ವಿಷಯಕ್ಕೆ ಹೋಗು

ಸ್ಫಟಿಕೀಕರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಫಟಿಕೀಕರಣ (ನೈಸರ್ಗಿಕ ಅಥವಾ ಕೃತಕ) ಪ್ರಕ್ರಿಯೆಯೆಂದರೆ, ದ್ರಾವಣ, ದ್ರವೀಕರಣ ಅಥವಾ ಬಹಳ ವಿರಳವಾಗಿ ಅನಿಲದಿಂದ ನೇರವಾಗಿ ಸಂಚಯಗೊಂಡ ಅವಕ್ಷೇಪಿತ ಘನ ಸ್ಫಟಿಕಗಳ ರಚನೆಯಾಗಿದೆ. (ದ್ರಾವಣದ ಸಂಪೂರ್ಣ ನೀರಿನಾಂಶವನ್ನು ವಿಶಿಷ್ಟ ವಿಧಾನದ ಮೂಲಕ ಹೊರತೆಗೆದು ಸ್ಪಟಿಕಗೊಳಿಸುವ ವೈಜ್ಞಾನಿಕ ಸಂಸ್ಕರಣ) ಸ್ಫಟಿಕೀಕರಣವು, ಘನ-ದ್ರವ ವಿಯೋಜಿಸುವ ರಾಸಾಯನಿಕ ವಿಧಾನ, ಇದರಲ್ಲಿ ದ್ರಾವಣದಿಂದ ಸಂಪೂರ್ಣ ಘನ ಸ್ಫಟಿಕೀಯ ಘಟ್ಟಕ್ಕೆ ದ್ರಾವ್ಯವು ಒಟ್ಟಾರೆಯಾಗಿ ವರ್ಗಾವಣೆಯಾಗುತ್ತದೆ.

ಪೊದೆಯ ಮೇಲೆ ಘನೀಭವಿಸಿದ ಸ್ಫಟಿಕೀಕರಣ

ಕಾರ್ಯವಿಧಾನ[ಬದಲಾಯಿಸಿ]

ಟೈಮ್-ಲ್ಯಾಪ್ಸ್(ಸುದೀರ್ಘ ಅವಧಿಯಲ್ಲಿ ಬೇರೆ ಬೇರೆಯಾಗಿ ಚಿತ್ರಿಸಿಕೊಂಡ ಚೌಕಟ್ಟುಗಳನ್ನು ಬಳಸುವ) ಸಿಟ್ರಿಕ್ ಆಮ್ಲ ಸ್ಫಟಿಕದ ಬೆಳವಣಿಗೆ.

ಸ್ಫಟಿಕೀಕರಣ ಪ್ರಕ್ರಿಯೆಯು ಎರಡು ಪ್ರಮುಖ ಸಂಗತಿಗಳನ್ನು ಒಳಗೊಳ್ಳುತ್ತದೆ, ನ್ಯೂಕ್ಲೀಕರಣ (ಬೀಜೀಕರಣ) ಹಾಗು ಸ್ಫಟಿಕದ ಬೆಳವಣಿಗೆ .

ಬೀಜೀಕರಣ ದ ಹಂತದಲ್ಲಿ, ವಿಲೇಯಕದಲ್ಲಿ ಹಂಚಿಕೆಯಾದ ದ್ರಾವ್ಯ ಅಣುಗಳು ನ್ಯಾನೋಮೀಟರ್ ಮಾಪಕದಲ್ಲಿ ಗುಂಪುಗಳಾಗಿ ಒಟ್ಟುಗೂಡಲು ಆರಂಭಿಸುತ್ತವೆ.(ಒಂದು ಸಣ್ಣ ಪ್ರದೇಶದಲ್ಲಿ ದ್ರಾವ್ಯ ಸಾರೀಕರಣವನ್ನು ಹೆಚ್ಚಿಸುತ್ತವೆ), ಇದು ಪ್ರಸಕ್ತ ನಿರ್ವಹಣಾ ಪರಿಸ್ಥಿತಿಗಳಲ್ಲಿ ಸ್ಥಿರವಾಗಿರುತ್ತದೆ. ಈ ಸ್ಥಿರ ಗುಂಪುಗಳು ನ್ಯೂಕ್ಲಿಯಸ್(ಪರಮಾಣುವಿನ ರಾಶಿಯ ಬಹುಭಾಗಕ್ಕೆ ಕಾರಣವಾದ, ಪರಮಾಣುವಿನ ತಿರುಳಿನಂತಿರುವ ಧನ ವಿದ್ಯುದ್ಧಾವಿಷ್ಟ ಕಣ) ಅನ್ನು ಒಳಗೊಂಡಿರುತ್ತವೆ. ಆದಾಗ್ಯೂ, ಈ ಗುಂಪುಗಳು ಅಸ್ಥಿರಗೊಂಡಾಗ, ಅವುಗಳು ಪುನಃ ಕರಗುತ್ತವೆ. ಈ ರೀತಿಯಾಗಿ, ಗುಂಪುಗಳು ಸ್ಥಿರವಾದ ನ್ಯೂಕ್ಲಿಯೈ (ಅತಿ ಸಣ್ಣ ಘನಕಣ)ಆಗಲು ಒಂದು ವಿಷಮ ಗಾತ್ರವನ್ನು ತಲುಪುವ ಅಗತ್ಯವಿರುತ್ತದೆ. ಇಂತಹ ವಿಷಮ ಗಾತ್ರವನ್ನು ನಿರ್ವಹಣಾ ಪರಿಣಾಮಗಳು ಆದೇಶಿಸುತ್ತವೆ. (ತಾಪಮಾನ, ಅಧಿಪರ್ಯಾಪ್ತತೆ, ಮುಂತಾದವು). ಬೀಜೀಕರಣದ ಹಂತದಲ್ಲಿ ಅಣುಗಳು ನಿಶ್ಚಿತ ಹಾಗು ಆವರ್ತಕ ವಿಧಾನದಲ್ಲಿ ವ್ಯವಸ್ಥೆಗೊಂಡು ಸ್ಫಟಿಕದ ವಿನ್ಯಾಸವನ್ನು ನಿರೂಪಿಸುತ್ತವೆ - "ಸ್ಫಟಿಕದ ವಿನ್ಯಾಸ" ಎಂಬುದು ಒಂದು ವಿಶೇಷ ಪದವಾಗಿದ್ದು ಅಣುಗಳ ಪರಸ್ಪರ ರಚನಾ ವ್ಯವಸ್ಥೆಗೆ ಸೂಚಿತವಾಗಿದೆ. ಸ್ಫಟಿಕದ ಸ್ಥೂಲಗೋಚರ ಲಕ್ಷಣಗಳಿಗೆ (ಗಾತ್ರ ಹಾಗು ಆಕಾರ) ಅಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಆದಾಗ್ಯೂ ಇವುಗಳು ಸ್ಫಟಿಕದ ಆಂತರಿಕ ವಿನ್ಯಾಸದ ಪರಿಣಾಮವಾಗಿವೆ.

ಸ್ಫಟಿಕದ ಬೆಳವಣಿಗೆ ಯು(ಹರಳುಗಟ್ಟುವಿಕೆ) ನ್ಯೂಕ್ಲಿಯೈನ ತರುವಾಯದ ಬೆಳವಣಿಗೆಯಾಗಿದ್ದು, ವಿಷಮ ಗುಂಪಿನ ಗಾತ್ರವನ್ನು ಹೊಂದುವಲ್ಲಿ ಯಶಸ್ವಿಯಾಗುತ್ತದೆ. ಬೀಜೀಕರಣ ಹಾಗು ಬೆಳವಣಿಗೆಯು, ಅಧಿಪರ್ಯಾಪ್ತತೆಯು ಉಂಟಾಗುವ ಸಮಯದಲ್ಲಿ ಏಕಕಾಲದಲ್ಲಿ ಸಂಭವಿಸುತ್ತದೆ. ಅಧಿಪರ್ಯಾಪ್ತತೆಯು, ಸ್ಫಟಿಕೀಕರಣದ ಚಾಲಕ ಶಕ್ತಿಯಾಗಿದೆ, ಈ ರೀತಿಯಾಗಿ ಬೀಜೀಕರಣ ಹಾಗು ಬೆಳವಣಿಗೆಯು ದ್ರಾವಣದಲ್ಲಿ ಉಳಿಕೆಯಾಗಿರುವ ಅಧಿಪರ್ಯಾಪ್ತತೆಯಿಂದ ಕ್ರಿಯಾಶಕ್ತವಾಗುತ್ತದೆ. ಪರಿಸ್ಥಿತಿಗಳನ್ನು ಅವಲಂಬಿಸಿ, ಬೀಜೀಕರಣ ಅಥವಾ ಬೆಳವಣಿಗೆಯು ಒಂದಕ್ಕಿಂತ ಒಂದು,ಇಲ್ಲವೇ ಎರಡೂ ಪ್ರಬಲವಾಗಿರಬಹುದು. ಜೊತೆಗೆ ಇದರ ಪರಿಣಾಮ, ಸ್ಫಟಿಕಗಳ ವಿವಿಧ ಗಾತ್ರ ಹಾಗು ಆಕಾರಗಳು ದೊರೆಯುತ್ತವೆ.(ಸ್ಫಟಿಕದ ಗಾತ್ರ ಹಾಗು ಆಕಾರದ ನಿಯಂತ್ರಣವು, ಔಷಧವಸ್ತುಗಳಂತಹ ತಯಾರಿಕೆಯ ಕೈಗಾರಿಕಾ ಕ್ಷೇತ್ರಗಳಲ್ಲಿ ಒಂದು ಪ್ರಮುಖ ಸವಾಲೆನಿಸಿದೆ). ಒಂದೊಮ್ಮೆ ಅಧಿಪರ್ಯಾಪ್ತತೆಯು ನಿಶ್ಯೇಷವಾದ ನಂತರ, ಘನ-ದ್ರವ ವ್ಯವಸ್ಥೆಯು ಸಮತೋಲನ ಸ್ಥಿತಿ ತಲುಪಿ, ಸ್ಫಟಿಕೀಕರಣ ಪೂರ್ಣಗೊಳ್ಳುತ್ತದೆ. ದ್ರಾವಣವನ್ನು ಮತ್ತೆ ಅಧಿಪರ್ಯಾಪ್ತಗೊಳಿಸುವ ಸಲುವಾಗಿ ಸಮತೋಲನ ಸ್ಥಿತಿಯಿಂದ ನಿರ್ವಹಣಾ ಪರಿಸ್ಥಿತಿಗಳು ಮಾರ್ಪಾಡುಗೊಳ್ಳದ ಹೊರತು ಇದು ಸಂಭವಿಸುವುದಿಲ್ಲ.

ಹಲವು ಸಂಯುಕ್ತಗಳಿಗೆ, ವಿವಿಧ ಸ್ಫಟಿಕ ವಿನ್ಯಾಸಗಳೊಂದಿಗೆ ಸ್ಫಟಿಕೀಕರಣಗೊಳ್ಳುವ ಸಾಮರ್ಥ್ಯವಿರುತ್ತದೆ, ಈ ವಿದ್ಯಮಾನವನ್ನು ಪಾಲಿಮಾರ್ಫಿಸಂ(ವಿಭಿನ್ನ ರೀತಿಯಲ್ಲಿ,ಬಹುರೂಪದ ಹರಳಾಗುವಿಕೆ)ಎಂದು ಕರೆಯಲಾಗುತ್ತದೆ. ಪ್ರತಿ ಪಾಲಿಮಾರ್ಫ್ ವಿವಿಧ ಉಷ್ಣಬಲ ಘನ ಸ್ಥಿತಿ ಹಾಗು ಒಂದೇ ಸಂಯುಕ್ತದ ಸ್ಫಟಿಕದ ಬಹುರೂಪಗಳು ವಿವಿಧ ಭೌತಿಕ ಲಕ್ಷಣಗಳನ್ನು ಪ್ರದರ್ಶಿಸುತ್ತದೆ. ಉದಾಹರಣೆಗೆ ವಿಘಟನೆ ಪ್ರಮಾಣ, ಆಕಾರ(ಪಾರ್ಶ್ವದ ನಡುವಿನ ಕೋನಗಳು ಹಾಗು ಪಾರ್ಶ್ವಗಳ ಬೆಳವಣಿಗೆ ಪ್ರಮಾಣಗಳು), ದ್ರಾವಕಬಿಂದು, ಮುಂತಾದವು. ಈ ಕಾರಣದಿಂದಾಗಿ, ಸ್ಫಟಿಕೀಯ ಉತ್ಪನ್ನಗಳ ತಯಾರಿಕೆಯಲ್ಲಿ ಬಹುರೂಪತೆಯು ಒಂದು ಪ್ರಮುಖ ಸ್ಥಾನ ಗಳಿಸಿದೆ.

ನಿಸರ್ಗದಲ್ಲಿನ ಸ್ಫಟಿಕೀಕರಣ[ಬದಲಾಯಿಸಿ]

ಹಿಮದ ಪದರಗಳು ಒಂದು ಉತ್ತಮ ಉದಾಹರಣೆ, ಸ್ಫಟಿಕದ ಬೆಳವಣಿಗೆಯ ಪರಿಸ್ಥಿತಿಗಳಲ್ಲಿ ಉಂಟಾಗುವ ಸೂಕ್ಷ್ಮ ಭಿನ್ನತೆಗಳು ವಿವಿಧ ಜ್ಯಾಮಿತಿಗಳನ್ನು ಉಂಟುಮಾಡುತ್ತವೆ.
ಸ್ಫಟಿಕೀಕೃತ ಜೇನುತುಪ್ಪ

ಸ್ಫಟಿಕೀಕರಣವನ್ನು ಒಳಗೊಳ್ಳುವ ಸ್ವಾಭಾವಿಕ ಪ್ರಕ್ರಿಯೆಯ ಹಲವು ಉದಾಹರಣೆಗಳಿವೆ.

ಭೂವೈಜ್ಞಾನಿಕ ಕಾಲಪ್ರಮಾಣ ಪ್ರಕ್ರಿಯೆಗಳ ಉದಾಹರಣೆಗಳಲ್ಲಿ:

 • ನೈಸರ್ಗಿಕ(ಖನಿಜ) ಸ್ಫಟಿಕ ರಚನೆ(ರತ್ನಗಳು ವಿಭಾಗವನ್ನೂ ಸಹ ನೋಡಿ);
 • ಸ್ಟ್ಯಾಲಕ್ಟೈಟ್(ಸುಣ್ಣಕಲ್ಲು ತೊಂಗಲು)/ಗವಿಗಂಬ, ಉಂಗುರಗಳ ರಚನೆ ಸೇರಿದೆ.

