ವಿಷಯಕ್ಕೆ ಹೋಗು

ಸ್ತಂಭ ವರ್ಣರೇಖನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೈಯಿಂದ ನಡೆಸುವ ಸ್ತಂಭ ವರ್ಣರೇಖನಕ್ಕೆ ಸಂಬಂಧಿಸಿದ ವಿಶಿಷ್ಟ ಸಜ್ಜಿಕೆ
1950ರ ದಶಕದಲ್ಲಿ ಸ್ತಂಭ ವರ್ಣರೇಖನವನ್ನು ಬಳಸುತ್ತಿರುವ ಓರ್ವ ರಸಾಯನಶಾಸ್ತ್ರಜ್ಞ. ಎರ್ಲೆನ್‌ಮೆಯೆರ್‌‌ ಕೋಶಗಳು ನೆಲದ ಮೇಲಿವೆ.

ಸ್ತಂಭ ವರ್ಣರೇಖನ ಎಂಬುದು ರಸಾಯನಶಾಸ್ತ್ರದಲ್ಲಿನ ಒಂದು ಶುದ್ಧೀಕರಣ ವಿಧಾನವಾಗಿದ್ದು, ಸಂಯುಕ್ತಗಳ ಮಿಶ್ರಣಗಳಿಂದ ಪ್ರತ್ಯೇಕ ಲಕ್ಷಣವುಳ್ಳ ರಾಸಾಯನಿಕ ಸಂಯುಕ್ತಗಳನ್ನು ಶುದ್ಧೀಕರಿಸಲು ಈ ವಿಧಾನವನ್ನು ಬಳಸಲಾಗುತ್ತದೆ. ಮೈಕ್ರೋಗ್ರಾಂಗಳಿಂದ ಕಿಲೋಗ್ರಾಂಗಳವರೆಗಿನ ಪ್ರಮಾಣಗಳಲ್ಲಿರುವ ಪೂರ್ವಭಾವಿ ಅನ್ವಯಿಕೆಗಳಿಗೆ ಸಂಬಂಧಿಸಿದಂತೆ ಇದನ್ನು ಅನೇಕವೇಳೆ ಬಳಸಲಾಗುತ್ತದೆ.

ಶಿಷ್ಟರೀತಿಯ ಪೂರ್ವಭಾವಿ ವರ್ಣರೇಖನ ಸ್ತಂಭವು ಒಂದು ಗಾಜಿನ ಕೊಳವೆಯಾಗಿದ್ದು, 3 ಮಿ.ಮೀ.ನಿಂದ 50 ಮಿ.ಮೀ.ವರೆಗಿನ ಒಂದು ವ್ಯಾಸ ಹಾಗೂ 50 ಸೆಂ.ಮೀ.ನಿಂದ 1 ಮೀಟರ್‌ವರೆಗಿರುವ ಒಂದು ಎತ್ತರವನ್ನು ಹಾಗೂ ಕೆಳಭಾಗದಲ್ಲಿ ಒಂದು ನಲ್ಲಿಯನ್ನು ಹೊಂದಿರುತ್ತದೆ. ಸ್ತಂಭವೊಂದನ್ನು ಸಿದ್ಧಪಡಿಸಲು ಸಾಮಾನ್ಯವಾಗಿ ಎರಡು ವಿಧಾನಗಳನ್ನು ಬಳಸಲಾಗುತ್ತದೆ; ಶುಷ್ಕವಾದ ವಿಧಾನ, ಹಾಗೂ ತೇವವಾದ ವಿಧಾನ. ಶುಷ್ಕವಾದ ವಿಧಾನಕ್ಕೆ ಸಂಬಂಧಿಸಿದಂತೆ, ಸ್ತಂಭವನ್ನು ಮೊದಲಿಗೆ ಶುಷ್ಕ ಸ್ಥಿರ ಪ್ರಾವಸ್ಥೆ ಪುಡಿಯೊಂದಿಗೆ ತುಂಬಿಸಲಾಗುತ್ತದೆ, ಇದಾದ ನಂತರ ಚಲನಶೀಲ ಪ್ರಾವಸ್ಥೆಯ ಸೇರ್ಪಡೆ ಮಾಡಿ, ಸ್ತಂಭವು ಸಂಪೂರ್ಣವಾಗಿ ತೇವವಾಗುವವರೆಗೂ ಇದನ್ನು ಸ್ತಂಭದ ಮೂಲಕ ರಭಸದಿಂದ ನೀರಿನಂತೆ ಹರಿಸಲಾಗುತ್ತದೆ, ಮತ್ತು ಈ ಹಂತದಿಂದ ಮುಂದಕ್ಕೆ ಸ್ತಂಭವು ಯಾವ ಹಂತದಲ್ಲೂ ಶುಷ್ಕಸ್ಥಿತಿಯಲ್ಲಿ ನಡೆಯದಂತೆ ಅನುವುಮಾಡಿಕೊಡಲಾಗುತ್ತದೆ. ತೇವವಾದ ವಿಧಾನಕ್ಕೆ ಸಂಬಂಧಿಸಿದಂತೆ, ಸ್ಥಿರ ಪ್ರಾವಸ್ಥೆ ಪುಡಿಯೊಂದಿಗೆ ಪ್ರೋದ್ಧಾವಕ ದ್ರವವನ್ನು ಬೆರೆಸಿ ಒಂದು ತಿಳಿಕೆಸರನ್ನು ಸಿದ್ಧಪಡಿಸಲಾಗುತ್ತದೆ ಹಾಗೂ ಸ್ತಂಭದೊಳಗೆ ಅದನ್ನು ಜಾಗರೂಕತೆಯಿಂದ ಸುರಿಯಲಾಗುತ್ತದೆ. ಈ ಸಂದರ್ಭದಲ್ಲಿ ಗಾಳಿಗುಳ್ಳೆಗಳು ಉಂಟಾಗುವುದನ್ನು ತಡೆಯಲು ಎಚ್ಚರಿಕೆ ವಹಿಸಬೇಕಾಗುತ್ತದೆ. ಕಾರ್ಬನಿಕ ಮೂಲದ್ರವ್ಯದ ಒಂದು ದ್ರಾವಣವನ್ನು ಪಿಪೆಟ್ಟನ್ನು ಬಳಸಿಕೊಂಡು ಸ್ಥಿರ ಪ್ರಾವಸ್ಥೆಯ ತುದಿಯ ಮೇಲೆ ವರ್ಗಾಯಿಸಲಾಗುತ್ತದೆ. ಈ ಪದರವು ತನ್ನ ತುದಿಯಲ್ಲಿ ಸಾಮಾನ್ಯವಾಗಿ ಮರಳಿನ ಸಣ್ಣ ಪದರ ಅಥವಾ ಹತ್ತಿ ಅಥವಾ ಗಾಜಿನೆಳೆಗಳನ್ನು ಹೊಂದಿರುತ್ತದೆ. ಹೊಸದಾಗಿ ಸೇರ್ಪಡೆ ಮಾಡಲಾದ ಪ್ರೋದ್ಧಾವಕ ದ್ರವದ ವೇಗದಿಂದ ಕಾರ್ಬನಿಕ ಪದರದ ಆಕಾರವನ್ನು ರಕ್ಷಿಸಲು ಈ ವ್ಯವಸ್ಥೆ ಮಾಡಲಾಗಿರುತ್ತದೆ. ಕಾರ್ಬನಿಕ ಮೂಲದ್ರವ್ಯವನ್ನು ಮುಂದಕ್ಕೆ ತಳ್ಳಲು ಪ್ರೋದ್ಧಾವಕ ದ್ರವವನ್ನು ನಿಧಾನವಾಗಿ ಸ್ತಂಭದ ಮೂಲಕ ಹಾಯಿಸಲಾಗುತ್ತದೆ. ಅನೇಕವೇಳೆ ಒಂದು ಗೋಲಾಕಾರದ ಪ್ರೋದ್ಧಾವಕ ದ್ರವ ಕೋಶವನ್ನು ಅಥವಾ ಪ್ರೋದ್ಧಾವಕ ದ್ರವ-ತುಂಬಿಸಿ, ಬಿರಡೆ ಹಾಕಲ್ಪಟ್ಟ ಒಂದು ಪ್ರತ್ಯೇಕಿಸುವ ಲಾಳಿಕೆಯನ್ನು ಸ್ತಂಭದ ತುದಿಯ ಮೇಲೆ ಇರಿಸಲಾಗಿರುತ್ತದೆ.

