುಂದೆ ನಾಲ್ಕನೆಯ ಸಿಖಗ ಗುರು, ಗುರು ರಾಮ್ ದಾಸರಾದರು. ಗುರು ರಾಮ್ ದಾಸರು ಸರೋವರವನ್ನು ವಿಸ್ತರಿಸಿ, ಮತ್ತು ಅದರ ಸುತ್ತಲೂ ಒಂದು ಸಣ್ಣ ಪಟ್ಟಣವನ್ನು ನಿರ್ಮಿಸಿದರು. ಗುರು ರಾಮ್ ದಾಸರ ನಂತರ ಪಟ್ಟಣವು ಗುರು ಕೆ ಚಕ್ , ಚಕ್ ರಾಮ್ ದಾಸ್ ಅಥವ ರಾಮ್ ದಾಸ್ ಪುರ ಎಂದು ಹೆಸರು ಪಡೆಯಿತು.'

ಐದನೆಯ ಗುರು, ಗುರು ಅರ್ಜುನ್ ದೇವ್ (೧೫೮೧ - ೧೬೦೬) ರಲ್ಲಿ ಮುಖಂಡತ್ವದ ಅವಧಿಯಲ್ಲಿ, ಸರ್ವಾನುಕೂಲದ ಪಟ್ಟಣವು ಕಟ್ಟಲ್ಪಟ್ಟಿತು. ಡಿಸೆಂಬರ್ ೧೫೮೮ ರಲ್ಲಿ, ಗುರು ಅರ್ಜುನ್ ದೇವ್ ಜಿ ಯವರ ಆಪ್ತ ಸ್ನೇಹಿತ , ಲಾಹೋರಿನ ಶ್ರೇಷ್ಠ ಮುಸ್ಲಿಂ ಸೂಫಿ ಸನ್ಯಾಸಿ, ಹಜರತ್ ಮಿಯಾನ್ ಮೀರ್ ಆಸ್ತಿಭಾರದ ಮೊದಲ ಕಲ್ಲನ್ನು (ಡಿಸೆಂಬರ್ ೧೫೮೮ ಕ್ರಿ.ಶ) ಇಡುವುದರ ಮೂಲಕ ಮಂದಿರದ ರಚನೆಯನ್ನು ಪ್ರಾರಂಭಿಸಿದರು.[][] ಒಬ್ಬ ಮೇಸ್ತ್ರಿಯು ನಂತರ ಕಲ್ಲನು ಕೇವಲ ನೇರಗೊಳಿಸಿದನು ಆದರೆ ಆ ಪುಣ್ಯ ಪುರುಷನಿಂದ ಕೇವಲ ಪೂರೈಸಲ್ಪಟ್ಟ ಕೆಲಸವನ್ನು ಅವನು ಮಾಡಿದ ಕಾರಣ, ಒಂದು ವಿಪತ್ತು ಶ್ರೀ ಹರ್ಮಂದಿರ್ ಸಾಹಿಬ್ ಗೆ ಬರಬಹುದೆಂದು ಗುರು ಅರ್ಜುನ್ ದೇವ್ ಅವನಿಗೆ ಹೇಳಿದರು. ಅದು ನಂತರ ಮುಂದೆ ಮೊಘಲರಿಂದ ಆಕ್ರಮಣಕ್ಕೆ ಒಳ್ಪಟ್ಟಿತು.

೧೬೦೪ ರಲ್ಲಿ ದೇವ ಮಂದಿರವು ಸಂಪೂರ್ಣವಾಯಿತು. ಗುರು ಅರ್ಜುನ್ ದೇವ್, ಗುರು ಗ್ರಂಥ್ ಸಾಹಿಬ್ ಅನ್ನು ಅದರೋಳಗೆ ಪ್ರತಿಷ್ಠಾಪಿಸಿ, ಆಗಸ್ಟ್ ೧೬೦೪ ರಲ್ಲಿ ಬಾಬಾ ಬುದ್ಧ ಜಿ ಯವರನ್ನು ಮೊದಲ ಗ್ರಂಥಿಯಾಗಿ (ಉಪನ್ಯಾಸಕ) ನೇಮಕ ಮಾಡಿದರು. ೧೮ ನೇ ಶತಮಾನದ ಮಧ್ಯಭಾಗದಲ್ಲಿ ಅದು ಆಫಘನ್ನರ ಅಹಮದ್ ಷಾ ಅಬ್ದಾಲಿಯ ಸೇನಾ ನಾಯಕರಲ್ಲೊಬ್ಬ, ಜಹಾನ್ ಖಾನ್ ನಿಂದ, ಆಕ್ರಮಿಸಲ್ಪಟ್ಟಿತು ಮತ್ತು ತದನಂತರ ಸರಿ ಸುಮಾರಾಗಿ ೧೭೬೦ ರಲ್ಲಿ ಅದನ್ನು ಪುನಃ ನಿರ್ಮಾಣ ಮಾಡಲಾಯಿತು. ಆದಾಗ್ಯೂ, ಅದಕ್ಕೆ ಪ್ರತಿಕ್ರಿಯೆಯಾಗಿ ಒಂದು ಸಿಖ್ ಸೈನ್ಯವನ್ನು ಅಫಘನ್ ರ ಸೇನೆಯನ್ನು ಬೆನ್ನಟ್ಟಲು ಕಳುಹಿಸಲಾಯಿತು. ಅವರಿಗೆ ಯಾವುದೇ ದಯೆ ತೋರಬಾರದೆಂದು ಆಜ್ಞೆಯನ್ನು ಕೊಡಲಾಯತು ಹಾಗೂ ಮುಂದೆ ಸಂಭವಿಸಿದ ಯುದ್ಧದಲ್ಲಿ ಸಿಖ್ ಸೈನ್ಯವು ನಿಶ್ಚಿತವಾಗಿ ಜಯಗಳಿತಿಸೆಂದು ಐತಿಹಾಸಿಕ ಸಾಕ್ಷಿ ಸೂಚಿಸುತ್ತದೆ. ಅಮೃತಸರದ ಹೊರಭಾಗದಲ್ಲಿ ಐದು ಮೈಲಿ ದೂರದಲ್ಲಿ ಏರಡೂ ಸೈನ್ಯಗಳು ಎದುರು ಬದರಾದವು; ಜಹಾನ್ ಖಾನ್ ನ ಸೈನ್ಯವು ಸಂಪೂರ್ಣವಾಗಿ ಪರಾಭವಗೊಂಡು ಹಾಳಾಗಿ ಹೋಯಿತು.[] ಅವನನ್ನು ಸ್ವತಃ ಸಿಖ್ ಸೇನಾಧಿಕಾರಿಯಿಂದ ಸರ್ದಾರ್ ದಯಾಲ್ ಸಿಂಗ್ ನಿಂದ ಅವನ ಶಿರಚ್ಛೇದನ ಮಾಡಲಾಯಿತು.[]

