ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಇದನ್ನು ಡಿಜಿಟಲ್ ಫಿಯಟ್ ಕರೆನ್ಸಿ[೧] ಅಥವಾ ಡಿಜಿಟಲ್ ಬೇಸ್ ಮನಿ[೨] ಎಂದು ಸಹ ಕರೆಯುತ್ತಾರೆ. ಇದು ಕೇಂದ್ರೀಯ ಬ್ಯಾಂಕ್ ನೀಡುವ ಡಿಜಿಟಲ್ ಕರೆನ್ಸಿಯಾಗಿದೆ.

A sign on the Hangzhou Metro advertising acceptance of the Digital Renminbi
ಹ್ಯಾಂಗ್‌ಝೌ ಮೆಟ್ರೋ ಡಿಜಿಟಲ್ ರೆನ್‌ಮಿನ್‌ಬಿ ಜಾಹಿರಾತು ಸ್ವೀಕಾರದ ಚಿಹ್ನೆ. ಪ್ರಮುಖ ಆರ್ಥಿಕತೆ (ಚೀನಾ) ಅಳವಡಿಸಿಕೊಂಡ ಮೊದಲ ಸಿಬಿಡಿಸಿ

ಸಿಬಿಡಿಸಿಗಳಲ್ಲಿ ಸಾಮಾನ್ಯವಾಗಿ ಚಿಲ್ಲರೆ ಮತ್ತು ಸಗಟು ಎಂಬ ಎರಡು ಸಾಮಾನ್ಯ ಮಾದರಿಗಳಿವೆ.[೩] ಚಿಲ್ಲರೆ ಸಿಬಿಡಿಸಿಗಳು ದೈನಂದಿನ ವಹಿವಾಟುಗಳಿಗೆ ಪಾವತಿಗಳನ್ನು ಮಾಡಲು ಮನೆಗಳು ಮತ್ತು ವ್ಯವಹಾರಗಳಿಗೆ ವಿನ್ಯಾಸಗೊಳಿಸಲಾಗಿದೆ. ಸಗಟು ಸಿಬಿಡಿಸಿಗಳನ್ನು ಹಣಕಾಸು ಸಂಸ್ಥೆಗಳಿಗೆ ವಿನ್ಯಾಸಗೊಳಿಸಲಾಗಿದೆ. ಇದು ಕೇಂದ್ರ ಬ್ಯಾಂಕ್ ಮೀಸಲುಗಳಂತೆಯೇ ಕಾರ್ಯನಿರ್ವಹಿಸುತ್ತದೆ.

ಪೂರ್ವ ಕೆರಿಬಿಯನ್ ಕರೆನ್ಸಿ ಯೂನಿಯನ್ ಅನ್ನು ರೂಪಿಸುವ ೯ ದೇಶಗಳು ಮತ್ತು ೮ ದ್ವೀಪಗಳು ಸಿಬಿಡಿಸಿಗಳನ್ನು ಪ್ರಾರಂಭಿಸಿವೆ.

ಇತಿಹಾಸ[ಬದಲಾಯಿಸಿ]

ಭಾರತದ ಡಿಜಿಟಲ್ ನಾಣ್ಯ ೨

ಕೇಂದ್ರೀಯ ಬ್ಯಾಂಕುಗಳು ದಶಕಗಳಿಂದ ಡಿಜಿಟಲ್ ಕರೆನ್ಸಿ ಯೋಜನೆಗಳನ್ನು ಸಂಶೋಧಿಸಿವೆ ಮತ್ತು ಪ್ರಾರಂಭಿಸಿವೆ. ಉದಾಹರಣೆಗೆ ಫಿನ್‌ಲ್ಯಾಂಡ್‌ನ ಕೇಂದ್ರ ಬ್ಯಾಂಕ್ ೧೯೯೦ ರ ದಶಕದಲ್ಲಿ ಅವಂತ್ ಸಂಗ್ರಹಿಸಿದ ಮೌಲ್ಯದ ಇ-ಮನಿ ಕಾರ್ಡ್ ಅನ್ನು ನೀಡಿತು.[೪]

ಅನುಷ್ಠಾನ[ಬದಲಾಯಿಸಿ]

ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿಯನ್ನು ಕೇಂದ್ರೀಯ ಬ್ಯಾಂಕ್ ಸರ್ಕಾರ ಅಥವಾ ಅನುಮೋದಿತ ಖಾಸಗಿ ವಲಯದ ಘಟಕಗಳು ನಡೆಸುವ ಡೇಟಾಬೇಸ್ ಬಳಸಿಕೊಂಡು ಕಾರ್ಯಗತಗೊಳಿಸಲಾಗುತ್ತದೆ.[೫]

ಆರು ಕೇಂದ್ರೀಯ ಬ್ಯಾಂಕುಗಳು ಸಿಬಿಡಿಸಿ ಅನ್ನು ಪ್ರಾರಂಭಿಸಿವೆ: ಸೆಂಟ್ರಲ್ ಬ್ಯಾಂಕ್ ಆಫ್ ದಿ ಬಹಾಮಾಸ್(ಸ್ಯಾಂಡ್ ಡಾಲರ್), ಈಸ್ಟರ್ನ್ ಕೆರಿಬಿಯನ್ ಸೆಂಟ್ರಲ್ ಬ್ಯಾಂಕ್ (ಡಿಕ್ಯಾಶ್), ಸೆಂಟ್ರಲ್ ಬ್ಯಾಂಕ್ ಆಫ್ ನೈಜೀರಿಯಾ (ಇ-ನೈರಾ), ಬ್ಯಾಂಕ್ ಆಫ್ ಜಮೈಕಾ (ಜ್ಯಾಮ್‌ಡೆಕ್ಸ್), ಪೀಪಲ್ಸ್ ಬ್ಯಾಂಕ್ ಆಫೀಸ್ ‍ಚೀನಾ (ಡಿಜಿಟಲ್ ರೆನ್ಮಿನ್ಬಿ), ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಡಿಜಿಟಲ್ ರೂಪಾಯಿ), ಮತ್ತು ಬ್ಯಾಂಕ್ ಆಫ್ ರಷ್ಯಾ (ಡಿಜಿಟಲ್ ರೂಬಲ್).[೬]

ಪ್ರಯೋಜನಗಳು ಮತ್ತು ಪರಿಣಾಮಗಳು[ಬದಲಾಯಿಸಿ]

  • ತಾಂತ್ರಿಕ ದಕ್ಷತೆ: ಬ್ಯಾಂಕುಗಳು ಮತ್ತು ಕ್ಲಿಯರಿಂಗ್ ಹೌಸ್‌ಗಳಂತಹ ಮಧ್ಯವರ್ತಿಗಳ ಮೇಲೆ ಅವಲಂಬಿತರಾಗುವ ಬದಲು ನೈಜ ಸಮಯದಲ್ಲಿ ಪಾವತಿಸುವವನು ನೇರವಾಗಿ ಪಾವತಿದಾರರಿಗೆ ಹಣ ವರ್ಗಾವಣೆ ಮತ್ತು ಪಾವತಿಗಳನ್ನು ಮಾಡಬಹುದು.
    • ಸಂಕೀರ್ಣತೆಯ ಕಡಿಮೆ: ನಿಧಾನಗತಿಯ ವಹಿವಾಟುಗಳ ಬಗ್ಗೆ ವ್ಯಾಪಾರಿಗಳು ಪ್ರತ್ಯೇಕವಾಗಿ ನಿಗಾ ಇಡುವ ಅಗತ್ಯವಿಲ್ಲ.
    • ವಹಿವಾಟು ವೆಚ್ಚ ಕಡಿಮೆ: ಒಂದು ಸಿಬಿಡಿಸಿ ಮಧ್ಯವರ್ತಿಗಳನ್ನು ತೆಗೆದುಹಾಕುವ ಮೂಲಕ ಮತ್ತು ನಗದು ನಿರ್ವಹಣೆಯ ಅಗತ್ಯವನ್ನು ಕಡಿಮೆ ಮಾಡುವ ಮೂಲಕ ವ್ಯವಹಾರ ವೆಚ್ಚಗಳನ್ನು ಕಡಿಮೆ ಮಾಡಬಹುದು.
  • ಸಾರ್ವಜನಿಕ ಉಪಯುಕ್ತತೆಯಾಗಿ ಹಣದ ರಕ್ಷಣೆ: ಕೇಂದ್ರೀಯ ಬ್ಯಾಂಕ್‌ಗಳು ನೀಡುವ ಡಿಜಿಟಲ್ ಕರೆನ್ಸಿಗಳು ಭೌತಿಕ ನಗದಿಗೆ ಆಧುನಿಕ ಪರ್ಯಾಯವನ್ನು ಒದಗಿಸುತ್ತವೆ.
  • ಸುಧಾರಿತ ಹಣಕಾಸು ನೀತಿ: ಒಂದು ಸಿಬಿಡಿಸಿಯು ಕೇಂದ್ರೀಯ ಬ್ಯಾಂಕ್ಗೆ ಹಣದ ಪೂರೈಕೆ ಮತ್ತು ಒಟ್ಟಾರೆ ಆರ್ಥಿಕತೆಯ ಮೇಲೆ ಉತ್ತಮ ನಿಯಂತ್ರಣವನ್ನು ಹೊಂದಲು ಅನುವು ಮಾಡಿಕೊಡುತ್ತದೆ.
  • ಹೆಚ್ಚಿದ ಪಾರದರ್ಶಕತೆ: ಸಿಬಿಡಿಸಿಯು ನಗದುಗಿಂತ ಹೆಚ್ಚು ಪಾರದರ್ಶಕ ಪಾವತಿ ವ್ಯವಸ್ಥೆಯಾಗಿದೆ. ಏಕೆಂದರೆ ಎಲ್ಲಾ ವ್ಯವಹಾರಗಳು ಕೇಂದ್ರ ಲೆಡ್ಜರ್ನಲ್ಲಿ ದಾಖಲಾಗುತ್ತವೆ.

