ವಿಷಯಕ್ಕೆ ಹೋಗು

ಬುರ್ಕಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬುರ್ಕಾ, ಅವಗುಂಠನ ಅಥವಾ ಫರ್ದಾ ಎನ್ನುವುದು ಮುಸ್ಲಿಂ ಮಹಿಳೆಯರು ಬಳಸುವ ವಸ್ತ್ರವಾಗಿದೆ. ಬುರ್ಕಾ ಇತರ ವಸ್ತ್ರಗಳಂತೆ ಕೇವಲ ವಸ್ತ್ರವಲ್ಲ ಅದು ಇಸ್ಲಾಂ ಧರ್ಮದ ಧಾರ್ಮಿಕ ನಂಬಿಕೆಯ ಒಂದು ಭಾಗ. ಇಸ್ಲಾಂ ಧರ್ಮವನ್ನು ಅನುಸರಿಸುವ ಮುಸ್ಲಿಂ ಮಹಿಳೆಯರು ಮನೆಯಿಂದ ಹೊರಗೆ ಹೋಗುವ ಸಂದರ್ಭಗಳಲ್ಲಿ ಬುರ್ಕಾವನ್ನು ಧರಿಸುತ್ತಾರೆ. ಬುರ್ಕಾ ಎಲ್ಲಾ ಕೆಟ್ಟ ದೃಷ್ಠಿಯಿಂದ ಮಹಿಳೆಯರನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಇಸ್ಲಾಂ ಧರ್ಮದಲ್ಲಿದೆ. ಮುಸ್ಲಿಂ ಮಹಿಳೆಯರು ಬುರ್ಕಾ ಧರಿಸುವುದು ಇಸ್ಲಾಮಿನ ಕಡ್ಡಾಯ ನಿಯಮಗಳಲ್ಲಿ ಒಂದಾಗಿದೆ. ಮಹಿಳೆಯರು ತಮ್ಮ ಎರಡು ಕಣ್ಣುಗಳು ಮತ್ತು ಮುಂಗೈಗಳನ್ನು ಹೊರತು ಇತರ ಯಾವುದೇ ಅಂಗಾಗಳನ್ನು ತನ್ನ ಪತಿ, ಪೋಷಕರು ಮತ್ತು ಸಹೋದರರನ್ನು ಹೊರತು ಪಡಿಸಿ ಇತರ ಯಾವುದೇ ಅನ್ಯ ಪುರುಷನಿಗೆ ಪ್ರದರ್ಶಿಸಬಾರದೆಂಬ ನಿಯಮ ಇಸ್ಲಾಮಿನಲ್ಲಿದೆ. ಅದಕ್ಕಾಗಿ ಸಂಪೂರ್ಣ ಮೈಮುಚ್ಚುವ ವಸ್ತ್ರ ಧರಿಸಬೇಕೆಂಬ ನಿಯಮವಿದೆ. ಈ ನಿಟ್ಟಿನಲ್ಲಿ ಬುರ್ಕಾ ವ್ಯವಸ್ಥೆ ಪ್ರಾರಂಭವಾಯಿತು.

ಇತಿಹಾಸ

[ಬದಲಾಯಿಸಿ]