ಅದರ ಅಕ್ಕಪಕ್ಕದಲ್ಲಿನ ಪ್ರದೇಶಗಳು ಹಾಗೂ ಶ್ರೀ ಹರ್ಮಂದಿರ್ ಸಾಹಿಬ್ ಕಟ್ಟಡದ ಸಂಯೋಜನೆ:

[ಬದಲಾಯಿಸಿ]
ಶ್ರೀ ಹರ್ಮಂದಿರ್ ಸಾಹಿಬ್ ನ ನಕ್ಷೆ
ಶ್ರೀ ಹರ್ಮಂದಿರ್ ಸಾಹಿಬ್ ನ ಒಂದು ಅಗಲ-ಕೋನದ ಛಾಯಾಚಿತ್ರ
ಶ್ರೀ ಹರ್ಮಂದಿರ್ ಸಾಹಿಬ್ ನ ಪೂರ್ವ ದ್ವಾರದ ಪ್ರವೇಶದ್ವಾರದ ಬಾಗಿಲು (ನಕ್ಷೆಯನ್ನು ನೋಡಿರಿ)

ಅಮೃತವನ್ನು ಹೊಂದಿರುವ ["ಪವಿತ್ರ ತೀರ್ಥ" ಅಥವ "ಅಮರತ್ವದ ಅಮೃತ "] ಸರೋವರವೆಂದು ಕರೆಯಲಾಗುವ ಒಂದು ವಿಶಾಲವಾದ ಸರೋವರದಿಂದ ದೇವಸ್ಥಾನವು ಸುತ್ತುವರಿಯಲ್ಪಟ್ಟಿದೆ. ಅಂಗೀಕಾರ ಹಾಗೂ ನಿಷ್ಕಾಪಟ್ಯದ ಪ್ರಾಮುಖ್ಯವನ್ನು ತಿಳಿಸುವಂತೆ, ಮಂದಿರಕ್ಕೆ ನಾಲ್ಕು ದ್ವಾರಗಳಿವೆ; ತೋರಿಕೆಯಾಗಿ, ಈ ಭಾವನೆಯು ಬೈಬಲ್ಲಿನ ಮೊದಲ ಭಾಗ ಯಜಮಾನ ಆಬ್ರಾಹಾಂ ನ ಡೇರೆಯನ್ನು ನೆನಪಿಸುತ್ತದೆ, ಇವರ ಡೇರೆಯು ಎಲ್ಲಾ ದಿಕ್ಕುಗಳಿಂದಲೂ ಪ್ರವಾಸಿಗಳನ್ನು ಸ್ವಾಗತಿಸುವ ಸಲುವಾಗಿ ಎಲ್ಲಾ ನಾಲ್ಕು ದಿಕ್ಕುಗಳಿಂದಲೂ ತೆರೆದಿರುತ್ತಿತ್ತು ದೇವಾಲಯ ಕಟ್ಟಡ ಸಂಕೀರ್ಣದ ಒಳಗಡೆ ಹಿಂದಿನ ಸಿಖ್ ಗುರುಗಳು, ಸನ್ಯಾಸಿಗಳು ಮತ್ತು ಹುತಾತ್ಮರಿಗಾಗಿ ಅನೇಕ ಮಂದಿರಗಳನ್ನು ಕಟ್ಟಲಾಗಿದೆ.(ದಯಮಾಡಿ ಇದಕ್ಕೆ ನಕ್ಷೆಯನ್ನು ನೋಡಿರಿ). ಒಂದು ಐತಿಹಾಸಿಕ ಘಟನೆ ಅಥವ ಪ್ರತಿ ಸಿಖ್ ಸನ್ಯಾಸಿಗಳನ್ನು ಸೂಚಿಸುವ ಹಾಗೆ ಅಲ್ಲಿ ಮೂರು ಪವಿತ್ರವಾದ ಮರಗಳಿವೆ (ಬೇರ್ ಗಳು). ದೇವಾಲಯದ ಒಳ ಬಾಗದಲ್ಲಿ ಹಿಂದಿನ ಸಿಖ್ ಇತಿಹಾಸಕ ಘಟನೆಗಳು, ಸನ್ಯಾಸಿಗಳು, ಹುತಾತ್ಮರನ್ನು ನೆನಪಿಸುವ ಅನೇಕ ಜ್ಞಾಪಕಾರ್ಥದ ಆಲಂಕರಿಕ ಫಲಕಗಳಿವೆ ಹಾಗೂ ಮೊದಲ ಹಾಗೂ ಎರಡನೆಯ ವಿಶ್ವಮಹಾ ಯುದ್ಧಗಳಲ್ಲಿ ಹೋರಾಡುತ್ತಾ ಮಡಿದವರ ಎಲ್ಲಾ ಸಿಖ್ ಸೈನಿಕರ ಜ್ಞಾಪಕಾರ್ಥದ ಶಿಲಾಲೇಖನಗಳೂ ಒಳಗೆ ಒಳಗೊಂಡಿವೆ.

