ಸುವರ್ಣ ಸೇತುವೆ (ಚಲನಚಿತ್ರ)
ಗೋಚರ
| ಸುವರ್ಣ ಸೇತುವೆ (ಚಲನಚಿತ್ರ) | |
|---|---|
| ಸುವರ್ಣ ಸೇತುವೆ | |
| ನಿರ್ದೇಶನ | ಗೀತಪ್ರಿಯ |
| ನಿರ್ಮಾಪಕ | ಬಾಳಿಗ ಸಹೋದರರು |
| ಕಥೆ | ಎಚ್.ಜಿ.ರಾಧಾದೇವಿ |
| ಪಾತ್ರವರ್ಗ | ವಿಷ್ಣುವರ್ಧನ್ ಆರತಿ ದಿನೇಶ್, ಬೇಬಿ ರೇಖಾ, ಶ್ಯಾಮಲ |
| ಸಂಗೀತ | ವಿಜಯಭಾಸ್ಕರ್ |
| ಛಾಯಾಗ್ರಹಣ | ಕುಲಶೇಖರ್ |
| ಬಿಡುಗಡೆಯಾಗಿದ್ದು | ೧೯೮೨ |
| ಪ್ರಶಸ್ತಿಗಳು | ಎಚ್.ಜಿ.ರಾಧಾದೇವಿ ಅವರ ಇದೇ ಹೆಸರಿನ ಕಾದಂಬರಿ ಆಧಾರಿತ. |
| ಚಿತ್ರ ನಿರ್ಮಾಣ ಸಂಸ್ಥೆ | ರಾಜರಾಜೇಶ್ವರಿ ಪ್ರೊಡಕ್ಷನ್ಸ್ |
| ಸಾಹಿತ್ಯ | ಗೀತಪ್ರಿಯ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಮ್, ವಾಣಿಜಯರಾಮ್, ಪಿ.ಜಯಚಂದ್ರನ್ |
ಸುವರ್ಣ ಸೇತುವೆ ವರ್ಷ ೧೯೮೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ವಿಷ್ಣುವರ್ಧನ್, ಆರತಿ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಗೀತಪ್ರಿಯ ನಿರ್ದೇಶಿಸಿದ್ದರು.
ಇದೊಂದು ಕಾದಂಬರಿ ಆಧಾರಿತ ಚಲನಚಿತ್ರವಾಗಿದ್ದು, ಎಚ್.ಜಿ.ರಾಧಾದೇವಿಯವರು ಬರೆದಿರುವ ಇದೇ ಹೆಸರಿನ ಕಾದಂಬರಿಯನ್ನು ಚಲನಚಿತ್ರವಾಗಿ ನಿರ್ಮಿಸಲಾಗಿದೆ.
ಈ ಕಾದಂಬರಿಯು ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು.