ವಿಷಯಕ್ಕೆ ಹೋಗು

ಸೆರ್ರದೂರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೆರ್ರದೂರಾ ಮಕಾವುದ ಒಂದು ಸುಪರಿಚಿತ ಡಿಜ಼ರ್ಟ್ ಆಗಿದೆ.[] ಇದು ಕಡೆದ ಕೆನೆ ಮತ್ತು ಪುಡಿಪುಡಿ ಮಾಡಿದ ಮಾರೀ ಬಿಸ್ಕೆಟ್‍ನ ಸರಳ ಸಂಯೋಜನೆಯಾಗಿದ್ದು ಪದರಗಳಿರುವ ನೋಟವನ್ನು ತೋರಿಸುತ್ತದೆ. ಪೊರ್ಚುರ್ಗೀಸ್ ಭಾಷೆಯಲ್ಲಿ ಸೆರ್ರದೂರಾ ಪದದ ಅರ್ಥ ಮರದ ಪುಡಿ ಎಂದು. ಇದು ಪುಡಿಂಗ್‍ನಲ್ಲಿ ಬಿಸ್ಕೆಟ್‌ಗಳನ್ನು ಬಹಳ ನಯವಾಗಿ ಪುಡಿಗಳಾಗಿ ಮಾಡಿದಾಗ ಅವು ಕಾಣುವ ರೀತಿಯನ್ನು ಸೂಚಿಸುತ್ತದೆ.

ಸೆರ್ರದೂರಾ ಮಕಾವುನಲ್ಲಿ ಬಹಳ ಪ್ರಸಿದ್ಧವಾಗಿದೆ. ಇದನ್ನು ಹಾಂಗ್ ಕಾಂಗ್, ಗೋವಾ ಮತ್ತು ವಿವಿಧ ಪೋರ್ಚುಗೀಸ್ ಹಾಗೂ ಸ್ಪ್ಯಾನಿಷ್ ಭಾಷೆ ಮಾತನಾಡಲ್ಪಡುವ ದೇಶಗಳಲ್ಲಿ ಕೂಡ ಕಾಣಬಹುದು.

ಸೆರ್ರದೂರಾದ ಅತ್ಯಂತ ಸಾಮಾನ್ಯ ಘಟಕಾಂಶಗಳೆಂದರೆ ಸಾಂದ್ರೀಕೃತ ಹಾಲು, ಮಾರಿ ಬಿಸ್ಕೆಟ್‌ನ ಪುಡಿ ಮತ್ತು ಕಡೆದ ಕೆನೆ, ಆದರೆ ಕೆಲವೊಮ್ಮೆ ಕಡೆದ ಕೆನೆಯ ಬದಲು ದಟ್ಟವಾದ ಕೆನೆಯನ್ನು ಬಳಸಲಾಗುತ್ತದೆ. ಕಡೆದ ಕೆನೆ ಮತ್ತು ಬಿಸ್ಕೆಟ್ ಪುಡಿಯನ್ನು ಪ್ರತ್ಯೇಕ ಪದರಗಳಾಗಿ ಒಂದು ಡಬ್ಬಿಯಲ್ಲಿ ಹರಡಲಾಗುತ್ತದೆ. ಫ಼್ರಿಜ್‍ನಲ್ಲಿ ಐದರಿಂದ ಆರು ಗಂಟೆ ಸಾಂದ್ರೀಕರಣವಾದ ನಂತರ ಈ ಡಿಜ಼ರ್ಟ್‌ನ್ನು ಬಡಿಸಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. "Macanese Cuisine & Recipes - Serradura" (in French). Macao Government Tourism Office. Retrieved 26 March 2016.{{cite web}}: CS1 maint: unrecognized language (link)


ಹೊರಗಿನ ಕೊಂಡಿಗಳು

[ಬದಲಾಯಿಸಿ]