೧೯೮೮ ರಲ್ಲಿ. ಆಪರೇಷನ್ ಬ್ಲಾಕ್ ಥಂಡರ್ ನಂತರ, ತಮ್ಮ ಜಾಗವನ್ನು ಸುರಕ್ಷಾ ಸಾಧನವನ್ನಾಗಿ ಕಾಪಾಡುವುದಕ್ಕಾಗಿ ಹಾಗೂ ಉಪಯೋಗಿಸುವುದಕ್ಕಾಗಿ ಒಂದು ಇಕ್ಕಟ್ಟಾದ ಸುತ್ತಳೆತೆಯ ಭೂಮಿಯ ತುಂಡಿನ ಜಾಗವನ್ನು (ಕಟ್ಟಡಗಳೂ ಸೇರಿದಂತೆ) ಸರ್ಕಾರವು ವಶ ಪಡಿಸಿಕೊಂಡಿತು. ಸರ್ಕಾರದಿಂದ ವಶ ಪಡಿಸಿಕೊಳ್ಳುವವ ಪ್ರಾಪ್ತಿಯ ಕಾರ್ಯವಿಧಾನವು ಬಹು ಸಂಖ್ಯೆಯ ಸುತ್ತಮುತ್ತಲಿನ ನಿವಾಸಿಗಳು ಹಾಗೂ ವ್ಯವಹಾರಗಳ ಪುನರ್ವಸತಿ ಹಾಗೂ ಸ್ಥಳಾಂತರವೂ ಒಳಗೊಂಡಿತ್ತು. ಆದಾಗ್ಯೂ, ಈ ಯೋಜನೆಯು ಸೌಮ್ಯವಾದಿ ಹಾಗೂ ಉಗ್ರವಾದಿ ಸಿಖ್ ಸಂಸ್ಥೆಗಳಿಂದ ಒಂದು ಬಲವಾದ ಪ್ರತಿಭಟನೆಯನ್ನು ಎದುರಿಸಿತು ಹಾಗೂ ಈ ಯೋಜನೆಗೆ ಸಂಬಂಧಿಸಿದ ಒಬ್ಬ ಹಿರಿಯ ಸರ್ಕಾರಿ ನೇಮಿತ ಎಂಜಿನೀರ್ ಅವರ ಕೊಲೆಯ ಕಾರಣ ಪರಿತ್ಯಜಿಸ ಬೇಕಾಗಿತು. ಉಪ ಕಮೀಶನರ್ ಆದ ಕರಣ್ ಬೀರ್ ಸಿಂಗ್ ಸಿದ್ದು ರವರ ನೇತೃತ್ವದಲ್ಲಿ ೧೯೯೩ ರಲ್ಲಿ, ಯೋಜನೆಯು ಪುನರುಜ್ಜೀವಿತಗೊಂಡಿತು, ಅವರು ಜನಪ್ರಿಯವಾಗಿ ಹೆಸರಾದ ಗಲ್ಲಿಯಾರ ಯೋಜನೆಯ ಯೋಜನಾ ನಿರ್ದೇಶಕರಾಗಿ ನೇಮಿಸಲ್ಪಟ್ಟರು. ಅವರು ಪರಿಧಿಯ ಕಲ್ಪನೆಯನ್ನು ಸುರಕ್ಷಾ ಬೆಲ್ಟ್ ನಿಂದ ಎರಡನೆಯ ಪರಿಕ್ರಮಕ್ಕೆ ಬದಲಾಯಿಸಿದರು ಹಾಗೂ ಅದು ಶ್ರೀ ಹರ್ಮಂದಿರ್ ಸಾಹಿಬ್ ನ ದಿವ್ಯ ಸೌಂದರ್ಯ ಸಹಿತ ಸಂಪೂರ್ಣ ಸಾಮ್ಯತೆಯುಳ್ಳ ಪ್ರಶಾಂತ ಭೂ ದೃಶ್ಯವನ್ನು ಸೃಷ್ಟಿಸಿತು. ಇದನ್ನು ಶಿರೋಮಣಿ ಗುರುದ್ವಾರ ಪ್ರಭಂದಕ್ ಸಮಿತಿಯ ರವರ (SGPC) ಜೊತೆ ಸೌಮ್ಯವಾಗಿ ಪರ್ಯಾಲೋಚಿಸಿ ನಿರ್ದಾರ ಮಾಡಲಾಯಿತು. ಅಲ್ಲಿಗೆ ಬರುವ ಇಂದಿನ - ದಿನದ ಯಾತ್ರಾರ್ಥಿಗಳು ಗಲಿಯಾರ ದಲ್ಲಿ ಕಾಲ್ನಡಿಗೆಯಿಂದ ಸುತ್ತಲೂ ಹೋಗಬಹುದು; ಆದರೆ ಯಾವದೇ ರೀತಿಯ ವಾಹನಗಳನ್ನು ಬಿಡುವುದಿಲ್ಲ.

ವಿಶ್ವ ವ್ಯಾಪಿಯಾದ ಎಲ್ಲಾ ಸಿಖ್ ದೇವಸ್ಥಾನಗಳಲ್ಲಿ (ಗುರುದ್ವಾರಗಳಲ್ಲಿ) ಅನುಸರಿಸುವ ನಿಯಮವನ್ನು ಗಮನಿಸಿ, ಶ್ರೀ ಹರ್ಮಂದಿರ್ ಸಾಹಿಬ್ ನಲ್ಲಿ ಯಾವುದೇ ಕಾಲದಲ್ಲಿ ಅವರ ಜಾತಿ, ಮತ, ಧರ್ಮ, ಅಥವ ಲಿಂಗ ಭೇದವಿಲ್ಲದ ಎಲ್ಲಾ ವ್ಯಕ್ತಿಗಳಿಗೂ ತೆರೆದಿರುತ್ತದೆ. ಶ್ರೀ ಹರ್ಮಂದಿರ್ ಸಾಹಿಬ್ ಅನ್ನು ಪ್ರವೇಶಿಸುವಾಗ ಹಾಗೂ ಭೇಟಿಮಾಡುವಾಗ ಅವರ ನಡತೆಯನ್ನು ಗಮನಿಸುವುದೇ ಏಕೈಕ ಅಲ್ಲಿನ ಕಟ್ಟುಪಾಡು:

  • ಅಲ್ಲಿರುವಾಗ ಅಲ್ಲಿನ ಪವಿತ್ರ ಸ್ಥಳದ ಹಾಗೂ ತಮ್ಮ ಶರೀರದ ಪವಿತ್ರತೆಯನ್ನು ಕಾಪಾಡಿಕೊಳ್ಳುವುದು:
    • ಆ ಆವರಣವನ್ನು ಪ್ರವೇಶಿಸಿದೊಡನೆ, ತಮ್ಮ ಪಾದರಕ್ಷೆಯನ್ನು ತೆಗೆದಿಡುವುದು (ತಮ್ಮ ಭೇಟಿಯ ಅವಧಿಯವರೆಗೂ ಅವುಗಳನ್ನು ಬಿಚ್ಚಿಡುವುದು) ಹಾಗೂ ಅದಕ್ಕಾಗಿ ಒದಗಿಸಿರುವ ನೀರಿನ ಒಂದು ಸಣ್ಣ ಕೊಳದಲ್ಲಿ ತಮ್ಮ ಪಾದಗಳನ್ನು ತೊಳೆಯುವುದು;
    • ಶ್ರೀ ಮಂದಿರದಲ್ಲಿರುವವರೆಗೂ ಮದ್ಯಪಾನ ಮಾಡಬಾರದು, ಮಾಂಸಾಹಾರ್ಯ ವರ್ಜ್ಯ, ಅಥವಾ ಧೂಮಪಾನ ಇಲ್ಲವೆ ಇತರೆ ಔಷಧಗಳನ್ನು ಸೇವಿಸಬಾರದು.
  • ಯುಕ್ತವಾದ ಉಡುಪುಗಳನ್ನು ಧರಿಸುವುದು.
    • ಒಳಗಡೆ ಪ್ರವೇಶಿಸುವಾಗ ಶಿರ ಹೊದಿಕೆಯನ್ನು ಧರಿಸುವುದು (ಗೌರವ ಸೂಚಕವಾಗಿ) (ಸರಿಯಾದ ಹೊದಿಕೆಯನ್ನು ಹೊಂದಿರದ ಅಥವಾ ತರದಿದ್ದ ಪ್ರವಾಸಿಗಳಿಗೆ ಸರಿಯಾದ ವಸ್ರಗಳನ್ನು ಮಂದಿರವೇ ಒದಗಿಸುತ್ತದೆ);
    • ಯಾವುದೇ ಪಾದರಕ್ಷೆಯನ್ನು ಧರಸಬಾರದು (ಮೇಲೆ ನೋಡಿರಿ).