ಸಾಮಾನ್ಯ ಕಾಲಪ್ರಮಾಣ ಪ್ರಕ್ರಿಯೆಗಳ ಉದಾಹರಣೆಗಳಲ್ಲಿ:

 • ಹಿಮದ ಪದರಗಳ ರಚನೆ (ಕೋಚ್ ಹಿಮಪದರವನ್ನೂ ಸಹ ನೋಡಿ);
 • ಜೇನುತುಪ್ಪದ ಸ್ಫಟಿಕೀಕರಣವೂ (ಸುಮಾರು ಎಲ್ಲ ಬಗೆಯ ಜೇನುತುಪ್ಪಗಳು ಸ್ಫಟಿಕೀಕರಣಗೊಳ್ಳುತ್ತವೆ.) ಸೇರಿದೆ.

ಕೃತಕ ವಿಧಾನಗಳು[ಬದಲಾಯಿಸಿ]

ಸ್ಫಟಿಕೀಕರಣವು (ಮರು ಸ್ಫಟಿಕೀಕರಣವನ್ನೂ ಸಹ ನೋಡಿ) ದ್ರಾವಣದಿಂದ ಉಂಟಾಗಬೇಕಾದರೆ ಅದು ಅಧಿಪರ್ಯಾಪ್ತಗೊಳ್ಳಬೇಕು. ಇದರರ್ಥ ದ್ರಾವಣವು ಹೆಚ್ಚು ದ್ರಾವ್ಯ ಪದಾರ್ಥಗಳನ್ನು ಒಳಗೊಳ್ಳಬೇಕು.(ಅಣುಗಳು ಅಥವಾ ಅಯಾನುಗಳು), ಇವುಗಳು ಸಮತೋಲನದ ಸ್ಥಿತಿಯಲ್ಲಿ ಒಳಗೊಂಡಿದ್ದಕ್ಕಿಂತ ಹೆಚ್ಚಾಗಿ ವಿಘಟನೆ ಹೊಂದುತ್ತವೆ.(ಸಂಪೂರಿತ ದ್ರಾವಣ) ಇದನ್ನು ವಿವಿಧ ವಿಧಾನಗಳ ಮೂಲಕ ಪಡೆಯಬಹುದಾಗಿದೆ, (1)ದ್ರಾವಣವನ್ನು ತಂಪಾಗಿಸುವಿಕೆ, (2)ದ್ರಾವ್ಯದ ವಿಲೇಯತೆ ತಗ್ಗಿಸಲು ಮತ್ತೊಂದು ವಿಲೇಯಕವನ್ನು ಸೇರಿಸುವುದು.(ಈ ವಿಧಾನವನ್ನು ದ್ರಾವಕ ಪ್ರತಿರೋಧಕ ಅಥವಾ ಅಗ್ರಾಹ್ಯವನ್ನಾಗಿ ಮಾಡುವುದು ಎಂದು ಕರೆಯಲಾಗುತ್ತದೆ), (3)ರಾಸಾಯನಿಕ ಪ್ರಕ್ರಿಯೆ ಹಾಗು (4)ಸಾಮಾನ್ಯವಾಗಿ ಕೈಗಾರಿಕೆಗಳಲ್ಲಿ ಬಳಸಲಾಗುವ pHನ್ನು ಮಾರ್ಪಡಿಸುವ ವಿಧಾನ. ಇತರ ವಿಧಾನಗಳಾದ, ವಿಲೇಯಕದ ಬಾಷ್ಪೀಕರಣವನ್ನೂ ಸಹ ಬಳಸಬಹುದು. ಗೋಲರೂಪದ ಸ್ಫಟಿಕೀಕರಣವು ಔಷಧವಸ್ತುಗಳ ಅಂಶಿಕ ರಚನಾ ಸೂತ್ರನಿರೂಪಣೆಯಲ್ಲಿ ಕೆಲವು ಪ್ರಯೋಜನಗಳನ್ನು ಹೊಂದಿದೆ.(ದ್ರವದ ಹರಿವಿನ ಸಾಮರ್ಥ್ಯ ಹಾಗು ಬಯೋಅವೈಲೆಬಿಲಿಟಿ,ಜೈವಿಕ ಲಭ್ಯತೆ)(ನೋಸೆಂಟ್ & al., 2001 ಉಲ್ಲೇಖವನ್ನು ನೋಡಿ)

ಅಳವಡಿಕೆಗಳು[ಬದಲಾಯಿಸಿ]

ಕೃತಕ ಸ್ಫಟಿಕೀಕರಣ ಪ್ರಕ್ರಿಯೆಯ ಬಳಕೆಗಳು ಎರಡು ಪ್ರಮುಖ ಗುಂಪುಗಳನ್ನು ಹೊಂದಿವೆ: ಸ್ಫಟಿಕದ ಉತ್ಪಾದನೆ ಹಾಗು ಶುದ್ಧೀಕರಣ

ಸ್ಫಟಿಕದ ಉತ್ಪಾದನೆ-ವಿಧಾನ[ಬದಲಾಯಿಸಿ]

ಮೂಲದ್ರವ್ಯ ತಯಾರಿಕಾ ಕ್ಷೇತ್ರದ ದೃಷ್ಟಿಕೋನದಿಂದ:

 • ಸ್ಥೂಲಗೋಚರ ಸ್ಫಟಿಕ ದ ಉತ್ಪನ್ನ: ನೈಸರ್ಗಿಕ ಮಾದರಿಯ ಸ್ಫಟಿಕಗಳ ಬೇಡಿಕೆ ಪೂರೈಸಲು, ಅಗಾಧ ಉತ್ಪನ್ನ ಹಾಗು/ಅಥವಾ ಸಂಪೂರ್ಣತೆಗಾಗಿ "ತ್ವರಿತಗತಿಯ ಕಾಲಪ್ರಮಾಣ" ವಿಧಾನದ ಬಳಕೆ.
  • ಅಯಾನಿಕ ಸ್ಫಟಿಕ ದ ಉತ್ಪನ್ನ;
  • ಕೋವೇಲೆನ್ಸಿಯ ಸ್ಫಟಿಕ ದ ಉತ್ಪನ್ನ.
 • ಸಣ್ಣ ಗಾತ್ರದ ಸ್ಫಟಿಕ ಗಳು:
  • ಪುಡಿ, ಮರಳು ಹಾಗು ಸಣ್ಣ ಗಾತ್ರಗಳು : ಪುಡಿಮಾಡಲು ಹಾಗು ನಿಯಂತ್ರಿತ(ನ್ಯಾನೋಟೆಕ್ನಾಲಜಿ ಹಣ್ಣುಗಳು) ರೂಪಗಳ ರಚನೆಗೆ ಈ ವಿಧಾನಗಳನ್ನು ಬಳಸಲಾಗುತ್ತದೆ.
   • ಅಧಿಕ ಸಂಖ್ಯೆಯ ಉತ್ಪನ್ನ : ರಾಸಾಯನಿಕ ಕೈಗಾರಿಕೆ, ಪುಡಿ,ಹರಳು ಉಪ್ಪಿನ ತಯಾರಿಕೆಯಲ್ಲಿ ಬಳಕೆ.
   • ಮಾದರಿ ಉತ್ಪನ್ನ : ಪದಾರ್ಥದ ನಿರೂಪಣೆಯಲ್ಲಿ ಸಣ್ಣ ಸ್ಫಟಿಕಗಳ ಅಲ್ಪ ಪ್ರಮಾಣದ ಉತ್ಪಾದನೆ. ನಿಯಂತ್ರಿತ ಮರುಸ್ಫಟಿಕೀಕರಣವು ಅಸಾಧಾರಣ ಸ್ಫಟಿಕಗಳ ಪೂರೈಕೆಯಲ್ಲಿ ಬಳಕೆಯಾಗುವ ಒಂದು ಪ್ರಮುಖ ವಿಧಾನವಾಗಿದೆ. ಇವುಗಳು ಸ್ಫಟಿಕದೊಳಗಿರುವ ಒಂದು ಮಾದರಿ ಅಣುವಿನ ವಿನ್ಯಾಸ ಹಾಗು ಬೈಜಿಕ ಬಲವನ್ನು ಪ್ರದರ್ಶಿಸುತ್ತವೆ. ಎಕ್ಸ್ ರೆ ಸ್ಫಟಿಕಶಾಸ್ತ್ರ ಹಾಗು NMR ರೋಹಿತದರ್ಶನ ದಂತಹ ಹಲವು ವಿಧಾನಗಳನ್ನು ರಸಾಯನಶಾಸ್ತ್ರ ಹಾಗು ಜೀವರಸಾಯನವಿಜ್ಞಾನದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇವುಗಳು ಅಣುಗಳ ಅಪರಿಮಿತ ವೈವಿಧ್ಯಗಳ ರಚನೆಗಳನ್ನು ನಿರೂಪಿಸುತ್ತವೆ. ಇವುಗಳಲ್ಲಿ ಅಜೈವಿಕ ಸಂಯುಕ್ತಗಳು ಹಾಗು ಜೈವಿಕ ರೂಪದ ಬಯೋ-ಮಹಾದಣುಗಳು ಸೇರಿವೆ.
  • ತೆಳು ಪದರದ ಉತ್ಪನ್ನ.

