ವಿಷಯಕ್ಕೆ ಹೋಗು

ಸುಲ್ಲಿ ಪ್ರುಢಾಮೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೆನೆ-ಫ್ರೆನ್ಕಾಯಿಸ್-ಅರ್ಮ್ಯಾಂಡ್ ಪ್ರುಢಾಮೆ
ಜನನ(೧೮೩೯-೦೩-೧೬)೧೬ ಮಾರ್ಚ್ ೧೮೩೯
ಪ್ಯಾರಿಸ್, ಫ್ರಾನ್ಸ್
ಮರಣSeptember 6, 1907(1907-09-06) (aged 68)
ಫ್ರಾನ್ಸ್
ವೃತ್ತಿಕವಿ ಮತ್ತು ಪ್ರಬಂಧಕಾರ
ರಾಷ್ಟ್ರೀಯತೆಫ್ರಾನ್ಸ್
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1901

ರೆನೆ-ಫ್ರೆನ್ಕಾಯಿಸ್-ಅರ್ಮ್ಯಾಂಡ್ (ಸುಲ್ಲಿ) ಪ್ರುಢಾಮೆ (ಜನನ:ಪ್ಯಾರಿಸ್, ಫ್ರಾನ್ಸ್, ಮಾರ್ಚ್ ೧೬, ೧೮೩೯ - ನಿಧನ:ಫ್ರಾನ್ಸ್, ಸೆಪ್ಟೆಂಬರ್ ೬, ೧೯೦೭) ಒಬ್ಬ ಫ್ರೆಂಚ್ ಕವಿ ಮತ್ತು ಪ್ರಬಂಧಕಾರ. ಇವರು ೧೯೦೧ರಲ್ಲಿ ಸಾಹಿತ್ಯಕ್ಕಾಗಿ ಮೊದಲ ನೊಬೆಲ್ ಪ್ರಶಸ್ತಿಯನ್ನು ಪಡೆದರು.

ನೋಬೆಲ್ ಪ್ರಶಸ್ತಿ ಪ್ರಾರಂಭವಾದ ದಿನಗಳಲ್ಲಿ ಸಾಹಿತ್ಯಕ್ಕಾಗಿ ದೊರೆತ ಮೊಟ್ಟಮೊದಲ ನೋಬೆಲ್ ಪ್ರಶಸ್ತಿ

[ಬದಲಾಯಿಸಿ]

೧೯೦೧ ರಲ್ಲಿ ಸ್ ಲೀ ಪ್ರಿಡಾಮ್ 'ಮೊದಲನೆಯ ನೋಬೆಲ್ ಪ್ರಶಸ್ತಿ ' ಸಾಹಿತ್ಯಕ್ಕಾಗಿ ಪಡೆದ ವಿಶಿಷ್ಠಕೀರ್ತಿಗೆ ಪಾತ್ರರಾಗಿರುವ ವ್ಯಕ್ತಿ. ಈ ಪ್ರಶಸ್ತಿಗೆ ಅವರು ನಿಜವಾಗಿಯೂ ಸಪಾತ್ರರೆ ಯೆನ್ನುವ ಪ್ರಶ್ನೆ ಆಗಿನ ಜಾಗತಿಕ ಸಾಹಿತ್ಯ ವಲಯದಲ್ಲಿ ಕೇಳಬರುತ್ತಿತ್ತು. ಈಗಂತೂ ' ಸ್ ಲೀ ಪ್ರಿಡಾಮ್ ' ರ ಕೃತಿಗಳನ್ನು, ಫ್ರೆಂಚ್ ಜನರೂ ಓದುವುದಿಲ್ಲ. ಇದರಿಂದ ಅವರು ತಮ್ಮ ಕಾಲದಲ್ಲಿ ನೀಡಿದ ಕೊಡುಗೆಯನ್ನು ಅಲ್ಲಗಳೆಯಲಾಗದು.