ಮೊದಲ ಬಾರಿಯ ಪ್ರವಾಸಿಗಳಿಗೆ ಭೂಪಟದಲ್ಲಿ ಸ್ಪಷ್ಟವಾಗಿ ತೋರಿಸಿರುವ ಮಾಹಿತಿ ಕಚೇರಿಯಲ್ಲಿ ತಮ್ಮ ಭೇಟಿಯನ್ನು ಪ್ರಾರಂಭಿಸಲು ತಿಳಿಸಲಾಗಿದೆ ಮತ್ತು ಮುಖ್ಯದ್ವಾರ ಹಾಗೂ ಗಡಿಯಾರ ಗೋಪುರದ ಬಳಿಯ ಕೇಂದ್ರ ಸಿಖ್ ವಸ್ತಿ ಸಂಗ್ರಹಾಲಯಕ್ಕೆ ಹೋಗಬೇಕು.

ಕುಶಲ ಕಲೆ ಹಾಗೂ ಸ್ಮಾರಣಕ ಚಿನ್ಹೆ ಶಿಲ್ಪೆ ಕಲೆಗಳು

[ಬದಲಾಯಿಸಿ]
ಅಥ್-ಸಥ್ ಪವಿತ್ರ ತೀರ್ಥದ ಬಳಿಯ ಉತ್ತರ ಭಾಗದ ಪ್ರವೇಶ ದ್ವಾರದ ಬಳಿಯ ಬಾಗಿಲು (ಮ್ಯಾಪಿನಲ್ಲಿ 15 ನೇ ಪಾಯಿಂಟ್)

ವರ್ತಮಾನದ ಹೆಚ್ಚಿನ ಅಲಂಕಾರಿಕ ಚಿನ್ನದ ಮುಲಾಮು ಹಚ್ಚುವ ಹಾಗೂ ಅಮೃತಶಿಲೆಯ ಕೆಲಸವು ೧೯ ನೇ ಶತಮಾನದ ಮೊದಲ ಭಾಗದಿಂದಲೇ ಪ್ರಾರಂಭವಾಗುತ್ತದೆ. ಚಿನ್ನದ ಎಲ್ಲಾ ಹಾಗೂ ಪರಮೋತ್ಕೃಷ್ಟವಾದ ಅಮೃತಶಿಲೆಯ ಕೆಲಸವು ಪಂಜಾಬಿನ ಸಿಖ್ ಸಾಮ್ರಾಜ್ಯದ ಮಹಾರಾಜ ಚಕ್ರವರ್ತಿ ರಣಜಿತ್ ಸಿಂಗ್ ಹಾಗೂ ಹುಕುಂ ಸಿಂಗ್ ಚಿಮ್ನಿಯ ಮಾರ್ಗದರ್ಶ ಮತ್ತು ಆಶ್ರಯದಡಿ ಮಾಡಲ್ಪಟ್ಟವು. ಶ್ರೀ ಹರ್ಮಂದಿರ್ ಸಾಹಿಬ್ ನ ಕಾಲುದಾರಿಯ ಪ್ರಾರಂಭದಲ್ಲಿ ದರ್ಶನಿ ದಿಯೊರ್ಹಿ ಆರ್ಚ್ ನಿಂತಿದೆ; ಅದು 202 feet (62 m) ಗಳಷ್ಟು ಎತ್ತರ ಹಾಗೂ 21 feet (6 m) ಗಳಷ್ಟು ಅಗಲವಾಗಿದೆ. ಶ್ರೀ ಹರ್ಮಂದಿರ್ ಸಾಹಿಬ್ ಗೆ ಚಿನ್ನದ ಮುಲಾಮು ಮಾಡುವ ಕೆಲಸವು ಚಕ್ರವರ್ತಿ ರಣಜಿತ ಸಿಂಗ್ ರವರಿಂದ ಪ್ರಾರಂಭಿಸಲ್ಪಟ್ಟು, ೧೮೩೦ ರಲ್ಲಿ ಮುಗಿಯತು. ಶೇರ್ - ಎ - ಪಂಜಾಬ್ (ಪಂಜಾಬಿನ ಸಿಂಹ) ಶ್ರೀ ಮಂದಿರಕ್ಕೆ ಐಶ್ವರ್ಯ ಹಾಗೂ ಸಾಮಾನುಗಳ ಪ್ರಮುಖ ದಾನಿ ಹಾಗೂ ಸಾಧಾರಣವಾಗಿ ಪಂಜಾಬಿ ಜನೆತೆಯಿಂದ ವಿಶೇಷವಾಗಿ ಸಿಖ್ ಸಮುದಾಯದವರಿಂದ ಬಹಳ ಗೌರವ ಪೂರ್ವಕವಾಗಿ ಜ್ಞಾಪಿಸಿಕೊಳ್ಳಲ್ಪಡುತ್ತಾರೆ. ಮಹರಾಜ ರಣಜಿತ್ ಸಿಂಗ್ ಸಿಖ್ ಧರ್ಮದಲ್ಲಿನ ಅತ್ಯಂತ ಪವಿತ್ರವಾದ ಎರಡು ಬೇರೆ ದೇವಾಲಯಗಳನ್ನೂ ಸಹ ಕಟ್ಟಿಸಿದರು. ಮಹರಾಜ ರಣಜಿತ್ ಸಿಂಗ್ ಅವರಿಗೆ ಸಿಖ್ ಧರ್ಮದ ಹತ್ತನೆಯ ಗುರು, ಗುರು ಗೋವಿಂದ್ ಸಿಂಗ್ ರ ಬಗ್ಗೆ ಅಪಾರ ಪ್ರೀತಿಯಿಂದ ಕಾರಣ ಹಾಗೆ ಕಟ್ಟಿಸಿದರು. ಅವರು ಕಟ್ಟಿಸಿದ ಇತರೆ ಅತ್ಯಂತ ಪವಿತ್ರ ಎರಡು ದೇವಾಲಯಗಳು, (ಗುರು ಗೋವಿಂದ್ ಸಿಂಗ್ ರ ಜನ್ಮಸ್ಥಳ) ತಖ್ತ್ ಶ್ರೀ ಪಟ್ನಾ ಸಾಹಿಬ್ ಹಾಗೂ ಗುರು ಗೋವಿಂದ್ ಸಿಂಗ್ ರ ಸಿಖ್ ಸ್ವರ್ಗಾ ರೋಹಣದ ಸ್ಥಳ ತಖ್ತ್ ಶ್ರೀ ಹಜೂರ್ ಸಾಹಿಬ್ ಗಳಾಗಿವೆ.