ಬೃಹತ್ ತಯಾರಿಕಾ ಉದಾಹರಣೆಗಳಲ್ಲಿ:

 • "ಆಹಾರದಲ್ಲಿ ಬಳಕೆಯಾಗುವ ಪುಡಿ ಉಪ್ಪಿನ" ಕೈಗಾರಿಕೆ;
 • ಸಿಲಿಕಾನ್ ಸ್ಫಟಿಕ ಬಿಲ್ಲೆಯ ತಯಾರಿಕೆ.
 • ಸಕ್ಕರೆ ಬೀಟ್ ನಿಂದ ತಯಾರಿಕೆಯಾಗುವ ಸುಕ್ರೋಸ್, ಇದರಲ್ಲಿ ಸುಕ್ರೋಸ್ ಅನ್ನು ಒಂದು ಜಲೀಯ ದ್ರಾವಣದಲ್ಲಿ ಸ್ಫಟಿಕೀಕರಿಸಲಾಗುತ್ತದೆ.

ಶುದ್ಧೀಕರಣ[ಬದಲಾಯಿಸಿ]

ಇದನ್ನು ಸುಧಾರಿಸಲು (ಬಹಳ ಶುದ್ಧವಾದ ಪದಾರ್ಥ ಬಳಸಿಕೊಂಡು) ಹಾಗು/ಅಥವಾ ಅವುಗಳ ಶುದ್ಧತೆ ಪರಿಶೀಲಿಸಲು ಬಳಸಲಾಗುತ್ತದೆ.

ಸ್ಫಟಿಕೀಕರಣವು ದ್ರಾವಣದ ದತ್ತ ಹರಿವಿನಿಂದ ಫೀಡ್ ಸ್ಟ್ರೀಮ್ ನಿಂದ(ಕಾರ್ಬನ್ ಕಣಗಳ ಬೇರ್ಪಡಿಸುವಿಕೆ) ಉತ್ಪನ್ನವನ್ನು ಬೇರ್ಪಡಿಸುತ್ತದೆ, ಸಾಮಾನ್ಯವಾಗಿ ತೀವ್ರತರವಾದ ಶುದ್ಧ ರೂಪದಲ್ಲಿ, ಫೀಡ್ ಸ್ಟ್ರೀಮ್ ಅನ್ನು ತಂಪುಗೊಳಿಸುವ ಮೂಲಕ ಅಥವಾ ಅಪೇಕ್ಷಿತ ಉತ್ಪನ್ನದ ವಿಲೇಯತೆಯನ್ನು ತಗ್ಗಿಸುವ ಅವಕ್ಷೇಪಕಗಳನ್ನು ಸೇರಿಸುವುದು, ಈ ರೀತಿಯಾಗಿ ಸ್ಫಟಿಕಗಳ ರಚನೆಯಾಗುತ್ತದೆ.

ಉತ್ತಮವಾಗಿ ರಚನೆಯಾದ ಸ್ಫಟಿಕಗಳು ಶುದ್ಧವಾಗಿರುತ್ತವೆಂದು ನಿರೀಕ್ಷಿಸಲಾಗುತ್ತದೆ. ಏಕೆಂದರೆ ಪ್ರತಿ ಅಣು ಅಥವಾ ಅಯಾನು, ದ್ರಾವಣವನ್ನು ವರ್ಜಿಸುವ ಕಾರಣದಿಂದಾಗಿ ಆ ಪರಿಧಿಯ ಜಾಲರಿಯೊಳಗೆ ಸಂಪೂರ್ಣ ಹೊಂದಿಕೊಳ್ಳುವ ಅಗತ್ಯವಿರುತ್ತದೆ. ಕಲ್ಮಶಗಳು ಸಾಧಾರಣವಾಗಿ ಜಾಲರಿಯೊಳಗೆ ಹೊಂದಿಕೊಳ್ಳುವುದಿಲ್ಲ, ಜೊತೆಗೆ ಇವುಗಳು ದ್ರಾವಣದೊಳಗೆ ಉಳಿದುಬಿಡುತ್ತವೆ. ಈ ರೀತಿಯಾಗಿ, ಆಣ್ವಿಕ ಗಣನೆಯು ಸ್ಫಟಿಕೀಕರಣದ ಶುದ್ಧೀಕರಣ ತತ್ವದ ನಿಯಮವಾಗಿದೆ. ಆದಾಗ್ಯೂ, ಜಾಲರಿಯೊಳಗೆ ಕಲ್ಮಶಗಳು ಸಂಘಟನೆಯಾದ ಉದಾಹರಣೆಗಳಿವೆ. ಈ ರೀತಿಯಾಗಿ, ಅಂತಿಮವಾಗಿ ರಚನೆಯಾಗುವ ಸ್ಫಟಿಕದ ಉತ್ಪನ್ನದ ಶುದ್ಧತೆಯ ಮಟ್ಟ ತಗ್ಗುತ್ತದೆ. ಅಲ್ಲದೆ, ಕೆಲವು ಪರಿಸ್ಥಿತಿಗಳಲ್ಲಿ, ವಿಲೇಯಕವು ಜಾಲರಿಯೊಳಗೆ ಸಂಘಟಿತಗೊಂಡು ದ್ರಾವಿಕೀಕರಣ ವು ಉಂಟಾಗಬಹುದು. ಇದರ ಜೊತೆಯಲ್ಲಿ, ರಚನೆಯಾದ ಸ್ಫಟಿಕದೊಳಗೆ ವಿಲೇಯಕವು 'ಸಿಲುಕಿಕೊಳ್ಳಬಹುದು'(ದ್ರವ ರೂಪದಲ್ಲಿ), ಹಾಗು ಇದನ್ನು ಅಂತರ್ವೇಶನ ಎಂದು ಕರೆಯಲಾಗುತ್ತದೆ.

