ಸ್ತ್ರೀಯರನ್ನು ತಾಲಿಬಾನ್‌ ನಡೆಸಿಕೊಳ್ಳುವ ಬಗೆ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಬುರ್ಕಾ ಧರಿಸುವ ಅಫ್ಘಾನಿನ ಮಹಿಳೆ

ಅಫ್ಘಾನಿಸ್ತಾನದಲ್ಲಿತಾಲಿಬಾನ್ ಅಧಿಕಾರದಲ್ಲಿದ್ದಾಗ ಆ ದೇಶದ ಸ್ತ್ರೀಯರನ್ನು ನಡೆಸಿಕೊಳ್ಳುವ ಕುರಿತಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತವಾಯಿತು. "ಮಹಿಳೆಯರ ಪರಿಶುದ್ಧತೆ ಮತ್ತು ಘನತೆ ಮತ್ತೊಮ್ಮೆ ಅತ್ಯಂತ ಪೂಜ್ಯವಾಗಿರಬಹುದಾದ ಸುರಕ್ಷಿತ ಪರಿಸರಗಳನ್ನು" ಸೃಷ್ಟಿಸುವುದು ಅವರ ಘೋಷಿತ ಗುರಿಯಾಗಿತ್ತು,[೧] ಮತ್ತು ಇದು ಪರ್ದಾ ಹಾಕಿಕೊಂಡು ಜೀವಿಸುವ ಪಶ್ತೂನ್‌ ಜನಾಂಗದವರ ನಂಬಿಕೆಗಳಿಂದ ಆಧಾರ ಪಡೆದಿತ್ತು.[೨] ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಬುರ್ಕಾವನ್ನು ಧರಿಸಬೇಕೆಂದು ಬಲವಂತ ಮಾಡಲಾಯಿತು, ಏಕೆಂದರೆ, ತಾಲಿಬಾನ್ ವಕ್ತಾರರ ಪ್ರಕಾರ," ಯಾವುದೇ ಹೆಣ್ಣಿಗೆ ಸಂಬಂಧವಿರದ ಪುರುಷರಿಗೆ "ಆ ಮಹಿಳೆಯ ಮುಖ ಭ್ರಷ್ಟತೆಗೆ ಒಂದು ಮೂಲವಾಗಿದೆ".[೩] ಎಂಟು ವರ್ಷ ವಯಸ್ಸಿನ ನಂತರ ತಾಲಿಬಾನ್‌ನಲ್ಲಿ ಸ್ತ್ರೀಯರು ದುಡಿಯುವಂತಿಲ್ಲ. ಅವರು ಶಿಕ್ಷಣ ಪಡೆಯುವಂತಿಲ್ಲ. ಮತ್ತು ಅಲ್ಲಿಯವರೆಗೆ ಅವರು ಕೇವಲ ಕುರಾನ್‌ನನ್ನು ಮಾತ್ರ ಓದಲು ಅವಕಾಶ ನೀಡಲಾಗುತ್ತದೆ. ಮಹಿಳೆಯರು ಶಿಕ್ಷಣ ಬಯಸಿದಲ್ಲಿ ಗೊಲ್ಡನ್ ನೀಡಲ್ ಹೊಲಿಗೆ ಶಾಲೆಯಂತಹ ಭೂಗತ ಶಾಲೆಗಳಲ್ಲಿಕಲಿಯಬೇಕಾಗುತ್ತದೆ. ಇದಲ್ಲದೆ ಇಂತಹ ಸಮಯದಲ್ಲಿ ಸಿಕ್ಕಿಹಾಕಿಕೊಂಡರೆ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಹತ್ಯೆಯಾಗುವ ಅಪಾಯಕ್ಕೆ ಈಡಾಗುವರು.[೪][೫] ಒಬ್ಬ ಪುರುಷ ಅಂಗರಕ್ಷಕ ಜೊತೆಯಲ್ಲಿರದ ಹೊರತು ಮಹಿಳೆಯರು ಪುರುಷ ವೈದ್ಯರಲ್ಲಿ ಚಿಕಿತ್ಸೆ ಪಡೆಯುವಂತಿಲ್ಲ. ಇಲ್ಲವಾದರೆ ರೋಗಿಗೆ ಚಿಕಿತ್ಸೆ ದೊರಕುವುದಿಲ್ಲ. ತಾಲಿಬಾನಿ ಕಾನೂನು ಉಲ್ಲಂಘನೆ ಮಾಡಿದ್ದರಿಂದ ಮಹಿಳೆಯರಿಗೆ ಸಾರ್ನಜನಿಕವಾಗಿ ಛಡಿಏಟು ಕೊಡಲಾಯಿತು.Cite error: Closing </ref> missing for <ref> tag

ಲಿಂಗ ಧೋರಣೆಗಳು[ಬದಲಾಯಿಸಿ]

ಚಿತ್ರ:Talibanbeating.jpg
ಆಗಸ್ಟ್ 26, 2001ರಂದು ಕಾಬೂಲ್‌ನಲ್ಲಿ ತಾಲಿಬಾನ್‌ನ ಧಾರ್ಮಿಕ ಪೊಲೀಸ್ ಸದಸ್ಯನೊಬ್ಬ ಮಹಿಳೆಯನ್ನು ಹೊಡೆಯುತ್ತಿರುವುದು. ದೃಶ್ಯವನ್ನು RAWA ದಿಂದ ಚಿತ್ರೀಕರಿಸಲಾಗಿದೆ, ಅದನ್ನು ಇಲ್ಲಿ ಕಾಣಬಹುದು.

8 ವರ್ಷ ಮೀರಿದ ಹೆಣ್ಣು ಮಕ್ಕಳು ಹತ್ತಿರದ ರಕ್ತ ಸಂಬಂಧಿ, ಗಂಡ, ಅಥವಾ ಮಾವನ ಹೊರತಾಗಿ ಬೇರೆ ಪುರುಷರೊಂದಿಗಿನ ನೇರ ಸಂಪರ್ಕಕ್ಕೆ ಅವಕಾಶವಿಲ್ಲ(ಮಹ್ರಂ ನೋಡಿ).[೬] ಇತರೆ ನಿರ್ಬಂಧಗಳು:

 • ಸಾರ್ವಜನಿಕ ರಸ್ತೆಗಳಲ್ಲಿ ಮಹಿಳೆಯರು ರಕ್ತಸಂಬಂಧಿಯೊಂದಿಗಲ್ಲದೇ ಅಥವಾ ಬುರ್ಕಾವನ್ನು (Burkha, Burka ಅಥವಾ Burqua) ಧರಿಸದ ಹೊರತು ರಸ್ತೆಗಳಲ್ಲಿ ಕಾಣಿಸಿಕೊಳ್ಳುವಂತಿಲ್ಲ.
 • ಮಹಿಳೆಯರ ಹೆಜ್ಜೆಯ ಸಪ್ಪಳ ಪುರುಷರನ್ನು ಉತ್ತೇಜಿಸುತ್ತದೆ. ಆದ್ದರಿಂದ ಎತ್ತರದ ಹಿಮ್ಮಡಿಯ ಪಾದರಕ್ಷೆಗಳನ್ನು ಅವರು ಧರಿಸುವಂತಿಲ್ಲ.
 • ಅಪರಿಚಿತರು ಮಹಿಳೆಯರ ದ್ವನಿ ಕೇಳುವಂತಿಲ್ಲ. ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡದಾದ ಸ್ವರದಲ್ಲಿ ಮಹಿಳೆಯರು ಮಾತನಾಡುವಂತಿಲ್ಲ.
 • ಮಹಿಳೆಯರು ದಾರಿಹೋಕರಿಗೆ ಕಾಣುವುದನ್ನು ತಡೆಗಟ್ಟಲು ಮನೆಯೆ ಎಲ್ಲಾ ನೆಲಮಾಳಿಗೆ ಅಥವಾ ಮೊದಲ ಅಂತಸ್ತಿನ ಮನೆಯ ಕಿಟಿಕಿಗಳ ಮೇಲೆ ಬಣ್ಣ ಹಚ್ಚಬೇಕು ಅಥವಾ ಪರದೆ ಹಾಕಬೇಕು.
 • ಮಹಿಳೆಯರ ಭಾವಚಿತ್ರ ತೆಗೆಯುವುದು ಅಥವಾ ಚಿತ್ರೀಕರಣ ಮಾಡುವುದನ್ನು ಹಾಗೂ ಸುದ್ದಿ ಪತ್ರಿಕೆಗಳಲ್ಲಿ ಪುಸ್ತಕಗಳಲ್ಲಿ, ಅಂಗಡಿಗಳಲ್ಲಿ ಹಾಗೂ ಮನೆಯಲ್ಲಿ ಮಹಿಳೆಯರ ಚಿತ್ರಗಳ ಪ್ರದರ್ಶನ ಮಾಡುವುದನ್ನೂ ಕೂಡ ನಿಷೇಧಿಸಲಾಯಿತು.
 • "ಮಹಿಳೆ" ಎಂಬ ಪದ ಹೊಂದಿರುವ ಎಲ್ಲ ಸ್ಥಳಗಳ ಹೆಸರು ಬದಲಾವಣೆ ಮಾಡಲಾಯಿತು. ಉದಾಹರಣೆಗೆ "ವಿಮೆನ್ಸ್ ಗಾರ್ಡನ್" ಎಂಬ ಸ್ಥಳವನ್ನು"ಸ್ಪ್ರಿಂಗ್ ಗಾರ್ಡನ್" ಎಂದು ಪುನರ್ ನಾಮಕರಣ ಮಾಡಲಾಯಿತು.
 • ಹೆಂಗಸರು ಅವರ ಮನೆಗಳ ಅಥವಾ ಅಪಾರ್ಟ್‌ಮೆಂಟಿನ ಬಾಲ್ಕನಿಯಲ್ಲಿ ಕಾಣಿಸಿಕೊಳ್ಳುವುದನ್ನು ನೀಷೇಧಿಸಲಾಗಿತ್ತು.
 • ರೇಡಿಯೋ, ದೂರದರ್ಶನ ಅಥವಾ ಯಾವುದೇ ರೀತಿಯ ಸಾರ್ವಜನಿಕ ಕೂಟಗಳಲ್ಲಿ ಮಹಿಳೆಯರ ಉಪಸ್ಥಿತಿಯನ್ನು ನಿಷೇಧಿಸಲಾಗಿತ್ತು.[೭]

ಉಡುಪಿನ ನಿಯಮಾವಳಿ[ಬದಲಾಯಿಸಿ]

 1. REDIRECT Template:Islamic female dress

ಹೊಳೆಯುವ ಬಣ್ಣದ ಬಟ್ಟೆಗಳು ಲೈಂಗಿಕವಾಗಿ ಅಕರ್ಷಿಸುತ್ತವೆ ಎಂದು ಮಹಿಳೆಯರು ಅವುಗಳನ್ನು ಧರಿಸದಂತೆ ಪ್ರತಿಬಂಧಿಸಲಾಯಿತು.[೭] 1996ರ ಒಂದು ತಾಲಿಬಾನ್ ಕಾಯಿದೆ ಹೀಗೆ ಹೇಳುತ್ತದೆ, "ಮಹಿಳೆಯರು ಅವರನ್ನು ಪ್ರದರ್ಶಿಸಲು ಸೊಗಸಾದ, ಅಲಂಕಾರದಿಂದ ಕೂಡಿದ, ಬಿಗಿಯಾದ ಮತ್ತು ಕಾಂತಿಯುತವಾದ ಉಡುಪುಗಳನ್ನು ಧರಿಸಿ ಹೊರಗೆ ಹೋದರೆ, ಇಸ್ಲಾಮಿಕ್ ಷರಿಯಾದಿಂದ ವಿಪತ್ತಿಗೆ ಈಡಾಗುತ್ತಾರೆ ಮತ್ತು ಅವರಿಗೆ ಸ್ವರ್ಗಕ್ಕೆ ಹೋಗಲು ಅವಕಾಶವಿರುವುದಿಲ್ಲ."[೮][೯] ಅವರಿಗೆ ಉಗುರುಗಳಿಗೆ ಬಣ್ಣ ಹಚ್ಚಲು ಅನುಮತಿ ಇಲ್ಲ.