ಪ್ರತ್ಯೇಕ ಘಟಕಗಳು ಸ್ಥಿರ ಪ್ರಾವಸ್ಥೆಯಿಂದ ವಿಭಿನ್ನವಾಗಿ ಹಿಡಿದಿಡಲ್ಪಟ್ಟಿರುತ್ತವೆ ಮತ್ತು ಪ್ರೋದ್ಧಾವಕ ದ್ರವದೊಂದಿಗೆ ವಿಭಿನ್ನ ವೇಗಗಳಲ್ಲಿ ಸ್ತಂಭದ ಮೂಲಕ ಅವು ಓಡುತ್ತಿರುವಾಗ ಒಂದರಿಂದ ಒಂದು ಪ್ರತ್ಯೇಕವಾಗಿರುತ್ತವೆ. ಸ್ತಂಭದ ಕೊನೆಯಲ್ಲಿ ಅವು ಒಂದಾಗಿ ಒಮ್ಮೆಗೇ ಪ್ರೋದ್ಧಾವಿಸುತ್ತವೆ. ಸಂಪೂರ್ಣ ವರ್ಣರೇಖನ ಪ್ರಕ್ರಿಯೆಯ ಅವಧಿಯಲ್ಲಿ ಅಂಶಗಳ ಒಂದು ಸರಣಿಯಲ್ಲಿ ಪ್ರೋದ್ಧಾವಕ ದ್ರವವು ಸಂಗರಹಿಸಲ್ಪಡುತ್ತದೆ. ಪ್ರೋದ್ಧಾವಕ ದ್ರವ ಹರಿವಿನ ಸಂಯೋಜನೆಯನ್ನು ನಿಯಂತ್ರಿಸಲು ಸಾಧ್ಯವಿದೆ ಮತ್ತು ಕರಗಿರುವ ಸಂಯುಕ್ತಗಳಿಗೆ ಸಂಬಂಧಿಸಿದಂತೆ ಪ್ರತಿ ಅಂಶವನ್ನೂ ವಿಶ್ಲೇಷಿಸಲಾಗುತ್ತದೆ, ಉದಾಹರಣೆಗೆ, ವಿಶ್ಲೇಷಕ ವರ್ಣರೇಖನ, UV ಹೀರಿಕೆ, ಅಥವಾ ಪ್ರತಿದೀಪ್ತಿಯಿಂದ ಇದನ್ನು ಕೈಗೊಳ್ಳಲಾಗುತ್ತದೆ. ಚಲಿಸುತ್ತಿರುವ ಪಟ್ಟೆಗಳ ರೀತಿಯಲ್ಲಿ ಕಾಣುವ ವರ್ಣವಿಶಿಷ್ಟ ಸಂಯುಕ್ತಗಳನ್ನು (ಅಥವಾ UV ದೀಪದ ನೆರವಿನೊಂದಿಗೆ ಪ್ರತಿದೀಪಕ ಸಂಯುಕ್ತಗಳನ್ನು) ಗಾಜಿನ ಗೋಡೆಯ ಮೂಲಕ ನೋಡಲು ಸಾಧ್ಯವಿದೆ.


ಸ್ಥೂಲ ಅವಲೋಕನ

[ಬದಲಾಯಿಸಿ]
ಹಂತಗಳ ಒಂದು ಸರಣಿಯಿಂದ ಸ್ತಂಭ ವರ್ಣರೇಖನವು ಮುಂದುವರಿಯುತ್ತದೆ.

ಸ್ಥಿರ ಸ್ಥಿತಿ

[ಬದಲಾಯಿಸಿ]

ಸ್ತಂಭ ವರ್ಣರೇಖನದಲ್ಲಿನ ಸ್ಥಿರ ಪ್ರಾವಸ್ಥೆ ಅಥವಾ ಅಧಿಚೂಷಕ ವು ಒಂದು ಘನವಸ್ತುವಾಗಿದೆ. ಜಲಸಂಯೋಜಿತ ಸಿಲಿಕವು ಸ್ತಂಭ ವರ್ಣರೇಖನಕ್ಕೆ ಸಂಬಂಧಿಸಿದ ಅತ್ಯಂತ ಸಾಮಾನ್ಯ ಸ್ಥಿರ ಪ್ರಾವಸ್ಥೆಯಾಗಿದ್ದು, ಇದರ ನಂತರದ ಸ್ಥಾನವನ್ನು ಅಲ್ಯೂಮಿನಾ ಆಕ್ರಮಿಸಿಕೊಂಡಿದೆ. ಸೆಲ್ಯುಲೋಸು ಪುಡಿಯನ್ನು ಹಿಂದೆಲ್ಲಾ ಅನೇಕ ವೇಳೆ ಬಳಸಲಾಗಿದೆ. ಇರುವ ಇತರ ಸಂಭವನೀಯತೆಗಳಲ್ಲಿ ಅಯಾನು ವಿನಿಮಯ ವರ್ಣರೇಖನ, ಹಿಂಚಲಿತ-ಪ್ರಾವಸ್ಥೆ ವರ್ಣರೇಖನ (ರಿವರ್ಸ್‌ಡ್‌ ಫೇಸ್-‌RP), ಆಕರ್ಷಣ ಬಲದ ವರ್ಣರೇಖನ or ವಿಸ್ತರಿತ ತಳಹದಿಯ ಅಧಿಚೂಷಣ (ಎಕ್ಸ್‌ಪ್ಯಾಂಡೆಡ್‌ ಬೆಡ್‌ ಅಡ್ಸಾರ್ಪ್ಷನ್‌-EBA) ಮೊದಲಾದವು ಸೇರಿವೆ. ಸ್ಥಿರ ಪ್ರಾವಸ್ಥೆಗಳು ಸಾಮಾನ್ಯವಾಗಿ ನಯವಾಗಿ ಪುಡಿಮಾಡಿದ ಪುಡಿಗಳಾಗಿರುತ್ತವೆ ಅಥವಾ ಕಲಿಲ ದ್ರಾವಣಗಳಾಗಿರುತ್ತವೆ ಮತ್ತು/ಅಥವಾ ಒಂದು ವರ್ಧಿಸಲ್ಪಟ್ಟ ಮೇಲ್ಮೈಗೆ ಸಂಬಂಧಿಸಿದಂತೆ ಅವು ಸೂಕ್ಷ್ಮ ರಂಧ್ರಗಳಿಂದ ಕೂಡಿದವಾಗಿರುತ್ತವೆ. ಆದರೂ ಸಹ EBAಯಲ್ಲಿ ಒಂದು ದ್ರವೀಕರಿಸಲ್ಪಟ್ಟ ತಳಹದಿಯನ್ನು ಬಳಸಲಾಗುತ್ತದೆ.'

ಚಲನಶೀಲ ಪ್ರಾವಸ್ಥೆ (ಪ್ರೋದ್ಧಾವಕ ದ್ರವ)

[ಬದಲಾಯಿಸಿ]