ಬುರ್ಕಾ ಅಥವಾ ಫರ್ದಾ ಎನ್ನುವುದು ದಕ್ಷಿಣ ಏಷ್ಯಾದಲ್ಲಿ ಚಾಲ್ತಿಗೆ ಬಂದ ಪದ. ಮುಸ್ಲಿಂ ಸಮುದಾಯಗಳೊಂದಿಗೆ ಸಂಬಂಧ ಹೊಂದಿರುವ ಸ್ತ್ರೀ ಧಾರ್ಮಿಕ ಮತ್ತು ಸಾಮಾಜಿಕ ಅಭ್ಯಾಸದ ಬಗ್ಗೆ ವಿವರಿಸಲು ಮುಖ್ಯವಾಗಿ ದಕ್ಷಿಣ ಏಷ್ಯಾದಲ್ಲಿ{ಪರ್ಷಿಯನ್ :ಪರದೆ ಎಂಬ ಅರ್ಥವನ್ನು]  ಬುರ್ಕಾ ಅಥವಾ ಫರ್ದಾ ಎಂಬ ಪದವನ್ನು ಬಳಸಲಾಗುತ್ತದೆ. ಇಸ್ಲಾಮಿಕ್ ಪ್ರಭಾವದಿಂದಾಗಿ, ದಕ್ಷಿಣ ಏಷ್ಯಾದ ಉತ್ತರ ಭಾಗದ ಕೆಲವು ಹಿಂದೂ ಸಮುದಾಯಗಳಲ್ಲೂ ಇದು ಪ್ರಚಲಿತವಾಗಿದೆ. ಇದು ಎರಡು ಪ್ರಕಾರಗಳನ್ನು ತೆಗೆದುಕೊಳ್ಳುತ್ತದೆ. ಲಿಂಗಗಳ ಭೌತಿಕ ಪ್ರತ್ಯೇಕತೆ ಮತ್ತು ಮಹಿಳೆಯರು ತಮ್ಮ ಧರ್ಮವನ್ನು ಆವರಿಸಿರುವಂತೆ ಮತ್ತು ಅವರ ರೂಪವನ್ನು ಮರೆಮಾಚುವ ಅವಶ್ಯಕತೆ. ಫರ್ದಾವನ್ನು ಬಳಸುವ ಮಹಿಳೆಯರನ್ನು ಪಾರ್ಡನಾಶಿನ್ ಅಥವಾ ಪರ್ದಾನಿಷಿನ್ ಎಂದು ಉಲ್ಲೇಖಿಸಬಹುದು. ಕಟ್ಟಡಗಳ ಒಳಗೆ ಭೌತಿಕ ಪ್ರತ್ಯೇಕತೆ ಗೋಡೆಗಳು, ಪರದೆಗಳು ಮತ್ತು ಪರದೆಯ ನ್ಯಾಯಯುತ ಬಳಕೆಯಿಂದ ಸಾಧಿಸಲ್ಪಡುತ್ತದೆ. ಒಬ್ಬ ಮಹಿಳೆ ಬುರ್ಕಾ ಅಥವಾ ಫರ್ದಾ ಬಳಸುವಿಕೆ ಸಾಮಾನ್ಯಾಗಿ ತನ್ನ ಮನೆಯ ಹೊರಗೆ ತನ್ನ ವೈಯುಕ್ತಿಕ, ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳನ್ನು ನಿರ್ಬಂಧಿಸುತ್ತದೆ. ಉತ್ತರ ಭಾರತದ ಕೆಲವು ಕಡೆಗಳಲ್ಲಿ ಹಿಂದೂ ಮಹಿಳೆಯರು ಮುಸ್ಲಿಂ ಮಹಿಳೆಯರು ಬುರ್ಕಾ ಧರಿಸುವಂತೆ ಸಂಪೂರ್ಣವಾಗಿ ತಮ್ಮ ಅಂಗಾಗಳನ್ನು ಮುಚ್ಚುವ ವಸ್ತ್ರಗಳನ್ನು ಧರಿಸುತ್ತಾರೆ. ಪ್ರಾಚೀನಾ ಸಮಾಜದಲ್ಲಿ ಪ್ರಪಂಚದಾದ್ಯಂತ ಮಹಿಳೆಯರ ಸಾಮಾಜಿಕ ಚಲನೆ ಮತ್ತು ನಡವಳಿಕೆಯನ್ನು  ನಿರ್ಬಂಧಿಸಲಾಗಿದೆ. ಆದರೆ ಭಾರತದಲ್ಲಿ ಇಸ್ಲಾಂ ಧರ್ಮ ಆಗಮನದ ಅಭ್ಯಾಸಗಳು ಈ ಹಿಂದೂ ಪದ್ದತಿಗಳನ್ನು ತೀವ್ರಗೊಳಿಸಿತು. ಮತ್ತು 19ನೇ ಶತಮಾನದ ವೇಳೆಗೆ ಬುರ್ಕಾ ಆಥವಾ ಫರ್ದಾ ಉನ್ನತ ಜಾತಿ ಹಿಂದೂ ಮತ್ತು ಭಾರತದಾದ್ಯಂತ ಉತ್ಕೃಷ್ಠ ಸಮುದಾಯಗಳನ್ನು ಆವರಿಸಿಕೊಂಡಿತು. ಬುರ್ಕಾ ಅಥವಾ ಫರ್ದಾವು ಇಸ್ಲಾಂನೊಂದಿಗೆ ಸಾಮಾನ್ಯವಾಗಿ ಸಂಬಂಧ ಹೊಂದಿದ್ದರೂ, ಇಸ್ಲಾಂ ಧರ್ಮವನ್ನು ಮುಳುಗಿಸುವ ಮತ್ತು ಪ್ರತ್ಯೇಕಿಸುವಿಕೆಯು ಇಸ್ಲಾಂನ ಮುಂಚೆಯೇ ಬುರ್ಕಾ ಚಾಲ್ತಿಯಲ್ಲಿ ಇದೆ ಎಂದು ಅನೇಕ ವಿದ್ವಾಂಸರು ವಾದಿಸುತ್ತಾರೆ. ಮಧ್ಯಪ್ರಾಚ್ಯದಲ್ಲಿ ಡ್ರೂಜ್, ಕ್ರಿಶ್ಚಿಯನ್ ಮತ್ತು ಯಹೂದಿ ಸಮುದಾಯಗಳಂತಹ ವಿವಿಧ ಗುಂಪುಗಳಲ್ಲಿ  ಈ ಆಚರಣೆಗಳು ಕಂಡು ಬಂದಿವೆ. ಉದಾಹರಣೆಗೆ ಬುರ್ಕಾವು ಅರಬಿಯಾದಲ್ಲಿ ಇಸ್ಲಾಂನಲ್ಲಿ ಅಸ್ತಿತ್ವದಲ್ಲಿತ್ತು ಆದರೆ ಇಸ್ಲಾಂನ ಆಗಮನದ ಮೊದಲು ಬ್ಯಾಬಿಲೋನಿಯ, ಪರ್ಷಿಯನ್ ಮತ್ತು ಬ್ಶೆಝಾಂಟೈನ್‍ನ  ಸಾಮ್ರಾಜ್ಯಶಾಹಿಗಳು ಅರಬ್ ಸಾಮ್ರಾಜ್ಯದ ವಿಸ್ತರಣೆಯ ಸಂದರ್ಭದಲ್ಲಿ ಮೇಲ್ವರ್ಗದ ಮಹಿಳೆಯರ ಚಲನವಲನಗಳ ಮೇಲೆ ನಿಗಾ ಇಡಲು ಬುರ್ಕಾ ಪದ್ದತಿಯನ್ನು ಜಾರಿಗೆ ತಂದಿದ್ದರು ಎಂಬುವುದು ಕೆಲವು ಇತಿಹಾಸಕಾರರ ವಾದ. 7ನೇ ಶತಮಾನದಲ್ಲಿ ಇರಾಕ್ನಲ್ಲಿ ಇಸ್ಲಾಂ ಧರ್ಮ ಪ್ರಭಲಗೊಂಡಾಗ ಚಾಲ್ತಿಯಲ್ಲಿದ್ದ ಇತರ ಧಾರ್ಮಿಕ ಅಚರಣೆಗಳ ಸಾಲಿನಲ್ಲಿ ಬುರ್ಕಾ ಕೂಡ ಅತ್ಯಂತ ಪ್ರಾಮುಖ್ಯತೆಯನ್ನು ಪಡೆಯಿತು. ಇತಿಹಾಸಕಾರರ ಪ್ರಕಾರ ಬುರ್ಕಾ ಪದ್ದತಿ ಪ್ರಾರಂಭವಾಗಿದ್ದು ಪರ್ಶಿಯಾ ರಾಷ್ಟ್ರದಿಂದಾಗಿದೆ. ನಂತರ ಅದು ಇಸ್ಲಾಮಿಕ್ ಆಢಳಿತವಿರುವ ಜಗತ್ತಿನ ಎಲ್ಲಾ ಪ್ರದೇಶಗಳಿಗೂ ಹಬ್ಬಿತು. ಉತ್ತರ ಭಾರತದಲ್ಲಿ ಮೊಗಲ್ ಸಾಮ್ರಾಜ್ಯದ ಆಢಳಿತಾವಧಿಯಲ್ಲಿ ಇದು ಹಿಂದುಳಿದ ಕೆಲವು ಹಿಂದೂ ಸಮುದಾಯಗಳಿಗೂ  ಹಬ್ಬಿತು. ಹಲವಾರು ಐತಿಹಾಸಿಕ, ಸಾಮಾಜಿಕ, ವ್ಶೆಜ್ಞಾನಿಕ ಕಾರಣಗಳ ಹೊರತಾಗಿಯೂ ಬುರ್ಕಾ ಇಸ್ಲಾಂ ಧರ್ಮದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಜಗತ್ತಿನ ಎಲ್ಲಾ ಇಸ್ಲಾಮಿಕ್ ಮತ್ತು ಇತರ ರಾಷ್ಟ್ರಗಳಲ್ಲಿ ಅಂಗೀಕಾರಗೊಂಡ ಮಹಿಳೆಯರ ಒಂದು ವಸ್ತ್ರ ಪದ್ದತಿಯಾಗಿದೆ. https://iramz.wordpress.com/2006/10/05/the-evolution-of-the-burqa/ಮಹಿಳೆಯರನ್ನು ಕಿರುಕುಳಗೊಳಿಸದಂತೆ ರಕ್ಷಿಸಲು ಬುರ್ಕಾವನ್ನು ಆರಂಭದಲ್ಲಿ ವಿನ್ಯಾಸಗೊಳಿಸಲಾಗಿತ್ತು ಎಂದು ಕೆಲವು ವಿದ್ವಾಂಸರು ವಾದಿಸುತ್ತಾರೆ. ಆದರೆ ನಂತರ ಈ ಆಚರಣೆಗಳು ಮಹಿಳೆಯರನ್ನು ಆಧೀನಗೊಳಿಸುವ ಮತ್ತು ಅವರ ಚಲನಶೀಲತೆಯ ಮತ್ತು ಸ್ವಾತಂತ್ರ್ಯವನ್ನು ಮಿತಿಗೊಳಿಸುವ ಪ್ರಯತ್ನಗಳನ್ನು ಸಮರ್ಥಿಸುವ  ಮಾರ್ಗವಾಯಿತು. ಸ್ತ್ರೀಯ ನಡವಳಿಕೆಯನ್ನು ನಿಯಂತ್ರಿಸಲು ಧಾರ್ಮಿಕ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ ಎಂಬುವುದು ಕೆಲವರ ವಾದ. ಬುರ್ಕಾವನ್ನು ಬಳಸುವವರು ಗೌರವ ಮತ್ತು ಘನತೆಯ ಸಂಕೇತವೆಂದು ಪರಿಗಣಿಸುತ್ತಾರೆ. ದೈಹಿಕ ಸೌಂಧರ್ಯಕ್ಕಿಂತ ಹೆಚ್ಚಾಗಿ ಆಂತರಿಕ ಸೌಂದರ್ಯದಿಂದ ಮಹಿಳೆಯರನ್ನು  ನಿರ್ಣಯಿಸಲು ಅನುಮತಿಸುವ ಅಭ್ಯಾಸವಾಗಿ ಇದು ಕಂಡುಬರುತ್ತದೆ.[೧]