ಅಪಾಯಗಳು[ಬದಲಾಯಿಸಿ]

  • ಬ್ಯಾಂಕಿಂಗ್ ವ್ಯವಸ್ಥೆಯ ವಿಘಟನೆ: ತನ್ನ ನಾಗರಿಕರಿಗೆ ನೇರವಾಗಿ ಡಿಜಿಟಲ್ ಕರೆನ್ಸಿಯನ್ನು ಒದಗಿಸುವುದರಿಂದ ಠೇವಣಿದಾರರು ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗುಳಿಯುತ್ತಾರೆ.
  • ಡಿಜಿಟಲ್ ಡಾಲರೀಕರಣ: ಉತ್ತಮವಾಗಿ ನಡೆಯುವ ವಿದೇಶಿ ಡಿಜಿಟಲ್ ಕರೆನ್ಸಿಯು ಸ್ಥಳೀಯ ಕರೆನ್ಸಿಗೆ ಬದಲಿಯಾಗಬಹುದು.
  • ಕೇಂದ್ರೀಕರಣ: ಹೆಚ್ಚಿನ ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿಗಳು ಕೇಂದ್ರೀಕೃತವಾಗಿರುವುದರಿಂದ ಸಿಬಿಡಿಸಿಗಳ ವಿತರಣೆಯ ನಿಯಂತ್ರಕರು ಸ್ವಿಚ್ ಆಫ್ ಮಾಡುವ ಮೂಲಕ ಯಾರ ಖಾತೆಯಿಂದಲೂ ಹಣವನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು.

ಉಲ್ಲೇಖಗಳು[ಬದಲಾಯಿಸಿ]

  1. "Focus Group on Digital Currency including Digital Fiat Currency". ITU (in ಅಮೆರಿಕನ್ ಇಂಗ್ಲಿಷ್). Retrieved 2017-12-03.
  2. Mersch, Yves (16 January 2017). Digital Base Money: an assessment from the ECB's perspective (Speech). Farewell ceremony for Pentti Hakkarainen, Deputy Governor of Suomen Pankki – Finlands Bank (in ಇಂಗ್ಲಿಷ್). Helsinki: European Central Bank. Retrieved 19 June 2021.
  3. "Concept Note on Central Bank Digital Currency". Reserve Bank of India. October 7, 2022.
  4. Grym, Aleksi; Heikkinen, Päivi; Kauko, Karlo; Takala, Kari (2017). "Central bank digital currency". BoF Economics Review. 5.
  5. "Analytical Report on the E-Hryvnia Pilot Project" (PDF). National Bank of Ukraine.
  6. "Central Bank Digital Currency Tracker". Atlantic Council (in ಅಮೆರಿಕನ್ ಇಂಗ್ಲಿಷ್). Retrieved 2023-01-07.