ಚಲನಶೀಲ ಪ್ರಾವಸ್ಥೆ ಅಥವಾ ಪ್ರೋದ್ಧಾವಕ ದ್ರವ ವು ಒಂದೋ ಪರಿಶುದ್ಧ ದ್ರಾವಕವಾಗಿರುತ್ತದೆ ಇಲ್ಲವೇ ವಿಭಿನ್ನ ದ್ರಾವಕಗಳ ಒಂದು ಮಿಶ್ರಣವಾಗಿರುತ್ತದೆ. ವರ್ಣರೇಖನವನ್ನು ಓಡಿಸಲು ಅಗತ್ಯವಿರುವ ಪ್ರೋದ್ಧಾವಕ ದ್ರವದ ಸಮಯ ಹಾಗೂ ಪ್ರಮಾಣವನ್ನು ಕನಿಷ್ಟಗೊಳಿಸುವ ದೃಷ್ಟಿಯಿಂದ, ಪ್ರಯೋಜನದ ಅಥವಾ ಬಯಸಿದ ಸಂಯುಕ್ತದ ಧಾರಣಶಕ್ತಿ ಅಂಶ ಮೌಲ್ಯವು ಸ್ಥೂಲವಾಗಿ ಸುಮಾರು 0.2 - 0.3ರಷ್ಟಿರುತ್ತದೆಯಾದ್ದರಿಂದ ಇದನ್ನು ಆಯ್ಕೆಮಾಡಿಕೊಳ್ಳಲಾಗುತ್ತದೆ. ವಿಭಿನ್ನ ಸಂಯುಕ್ತಗಳನ್ನು ಪರಿಣಾಮಕಾರಿಯಾಗಿ ಪ್ರತ್ಯೇಕಿಸಲು ಸಾಧ್ಯವಾಗಬೇಕು ಎಂಬ ದೃಷ್ಟಿಯಿಂದಲೂ ಸಹ ಪ್ರೋದ್ಧಾವಕ ದ್ರವವನ್ನು ಆಯ್ಕೆಮಾಡಲಾಗುತ್ತದೆ. ಅದೇ ಸ್ಥಿರ ಪ್ರಾವಸ್ಥೆಯೊಂದಿಗೆ ತೆಳುವಾದ ಪದರದ ವರ್ಣರೇಖನವನ್ನು (ಥಿನ್‌ ಲೇಯರ್‌ ಕ್ರೋಮಟಾಗ್ರಫಿ-TLC) ಅನೇಕವೇಳೆ ಬಳಸುವ ಮೂಲಕ, ಸಣ್ಣ ಪ್ರಮಾಣದ ಪೂರ್ವಪರೀಕ್ಷೆಗಳಲ್ಲಿ ಪ್ರೋದ್ಧಾವಕ ದ್ರವದ ಅತ್ಯುತ್ತಮ ಪ್ರಯೋಜನವನ್ನು ಪಡೆಯಲಾಗುತ್ತದೆ.

ಪ್ರೋದ್ಧಾವಕ ದ್ರವದ ಒಂದು ವೇಗವಾದ ಹರಿವಿನ ಗತಿಯು ಸ್ತಂಭವೊಂದನ್ನು ನಡೆಸಲು ಅಗತ್ಯವಾಗಿರುವ ಸಮಯವನ್ನು ಕನಿಷ್ಟಗೊಳಿಸುತ್ತದೆ ಮತ್ತು ತನ್ಮೂಲಕ ವಿಸರಣವನ್ನು ಕನಿಷ್ಟಗೊಳಿಸುತ್ತದೆ. ಇದರಿಂದಾಗಿ ಉತ್ತಮವಾದ ವಿಯೋಜನೆಯು ಕಂಡುಬರುತ್ತದೆ, ನೋಡಿ: ವ್ಯಾನ್‌ ಡೀಮ್ಟರ್‌‌'ನ ಸಮೀಕರಣ. ಪ್ರಯೋಗಾಲಯದ ಸರಳ ಸ್ತಂಭವೊಂದು ಗುರುತ್ವ ಹರಿವಿನಿಂದ ನಡೆಯುತ್ತದೆ. ಸ್ಥಿರ ಪ್ರಾವಸ್ಥೆಯ ತುದಿಯ ಮೇಲ್ಭಾಗದಲ್ಲಿನ ತಾಜಾ ಪ್ರೋದ್ಧಾವಕ ದ್ರವದಿಂದ ತುಂಬಿಸಲ್ಪಟ್ಟ ಸ್ತಂಭವನ್ನು ವಿಸ್ತರಿಸುವುದರಿಂದ ಇಂಥದೊಂದು ಸ್ತಂಭದ ಹರಿವಿನ ಗತಿಯನ್ನು ಹೆಚ್ಚಿಸಲು ಸಾಧ್ಯವಿದೆ ಅಥವಾ ನಲ್ಲಿಯ ನಿಯಂತ್ರಣಗಳಿಂದ ಅದನ್ನು ತಗ್ಗಿಸಲು ಸಾಧ್ಯವಿದೆ. ಸ್ತಂಭದ ಮೂಲಕ ದ್ರಾವಕವನ್ನು ತಳ್ಳಲು ಒಂದು ಪಂಪನ್ನು ಬಳಸುವ ಮೂಲಕ ಅಥವಾ ಸಂಪೀಡಿತ ಅನಿಲವನ್ನು (ಉದಾಹರಣೆಗೆ ಗಾಳಿ, ಸಾರಜನಕ, ಅಥವಾ ಆರ್ಗಾನ್‌) ಬಳಸುವ ಮೂಲಕ, ಉತ್ತಮವಾದ ಹರಿವಿನ ಗತಿಗಳನ್ನು ಸಾಧಿಸಬಹುದು (ಕ್ಷಣಪ್ರವಾಹದ ಸ್ತಂಭ ವರ್ಣರೇಖನ).[][]

ಸ್ಥಿರ ಪ್ರಾವಸ್ಥೆಯ ಕಣದ ಗಾತ್ರವು, ಗುರುತ್ವ ಸ್ತಂಭ ವರ್ಣರೇಖನದಲ್ಲಿ ಇರುವುದಕ್ಕಿಂತ ಕ್ಷಣಪ್ರವಾಹದ ಸ್ತಂಭ ವರ್ಣರೇಖನದಲ್ಲಿ ಸಾಮಾನ್ಯವಾಗಿ ಸೂಕ್ಷ್ಮತರವಾಗಿರುತ್ತದೆ. ಉದಾಹರಣೆಗೆ, ಕ್ಷಣಪ್ರವಾಹದ ಪ್ರಯೋಗ ವಿಧಾನದಲ್ಲಿ ಬಹುವ್ಯಾಪಕವಾಗಿ ಬಳಸಲಾಗುತ್ತಿದ್ದ ಜಲಸಂಯೋಜಿತ ಸಿಲಿಕ ದರ್ಜೆಗಳಲ್ಲಿ ಜಾಲ 230 – 400 (40 – 63 µm) ಎಂಬುದು ಒಂದಾಗಿದ್ದರೆ, ಗುರುತ್ವ ಸ್ತಂಭ ವರ್ಣರೇಖನದ ಪ್ರಯೋಗ ವಿಧಾನವು ವಿಶಿಷ್ಟವೆನಿಸುವಂತೆ ಜಾಲ 70 – 230ರ (63 – 200 µm) ಜಲಸಂಯೋಜಿತ ಸಿಲಿಕವನ್ನು ಬಯಸುತ್ತದೆ.[]

ಕ್ಷಣಪ್ರವಾಹ ಸ್ತಂಭಗಳ ಯಶಸ್ವಿ ಅಭಿವೃದ್ಧಿಯಲ್ಲಿ ನೆರವಾಗುವ ಒಂದು ಹರವು ಹಾಳೆಯನ್ನು (ಸ್ಪ್ರೆಡ್‌ಶೀಟ್‌) ಅಭಿವೃದ್ಧಿಪಡಿಸಲಾಗಿದೆ. ವಿಶ್ಲೇಷ್ಯಗಳ ಧಾರಣಶಕ್ತಿದ ಪ್ರಮಾಣ ಮತ್ತು ಪಟ್ಟೆಯ ಪ್ರಮಾಣಗಳು, ಪ್ರತಿ ವಿಶ್ಲೇಷ್ಯವನ್ನು ಒಳಗೊಳ್ಳಲು ನಿರೀಕ್ಷಿಸಲ್ಪಟ್ಟ ಅಂಶ ಸಂಖ್ಯೆಗಳು, ಮತ್ತು ಪಕ್ಕದ ಶಿಖರಗಳ ನಡುವಿನ ವಿಶ್ಲೇಷಣೆ ಇವೇ ಮೊದಲಾದವನ್ನು ಸದರಿ ಹರವು ಹಾಳೆಯು ಅಂದಾಜಿಸುತ್ತದೆ. ಸ್ವತಃ ಕ್ಷಣಪ್ರವಾಹ ಸ್ತಂಭವು ಪ್ರಯತ್ನಿಸಲ್ಪಡುವುದಕ್ಕೆ ಮುಂಚಿತವಾಗಿ, ಪೂರ್ವಭಾವಿ-ಪ್ರಮಾಣ ವಿಯೋಜನೆಗಳಿಗೆ ಸಂಬಂಧಿಸಿದ ಪ್ರಶಸ್ತ ಪ್ರಮಾಣ ಲಕ್ಷಣಗಳನ್ನು ಆಯ್ದುಕೊಳ್ಳಲು ಬಳಕೆದಾರರಿಗೆ ಈ ಮಾಹಿತಿಯು ಅನುವುಮಾಡಿಕೊಡುತ್ತದೆ.[]

ಸ್ವಯಂಚಾಲನಗೊಳಿಸಿದ ವ್ಯವಸ್ಥೆಗಳು

[ಬದಲಾಯಿಸಿ]
ಒಂದು ಸ್ವಯಂಚಾಲನಗೊಳಿಸಿದ ಅಯಾನು ವರ್ಣರೇಖನ ವ್ಯವಸ್ಥೆ.

