ಸೋಮೆಮರ
ಗೋಚರ
Soymida febrifuga | |
---|---|
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡೈಕಾಟ್‍ಗಳು |
ಏಕಮೂಲ ವರ್ಗ: | ರೋಸಿಡ್ಸ್ |
ಗಣ: | ಸ್ಯಾಪಿಂಡೇಲ್ಸ್ |
ಕುಟುಂಬ: | ಮೀಲಿಯೇಸೀ |
ಕುಲ: | ಸೊಯಿಮಿಡಾ A.Juss. |
ಪ್ರಜಾತಿ: | S. febrifuga
|
Binomial name | |
Soymida febrifuga (Roxb.) A.Juss.
|
ಸೋಮೆಮರ ಮೀಲಿಯೇಸೀ ಕುಟುಂಬದ ಸೊಯಿಮಿಡಾ ಫೆಬ್ರಿಪ್ಯೂಗ ಪ್ರಭೇದದ ನೇರ ಕಾಂಡದ ಮರ. ಇದು ಭಾರತೀಯ ಉಪಖಂಡ ಮತ್ತು ಮ್ಯಾನ್ಮಾರ್‌ನಲ್ಲಿ ಕಂಡುಬರುತ್ತದೆ.[೧]
ಸಸ್ಯ ವಿವರಣೆ
[ಬದಲಾಯಿಸಿ]ಎಲೆ 3 ರಿಂದ 6 ಉಪಪರ್ಣಗಳನ್ನೊಳಗೊಂಡ ಸಂಯುಕ್ತ ಮಾದರಿಯದು. ಬಂಜರು ಪ್ರದೇಶಗಳಲ್ಲಿಯೂ ಸುಣ್ಣಕಲ್ಲಿನ ಮಣ್ಣುಗಳಲ್ಲಿಯೂ ಜಂಬೆ ಮತ್ತು ಕರಲು ಮಣ್ಣಿನ ಜಾಗಗಳಲ್ಲಿಯೂ ಶುಷ್ಕತೆಯಿರುವ ಕಾಡುಗಳಲ್ಲಿಯೂ ಈ ಮರ ಬೆಳೆಯಬಲ್ಲದು. ಶುಷ್ಕತೆ ಮತ್ತು ಬೆಂಕಿಯ ಹಾನಿಯನ್ನು ತಕ್ಕಷ್ಟು ತಡೆಯಬಲ್ಲದು. ಸ್ವಾಭಾವಿಕ ಪುನರುತ್ಪತ್ತಿ ಅಲ್ಲಲ್ಲಿ ಕಂಡುಬಂದು, ಬೇರು ಸಸಿಗಳೂ ಸಾಮಾನ್ಯವಾಗಿರುತ್ತವೆ.
ಉಪಯೋಗಗಳು
[ಬದಲಾಯಿಸಿ]ತೊಗಟೆಯಿಂದ ಅಂಟೂ ಕೆಂಪುನಾರೂ ಒದಗುವುವು. ತೊಗಟೆ ಚರ್ಮ ಹದ ಮಾಡಲೂ ಔಷಧಿಗೂ ಉಪಯುಕ್ತ.
ಚೌಬೀನೆ ಮನೆಕಟ್ಟಡಗಳಿಗೆ, ಅಂದವಾದ ಪೀಠೋಪಕರಣಗಳಿಗೆ, ಕೆತ್ತನೆ ಕೆಲಸಗಳಿಗೆ, ಒನಕೆ ತಯಾರಿಕೆ ಇತ್ಯಾದಿಗಳಿಗೆ ಒದಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Soymida A.Juss. | Plants of the World Online | Kew Science". Plants of the World Online (in ಇಂಗ್ಲಿಷ್). Retrieved 19 May 2021.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: