ಸ್ಟೀವೆನ್ ಜೆರಾರ್ಡ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Steven Gerrard
The big 4-0.jpg
Personal information
Full name Steven George Gerrard[೧]
Date of birth

(1980-05-30) ೩೦ ಮೇ ೧೯೮೦(ವಯಸ್ಸು ೩೬)

[೧]
Place of birth Whiston, Merseyside, England
Height 6 ft 0 in (1.83 m)
Playing position Midfielder
Club information
Current club Liverpool
Number 8
Youth career
1987–1998 Liverpool
Senior career*
Years Team Apps (Gls)
1998– Liverpool 365 (80)
National team
1999 England U21 4 (1)
2000– England[೨] 78 (16)
 • Senior club appearances and goals counted for the domestic league only and correct as of 19:54, 7 May 2010 (UTC).

† Appearances (Goals).

‡ National team caps and goals correct as of 21:53, 03 March 2010 (UTC)

ಸ್ಟಿವನ್ ಜಾರ್ಜ್ ಗೆರಾರ್ಡ್ , ಎಬಿಇ; (ಜನ್ಮದಿನ ಮೇ 30 1980), ಇವರು ಇಂಗ್ಲೀಷ್ ಪ್ರೀಮಿಯರ್ ಲೀಗ್ ಕ್ಲಬ್ ಲಿವರ್‌ಪೂಲ್ ಹಾಗೂ ಇಂಗ್ಲೆಂಡ್ ರಾಷ್ಟ್ರೀಯ ತಂಡದಲ್ಲಿ ಆಡುವ ಒಬ್ಬ ಇಂಗ್ಲೀಷ್ ಫುಟ್‌ಬಾಲ್ ಆಟಗಾರ.pronounced /ˈdʒɛrɑrd/ ಇವರು ತಮ್ಮ ವೃತ್ತಿ ಜೀವನದ ಹೆಚ್ಚಿನ ಸಮಯ ಕೇಂದ್ರ ಮಿಡ್‌ಫೀಲ್ಡ್ ನಲ್ಲಿಯೇ ಆಡಿದ್ದಾರೆ. 2007 ರ ಲಿವರ್‌ಪೂಲ್‌ನಲ್ಲಿ ಫರ್ನಾಂಡೋ ಟೋರಸ್ ಬರುವವರೆಗೂ ಇವರು ಮುಖ್ಯವಾಗಿ ದ್ವಿತೀಯ ಸ್ಟ್ರೈಕರ್ ಆಗಿ ಮತ್ತು 2006 ರಿಂದ ಇಂಗ್ಲೆಂಡ್ ತಂಡದಲ್ಲಿ ವಿಂಗರ್ ಆಗಿಯೇ ಆಡುತ್ತಿದ್ದರು.[೩] ಗೆರಾರ್ಡ್, ತಮ್ಮ ಸಂಪೂರ್ಣ ವೃತ್ತಿ ಜೀವನವನ್ನು ಆನ್‌ಫೀಲ್ಡ್ ನಲ್ಲಿಯೇ ಕಳೆದಿರುವ ಅವರು 1998 ರಲ್ಲಿ ತಂಡಕ್ಕೆ ಪ್ರವೇಶ ಪಡೆದಿದ್ದರು ಹಾಗೂ 2000-01 ರ ಸಮಯದಲ್ಲಿ ತಂಡದಲ್ಲಿ ಪ್ರಥಮವಾಗಿ ಸ್ಥಾನ ಪಡೆದರು, ಅಲ್ಲದೆ 2003 ರ ಸಾಮಿ ಹೈಯಪ್ಪಾಯಿ ಲಿವರ್‌ಪೂಲ್ ತಂಡದಲ್ಲಿ ನಾಯಕನಾಗಿ ಸಫಲತೆ ಕಂಡರು. ಎರಡು ಎಫ್‌ಎ ಕಪ್, ಎರಡು ಲೀಗ್ ಕಪ್, ಒಂದು ಯುಇಎಫ್‌ಎ ಕಪ್ ಹಾಗೂ ಒಂದು ಯುಇಎಫ್‌ಎ ಚಾಂಪಿಯನ್‌ಶಿಪ್‌ ಕಪ್‌ನಲ್ಲಿ 2005 ರಲ್ಲಿ ಗೆಲುವು ಸಾಧಿಸಿದ್ದು ಇವರ ಹೆಗ್ಗಳಿಕೆಯಾಗಿದೆ. ಗೆರಾರ್ಡ್ ಅವರು ಅಂತಾರಾಷ್ಟ್ರೀಯ ತಂಡದಲ್ಲಿ ಪ್ರವೇಶ ಪಡೆದಿದ್ದು 2000 ನೇ ವರ್ಷದಲ್ಲಿ. 2000 ಮತ್ತು 2004 ರ ಯುಇಎಫ್ ಎ ಯುರೋಪಿಯನ್ ಚಾಂಪಿಯನ್‌ಶಿಪ್‌‌ನಲ್ಲಿ ಹಾಗೂ 2006 ರ ಫಿಫಾ ವಿಶ್ವಕಪ್ ನಲ್ಲಿ ಭಾಗವಹಿಸಿದ್ದರು. ವಿಶ್ವಕಪ್‌ನಲ್ಲಿ ಇವರು ಎರಡು ಗೋಲ್ ಗಳನ್ನು ಪಡೆದು ತಂಡದ ಅಗ್ರಗಣ್ಯ ಗೋಲ್ ಸ್ಕೋರರ್ ಆದರು. ಲಿವರ್‌ಪೂಲ್ ಎಫ್.ಸಿ. ಯ ‘ಹೂ ಶೂಕ್ ದ ಕೊಪ್’ ಅಭಿಮಾನಿಗಳ ಮತದಾನದಲ್ಲಿ ಗೆರಾರ್ಡ್ ಅವರು 100 ಆಟಗಾರರಲ್ಲಿ ದ್ವಿತೀಯ ಸ್ಥಾನ ಪಡೆದರು.[೪]

ಕ್ಲಬ್ ವೃತ್ತಿಜೀವನ[ಬದಲಾಯಿಸಿ]

ಇವರು ವಿಸ್ಟೊನ್ಮರ್ಸಿಸೈಡ್‌ನಲ್ಲಿ ಜನಿಸಿದರು. ಗೆರಾರ್ಡ್ ತಾವು ಹುಟ್ಟಿ ಬೆಳೆದ ವಿಸ್ಟೊನ್‌ನ ಕಿರಿಯರ ತಂಡದಲ್ಲಿ ಆಡತೊಡಗಿದರು. ಇಲ್ಲಿಯೇ ಅವರು ಲಿವರ್‌ಪೂಲ್ ಶೋಧನಾಕಾರರಿಂದ ಗುರುತಿಸಲ್ಪಟ್ಟರು. [೧] ಅವರು ತಮ್ಮ 9 ನೇ ವಯಸ್ಸಿನಲ್ಲಿಯೇ ರೆಡ್ಸ್ ಯುಥ್ ಅಕಾಡಮಿಗೆ ಸೇರಿದರು.[೫] 14 ನೇ ವಯಸ್ಸಿನಲ್ಲಿ ವಿವಿಧ ಕ್ಲಬ್ ಗಳ ಜೊತೆಗೆ ಆಡಿದರು. ಆದರೆ, ಅವರಿಗೆ ತಕ್ಷಣ ಸಫಲತೆ ಸಿಗಲಿಲ್ಲ. ಗೆರಾರ್ಡ್ ಅವರು ಇಂಗ್ಲೆಂಡ್ ಶಾಲಾ ಬಾಲಕರ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ಮ್ಯಾಂಚೆಸ್ಟರ್ ಯುನೈಟೆಡ್ ಗೂ ಕೂಡ ಗೆರಾರ್ಡ್ ಸೇರಲು ಪ್ರಯತ್ನಿಸಿದ್ದರು. ಈ ಕುರಿತು 2006 ರ ತಮ್ಮ ಆತ್ಮಕತೆಯಲ್ಲಿ ಹೇಳಿಕೊಂಡ ಅವರು ‘ತಮಗೆ ವೈಟಿಎಸ್ ಒಪ್ಪಂದ ನೀಡುವಂತೆ ಲಿವರ್‌ಪೂಲ್ ಮೇಲೆ ಒತ್ತಡ ಹೇರಲು ಹೀಗೆ ಮಾಡಬೇಕಾಯಿತು’ ಎಂದು ಹೇಳಿಕೊಂಡರು.[೬] ಅವರು ತಮ್ಮ ಪ್ರಥಮ ವೃತ್ತಿ ಗುತ್ತಿಗೆಗೆ 1997 ರ ನವೆಂಬರ್ 5 ರಂದು ಲಿವರ್‌ಪೂಲ್ ಜೊತೆ ಸಹಿ ಹಾಕಿದರು.[೬]

ಸ್ಟೀವನ್ ಗೆರಾರ್ಡ್

ಗೆರಾರ್ಡ್ ಅವರು 1998 ರ ನವೆಂಬರ್ 29 ರಂದು ಲಿವರ್‌ಪೂಲ್‌ನ ಪ್ರಥಮ ತಂಡದಲ್ಲಿ ಪ್ರವೇಶ ಪಡೆದರು. ಬ್ಲಾಕ್‌ಬರ್ನ್ ರೋವರ್ಸ್ ತಂಡದ ವಿರುದ್ಧದ ಪಂದ್ಯಕ್ಕಾಗಿ ಕೊನೆ ಹಂತದಲ್ಲಿ ವಿಗಾರ್ಡ್ ಹೆಗ್ಗೆಮ್ ಬದಲಿಗೆ ಪ್ರವೇಶ ಪಡೆದಿದ್ದರು.[೭] ಪ್ರವೇಶ ಪಡೆದ ಸಮಯದಲ್ಲಿಯೇ ಅವರು 13 ತೋರಿಕೆಗಳನ್ನು ನೀಡಿದರು. ತಂಡದ ನಾಯಕ ಜೇಮಿ ರೆಡ್‌ನಾಪ್[೫] ಗಾಯಗೊಂಡಾಗ ಮಿಡ್‌ಫೀಲ್ಡ್ ಸ್ಥಾನ ತುಂಬಿದರು, ಬಲ ವಿಂಗ್‌ನಲ್ಲಿ ಆಡಿದರು, ಆದರೆ, ಆಡುವಾಗ ಅಧೀರನಾದ ಕಾರಣ ಶಾರ್ಡ್ ಆನ್‌ಪಿಚ್‌ನಲ್ಲಿ ಸ್ವಲ್ಪ ಕೊಡುಗೆಯನ್ನಷ್ಟೇ ನೀಡಿದಲು ಸಾಧ್ಯವಾಯಿತು.[೮] ದ ಗಾರ್ಡಿಯನ್ ಪತ್ರಿಕೆಗೆ 2008 ರ ನವೆಂಬರ್‌ನಲ್ಲಿ ನೀಡಿದ ಸಂದರ್ಶನದಲ್ಲಿ ಇದನ್ನು ಸ್ಮರಿಸಿದ ಅವರು, ‘ನಾನು ಸ್ಥಾನಪಲ್ಲಟಗೊಂಡಿದ್ದೆ ಮತ್ತು ನನ್ನತನದಲ್ಲಿರಲಿಲ್ಲ’ ಎಂದರು. ಗೆರಾರ್ಡ್ ಸುಧಾರಿಸಬಲ್ಲರು ಎಂದು ಲಿವರ್‌ಪೂಲ್ ಸ್ಪಷ್ಟಪಡಿಸಿತು.[೮] ಪ್ರಾಥಮಿಕವಾಗಿ ಗೆರಾರ್ಡ್ ತಮ್ಮನ್ನು ಒಬ್ಬ ರಕ್ಷಣಾತ್ಮಕ ಆಟಗಾರನಂತೆ ಚಿತ್ರಿಸಿಕೊಂಡರು. ನಿಜವಾಗಿ ಹೇಳಬೇಕೆಂದರೆ ತಂಡವನ್ನು ಮುನ್ನಡೆಸುವ ಕೀ ಟ್ಯಾಕಲ್ ಆಟಗಾರನಂತೆ ಚಿತ್ರಿಸಿಕೊಂಡರು.[೭] ಗೆರಾರ್ಡ್ ಅವರು 1999-00 ರಲ್ಲಿ ರೆಡ್ ನಾಪ್ ಜೊತೆಗೆ ಕೇಂದ್ರ ಮಿಡ್ ಫೀಲ್ಡ್ ನಲ್ಲಿ ಆಡಿದರು. ಬೆಂಚ್ ನಲ್ಲಿ ಎವರ್‌ಟೊನ್ ಎದುರು ಡರ್ಬಿ ಪಂದ್ಯ ಆರಂಭಿಸಿದ ನಂತರ ಅವರು ರಾಬ್ಬಿ ಫೊವ್ಲರ್ ಬದಲಿಗೆ ದ್ವಿತೀಯಾರ್ಧದಲ್ಲಿ ಆಡಿದರು. ಆದರೆ, ಎವರ್‌ಟೊನ್‌ನ ಕೆವಿನ್ ಕ್ಯಾಂಪ್‌ಬೆಲ್‌ನಲ್ಲಿ ತಡವಾಗಿ ಫೌಲ್ ಮಾಡಿದ್ದಕ್ಕಾಗಿ ವೃತ್ತಿ ಜೀವನದಲ್ಲಿಯೇ ಪ್ರಥಮ ಬಾರಿಗೆ ಕೆಂಪು ಕಾರ್ಡ್ ಪಡೆದರು.[೯] ನಂತರದ ಸಮಯದಲ್ಲಿ ಗೆರಾರ್ಡ್ ಅವರು ಶೆಫೀಲ್ಡ್ ವೆಡ್ನಡೇಯಲ್ಲಿ ತಮ್ಮ ಪ್ರಥಮ ದೊಡ್ಡ ಗೋಲನ್ನು 4-1 ಗೆಲುವಿನಲ್ಲಿ ಸಂಪಾದಿಸಿದರು.[೧೦] ಆದರೂ ಅವರನ್ನು ಬೆನ್ನು ನೋವು ಕಾಡಿಸಲು ಆರಂಭಿಸಿತು. ಗೆರಾರ್ಡ್ ತಮ್ಮ ಹದಿ ವಯಸ್ಸಿನಲ್ಲಿ ಆಡಿದ ಅತಿಯಾದ ಆಟದ ಕಾರಣ ಕ್ರೀಡಾ ಸಮಾಲೋಚಕ ಹ್ಯಾನ್ಸ್ ವಿಲ್ಹೆಮ್ ಮುಲ್ಲರ್-ವ್ಹೋಲ್‌ಫಾರ್ಟ್ ಅವರು ನಂತರ ತೀವ್ರವಾದ ಡಯೈಗ್ನಸಿಸ್ ಚಿಕಿತ್ಸೆ ನೀಡಿದರು. ನಂತರ ಅವರಿಗೆ ಬೆರಳು ಮೂಳೆ ಗಾಯದಿಂದ ನರಳಿದರು.[೬] ಇದಕ್ಕಾಗಿ ಅವರಿಗೆ 4 ಪ್ರತ್ಯೇಕ ಶಸ್ತ್ರ ಚಿಕಿತ್ಸೆಗಳನ್ನು ಮಾಡಬೇಕಾಯಿತು.[೬] 2000-01 ರಲ್ಲಿ ಅವರು ಎಲ್ಲ ಸ್ಪರ್ಧೆಗಳಲ್ಲಿಯೂ 50 ಆರಂಭ ಮಾಡಿದರು ಹಾಗೂ 10 ಗೋಲ್ ಮಾಡುವುದರ ಮೂಲಕ ಲಿವರ್‌ಪೂಲ್ ಲೀಗ್ ಕಪ್, ಎಫ್ಎ ಕಪ್ ಮತ್ತು 2001 ರ ಯುಇಎಫ್ಎ ಕಪ್ ಗೆದ್ದರು. 2003 ರ ಅಕ್ಟೋಬರ್ ನಲ್ಲಿ ಗೆರಾರ್ಡ್ ಅವರು ಸಮಿ ಹೈಪಿಯಾ ಅವರ ಬದಲಿಗೆ ಲಿವರ್‌ಪೂಲ್ ತಂಡದ ನಾಯಕರಾದರು. ಇದಕ್ಕೆ ಪ್ರತಿಕ್ರಿಯಿಸಿದ ತಂಡದ ವ್ಯವಸ್ಥಾಪಕ ಗೆರಾರ್ಡ್ ಹೊಲ್ಲಿಯರ್, ಗೆರಾರ್ಡ್ ಅವರು ತಮ್ಮಲ್ಲಿನ ನಾಯಕತ್ವ ಗುಣವನ್ನು ಮೊದಲೇ ತೋರಿಸಿದ್ದರು. ಆದರೆ, ಪ್ರೌಢರಾಗುವವರೆಗೂ ಕಾಯಬೇಕಾಯಿತು ಎಂದರು.[೧೧] ಅವರು ತಮ್ಮ ಗುತ್ತಿಗೆಯನ್ನು ವಿಸ್ತರಿಸಿಕೊಳ್ಳಲು ಆದ್ಯತೆ ನೀಡಿ ಕ್ಲಬ್ ಜೊತೆಗೆ ಇನ್ನೂ 4 ವರ್ಷಗಳ ಅವಧಿಗಾಗಿ ಸಹಿ ಮಾಡಿದರು.[೧೨]

2003-04 ರಲ್ಲಿ ನಡೆದ ಪಂದ್ಯಗಳಲ್ಲಿ ವಿಜಯವನ್ನೇ ಪಡೆಯದ ಕಾರಣ ಹೊಲ್ಲಿಯರ್ ಅವರು ನಿರ್ಗಮಿಸಿದರು ಮತ್ತು ಗೋರಾರ್ಡ್ ಅವರು ಚೆಲ್ಸಿಯಾ ಜೊತೆಗೆ ಪಂದ್ಯ ನಡೆಯದ ಸಂದರ್ಭಗಳಲ್ಲಿ ಸೇರಿದರು. ಲಿವರ್‌ಪೂಲ್‌ನಲ್ಲಿ ನಡೆಯುತ್ತಿದ್ದ ಬೆಳವಣಿಗೆಯಿಂದ ಅವರು ಸಂತೋಷವಾಗಿರಲಿಲ್ಲ ಮತ್ತು ನನ್ನ ವೃತ್ತಿ ಜೀವನದಲ್ಲಿಯೇ ಮೊದಲ ಬಾರಿಗೆ ಮುನ್ನಡೆಯುವ ಸಾಧ್ಯತೆಗಳ ಕುರಿತು ಚಿಂತಿಸಿದೆ ಎಂದರು.[೧೩] ಕೊನೆಯಲ್ಲಿ ಗೆರಾರ್ಡ್ ಅವರು ಚೆಲ್ಸಿಯಾದಿಂದ 20 ದಶಲಕ್ಷ ಪೌಂಡ್‌ಗಳಿಗೆ ಲಿವರ್‌ಪೂಲ್ ಹಾಗೂ ನೂತನ ತರಬೇತುದಾರ ರಾಫೆಲ್ ಬೆನ್‌ಟೆಜ್ ಜೊತೆ ಇರಲು ಸೂಚಿಸಲ್ಪಟ್ಟರು.[೧೪]

ಗೆರಾರ್ಡ್ ಲೈವರ‍್ಫೂಲ್‌ಗಾಗಿ ಚೆಂಡನ್ನು ಒದೆಯುತ್ತಿರುವುದು

ಗೆರಾರ್ಡ್ ಅವರನ್ನು 2004-05 ರಲ್ಲಿ ಲಿವರ್‌ಪೂಲ್ ಗಾಯದ ಕಾರಣ ಪ್ರತ್ಯೇಕಿಸಿತು ಮತ್ತು ಸೆಪ್ಟೆಂಬರ್ ಲೀಗ್ ನ ಮ್ಯಾಂಚೆಸ್ಟರ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಆದ ಪಾದದ ಗಾಯದ ಕಾರಣ ಗೆರಾರ್ಡ್ ನವೆಂಬರ್ ವರೆಗೂ ತಂಡದಿಂದ ನಿರ್ಗಮಿಸಿದರು. ಚಾಂಪಿಯನ್ಸ್ ಲೀಗ್‌ಗ್ರೂಪ್‌ನ ಪಂದ್ಯದಲ್ಲಿ ಓಲಂಪಿಯಾಕೊಸ್ ವಿರುದ್ಧ ಲಿವರ್‌ಪೂಲ್ ಮುಂದುವರಿಕೆಯ ರಕ್ಷಣೆಗಾಗಿ ನಾಕೌಟ್ ರೌಂಡ್ ನಲ್ಲಿ ಕೊನೆಯ ಐದು ನಿಮಿಷದಲ್ಲಿ ಸ್ಕೋರ್ ಹೆಚ್ಚಳಕ್ಕಾಗಿ ವಾಪಸ್ಸಾದರು. [೧೫] ಈ ಪಂದ್ಯ ತಮಗೆ ಅತ್ಯಂತ ಪ್ರಮುಖವಾದದ್ದು ಎಂದು ತಿಳಿದ ಅವರು, ಅವರ ಅತ್ಯುತ್ತಮ ರೀತಿಯಲ್ಲಿ ಅಲ್ಲದಿದ್ದರೂ ಲಿವರ್‌ಪೂಲ್ ಗೆ ಗೋಲ್ ಹೊಡೆಯಲು ನಿರ್ಧರಿಸಿದರು.[೧೬] 2005 ರ ಲೀಗ್ ಕಪ್‌ನ ಅಂತಿಮ ಪಂದ್ಯದಲ್ಲಿ ಫೆಬ್ರವರಿ 27 ರಂದು ಗೆರಾರ್ಡ್ ಅವರು ತಮ್ಮದೇ ಸ್ವಂತ ಗೋಲ್ ಸಂಪಾದಿಸಿದರು. ಇದು ಚೆಲ್ಸಿಯಾ ವಿರುದ್ಧ ಲಿವರ್‌ಪೂಲ್ 3-2 ರಿಂದ ಸೋಲಲು ಕಾರಣವಾಯಿತು.[೧೭] 2005 ರಲ್ಲಿ ನಡೆದ ಚಾಂಪಿಯನ್ ಲೀಗ್‌ನ ಫೈನಲ್ ಪಂದ್ಯದಲ್ಲಿ ಎ.ಸಿ. ಮಿಲನ್ ಎದುರು ಲಿವರ್‌ಪೂಲ್ ತಂಡಕ್ಕೆ ಸಿಕ್ಕ ಹೆಚ್ಚಿನ 6 ನಿಮಿಷಗಳ ಸಮಯದಲ್ಲಿ ಮೂರು ಗೋಲುಗಳನ್ನು ಗಳಿಸಿತು. ಇದರಿಂದ ಹೆಚ್ಚಿನ ಸಮಯದ ನಂತರ ತಂಡ 3-3 ರಿಂದ ಸಮವಾಯಿತು. ಇದರಲ್ಲಿ ಗೆರಾರ್ಡ್ ಕೂಡ ಒಂದು ಗೋಲು ಗಳಿಸಿದ್ದು ವಿಶೇಷ. ಲಿವರ್‌ಪೂಲ್ ತಂಡಕ್ಕೆ ಮೂರನೇ ಗೋಲು ದಂಡದ ರೂಪದಲ್ಲಿ ಸಿಕ್ಕಿತ್ತು.ಗೆರಾರ್ಡ್ ಗೆ ಮಿಲನ್ಸ್ ಪೆನಾಲ್ಟಿ ಬಾಕ್ಸ್ ನಲ್ಲಿ ಗೆನ್ನಾರೋ ಗಟ್ಟುಸೋ ಎಂಬಾತ ತಪ್ಪೆಸಗಿದ. ದಂಡದ ಹೊಡೆತದಲ್ಲಿ ಗೆರಾರ್ಡ್ ಪಾಲ್ಗೊಳ್ಳಲಿಲ್ಲ. ಆದರೆ, ಲಿವರ್‌ಪೂಲ್ ತಂಡ 20 ವರ್ಷಗಳಲ್ಲಿ ಪ್ರಥಮ ಬಾರಿಗೆ[೧೮] ಸಿಎಲ್ ಪಂದ್ಯಾವಳಿಯನ್ನು 3-2 ಎರಡರಿಂದ ಗೆದ್ದುಕೊಂಡಿತ್ತು. ಆದಾಗ್ಯೂ ಗೆರಾರ್ಡ್ ಈ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಮನ್ನಣೆ ಗಳಿಸಿದ. ಅಲ್ಲದೆ, ನಂತರ ವರ್ಷದ ಯುಇಎಫ್ಎ ಫುಟ್ ಬಾಲ್ ಆಟಗಾರ ಪ್ರಶಸ್ತಿಯನ್ನೂ ಗಳಿಸಿದ.[೧೯] ಲಿವರ್‌ಪೂಲ್ ಜೊತೆಗಿನ ಒಪ್ಪಂದಕ್ಕೆ ಸಂಬಂಧಿಸಿದಂತೆ ಅಂತಿಮ ಪಂದ್ಯದ ನಂತರ ಗೆರಾರ್ಡ್ ಅಭಿನಂದನಾ ಪೂರ್ವಕವಾಗಿ ಮಾದ್ಯಮಗಳ ಹತ್ತಿರ "ನಾನು ಇಂತಹ ಒಂದು ರಾತ್ರಿಯ ನಂತರ ಹೇಗೆ ಬಿಟ್ಟು ಹೋಗಬಲ್ಲೆ" ಎಂದು ಹೇಳಿಕೊಂಡ.[೨೦] ಆದರೆ ಸಮಾಲೋಚನೆ ತಕ್ಷಣದಲ್ಲಿ ನಿಂತು ಹೋಯಿತು ಮತ್ತು 2005 ರ ಜುಲೈ 5 ರಂದು ಲಿವರ್‌ಪೂಲ್ ತಂಡ ಚೆಲ್ಸಿಯಾದಿಂದ ನೀಡಲ್ಪಟ್ಟ ಮತ್ತೊಂದು ಆದಾಯದ ಆಹ್ವಾನವನ್ನು ತಿರಸ್ಕರಿಸಿತು. ಅಲ್ಲದೆ, ವಾರಕ್ಕೆ 1 ಲಕ್ಷ ಪೌಂಡ್ ಬೆಲೆಯ ಕ್ಲಬ್ ನ ಆಹ್ವಾನವನ್ನೂ ಗೆರಾರ್ಡ್ ತಿರಸ್ಕರಿಸಿದರು. ಇದಕ್ಕೆ ಉತ್ತರಿಸಿದ ಲಿವರ್‌ಪೂಲ್ ತಂಡ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಕ್ ಪಾರ್ಟಿ ಕ್ಲಬ್ ಗೆರಾರ್ಡ್ ಅವರನ್ನು ಕಳೆದುಕೊಂಡಿತು. ಆಗ ನಾವು ಮುಂದಕ್ಕೆ ನಡೆಯಬೇಕು. "ನಾವು ಅತ್ಯುತ್ತಮ ರೀತಿಯಲ್ಲಿಯೇ ಪ್ರಯತ್ನಿಸಿದೆವು. ಆದರೆ, ಅವರು ತಾವು ಹೋಗಬೇಕು ಎಂದು ಸ್ಪಷ್ಟಪಡಿಸಿದರು. ನನ್ನ ಪ್ರಕಾರ ಅದೊಂದು ಸುಂದರವಾದ ಅಂತಿಮ ಪಂದ್ಯ" ಎಂದರು.[೨೧] ಮರುದಿನ ಗೆರಾರ್ಡ್ ಹಿಂದೆ ನಡೆಸಿದ ಮಾತುಕತೆಗೆ ತಪ್ಪಿದ್ದ ಕಾರಣ ಮತ್ತೊಂದು 4 ವರ್ಷಗಳ ವ್ಯವಹಾರಕ್ಕೆ ಸಹಿ ಹಾಕಿದ.[೨೨][೨೩]

ಗೆರಾರ್ಡ್ 2006–07 ನ ಋತುವಿನಲ್ಲಿ

ಗೆರಾರ್ಡ್ ಅವರು 2005-06 ರಲ್ಲಿ 53 ತೋರಿಕೆಗಳಲ್ಲಿ 23 ಗೋಲುಗಳನ್ನು ಗಳಿಸಿದರು. ಮತ್ತು ಜಾನ್ ಬಾರ್ನ್ಸ್ 1988 ರ ನಂತರ ಏಪ್ರಿಲ್ ನಲ್ಲಿ ವರ್ಷದ ಪಿಎಫ್ಎ ಆಟಗಾರನಾಗಿ ಆಯ್ಕೆಯಾದ ಲಿವರ್‌ಪೂಲ್ ತಂಡದ ಪ್ರಥಮ ಆಟಗಾರ ಎನ್ನಿಸಿಕೊಂಡರು.[೨೪] ಅವರು 2006 ರ ಎಫ್ಎ ಕಪ್ ಅಂತಿಮ ಪಂದ್ಯದಲ್ಲಿ ವೆಸ್ಟ್ ಹ್ಯಾಮ್ ಯುನೈಟೆಡ್ ವಿರುದ್ಧ ಎರಡು ಬಾರಿ ಸ್ಕೋರ್ ಮಾಡಿದರು. ಪಂದ್ಯಕ್ಕೆ ಹೆಚ್ಚಿನ ಸಮಯ ಸಿಗಲು ಸಹಾಯಕವಾಗುವತ್ತ ಮುನ್ನಡೆಸಿದರು ಮತ್ತು ಪೆನಾಲ್ಟಿಗಳಲ್ಲಿ ಲಿವರ್‌ಪೂಲ್ ತನ್ನ 2ನೇ ಕ್ರಮದ ಟ್ರೋಪಿಯನ್ನು ಗೆಲ್ಲಲು ಸಹಾಯಕವಾಯಿತು. ಈ ಗೋಲುಗಳು ಅವರನ್ನು ಎಫ್ಎ ಕಪ್, ಲೀಗ್ ಕಪ್, ಯುಇಎಫ್ಎ ಕಪ್ ಹಾಗೂ ಚಾಂಪಿಯನ್ ಲೀಗ್ ಅಂತಿಮ ಪಂದ್ಯಗಳಲ್ಲಿ ಸ್ಕೋರ್ ಗಳಿಸಿದ ಏಕೈಕ ವ್ಯಕ್ತಿಯಾಗಿ ಮಾಡಿದವು. [೨೫] ಗೆರಾರ್ಡ್ ಒಂದು ಪೆನಾಲ್ಟಿ ಗೋಲ್ ಹೊಡೆಯುವ ಮೂಲಕ ಲೀವರ್‌ಪೂಲ್ ತಮ್ಮ ಲೀಗ್ ವಿರೋಧಿ ಚೆಲ್ಸಿಯಾವನ್ನು 2006–07 ಚಾಂಪಿಯನ್ಸ್ ಲೀಗ್ ಸೆಮಿ-ಫೈನಲ್‌ನಿಂದ ಹೊರಹಾಕಿತು ಮತ್ತು ಆ ಮೂಲಕ ಮೂರು ಋತುಗಳಲ್ಲಿ ತಮ್ಮ ಎರಡನೇ ಫೈನಲ್‌ಗೆ ಹೆಜ್ಜೆಯಿಟ್ಟಿತು, ಆದರೆ ಅದು 2–1 ರಿಂದ ಮಿಲನ್‌ಗೆ ಸೋಲಬೇಕಾಯಿತು.[೨೬][೨೭]

2007 ರ ಅಗಸ್ಟ್ ನಲ್ಲಿ ನಡೆದ ಚಾಂಪಿಯನ್ ಲೀಗ್ ಕ್ವಾಲಿಫೈಯರ್ ನಲ್ಲಿ ಟೌಲೌಸ್ ಎಫ್.ಸಿ. ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಕಾಲು ಬೆರಳು ಮೂಳೆ ಮುರಿತದಿಂದ ಗೆರಾರ್ಡ್ ನಲುಗಬೇಕಾಯಿತು,[೨೮] ಆದರೆ, 4 ದಿನಗಳ ನಂತರ ಅವರು ಚೆಲ್ಸಿಯಾ ವಿರುದ್ಧ 1-1 ಲೀಗ್ ಪಂದ್ಯ ಆಡಲು ವಾಪಸ್ಸಾದರು.[೨೯] ಅಕ್ಟೋಬರ್ 28 ರಂದು ಗೆರಾರ್ಡ್ ಅವರು ತಮ್ಮ 400 ನೇ ಪಂದ್ಯವನ್ನು ಲಿವರ್‌ಪೂಲ್ ತಂಡಕ್ಕಾಗಿ ಲೀಗ್ ಪಂದ್ಯಕ್ಕಾಗಿ ಅರ್ಸೆನಾಲ್ ವಿರುದ್ಧ ಆಡಿ ಉತ್ತಮ ಸ್ಕೋರ್ ಮಾಡಿದರು.[೩೦][೩೧] ಅವರು ನವೆಂಬರ್ ತಿಂಗಳಲ್ಲಿಯ ಲಿವರ್‌ಪೂಲ್‌ನ ಕೌಟುಂಬಿಕ ಮತ್ತು ಯುರೋಪಿಯನ್ ಪಂದ್ಯದಲ್ಲಿ ಎಲ್ಲ ಸ್ಕೋರ್ ಮಾಡಿದ್ದರು ಹಾಗೂ ಒಲಿಂಪಿಕ್ ಡೆ ಮರ್ಸೇಲ್ಲೆ ವಿರುದ್ಧ ಡಿಸೆಂಬರ್ 11 ರಂದು ಚಾಂಪಿಯನ್ ಲೀಗ್ ಪಂದ್ಯದಲ್ಲಿ ಮಾಡಿದ ಗೋಲ್‌ನಿಂದ ಪಂದ್ಯ ಸಮವಾಯಿತು. ಈ ಮೂಲಕ ಅವರು 1989 ರಲ್ಲಿ ಜಾನ್ ಆಲ್‌ಡ್ರಿಡ್ಜ್ ಅವರ ನಂತರ ಎಲ್ಲ ಸ್ಪರ್ಧೆಗಳಲ್ಲಿಯೂ 7 ರಲ್ಲಿ ಸ್ಕೋರ್ ಮಾಡಿದ ಪ್ರಥಮ ಆಟಗಾರ ಎನ್ನಿಸಿಕೊಂಡರು.[೩೨] ಅವರು ತಮ್ಮ 300 ನೇ ಪ್ರೀಮಿಯರ್ ಲೀಗ್ ಆಗಮನವನ್ನು 2008 ರ ಏಪ್ರಿಲ್ 13 ರಂದು ಬ್ಲಾಕ್ ಬರ್ನ್ ರೋವರ್ಸ್ ವಿರುದ್ಧ ಮಾಡಿದರು. ಇದರಲ್ಲಿ ಅವರು ಆರಂಭಿಕ ಗೋಲ್[೩೩][೩೪] ಗಳಿಸಿದರೆ ಇಪ್ಪತ್ತು-ಎರಡು ಲೀಗ್ ಗೋಲ್ ಗಳ ಮೂಲಕ ಸಮಯವನ್ನು ಮುಗಿಸಿ ತಮ್ಮ 2006-07 ರ ಒಟ್ಟೂ ಮೊತ್ತವನ್ನು ಮೀರಿಸಿದರು. ಗೆರಾರ್ಡ್ ಅವರು ಪಿಎಫ್ಎ ತಂಡದ ವರ್ಷದ ಆಟಗಾರನಾಗಿ ಆಯ್ಕೆಯಾದರು. ಅವರು ತಂಡದ ಸಹ ಆಟಗಾರ ಫರ್ನಾಂಡೋ ಟೋರಿಸ್ ಜೊತೆಯಲ್ಲಿಯೇ ಪಿಎಫ್ಎ ವರ್ಷದ ಆಟಗಾರ ಗೌರವಕ್ಕಾಗಿ ನಿಯುಕ್ತಿಗೊಂಡಿದ್ದರು.[೩೫][೩೬]

ಲೀವರ್‌ಪೂಲ್ ನಾಯಕ ಸ್ಟೀವನ್ ಗೆರಾರ್ಡ್.

ಆ ಋತುವಿನ ಪ್ರಾರಂಭದಲ್ಲಿ ಗೆರಾರ್ಡ್‌ಗೆ ತೊಡೆಸಂದಿನ ಶಸ್ತ್ರಚಿಕಿತ್ಸೆ ಆಗಬೇಕಾಗಿರುತ್ತದೆ, ಆದರೆ ಆತನ ಅನಾರೋಗ್ಯ ಅಂತಹ ಗಂಭೀರವಾಗಿರದ ಕಾರಣ ಆತ ಬಹಳ ಬೇಗ ತರಬೇತಿಗೆ ಮರಳುತ್ತಾನೆ.[೩೭]

ಆತ ತನ್ನ ವೃತ್ತಿಯ ನೂರನೇ ಲಿವರ್‌ಪೂಲ್ ಗೋಲ್ ಆಗಬಹುದಾಗಿದ್ದನ್ನು ಸ್ಟೋಕ್ ಸಿಟಿ ವಿರುದ್ಧ 20 ಸೆಪ್ಟೆಂಬರ್‌ರಂದು ಬಾರಿಸಿದ, ಆದರೆ ಆಫ್‌ಸೈಡ್‌ನಲ್ಲಿದ್ದ ಡಿರ್ಕ್ ಕ್ಯೂಟ್ ಅದನ್ನು ಹೊರಕಳಿಸಿದ್ದರಿಂದ ಅದನ್ನು ಒಪ್ಪಿಕೊಳ್ಳಲಾಗಲಿಲ್ಲ.[೩೮] ಆನಂತರ, ಹನ್ನೊಂದು ದಿನಗಳ ನಂತರದಲ್ಲಿ PSV ಮೇಲೆ ಚಾಂಪಿಯನ್ಸ್ ಲೀಗ್ ಗ್ರೂಪ್ ಸ್ಟೇಜ್‌ನ 3–1 ಗೆಲುವಿನ ಮೂಲಕ ಆತ ಆ ಗುರಿಯನ್ನು ತಲುಪಿದ.[೩೯]

ಅವರು ತಮ್ಮ 100 ನೇ ತೋರಿಕೆಯನ್ನು ಯುರೋಪಿಯನ್ ಕ್ಲಬ್ ಸ್ಪರ್ಧೆಯಲ್ಲಿ ಲಿವರ್‌ಪೂಲ್ ಗಾಗಿ 2009 ರ ಮಾರ್ಚ್ 10 ರಂದು ರಿಯಲ್ ಮಾಡ್ರಿಡ್ ವಿರುದ್ಧ ಮಾಡಿದರು. ಮತ್ತು ಗೆಲುವಿಗಾಗಿ ಎರಡು ಬಾರಿ 4-0 ಸ್ಕೋರ್ ಮಾಡಿದರು.[೪೦]

ನಾಲ್ಕು ದಿನಗಳ ನಂತರ ರಿಯಲ್ ಮಾಡ್ರಿಡ್ ವಿರುದ್ಧ ಪಡೆದ ಆಕರ್ಷಕ ವಿಜಯದ ನಂತರ ಓಲ್ಡ್ ಟ್ರಾಫಾರ್ಡ್‌ನಲ್ಲಿ ಗೆರಾರ್ಡ್ ಅವರು ಮೊದಲ ಬಾರಿಗೆ ಪೆನಾಲ್ಟಿ ಜಾಗದಿಂದಲೇ ಗೋಲ್ ಮಾಡಿದರು. ಈ ಮೂಲಕ ಮ್ಯಾಂಚೆಸ್ಟರ್ ಯುನೈಟೆಡ್ ವಿರುದ್ಧ ಲಿವರ್‌ಪೂಲ್ ತಂಡವನ್ನು 4-1 ರಲ್ಲಿ ಮುನ್ನಡೆಸಿ ಜಯಗಳಿಸಲು ಅನುವಾದರು.[೪೧] ಈ ಎಲ್ಲ ಫಲಿತಾಂಶಗಳ ನಂತರದಲ್ಲಿ, ಮೂರು ಬಾರಿ ಫಿಫಾ ವರ್ಷದ ವಿಶ್ವ ಆಟಗಾರ ಮನ್ನಣೆ ಗಳಿಸಿದ್ದ ಜಿನಾದಿನ್ ಜಿಡಾನೆ ಅವರು ಲಿವರ್‌ಪೂಲ್ ನಾಯಕನನ್ನು ಕರೆದು ಹೀಗೆ ಹೇಳಿದರು,"ಅವರು ವಿಶ್ವದಲ್ಲಿಯೇ ಉತ್ತಮ ಆಟಗಾರರೇನು? ಅವರು ಮೆಸ್ಸಿ ಮತ್ತು ರೋನಾಲ್ಡೋ ಅವರಷ್ಟು ಗಮನ ಸೆಳೆಯದಿದ್ದರೂ ಹೌದು. ಅವರು ವಿಶ್ವದಲ್ಲಿಯೇ ಉತ್ತಮ ಆಟಗಾರ ಇರಬಹುದು ಎಂದು ನನಗೆ ಅನ್ನಿಸುತ್ತಿದೆ" ಎಂದರು.[೪೨] 2009 ರ ಮಾರ್ಚ್ ನಲ್ಲಿ ಗೆರಾರ್ಡ್ ಅವರು ತಮ್ಮ ಮೊಟ್ಟ ಮೊದಲ ಹ್ಯಾಟ್ರಿಕ್ ಸ್ಕೋರ್ ಸಾಧನೆಯನ್ನು ಪ್ರಧಾನ ಲೀಗ್ ಪಂದ್ಯದಲ್ಲಿ ಅಸ್ಟೋನ್ ವಿಲ್ಲಾ ವಿರುದ್ಧ 5-0 ಅಂತರದಲ್ಲಿ ಸಾಧಿಸಿದರು.[೪೩] 

2009 ರ ಮೇ 13 ರಂದು ಗೆರಾರ್ಡ್ ಅವರು 2009 ರ ಫುಟ್‌ಬಾಲ್ ಬರಹಗಾರರ ಸಂಘದಿಂದ ವರ್ಷದ ಫುಟ್ ಬಾಲ್ ಆಟಗಾರನಾಗಿ ಆಯ್ಕೆಯಾದರು. ಈ ಮೂಲಕ ಅವರು 19 ವರ್ಷಗಳಲ್ಲಿಯೇ ಲಿವರ್‌ಪೂಲ್ ತಂಡದಿಂದ ಈ ಗೌರವಕ್ಕೆ ಪಾತ್ರರಾದ ಪ್ರಥಮ ಆಟಗಾರ ಎಂಬ ಗೌರವ ಪಡೆದರು. ಗೆರಾರ್ಡ್ ಅವರು ಮ್ಯಾಂಚೆಸ್ಟರ್ ಯುನೈಟೆಡ್ ಜೊತೆಗೆ ರ್ಯಾನ್ ಗಿಬ್ಸ್ ನ್ನು ಹಾಗೂ ವೇಯ್ನ್ ರೂನಿ ಅವರನ್ನು ಪತ್ರಕರ್ತರು ನಡೆಸಿದ ಚುನಾವಣೆಯಲ್ಲಿ ಸೋಲಿಸಿದರು. ಇದರಲ್ಲಿ ರ್ಯಾನ್ ಗಿಬ್ಸ್ ಗಿಂತಲೂ 10 ಮತಗಳನ್ನು ಅವರು ಹೆಚ್ಚು ಪಡೆದರು. ಪ್ರಶಸ್ತಿ ಸ್ವೀಕರಿಸಿದ ಅವರು ಹೀಗೆ ಹೇಳಿದರು, "ನಾನು ಆನಂದಿತನಾಗಿದ್ದೇನೆ, ಆದರೆ, ಕೆಲಮಟ್ಟಿಗೆ ಅಚ್ಚರಿಯೂ ಆಗಿದೆ. ಈ ಲೀಗ್ ನಲ್ಲಿ ಇರುವ ಆಟಗಾರರ ಸಾಮರ್ಥ್ಯ ನೋಡಿದರೆ ಈ ರೀತಿಯ ಪ್ರಶಸ್ತಿ ಗೆಲ್ಲುವುದು ವಿಶೇಷವಾಗಿದೆ" ಎಂದು ನುಡಿದರು.

ಅಂತಾರಾಷ್ಟ್ರೀಯ ವೃತ್ತಿಜೀವನ[ಬದಲಾಯಿಸಿ]

ಗೆರಾರ್ಡ್ ಅವರು ತಮ್ಮ ಪ್ರಥಮ ಅಂತಾರಾಷ್ಟ್ರೀಯ ಪಂದ್ಯಕ್ಕೆ 2000 ಮೇ 31 ರಂದು ಉಕ್ರೇನ್ ವಿರುದ್ಧದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು.[೪೪] ಈ ಬೇಸಿಗೆಯಲ್ಲಿ ಅವರು ಯುರೋ 2000 ಆಗಿ ಆಯ್ಕೆಯಾದರು. ಇಂಗ್ಲೆಂಡ್ ತಂಡವು ಗ್ರುಪ್ ಹಂತದಲ್ಲಿ ಹೊರ ಬೀಳುವುದಕ್ಕಿಂತ ಮೊದಲು ಕೇವಲ ಒಂದು ತೋರಿಕೆಯಲ್ಲಿಯೇ 1-0 ಗಳಲ್ಲಿ ಜರ್ಮನಿ ವಿರುದ್ಧ ಗಳಿಸಿದ ಜಯದಲ್ಲಿ ಪ್ರತಿನಿಧಿಯಾದರು.[೪೫][೪೬] 2002 ರ ವಿಶ್ವಕಪ್ ಅರ್ಹತಾ ಪಂದ್ಯವಾದ 2001 ರ ಸೆಪ್ಟೆಂಬರ್‌ನಲ್ಲಿ ನಡೆದ ಜರ್ಮನಿ ವಿರುದ್ಧದ ಪಂದ್ಯದಲ್ಲಿ ಗಳಿಸಿದ 5-1 ಅಂತರದ ಜಯದಲ್ಲಿ ಗೆರಾರ್ಡ್ ಅವರು ತಮ್ಮ ಪ್ರಥಮ ಅಂತಾರಾಷ್ಟ್ರೀಯ ಗೋಲ್ ಗಳಿಸಿದರು. ಈ ಮೂಲಕ ಇಂಗ್ಲೆಂಡ್ ವಿಶ್ವಕಪ್‌ಗೆ ಅರ್ಹತೆ ಪಡೆಯಿತು. ಆದರೆ, ಗೋರಾರ್ಡ್ ಅವರು ಲಿವರ್ ಪೂಲ್ ತಂಡವು ಇಪ್ಸ್‌ವಿಚ್ ವಿರುದ್ಧ ಆಡಿದ ಅಂತಿಮ ಪಂದ್ಯದಲ್ಲಿ ಉಂಟಾದ ತಮ್ಮ ತೊಡೆಸಂದು ನೋವು ಸಮಸ್ಯೆಯ ಕಾರಣ ತಂಡದಿಂದ ಸ್ಥಾನ ವಂಚಿತರಾದರು.[೪೭] ಅವರು ಯುರೋ 2004 ನಲ್ಲಿ ನಿರಂತರವಾಗಿ ಆರಂಭಗಾರನಾಗಿದ್ದರು. ಇಂಗ್ಲೆಂಡ್ ತಂಡ ಫೋರ್ಚುಗಲ್‌ನಿಂದ ಕ್ವಾರ್ಟರ್ ಫೈನ್ ಪಂದ್ಯದಲ್ಲಿ ಪೆನಾಲ್ಟಿ ಮೂಲಕ ಹೋರಹೋಗುವ ಮೊದಲು ಸ್ವಿಟ್ಜರ್ಲೆಂಡ್ ವಿರುದ್ಧ ಒಮ್ಮೆ ಸ್ಕೋರ್ ಮಾಡಿದ್ದರು.[೪೮] ಅವರು ತಮ್ಮ ಪ್ರಥಮ ವಿಶ್ವ ಕಪ್ ಪಂದ್ಯವನ್ನು 2006 ರಲ್ಲಿ ಆಡಿ ಗ್ರುಪ್ ಹಂತದಲ್ಲಿ ಟ್ರಿನಿಡಡ ಮತ್ತು ಟೊಬ್ಯಾಗೋ ಹಾಗೂ ಸ್ವೀಡನ್ ವಿರುದ್ಧ 2 ಗೋಲ್ ಪಡೆದರು. ಆದರೂ ಕೂಡ ಅವರ ಸ್ಥಳದಲ್ಲಿಯೇ ನೀಡಿದ ಮೂರು ಒದೆತಗಳಲ್ಲಿ ಒಂದು ಗೋಲ್ ಕೀಪರ್ ರಿಕಾರ್ಡೋ ಅವರಿಂದ ತಡೆಯಲ್ಪಟ್ಟಿತ್ತು. ಪೆನಾಲ್ಟಿಯ ಕಾರಣದಿಂದ ಇಂಗ್ಲೆಂಡ್ ತಂಡವು ಫೋರ್ಚುಗಲ್ ಗೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಲೆಬಾಗಿಸಬೇಕಾಯಿತು.[೪೯] ಈ ಪಂದ್ಯಾವಳಿಯಲ್ಲಿ ಗೆರಾರ್ಡ್ ಅವರು ಇಂಗ್ಲೆಂಡ್ ತಂಡದಲ್ಲಿ ಅತ್ಯಂತ ಹೆಚ್ಚಿನ ಸ್ಕೋರರ್ ಆಗಿದ್ದರು. ಗೆರಾರ್ಡ್ ಅವರಿಗೆ ಇಂಗ್ಲೆಂಡ್ ತಂಡದ ಉಪ ನಾಯಕ ಜವಾಬ್ದಾರಿಯನ್ನು ತರಬೇತುದಾರ ಸ್ಟೀವ್ ಮ್ಯಾಕ್‌ಕ್ಲಾರೆನ್ ನೀಡಿದರು. ಈ ಸಂದರ್ಭದಲ್ಲಿ ಜಾನ್ ಟೆರ್ರಿ ನಾಯಕ ಸ್ಥಾನ ತುಂಬಿದ್ದರು. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡ ರಷ್ಯಾ ಹಾಗೂ ಕ್ರೋಷಿಯಾ ವಿರುದ್ಧ ಒಂದರ ಹಿಂದೊಂದರಂತೆ ಸೋಲನ್ನನುಭವಿಸುವ ಮೂಲಕ ಯುರೋ 2008 ಕ್ಕೆ ಅರ್ಹತೆ ಪಡೆಯುವ ನಂಬಿಕೆ ಕಳೆದುಕೊಂಡಿತು.[೫೦] 2008 ರ ಆರಂಭದಲ್ಲಿ ನೂತನ ತರಬೇತುದಾರ ಫ್ಯಾಬಿಯೋ ಕ್ಯಾಪೆಲ್ಲೋ ಅವರು ಗೆರಾರ್ಡ್ ಅವರಿಗೆ ನಾಯಕ ಸ್ಥಾನ ನೀಡಿ ನೋಡಿದರು. ಆದರೆ, ನಂತರ ಟೆರ್ರಿ ಅವರನ್ನೇ ನಾಯಕನನ್ನಾಗಿ ಮುಂದುವರಿಸಿದರು. [೫೧][೫೨] ಇದರ ತರುವಾಯ ಗೆರಾರ್ಡ್ ಅವರು ಉಪ ನಾಯಕತ್ವ ಸ್ಥಾನವನ್ನೂ ಕಳೆದುಕೊಂಡು ರಿಯೋ ಫರ್ಡಿನಾಂಡ್ ಗೆ ನೀಡಬೇಕಾಯಿತು.[೫೩] ಮುಂದೆ ಗೆರಾರ್ಡ್ ಅವರು ತಮ್ಮ ಅಂತಾರಾಷ್ಟ್ರೀಯ ಗೋಲ್ ಗಳನ್ನು ಹೆಚ್ಚಿಸಿದರು ಮತ್ತು ಈ ಮೂಲಕ ಇಂಗ್ಲೆಂಡ್ ತಂಡವು 2010 ರ ಫಿಫಾ ವಿಶ್ವ ಕಪ್ ಗೆ ಆಯ್ಕೆಯಾಗುವಲ್ಲಿ ಸಹಕಾರಿಯಾದರು. ಗೆರಾರ್ಡ್ ಅವರು ಕ್ರೋವೇಷಿಯಾ ವಿರುದ್ಧ ಗಳಿಸಿದ್ದ 2 ಗೋಲುಗಳು ಇಂಗ್ಲೆಂಡ್ ತಂಡದ 5-1 ಅಂತರದ ಗೆಲುವಿಗೆ ಕಾರಣವಾಯಿತು.[೫೪]

ಅಂತಾರಾಷ್ಟ್ರೀಯ ಗೋಲುಗಳು[ಬದಲಾಯಿಸಿ]

ಅಂಕಗಳು ಮತ್ತು ಫಲಿತಾಂಶಗಳು ಮೊದಲು ಇಂಗ್ಲೆಂಡ್‌ನ ಗೋಲ್ ಟ್ಯಾಲಿಯನ್ನು ಪಟ್ಟಿ ಮಾಡುತ್ತವೆ.
# ದಿನಾಂಕ ತಾಣ ವಿರುದ್ಧ ತಂಡ ಸ್ಕೋರು ಫಲಿತಾಂಶ ಸ್ಪರ್ಧೆ
1 7 ಸೆಪ್ಟೈಂಬರ್ 1994 ಓಲಂಪಿಯಾಸ್ಟೇಡೀಯನ್‌[[]], ಜರ್ಮನಿ  Germany 2-1 5–1 2002 ಫಿಫಾ ವಿಶ್ವ ಕಪ್‌ ಆಯ್ಕೆಮಾಡುವ ಆಟ[೫೫]
2 12 ಅಕ್ಟೋಬರ‍್ 2005 ಸೆಂ. ಮೇರಿಸ್ ಸ್ಟೇಡಿಯಮ್‌[[]], ಇಂಗ್ಲೆಂಡ್‌  Macedonia 2-2 2-2 ಯುಇಎಫ್‌ಎ ಯೂರೋ 2004 ಆಯ್ಕೆಮಾಡುವ ಆಟ[೫೬]
3 3 ಜೂನ್ ‌2001 ವಾಕರ್ಸ್ ಸ್ಟೇಡಿಯಮ್‌[[]], ಇಂಗ್ಲೆಂಡ್‌  Serbia and Montenegro 1-0 2-1 ಸ್ನೇಹದಿಂದ[೫೭]
4 21 ಜೂನ್‌ 2004 Estádio Cidade de Coimbra, ಪೋರ್ಚುಗಲ್‌  Switzerland 3.0 3.0 ಯುಇಎಫ್‌ಎ ಯೂರೋ 2004[೫೮]
5 4 ಸೆಪ್ಟೆಂಬರ್ 2004 Ernst-Happel-Stadion, ಆಸ್ಟ್ರಿಯಾ  ಆಸ್ಟ್ರಿಯ 2–0 2-2 2006 ಫಿಫಾ ವಿಶ್ವ ಕಪ್‌ ಆಯ್ಕೆಮಾಡುವ ಆಟ[೫೯]
6 13 ಮಾರ್ಚ್ 2005 ಸೆಂ. ಜೇಮ್ಸ್ ಪಾರ್ಕ್‌[[]], ಇಂಗ್ಲೆಂಡ್‌  ಅಜೆರ್ಬೈಜಾನ್ 1-0 2–0 2006 ಫಿಫಾ ವಿಶ್ವ ಕಪ್‌ ಆಯ್ಕೆಮಾಡುವ ಆಟ[೬೦]
7 ಮೇ 24 2003 ಓಲ್ಡ್ ಟ್ರಾಫರ್ಡ್‌[[]], ಇಂಗ್ಲೆಂಡ್‌  ಹಂಗರಿ 1-0 3-1 ಸ್ನೇಹದಿಂದ[೬೧]
8 3 ಜೂನ್ ‌2006 ಫ್ರಾಂಕೆನ್‌ಸ್ಟೇಡಿಯನ್‌[[]], ಜರ್ಮನಿ  ಟ್ರಿನಿಡಾಡ್ ಮತ್ತು ಟೊಬೆಗೊ 2–0 2–0 2006 ಫಿಫಾ ವಿಶ್ವ ಕಪ್‌[೬೨]
9 3 ಜೂನ್ ‌2006 RheinEnergie Stadion, ಜರ್ಮನಿ  Sweden 2-1 2-2 2006 ಫಿಫಾ ವಿಶ್ವ ಕಪ್‌[೬೩]
10 7 ಸೆಪ್ಟೈಂಬರ್ 1994 ಓಲ್ಡ್ ಟ್ರಾಫರ್ಡ್‌, ಇಂಗ್ಲೆಂಡ್‌  Andorra 2–0 5–0 ಯುಇಎಫ್‌ಎ ಯೂರೋ 2008 ಆಯ್ಕೆಮಾಡುವ ಆಟ[೬೪]
11 28 ಮಾರ್ಚ್ 2009 ಓಲಂಪಿಕ್ ಸ್ಟೇಡಿಯಮ್‌[[]], ಸ್ಪೇನ್‌  Andorra 1-0 3.0 ಯುಇಎಫ್‌ಎ ಯೂರೋ 2008 ಆಯ್ಕೆಮಾಡುವ ಆಟ[೬೫]
12 28 ಮಾರ್ಚ್ 2009 ಓಲಂಪಿಕ್ ಸ್ಟೇಡಿಯಮ್‌, ಸ್ಪೇನ್‌  Andorra 2–0 3.0 ಯುಇಎಫ್‌ಎ ಯೂರೋ 2008 ಆಯ್ಕೆಮಾಡುವ ಆಟ[೬೫]
13 ಮೇ 24 2003 ವೆಂಬ್ಲಿ ಸ್ಟೇಡಿಯಮ್‌[[]], ಇಂಗ್ಲೆಂಡ್‌  ಅಮೇರಿಕಾ ಸಂಯುಕ್ತ ಸಂಸ್ಥಾನ 2–0 2–0 ಸ್ನೇಹದಿಂದ[[]][೬೬]
14 12 ಅಕ್ಟೋಬರ‍್ 2005 ಡಿನಾಮೊ ಸ್ಟೇಡಿಯಮ್‌[[]], ಬೆಲರಸ್‌‌  ಬೆಲಾರುಸ್ 1-0 3-1 2010 ಫಿಫಾ ವಿಶ್ವ ಕಪ್‌ ಆಯ್ಕೆಮಾಡುವ ಆಟ[೬೭]
15 9 ಸೆಪ್ಟೈಂಬರ್ 2009 ವೆಂಬ್ಲಿ ಸ್ಟೇಡಿಯಮ್‌, ಇಂಗ್ಲೆಂಡ್‌  Croatia 2–0 5–1 2010 ಫಿಫಾ ವಿಶ್ವ ಕಪ್‌ ಆಯ್ಕೆಮಾಡುವ ಆಟ
16 9 ಸೆಪ್ಟೈಂಬರ್ 2009 ವೆಂಬ್ಲಿ ಸ್ಟೇಡಿಯಮ್‌, ಇಂಗ್ಲೆಂಡ್‌  Croatia 4–0 5–1 2010 ಫಿಫಾ ವಿಶ್ವ ಕಪ್‌ ಆಯ್ಕೆಮಾಡುವ ಆಟ

ವೈಯಕ್ತಿಕ ಬದುಕು[ಬದಲಾಯಿಸಿ]

ಗೆರಾರ್ಡ್ ಅವರು ಫ್ಯಾಷನ್ ಪತ್ರಕರ್ತೆಯಾಗಿದ್ದ ಅಲೆಕ್ಸ್ ಕರ್ರಾನ್ ಅವರನ್ನು ಬಕಿಂಗ್‌ಹ್ಯಾಮ್‌ಶೈರ್ಕ್ವಿವ್‌ಡೆನ್ ಮಹಲಿನಲ್ಲಿ 2007 ರ ಜೂನ್ 16 ರಂದು ವಿವಾಹವಾದರು.[೬೮][೬೯] ಇವರ ಪೌಲ್ (ಎವರ್ ಟೊನ್ ಮಾಜಿ ಗೋಲ್ ಕೀಪರ್ ಆಗಿದ್ದ ಪೌಲಾ ಗೆರಾರ್ಡ್ ಎಂಬುದಾಗಿ ಗೊಂದಲಗೊಳ್ಳಬೇಡಿ) ಮತ್ತು ದಾಯಾದಿಯಾಗಿದ್ದ ಆಂಟನಿ ಅವರು ಕಾರ್ಡಿಫ್ ಸಿಟಿ ಎಫ್.ಸಿ. ಯಲ್ಲಿ ಆಡಿದ್ದಾರೆ.

2006 ಸೆಪ್ಟೆಂಬರ್‌ನಲ್ಲಿ ಗೆರಾರ್ಡ್ ಅವರು ತಮ್ಮ ಆತ್ಮಕತೆ ‘ಗೆರಾರ್ಡ್: ಮೈ ಆಟೋಬಯಾಗ್ರಫಿ’ ಎಂಬ ಆತ್ಮಕತೆಯನ್ನು ಪ್ರಕಟಿಸಿದರು. ಇದು ಬ್ರಿಟಿಷ್ ಪುಸ್ತಕ ಪ್ರಶಸ್ತಿಯಾದ ವರ್ಷದ ಗೌರವ ಎಂಬ ಕ್ರೀಡಾ ಪುಸ್ತಕ ಎಂಬ ಹಿರಿಮೆಗೆ ಕಾರಣವಾಯಿತು.[೭೦] ಗೆರಾರ್ಡ್ ಅವರ ಆತ್ಮಚರಿತ್ರೆಯು ‘ನಾನು ಜಾನ್-ಪೌಲ್ ಗೋಸ್ಕರ ಆಡುತ್ತೇನೆ’ ಎಂಬುದರೊಂದಿಗೆ ಮುಗಿಯುತ್ತದೆ. ಜಾನ್-ಪೌಲ್ ಗಿಲ್ಹೂಲೇ 10 ನೇ ವಯಸ್ಸಿನಲ್ಲಿ 1989 ರಲ್ಲಿ ಹಿಲ್ಸ್ ಬೋರೋ ದುರಂತದಲ್ಲಿ ಸಾವನ್ನಪ್ಪಿರುತ್ತಾನೆ. ಈತ ಗೆರಾರ್ಡ್ ಗೆ ದಾಯಾದಿ ಸಂಬಂಧಿಯಾಗಿದ್ದನು ಹಾಗೂ ಆತ ದುರಂತದಲ್ಲಿ ಸಾವನ್ನಪ್ಪುವಾಗ ಗೆರಾರ್ಡ್ ಇನ್ನೂ 9 ವರ್ಷ ವಯಸ್ಸಿನವನಾಗಿದ್ದ. ‘ನಿಮ್ಮ ದಾಯಾದಿಯೊಬ್ಬ ಸಾವನ್ನಪ್ಪಿದ್ದಾನೆ ಎಂಬುದನ್ನು ತಿಳಿಯುವುದು ಅತ್ಯಂತ ಕಷ್ಟಕರವಾಗಿತ್ತು. ಆತನ ಕುಟುಂಬದ ಪ್ರತಿಕ್ರಿಯೆ ನೋಡಿದ ಘಟನೆ ನನ್ನನ್ನು ಆಟಗಾರನನ್ನಾಗಿಸುವಂತೆ ಪ್ರೇರೇಪಿಸಿತ್ತು. ಇಂದು ನಾನು ಹೆಗೆಯೇ ಆಗಿದ್ದೇನೆ ಕೂಡ’ ಎಂದು ಗೆರಾರ್ಡ್ ಹೇಳುತ್ತಾರೆ.[೭೧] 2007 ರ ಅಕ್ಟೋಬರ್ 1 ರಂದು ಸೌತ್ ಪೋರ್ಟ್ ನಲ್ಲಿ ಗೆರಾರ್ಡ್ ಸಣ್ಣ ಪ್ರಮಾಣದ ಅಪಘಾತ ಮಾಡಿದರು. ಅವರು ಚಲಾಯಿಸುತ್ತಿದ್ದ ಕಾರು ಸೈಕಲ್ ತುಳಿಯುತ್ತಿದ್ದ 10 ವರ್ಷದ ಹುಡುಗನೊಬ್ಬನಿಗೆ ಅಪಘಾತ ಉಂಟು ಮಾಡಿತ್ತು. ಆ ಹುಡುಗ ಬೀದಿಗೆ ಒಗೆಯಲ್ಪಟ್ಟ ಹಾಗೂ ಇದರಿಂದ ಗೆರಾರ್ಡ್ ಅವರ ಪ್ರಯಾಣವೂ ಇಲ್ಲಿ ನಿಂತಿತು. ನಂತರ ಗೆರಾರ್ಡ್ ಅವರು ಹುಡುಗನನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದರು. ಮತ್ತು ಹುಡುಗನಿಗೆ ತಮ್ಮ ಸಹಿ ಇರುವ ಬೂಟುಗಳ ಜೊತೆಯನ್ನು ನೀಡಿದರು. ಅದರಲ್ಲಿ ‘ಹುಡುಗರ ನೆಚ್ಚಿನ ಆಟಗಾರ ವಾಯ್ನೆ ರೂನೇ’ ಎಂದು ಬರೆದಿತ್ತು. ನಂತರ ಕೂಡ ಗೆರಾರ್ಡ್ ಅವರು ಅಲ್ಲಿನ ಯುವ ರೋಗಿಗಳಿಗೆ ಹಸ್ತಾಕ್ಷರ ಕೊಡುವುದಕ್ಕಾಗಿ ನಿಂತರು.[೭೨] ನೋವ್ಸ್ಲಿಸಲಹೆಗಾರರು ಗೆರಾರ್ಡ್ ಅವರನ್ನು ಬೋರೋದಿಂದ ಸ್ವಾತಂತ್ರರನ್ನಾಗಿಸಲು 2007 ರ ಡಿಸೆಂಬರ್ 13 ರಂದು ಮತ ನೀಡಿದರು. ಮತ್ತು ಎರಡು ವಾರಗಳ ನಂತರ ಕ್ರೀಡೆಗೆ ಸಲ್ಲಿಸಿದ ಸೇವೆಯ ಕಾರಣ ರಾಣಿಹೊಸ ವರ್ಷದ ಗೌರವಾನ್ವಿತರ ಪಟ್ಟಿಯಲ್ಲಿ ಸದಸ್ಯವನ್ನು ಬ್ರಿಟಿಷ್ ರಾಜರ ಆಜ್ಞೆಯಂತೆ ಪಡೆದರು.[೭೩][೭೪] ಕ್ರೀಡೆಗೆ ನೀಡಿದ ಕೊಡುಗೆಯನ್ನು ಗಮನಿಸಿ 2008 ರ ಜುಲೈ 26 ರಂದು ಲಿವರ್‌ಪೂಲ್‌ನ ಜಾನ್ ಮೂರ್ಸ್ ವಿಶ್ವ ವಿದ್ಯಾಲಯದಿಂದ ಗೌರವ ಫೆಲೋಶಿಪ್ ಪದವಿ ನೀಡಲ್ಪಟ್ಟರು.[೭೫] 2008 ರ ಡಿಸೆಂಬರ್ 29 ರಂದು ಗೆರಾರ್ಡ್ ಅವರನ್ನು ಸೌತ್‌ಪೋರ್ಟ್ ನಲ್ಲಿರುವ ಸಾರ್ವಜನಿಕ ಪ್ರವಾಸಿ ಗೃಹದಲ್ಲಿ ಸೆಕ್ಷನ್ 20 ರ ದಾಳಿಯ ಸಂಬಂಧ ಪ್ರಶ್ನೆ ಕೇಳಲು ಕರೆದುಕೊಂಡು ಹೋದರು.[೭೬] ನಂತರ ಅವರು ಮತ್ತು ಇತರ ಇಬ್ಬರನ್ನು ದೈಹಿಕ ದಾಳಿ ಮತ್ತು ಹೊಡೆದಾಟಕ್ಕೆ ಸಂಬಂಧಿಸಿದ ದಾಳಿಯಲ್ಲಿ ಆರೋಪಿಯಾದರು. ಈ ಘಟನೆಯಲ್ಲಿ ಬಾರ್‌ನ ಡಿಸ್ ಜಾಕಿ ಹಲ್ಲು ಮುರಿದುಕೊಂಡ ಮತ್ತು ಅವನ ಹಣೆ ಗಾಯವಾಯಿತು.[೭೭][೭೮] ಮೂವರೂ ಕೂಡ ಪೂಲೀಸರಿಂದ ನ್ಯಾಯಾಲಯಕ್ಕೆ ಒಪ್ಪಿಸಲ್ಪಟ್ಟರು, ಮತ್ತು ನ್ಯಾಯಾಲಯದಿಂದ ಜಾಮೀನು ಪಡೆದು ನಾರ್ಥ್ ಸೆಫ್ಟೊನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ 2009 ರ ಜನವರಿ 23 ರಂದು ಹಾಜರಾಗುವಂತೆ ಸೂಚಿಸಲ್ಪಟ್ಟರು. [೭೮][೭೯] ಪ್ರಕರಣವು ಮಾರ್ಚ್ 20 ರಲ್ಲಿ ದಾಳಿಯ ಆರೋಪ ಕೈಬಿಟ್ಟಾಗ ನಿಲ್ಲಿಸಲ್ಪಟ್ಟಿತು. ಆದರೆ, ಗೆರಾರ್ಡ್ ಅವರು ಲಿವರ್ ಪೂಲ್ ಪ್ರಭುತ್ವ ನ್ಯಾಯಾಲಯಕ್ಕೆ ಹೊಡೆದಾಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹಾಜರಾಗಬೇಕಾಯಿತು.[೮೦] ಏಪ್ರಿಲ್ 3 ರಂದು ಗೆರಾರ್ಡ್ ಅವರು ಅಪರಾಧಿ ಅಲ್ಲ ಎಂದು ಘೋಷಿಸಲ್ಪಟ್ಟರು.[೮೧] ಪ್ರಕರಣವು ಲಿವರ್ ಪೂಲ್ ನ ಪ್ರಭುತ್ವ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಬಂದಿತು. ಗೆರಾರ್ಡ್ ನ ಜೊತೆಗಾರರು ಅಪರಾಧಿಗಳೆಂದು ಘೋಷಿಸಲ್ಪಟ್ಟರು. ಮತ್ತು ಗೆರಾರ್ಡ್ ಅವರು ತಮ್ಮ ಮುಗ್ಧತನ ಕಾಯ್ದುಕೊಂಡರು. ಗೆರಾರ್ಡ್ ಅವರು ಮಾರ್ಕಸ್ ಮಾಕ್ ಗೀ ಅವರಿಗೆ ಹೊಡೆದದ್ದನ್ನು ಒಪ್ಪಿಕೊಂಡರು. ಆದರೆ, ಅದು ಸ್ವ ರಕ್ಷಣೆಗಾಗಿ ಎಂದು ಸಮರ್ಥಿಸಿಕೊಂಡರು. ಜುಲೈ 24 ರಂದು ಗೆರಾರ್ಡ್ ಅವರು ಪಂಚಾಯಿತಿದಾರರಿಂದ ಅಪರಾಧಿ ಎಲ್ಲ ಘೋಷಿಸಲ್ಪಟ್ಟರು. ಈ ನ್ಯಾಯ ತೀರ್ಮಾನದ ನಂತರ ಅವರು ಗೆರಾರ್ಡ್ ಅವರು ತಮ್ಮ ಅನುಭವವನ್ನು ಹಿಂದೆಯೇ ಬಿಟ್ಟು ಫುಟ್ ಬಾಲ್ ಆಡಲು ಉದ್ಯುಕ್ತರಾದರು.[೮೨]

ವೃತ್ತಿ ಜೀವನದ ಅಂಕಿಅಂಶಗಳು[ಬದಲಾಯಿಸಿ]

25 ಏಪ್ರಿಲ್ 2010 ಪ್ರಕಾರ ಸರಿಯಾಗಿವೆ ಟೆಂಪ್ಲೇಟು:Football player statistics 1 ಟೆಂಪ್ಲೇಟು:Football player statistics 2 |- |1998–99||rowspan="12"|ಲಿವರ್‌ಪೂಲ್‌||rowspan="12"|ಪ್ರೀಮಿಯರ್ ಲೀಗ್||12||0||0||0||0||0||1||0||13||0 |- |1999–00||29||1||2||0||0||0||0||0||31||1 |- |2000–01||33||7||4||1||4||0||9||2||50||10 |- |2001–02||28||3||2||0||0||0||15||1||45||4 |- |2002–03||34||5||2||0||6||2||11||0||54*||7 |- |2003–04||34||4||3||0||2||0||8||2||47||6 |- |2004–05||30||7||0||0||3||2||10||4||43||13 |- |2005–06||32||10||6||4||1||1||12||7||53^||23^ |- |2006–07||36||7||1||0||1||1||12||3||51*||11 |- |2007–08||34||11||3||3||2||1||13||6||52||21 |- |2008–09||31||16||3||1||0||0||10||7||44||24 |- |2009–10||31||9||2||1||1||0||12||2||46||12 ಟೆಂಪ್ಲೇಟು:Football player statistics 3364||80||28||10||20||7||113||34||529||132 ಟೆಂಪ್ಲೇಟು:Football player statistics 5364||80||28||10||20||7||113||34||529||132 |} * ಆ ಋತುವಿನಲ್ಲಿ ಎಫ್‌‍ಎ ಕಮ್ಯುನಿಟಿ ಶೀಲ್ಡ್‌ನಲ್ಲಿ ಕಾಣಿಸಿಕೊಳ್ಳುವುದು ಸೇರಿದೆ ^ಫಿಫಾ ಕ್ಲಬ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಕಾಣಿಸಿಕೊಳ್ಳುವಿಕೆ ಮತ್ತು ಒಂದು ಗೋಲ್ ಸೇರಿದೆ

ಗೌರವ ಪ್ರಶಸ್ತಿಗಳು[ಬದಲಾಯಿಸಿ]

ಲಿವರ್‌ಪೂಲ್[ಬದಲಾಯಿಸಿ]

ವಿಜೇತ (10)

ರನ್ನರ್-ಅಪ್(6)

ವೈಯಕ್ತಿಕ ಸಾಧನೆ[ಬದಲಾಯಿಸಿ]

ಗುರುತಿಸಬಹುದಾದ ಸಾಧನೆಗಳು[ಬದಲಾಯಿಸಿ]

ಗೆರಾರ್ಡ್ ಬ್ಯಾಲೊನ್ ಡಿ'ಓರ್‍ ಮತ್ತು ಎಫ್‌ಐಎಫ್‌ಎ ವರ್ಷದ ಜಾಗತಿಕ ಆಟಗಾರ ಇವೆರಡಕ್ಕೂ ಹಲವಾರು ಬಾರಿ ನಾಮನಿರ್ದೇಶನಗೊಂಡಿದ್ದ-ಸಮಾನ್ಯವಾಗಿ ಇವೆರಡು ವಿಶ್ವ ಪುಟ್ಬಾಲ್‌ನಲ್ಲಿ ಹೆಚ್ಚಿನ ಗೌರವವುಳ್ಳ ಪ್ರಶಸ್ತಿಗಳು ಎಂದು ಪರಿಗಣಿಸಲಾಗಿದೆ.

ಬ್ಯಾಲ್ಲೊನ್‌ ಡಿ'ಓರ್‍[ಬದಲಾಯಿಸಿ]
 • 2001 – 25ನೇಯ
 • 2005 – 3ನೇಯ
 • 2006 – ನಾಮನಿರ್ದೇಶನಗೊಂಡಿದ್ದ (ಪ್ರಮುಖ 50)
 • 2007 – 13ನೇಯ
 • 2008 – 10ನೇಯ
 • 2009 – 10ನೇಯ[೮೪]
ಎಫ್‌ಐಏಪ್‌ಎ ವರ್ಷದ ವಿಶ್ವ ಆಟಗಾರರು[ಬದಲಾಯಿಸಿ]

ಇತರೆ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. ೧.೦ ೧.೧ ೧.೨ Hugman, Barry J. (2005). The PFA Premier & Football League Players' Records 1946–2005. Queen Anne Press. p. 232. ISBN 1852916656. 
 2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. http://www.teamtalk.com/football/story/0,16368,1776_5466683,00.html
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil. Archived ಜುಲೈ ೩೧, ೨೦೦೮ at the Wayback Machine
 5. ೫.೦ ೫.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. ೬.೦ ೬.೧ ೬.೨ ೬.೩ Gerrard, Steven (2006). Gerrard: My Autobiography. Bantam Press. pp. 10–14. ISBN 0-593-05475-X. 
 7. ೭.೦ ೭.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. ೮.೦ ೮.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 21. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 22. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 23. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. ೨೪.೦ ೨೪.೧ ೨೪.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 25. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 26. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 27. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 28. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 29. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 31. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 32. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 33. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 34. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 35. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 36. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 37. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 38. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 39. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 40. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 41. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 42. "ಗೆರಾರ್ಡ್ ಪ್ರೊವೈಡ್ಸ್ ಫೋರ್ಸ್‌ಫುಲ್ ಆರ್ಗುಮೆಂಟ್ ಅಗೇನೆಸ್ಟ್ ಚಾರ್ಜ್ ದ್ಯಾಟ್ ಮನಿ ಕಾಂಕರ್ಸ್ ಆಲ್ " ದ ಗಾರ್ಡಿಯನ್ (15 ಮಾರ್ಚ್ 2009). 4 ಮಾರ್ಚ್ 2009 ರಂದು ಪಡೆಯಲಾಯಿತು.
 43. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 44. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 45. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 46. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 47. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 48. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 49. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 50. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 51. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 52. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 53. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 54. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 55. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 56. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 57. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 58. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 59. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 60. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 61. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 62. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 63. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 64. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 65. ೬೫.೦ ೬೫.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 66. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 67. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 68. ನೈಸ್ ಡೇ ಫಾರ್ ರ್ ಡಬ್ಲ್ಯೂ ಎ ಜಿ ವೆಡ್ಡಿಂಗ್! ನೆವಿಲ್ಲೆ, ಗೆರಾರ್ಡ್ ಮತ್ತು ಕ್ಯಾರಿಕ್ ಮದುವೆಯಾಯಿತು . ದ ಡೇಲಿ ಮೇಲ್ (2007-06-18). 2009-08-10ರಂದು ಪಡೆಯಲಾಗಿದೆ.
 69. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 70. "British Book Awards – Winners 2007". Galaxy British Book Awards. 2007. 
 71. ಗೆರಾರ್ಡ್ ಪೇಯ್ಸ್ ಹಿಲ್ಸ್‌ಬೊರೊ ಟ್ರಿಬ್ಯುಟ್ ,ಬಿಬಿಸಿ ಸ್ಪೋರ್ಟ್ಸ್, ಏಪ್ರಿಲ್ 11, 2009
 72. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 73. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 74. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 75. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 76. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 77. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 78. ೭೮.೦ ೭೮.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 79. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 80. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 81. "ಸ್ಟೀವನ್ ಗೆರಾರ್ಡ್ ಕೈ ಕೈ ಮಿಲಾಯಿಸಿದ್ದಕಾಗಿ ಸಮರ್ಥಿಸಿಕೊಳ್ಳಲಿಲ್ಲ", ಲೈವರ್‌ಫೂಲ್ ಇಕೊ, 3 ಏಪ್ರಿಲ್ 2009.
 82. http://news.bbc.co.uk/2/hi/uk_news/england/merseyside/8167000.stm
 83. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 84. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 85. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

ಬಾಹ್ಯ ಕೊಂಡಿಗಳು[ಬದಲಾಯಿಸಿ]

Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಸ್ಟೀವೆನ್ ಜೆರಾರ್ಡ್]]