ಸ್ತಂಭ ವರ್ಣರೇಖನವು ಯಾವುದೇ ಪ್ರಯೋಗಾಲಯದಲ್ಲಿ ಮಿರಿಮೀರಿದ ಸಮಯವನ್ನು ಬಳಸಿಕೊಳ್ಳುವ ಒಂದು ಹಂತವಾಗಿದ್ದು, ಪ್ರಯೋಗಾಲಯದ ಯಾವುದೇ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅದು ಕ್ಷಿಪ್ರವಾಗಿ ಪ್ರತಿಬಂಧಕವಾಗಬಲ್ಲದಾಗಿದೆ. ಆದ್ದರಿಂದ, ಶುದ್ಧೀಕರಣ ಪ್ರಕ್ರಿಯೆಯಲ್ಲಿ ಮಾನವರ ತೊಡಗಿಸಿಕೊಳ್ಳುವಿಕೆಯನ್ನು ಕನಿಷ್ಟಗೊಳಿಸುವ ಸ್ವಯಂಚಾಲನಗೊಳಿಸಿದ ಕ್ಷಣಪ್ರವಾಹದ ವರ್ಣರೇಖನ ವ್ಯವಸ್ಥೆಗಳನ್ನು [ವಿಶಿಷ್ಟವೆನಿಸುವಂತೆ, ಇದನ್ನು LPLC, ಅಂದರೆ ಕಡಿಮೆ ಒತ್ತಡದ ದ್ರವ ವರ್ಣರೇಖನ (ಲೋ ಪ್ರೆಷರ್‌ ಲಿಕ್ವಿಡ್‌ ಕ್ರೋಮಟಾಗ್ರಫಿ) ಎಂದು ಉಲ್ಲೇಖಿಸಲಾಗುತ್ತದೆ, ಇದು ಸುಮಾರು 50-75 psiನಷ್ಟಿರುತ್ತದೆ] ಹಲವಾರು ತಯಾರಕರು ಅಭಿವೃದ್ಧಿಪಡಿಸಿದ್ದಾರೆ. ಒಂದು ಪ್ರವಣತೆ ಪಂಪಿನಂಥ ಹೆಚ್ಚು ದುಬಾರಿಯ HPLC ವ್ಯವಸ್ಥೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಘಟಕಗಳನ್ನು ಸ್ವಯಂಚಾಲನಗೊಳಿಸಿದ ವ್ಯವಸ್ಥೆಗಳು ಒಳಗೊಳ್ಳುತ್ತವೆ. ಮಾದರಿ ಇಂಜೆಕ್ಷನ್‌ ಸಂಪರ್ಕದ್ವಾರಗಳು, ಒಂದು UV ಪತ್ತೆಕಾರಕ ಹಾಗೂ ಪ್ರೋದ್ಧಾವಕ ದ್ರವವನ್ನು ಸಂಗ್ರಹಿಸುವಲ್ಲಿ ನೆರವಾಗುವ ಒಂದು ಅಂಶ ಸಂಗ್ರಾಹಕ ಇವು ಸದರಿ ಘಟಕಗಳಲ್ಲಿ ಸೇರಿವೆ. ವಿಶಿಷ್ಟವೆನಿಸುವಂತೆ ಒಂದು ಕೆಲವೇ ಮಿಲಿಗ್ರಾಂಗಳಿಂದ ಒಂದು ಕೈಗಾರಿಕೆಯ ಕೆ.ಜಿ.ಯ ಪ್ರಮಾಣದವರೆಗಿನ ಮಾದರಿಗಳನ್ನು ಈ ಈ ಸ್ವಯಂಚಾಲನಗೊಳಿಸಿದ ವ್ಯವಸ್ಥೆಗಳು ಪ್ರತ್ಯೇಕಿಸಬಲ್ಲವು ಮತ್ತು ಪೂರ್ವಭಾವಿ-HPLC ವ್ಯವಸ್ಥೆಗಳ ಮೇಲೆ ಅನೇಕ ಇಂಜೆಕ್ಷನ್‌ಗಳನ್ನು ಮಾಡುವಂತಾಗಲು ಒಂದು ಹೆಚ್ಚು ಅಗ್ಗವಾದ ಮತ್ತು ಕ್ಷಿಪ್ರವಾದ ದ್ರಾವಣವನ್ನು ಅವು ಒದಗಿಸುತ್ತವೆ.

ಒಂದು LPLC ವ್ಯವಸ್ಥೆಯ ಮೇಲಿನ ವಿಶ್ಲೇಷಣೆಯು (ಅಥವಾ ಒಂದು ಮಿಶ್ರಣವನ್ನು ಪ್ರತ್ಯೇಕಿಸಲು ಇರುವ ಸಾಮರ್ಥ್ಯವು) HPLCಗೆ ಹೋಲಿಸಿದಾಗ ಯಾವಾಗಲೂ ಕಡಿಮೆ ಮಟ್ಟದಲ್ಲಿರುತ್ತದೆ. ಏಕೆಂದರೆ, ಒಂದು HPLC ಸ್ತಂಭದಲ್ಲಿನ ತುಂಬಿಸಲ್ಪಡುವ ಮೂಲದ್ರವ್ಯವು ಸಾಕಷ್ಟು ಸಣ್ಣದಾದ ಗಾತ್ರದಲ್ಲಿದ್ದು, ವಿಶಿಷ್ಟವೆನಿಸುವಂತೆ ಕೇವಲ 5 ಮೈಕ್ರೋಮೀಟರ್‌ನಷ್ಟಿರುತ್ತದೆ. ಇದರಿಂದಾಗಿ ಸ್ಥಿರ ಪ್ರಾವಸ್ಥೆಯ ಮೇಲ್ಮೈ ವಿಸ್ತೀರ್ಣವು ಹೆಚ್ಚಾಗಿ, ಮೇಲ್ಮೈ ಪಾರಸ್ಪರಿಕ ಕ್ರಿಯೆಗಳೂ ಹೆಚ್ಚಾಗುತ್ತವೆ ಮತ್ತು ಉತ್ತಮವಾದ ವಿಯೋಜನೆಯು ಉಂಟಾಗುತ್ತದೆ. ಆದಾಗ್ಯೂ, ತುಂಬಿಸಲ್ಪಡುವ ಈ ಸಣ್ಣ ಮಾಧ್ಯಮದ ಬಳಕೆಯು ಉನ್ನತವಾದ ಹಿನ್ನೆಲೆ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಈ ಕಾರಣದಿಂದಲೇ ಇದನ್ನು ಉನ್ನತವಾದ ಒತ್ತಡದ ದ್ರವ ವರ್ಣರೇಖನ ಎಂದು ಕರೆಯಲಾಗುತ್ತದೆ. LPLC ಸ್ತಂಭಗಳನ್ನು ವಿಶಿಷ್ಟವೆನಿಸುವಂತೆ ಸುಮಾರು 50 ಮೈಕ್ರೋಮೀಟರ್‌ಗಳಷ್ಟಿರುವ ಸಿಲಿಕದೊಂದಿಗೆ ತುಂಬಿಸಲಾಗಿರುತ್ತದೆಯಾದ್ದರಿಂದ, ಅದು ಹಿನ್ನೆಲೆ ಒತ್ತಡ ಹಾಗೂ ವಿಶ್ಲೇಷಣೆಯನ್ನು ತಗ್ಗಿಸುತ್ತದೆ. ಆದರೆ ದುಬಾರಿಯಾಗಿರುವ ಉನ್ನತವಾದ ಒತ್ತಡದ ಪಂಪುಗಳಿಗಾಗಿರುವ ಅಗತ್ಯವನ್ನೂ ಸಹ ಅದು ತೆಗೆದುಹಾಕುತ್ತದೆ. ತಯಾರಕರು ಈಗ ಉನ್ನತವಾದ ಒತ್ತಡದ ಕ್ಷಣಪ್ರವಾಹ ವರ್ಣರೇಖನ ವ್ಯವಸ್ಥೆಗಳ ಕಡೆಗೆ ಮುಂದಡಿಯಿಡಲು ಪ್ರಾರಂಭಿಸಿದ್ದು, 150 psiಗಿಂತ ಮೇಲೆ ಕಾರ್ಯನಿರ್ವಹಿಸುವ ಇವುಗಳಿಗೆ ಮಧ್ಯಮ ಒತ್ತಡದ ದ್ರವ ವರ್ಣರೇಖನ (ಮೀಡಿಯಂ ಪ್ರೆಷರ್‌ ಲಿಕ್ವಿಡ್‌ ಕ್ರೋಮಟಾಗ್ರಫಿ-MPLC) ವ್ಯವಸ್ಥೆಗಳು ಎಂದು ಹೆಸರಿಸಿದ್ದಾರೆ.