ಉಷ್ಣಬಲವಿಜ್ಞಾನದ ಅವಲೋಕನ[ಬದಲಾಯಿಸಿ]

ಹಿಮ ಸ್ಫಟಿಕಕ್ಕಾಗಿ ಕಡಿಮೆ ತಾಪಮಾನದ SEM ವರ್ಧನ ಸರಣಿ. ಇಮೇಜಿಂಗ್ ಗಾಗಿ ಕ್ರಯೋ-ತಾಪಮಾನಗಳಲ್ಲಿ ಪ್ಲ್ಯಾಟಿನಮ್ ನೊಂದಿಗೆ ಸ್ಫಟಿಕಗಳನ್ನು ಸೆರೆಹಿಡಿದು, ಶೇಖರಿಸುವುದರ ಜೊತೆಗೆ ಸ್ಪಟರ್ ಕೋಟ್ ಮಾಡಲಾಗಿರುತ್ತದೆ.

ಸ್ಫಟಿಕೀಕರಣ ಪ್ರಕ್ರಿಯಾ ಸ್ವರೂಪವು ಉಷ್ಣಬಲವಿಜ್ಞಾನ ಹಾಗು ಚಲನಶಾಸ್ತ್ರದ ಅಂಶಗಳೆರಡರಿಂದಲೂ ರೂಪಿತವಾಗಿದೆ, ಇದು ಅಧಿಕ ವ್ಯತ್ಯಾಸ ಸಾಧ್ಯತೆಯನ್ನು ಹೊಂದಿರುವುದರ ಜೊತೆಗೆ ನಿಯಂತ್ರಿಸಲು ಕಷ್ಟಕರವಾಗಿದೆ. ಅಶುದ್ಧತೆಯ ಮಟ್ಟ, ಮಿಶ್ರಣ ಪರಿಸ್ಥಿತಿ, ಪಾತ್ರೆಯ ವಿನ್ಯಾಸ, ಹಾಗು ತಂಪಾಗುವ ಪ್ರೊಫೈಲ್ ಗಾತ್ರ, ಸಂಖ್ಯೆ, ಹಾಗು ತಯಾರಾದ ಸ್ಫಟಿಕಗಳ ಆಕಾರದ ಮೇಲೆ ಪ್ರಮುಖ ಪರಿಣಾಮ ಬೀರುತ್ತವೆ.

ಒಂದು ಬಾಹ್ಯ ಮೂಲದಿಂದ ಶಾಖಗೊಳ್ಳುತ್ತಿರುವ ಅಣುವನ್ನು ಶುದ್ಧ ಹಾಗು ಸಂಪೂರ್ಣವಾದ ಸ್ಫಟಿಕ ದಲ್ಲಿ ಇರಿಸಲಾದ ಸ್ಥಳದಲ್ಲಿ ವೀಕ್ಷಿಸಲು ನೀವಿರಬೇಕು. ತೀಕ್ಷ್ಣವಾಗಿ ನಿರೂಪಿತ ತಾಪಮಾನದಲ್ಲಿ, ಘಂಟೆಯು ಮೊಳಗುತ್ತದೆ, ನೀವು ಬೇರೆಡೆಗೆ ಹೋಗಿ ಬರುವ ಅವಧಿಯ ಅಂತರದಲ್ಲಿ, ಸ್ಫಟಿಕದ ಜಟಿಲ ವಿನ್ಯಾಸವು ದ್ರಾವಣದೊಂದಿಗೆ ಕುಸಿಯುತ್ತದೆ. ಪಠ್ಯಪುಸ್ತಕದಲ್ಲಿ ಬರುವ ಉಷ್ಣಬಲವಿಜ್ಞಾನವು, ಅಣುಗಳ ಪ್ರಾದೇಶಿಕ ಹರವಿನ ಯಾದೃಚ್ಚಿಕೀಕರಣದಿಂದ ನಿಮ್ಮ ವ್ಯವಸ್ಥೆಗೆ ಲಭ್ಯವಾದ S (ಎಸ್)ಎಂಟ್ರಪಿಯು (ಅಲಭ್ಯಪ್ರಮಾಣ) H (ಎಚ್)ಎನ್ತಾಲ್ಪಿ(ಶಾಖಪ್ರಮಾಣ)ಯನ್ನು ಮೀರಿಸುವ ಕಾರಣದಿಂದಾಗಿ ಕರಗುವಿಕೆ ಉಂಟಾಗುತ್ತದೆ. ಇದು ಸ್ಫಟಿಕದ ಪ್ಯಾಕಿಂಗ್ ಬಲದ ಬಿರುಕಿನಿಂದಾಗಿ ಹಾನಿಯನ್ನುಂಟುಮಾಡುತ್ತದೆ:

ಈ ನಿಯಮವು, ತಾಪಮಾನವು ಅಧಿಕಗೊಳ್ಳುತ್ತಿದ್ದಂತೆ ಯಾವುದೇ ವಿನಾಯಿತಿಗೆ ಒಳಪಡುವುದಿಲ್ಲ. ಅದೇ ಸೂಚಕದಲ್ಲಿ, ಕರಗುವಿಕೆಯು ತಂಪಾದ ನಂತರ ಅದೇ ತಾಪಮಾನದಲ್ಲಿ ಘಂಟೆಯು ಮತ್ತೆ ಮೊಳಗಬೇಕು, ಹಾಗು ಅಣುಗಳು ಸ್ಫಟಿಕ ರೂಪಕ್ಕೆ ಮತ್ತೆ ಹೊಂದಾವಣೆಯಾಗಬೇಕು. ವ್ಯವಸ್ಥೆಯೊಳಗೆ ಅಣುಗಳ ಕ್ರಮದಿಂದಾಗಿ ತಗ್ಗಿದ ಎಂಟ್ರಪಿಯು, ಸುತ್ತಮುತ್ತಲಿನ ಶಾಖಧಾರಕ ಯಾದೃಚ್ಚಿಕೀಕರಣದಿಂದ ಶಕ್ತಿಮೀರಿ ನಷ್ಟವನ್ನು ತುಂಬಿಕೊಡುತ್ತದೆ; ಇದಕ್ಕೆ ಕಾರಣ ಶಾಖಗೊಂಡ ದ್ರಾವಣದ ಬಿಡುಗಡೆ; ಸುವ್ಯವಸ್ಥಿತ ಸರ್ವತ್ರ ಎಂಟ್ರಪಿಯು ಅಧಿಕಗೊಳ್ಳುತ್ತದೆ.

ಆದರೆ ತಂಪಾಗಿಸುವಿಕೆಯಲ್ಲಿ ಈ ಮಾದರಿಯಾಗಿ ವರ್ತಿಸುವ ದ್ರಾವಣಗಳು ಈ ನಿಯಮಕ್ಕೆ ಹೊರತಾಗಿವೆ; ಸ್ಫಟಿಕೀಕರಣವು ಸಾಮಾನ್ಯವಾಗಿ ಕಡಿಮೆ ತಾಪಮಾನದಲ್ಲಿ(ಅತಿಶೈತ್ಯೀಕರಣ) ಸಂಭವಿಸುತ್ತದೆಂಬ ಉಷ್ಣಬಲವಿಜ್ಞಾನದ ಎರಡನೇ ನಿಯಮವು ಇದಕ್ಕೆ ಅಪವಾದವಾಗಿದೆ. ಇದರರ್ಥ, ಸ್ಫಟಿಕವು ರಚನೆಗೊಂಡಿದ್ದಕ್ಕಿಂತ ಹೆಚ್ಚಾಗಿ ಸುಲಭವಾಗಿ ನಾಶವಾಗುತ್ತದೆ. ಇದೇ ರೀತಿಯಾಗಿ, ಫಲಿತ ದ್ರಾವಣದಲ್ಲಿ ಮತ್ತೆ ಉತ್ತಮ ಸ್ಫಟಿಕವಾಗಿ ಬೆಳವಣಿಗೆ ಮಾಡುವುದಕ್ಕಿಂತ ಹೆಚ್ಚಾಗಿ ಒಂದು ಶುದ್ಧ ಸ್ಫಟಿಕವನ್ನು ಒಂದು ದ್ರಾವಣದಲ್ಲಿ ವಿಲಯನಗೊಳಿಸುವುದು ಹೆಚ್ಚು ಸುಲಭ. ಬೀಜೀಕರಣ ಹಾಗು ಸ್ಫಟಿಕದ ಬೆಳವಣಿಗೆಯು ಉಷ್ಣಬಲವಿಜ್ಞಾನ, ನಿಯಂತ್ರಣಕ್ಕಿಂತ ಹೆಚ್ಚಾಗಿ ಚಲನಶಾಸ್ತ್ರದಡಿಯಲ್ಲಿ ನಡೆಯುತ್ತದೆ.

ಸ್ಫಟಿಕೀಕರಣಕ್ಕೆ ಬೇಕಾಗುವ ಸಾಧನ-ಸಲಕರಣೆ[ಬದಲಾಯಿಸಿ]

1. ಟ್ಯಾಂಕ್ ಕ್ರಿಸ್ಟಲೈಸರ್ಸ್ . ಟ್ಯಾಂಕ್ ಸ್ಫಟಿಕೀಕರಣವು ಒಂದು ಹಳೆಯ ವಿಧಾನವಾಗಿದ್ದು ಕೆಲ ವಿಶೇಷ ಸಂದರ್ಭಗಳಲ್ಲಿ ಇಂದಿಗೂ ಬಳಸಲಾಗುತ್ತದೆ.(ನೀರಿನ ತೊಟ್ಟಿಯ ಸ್ವಚ್ಛಗೊಳಿಸುವ ಮೊದಲು ಅದನ್ನು ಒಣಗಲು ಬಿಟ್ಟು ನಂತರದ ಹಕ್ಕಳೆಗಟ್ಟಿದ ಸ್ಪಟಿಕ ತೆಗೆಯಲಾಗುತ್ತದೆ.) ಟ್ಯಾಂಕ್ ಸ್ಫಟಿಕೀಕರಣದಲ್ಲಿ ಪೂರ್ತಿ ಆರ್ದ್ರವಾದ ದ್ರಾವಣಗಳನ್ನು ಮುಚ್ಚಿಲ್ಲದ ಟ್ಯಾಂಕುಗಳಲ್ಲಿ ತಂಪಾಗಲು ಬಿಡಲಾಗುತ್ತದೆ. ಕೆಲ ಸಮಯದ ನಂತರ ಮೂಲ ದ್ರಾವಣವನ್ನು ಬರಿದು ಮಾಡಿ ಸ್ಫಟಿಕಗಳನ್ನು ಹೊರತೆಗೆಯಲಾಗುತ್ತದೆ. ಬೀಜೀಕರಣ ಹಾಗು ಸ್ಫಟಿಕಗಳ ಗಾತ್ರವನ್ನು ನಿಯಂತ್ರಿಸುವುದು ಕಷ್ಟಕರ. ಇಲ್ಲಿ ಮಾದರಿ ಎಂಬಂತೆ, ಕೂಲಿ ಖರ್ಚು-ವೆಚ್ಚವು ಅಧಿಕವಾಗುತ್ತದೆ.

2. ಉಜ್ಜಿ ನುಣುಪುಗೊಳಿಸಿದ ಮೇಲ್ಮೈ ಹೊಂದಿರುವ ಸ್ಫಟಿಕೀಕಾರಕಗಳು . ನುಣುಪಾದ ಮೇಲ್ಮೈಯನ್ನು ಹೊಂದಿರುವ ಸ್ಫಟಿಕೀಕಾರಕದ ಒಂದು ಮಾದರಿಯೆಂದರೆ ಸ್ವೆನ್ಸನ್-ವಾಕರ್ (ಸ್ವೆನ್ಸನ್ ಕಂಪನಿಯಿಂದ ಆವಿಷ್ಕಾರವಾದ ಹರಳುಗಟ್ಟಿಸುವ ಪ್ರಕ್ರಿಯೆ-ನಿಯಮ)ಸ್ಫಟಿಕೀಕಾರಕ, ಇದು 0.6 m ಅಗಲದ ಮುಚ್ಚಿಲ್ಲದ,ತೆರೆದ ತೊಟ್ಟಿ ಅಥವಾ ಬಾನೆಯನ್ನು ಒಳಗೊಂಡಿರುವುದರ ಜೊತೆಗೆ ಅರ್ಧವೃತ್ತಾಕಾರದ ಕೆಳಭಾಗ ಹಾಗು ಹೊರಭಾಗದಲ್ಲಿ ತಂಪುಕಾರಕ ಕವಚ ಹೊಂದಿರುತ್ತದೆ. ಕಡಿಮೆ ವೇಗದ ಸುರುಳಿಯಾಕಾರದ, ದ್ರಾವಣಗಳ ಕಡೆಯುವ ಕ್ಷೋಭಕವು ಸುತ್ತುತ್ತಿರುತ್ತದೆ. ಅಲ್ಲದೇ ಹಾಗೆ ಸುತ್ತುವಾಗ ಸೃಷ್ಟಿಯಾಗುತ್ತಿರುವ ಸ್ಫಟಿಕಗಳು ತೇಲಾಡುತ್ತವೆ. ಅಲಗುಗಳು ಗೋಡೆಗೆ ತೀರ ಸಮೀಪದಲ್ಲಿ ಹಾದು ಹೋಗುತ್ತವೆ. ಇವು ತಂಪಾದ ಗೋಡೆಯ ಪದರಿನ ಮೇಲೆ ಶೇಖರಣೆಯಾದ ಯಾವುದೇ ಸ್ಫಟಿಕಗಳನ್ನು ಒಡೆದು ಹಾಕುತ್ತವೆ. ಉತ್ಪನ್ನವು ಸಾಧಾರಣವಾಗಿ ಅಗಲವಾದ ಸ್ಫಟಿಕ-ಗಾತ್ರದ ಹಂಚಿಕೆಯನ್ನು ಹೊಂದಿರುತ್ತವೆ.

3. ನುಣುಪಾದ ಎರಡು-ಪೈಪ್ (ದ್ವಿಕೊಳವೆ)ಮೇಲ್ಮೈ ಹೊಂದಿರುವ ಸ್ಫಟಿಕೀಕಾರಕಗಳು . ಇದನ್ನು ವೊಟೇಟರ್ (ಮೇಲ್ಮೈ ತಾಪ ವಿನಿಮಯಕಗಳು)ಎಂದೂ ಸಹ ಕರೆಯಲಾಗುತ್ತದೆ, ಈ ಮಾದರಿಯ ಸ್ಫಟಿಕೀಕಾರಕವನ್ನು ಐಸ್ ಕ್ರೀಮ್ ಹಾಗು ಕೃತಕಬೆಣ್ಣೆಯನ್ನು ಪ್ಲಾಸ್ಟೀಕರಿಸಲು ಬಳಸಲಾಗುತ್ತದೆ. ತಂಪಾದ ನೀರು ವಲಯಾಕಾರದ ಜಾಗದಲ್ಲಿ ಹಾದು ಹೋಗುತ್ತದೆ. ಒಂದು ಆಂತರಿಕ ಕ್ಷೋಭಕವನ್ನು ಸ್ಪ್ರಿಂಗ್-ಸೇರಿಸಿದ (ಸ್ಥಿತಿಸ್ಥಾಪಕತ್ವ) ಅಳಿಸಿ ಹಾಕುವ ಸಾಧನದೊಂದಿಗೆ ಅಳವಡಿಸಲಾಗುತ್ತದೆ, ಇದು ಗೋಡೆಯನ್ನು ನಿರ್ಮೂಲಗೊಳಿಸುತ್ತದೆ. ಅಲ್ಲದೇ ಉತ್ತಮ ಶಾಖ-ವರ್ಗಾವಣಾ ಸಹಕರ್ತೃವಿನ ಸಹಕಾರಕಗಳನ್ನು ಒದಗಿಸುತ್ತದೆ.

4. ಪರಿಚಲಿಸುವ-ದ್ರಾವಣವನ್ನು ಇಂಗಿಸುವ -ಸ್ಫಟಿಕಕಾರಕ . ಇದನ್ನು ಓಸ್ಲೋ ಕ್ರಿಸ್ಟಲೈಜರ್ (ದೊಡ್ಡ ಗಾತ್ರದ ಸ್ಪಟಿಕಗಳ ತೂಗು ಹಾಕುವ ವರ್ಗವಿನ್ಯಾಸ)ಎಂದೂ ಸಹ ಕರೆಯಲಾಗುತ್ತದೆ. ಇಲ್ಲಿ ಅಧಿಪರ್ಯಾಪ್ತತೆಯು ಬಾಷ್ಪೀಕರಣದ ಮೂಲಕ ನಡೆಯುತ್ತದೆ. ಪರಿಚಲಿಸುತ್ತಿರುವ ದ್ರಾವಣವನ್ನು ಸ್ಕ್ರ್ಯೂ ಪಂಪ್, ತಿರುಪು ಕೊಳೆವೆಗಳ ಮೂಲಕ ಹೀರಿ ಹಾಕಲಾಗುತ್ತದೆ. ಇದು ಸಾಂದ್ರೀಕೃತ ಸ್ಟ್ರೀಮ್ ತಾಪಕ ನಾಳದ ಒಳಗಡೆ ಕೆಳಭಾಗದಲ್ಲಿ ಕಂಡುಬರುತ್ತದೆ. ಶಾಖಗೊಂಡ ದ್ರಾವಣವು ನಂತರದಲ್ಲಿ ಆವಿ ಜಾಗದಲ್ಲಿ ಹರಿಯುತ್ತದೆ. ಇಲ್ಲಿ ಸ್ವಲ್ಪಮಟ್ಟಿಗೆ ಅಧಿಪರ್ಯಾಪ್ತತೆ ನೀಡುವ ಕೃತಕ,ಹಠಾತ್ ಬಾಷ್ಪೀಕರಣ ಸಂಭವಿಸುತ್ತದೆ.ಪರಿಣಾಮವಾಗಿ ಉಳಿದ ಆವಿಯು ಸಾಂದ್ರೀಕರಣಗೊಳ್ಳುತ್ತದೆ. ಅಧಿಪರ್ಯಾಪ್ತವಾದ ದ್ರಾವಣವು ನಾಳದಲ್ಲಿ ಕೆಳಮುಖವಾಗಿ ಹಾಗು ನಂತರದಲ್ಲಿ ಮೇಲ್ಮುಖವಾಗಿ ದ್ರವೀಕರಿಸಿದ ಹಾಗು ಅಸ್ಥಿರ ಸ್ಫಟಿಕಗಳ ಹಾಸಿನ ಮೂಲಕ ಹರಿಯುತ್ತದೆ. ಇವುಗಳು ಗಾತ್ರದಲ್ಲಿ ಬೆಳವಣಿಗೆಯಾಗುತ್ತಿರುತ್ತವೆ. ಹೊರಹೋಗುತ್ತಿರುವ ಪೂರ್ತಿ ಆರ್ದ್ರಗೊಂಡ ದ್ರಾವಣವು ನಂತರದಲ್ಲಿ ತಾಪಕಕ್ಕೆ ಪುನರುಪಯೋಗಿ ಚಕ್ರೀಯ ಪ್ರವಾಹವಾಗಿ ಹಿಂದಿರುಗುತ್ತದೆ. ಅಲ್ಲಿ ಇವುಗಳು ಹೊಸದಾಗಿ ಪ್ರವೇಶಿಸುವ ದ್ರವಗಳೊಂದಿಗೆ ಕೂಡಿಕೊಳ್ಳುತ್ತವೆ. ದೊಡ್ಡ ಸ್ಫಟಿಕಗಳು ಹೊರಭಾಗದಲ್ಲಿ ನೆಲೆಯಾಗುತ್ತವೆ. ಅದಲ್ಲದೇ ಸ್ಫಟಿಕಗಳ ಕಲ್ಮಶ ಹಾಗು ಮೂಲ ದ್ರಾವಣವನ್ನು ಉತ್ಪನ್ನವಾಗಿ ವಾಪಸು ಹೊರತೆಗೆಯಲಾಗುತ್ತದೆ.

5. ಪರಿಚಲಿಸುವ-ಮ್ಯಾಗ್ಮ(ಕಾರ್ಬನಿಕ,ಖನಿಜ ಪದಾರ್ಥಗಳ ಚರಟದಂತಿರುವ ಮಿಶ್ರಣ) ನಿರ್ವಾತ ಸ್ಫಟಿಕೀಕಾರಕ . ಮ್ಯಾಗ್ಮ ಅಥವಾ ಸ್ಫಟಿಕಗಳ ಅಕ್ಷಾಧಾರವು ಮುಖ್ಯ ಅಂಗದಿಂದ ಹೊರಗೆ ಸ್ಕ್ರ್ಯೂ ಪಂಪ್ ನಿಂದ(ತಿರುಪು ಕೊಳವೆಯಿಂದ) ಪರಿಚಲನಾ ಪೈಪಿನ ಮೂಲಕ ಪರಿಚಲನೆಯಾಗುತ್ತದೆ. ಹೀಗೆ ಮ್ಯಾಗ್ಮ, ತಾಪಕದ ಮೂಲಕ ಹರಿಯುತ್ತದೆ, ಅಲ್ಲಿ ಇದರ ತಾಪಮಾನವು 2-6 Kಯಷ್ಟು ಹೆಚ್ಚುತ್ತದೆ. ಶಾಖಗೊಂಡ ದ್ರವಾಂಶವು ನಂತರದಲ್ಲಿ ಕಲ್ಮಶದೊಂದಿಗೆ ಮಿಶ್ರಣಗೊಳ್ಳುತ್ತದೆ. ಆಗ ದ್ರವದ ಮೇಲ್ಮೈನಲ್ಲಿ ಕುದಿಯುವಿಕೆ ಸಂಭವಿಸುತ್ತದೆ. ಇದು ಮೇಲ್ಮೈನ ಸಮೀಪದಲ್ಲಿರುವ ಸುಳಿಯುಂಟಾದ ಆವರ್ತಕ ದ್ರಾವಣದಲ್ಲಿ ಅಧಿಪರ್ಯಾಪ್ತತೆಯನ್ನು ಉಂಟುಮಾಡುತ್ತದೆ. ಇದು ಪರಿಚಲನಾ ಪೈಪ್ ನ ಮೂಲಕ ಮತ್ತೆ ಹೋಗುವವರೆಗೂ ಆವರ್ತಕದಲ್ಲಿ ತೂಗಾಡುವ ಸ್ಫಟಿಕದಲ್ಲಿ ಸಂಗ್ರಹಣೆಯಾಗುತ್ತದೆ. ಆವಿಯು ಮೇಲ್ಭಾಗದ ಮೂಲಕ ಹೊರಟು ಹೋಗುತ್ತದೆ. ಒಂದು ಸ್ಟೀಮ್-ಜೆಟ್ (ಕಡುಗಪ್ಪು ಆವಿಯ)ಉಚ್ಚಾಟಕವು ನಿರ್ವಾತವನ್ನು ಒದಗಿಸುತ್ತದೆ.

6. ಕಂಟಿನ್ಯುಅಸ್ ಆಸಿಲೇಟರಿ ಬ್ಯಾಫಾಲ್ಡ್ ಕ್ರಿಸ್ಟಲೈಸರ್ (COBC ).(ನಿರಂತರ ಡೋಲಾಯಮಾನ ಪ್ರತಿಬಂಧಕ ಸ್ಪಟಿಕೀಕರಣ) COBCಯು ಕೊಳವೆಯಾಕಾರದ ಡೋಲಾಯಮಾನವಾದ ಸ್ಫಟಿಕೀಕಾರಕವಾಗಿದೆ.ಇದು ಪದರುಪದರಾದ, ಪಟಲೀಯ ಹರಿವಿನ ಪರಿಸ್ಥಿತಿಗಳಲ್ಲಿ ಅಧಿಕ ಶಾಖ ವರ್ಗಾವಣಾ ಸಹಕಾರದೊಂದಿಗೆ (ಕಡಿಮೆ ಹರಿವಿನ ಪ್ರಮಾಣಗಳು) ಪ್ಲಗ್-ಫ್ಲೋ(ಬಿರಡೆ ಮೂಲಕದ ಹರಿವನ್ನು) ಒದಗಿಸುತ್ತದೆ. ಇದು ನಿಯಂತ್ರಿತ ತಂಪಾಗುವ ಪಾರ್ಶ್ವಗಳಿಗೆ ಅವಕಾಶ ಮಾಡಿಕೊಡುತ್ತದೆ. ಉದಾಹರಣೆಗೆ, ರೇಖಾತ್ಮಕ, ಪರವಲಯದಲ್ಲಿ, ಮುಂದುವರಿಯದೇ, ಹಂತ-ಹಂತವಾಗಿ ಅಥವಾ ಯಾವುದೇ ಮಾದರಿಯನ್ನು ಹೊಂದಬಹುದು. ಇದು ಸ್ಫಟಿಕದ ಗಾತ್ರ, ಆಕೃತಿವಿಜ್ಞಾನ ಹಾಗು ಸ್ಥಿರ ಸ್ಫಟಿಕದ ಉತ್ಪನ್ನದ ಮೇಲೆ ಹೆಚ್ಚಿನ ನಿಯಂತ್ರಣ ಒದಗಿಸುತ್ತದೆ.

ಇವನ್ನೂ ನೋಡಿ[ಬದಲಾಯಿಸಿ]

ಹೊಂದಿಸಿ=ಮೇಲಕ್ಕೆ
 • ಸ್ಫಟಿಕೀಕರಣದ ಮೂಲಕ ಚಿರಾಲ್ )ವಿಶ್ಲೇಷಣ(ಕನ್ನಡಿ ಪ್ರತಿಂಬಕ್ಕೆ ಸಂಪೂರ್ಣ ಹೊಂದಿಕೆಯಾಗದ)ವಿಶ್ಲೇಷಣ)
 • ಸ್ಫಟಿಕಗಳ ಸ್ವಭಾವ
 • ಸ್ಫಟಿಕ
 • ಸ್ಫಟಿಕೀಕರಣ (ಇಂಜಿನಿಯರಿಂಗ್ ದೃಷ್ಟಿಕೋನ)
 • ಆಂಶಿಕ ಆಸವನ (ರಸಾಯನಶಾಸ್ತ್ರ)
 • ಅಗ್ನಿಜನ್ಯ ಭೇದ ಗ್ರಹಣೆ
         ಹೊಂದಿಸಿ=ಮೇಲಕ್ಕೆ
 • ಮೈಕ್ರೋ-ಪುಲ್ಲಿಂಗ್-ಡೌನ್
 • ಘನವಸ್ತುಗಳ ಹಂತ ಬದಲಾವಣೆಗಳು
 • ಫಿಸಿಕ್ಸ್ ಆಫ್ ಗ್ಲಾಸ್
 • ಕ್ವಾಸಿಸ್ಫಟಿಕ(ಮೇಲ್ನೋಟಕ್ಕೆ ಸ್ಫಟಿಕವೆನಿಸುವ)
 • ಬೀಜ ಸ್ಫಟಿಕ
 • ಏಕ ಸ್ಫಟಿಕ
 • ಸಿಮ್ಪ್ಲೆಕ್ಟೈಟ್
 • ಎಕ್ಸ್ ರೆ ಸ್ಫಟಿಕಶಾಸ್ತ್ರ

ಉಲ್ಲೇಖಗಳು[ಬದಲಾಯಿಸಿ]

 • ಗ್ಲಿನ್ನ್ P.D. ಹಾಗು ರೇರ್ಡನ್ E.J. (1990)"ಘನ-ವಿಲಯನ ಜಲೀಯ-ವಿಲಯನ ಸಮತೋಲನ: ಉಷ್ಣಬಲವಿಜ್ಞಾನ ಸಿದ್ಧಾಂತ ಹಾಗು ನಿರೂಪಣೆ". ಅಮೆರ್. J. ಸೈನ್ಸ್. 290, 164-201.
 • ಗೆಯನ್ಕೊಪ್ಲಿಸ್, C.J. (2003)"ವಹನ ಪ್ರಕ್ರಿಯೆಗಳು ಹಾಗು ವಿಘಟನಾ ಪ್ರಕ್ರಿಯೆ ನಿಯಮಗಳು". 4ನೇ ಆವೃತ್ತಿ. ಪ್ರಿನ್ಟಿಸ್-ಹಾಲ್ Inc.
 • ಸ್ಟ್ಯಾನ್ಲಿ SJ. (2006) ಪ್ರತಿಕ್ರಿಯಾಶೀಲ ಅವಕ್ಷೇಪನದ ಅವಧಿಯಲ್ಲಿ ತಲಲೇಖನದ ಇಮೇಜಿಂಗ್, ಕೆಮಿಕಲ್ ಇಂಜಿನಿಯರಿಂಗ್ ಸೈನ್ಸ್, 61 (23), ಪುಟಗಳು 7850–7863
 • ನೋಸೆಂಟ್ M, ಬೆರ್ತೊಚ್ಚಿ L, ಎಸ್ಪಿಟಾಲಿಯೇರ್ F. & ಮತ್ತಿತರರು.

(2001) "ಕ್ವಾಸಿ-ಎಮಲ್ಶನ್ ಸಾಲ್ವೆಂಟ್ ಡಿಫ್ಯೂಶನ್ (QESD) ವಿಧಾನದ ಮೂಲಕ ಸಲ್ಬ್ಯುಟೋಮಲ್ ಸಲ್ಫೇಟ್ ನ ಗೋಲರೂಪದ ಸ್ಫಟಿಕೀಕರಣಕ್ಕೆ ವಿಲೇಯಕ ವ್ಯವಸ್ಥೆಯ ನಿರೂಪಣೆ", ಜರ್ನಲ್ ಆಫ್ ಫಾರ್ಮಸ್ಯೂಟಿಕಲ್ ಸೈನ್ಸಸ್, 90, 10, 1620-1627.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ರೇಖಾಚಿತ್ರ ಸಂಪುಟ[ಬದಲಾಯಿಸಿ]