ಹೊರ-ತಿರುಗಾಟ[ಬದಲಾಯಿಸಿ]

ತಾಲಿಬಾನ್ ಆಡಳಿತ ಸಾರ್ವಜನಿಕ ವರ್ತನೆಗೆ ಸಂಬಂಧಿಸಿದ ಮಹಿಳೆಯರ ಸಂಚಾರ ಸ್ವಾತಂತ್ರ್ಯದ ಮೇಲೆ ತೀವ್ರ ನಿರ್ಬಂಧ ಹೇರಿತು ಮತ್ತು ಇದು ಬುರ್ಕಾವನ್ನು ಧರಿಸದವರು ಹಾಗೂ ಮಹ್ರಂ (ರಕ್ತ ಸಂಬಂಧಿಗಳನ್ನು) ಹೊಂದಿರದವರಿಗೆ ತೊಂದರೆಗಳನ್ನು ಸೃಷ್ಟಿಸಿತು. ಅಂತಹ ಮಹಿಳೆಯರು ವಾಸ್ತವವಾಗಿ ಗೃಹ ಬಂಧನ ಎದುರಿಸಿದರು.[೨] ರಸ್ತೆಯಲ್ಲಿ ಒಂಟಿಯಾಗಿ ಹೋದ ಕಾರಣಕ್ಕಾಗಿ ತಾಲಿಬಾನ್‌ರಿಂದ ತೀವ್ರವಾಗಿ ಥಳಿಸಿಕೊಂಡ ಒಬ್ಬ ಮಹಿಳೆ ಹೀಗೆ ಹೇಳುತ್ತಾಳೆ "ನನ್ನ ತಂದೆ ಯುದ್ಧದಲ್ಲಿ ಸತ್ತರು... ನನಗೆ ಗಂಡ ಇಲ್ಲ, ಸಹೋದರ ಇಲ್ಲ, ಮಗ ಇಲ್ಲ. ನನಗೆ ಒಂಟಿಯಾಗಿ ಹೊರಗೆ ಹೊಗಲು ಸಾಧ್ಯವಿಲ್ಲವಾದರೆ ನಾನು ಹೇಗೆ ಬದುಕಲಿ?"[೧೦] ಕಾಬೂಲ್‌ ಸರ್ಕಾರ ನಡೆಸುವ ಅನಾಥಾಲಯ ತಾಸ್ಕಿಯಾ ಮಸ್ಕಾನ್‌ನಲ್ಲೂ ಮಹಿಳೆಯರ ಸಂಚಾರದಿಂದಾದ ಪರಿಣಾಮದ ಕುರಿತು ಸರ್ಕಾರೇತರ ಸ್ವಯಂಸೇವಾ ಸಂಸ್ಥೆ ಟೆರ್ರೆ ಡೆಸ್ ಹೊಮ್ಮೆಸ್‌ನ ಕಾರ್ಯಕರ್ತ ಕಣ್ಣಾರೆ ಕಂಡಿದ್ದಾರೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 400 ಹುಡುಗಿಯರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದ ನಂತರವೂ ಒಂದು ವರ್ಷದ ಕಾಲ ವಿಹಾರಕ್ಕೂ ಹೊರಗೆ ಬಿಡದೆ ಒಳಗೆ ಕೂಡಿಹಾಕಲಾಗಿತ್ತು.[೬] ಮಹಿಳೆಯರ ಸಂಚಾರಕ್ಕೆ ಬಾಧಿಸಿದ ಖಾಯಿದೆಗಳು:

 • ಮಹಿಳೆಯರು ತಮ್ಮ ಮಹ್ರಂ (ರಕ್ತಸಂಬಂಧಿ) ಜೊತೆಗಿದ್ದಾಗ್ಯೂ ಬೈಸಿಕಲ್ ಅಥವಾ ಮೋಟಾರುಸೈಕಲ್ ಸವಾರಿ ಮಾಡುವುದನ್ನು ಪ್ರತಿಬಂಧಿಸಿಲಾಗಿದೆ.
 • ಮಹ್ರಂ (ರಕ್ತಸಂಬಂಧಿ) ಜೊತೆ ಇಲ್ಲದೆ ಮಹಿಳೆಯರು ಟ್ಯಾಕ್ಸಿ ಚಾಲಿಸುವುದನ್ನು ನಿಷೇಧಿಸಲಾಗಿದೆ.
 • ಪುರುಷರು ಮತ್ತು ಮಹಿಳೆಯರು ಒಂದೇ ಬಸ್‌ನಲ್ಲಿ ಪ್ರಯಾಣ ಮಾಡುವುದನ್ನು ತಡೆಯಲು ಪ್ರತ್ಯೇಕವಾದ ಬಸ್ ವ್ಯವಸ್ಥೆ ಜಾರಿಗೆ ತರಲಾಗಿದೆ.[೧೧]

ಗ್ರಾಮೀಣ ಮಹಿಳೆಯರು ಸಾಮಾನ್ಯ ಜೀವನ ನಡೆಸುತ್ತಿದ್ದರಿಂದ ಹಾಗೂ ಹತ್ತಿರದ ರಕ್ತಸಂಬಂಧಿಗಳ ಸುಪರ್ದಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಜೀವನದ ಮೇಲೆ ಕಡಿಮೆ ಮಟ್ಟದಲ್ಲಿ ಪ್ರಭಾವ ಬೀರಿದವು. ಅವರ ನಿತ್ಯದ ಮನೆಗೆಲಸ ಅಥವಾ ದುಡಿಮೆ ಮುಂದುರಿಸಲು ಒಂದು ಸಂಬಂಧಿಕರ ಮಟ್ಟದ ಸ್ವಾಂತತ್ರ್ಯ ಅವರಿಗೆ ಅವಶ್ಯಕವಾಗಿತ್ತು. ಈ ಮಹಿಳೆಯರು ಹತ್ತಿರದ ನಗರಕ್ಕೆ ಪ್ರಯಾಣ ಮಾಡಿದಲ್ಲಿ, ಆಗ ನಗರಕ್ಕೆ ಸಂಬಂಧಿಸಿದ ನಿರ್ಬಂಧನೆಗಳು ಇವರಿಗೂ ಅನ್ವಯಿಸುತ್ತಿದ್ದವು.[೧]

ಉದ್ಯೋಗ[ಬದಲಾಯಿಸಿ]