ಚಲನಚಿತ್ರ ಹಾಗೂ ದೂರದರ್ಶನದಲ್ಲಿ:

[ಬದಲಾಯಿಸಿ]
  • ಈ ಮಂದಿರವು ಗಾಂಧಿ ಚಲನಚಿತ್ರದ ಒಂದು ಚಿತ್ರೀಕರಣ ಪ್ರದೇಶದಲ್ಲಿ ಒಂದಾಗಿತ್ತು (೧೯೮೨) .
  • ದೇವಾಲಯವು ಬ್ರೈಡ್ ಮತ್ತು ಪ್ರಿಜುಡೀಸ್ ಚಿತ್ರೀಕಿರಣ ಒಂದು ಸ್ಥಳಗಳಲ್ಲಿ ಒಂದಾಗಿತ್ತು (೨೦೦೪) .
  • ದೇವಾಲಯವು 'ಹಿಮಾಲಯ' (೨೦೦೪) ಸಾಕ್ಷ್ಯ ಚಿತ್ರಕ್ಕೆ ಬಿಬಿಸಿ ಯ ಮೈಖೇಲ್ ಪಾಲಿನ್ ರವರು ಭೇಟಿ ಕೊಟ್ಟ ತಾಣಗಳಲ್ಲಿ ಒಂದಾಗಿದೆ (೨೦೦೪) .
  • ಈ ಮಂದಿರವು ಸಹ ಭಾರತಯ (ಹಿಂದಿ) ಸರಣಿಯಲ್ಲಿ ಜಸ್ಸಿ ಜೈಸೆ ಕೋಯಿ ನಹಿ (೨೦೦೫) ಎಂಬುದರಲ್ಲಿ ಇದೆ (೨೦೦೫) .
  • ಈ ದೇವಸ್ಥಾನವು ನಟ ಅಮೀರ್ ಖಾನ್ (೨೦೦೬) ಅಭಿನಯಿಸಿರುವ ರಂಗ್ ದೆ ಬಸಂತಿ ಬಾಲಿವುಡ್ ಚಲನಚಿತ್ರದಲ್ಲಿ ಪ್ರಮುಖವಾಗಿತ್ತು (೨೦೦೬) .
  • ಈ ದೇವಸ್ಥಾನವು ನಟರಾದ ಕತ್ರಿನಾ ಕೈಪ್ ಹಾಗೂ ಅಕ್ಷಯ್ ಕುಮಾರ್ (೨೦೦೭) ಅಭಿನಯಿಸಿರುವ ನಮಸ್ತೆ ಲಂಡನ್ ನ ಚಿತ್ರೀಕರಣದ ಸ್ಥಳಗಳಲ್ಲಿ ಒಂದಾಗಿದೆ
  • ಈ ಮಂದಿರವು ನಟ ಶಾರುಖ್ ಖಾನ್ ಅವರ ಅಭಿನಯನದ ರಬ್ ನೆ ಬನಾದಿ ಜೋಡಿ ಚಲನಚಿತ್ರದ ಚಿತ್ರೀಕರಣ ತಾಣದಲ್ಲಿ ಒಂದು ಸ್ಥಳವಾಗಿದೆ (೨೦೦೮).
  • ಈ ದೇವಾಲಯವು ನಟ ಅಕ್ಷಯ್ ಕುಮಾರ್ ಅಭಿನಯನದ ಸಿಂಗ್ ಇಸ ಕಿಂಗ್ ಚಲೊನಚಿತ್ರದಲ್ಲಿ ಸಹ ಒಂದು ಚಿತ್ರೀಕರಣದ ಸ್ಥಳವಾಗಿ ಕಾಣಿಸಿಕೊಳ್ಳುತ್ತದೆ (೨೦೦೮); ಚಲೊನಚಿತ್ರದಲ್ಲಿ ಒಂದು ರ್ಯಾಪ್ ಹಾಡಾದ ಸ್ನೂಪ್ ಡಾಗ್ ಜೊತೆ ಕಾಣಿಸಿಕೊಳ್ಳುತ್ತಾರೆ.
ಶ್ರೀ ಹರ್ಮಿಂದರ್ ಸಾಹಿಬ್ ಗೆ ಒಂದು ಪ್ರಮುಖ ಪ್ರವೇಶ ದ್ವಾರ (ನಕ್ಷೆಯಲ್ಲಿ ಪಾಯಿಂಗ್ 10)

ಶ್ರೀ ಹರ್ಮಂದಿರ್ ಸಾಹಿಬ್ ನಲ್ಲಿ ಉತ್ಸವಗಳು

[ಬದಲಾಯಿಸಿ]
ಶ್ರೀ ಹರ್ಮಂದಿರ್ ಸಾಹಿಬ್ ವೀಕ್ಷಣ ಗೋಪುರ (ನಕ್ಷೆಯ ಮೇಲುಗಡೆ 17 ನೇ ಪಾಯಿಂಟ್)

ಏಪ್ರಿಲ್ ತಿಂಗಳ ಎರಡನೆಯ ವಾರದಲ್ಲಿ (ಸಾಮಾನ್ಯವಾಗಿ ೧೩ ರಂದು)ಆಚರಿಸಲಾಗುವ, ಅದನ್ನು ವೈಶಾಖಿಯೆಂದು ಅತ್ಯಂತ ಪ್ರಮುಖ ಉತ್ಸವಗಳಲ್ಲಿ ಒಂದಾಗಿದೆ. ಸಿಖ್ ರು ಅಂದು ಖಲ್ಸಾ ಸ್ಥಾಪನೆಯ ದಿನವನ್ನಾಗಿ ಈ ದಿನವನ್ನು ಆಚರಿಸುವರು ಹಾಗೂ ಶ್ರೀ ಹರ್ಮಂದಿರ್ ಸಾಹಿಬ್ ನಲ್ಲಿ ಅತ್ಯುತ್ಸಾಹದಿಂದ ಆಚರಿಸುವರು. ಗುರು ತೇಜ್ ಬಹದ್ದೂರ್ ರವರು ಹುತಾತ್ಮರಾದ ದಿನ, ಗುರು ನಾನಕ ಜನ್ಮದಿನ ಮುಂತಾದುವುಗಳಂತಹ ಇತರೆ ಇತರೆ ಸಿಖ್ ರವರಗಳ ಪ್ರಮುಖ ದಿನಗಳೂ ಸಹ ದಾರ್ಮಿಕ ಶ್ರದ್ಧೆಯಿಂದ ಆಚರಿಸಲ್ಪಡುತ್ತದೆ. ಅಂತೆಯೇ, ಪ್ರಮುಖ ಉತ್ಸವಗಳಲ್ಲಿ ಒಂದಾದ ದೀವಾಳಿಯೆಂದು ಶ್ರೀ ಹರ್ಮಂದಿರ್ ಸಾಹಿಬ್ ಅನ್ನು ದವಸ್/ದೀಯಾಗಳು (ದೀಪಗಳಿಂದ) ಬಹು ಸುಂದರವಾಗಿ ಪ್ರಕಾಶಗೊಳಿಸಲ್ಪಟ್ಟಿರುತ್ತದೆ; ಬಾಣ, ಬಿರುಸು ಹಾಗೂ ಪಟಾಕಿಗಳನ್ನು ಹಾರಿಸುತ್ತಾರೆ. ಈ ವಿಶೇಷ ಸಂದರ್ಭಗಳಲ್ಲಿ ಅನೇಕ ಸಾವಿರಾರು ಜನಗಳು ಶ್ರೀ ಹರ್ಮಂದಿರ್ ಸಾಹಿಬ್ ಎಂಬ ಹೆಸರಿನ ಪವಿತ್ರ ದೇವಾಲಯವನ್ನು ಭೇಟಿಮಾಡುವರು