ಆಧುನಿಕ ಯುಗದಲ್ಲಿ ಬುರ್ಕಾ

[ಬದಲಾಯಿಸಿ]

ಇದು ಪ್ಯಾಷನ್ ಯುಗ. ಸಾಂಪ್ರದಾಯಿಕ ಉಡುಗೆ ತೊಡುಗೆಗಳೂ ಇದಕ್ಕೆ ಹೊರತಾಗಿಲ್ಲ. ಮುಸ್ಲಿಂ ಮಹಿಳೆಯರು ಧರಿಸುವ ಬುರ್ಕಾ ಈಗ ಧಾರ್ಮಿಕ ಉಡುಗೆಯಷ್ಟೆ ಆಗಿ ಉಳಿದಿಲ್ಲ. ಬೇರೆ ಉಡುಪುಗುಳ ರೀತಿಯಲ್ಲಿಯೇ ಆಧುನಿಕರನಗೊಂಡಿದೆ. ಕಪ್ಪು ಬಣ್ಣದ, ದೇಹದ ಅಳತೆಗಿಂತ ಅಗಲವಾದ ಎಲ್ಲಾ ವಯಸ್ಸಿನವರೂ ಧರಿಸುತ್ತಿದ್ದ ಒಂದೇ ಮಾದರಿಯ ಬುರ್ಕಾ ಈಗ ನೂರಾರು ವಿನ್ಯಾಸಗಳಲ್ಲಿ ಸಿಗುತ್ತಿವೆ. ಸಲ್ವಾರ್ ಕಮೀಜ್‍ನಂತೆ ದೇಹದ ಅಳತೆಗೆ ತಕ್ಕುದಾದ ರೀತಿಯಲ್ಲಿ ವಿನ್ಯಾಸ ಮಾಡಿದ ಬುರ್ಕಾಗಳೂ ಸಿಗುತ್ತಿವೆ. ಬುರ್ಕಾದ ವಿನ್ಯಾಸಕ್ಕೆ ದುಭಾರಿ ಸ್ವರೋಸ್ಕಿ ಹರಳು ಬಳಸಲಾಗುತ್ತಿದೆ.[೨] ಆಭರಣಗಳಿಗೆ ಬಳಸುವ ಬಣ್ಣಬಣ್ಣದ ಸ್ವರೋಸ್ಕಿ ಹರಳು ಬುರ್ಕಾಗಳಿಗೆ ಶ್ರೀಮಂತ ಸ್ಪರ್ಶ ನೀಡುತ್ತಿದೆ. ಎಂಬ್ರಾಯಿಡರಿಯಿಂದ ಆರಂಭವಾದ ಬುರ್ಕಾದ ವಿನ್ಯಾಸ ಹರಳುಗಳ ಕುಸುರಿ ಅಲಂಕಾರದವರೆಗೆ ಮುಂದುವರೆದು, ಈಗ ಪ್ರಿಂಟೆಂಡ್ ಬಟ್ಟೆಗಳಲ್ಲಿ ಬುರ್ಕಾ ಹೊಲಿಯುವುದು ಹೊಸ ಟ್ರೆಂಡ್ ಎನಿಸಿದೆ. ಆಕರ್ಷಕ ಪ್ರಿಂಟ್ ಇರುವ ಬಟ್ಟೆಗಳಿಂದ ಸಿದ್ದಪಡಿಸಲಾಗುವ ಬುರ್ಕಾಗಳಿಗೆ ಕುಸುರಿಯ ಹಂಗಿಲ್ಲ. ಸದ್ಯ ಸಡಿಲವಾದ ವಿನ್ಯಾಸದ, ಅಗಲವಾದ ತೋಳುಗಳಿರುವ[ಕಫ್ತಾನ್ ಶೈಲಿ] ಬುರ್ಕಾಗಳು ಹೆಚ್ಚು ಚಾಲ್ತಿಗೆ ಬಂದಿವೆ.[೩]

ಬುರ್ಕಾದ ಬೆಲೆ

[ಬದಲಾಯಿಸಿ]

ಬುರ್ಕಾಗೆ ಬಳಸುವ ಬಟ್ಟೆಯ ದರ ಮ್ಭಿಟರ್‍ಗೆ ಕನಿಷ್ಠ ರೂ500ರಿಂದ ಆರಂಭ. ಯಾವುದೇ ವಿನ್ಯಾಸ ಕುಸುರಿ ಇಲ್ಲದ ಸಾಮಾನ್ಯ ಬುರ್ಕಾ ಆರಂಭಿಕ ಬೆಲೆ ರೂ 1,500 ಇದೆ. ದುಭಾರಿ ಬಟ್ಟೆ ಮತ್ತು ಕುಸುರಿ ವಿನ್ಯಾಸವಿರುವ ಬುರ್ಕಾಗಳಿಗೆ ರೂ 70 ಸಾವಿರದವರೆಗೂ ಬೆಲೆ ಇದೆ.

ಬುರ್ಕಾದ ಬಣ್ಣಗಳು

[ಬದಲಾಯಿಸಿ]

ಕಪ್ಪು ಬಣ್ಣದಲ್ಲಿ ಮಾತ್ರಾ ಸಿಗುತ್ತಿದ್ದ ಬುರ್ಕಾ ಈಗ ಹಲವು ಬಣ್ಣಗಳಲ್ಲಿ ಸಿಗುತ್ತಿವೆ. ಕೆನೆ ಬಣ್ಣ, ನೇರಳೆ,ನೀಲಿ, ಗುಲಾಬಿ, ಕಂದು ಬಣ್ಣಗಳಲ್ಲಿ ಆಕರ್ಷಕ ವಿನ್ಯಾಸಗಳಲ್ಲಿ ಸಿಗುತ್ತಿವೆ. ಭಿನ್ನ ಬಣ್ಣಗಳ ಬಟ್ಟೆಗಳನ್ನು ಬಳಸಿ ಪ್ಯಾಚ್‍ವರ್ಕ್ ಮಾಡಿದ ಬುರ್ಕಾ ಆಧುನಿಕ ಪ್ರಯೋಗವಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. https://www.encyclopedia.com/sports-and-everyday-life/fashion-and-clothing/clothing-jewelry-and-personal-adornment/burka
  2. https://www.slideshare.net/cjmcd/the-history-of-the-burqa
  3. https://iramz.wordpress.com/2006/10/05/the-evolution-of-the-burqa/
"https://kn.wikipedia.org/w/index.php?title=ಬುರ್ಕಾ&oldid=1002855" ಇಂದ ಪಡೆಯಲ್ಪಟ್ಟಿದೆ