ಒಂದು ಸ್ವಯಂಚಾಲನಗೊಳಿಸಿದ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವ ತಂತ್ರಾಂಶವು ಘಟಕಗಳನ್ನು ಸುಸಂಘಟಿತವಾಗಿಸಿ, ಗುಂಪುಗಳ ಉದ್ದೇಶಿತ ಸಂಯುಕ್ತಗಳನ್ನು (ವ್ಯವಸ್ಥೆಯ ಪತ್ತೆಕಾರಕದ ಮೇಲೆ ಅವನ್ನು ಪತ್ತೆಹಚ್ಚಬಹುದಾಗಿದೆ ಎಂದು ಭಾವಿಸಿಕೊಂಡು) ಒಳಗೊಂಡಿರುವ ಗುಂಪುಗಳನ್ನಷ್ಟೇ ಸಂಗ್ರಹಿಸಲು ಓರ್ವ ಬಳಕೆದಾರನಿಗೆ ಅವಕಾಶ ಮಾಡಿಕೊಡುತ್ತದೆ ಮತ್ತು ರೂಪುಗೊಂಡ ಶುದ್ಧೀಕರಿಸಲ್ಪಟ್ಟ ಮೂಲದ್ರವ್ಯವನ್ನು ಅಂಶ ಸಂಗ್ರಾಹಕದೊಳಗೆ ಕಂಡುಕೊಳ್ಳಲು ಬಳಕೆದಾರನಿಗೆ ನೆರವಾಗುತ್ತದೆ. ಸದರಿ ರೂಪುಗೊಂಡ ವರ್ಣಲೇಖಿಯನ್ನು ದಾಖಲೆ ಸಂಗ್ರಹದ ಮತ್ತು/ಅಥವಾ ನಂತರದ ನೆನಪು ಮಾಡಿಕೊಳ್ಳುವ ಅಥವಾ ಸ್ಮರಣಶಕ್ತಿಯ ಉದ್ದೇಶಗಳಿಗೆ ಸಂಬಂಧಿಸಿದ ಪ್ರಕ್ರಿಯೆಯಿಂದಲೂ ತಂತ್ರಾಂಶವು ಉಳಿಸುತ್ತದೆ.

ಪುದೀನ ಜಾತಿಯ ಸೊಪ್ಪಿನ ತೈಲದಲ್ಲಿರುವ ಘಟಕಗಳ (28ರ ಪೈಕಿ) ಪೈಕಿಯ ಮೂರು ಭಾಗಗಳಾಗಿರುವ ಕಾರ್ವೋನ್‌, ಲಿಮೋನೀನ್‌ ಮತ್ತು ಡೀಹೈಡ್ರೋಕಾರ್ವಿಯೋಲ್‌‌‌ಗಳ[] ವಿಯೋಜನೆಯು, ಒಂದು ಸ್ನಾತಕಪೂರ್ವ ಪ್ರಯೋಗಾಲಯದ ಪ್ರಯೋಗದ ಭಾಗವಾಗಿರುವ ಸ್ತಂಭ ವರ್ಣರೇಖನದ ಒಂದು ಪ್ರಾತಿನಿಧಿಕ ಉದಾಹರಣೆಯಾಗಿದೆ. ಜಲಸಂಯೋಜಿತ ಸಿಲಿಕದ ಸ್ಥಿರ ಪ್ರಾವಸ್ಥೆಯೊಂದಿಗಿನ ಸ್ತಂಭವಾಗಿ ಒಂದು ಪಾಶ್ಚರ್‌ ಪಿಪೆಟ್‌ನ್ನು ಒಳಗೊಂಡಿರುವ ಒಂದು ಅಲ್ಪಪ್ರಮಾಣದ ಸಜ್ಜಿಕೆಯು ಸಾಕಾಗುವಷ್ಟು ಆಗಬಲ್ಲದು. ಆರಂಭಿಕ ಪ್ರೋದ್ಧಾವಕ ದ್ರವವು ಹೆಕ್ಸೇನ್‌ ಆಗಿದ್ದು, ಈಥೈಲ್‌ ಅಸಿಟೇಟ್‌‌ನ್ನು ಸೇರಿಸುವ ಮೂಲಕ ಸಂಸ್ಕರಣೆಯ ಅವಧಿಯಲ್ಲಿ ದ್ರಾವಕ ಧ್ರುವೀಯತೆಯು ಹೆಚ್ಚಿಸಲ್ಪಡುತ್ತದೆ.

ಸ್ತಂಭ ವರ್ಣಲೇಖದ ವಿಶ್ಲೇಷಣೆಯ ಲೆಕ್ಕಾಚಾರ

[ಬದಲಾಯಿಸಿ]

ವಿಶಿಷ್ಟವೆನಿಸುವಂತೆ, ಪ್ರತಿರೋಧಕಗಳನ್ನು ಹಾಗೂ ದ್ರಾವಣ ಮಾದರಿಯನ್ನು ಸ್ತಂಭದ ತುದಿಯ ಮೂಲಕ ಹರಿಸುತ್ತಿರುವ ಕ್ರಮಾಕುಂಚಕ ಪಂಪುಗಳೊಂದಿಗೆ ಸ್ತಂಭ ವರ್ಣರೇಖನವು ಸಜ್ಜುಗೊಳಿಸಲ್ಪಟ್ಟಿರುತ್ತದೆ. ದ್ರಾವಣಗಳು ಮತ್ತು ಪ್ರತಿರೋಧಕಗಳು ಸ್ತಂಭದ ಮೂಲಕ ಹಾದುಹೋಗುತ್ತವೆ ಹಾಗೂ ಸ್ತಂಭದ ಸಜ್ಜಿಕೆಯ ಅಂತ್ಯದಲ್ಲಿರುವ ಒಂದು ಅಂಶ ಸಂಗ್ರಾಹಕವು ಪ್ರೋದ್ಧಾವಿಸಲ್ಪಟ್ಟ ಮಾದರಿಗಳನ್ನು ಸಂಗ್ರಹಿಸುತ್ತದೆ. ಅಂಶ ಸಂಗ್ರಹಿಸುವಿಕೆಗೆ ಮುಂಚಿತವಾಗಿ, ಸ್ತಂಭದಿಂದ ಪ್ರೋದ್ಧಾವಿಸಲ್ಪಟ್ಟಿರುವ ಮಾದರಿಗಳು ಒಂದು ರೋಹಿತ ದ್ಯುತಿಮಾಪಕ (ಸ್ಪೆಕ್ಟ್ರೋಫೋಟೋಮೀಟರ್‌) ಅಥವಾ ರಾಶಿ ರೋಹಿತಮಾಪಕದಂಥ (ಮಾಸ್‌ ಸ್ಪೆಕ್ಟೋಮೀಟರ್‌) ಒಂದು ಪತ್ತೆಕಾರಕದ ಮೂಲಕ ಹಾದುಹೋಗುತ್ತವೆ. ಇದರಿಂದಾಗಿ ಮಾದರಿ ದ್ರಾವಣ ಮಿಶ್ರಣದಲ್ಲಿನ ಪ್ರತ್ಯೇಕಿಸಲ್ಪಟ್ಟ ಮಾದರಿಗಳ ಸಾಂದ್ರತೆಯನ್ನು ನಿರ್ಣಯಿಸಲು ಸಾಧ್ಯವಾಗುತ್ತದೆ.

