ವಿಷಯಕ್ಕೆ ಹೋಗು

ಸೆರುಂಡೆಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತೆಂಗಿನಹಾಲಿನಲ್ಲಿ ಬೇಯಿಸಲಾದ, ಬಾಳೆ ಎಲೆಯಲ್ಲಿ ಸುತ್ತಲಾದ, ಅಕ್ಕಿಯ ಡಂಪ್ಲಿಂಗ್ ಆಗಿರುವ ಬುರಾಸಾದ ಜೊತೆಗೆ ಕಂದು ಬಣ್ಣದ ಸೆರುಂಡೆಂಗ್ ಅನ್ನು ಬಡಿಸಲಾಗುತ್ತದೆ.

ಸೆರುಂಡೆಂಗ್ ಇಂಡೋನೇಷ್ಯಾದಲ್ಲಿ ಹುಟ್ಟಿದ ಖಾರದ ತುರಿದ ತೆಂಗಿನಕಾಯಿಯ ಭಕ್ಷ್ಯ ಅಥವಾ ವ್ಯಂಜನ. ಇದನ್ನು ಅನ್ನದ ಜೊತೆಗೆ ಬಳಸಲಾಗುತ್ತದೆ. ಪಾಕವಿಧಾನದ ರೂಪಾಂತರಗಳ ಪ್ರಕಾರ, ಸೆರುಂಡೆಂಗ್ ಸಿಹಿ ಅಥವಾ ಖಾರವಾದ ರುಚಿ ಹೊಂದಿರಬಹುದು.[]: 34, 37 

ಇದರ ಸುಪ್ರಸಿದ್ಧ ರೂಪಾಂತರವೆಂದರೆ ಇಂಡೋನೇಷಿಯನ್ ತಯಾರಿಯಾದ ಕೊಬ್ಬರಿ ತುರಿಗೆ ಸಂಬಾರ ಪದಾರ್ಥಗಳು ಮತ್ತು ಇತರ ಪದಾರ್ಥಗಳನ್ನು ಬೆರೆಸುವುದು.[]: 17 ಖಾರವಾದ ತುರಿದ, ಬಾಡಿಸಿದ ಕಾಯಿತುರಿಯನ್ನು ಕಡಲೆಕಾಯಿಯೊಂದಿಗೆ ಬೆರೆಸಬಹುದು.[] ಇದನ್ನು ಪರಿಮಳ ಸೇರಿಸಲು ವ್ಯಂಜನವಾಗಿ ಬಳಸಲಾಗುತ್ತದೆ, ಅಥವಾ ಅನ್ನ ಆಧಾರಿತ ಭಕ್ಷ್ಯಗಳ ಮೇಲೆ ಸಿಂಪಡಿಸಲಾದ ಖಾದ್ಯಾಲಂಕಾರವಾಗಿ ಬಳಸಲಾಗುತ್ತದೆ, ಉದಾಹರಣೆಗೆ ಆವಿಯಲ್ಲಿ ಬೇಯಿಸಿದ ಅನ್ನ, ಲಾಂಟಾಂಗ್, ಕೆಟಾನ್ ಅಂಟಂಟಾದ ಅನ್ನ ಮತ್ತು ಬುರಾಸಾ ; ಅಥವಾ ಸಾಂಪ್ರದಾಯಿಕ ಸೋಟೊ ಸೂಪ್‌ಗಳ ಮೇಲೆ.

ಉಲ್ಲೇಖಗಳು

[ಬದಲಾಯಿಸಿ]
  1. Soewitomo, Sisca (2015-09-10). Popular Indonesia Cuisine: Over 100 Recipes (Edisi Bahasa Inggris) (in ಇಂಡೋನೇಶಿಯನ್). Gramedia Pustaka Utama. ISBN 978-602-03-1541-6.
  2. ೨.೦ ೨.೧ Weerdt-Schieffelers, Esly Van de (1998). Indonesian Cuisine: "Selamat Makan". Pulido Publications. ISBN 978-0-9663787-0-2.Weerdt-Schieffelers, Esly Van de (1998). Indonesian Cuisine: "Selamat Makan". Pulido Publications. ISBN 978-0-9663787-0-2.