ಸೋನ್ ಪಾಪಡಿ

ವಿಕಿಪೀಡಿಯ ಇಂದ
Jump to navigation Jump to search
Soan sohan papdi India Festive Sweets.jpg

ಸೋನ್ ಪಾಪಡಿ (ಪತೀಸಾ)[೧] ಒಂದು ಜನಪ್ರಿಯ ಭಾರತೀಯ ಸಿಹಿ ತಿನಿಸಾಗಿದೆ. ಇದು ಸಾಮಾನ್ಯವಾಗಿ ಘನ ಆಕಾರದ್ದಾಗಿರುತ್ತದೆ ಅಥವಾ ಇದನ್ನು ತೆಳುವಾದ ಹಲ್ಲೆಗಳಾಗಿ ಬಡಿಸಲಾಗುತ್ತದೆ. ಇದು ಗರಿಗರಿ ಮತ್ತು ಹಲ್ಲೆಹಲ್ಲೆಯಾದ ರಚನೆಯನ್ನು ಹೊಂದಿರುತ್ತದೆ. ಸಾಂಪ್ರದಾಯಿಕವಾಗಿ ಇದನ್ನು ಬಿಡಿಯಾಗಿ, ಸುತ್ತಿದ ಕಾಗಗದ ಶಂಕುವಿನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಆಧುನಿಕ ಕೈಗಾರಿಕಾ ಉತ್ಪಾದನೆಯಿಂದ ಇದು ಈಗ ಬಿಗಿಯಾಗಿ ರೂಪಗೊಂಡ ಘನಗಳಲ್ಲಿ ಮಾರಾಟವಾಗುತ್ತಿದೆ.[೨] ಈ ತಿನಿಸಿನ ಜನಪ್ರಿಯತೆಯಿಂದ, ಮಾವು, ಸ್ಟ್ರಾಬೆರಿ, ಅನಾನಸ್ ಮತ್ತು ಚಾಕಲಿಟ್‍ನಂತಹ ಹೊಸ ರುಚಿಗಳನ್ನು ಪರಿಚಯಿಸಲಾಗಿದೆ.

ಇದರ ಮುಖ್ಯ ಘಟಕಾಂಶಗಳೆಂದರೆ ಸಕ್ಕರೆ, ಕಡಲೆ ಹಿಟ್ಟು (ಬೇಸನ್), ಮೈದಾ ಹಿಟ್ಟು, ತುಪ್ಪ, ಹಾಲು ಮತ್ತು ಏಲಕ್ಕಿ.[೩]

ಉಲ್ಲೇಖಗಳು[ಬದಲಾಯಿಸಿ]

  1. "Patisa - Culinary Encyclopedia". Retrieved September 17, 2012.
  2. "Soan Papdi". Food-india.com. Retrieved September 17, 2012.
  3. "Diwali". Indiaoz.com.au. Retrieved September 17, 2012.