ಸ್ ಲೀ ಎನ್ನುವುದು 'ರೆನೆ ಫ್ರಾನ್ಸುವಾ ಅರ್ಮ್ಂಡ್' ಅವರ ತಂದೆಯ ಹೆಸರು. ಕವಿ ಅದನ್ನು ತನ್ನ ಹೆಸರಿನ ಜೊತೆಗೆ ಜೋಡಿಸಿಕೊಂಡರು. ಇಂಜಿನಿಯರ್ ಆಗುವ ಹಂಬಲವಿತ್ತು ಆದರೆ ಅವರು ಕಾನೂನು ಕಲಿತು 'ನೋಟರಿ ಆಫೀಸಿನಲ್ಲಿ ಕೆಲಸ' ಕ್ಕೆ ಸೇರಿದರು. ಅವರ 'ಪ್ರೇಮ ವ್ಯವಹಾರ' ವೊಂದು ಮುರಿದುಬಿದ್ದ ಕಾರಣ, ಅವರು ಅಜೀವಪರ್ಯಂತ ಬ್ರಹ್ಮಚಾರಿಯಾಗಿಯೇ ಉಳಿದರು. ತಮ್ಮ ೨೬ ನೇ ಹರೆಯದಿಂದಲೇ ಕವತೆಬರೆಯಲು ಆರಂಭಿಸಿದರು. ಕಾವ್ಯದ ಪಾರಂಪಾರಿಕ ನವಿರು-ಭಾವ, ಲಯಗಳನ್ನು ಉಪಯೋಗಿಸಿಕೊಂಡರು. ಅವರಿಗೆ ರೋಮನ್ ಕವಿ 'ಲ್ಯುಕ್ರೇಷಿಯಸ್' ಅಚ್ಚುಮೆಚ್ಚಿನವನಾಗಿದ್ದ. ಅವರು ತಮ್ಮ ಕಾವ್ಯ-ಕೃತಿ 'ಲಾ ಜಸ್ಟಿಸ್ ' ನಲ್ಲಿ ತಮ್ಮ ತಾತ್ವಿಕ ಚಿಂತನೆಗಳನ್ನು ವ್ಯಕ್ತಪಡಿಸಿದ್ದಾರೆ. ಕಾವ್ಯದಲ್ಲಿ ಖಿನ್ನ ಭಾವನೆಗಳೆ ತುಂಬಿದ್ದ ಕಾಲದಲ್ಲಿ, ಆನಂದವನ್ನು ಪ್ರತಿಪಾದಿಸಿದ ಕವಿಯೆಂದು ಕೂಡ ಅವರನ್ನು ಗುರುತಿಸುತ್ತಾರೆ.

ಮುಖ್ಯಕಾವ್ಯ ಕೃತಿ, 'ಲೀ ಬೋನ್ ಹರ್', 'LE BONHEUR'‍ (೧೮೮೮) ಎಂಬ ೪,೦೦೦ ಸಾಲುಗಳ ಮಹಾಕಾವ್ಯ. ಇದರ ನಂತರ ಅವರು ಕಾವ್ಯ ಮೀಮಾಂಸೆಯ ಕೃತಿಗಳನ್ನು ಹೆಚ್ಚಾಗಿ ಪ್ರಟಿಸಿದರು. ಅವರು ೧೮೭೦ ರಂದ 'ಪಾರ್ಶ್ವವಾಯು ಪೀಡಿತ' ರಾದರು. ೧೮೮೧ ರಲ್ಲಿ 'ಫ್ರೆಂಚ್ ಸಾಷಿತ್ಯ ಅಕ್ಯಾಡೆಮಿ' ಯ ಅಧ್ಯಕ್ಷರಾಗಿ ನೇಮಿಸಲ್ಪಟ್ಟರು. ನೋಬೆಲ್ ಬಹುಮಾನದ ಜತೆಗೆ ಬಂದ ಹಣವನ್ನೆಲ್ಲ ಯುವ ಫ್ರೆಂಚ್ ಲೇಖಕರ ಮೊದಲನೆಯ ಕೃತಿಯನ್ನು ಪ್ರಟಿಸಲು ಬಳಸಬೇಕೆಂದು 'ಫ್ರೆಂಚ್ ಲೇಖಕರ ಸಂಘ ' ಕ್ಕೆ ಕೊಟ್ಟುಬಿಟ್ಟರು.