ಎಲ್ಲಾ ಸಿಖ್ ಜನತೆ ಅಮೃತಸರ್ ವನ್ನು ಮತ್ತು ಅಲ್ಲಿನ ಶ್ರೀ ಹರ್ಮಂದಿರ್ ಸಾಹಿಬ್ ಅನ್ನು ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ, ತಮ್ಮ ಜೀವನದಲ್ಲಿ ವಿಶೇಷವಾಗಿ ಜುನ್ಮದಿನಗಳು, ವಿವಾಹದ ದಿನಗಳು, ತಮ್ಮ ಶಿಶುವಿನ ಜನನ ದಿನಗಳು ಇತ್ಯಾದಿಗಳಂತಹ ತಮ್ಮ ಜೀವನದ ಪ್ರಮುಖ ವಿಶೇಷದ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಭೇಟಿ ಕೊಡುತ್ತಾರೆ.

ಪರದೇಶಗಳಿಂದ ಶ್ರೀ ಹರ್ಮಂದಿರ್ ಸಾಹಿಬ್ ಅನ್ನು ತಲುಪುವುದು

[ಬದಲಾಯಿಸಿ]

ಜಾಗತಿಕ ಸಿಖ್ ಯಾತ್ರಿಕರು ಅಥವಾ ಅಂತರಾಷ್ಟ್ರೀಯ ಪ್ರವಾಸಿ ಸಂದರ್ಶಕರು ಶ್ರೀ ಹರ್ಮಂದಿರ್ ಸಾಹಿಬ್ ಅನ್ನು ವಿಮಾನದಿಂದ ಅತ್ಯಂತ ವೇಗವಾಗಿ ವಾಯು ಮಾರ್ಗವಾಗಿ ತಲುಪಬಹುದು. ಶ್ರೀ ಹರ್ಮಂದಿರ್ ಸಾಹಿಬ್ ಅನ್ನು ಹೊಂದಿರುವ ಅಮೃತಸರ್ ಪವಿತ್ರ ನಗರವು, ಅಮೃತಸರ್ ಅಂತರಾಷ್ಟ್ರೀಯ ವಿಮಾಲ ನಿಲ್ದಾಣವೆಂದು ಕರೆಯಲಾಗುತ್ತಿರುವ ವೇಗವಾಗಿ ವಿಸ್ತಾರಗೊಳ್ಳುತ್ತಿರುವ ಆಧುನಿಕ ವಿಮಾನವನ್ನು ಹೊಂದಿದೆ. ಲಂಡನ್ ಮತ್ತು ಟೊರಾಂಟೊ ಸೇರಿದಂತೆ ವಿಶ್ವದ ಅತ್ಯಂತ ಹೆಚ್ಚು ಪ್ರಮುಖ ನಗರಗಳಿಂದ ಅಂತರಾಷ್ಟ್ರೀಯ ಪ್ರಯಾಣಿಕರು ಇಲ್ಲಿನ ವಿಮಾನ ನಿಲ್ದಾಣವನ್ನು ನೇರವಾಗಿ ತಲುಪ ಬಹುದು. ಅಲ್ಲದೆ, ಈ ಪವಿತ್ರ ನಗರದಲ್ಲಿ ಹಿಂದಿನ ರಾತ್ರಯೇ ಬಂದು ತಂಗಲು ಮುಂಗಡವಾಗಿ ಕಾದಿರಿಸುವ ಈ ನಗರದಲ್ಲಿನ ಅಂತರಾಷ್ಟ್ರೀಯ ಹೋಟೇಲುಗಳು ಶೀಘ್ರವಾಗಿ ಬೆಳೆಯುತ್ತಿರುವ ಒಂದು ವ್ಯೂಹವೇ ಪ್ರಾರಂಭವಾಗಿವೆ. \ಲೋನ್ಲಿ ಪ್ಲಾನೆಟ್ ಬ್ಲೂ ಲಿಸ್ಟ್ ೨೦೦೮ ವಿಶ್ವದ ಅತ್ಯಂತ ಶ್ರೀಷ್ಠ ಆಧ್ಯಾತ್ಮಕ ತಾಣಗಳಲ್ಲಿ ಒಂದೆಂದು ಶ್ರೀ ಹರ್ಮಂದಿರ್ ಸಾಹಿಬ್ ಅನ್ನು ಆರಿಸಲಾಗಿದೆ.[]

ಇತ್ತೀಚಿನ ಘಟನೆಗಳು

[ಬದಲಾಯಿಸಿ]

ಆಪರೇಶನ್ ಬ್ಲೂ ಸ್ಟಾರ್

[ಬದಲಾಯಿಸಿ]

೧೯೮೪ ರ ಜೂನ್ ೩ ಹಾಗೂ ೬ ರ ನಡುವೆ, ಸೇನಾಧಿಕಾರಿ ಕುಲದೀಪ್ ಸಿಂಗ್ ಬ್ರಾರ್ ರವರ ನೇತೃತ್ವದಲ್ಲಿ ಭಾರತೀಯ ಸೈನ್ಯವು ಶ್ರೀ ಹರ್ಮಂದಿರ್ ಸಾಹಿಬ್ ನ ಒಳಗಡೆ ಸಂತ ಜರ್ನೈಲ್ ಸಿಂಗ್ ಭಿದ್ರಂನವಾಲೆ ಯೆನ್ನು ಬಂಧಿಸಲು ಸೈನ್ಯದ ತುಕುಡಿಯನ್ನು ತರಲಾಯಿತು. ಅವರು ಮತ್ತು ಅವರ ಕೆಲವು ಅನುಯಾಯಿಗಳು ಶ್ರೀ ಹರ್ಮಂದಿರ್ ಸಾಹಿಬ್ ನಲ್ಲಿ ಆಶ್ರಯ ಪಡೆದಿದ್ದರು, ಹಾಗೂ ಭಯೋತ್ಪಾದನೆಯ ಅನುಮಾಸ್ಪದ ಕೃತ್ಯಗಳಿಗಾಗಿ ಬಂಧಿಸಲು ಬಂದ ಪೋಲೀಸ್ ರನ್ನು ಪ್ರತಿಭಟಿಸಿದರು.

೧೯೮೩ ರ ವೇಳೆಗೆ, ಶ್ರೀ ಹರ್ಮಂದಿರ್ ಸಾಹಿಬ್ ಬಹು ದೊಡ್ಡ ಸಂಖ್ಯೆಯ ಭಯೋತ್ಪಾದಕರಿಗೆ ಆಶ್ರಯ ತಾಣವಾಗಿತ್ತು. ಮಾರ್ಕ್ ಟುಲ್ಲೆ ಹಾಗೂ ಸತೀಶ್ ಜೇಕಬ್ ಬರೆದರು[೧೦]: "ಎಲ್ಲಾ... (ಭಿಂದ್ರನವಾಲಾರ) ಭಯೋತ್ಪಾದಕರು ಸ್ವರ್ಣ ಮಂದಿರದ ಸುತ್ತಮುತ್ತಲಿ೯ನ ಚಿಕ್ಕ ಸಂದಿಗಳಲ್ಲಿ ವಾಸಿಸಿರುವ ಆಂಗಡಿಗಾರರು ಹಾಗೂ ಮನೆಯೊಡಯರಿಗೆ ಚಿರಪರಿಚಿರತಾಗಿದ್ದರು .....ಆ ಪಂಜಾಬ್ ಪೋಲೀಸರಿಗೂ ಅವರು ಯಾರೆಂಬುದೂ ಸಹ ತಿಳಿದಿತ್ತು ಆದರೆ ಅವರನ್ನು ಬಂಧಿಸಲು ಯಾವುದೇ ಪ್ರಯತ್ನವನ್ನು ಮಾಡಲಿಲ್ಲ. ಆ ವೇಳೆಗಾಗಲೆ ಬಿಂದ್ರನವಾಲೆ ಹಾಗೂ ಅವನ ಸಂಗಡಿಗರು ಕಾನೂನನ್ನು ಮೀರಿಬಿಟ್ಟಿದ್ದರು."

ಶ್ರೀ ಹರ್ಮಂದಿರ್ ಸಾಹಿಬ್ ಕಟ್ಟಡದ ಸಂಕೀರ್ಣ ಹಾಗೂ ಸುತ್ತಮುತ್ತಲಿನ ಕೆಲವು ಕೆಲವು ಮನೆಗಳು ಕೋಟೆಯಂತೆ ಭದ್ರಪಡಿಸಲ್ಪಟ್ಟಿದ್ದವು. ಹಗುರವಾದ ಮಷೀನ್ ಬಂದೂಕುಗಳು ಹಾಗೂ ಅತ್ಯಾಧುನಿಕ ಸ್ವತಃ ತುಂಬಿಕೊಳ್ಳುವ ಬಂದೂಕುಗಳು ಆವರಣದೊಳಗೆ ತರಲ್ಪಟ್ಟಿರ ಬೇಕೆಂದು ತಿಳಿಯಲ್ಪಟ್ಟಿತು ಎಂದು ಜುಲೈ ೪ ರಂದು ಸ್ಟೇಟ್ಸಮನ್ ವರದಿ ಮಾಡಿತು.

ಶ್ರೀಮತಿ ಇಂದಿರಾ ಗಾಂಧಿ ಆಪರೇಷನ್ ಬ್ಲೂ ಸ್ಟಾರ್ ಪ್ರಾರಂಭಿಸಲು ಸೈನ್ಯಕ್ಕೆ ಆಜ್ಞಾಪಿಸಿದರು.

ಭಿಂದ್ರನವಾಲಾರ ಸಹಾಯಕರು ಹಾಗೂ ಸೈನಿಕರ ನಡುವೆ ಭಯಂಕರ ಹೋರಾಟ ನಡೆದು, ಅನೇಕ ಸೈನಿಕರ ಸಹಿತ ಭಿಂದ್ರನವಾಲಾರ ಹಿಂಬಾಲಕರು ಸಂಹರಿಸಲ್ಪಟ್ಟರು. ೮೩ ಸೈನಿಕರು ಹಾಗೂ ೪೯೨ ನಾಗರಿಕ ಸಾವು ಸಂಭವಿಸಿತೆಂದು ಒಬ್ಬ ಅಧಿಕೃತವಾಗಿ ಅಧಿಕಾರಿಯು ಲೊಎಕ್ಕ ಹಾಕಿದರು.[೧೧] ಆದಾಗ್ಯೂ, ಪರದೇಶದ ಮತ್ತು ಭಾರತದಲ್ಲಿನ ಪತ್ರಕರ್ತರು ಯಾತ್ರಿಕರ ಸಾವು ಇನ್ನೂ ಹೆಚ್ಚು ಇರಬಹುದೆಂದು ಪರಿಗಣಿಸಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]. ಶ್ರೀ ಹರ್ ಮಂದಿರ್ ಸಾಹಿಬ್ ಕಟ್ಟಡದ ಸಂಕೀರ್ಣವೂ ಸಹ ಹೋರಾಟದ ಕಾರಣ ಬಹಳಷ್ಟು ಹಾಳಾಯಿತು, ವಿಶೇಷವಾಗಿ ಪವಿತ್ರವಾದ ಶ್ರೀ ಅಕಾಲ್ ತಖ್ತ್ ಸಾಹೆಬ್.

ಅನೇಕ ಸಿಖ್ ಗಳು ತಮ್ಮ ಅತ್ಯಂತ ಪವಿತ್ರ ಮಂದಿರದ ಮೇಲಿನ ಆಕ್ರಮಣವು ಅದನ್ನು ಅಪವಿತ್ರಗೊಳಿಸಿತೆಂದು ಭಾವಿಸಿದರು ಹಾಗೂ ಅವರ ಪರಾಧೀನಗೊಳಿಸುವಿಕೆಯು ಆಳವಾದ ಮತ್ತು ನಾಟಕೀಯ ಪರಿಣಾಮವನ್ನು ಬೀರಿತು.

೧೯೯೮ ರಲ್ಲಿ, ಸೋನಿಯಾ ಗಾಂಧಿ ಪವಿತ್ರ ಶ್ರೀ ಹರ್ಮಂದಿರ್ ಸಾಹಿಬ್ ಮೇಲಿನ ಆಕ್ರಮಣವು ಒಂದು ಮಹಾಪರಾಧವೆಂದು ಅಧಿಕೃತವಾಗಿ ಕ್ಷಮಾಪಣೆ ಕೇಳಿದರು.[೧೨]

೧೯೮೬ ರಲ್ಲಿ, ರಾಜೀವ್ ಗಾಂಧಿ ಸರ್ಕಾರವು ಯಾರನ್ನೂ ಸಮಾಲೋಚಿಸದೆ ತೆಗೆದುಕೊಂಡು ಪವಿತ್ರ ಶ್ರೀ ಅಕಾಲ ತಖ್ತ್ ಸಾಹಿಬ್ ನಲ್ಲಿ ನಡೆದ ದುರಸ್ತಿ ಕಾರ್ಯವನ್ನು ತೆಗೆದು ಹಾಕಲಾಯಿತು. ೧೯೯೯ ರಲ್ಲಿ ಕರ್ ಸೇವಾ (ಯಾತ್ರಿಕರ ಮುಫತ್ತಾದ ಸೇವೆ ಹಾಗೂ ಕೆಲಸ ) ದವರಿಂದ ಒಂದು ಹೊಸ ಶ್ರೀ ಅಕಾಲ್ ತಖ್ತ್ ಸಾಹಿಬ್ ಸಂಪೂರ್ಣಗೊಳಿಸಲಾಯಿತು.

ಛಾಯಾಚಿತ್ರ ಸಂಪುಟ

[ಬದಲಾಯಿಸಿ]

ಇತರೆ ಗುರುದ್ವಾರಗಳು

[ಬದಲಾಯಿಸಿ]
  • ಅಕಾಲ್ ತಖ್ತ, ಅಮೃತಸರ್, ಭಾರತ
  • ಪಂಜ ಸಾಹಿಬ್, ಹಸನ್ ಅಬ್ದಲ್, ಪಾಕಿಸ್ತಾನ್
  • ಬಂಗ್ಲ ಸಾಹಿಬ್, ದೆಹಲಿ, ಭಾರತ
  • ಹಜುನ್ ಸಾಹಿಬ್, ನಾಂದೆಡ್,ಭಾರತ
  • ಪನ್ನಾ ಸಾಹಿಬ್, ಪನ್ನಾ, ಭಾರತa
  • ದಂದಮ ಸಾಹಿಬ್, ಬಟಿಂಡ, ಬಭಾರತ
  • ಕೇಶಘರ್ ಸಾಹಿಬ್, ಆನಂದಪುರ್, ಭಾರತ
  • ಶ್ರೀ ಹೇಮಕುಂತಿ ಸಾಹಿಬ್, ಭಾರತ

ಇವನ್ನೂ ನೋಡಿ

[ಬದಲಾಯಿಸಿ]

ಟೆಂಪ್ಲೇಟು:Portal

  • ಅತ್ಯಂತ ಪವಿತ್ರವಾದ ತಾಣಗಳು

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ ೧.೪ Harban Singh (1998). Encyclopedia of Sikhism. Punjabi University. ISBN 978-81-7380-530-1. {{cite book}}: External link in |publisher= (help); Unknown parameter |coauthors= ignored (|author= suggested) (help)
  2. The Sikhism Home Page: Introduction to Sikhism
  3. ಚಿನ್ನದ ದೇವಸ್ಥಾನ, ಪಂಜಾಬಿ ವಿಶ್ವವಿದ್ಯಾಲಯ, ಪಾಮ್ ಬಾರಕ್ರಿಶ್ ಸಿಂಗ್, ದೇವಿಂದೆರ್ ಕುಮಾರ್ ವರ್ಮಾ ISBN ೯೭೮-೮೧-೭೩೮೦-೫೬೯-೧
  4. ೪.೦ ೪.೧ ೪.೨ ದಿ ಸಿಖ್ಖಿಸಮ್ ಹೋಮ್ ಪೇಜಸ್: ಶ್ರೀ ಗುರು ಗ್ರಂಥ್ ಸಾಹಿಬ್ [http://www.sikhs.org/granth.htm ]
  5. ಚಿನ್ನದ ದೇವಸ್ಥಾನ, ಪಂಜಾಬಿ ವಿಶ್ವವಿದ್ಯಾಲಯ, ಪಾಮ್ ಬಾರಕ್ರಿಶ್ ಸಿಂಗ್, ದೇವಿಂದರ್ ಕುಮಾರ್ ವರ್ಮಾ ISBN ೯೭೮-೮೧-೭೩೮೦-೫೬೯-೧
  6. ಚಿನ್ನದ ದೇವಸ್ಥಾನ, ಪಂಜಾಬಿ ವಿಶ್ವವಿದ್ಯಾಲಯ, ಪಾಮ್ ಬಾರಕ್ರಿಶ್ ಸಿಂಗ್, ದೇವಿಂದರ್ ಕುಮಾರ್ ವರ್ಮಾ, ISBN ೯೭೮-೮೧-೭೩೮೦-೫೬೯-೧ .
  7. ಸಿಖ್ಖಿಸಮ್ ಗೆ ಒಂದು ಹೆದ್ದಾರಿ | ದಿ ಸಿಖ್ ಸೈಂಟ್ಸ್: ಮಿಯಾ ಮಿನ್ - ಸಿಖ್ಖಿಸಮ್ ಗೆ ಒಂದು ಹೆದ್ದಾರಿ
  8. ೮.೦ ೮.೧ ಸಂಪುಟ ೨: ಎವಲೂಷಂನ್ ಆಫ್ ಸಿಖ್ ಕಾಣ್ಪಿಡೆರೆನ್ಸೀಸ್ (೧೭೦೮-೧೭೬೯), ಇಂದ ರಾಮ್ ಗುಪ್ತಾ.
  9. https://web.archive.org/web/20080202051110/http://www.ptinews.com/pti/ptisite.nsf/0/03d3a18aa4bdceae6525738e00199bff?OpenDocument
  10. ಮಾರ್ಕ್ ಟುಲ್ಲೇ ಮತ್ತು ಸತೀಷ್ ಜಾಕೊಬ್, ಅಮೃತಸರ್ -Mrs. ಶ್ರೀಮತಿ ಗಾಂಧಿ ಯವರ ಕೊನೆಯ ಯುದ್ಧ (ಕೊಲ್ಕತ್ತಾ: ರೂಪಾ ಮತ್ತು ಕಂಪನಿ. ಇವರ ಸಹಯೋಗದೊಡನೆ ಪ್ಯಾನ್ ಪುಸ್ತಕಗಳು, ಲಂಡನ್, ೧೯೮೫)
  11. ವಿರೇಂದರ್ ವಾಲಿಯಾ, " ಬ್ಲೂಸ್ಟಾರ್ ನ ಬಗ್ಗೆ ಆರ್ಮಿಯು ಅನೇಕ ಆಶ್ಚರ್ಯಗಳ ವಿಷಯಗಳನ್ನು ಹೊರಹಾಕಿದೆ: ಅದು ತಿಳಿಸುತ್ತದೆ ಲೋಂಗವಾಲ್ ಶರಣಾಗತಿಯನ್ನು ಹೊಂದಿದರು", ದಿ ಟ್ರಿಬ್ಯೂನಲ್, ಚಂಡೀಘರ್ !ಮಾರ್ಚ್ 20, 2007)
  12. BBC ನ್ಯೂಸ್ | ಸೌತ್/ವೆಸ್ಟ್ ಏಷಿಯಾ | ಸಿಖ್ಖರ ದೇವಸ್ಥಾನಗಳ ಮೇಲೆ ಆಕ್ರಮಣಣಕ್ಕಾಗಿ ಸೋನಿಯಾ ಗಾಂಧಿಯವರು ತಮ್ಮ ಕ್ಷಮಾಪಣೆಯನ್ನು ಕೇಳಿದರು[permanent dead link]

ಬಾಹ್ಯ ಕೊಂಡಿಗಳು

[ಬದಲಾಯಿಸಿ]