ಹಿಂದಿನ ಅಫ್ಘಾನ್ ಕಾನೂನಿನಲ್ಲಿ ಸ್ತ್ರೀ-ಪುರುಷರು ಒಟ್ಟಾಗಿ ಉದ್ಯೋಗ ಮಾಡುವುದಕ್ಕೆ ಅವಕಾಶವಿತ್ತು. ಆದರೆ ತಾಲಿಬಾನ್ ಆಡಳಿತ ಅದನ್ನು ಒಪ್ಪಲಿಲ್ಲ. ಈ ರೀತಿ ಒಟ್ಟಾಗಿ ಕೆಲಸ ಮಾಡುವುದು ಪರ್ದಾ ಮತ್ತು ಷರಿಯಾ ಕಾನೂನಿಗೆ ವಿರುದ್ಧವಾದುದು ಎಂದಿತು.[೩] ಇದಲ್ಲದೆ ಸೆಪ್ಟೆಂಬರ್ 30, 1996ರಲ್ಲಿ ಶಾಸನ ಹೊರಡಿಸಿದ ತಾಲಿಬಾನ್, ಮಹಿಳೆಯರು ಉದ್ಯೋಗ ಮಾಡದಂತೆ ನಿಷೇಧ ಹೇರಿತು.[೧೨] ಇದರಿಂದಾಗಿ ಒಂದು ಅಂದಾಜಿನಂತೆ ಸರ್ಕಾರಿ ನೌಕರರಾಗಿದ್ದ ಶೇಕಡ 25ರಷ್ಟು ಮಹಿಳೆಯರು ಹಾಗೂ ಇತರೆ ವಲಯಗಳಲ್ಲಿನ ಸಾವಿರಾರು ಮಹಿಳೆಯರು ತೊಂದರೆಗೀಡಾದರು.[೬] ಇದು ಅವರ ಕುಟುಂಬದ ಆದಾಯದ ಮೇಲೆ ವಿನಾಶಕಾರಿ ಪ್ರಭಾವ ಬೀರಿತು. ವಿಶೇಷವಾಗಿ ಅಫ್ಘಾನಿಸ್ತಾನದಲ್ಲಿ ಸಾಮಾನ್ಯವಾಗಿರುವ ದುರ್ಬಲ ಅಥವಾ ವಿಧವೆಯರ ಯಜಮಾನಿಕೆಯ ಸಂಸಾರಗಳ ಮೇಲೆ ಋಣಾತ್ಮಕ ಪರಿಣಾಮ ಬೀರಿತು. ಮತ್ತೆ ಉದ್ಯೋಗದಲ್ಲಿದ್ದ ಮಹಿಳೆಯರ ಸೇವೆಯನ್ನು ಪಡೆಯುತ್ತಿದ್ದ ಸಂಸ್ಥೆಗೆ ಸಹಾ ನಷ್ಟವಾಯಿತು. ಕಾಬೂಲ್‌ನಲ್ಲಿ ವಾಸ್ತವವಾಗಿ ಎಲ್ಲಾ ಪ್ರಾಥಮಿಕ ಶಾಲೆಗಳ ಶಿಕ್ಷಕರು ಸ್ತ್ರೀಯರಾಗಿದ್ದರಿಂದ, ಕೇವಲ ಬಾಲಕಿಯರ ಶಿಕ್ಷಣ ಮಾತ್ರವಲ್ಲದೇ, ಮಕ್ಕಳ ಪ್ರಾಥಮಿಕ ಶಿಕ್ಷಣವೇ ಮುಚ್ಚಲ್ಪಟ್ಟಿತು. 1996ರಲ್ಲಿ ತಾಲಿಬಾನ್‌, ಕಾಬೂಲ್‌ನಗರವನ್ನು ವಶಪಡಿಸಿಕೊಂಡ ನಂತರ ಸಾವಿರಾರು ಶಿಕ್ಷಿತ ಕುಟುಂಬಗಳು ಕಾಬೂಲ್‌ ತೊರೆದು ಪಾಕಿಸ್ತಾನಕ್ಕೆ ಪಲಾಯನ ಮಾಡಿದವು.[೨][೧೩] ಅಪಘಾನಿಸ್ತಾನದಲ್ಲಿಯೆ ಉಳಿದವರು ಜೀವನ ನಡೆಸಲು ಕನಿಷ್ಠ ಆದಾಯದ ಕೊರತೆಯಿಂದಾಗಿ ಭಿಕ್ಷೆಬೇಡುವ ತಾಯಿ-ಮಕ್ಕಳ ಸಂಖ್ಯೆ ಹೆಚ್ಚಿತು.ತಾಲಿಬಾನ್ ಪರಮೊಚ್ಚನಾಯಕ ಮಹಮದ್ ಓಮರ್ ಸಾರ್ವಜನಿಕ ರಂಗದಲ್ಲಿನ ಮಹಿಳಾ ನೌಕರರು ಮತ್ತು ಶಿಕ್ಷಕಿಯರಿಗೆ ಪ್ರತಿ ತಿಂಗಳು 5 ಅಮೇರಿಕನ್‌ ಡಾಲರ್‌ ಸಂಬಳದ ಭರವಸೆ ನೀಡಿದನು, ಆದಾಗ್ಯೂ ಇದು ಕಡಿಮೆ ಆವಧಿಯ ಪ್ರಸ್ತಾಪವಾಗಿತ್ತು.[೧೪] ತಾಲಿಬಾನ್ ಪ್ರತಿನಿಧಿಯೊಬ್ಬ ಹೀಗೆ ಹೇಳಿಕೆ ನೀಡಿದ್ದಾರೆ: "ಈಗ ಆರಾಮವಾಗಿ ಮನೆಯಲ್ಲಿ ಕುಳಿತಿರುವ, 30,000 ಉದ್ಯೋಗ-ಮುಕ್ತ ಮಹಿಳೆಯರಿಗೆ ತಿಂಗಳ ಸಂಬಳಗಳನ್ನು ತಾಲಿಬಾನ್‌ ನೀಡುತ್ತಿದೆ. ಇದು ಮಹಿಳೆಯರ ಹಕ್ಕುಗಳ ಬಗ್ಗೆ ತಾಲಿಬಾನ್‌ ನೀತಿಯನ್ನು ಪ್ರಶ್ನಿಸುವವರ ಮುಖಕ್ಕೆ ಚಾಟಿಯೇಟು ನೀಡಿದ ಹಾಗೆ. ಈ ಜನರು ಆಧಾರ ರಹಿತ ಸುದ್ದಿ/ಪ್ರಚಾರದ ಮೂಲಕ ತಾಲಿಬಾನ್ ವಿರುದ್ಧ ಕಾಬೂಲ್ ಮಹಿಳೆಯರನ್ನು ಎತ್ತಿಕಟ್ಟುತ್ತಿದ್ದಾರೆ".[೩] ಮಹಿಳೆಯರು ಕೆಲಸ ಮಾಡುವ ಅವಶ್ಯಕತೆ ಇಲ್ಲ ಎಂಬುದನ್ನು ಖಚಿತಪಡಿಸಲು ವಿಸ್ತಾರವಾದ ಕುಟುಂಬದ ಉಪಯೋಗ, ಅಥವಾ ಜ್ಯಕತ್ ದಾನ ವ್ಯವಸ್ಥೆಯನ್ನು ತಾಲಿಬಾನ್ ಪ್ರೋತ್ಸಾಹಿಸಿತು. ಅದೇನೇ ಇರಲಿ, ಹಲವು ವರ್ಷಗಳ ಸಂಘರ್ಷದಿಂದಾಗಿ ವಿಭಕ್ತ ಕುಟುಂಬಗಳು ತಮ್ಮ ನಿರ್ವಹಣೆಯನ್ನೆ ಮಾಡಿಕೊಳ್ಳುವುದು ಕಷ್ಟವಾಯಿತು. ಹಾಗಿದ್ದಾಗ ಸಂಬಂಧಿಗಳ ಕುರಿತು ಲಕ್ಷ್ಯ ವಹಿಸುವುದು ಅಸಾಧ್ಯವಾಗಿತ್ತು.[೨] ಯಾವಾಗಲೂ ಶಾಸನಗಳ ಆರ್ಹತೆ ಪುರುಷರನ್ನು ಆವಲಂಬಿಸಿರುತ್ತದೆ, ಉದಾಹರಣೆಗೆ ಕುಟುಂಬದ ಆಹಾರವನ್ನು ಒಬ್ಬ ಪುರುಷ ಸಂಬಂಧಿಯೇ ಸಂಗ್ರಹಿಸಬೇಕು. ಮಹಿಳೆಯೊಬ್ಬಳು ಪುರುಷ ಸಂಬಂಧಿಯನ್ನು ಹೊಂದಿರದ ಸಾಧ್ಯತೆಯನ್ನು ವಿದೇಶಿ ಮಂತ್ರಿ ಮುಲ್ಲಾ ಗೌಸ್‌ ತಳ್ಳಿಹಾಕಿದರು, ಮತ್ತು ಅಪಘಾನಿಸ್ತಾನದ ಸಣ್ಣ ಪ್ರಮಾಣದ ಜನಸಂಖ್ಯೆಯ ಕುರಿತು ಅಂತಾರಾಷ್ಟ್ರೀಯ ಗಮನ ಹಾಗೂ ಕಾಳಜಿಯು ಆಶ್ಚರ್ಯಕರ ಎಂದರು.[೬] ಗ್ರಾಮೀಣ ಪ್ರದೇಶದ ಮಹಿಳೆಯರ ಪರಿಸ್ಥಿಯಲ್ಲಿ ಸಾಮಾನ್ಯ ಅಂತಹ ಬದಲಾವಣೆ ಏನೂ ಉಂಟಾಗಲಿಲ್ಲ. ಏಕೆಂದರೆ ಅವರ ಜೀವನೋಪಾಯವು ವೇತನವಿಲ್ಲದ ಗೃಹಕೃತ್ಯ, ಕೃಷಿ ಹಾಗೂ ನಿರಂತರ ಸಂತಾನೋತ್ಪತ್ತಿ ಮಾಡುವಿಕೆಯನ್ನು ಅನಿವಾರ್ಯವಾಗಿ ಒಳಗೊಂಡಿತ್ತು.ಆರೋಗ್ಯಕ್ಕೆ ಸಂಬಂಧಿಸಿದ ಮಹಿಳಾ ವೃತ್ತಿಪರರಿಗೆ ಈ ಉದ್ಯೋಗ ನಿಷೇಧಾಜ್ಞೆಯಿಂದ ರಿಯಾಯಿತಿ ದೊರೆತಿತ್ತು, ಆದರೂ ಅವರು ಬಹಳ ಕಟ್ಟುನಿಟ್ಟಿನ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಿದ್ದರು. ಉದ್ಯೋಗಕ್ಕೆ ಹೋಗಲು ಪ್ರತ್ಯೇಕವಾದ ಬಸ್ ವ್ಯವಸ್ಥೆ ಮತ್ತು ವ್ಯಾಪಕವಾದ ಹಾವಳಿಯ ಕಾರಣದಿಂದ ಕೆಲವು ಮಹಿಳೆಯರು ಅವರ ಸ್ವಂತ ಆಯ್ಕೆಯಿಂದ ಕೆಲಸ ತ್ಯಜಿಸಿದರು. ಉಳಿದವರಲ್ಲಿ, ಹಲವರು ಆಡಳಿತದ ಬಗೆಗಿನ ಭಯದಲ್ಲಿ ಜೀವಿಸಿದರು ಮತ್ತು ತಾಲಿಬಾನ್ ಸಮೂಹಗಳಿಗೆ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಲು ಕೆಲಸ ಮಾಡುವ ವಾರದಲ್ಲಿ ಆಸ್ಪತ್ರೆಯಲ್ಲಿ ವಾಸಿಸುವುದನ್ನು ಆಯ್ಕೆ ಮಾಡಿಕೊಂಡರು.[೨] ಇಂತಹ ಮಹಿಳೆಯರಿಂದಾಗಿಯೇ, ತುಂಬ ಕಡಿಮೆ ಮಟ್ಟದಲ್ಲಿಯಾದರೂ ಸಹಾ, ಸ್ತ್ರೀ ರೋಗಶಾಸ್ತ್ರೀಯ, ಜನನ ಕಾಲದ ಮತ್ತು ಸೂತಿಕಾವೃತ್ತಿಯ ಸೇವೆಗಳು ಮುಂದುವರೆದವು. ರಬ್ಬಾನಿ ಆಡಳಿತದಲ್ಲಿ, ಕಾಬೂಲಿನ ಮುಲ್ಲಾಲೈ ಆಸ್ಪತ್ರೆಯಲ್ಲಿ ಸುಮಾರು 200ರಷ್ಟು ಮಹಿಳಾ ಸಿಬ್ಬಂದಿಗಳು ಕೆಲಸಮಾಡುತ್ತಿದರು, ಆದರೆ ತಾಲಿಬಾನ್ ಕಾಲದಲ್ಲಿ ಕೇವಲ 50 ಅಷ್ಟೇ ಜನ ಉಳಿದಿದ್ದರು. 2002ರಲ್ಲಿ ತಾಲಿಬಾನ್ ಪತನದ ನಂತರ ಅಫ್ಘಾನಿಸ್ತಾನದಲ್ಲಿ ಕಾರ್ಯ ನಿರ್ವಹಿಸುವ NGOಗಳಿಗೆ ಮಹಿಳಾ ಆರೋಗ್ಯ ವೃತ್ತಿಪರರ ಕೊರತೆ ಕಂಡು ಬಂದಿತು, ಇದು ಅವರ ಕೆಲಸಕ್ಕೆ ಒಂದು ಪ್ರಮುಖ ಆಡಚಣೆಯಾಯಿತು.[೧೫] ಉದ್ಯೋಗ ನಿಷೇಧದ ಇತರೆ ವಿನಾಯಿತಿಗಳು ಜನೋಪಕಾರಿ/ಮಾನವೀಯ ಕೆಲಸಗಾರರು ಕಡಿಮೆ ಸಂಖ್ಯೆಯಲ್ಲಿ ಸೇವೆಯಲ್ಲಿ ಉಳಿಯಲು ಅನುಮತಿಸಿತು, ದುರ್ಬಲ ಮಹಿಳೆಯರನ್ನು ಭೇಟಿಮಾಡಲು ಅಥವಾ ಅವರ ಕುರಿತು ಸಂಶೋಧನೆ ನಿರ್ವಹಿಸಲು ಮಹಿಳೆಯರೇ ಅಮೂಲ್ಯ ಎಂದು ತಾಲಿಬಾನ್ ಪ್ರತ್ಯೇಕ ಕಾನೂನುಗಳು ಸೂಚಿಸುತ್ತವೆ. ಈ ವಿನಾಯಿತಿ ಪೂರ್ಣ ತಾಲಿಬಾನ್ ಚಳುವಳಿಯಿಂದ ಅನುಮೋದನೆ ಗೊಂಡಿರುವುದಲ್ಲ, ಆದ್ದರಿಂದ ಮಹಿಳೆಯರ ಪಾಲುಗೊಳ್ಳುವಿಕೆಯ ನಿದರ್ಶನಗಳು, ಅಥವಾ ಆದರ ಕೊರತೆ, ಪ್ರತಿಯೊಂದು ಪರಿಸ್ಥಿತಿಯೊಂದಿಗೆ ಬದಲಾದವು.[೨] ಹೆರಥ್ ನಗರವು 1995ಕ್ಕಿಂತ ಹಿಂದೆ ಹೆಚ್ಚು ಕಾಸ್ಮೋಪಾಲಿಟನ್ ಮತ್ತು ಆಧುನಿಕವಾದ ಅಫ್ಘಾನಿಸ್ತಾನದ ಪ್ರದೇಶಗಳಲ್ಲಿ ಒಂದಾಗಿತ್ತು. ಆದ್ದರಿಂದ ಹೆರಥ್ ನಗರಕ್ಕೆ ತಾಲಿಬಾನ್‌ನ ಮಹಿಳೆಯರನ್ನು ನಡೆಸಿಕೊಳ್ಳುವ ರೀತಿಯ ಹೊಂದಾಣಿಕೆಗಳಿಂದ ಹೆಚ್ಚಾಗಿ ತೊಂದರೆಯಾಯಿತು. ಅಲ್ಲಿ ಮಹಿಳೆಯರು ಸೀಮಿತವಾದ ಶ್ರೇಣಿಯ ಕೆಲಸಗಳಲ್ಲಿ ದುಡಿಯಲು ಮಾತ್ರ ಅವಕಾಶವಿತ್ತು, ಆದರೆ ತಾಲಿಬಾನ್ ಆಧಿಕಾರಿಗಳು ಅದನ್ನೂ ನಿಲ್ಲಿಸಿದರು. ಹೆರಥ್‌ನ ಹೊಸ ಗವರ್ನರ್, ಮುಲ್ಲಾಃ ರಜಾಕ್, ಮಹಿಳೆಯರ ಮನಸ್ಸನ್ನು ಗಲಿಬಿಲಿಗೊಳಿಸುವ ಸ್ವಭಾವದ ಭಯದಿಂದ ಅವನ ಕಛೇರಿಯಲ್ಲಿ ಮಹಿಳೆಯರು ಓಡಾಡುವುದನ್ನು ನಿಷೇಧಿಸುವ ಅಜ್ಞೆಯನ್ನು ಹೊರಡಿಸಿದನು.[೧೬]

ಶಿಕ್ಷಣ[ಬದಲಾಯಿಸಿ]

ತಾಲಿಬಾನರು ತಮ್ಮ ಇಸ್ಲಾಮಿನ ಕರ್ತವ್ಯದ ಅನ್ವಯವಾಗಿ ಹುಡುಗರು ಮತ್ತು ಹುಡುಗಿಯರು ಇಬ್ಬರಿಗೂ ಶಿಕ್ಷಣ ನೀಡುವುದೆಂದು ಹಕ್ಕು ಸಾಧಿಸಿದರೂ ಸಹ ಇನ್ನೂ ಕೂಡ ಒಂದು ಅಧಿಕೃತ ಆಜ್ಞೆ 8 ವರ್ಷದ ಮೆಲ್ಪಟ್ಟ ಹುಡುಗಿಯರು ಶಿಕ್ಷಣ ಪಡೆಯುವುದನ್ನು ತಡೆದಿದೆ. ಇದು ಒಂದು ತಾತ್ಕಾಲಿಕ ತಡೆಯಾಜ್ಞೆ. ವಿರುದ್ಧ-ಲಿಂಗಗಳ ಸಂಪರ್ಕ ತಡೆಯಲು, ಒಂದು ಸಲ ಎಲ್ಲಾ ಸೌಕರ್ಯಗಳು ಹಾಗೂ ರಸ್ತೆ ಸುರಕ್ಷತೆಗಳನ್ನು ಅಳವಡಿಸಿದ ನಂತರ ಹೆಣ್ಣು ಮಕ್ಕಳು ಕೂಡ ಶಾಲೆಗೆ ಹಿಂತಿರುಗಬಹುದು ಹಾಗೂ ಕಾರ್ಯ ನಿರ್ವಹಿಸಬಹುದು ಎಂದು ಮೌಲ್ವಿ ಕಲಾಮದಿನ್ ಘೋಷಿಸಿದರು. ಈಗಾಗಲೇ ಇರುವ ಅಸ್ವೀಕೃತವೆನಿಸುವ ಮುಜಾಹದಿನ್ ಆವೃತ್ತಿಯನ್ನು ಬದಲಾಯಿಸಿ ಒಂದು ಹೊಸ ಪಾಠಕ್ರಮ ಖಚಿತಪಡಿಸಲು ಮುಸಲ್ಮಾನ್ ಧರ್ಮಶಾಸ್ತ್ರಜ್ಞ ಮಂಡಲವನ್ನು ಕರೆಯುವ ಮುನ್ನ ತಾಲಿಬಾನರು ಅಫಘಾನಿಸ್ತಾನ್ ಮೇಲೆ ಪೂರ್ಣ ನಿಯಂತ್ರಣ ಪಡೆಯಲು ಬಯಸಿದ್ದರು.[೨] ತಾಲಿಬಾನರು ಇದನ್ನು ಸಾಕಾರ ಗೊಳಿಸಲು ಸ್ವಲ್ಪ ಸಮಯವನ್ನು ಬೇಡಿದರು, ಮತ್ತು ಅತ್ಯಂತ ತುರ್ತಾಗಿ ಸ್ತ್ರೀಯರ ಹಕ್ಕುಗಳನ್ನು ಮರುನೀಡಬೇಕೆಂಬ ಅಂತರಾಷ್ಟ್ರೀಯ ನೆರವು ಸಮುದಾಯದ ಒತ್ತಾಯವನ್ನು ಟೀಕಿಸಿದರು.[೧] ತಾಲಿಬಾನರು ತಮ್ಮ ಕಾರ್ಯಗಳ ಶ್ರೇಷ್ಠತೆಯನ್ನು ನಂಬಿದ್ದರು ಹಾಗೂ ಇರಾನಿನ ಸಂದರ್ಶನದಲ್ಲಿ ಒಬ್ಬ ಪ್ರತಿನಿಧಿ ಈ ರೀತಿ ಹೇಳಿದರು, "ನಾವು ಸ್ತ್ರೀಯರಿಗೆ ಕೊಟ್ಟಂತಹ ಹಕ್ಕುಗಳನ್ನು ಬೇರೆ ಯಾವ ದೇಶವೂ ಕೊಟ್ಟಿಲ್ಲ. ದೇವರು ಹಾಗೂ ಅವನ ಸಂದೇಶವಾಹಕರು ಬೋಧಿಸಿದ ಎಲ್ಲಾ ಹಕ್ಕುಗಳನ್ನು ನಾವು ಸ್ತ್ರೀಯರಿಗೆ ಕೋಟ್ಟಿದ್ದೇವೆ, ಅದು ಏನೇಂದರೆ ಮನೆಯಲ್ಲೇ ಇದ್ದು ಧಾರ್ಮಿಕ ಬೋಧನೆಯನ್ನು ಹಿಜಾಬ್ [ಏಕಾಂತತೆ]ನಲ್ಲಿ ಪಡೆಯುವುದು".[೨] ಸ್ತ್ರೀಯರು ಉದ್ಯೋಗ ಮಾಡುವುದನ್ನು ನಿಷೇಧಿಸಿದ್ದು, ಶಿಕ್ಷಣ ಕ್ರಮದ ಮೇಲೆ ಪ್ರಮುಖವಾದ ಪ್ರಭಾವ ಬೀರಿತು. ಈ ನಿಬಂಧನೆಯಿಂದ ಬರೀ ಕಾಬುಲ್‍ನಲ್ಲಿ 106,256 ಹುಡುಗಿಯರು, 148,223 ಹುಡುಗರು ಹಾಗೂ 8,000 ವಿಶ್ವವಿದ್ಯಾಲಯದ ಪದವಿಪೂರ್ವ ಶಿಕ್ಷಣದ ಮಹಿಳೆಯರ ಮೇಲೆ ಪ್ರಭಾವ ಬೀರಿತು. 7,793 ಮಹಿಳಾ ಶಿಕ್ಷಕಿಯರನ್ನು ಕೆಲಸದಿಂದ ತೆಗೆಯಲಾಯಿತು. ಈ ಹೆಜ್ಜೆ ಶಿಕ್ಷಣ ಒದಗಿಸುವಿಕೆಯನ್ನು ಕುಂಟಿತಗೊಳಿಸಿತು ಹಾಗೂ ಆಕಸ್ಮಿಕ ಶಿಕ್ಷಕರ ಕೊರತೆಯಿಂದಾಗಿ 63 ಶಾಲೆಗಳನ್ನು ಮುಚ್ಚಬೇಕಾಯಿತು.[೬] ಕೆಲವು ಸ್ತ್ರೀಯರು ಸ್ಥಳೀಯ ಮಕ್ಕಳಿಗೆ ಮನೆಯಲ್ಲೇ ಮುಚ್ಚುಮರೆಯಾಗಿ ಶಾಲೆ ನಡೆಸುತ್ತಿದ್ದರು ಅಥವಾ ಇನ್ನು ಕೆಲವರು ಹೊಲಿಗೆ ತರಭೇತಿಯ ನೆಪದಲ್ಲಿ. ಗೋಲ್ಡನ್ ನೀಡಲ್ ಸೀವಿಂಗ್ ಸ್ಕೂಲ್ ಇದಕ್ಕೊಂದು ಉದಾಹರಣೆ. ತಾಲಿಬಾನ್ ಈ ಕೃತ್ಯಗಳನ್ನು ಪತ್ತೆಹಚ್ಚಿದರೆ ಪರಿಣಾಮ ಏನಾಗಬಹುದೆಂದು ವಿಧ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಎಲ್ಲರೂ ಅರಿತಿದ್ದರು, ಆದರೆ ತಾಲಿಬಾನಿನ ನಿಬಂಧನೆಯಲ್ಲಿ ಸಿಲುಕಿದವರಿಗೆ ಈ ತರಹದ ಕಾರ್ಯಗಳು ಸ್ವಯಂ-ನಿಷ್ಕರ್ಷಣೆಯ ಹಾಗೂ ವಿಶ್ವಾಸದ ಪ್ರಜ್ಞೆ ಮೂಡಿಸಿದಂತಿತ್ತು.[೧೦]

ಆರೋಗ್ಯ ಪಾಲನೆ[ಬದಲಾಯಿಸಿ]

ಅಫಘಾನಿಸ್ತಾನ್‌ನಲ್ಲಿ ತಾಲಿಬಾನ್ ಆಡಳಿತಕ್ಕೆ ಬರುವ ಮುನ್ನ, ಆಸ್ಪತ್ರೆಗಳಲ್ಲಿ ಪುರುಷ ವೈದ್ಯರು ಸ್ತ್ರೀಯರನ್ನು ಚಿಕಿತ್ಸಿಸಲು ಅನುಮತಿಯಿತ್ತು, ಆದರೆ ಸ್ವಲ್ಪ ಅವಧಿಯಲ್ಲೇ ಒಂದು ಅಧಿಕೃತ ಆಜ್ಞೆಯ ಅನ್ವಯವಾಗಿ ಯಾವ ಪುರುಷ ವೈದ್ಯನೂ ಕೂಡ ಸ್ತ್ರೀಯರನ್ನೂ ತಪಾಸಿಸುವ ಉದ್ದೇಶದಿಂದ ಅವರ ಮೈ ಮುಟ್ಟಬಾರದೆಂದು ನಿರ್ಧಾರವಾಯಿತು.[೧೦] ಕೆಲವೇ ಸ್ತ್ರೀಯರು ಆರೋಗ್ಯ ವೃತ್ತಿಯಲ್ಲಿರುವ ಕಾರಣ ಹಲವು ಸ್ತ್ರೀಯರು ತಮ್ಮ ಆರೋಗ್ಯ ಸಮಸ್ಯೆಯತ್ತ ಗಮನಹರಿಸುವುದಕ್ಕೆ ಬಹು ದೂರ ಪ್ರಯಾಣಿಸಬೇಕಾಯಿತು, ಅದೇ ಸಮಯದಲ್ಲಿ ಪ್ರಸವ-ಪೂರ್ವದ ದವಾಖಾನೆಗಳ ಸಂಖ್ಯೆಯೂ ಕಡಿಮೆಯಾಯಿತು.[೨] ಕಾಬೂಲಿನಲ್ಲಿ ಕೆಲವು ಮಹಿಳೆಯರು ಕುಟುಂಬದ ಮತ್ತು ನೆರೆ ಹೊರೆಯವರ ಸೇವೆ ಮಾಡಲು ಅವರ ಮನೆಯಲ್ಲಿ ಅನೌಪಚಾರಿಕ ಚಿಕಿತ್ಸಾಲಯಗಳನ್ನು ಸ್ಥಾಪಿಸಿದ್ದರು, ಆದರೆ ಅವರ ಪರಿಣಾಮ ಸೀಮಿತವಾಗಿರುವುದರಿಂದ ವೈದ್ಯಕೀಯ ಸಾಮಗ್ರಿಗಳನ್ನು ಪಡೆಯುವುದು ಕಷ್ಟವಾಗಿತ್ತು. ಚಿಕಿತ್ಸೆಯ ಕೊರತೆಯಿಂದ ಹಲವು ಮಹಿಳೆಯರು ಧೀರ್ಘಕಾಲದ ನೊವನ್ನು ಅನುಭವಿಸಿದರು ಅಥವಾ ಅಕಾಲಿಕ ಮರಣವನ್ನು ಹೊಂದಿದರು. ಹಣ, ಸಂಬಂಧಿಕರು ಮತ್ತು ಮಹ್ರಂ ಬೆಂಬಲ ಹೊಂದಿದ ಸಂಸಾರಗಳಿಗೆ, ಪಾಕಿಸ್ತಾನದಲ್ಲಿ ವೈದ್ಯಕೀಯ ಗಮನ/ನೆರವು ಪಡೆಯಬಹುದಾಗಿತ್ತು. ಅಕ್ಟೋಬರ್ 1996ರಲ್ಲಿ, ಮಹಿಳೆಯರನ್ನು ಸಾಂಪ್ರದಾಯಿಕ ಹಮ್ಮಾಮ್, ಸಾರ್ವಜನಿಕ ಸ್ನಾನಗಳ ಪ್ರವೇಶದಿಂದ ಬಹಿಷ್ಕರಿಸಲಾಯಿತು, ಸಾಮಾಜೀಕರಿಸುವ ಅವಕಾಶಗಳನ್ನು ಇಸ್ಲಾಮಿಕ್ ಅಲ್ಲ ಎಂದು ನಿರ್ಣಯಿಸಲಾಯಿತು. ನಿರ್ವಹಿಸಲು ಶಕ್ತವಾದ ಈ ಬಿಸಿ-ನೀರಿನ ಧಾರ್ಮಿಕ ವಿಧಿಯನ್ನು ಮಹಿಳೆಯರು ಅನುಭವಿಸುತ್ತಿದ್ದರು ಮತ್ತು ಕೆಲವರು ಮಾತ್ರ ಹರಿಯುವ ನೀರನ್ನು ಹೊಂದಿದ ದೇಶದಲ್ಲಿ ಇದು ಒಂದು ಮುಖ್ಯ ಸೌಲಭ್ಯವಾಗಿತ್ತು. ನೈರ್ಮಲ್ಯ ವಿಧಾನಗಳು ಹಾಗೇ ಆರೋಗ್ಯ ಪಾಲನೆಯ ಅವಕಾಶವನ್ನು ಕಳೆದುಕೊಂಡ ಮಹಿಳೆಯರಲ್ಲಿ ಒಂದು ಬಗೆಯ ಚರ್ಮರೋಗ ಮತ್ತು ಯೋನಿನಾಳದ ಸೋಂಕಿನಲ್ಲಿ ಏರಿಕೆಯನ್ನು ಊಹಿಸಲು UNಗೆ ಇದು ಕಾರಣವಾಯಿತು.[೬] ನಸ್ರಿನ್ ಗ್ರಾಸ್ ಎಂಬ ಅಫ್ಘಾನ್-ಅಮೆರಿಕದ ಲೇಖಕ 2001ರಲ್ಲಿ ಹೇಳಿದ್ದಾರೆ, ನಾಲ್ಕು ವರ್ಷಗಳಾಯಿತು, ಅನೇಕ ಮಹಿಳೆಯರಿಗೆ ತಮ್ಮ ದೇವರನ್ನು ಪ್ರಾರ್ಥಿಸಲು ಸಾಧ್ಯವಾಗಿಲ್ಲ. ಏಕೆಂದರೆ "ಮಹಿಳೆಯರು ಅವರ ಋತುಚಕ್ರದ ನಂತರ ಸ್ನಾನ ಮಾಡದೆ ಪ್ರಾರ್ಥನೆ ಮಾಡುವುದನ್ನು ಇಸ್ಲಾಂ ನಿಷೇಧಿಸಿದೆ".[೧೭] 1998ರ ಜೂನ್‌ನಲ್ಲಿ, ತಾಲಿಬಾನ್ ರಾಜಧಾನಿಯಲ್ಲಿನ ಆಸ್ಪತ್ರೆಗಳಿಗೆ ಮಹಿಳೆಯರು ಭೇಟಿ ಕೊಡುವುದನ್ನು ನಿಷೇಧಿಸಿತು, ಆದರೆ ಮೊದಲು ಅವರು ಸಾರ್ವತ್ರಿಕ ಆಸ್ಪತ್ರೆಯ ಮಹಿಳಾ ರೋಗಿಗಳ ವಾರ್ಡುಗಳಿಗೆ ಭೇಟಿ ಕೊಡಲು ಸಾಧ್ಯವಿತ್ತು. ಇದರಿಂದ ಕಾಬೂಲಿನ ಒಂದೇ ಒಂದು ಆಸ್ಪತ್ರೆಯಲ್ಲಿ ಮಾತ್ರ ಅವರು ಚಿಕಿತ್ಸೆ ಪಡೆಯಬಹುದಾಗಿತ್ತು.[೧೮]

ಬಲವಂತದ ಬಂಧನ[ಬದಲಾಯಿಸಿ]

ಮಹಿಳೆಯರ ಬಲವಂತದ ಬಂಧನದಿಂದ ಪದೇಪದೇ ಉಂಟಾಗುವ ಮಾನಸಿಕ ಒತ್ತಡ, ಒಂಟಿತನ ಮತ್ತು ಖಿನ್ನತೆ ಸಂಸಾರದ ಸಾಮರಸ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಿತು. 160 ಮಹಿಳೆಯರ ಒಂದು ಸಮೀಕ್ಷೆಯ ಪ್ರಕಾರ ಅವರಲ್ಲಿ ಶೇಕಡ 97 ಭಾಗದಷ್ಟು ಮಹಿಳೆಯರಲ್ಲಿ ತೀವ್ರ ಖಿನ್ನತೆಯ ಲಕ್ಷಣಗಳು ಕಂಡು ಬಂದಿತು ಮತ್ತು ಶೇಕಡ 71ರಷ್ಟು ಮಹಿಳೆಯರ ದೈಹಿಕ ಆರೊಗ್ಯದಲ್ಲಿ ಕುಸಿತ ವರದಿಯಾಗಿದೆ.[೬] ಲತೀಫಾ, ಕಾಬೂಲ್ ನಿವಾಸಿ ಮತ್ತು ಲೇಖಕ, ಹೀಗೆ ಬರೆಯುತ್ತಾರೆ :[೧೦]

ಅಪಾರ್ಟ್‌ಮೆಂಟ್ ಒಂದು ಜೈಲು ಅಥವಾ ಆಸ್ಪತ್ರೆಯನ್ನು ಹೋಲುತ್ತದೆ. ನಮ್ಮೆಲ್ಲರ ನಡುವೆ ತುಂಬಾ ಮೌನ ನೆಲೆಸುತ್ತದೆ. ನಮ್ಮಲ್ಲಿ ಯಾರೊಬ್ಬರೂ ಹೆಚ್ಚಿನದು ಏನನ್ನೂ ಮಾಡುವುದಿಲ್ಲ ಹಾಗೆ, ನಾವು ಒಬ್ಬರಿಗೊಬ್ಬರು ಹೇಳಿಕೊಳ್ಳಲು ಹೆಚ್ಚೇನೂ ಇರುವುದಿಲ್ಲ. ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಅಸಮರ್ಥರಾಗಿದ್ದೇವೆ, ನಾವು ಪ್ರತಿಯೊಬ್ಬರು ನಮ್ಮ ಸ್ವಂತ ಭಯ ಮತ್ತು ಯಾತನೆಯಲ್ಲಿರುತ್ತೇವೆ. ಎಲ್ಲರೂ ಒಂದೇ ತರಹದ ಕಪ್ಪು ಹಳ್ಳದಲ್ಲಿರುವುದರಿಂದ, ನಾವು ಸ್ಪಷ್ಟವಾಗಿ ಕಾಣಲು ಸಾಧ್ಯವಿಲ್ಲದಿರುವುದನ್ನು ಮತ್ತೆ ಪುನರಾವರ್ತಿಸುವುದರಲ್ಲಿ ಹೆಚ್ಚು ಅರ್ಥವಿಲ್ಲ.

ತಾಲಿಬಾನ್ ದೇಶದ ಸೌಂದರ್ಯ ಸೆಲೂನ್‌ಗಳನ್ನು ಮುಚ್ಚಿದವು.[೧೯][೨೦][೨೧] ಸೌಂದರ್ಯ ವರ್ಧಕಗಳಾದ ಉಗುರು ಬಣ್ಣ ಮತ್ತು ಮೇಕಪ್‌ಗಳನ್ನು ನಿಷೇಧಿಸಲಾಯಿತು.[೨೨] ಮಹಿಳೆಯರ ಸಾಂಸ್ಕೃತಿಕ ಉಪಸ್ಥಿತಿಯ ಮೇಲಿನ ತಾಲಿಬಾನ್ ನಿರ್ಬಂಧನೆಗಳು ಹಲವು ಕ್ಷೇತ್ರಗಳನ್ನು ಒಳಗೊಂಡಿತ್ತು. "ಮಹಿಳೆ" ಎಂಬ ಪದವನ್ನು ಹೆಸರಿನಲ್ಲಿ ಹೊಂದಿದ ಸ್ಥಳಗಳ ಹೆಸರನ್ನು ಬದಲಾವಣೆ ಮಾಡಲಾಯಿತು ಅದರಿಂದ ಆ ಪದವನ್ನು ಬಳಸಲಿಲ್ಲ. ಮಹಿಳೆಯರು ದೊಡ್ಡದಾಗಿ ನಗುವುದನ್ನು ನಿಷೇಧಿಸಲಾಯಿತ್ತು. ಅಪರಿಚಿತರು ಮಹಿಳೆಯ ಧ್ವನಿಯನ್ನು ಕೇಳುವುದು ಅನುಚಿತ ಎಂದು ಪರಿಗಣಿಸಲಾಗಿತ್ತು. ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸುವುದು ಅಥವಾ ಕ್ರೀಡಾ ಕ್ಲಬ್‌ ಪ್ರವೇಶಿಸುವುದನ್ನು ನಿಷೇಧಿಸಲಾಗಿತ್ತು.[೨೩] ದ ರೆವಲೂಷನರಿ ಅಸೋಸಿಯೆಷನ್ ಅಫ್ ದಿ ವಿಮೆನ್ ಅಫ್ ಅಫ್ಘಾನಿಸ್ತಾನ (RAWA) ನಿರ್ದಿಷ್ಟವಾಗಿ ಈ ವಿಷಯಗಳೊಂದಿಗೆ ವ್ಯವಹರಿಸಿತು. ಇದನ್ನು ಮೀನಾ ಕೆಶ್ವರ್ ಕಮಾಲ್ ಎಂಬ ಮಹಿಳೆ ಸ್ಥಾಪಿಸಿದರು. ಈ ಮಹಿಳೆ ಬೇರೆ ವಿಷಯಗಳಲ್ಲಿ ವಿಮೆನ್ಸ್ ಮೆಸೆಜ್ ಎಂಬ ಹೆಸರಿನ ಒಂದು ದ್ವಿಭಾಷಿಕ ನಿಯತಕಾಲಿಕವನ್ನು 1981ರಲ್ಲಿ ಸ್ಥಾಪಿಸಿದ್ದರು. 1987ರಲ್ಲಿ ಅವರ 30ನೇ ವಯಸ್ಸಿನಲ್ಲಿ ಅವರನ್ನು ಕೊಲ್ಲಲಾಯಿತು. ಆದರೆ ಅಫ್ಘಾನಿನ ಮಹಿಳೆಯರು ಅವರನ್ನು ನಾಯಕಿಯ ಹಾಗೆ ಪ್ರೀತಿ ಗೌರವಗಳಿಂದ ಕಾಣುತ್ತಿದ್ದರು

ಶಿಕ್ಷೆಗಳು[ಬದಲಾಯಿಸಿ]

ಕ್ರೀಡಾ ಮೈದಾನದಲ್ಲಿ ಅಥವಾ ಪೇಟೇಯ ಚೌಕದಲ್ಲಿ ವಿಧ್ಯುಕ್ತ ಸಾರ್ವಜನಿಕ ಪ್ರದರ್ಶನಗಳ ಹಾಗೆ ಅಥವಾ ಸ್ವಯಂಪ್ರೇರಿತ ರಸ್ತೆ ಹೊಡೆತಗಳ ಹಾಗೆ, ಶಿಕ್ಷೆಗಳನ್ನು ಯಾವಾಗಲೂ ಸಾರ್ವಜನಿಕವಾಗಿ ವಿಧಿಸಲಾಗುತ್ತಿತ್ತು. ಪ್ರಜೆಗಳು ಅತಿ ಕಡಿಮೆ ಕರುಣೆಯ, ಕಠಿಣ ಜುಲ್ಮಾನೆಗಳ ಭಯದಲ್ಲಿ ಬದುಕುತ್ತಿದ್ದರು; ಕಾಯಿದೆಗಳನ್ನು ಉಲ್ಲಂಘಿಸಿ ಸಿಕ್ಕಿಹಾಕಿಕೊಂಡ ಮಹಿಳೆಯರನ್ನು ಯಾವಾಗಲೂ ಬಲವಂತದಿಂದ ನಡೆಸಿಕೊಳ್ಳಲಾಗುತ್ತಿತ್ತು.[೬] ಉದಾಹರಣೆಗಳು:

 • ಅಕ್ಟೋಬರ್ 1996ರಲ್ಲಿ, ಒಬ್ಬ ಮಹಿಳೆ ಉಗುರು ಬಣ್ಣ ಬಳಸಿದ ಕಾರಣಕ್ಕಾಗಿ ಅವಳ ಹೆಬ್ಬೆರಳನ್ನು ಕತ್ತರಿಸಲಾಗಿತ್ತು.[೬]
 • ಡಿಸೆಂಬರ್ 1996ರಲ್ಲಿ, ಷರಿಯಾ ಉಡುಪು ನಿಯಾಮಾವಳಿಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ 225 ಕಾಬೂಲ್ ಮಹಿಳೆಯರನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಶಿಕ್ಷಿಸಲಾಯಿತು ಎಂದು ರೇಡಿಯೋ ಷರಿಯಾ ಘೋಷಿಸಿತು. ಶಿಕ್ಷೆಯನ್ನು ಒಂದು ನ್ಯಾಯಮಂಡಳಿ ನಿರ್ವಹಿಸುತ್ತದೆ ಮತ್ತು ಮಹಿಳೆಯರ ತಪ್ಪು ನಡುವಳಿಕೆಗಾಗಿ ಅವರ ಕಾಲುಗಳ ಮತ್ತು ಬೆನ್ನಿನ ಮೇಲೆ ಬಾರುಕೋಲಿನಿಂದ ಹೊಡೆಯಲಾಗುತ್ತಿತ್ತು.[೨೪]
 • ಮೇ 1997ರಲ್ಲಿ, ಮಿನಿಸ್ಟ್ರಿ ಅಫ್ ಇಂಟಿರಿಯರ್‌‌ನ ಅನುಮತಿಯೊಂದಿಗೆ ತುರ್ತುಪರಿಸ್ಥಿತಿಯ ಫಿಡಿಂಗ್ ಕಾರ್ಯಕ್ರಮಗಳ ಮೇಲೆ ಸಂಶೋಧನೆಯಲ್ಲಿ ತೊಡಗಿದ್ದ ಐದು ಮಹಿಳಾ ಕೇರ್ ಇಂಟರ್‌ನ್ಯಾಷನಲ್ ಉದ್ಯೋಗಿಗಳನ್ನು ಅವರ ವಾಹನದಿಂದ ಧಾರ್ಮಿಕ ಪೋಲಿಸ್‌ ಸದಸ್ಯರು ಬಲವಂತವಾಗಿ ಎಳೆದರು. ಒಂದು ಲೋಹದ ಮತ್ತು ಚರ್ಮದ ಸುಮಾರು 1.5 ಮೀಟರ‍್‌‍ಗಳಷ್ಟು (ಸುಮಾರು 5 ಆಡಿ) ಉದ್ದದ ಚಾವಟಿಯಿಂದ ಮಹಿಳೆಯರಿಗೆ ಹೊಡೆಯುವ ಮುನ್ನ, ಅವರನ್ನು ಹೀಯಾಳಿಸಲು ಮತ್ತು ಕಿರುಕುಳ ಕೊಡಲು ಕಾವಲುಗಾರರು ಸಾರ್ವಜನಿಕ ಭಾಷಣ ವ್ಯವಸ್ಥೆಯನ್ನು ಬಳಸುತ್ತಿದ್ದರು.[೧]
ಚಿತ್ರ:Taliban public execution of Zarmeena 1999.jpg
ನವೆಂಬರ್ 16, 1999ರಂದು ಕಾಬೂಲ್‌ನ ಗಾಜಿ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ತಾಲಿಬಾನಿಯರಿಂದ ಜಾರ್ಮಿನಾ ಎಂಬ ಮಹಿಳೆಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು. ಏಳು ಮಕ್ಕಳ ತಾಯಿಗೆ ತನ್ನ ಗಂಡನಿಂದ ಹೊಡೆಸಿಕೊಂಡ ಕಾರಣದಿಂದ ರಾತ್ರಿ ಆತ ಮಲಗಿದ್ದಾಗ ಆತನನ್ನು ಕೊಲೆ ಮಾಡಿದಳೆಂದು ಆಪಾದಿಸಲಾಯಿತು.[೨೫][೨೬] ದೃಶ್ಯವನ್ನು ಇಲ್ಲಿ ಕಾಣಬಹುದು.
 • 1999ರಲ್ಲಿ, ಕಾಬೂಲ್‌ನ ಘಾಜಿ ಕ್ರೀಡಾ ಮೈದಾನದಲ್ಲಿ ಗಂಡನನ್ನು ಕೊಲೆ ಮಾಡಿದಳು ಎಂದು ಹೇಳಲಾದ ಏಳು ಮಕ್ಕಳ ಒಬ್ಬ ತಾಯಿಯನ್ನು 30,000 ಪ್ರೇಕ್ಷಕರ ಮುಂದೆ ಗಲ್ಲಿಗೇರಿಸಲಾಯಿತು (ಬಲ ಭಾಗ ನೋಡಿ). ಅವಳನ್ನು ಮೂರು ವರ್ಷಗಳ ಕಾಲ ಜೈಲಿನಲ್ಲಿರಿಸಲಾಗಿತ್ತು ಮತ್ತು ಗಲ್ಲಿಗೇರಿಸುವ ಮುನ್ನ ತೀವ್ರವಾಗಿ ಚಿತ್ರಹಿಂಸೆ ಕೊಡಲಾಯಿತು, ಆದರೂ ಅವಳ ಮಗಳನ್ನು (ವರದಿಯ ಪ್ರಕಾರ ನಿಜವಾದ ಅಪರಾಧಿ) ರಕ್ಷಿಸುವ ಕಾರಣದಿಂದ ಅವಳ ನಿಷ್ಕಳಂಕತೆಯನ್ನು ಸಮರ್ಥಿಸಿಕೊಳ್ಳಲು ನಿರಾಕರಿಸಿದಳು.[೨೭]
 • ತಾಲಿಬಾನ್ ಶೋಧ ಮಾಡುವಾಗ ಒಬ್ಬ ಮಹಿಳೆ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ವಿಧ್ಯುಕ್ತವಲ್ಲದ ಶಾಲೆಯನ್ನು ನಡೆಸುವುದನ್ನು ಕಂಡುಹಿಡಿಯುತ್ತದೆ. ಅವರು ಮಕ್ಕಳನ್ನು ಹೊಡೆದು ಮತ್ತು ಆ ಮಹಿಳೆಯನ್ನು ಮೆಟ್ಟಿಲಿನಿಂದ ಕೆಳಗೆ ಎಸೆದರು (ಅವಳ ಕಾಲು ಮರಿಯಿತು), ಮತ್ತು ನಂತರ ಅವಳನ್ನು ಬಂಧಿಸಿದರು. ಅವಳು ತಾಲಿಬಾನ್‌ ಮತ್ತು ಅವರ ಕಾನೂನುಗಳಿಗೆ ನಿಷ್ಠಾವಂತಿಕೆಯ ಘೋಷಣೆಗೆ ಸಹಿಹಾಕಲು ನಿರಾಕರಿಸಿದರೆ ಅವಳ ಕುಟುಂಬಕ್ಕೆ ಸಾರ್ವಜನಿಕವಾಗಿ ಕಲ್ಲು ಹೊಡೆಯುವುದಾಗಿ ತಾಲಿಬಾನ್‌ ಹೆದರಿಸಿತು. ತಾಲಿಬಾನ್ ಅಧಿಕಾರಗಳ ಸಮ್ಮತಿ ಇಲ್ಲದೆಯೆ ಹಲವು ಶಿಕ್ಷೆಗಳನ್ನು ಪ್ರತ್ಯೇಕವಾದ ನಾಗರಿಕ ಸೇನೆ ಜಾರಿಗೊಳಿಸುತ್ತಿದ್ದವು, ಹಾಗೆ ಮಹಿಳೆಯರನ್ನು ರಸ್ತೆಯಲ್ಲಿ ಶಿಕ್ಷಿಸುವುದು ಅಧಿಕೃತ ತಾಲಿಬಾನ್ ಕಾಯಿದೆಗೆ ವಿರುದ್ಧವಾಗಿತ್ತು. ಒಂದು ಹೆಚ್ಚು ಅಧಿಕೃತ ಹೇಳಿಕೆ ಎಂದರೆ ಮಹಿಳೆಯರ ತಪ್ಪುನಡತೆಯ ನಿದರ್ಶನಗಳಿಗೆ ಪುರುಷರಿಗೆ ಶಿಕ್ಷೆ: ಒಂದು ಪುರುಷ ಪ್ರಾಧಾನ್ಯ ಸಮಾಜ ಮತ್ತು ಪುರುಷರು ಮಹಿಳೆಯರನ್ನು ನಿಯಂತ್ರಿಸಲು ಬದ್ಧರು ಎಂಬ ನಂಬಿಕೆಯ ಪ್ರತಿಬಿಂಬ. ಮೌಲ್ವಿ ಕಲಮದಿನ್ 1997ರಲ್ಲಿ ಹೀಗೆ ಹೇಳುತ್ತಾರೆ, "ನಾವು ಮಹಿಳೆಯರನ್ನು ನೇರವಾಗಿ ಶಿಕ್ಷಿಲು ಸಾಧ್ಯವಿಲ್ಲ, ಆದ್ದರಿಂದ ನಾವು ಅವರ ಮೇಲೆ ಒತ್ತಡ ಹೇರಲು ಟ್ಯಾಕ್ಸಿ ಚಾಲಕರು ಮತ್ತು ಆಂಗಡಿ ಮಾಲೀಕರನ್ನು ಬಳಸಿಕೊಳ್ಳುತ್ತೇವೆ"[೧] ಪುರುಷರ ಶಿಕ್ಷೆಗಳ ಉದಾಹರಣೆಗಳು:
 • ಮುಖವನ್ನು ಮುಚ್ಚಿಕೊಂಡಿರದ ಅಥವಾ ಮಹ್ರಂ ಜೊತೆಯಿಲ್ಲದ ಮಹಿಳೆಯನ್ನು ಒಬ್ಬ ಟ್ಯಾಕ್ಸಿ ಚಾಲಕ ಹತ್ತಿಸಿಕೊಂಡರೆ ನಂತರ ಅವನು ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ ಮತ್ತು ಗಂಡನನ್ನು ಶಿಕ್ಷಿಸಲಾಗುತ್ತದೆ.
 • ಒಂದು ಮಹಿಳೆ ನದಿಯಲ್ಲಿ ಬಟ್ಟೆ ಒಗೆಯುವುದು ಕಂಡು ಬಂದಲ್ಲಿ ಇಸ್ಲಾಂಮಿಕ್ ಅಧಿಕಾರಿಗಳು ಅವಳನ್ನು ಮನೆಗೆ ತಲುಪಿಸುತ್ತಾರೆ ಅಂತಹ ಸಂಧರ್ಭದಲ್ಲಿ ಅವಳ ಗಂಡ/ಮಹ್ರಂನನ್ನು ತೀವ್ರವಾಗಿ ಶಿಕ್ಷಿಸಲಾಗುತ್ತದೆ.
 • ಬಟ್ಟೆಗೆ ಹೊಲಿಯಲು ಮಹಿಳೆಯರ ಆಳತೆಗಳನ್ನು ತೆಗೆದು ಕೊಂಡ ಟೈಲರ್‌ಗಳು ಜೈಲುವಾಸ ಎದುರಿಸಿದರು.[೧]

ಅಂತರಾಷ್ಟ್ರೀಯ ಪ್ರತಿಕ್ರಿಯೆ[ಬದಲಾಯಿಸಿ]

ಅಂತರರಾಷ್ಟ್ರೀಯ ಸಂಸ್ಥೆಗಳು ಈ ಕುರಿತಂತೆ ಪ್ರತಿಭಟನೆ ಮಾಡಿದ್ದು ತಾಲಿಬಾನ್ ಅಧಿಕಾರಿಗಳ ಮೇಲೆ ಅಂತಹ ಪರಿಣಾಮವನ್ನೇನೂ ಬೀರಲಿಲ್ಲ. ಅವರು ಇಸ್ಲಾಮಿಕ್ ಕಾನೂನಿನ ಕುರಿತಾದ ತಮ್ಮ ಅರ್ಥಕ್ಕೇ ಪ್ರಾಧಾನ್ಯತೆಯನ್ನು ನೀಡಿದರು ಮತ್ತು ಯುಎನ್ ಸಂಸ್ಥೆಯ ನಿಯಮಗಳು ಅಥವಾ ಮಾನವ ಹಕ್ಕು ಕಾಯಿದೆಗಳಿಗೆ ಒಳಪಡಲು ಒಪ್ಪದೇ ಅವುಗಳು ಪಾಶ್ಚಾತ್ಯ ಸಾಮ್ರಾಜ್ಯಶಾಹಿತ್ವವೆಂದು ಕರೆದರು.[೧] 1995ರಲ್ಲಿ ತಾಲಿಬಾನ್ ಹೆರಥ್‌ನ್ನು ವಶಪಡಿಸಿಕೊಂಡ ನಂತರ, ಲಿಂಗ ಧೋರಣೆಗಳು ’ಮೆದು’ವಾಗಬಹುದು ಎಂದು UN ಭಾವಿಸಿತ್ತು, ಏಕೆಂದರೆ "“ತಾಲಿಬಾನ್ ಅನಂತರದಲ್ಲಿ ದಾನಿ ಸಮುದಾಯದ ಸಂಪರ್ಕವಿರುವ ಒಂದು ಜವಾಬ್ದಾರಿಯುತ ಸರ್ಕಾರವಾಗಿ ಬೆಳೆಯುವುದು” ಎಂದು ಅದು ಭಾವಿಸಿತ್ತು.[೬] ತಾಲಿಬಾನ್ ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿಯಲಿಲ್ಲ ಮತ್ತು ನೆರವಿನ ಅಮಾನತಿಗೆ ಸ್ತಬ್ಧ/ಶಾಂತವಾಗಿ ಪ್ರತಿಕ್ರಿಯಿಸಿತು.

 • 1995ರ ನವೆಂಬರ್‌ರಲ್ಲಿ, ಶಿಕ್ಷಣದಲ್ಲಿ ಪುರುಷರು ಮತ್ತು ಮಹಿಳೆಯರು ಜೊತೆಯಾಗಿರುವುದನ್ನು ನಿಷೇಧಿಸಿದ್ದು ಮಗುವಿನ ಹಕ್ಕುಗಳ ಒಡಂಬಡಿಕೆಯ ಉಲ್ಲಂಘನೆ ಎಂದು ವಾದಿಸುವ ಮೂಲಕ UNICEF ಸಂಸ್ಥೆಯು ತಾಲಿಬಾನ್ ಹಿಡಿತದಲ್ಲಿರುವ ಪ್ರದೇಶಗಳ ಎಲ್ಲಾ ಶಿಕ್ಷಣದ ನೆರವನ್ನು ತೆಗೆದುಹಾಕಿತು. 1995ರ ಬಿಜೀಂಗ್ ಮಹಿಳೆಯರ ಸಮ್ಮೇಳನದ ಪರಿಣಾಮವಾಗಿ, UNICEFನ ಈ ಕ್ರಿಯೆಯು ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಮುಖ ಸಂಸ್ಥೆಯ ರೀತಿಯಲ್ಲಿ UNICEFನ ಪಾತ್ರವನ್ನು ದೃಢಗೊಳಿಸಿತು.[೬]
 • ಮಗುವನ್ನು ನೋಡಿಕೊಳ್ಳುವವರಾದ ಮಹಿಳೆಯರೊಂದಿಗೆ ಸಂಪರ್ಕ ತುಂಬಾ ಕಷ್ಟವಾಗಿದೆ ಎಂಬ ಕಾರಣಕ್ಕೆ 1996ರಲ್ಲಿ, ಸೇವ್ ದ ಚಿಲ್ಡ್ರನ್(UK) ಸಂಸ್ಥೆ ಸಹ ಬೆಂಬಲವನ್ನು ಹಿಂದೆ ಪಡೆಯಿತು.[೬]
 • UN ಸೆಕ್ರೆಟರಿ ಜನರಲ್ ಬುರ್ಟ್ರೋಸ್ ಬುಟ್ರೋಸ್ ಗಾಲಿ ಅಫ್ಘಾನ್ ಮಹಿಳೆಯರ ಸ್ಥಿತಿಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು.[೨೮]
 • 1999ರಲ್ಲಿ, ಭಯೋತ್ಪಾದಕ ಒಸಮಾ ಬಿನ್ ಲಾಡೆನ್‌ನನ್ನು ಹಸ್ತಾಂತರ ಮಾಡಲು ತಾಲಿಬಾನ್ ನಿರಾಕರಿಸಿದ ನಂತರ US ಸೆಕ್ರೆಟರಿ ಆಫ್ ಸ್ಟೇಟ್ ಮೆಡ್‌ಲೈನ್ ಅಲ್‌ಬ್ರೈಟ್ ಸಾರ್ವಜನಿಕವಾಗಿ ಹೀಗೆ ಹೇಳಿದರು "ನಾವು ಅಫ್ಘಾನಿಸ್ತಾನದ ಮಹಿಳೆಯರು ಮತ್ತು ಬಾಲಕಿಯರ ಪರವಾಗಿ ಮಾತನಾಡುತ್ತಿದ್ದೇವೆ, ಅವರು ಬಲಿಪಶುವನ್ನಾಗಿ ಮಾಡಿದ್ದಾರೆ...ಇದು ಅಪರಾಧ ಮತ್ತು ನಾವು ಪ್ರತಿಯೊಬ್ಬರು ಇದನ್ನು ನಿಲ್ಲಿಸುವ ಜವಾಬ್ದಾರಿಯನ್ನು ಹೊಂದಿದ್ದೇವೆ."[೨೯] ಜನವರಿ 2006ರಲ್ಲಿ ಅಫ್ಘಾನಿಸ್ಥಾನದ ಮೇಲಿನ ಒಂದು ಲಂಡನ್ ಸಮ್ಮೇಳನ ಒಂದು ಇಂಟರ್‌ನ್ಯಾಷನಲ್ ಕಾಂಪ್ಯಾಕ್ಟ್‌ನ ರಚನೆಗೆ ದಾರಿ ಮಾಡಿತು, ಅದು ಮಹಿಳೆಯರನ್ನು ನಡೆಸಿಕೊಳ್ಳುವ ಬಗೆಗೆ ಸಾಕ್ಷಿಗಲ್ಲುಗಳನ್ನು ಸೇರಿಸಿತು. ಆ ಕಾಂಪ್ಯಾಕ್ಟ್ ಕೆಳಗಿನ ಅಂಶಗಳನ್ನು ಒಳಗೊಂಡಿದೆ: "ಜೆಂಡರ್:ಬೈ ಎಂಡ್-1389 (20 ಮಾರ್ಚ್ 2011): ಅಫ್ಘಾನಿಸ್ಥಾನದಲ್ಲಿನ ಮಹಿಳೆಯರಿಗಾಗಿ ರಾಷ್ಟ್ರೀಯ ಕಾರ್ಯ ಯೋಜನೆಯನ್ನು ಪೂರ್ಣವಾಗಿ ಜಾರಿಗೆ ತರುವುದು; ಮತ್ತು ಅಫ್ಘಾನಿಸ್ಥಾನದ MGDಗಳ ಜೊತೆ ಜೋಡಿಸುವುದು, ಎಲ್ಲಾ ಅಫ್ಘಾನಿಸ್ಥಾನದ ಆಡಳಿತ ಸಂಸ್ಥೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ, ಚುನಾಯಿತ ಮತ್ತು ನೇಮಿಸಿದ ಸಂಸ್ಥೆಗಳನ್ನು ಮತ್ತು ಪೌರ ಸೇವೆಯನ್ನು ಬಲಗೊಳಿಸುವುದು ಸೇರಿದೆ."[೩೦] ಆದರೂ, ಮಹಿಳೆಯರ ಉಪಚಾರ ಒಂದು ರೀತಿ ಅತೃಪ್ತ ಗುರಿ ಎಂದು ಉದಾಹರಿಸುವಾಗ ಅಫ್ಘಾನಿಸ್ಥಾನಕ್ಕೆ ಸಂಬಂಧಿಸಿದಂತೆ "ಇನ್ನೂ ಖಾಲಿ ಭರವಸೆಗಳ" ಅವಶ್ಯಕತೆ ಇಲ್ಲ ಎಂದು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ವರದಿ ಜೂನ್ 11, 2008ರಂದು ಘೋಷಿಸುತ್ತದೆ.[೩೧]

ಇದನ್ನೂ ಗಮನಿಸಿ[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

 1. ೧.೦ ೧.೧ ೧.೨ ೧.೩ ೧.೪ ೧.೫ ೧.೬ ನ್ಯಾನ್ಸಿ ಹ್ಯಾಚ್ ಡುಪ್ರಿ. ವಿಲಿಯಂ ಮೇಲೇಯಲ್ಲಿ 'ಆಫ್ಘಾನ್ ವುಮೆನ್ ಅಂಡಾರ್ ದ ತಾಲಿಬಾನ್' (2001) ISBN 0-7864-1090-6. ಫಂಡಮೆಂಟಾಲಿಸಂ ರಿಬಾರ್ನ್? ಆಫ್ಘಾನಿಸ್ತಾನ್ ಆ‍ಯ್‌೦ಡ್ ದ ತಾಲಿಬಾನ್ ಲಂಡನ್: ಹರ್ಸ್ಟ್ ಆ‍ಯ್‌೦ಡ್ ಕಂಪನಿ, ISBN 0-8147-5586-0 pp145-166.
 2. ೨.೦ ೨.೧ ೨.೨ ೨.೩ ೨.೪ ೨.೫ ೨.೬ ೨.೭ ೨.೮ ಮಾರ್ಸ್‌ಡೆನ್, ಪೀಟರ್. (1998). ದ ತಾಲಿಬಾನ್: ವಾರ್, ರಿಲಿಜಿಯನ್ ಆ‍ಯ್‌೦ಡ್ ದ ನ್ಯೂ ಆರ್ಡರ್ ಇನ್ ಆಫ್ಘಾನಿಸ್ತಾನ್ . ಲಂಡನ್: ಜೆಡ್ ಬುಕ್ಸ್ ಲಿಮಿಟೆಡ್, ISBN 1-85649-522-1 pp88-101.
 3. ೩.೦ ೩.೧ ೩.೨ ಎಮ್. ಜೆ. ಗೊಹರಿ (2000). ದ ತಾಲಿಬಾನ್: ಆ‍ಯ್‌ಸೆಂಟ್ ಟು ಪವರ್ . ಆಕ್ಸ್‌ಫರ್ಡ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ISBN 0-19-579560-1 pp. 108-110.
 4. ಸೈನೊವಿಟ್ಜ್, ರಾನ್. "ಆಫ್ಘಾನಿಸ್ತಾನ್: ಆಥರ್ ಅವೈಟ್ಸ್ ಹ್ಯಾಪಿ ಎಂಡಿಂಗ್ ಟು 'ಸೆವಿಂಗ್ ಸರ್ಕಲ್ಸ್ ಆಫ್ ಹಾರ್ಟ್'" Archived 2004-07-08 at the Wayback Machine., ರೇಡಿಯೊ ಫ್ರೀ ಯುರೋಪ್ , ಮಾರ್ಚ್ 31, 2004.
 5. ಲಂಬ್, ಕ್ರಿಸ್ಟಿನಾ. "ವುಮ್ಯಾನ್ ಪೊಯೆಟ್ 'ಸ್ಲೈನ್ ಫಾರ್ ಹರ್ ವರ್ಸ್'", ದ ಸಂಡೇ ಟೈಮ್ಸ್ , ನವೆಂಬರ್ 13, 2005.
 6. ೬.೦೦ ೬.೦೧ ೬.೦೨ ೬.೦೩ ೬.೦೪ ೬.೦೫ ೬.೦೬ ೬.೦೭ ೬.೦೮ ೬.೦೯ ೬.೧೦ ೬.೧೧ ಮೈಕೆಲ್ ಗ್ರಿಫನ್ (2001). ರೀಪಿಂಗ್ ದ ವೈರ್ಲ್‌ವಿಂಡ್ : ದ ತಾಲಿಬಾನ್ ಮೂಮೆಂಟ್ ಇನ್ ಆಫ್ಘಾನಿಸ್ತಾನ್ . ಲಂಡನ್: ಪ್ಲುಟೊ ಪ್ರೆಸ್, pp6-11/159-165.
 7. ೭.೦ ೭.೧ "ರಿಸ್ಟ್ರಿಕ್ಷನ್ಸ್ ಪ್ಲೇಸ್ಡ್ ಆನ್ ವುಮೆನ್ ಬೈ ದ ತಾಲಿಬಾನ್". Archived from the original on 2010-10-08. Retrieved 2010-01-15.
 8. ಬುಚರ್ & ಬೊಲ್ಟ್, ಡೇವಿಡ್ ಲೊಯಾನ್, pg 235
 9. "ಆಫ್ಘಾನ್ ವುಮೆನ್ ಟೆಲ್ ಟೇಲ್ಸ್ ಆಫ್ ಬ್ರುಟಾಲಿಟಿ". Archived from the original on 2001-10-08. Retrieved 2001-10-08.
 10. ೧೦.೦ ೧೦.೧ ೧೦.೨ ೧೦.೩ ಲಲಿಫಾ ಮೈ ಫಾರ್‌ಬಿಡನ್ ಫೇಸ್: ಗ್ರೋಯಿಂಗ್ ಅಪ್ ಅಂಡರ್ ದ ತಾಲಿಬಾನ್ . ಯುಕೆ: ವಿರಾಗೊ ಪ್ರೆಸ್ pp29-107.
 11. Cite error: Invalid <ref> tag; no text was provided for refs named rawa1
 12. ಯುಎನ್‌ಹೆಚ್‌ಸಿಆರ್ - ಕ್ರೊನೊಲಾಜಿ ಆಫ್ ಇವೆಂಟ್ಸ್ ಜನವರಿ 1995 - ಫೆಬ್ರುವರಿ 1997
 13. ರಷಿದ್ ತಾಲಿಬಾನ್ (2000), p.106
 14. ತಾಲಿಬಾನ್ ಸ್ಯಾಕ್ ಆಲ್ ಫೀಮೇಲ್ ಸಿವಿಲ್ ಸರ್ವೆಂಟ್ಸ್, ಟೀಚರ್ಸ್
 15. ಯುಎನ್‌ಎಫ್‌ಪಿಎ: ನ್ಯೂಸ್
 16. ಬುಚರ್ & ಬೊಲ್ಟ್, ಡೇವಿಡ್ ಲೊಯಾನ್, p243
 17. "ಆಫ್ಘಾನ್ ವುಮೆನ್ಸ್ ರೆಕ್ವೆಸ್ಟ್ ಫಾರ್ ರೆಕಾಗ್ನಿಷನ್ ಅಟ್ ದ ಯು.ಎನ್". Archived from the original on 2007-09-28. Retrieved 2010-01-15.
 18. Cite error: Invalid <ref> tag; no text was provided for refs named Rashid p.71=
 19. ವಿಲಿಯಂಸ್, ಕರೊಲ್ ಜೆ. ದ ಬ್ಯೂಟಿ ಶಾಪ್ ಬೇಕಾನ್ಸ್ ಇನ್ ಪೋಸ್ಟ್-ತಾಲಿಬಾನ್ ಕಾಬೂಲ್ , ಲಾಸ್ ಏಂಜೆಲೆಸ್ ಟೈಮ್ಸ್, ಡಿಸೆಂಬರ್ 15, 2001.
 20. ಕಿಂಗ್‌ಸ್ಟನ್, ಹೈದಿ. ಕಾಬೂಲ್ ಬ್ಯೂಟಿ ಸ್ಕೂಲ್ ಡ್ರಾಪೌಟ್, ಜೂನ್ 17, 2007.
 21. ಕಾಬೂಲ್ ಬ್ಯೂಟಿ ಸ್ಕೂಲ್- ಆಫ್ಘಾನಿಸ್ತಾನ್, ಯೂಟ್ಯೂಬ್ , ಅಕ್ಟೋಬರ್ 21, 2008.
 22. ಪಿಬಿಎಸ್, ತಾಲಿಬಾನ್ ವುಮೆನ್ Archived 2010-05-09 at the Wayback Machine., ಮಾರ್ಚ್ 6 1998
 23. http://www.rawa.org
 24. ವುಮೆನ್ ಇನ್ ಆಫ್ಘಾನಿಸ್ತಾನ್: ದ ವೈಯಲೆಷನ್ಸ್ ಕಂಟಿನ್ಯೂ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಆಕ್ಸೆಸ್ಡ್ 12/11/07
 25. ತಾಲಿಬಾನ್ ಸಾರ್ವಜನಿಕವಾಗಿ ಈ ಮಹಿಳೆಯನ್ನು ಗಲ್ಲಿಗೇರಿಸಿತು.
 26. ಯುಕೆಯ ಚಾನೆಲ್ 4 ನ್ಯೂಸ್ ಇದನ್ನು ಎತ್ತಿ ತೋರಿಸಿತ್ತು. ಪಡೆದದ್ದು 12/11/07
 27. ಜಾರ್ಮಿನಾ’ಸ್ ಸ್ಟೋರಿ
 28. ಯುನೈಟಡ್ ನೇಷನ್ಸ್ ಡೈಲಿ ಹೈಲೈಟ್ಸ್ 96-10-07
 29. ವರ್ಲ್ಡ್: ಸೌಥ್ ಏಷ್ಯಾ ಆಲ್‌ಬ್ರೈಟ್ ವಾರ್ನ್ಸ್ ತಾಲೆಬಾನ್ ಆನ್ ವುಮೆನ್ ಬಿಬಿಸಿ, ಅಕ್ಸೆಸ್ಡ್ 12/11/07
 30. "ಆರ್ಕೈವ್ ನಕಲು" (PDF). Archived from the original (PDF) on 2010-02-05. Retrieved 2010-01-15.
 31. https://archive.is/20120802061608/www.amnesty.org/en/for-media/press-releases/afghanistan-no-more-empty-promises-paris-20080611

ಉಲ್ಲೇಖಗಳು[ಬದಲಾಯಿಸಿ]

ಹೆಚ್ಚಿನ ಓದಿಗೆ[ಬದಲಾಯಿಸಿ]