ಉದಾಹರಣೆಗೆ, ಒಂದು ವೇಳೆ ಒಂದು ದ್ರಾವಣ ಮಾದರಿಯಿಂದ ಸ್ತಂಭಕ್ಕೆ ವಿಭಿನ್ನ ಬಂಧಕ ಸಾಮರ್ಥ್ಯಗಳೊಂದಿಗಿನ ಎರಡು ವಿಭಿನ್ನ ಪ್ರೋಟೀನುಗಳನ್ನು ನೀವು ಪ್ರತ್ಯೇಕಿಸುವವರಾಗಿದ್ದಲ್ಲಿ, 280 nmನಷ್ಟಿರುವ ಒಂದು ತರಂಗಾಂತರವನ್ನು ಬಳಸುವ ಒಂದು ರೋಹಿತ ದ್ಯುತಿಮಾಪಕವು ಒಂದು ಒಳ್ಳೆಯ ಬಗೆಯ ಪತ್ತೆಕಾರಕವಾಗಿರುತ್ತದೆ. ಸ್ತಂಭದ ಮೂಲಕ ಹಾದುಹೋಗುವ ಪ್ರೋದ್ಧಾವಿಸಲ್ಪಟ್ಟ ದ್ರಾವಣದ ಮೂಲಕ ಸಾಗುವ ಪ್ರೋಟೀನಿನ ಸಾಂದ್ರತೆಯು ಉನ್ನತವಾದಷ್ಟೂ, ಆ ತರಂಗಾಂತರದ ಹೀರಿಕೊಳ್ಳುವಿಕೆಯ ಪ್ರಮಾಣವು ಉನ್ನತ ಮಟ್ಟದಲ್ಲಿರುತ್ತದೆ.
ಏಕೆಂದರೆ, ಬದಲಾಗುತ್ತಿರುವ ಸಾಂದ್ರತೆಗಳಲ್ಲಿ ಪತ್ತೆಕಾರಕದ ಮೂಲಕ ಸಾಗುತ್ತಿರುವ ಪ್ರೋದ್ಧಾವಿಸಲ್ಪಟ್ಟ ದ್ರಾವಣದ ಒಂದು ಸ್ಥಿರ ಹರಿವನ್ನು ಸ್ತಂಭ ವರ್ಣರೇಖನವು ಹೊಂದಿರುತ್ತದೆಯಾದ್ದರಿಂದ, ಒಂದು ನಿಶ್ಚಿತ ಕಾಲಾವಧಿಯ ನಂತರ ಪ್ರೋದ್ಧಾವಿಸಲ್ಪಟ್ಟ ಮಾದರಿಯ ಸಾಂದ್ರತೆಯನ್ನು ಪತ್ತೆಕಾರಕವು ಗುರುತುಮಾಡಬೇಕಿರುತ್ತದೆ. ಸಮಯಕ್ಕೆ ಪ್ರತಿಯಾಗಿರುವ ಮಾದರಿ ಸಾಂದ್ರತೆಯ ಈ ಗುರುತುಮಾಡುವಿಕೆಯನ್ನು ಒಂದು ವರ್ಣಲೇಖ ಎಂದು ಕರೆಯಲಾಗುತ್ತದೆ.

ಒಂದು ದ್ರಾವಣ ಮಿಶ್ರಣದಿಂದ ವಿಭಿನ್ನ ಘಟಕಗಳನ್ನು ಪ್ರತ್ಯೇಕಿಸುವುದು ವರ್ಣರೇಖನದ ಅಂತಿಮ ಗುರಿಯಾಗಿರುತ್ತದೆ. ಸದರಿ ವಿಶ್ಲೇಷಣೆಯು ಮಿಶ್ರಣಕ್ಕೆ ಸೇರಿದ ಘಟಕಗಳ ನಡುವಿನ ವಿಯೋಜನೆಯ ವ್ಯಾಪ್ತಿಯನ್ನು ಅಭಿವ್ಯಕ್ತಿಸುತ್ತದೆ. ವರ್ಣಲೇಖದ ವಿಶ್ಲೇಷಣೆಯು ಹೆಚ್ಚಾದಷ್ಟೂ ಸ್ತಂಭವು ನೀಡುವ ಮಾದರಿಗಳ ವಿಯೋಜನೆಯ ವ್ಯಾಪ್ತಿಯೂ ಉತ್ತಮವಾಗಿರುತ್ತದೆ. ಆ ನಿರ್ದಿಷ್ಟ ಮಾದರಿಯ ಸ್ತಂಭದ ವಿಯೋಜನೆಯ ಲಕ್ಷಣಗಳನ್ನು ನಿರ್ಣಯಿಸುವಲ್ಲಿ ಈ ದತ್ತಾಂಶವು ಒಂದು ಒಳ್ಳೆಯ ಮಾರ್ಗವಾಗಿದೆ. ವರ್ಣಲೇಖದಿಂದ ವಿಶ್ಲೇಷಣೆಯನ್ನು ಲೆಕ್ಕಾಚಾರ ಹಾಕಲು ಸಾಧ್ಯವಿದೆ.
ರೇಖಾಚಿತ್ರದಲ್ಲಿನ ಪ್ರತ್ಯೇಕ ವಕ್ರಾಕೃತಿಗಳು, ಸ್ತಂಭ ರಾಳದೆಡೆಗಿನ ತಮ್ಮ ಆಕರ್ಷಣ ಬಲವನ್ನು ಆಧರಿಸಿ, ಕಾಲಾನಂತರದಲ್ಲಿನ ವಿಭಿನ್ನ ಮಾದರಿಯ ಪ್ರೋದ್ಧಾವನ ಸಾಂದ್ರತೆಯ ಸಂಕ್ಷಿಪ್ತ ವರ್ಣನೆಗಳನ್ನು ಪ್ರತಿನಿಧಿಸುತ್ತವೆ. ವಿಶ್ಲೇಷಣೆಯನ್ನು ಲೆಕ್ಕಾಚಾರಹಾಕಲು ಧಾರಣಶಕ್ತಿಯ ಸಮಯ ಹಾಗೂ ವಕ್ರಾಕೃತಿಯ ಅಗಲ ಇವು ಅಗತ್ಯವಾಗಿರುತ್ತವೆ.

ಧಾರಣಶಕ್ತಿಯ ಸಮಯ: ಪತ್ತೆಕಾರಕದಿಂದ ಸಂಕೇತ ಪತ್ತೆಹಚ್ಚುವಿಕೆಯು ಶುರುವಾಗುವ ಸಮಯದಿಂದ, ಪ್ರತಿ ವಿಭಿನ್ನ ಮಾದರಿಯ ಪ್ರೋದ್ಧಾವನ ಸಾಂದ್ರತೆಯ ಸಂಕ್ಷಿಪ್ತ ವರ್ಣನೆಯ ಗರಿಷ್ಟಮಿತಿಯ ಎತ್ತರದವರೆಗಿನ ಸಮಯ ಇದಾಗಿದೆ.

ವಕ್ರಾಕೃತಿಯ ಅಗಲ: ಇದು ವರ್ಣಲೇಖದಲ್ಲಿನ ವಿಭಿನ್ನ ಮಾದರಿಗಳ ಸಾಂದ್ರತೆಯ ಸಂಕ್ಷಿಪ್ತ ವರ್ಣನೆಯ ವಕ್ರಾಕೃತಿಯ, ಸಮಯದ ಏಕಮಾನಗಳಲ್ಲಿನ ಅಗಲವಾಗಿದೆ.

ಫಲಕ ಮಾದರಿಯನ್ನು[] ಬಳಸುವುದು ವರ್ಣಲೇಖ ವಿಶ್ಲೇಷಣೆಯನ್ನು ಲೆಕ್ಕಾಚಾರ ಹಾಕುವುದರ ಒಂದು ಸರಳೀಕೃತ ವಿಧಾನವಾಗಿದೆ. ಸ್ತಂಭವೊಂದನ್ನು ಒಂದು ನಿರ್ದಿಷ್ಟ ಸಂಖ್ಯೆಯ ವಿಭಾಗಗಳು, ಅಥವಾ ಫಲಕಗಳಾಗಿ ವಿಭಾಗಿಸಬಹುದು ಎಂಬುದಾಗಿ ಮತ್ತು ಪ್ರತಿ ಪ್ರತ್ಯೇಕ ಫಲಕಕ್ಕೆ ಸಂಬಂಧಿಸಿದಂತೆ ರಾಶಿ ಸಮತೋಲನವನ್ನು ಲೆಕ್ಕಾಚಾರ ಹಾಕಬಹುದು ಎಂಬುದಾಗಿ ಫಲಕ ಮಾದರಿಯು ಊಹಿಸುತ್ತದೆ. ಈ ವಿಧಾನವು ಒಂದು ವಿಶಿಷ್ಟ ವರ್ಣಲೇಖ ವಕ್ರಾಕೃತಿಯನ್ನು ಒಂದು ಗೌಸ್ಸಿಯನ್‌ ವಿತರಣೆಯ ವಕ್ರಾಕೃತಿಯಂತೆ ಅಂದಾಜಿಸುತ್ತದೆ. ಹೀಗೆ ಮಾಡುವುದರ ಮೂಲಕ, ವಕ್ರಾಕೃತಿಯ ಅಗಲವು ವಕ್ರಾಕೃತಿಯ ಪ್ರಮಾಣಕ ಮಾರ್ಗಚ್ಯುತಿಯ 4 ಪಟ್ಟು ಇರುವಂತೆ, ಅಂದರೆ 4σನಷ್ಟು ಇರುವಂತೆ ಅಂದಾಜಿಸಲ್ಪಡುತ್ತದೆ. ಧಾರಣಶಕ್ತಿ ಸಮಯ ಎಂಬುದು ಸಂಕೇತ ಪತ್ತೆಹಚ್ಚುವಿಕೆಯ ಆರಂಭದ ಸಮಯದಿಂದ ಗೌಸ್ಸಿಯನ್‌ ವಕ್ರಾಕೃತಿಯ ಗರಿಷ್ಟಮಿತಿಯ ಎತ್ತರದ ಸಮಯದವರೆಗೆ ಇರುವ ಸಮಯವಾಗಿರುತ್ತದೆ.

ಮೇಲೆ ನೀಡಲಾಗಿರುವ ರೇಖಾಚಿತ್ರದಲ್ಲಿನ ಚಲ ಪರಿಮಾಣಗಳಿಂದ, ಸ್ತಂಭ ಫಲಕ ಮಾದರಿಯ ವಿಶ್ಲೇಷಣೆ, ಫಲಕ ಸಂಖ್ಯೆ, ಮತ್ತು ಫಲಕ ಎತ್ತರವನ್ನು ಈ ಕೆಳಗಿನ ಸಮೀಕರಣವನ್ನು ಬಳಸಿಕೊಂಡು ಲೆಕ್ಕಾಚಾರ ಹಾಕಬಹುದು:

ವಿಶ್ಲೇಷಣೆ (Rs):

Rs = 2(tRB – tRA)/(wB + wA)

ಇದರಲ್ಲಿ:

tRB = B ದ್ರಾವ್ಯದ ಧಾರಣಶಕ್ತಿ ಸಮಯ 
tRA = A ದ್ರಾವ್ಯದ ಧಾರಣಶಕ್ತಿ ಸಮಯ
wB = B ದ್ರಾವ್ಯದ ಗೌಸ್ಸಿಯನ್‌ ವಕ್ರಾಕೃತಿ ಅಗಲ
wA = A ದ್ರಾವ್ಯದ ಗೌಸ್ಸಿಯನ್‌ ವಕ್ರಾಕೃತಿ ಅಗಲ

ಫಲಕ ಸಂಖ್ಯೆ (N):

N = (tR2)/(w/4)2

ಫಲಕ ಎತ್ತರ (H):

H = L/N

ಇಲ್ಲಿ L ಎಂಬುದು ಸ್ತಂಭದ ಉದ್ದವಾಗಿದೆ.[]

ಸ್ತಂಭ ಅಧಿಚೂಷಣ ಸಂತುಲನ

[ಬದಲಾಯಿಸಿ]

ಒಂದು ಅಧಿಚೂಷಣ ಸ್ತಂಭಕ್ಕೆ ಸಂಬಂಧಿಸಿದಂತಿರುವ ಸ್ತಂಭ ರಾಳವು (ಸ್ಥಿರ ಪ್ರಾವಸ್ಥೆ) ಕಿರುಮಣಿಗಳಿಂದ ಮಾಡಲ್ಪಟ್ಟಿರುತ್ತದೆ. ಪ್ರೋಟೀನುಗಳು, ಶರ್ಕರಪಿಷ್ಟಗಳು, ಲೋಹದ ಅಯಾನುಗಳು, ಅಥವಾ ಇತರ ರಾಸಾಯನಿಕ ಸಂಯುಕ್ತಗಳಂಥ ಸಣ್ಣದಾದ ಕಣಗಳೂ ಸಹ ಕಿರುಮಣಿಗಳ ಮೇಲೆ ಸಂಯೋಜಿಸಲ್ಪಟ್ಟಿರುತ್ತವೆ. ಸ್ತಂಭದ ಮೂಲಕ ಕಳಿಸಲಾದ ಶುದ್ಧೀಕರಿಸಲ್ಪಡಬೇಕಿರುವ ಅಥವಾ ಪ್ರತ್ಯೇಕಿಸಲ್ಪಡಬೇಕಿರುವ ದ್ರಾವ್ಯ ಮಾದರಿಯೊಂದಿಗೆ ಒಂದು 1:1 ಅನುಪಾತದಲ್ಲಿ ಕಿರುಮಣಿಗೆ ಜೋಡಣೆಗೊಂಡಿರುವ ಪ್ರತಿ ಬಂಧಕ ಕಣವೂ ಬಂಧಿಸುತ್ತದೆ ಎಂದು ಊಹಿಸಬಹುದಾಗಿದೆ.

ಪ್ರತ್ಯೇಕಿಸಲ್ಪಡಬೇಕಿರುವ ಉದ್ದೇಶಿತ ಪರಮಾಣು ಗುಚ್ಛ ಹಾಗೂ ಸ್ತಂಭದ ಮಣಿಗಳ ಮೇಲಿನ ಬಂಧಕ ಪರಮಾಣು ಗುಚ್ಛದ ನಡುವಿನ ಬಂಧಕದ ಮಾದರಿಯನ್ನು, Keq = [CS]/([C][S]) ಎಂಬ ಒಂದು ಸರಳ ಸಂತುಲನ ರಾಸಾಯನಿಕ ಕ್ರಿಯೆಯನ್ನು ಬಳಸಿ ರೂಪಿಸಬಹುದು. ಇಲ್ಲಿ Keq ಎಂಬುದು ಸಂತುಲನ ಸ್ಥಿರಾಂಕವಾಗಿದ್ದರೆ, [C] ಮತ್ತು [S]ಗಳು ಕ್ರಮವಾಗಿ ಸ್ತಂಭ ರಾಳದ ಮೇಲಿನ ಉದ್ದೇಶಿತ ಪರಮಾಣು ಗುಚ್ಛ ಹಾಗೂ ಬಂಧಕ ಪರಮಾಣು ಗುಚ್ಛದ ಸಾಂದ್ರತೆಗಳಾಗಿರುತ್ತವೆ. [CS] ಎಂಬುದು ಸ್ತಂಭ ರಾಳಕ್ಕೆ ಬಂಧಿಸಲ್ಪಟ್ಟಿರುವ ಉದ್ದೇಶಿತ ಪರಮಾಣು ಗುಚ್ಛದ ಸಂಕೀರ್ಣದ ಸಾಂದ್ರತೆಯಾಗಿರುತ್ತದೆ.[]

ಇದನ್ನು ಒಂದು ಆಧಾರವಾಗಿ ಬಳಸಿಕೊಂಡು, ಸ್ತಂಭ ವರ್ಣರೇಖನವೊಂದರ ಬಂಧಕ ಬಲವಿಜ್ಞಾನ ಅಥವಾ ಪ್ರೇರಕ ಶಕ್ತಿಗಳನ್ನು ವಿವರಿಸಲು ಮೂರು ವಿಭಿನ್ನ ಸಮತಾಪಿ ರೇಖೆಗಳನ್ನು ಬಳಸಿಕೊಳ್ಳಬಹುದು. ಅವುಗಳೆಂದರೆ: ರೇಖೀಯವಾದ, ಲ್ಯಾಂಗ್‌ಮುಯಿರ್‌, ಮತ್ತು ಪ್ರ್ಯೂಂಡ್‌ಲಿಚ್‌ ಬಗೆಗಳು.

ಶುದ್ಧೀಕರಿಸಲ್ಪಡಬೇಕಿರುವ ದ್ರಾವ್ಯ ಸಾಂದ್ರತೆಯು ಬಂಧಕ ಪರಮಾಣು ಗುಚ್ಛಕ್ಕೆ ಹೋಲಿಸಿದಾಗ ಅತ್ಯಂತ ಕಡಿಮೆಯಿದ್ದಾಗ, ರೇಖೀಯವಾದ ಸಮತಾಪಿ ರೇಖೆಯು ಸಂಭವಿಸುತ್ತದೆ. ಹೀಗಾಗಿ, ಸಂತುಲನವನ್ನು ಸಮೀಕರಣದ ಮೂಲಕ ಈ ರೀತಿಯಲ್ಲಿ ವ್ಯಾಖ್ಯಾನಿಸಬಹುದು:
[CS] = Keq[C].

ಕೈಗಾರಿಕಾ ಪ್ರಮಾಣದ ಬಳಕೆಗಳಿಗೆ ಸಂಬಂಧಿಸಿದಂತೆ, ಸ್ತಂಭ ರಾಳ ಮಣಿಗಳ ಮೇಲಿನ ಒಟ್ಟು ಬಂಧಕ ಪರಮಾಣು ಗುಚ್ಛಗಳನ್ನು ಘಟಕಗಳನ್ನಾಗಿ ಒಡೆಯಬೇಕಾಗುತ್ತದೆ. ಏಕೆಂದರೆ, ಆವರಿಸಲ್ಪಡದ ತಾಣಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಲ್ಯಾಂಗ್‌ಮುಯಿರ್‌ ಸಮತಾಪಿ ರೇಖೆ ಮತ್ತು ಪ್ರ್ಯೂಂಡ್‌ಲಿಚ್‌ ಸಮತಾಪಿ ರೇಖೆಗಳು ಈ ಸಂತುಲನವನ್ನು ವಿವರಿಸುವಲ್ಲಿ ಪ್ರಯೋಜನಕಾರಿಯಾಗಿವೆ. ಲ್ಯಾಂಗ್‌ಮುಯಿರ್‌ ಸಮತಾಪಿ ರೇಖೆ:
[CS] = (KeqStot[C])/(1 + Keq[C]), ಇಲ್ಲಿ Stot ಎಂಬುದು ಮಣಿಗಳ ಮೇಲಿನ ಒಟ್ಟು ಬಂಧಕ ಪರಮಾಣು ಗುಚ್ಛಗಳಾಗಿವೆ.

ಪ್ರ್ಯೂಂಡ್‌ಲಿಚ್‌ ಸಮತಾಪಿ ರೇಖೆ:
[CS] = Keq[C]1/n

ಶುದ್ಧೀಕರಿಸಲ್ಪಡಬೇಕಿರುವ ದ್ರಾವಣದಲ್ಲಿನ ಅನೇಕ ವಿಭಿನ್ನ ಮಾದರಿಗಳಿಗೆ ಸ್ತಂಭವು ಬಂಧಿಸಲು ಸಮರ್ಥವಾದಾಗ ಪ್ರ್ಯೂಂಡ್‌ಲಿಚ್‌ ಸಮತಾಪಿ ರೇಖೆಯು ಬಳಸಲ್ಪಡುತ್ತದೆ. ಏಕೆಂದರೆ, ಅನೇಕ ವಿಭಿನ್ನ ಮಾದರಿಗಳು ಮಣಿಗಳಿಗೆ ಸಂಬಂಧಿಸಿದಂತೆ ವಿಭಿನ್ನ ಬಂಧಕ ಸ್ಥಿರಾಂಕಗಳನ್ನು ಹೊಂದಿದ್ದು, ಅನೇಕ ವಿಭಿನ್ನ Keqಗಳು ಇಲ್ಲಿ ಅಸ್ತಿತ್ವದಲ್ಲಿವೆ. ಆದ್ದರಿಂದ, ಈ ನಿದರ್ಶನದಲ್ಲಿ ಲ್ಯಾಂಗ್‌ಮುಯಿರ್‌ ಸಮತಾಪಿ ರೇಖೆಯು ಒಂದು ಒಳ್ಳೆಯ ಮಾದರಿಯಲ್ಲ.[]

ಇವನ್ನೂ ನೋಡಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. ಸ್ಟಿಲ್‌, W. C.; ಕಾನ್‌, M.; ಮಿತ್ರ, A. J. ಆರ್ಗ್ಯಾನಿಕ್‌ ಕೆಮ್ಮಿಸ್ಟ್ರಿ 1978 , 43(14) , 2923-2925. (doi:10.1021/jo00408a041)
  2. Laurence M. Harwood, Christopher J. Moody. Experimental organic chemistry: Principles and Practice (Illustrated edition ed.). pp. 180–185. ISBN 978-0632020171. {{cite book}}: |edition= has extra text (help); Text "Number of Pages: 790" ignored (help); Text "Publisher: WileyBlackwell" ignored (help); Text "Publishing Date: 13 Jun 1989" ignored (help)
  3. ನಾರ್ಮಲ್‌ ಫೇಸ್‌ ಕಲಮ್‌ ಕ್ರೋಮಟಾಗ್ರಫಿ, ಮೆಟೀರಿಯಲ್‌ ಹಾರ್ವೆಸ್ಟ್‌
  4. ಫೇರ್‌‌, J. D.; ಕೋರ್ಮೋಸ್‌, C. M. J. ಕ್ರೋಮಟಾಗ್ರಫಿ. A 2008 , 1211 (1-2), 49-54. (doi:10.1016/j.chroma.2008.09.085)
  5. ಐಸೊಲೇಷನ್‌ ಆಫ್‌ ಥ್ರೀ ಕಾಂಪೊನೆಂಟ್ಸ್‌ ಫ್ರಂ ಸ್ಪಿಯರ್‌ಮಿಂಟ್‌ ಆಯಿಲ್‌: ಆನ್‌ ಎಕ್ಸರ್‌‌ಸೈಸ್‌ ಇನ್‌ ಕಲಮ್‌ ಅಂಡ್‌ ಥಿನ್‌-ಲೇಯರ್‌ ಕ್ರೋಮಟಾಗ್ರಫಿ ಡೇವೀಸ್‌, ಡಾನ್‌ R.; ಜಾನ್‌‌ಸನ್‌, ಟಾಡ್‌ M. J. ಕೆಮಿಸ್ಟ್ರಿ ಎಜುಕೇಷನ್‌. 2007 84 ಸಾರಾಂಶ Archived 2008-11-09 ವೇಬ್ಯಾಕ್ ಮೆಷಿನ್ ನಲ್ಲಿ.
  6. ೬.೦ ೬.೧ ೬.೨ ೬.೩ ಹ್ಯಾರಿಸನ್‌ ಮತ್ತು ಇತರರು ಬಯೋಸಪರೇಷನ್ಸ್‌ ಸೈನ್ಸ್‌ ಅಂಡ್‌ ಎಂಜಿನಿಯರಿಂಗ್‌‌ . ಆಕ್ಸ್‌‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌. ನ್ಯೂಯಾರ್ಕ್‌, ನ್ಯೂಯಾರ್ಕ್‌. 2003

ಬಾಹ್ಯ ಕೊಂಡಿಗಳು

[ಬದಲಾಯಿಸಿ]