ವಿಷಯಕ್ಕೆ ಹೋಗು

ಸುಲೋಚನಾ (ಗಾಯಕಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಲೋಚನಾ
ಜನನ೧೯೫೦
ಕರ್ನಾಟಕ
ಮರಣ೨ ಮಾರ್ಚ್ ೨೦೦೯
ಮುಂಬೈ, ಮಹಾರಾಷ್ಟ್ರ
ವೃತ್ತಿ
  • ಹಿನ್ನೆಲೆಗಾಯಕಿ
  • ಕಂಠದಾನ ಕಲಾವಿದೆ

ಸುಲೋಚನಾ (ಆಂಗ್ಲ:Sulochana) (೧೯೫೦-೨೦೦೯), ಸುಗಮ ಸಂಗೀತ ಮತ್ತು ಚಲನಚಿತ್ರ ಗೀತೆಗಳ ಹಾಡುಗಾರಿಕೆಗೆ ಹೆಸರಾದ ಕನ್ನಡದ ಗಾಯಕಿ.[] 'ಎಲ್ಲಿ ಜಾರಿತೋ ಮನವು', 'ಅತ್ತಿತ್ತ ನೋಡದಿರು' ಮುಂತಾದವು ಅವರ ಜನಪ್ರಿಯ ಭಾವಗೀತೆಗಳಾದರೆ, 'ನೇಸರ ನೋಡು', 'ಇದು ರಾಮಮಂದಿರ', 'ಆನೆಯ ಮೇಲೆ ಅಂಬಾರಿ ಕಂಡೆ' ಮುಂತಾದವು ಅವರ ಪ್ರಸಿದ್ಧ ಚಲನಚಿತ್ರ ಗೀತೆಗಳು.

ವೈಯಕ್ತಿಕ ಜೀವನ

[ಬದಲಾಯಿಸಿ]

ಸುಲೋಚನಾ ೧೯೫೦ರಲ್ಲಿ ಕರ್ನಾಟಕದ ಸಂಗೀತದ ಮನೆತನವೊಂದರಲ್ಲಿ ಹುಟ್ಟಿದರು. ಅವರ ತಾಯಿ ಪದ್ಮಾವತಮ್ಮ ಸಹ ಹಾಡುಗಾತಿಯಾಗಿದ್ದರು.[]

ವೆಂಕಟೇಶ್ ಎಂಬುವವರನ್ನು ಮದುವೆಯಾಗಿದ್ದ ಸುಲೋಚನಾ ಅವರಿಗೆ ಎರಡು ಮಕ್ಕಳಿದ್ದಾರೆ.[]

ಗಾಯಕಿಯಾಗಿ

[ಬದಲಾಯಿಸಿ]

ಬಾಲ್ಯದಿಂದಲೇ ಸಂಗೀತಾಸಕ್ತರಾದ ಸುಲೋಚನಾ ಸುಗಮಸಂಗೀತವನ್ನು ಮೈಸೂರು ಅನಂತಸ್ವಾಮಿ ಮತ್ತು ನಾರಾಯಣ ಮಾನೆ ಅವರ ಬಳಿ; ಆರ್. ಕೆ. ಪದ್ಮನಾಭ ಅವರ ಬಳಿ ಕರ್ನಾಟಕ ಸಂಗೀತ ಮತ್ತು ರಾಜಭಾವೋ ಸೊಂಟಕ್ಕಿ ಅವರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿತರು.

ಭಾವಗೀತೆಗಳು

[ಬದಲಾಯಿಸಿ]

ಸುಲೋಚನಾ ಮೊದಲು ರಂಗಭೂಮಿಯ ನಾಟಕಗಳಲ್ಲಿ ಗಾಯಕಿಯಾಗಿ ತೊಡಗಿಸಿಕೊಂಡರು. ಆ ಬಳಿಕ ಮೈಸೂರು ಅನಂತಸ್ವಾಮಿ ಅವರ ಭಾವಗೀತೆಗಳಿಗೆ ಗಾಯಕಿಯಾಗಿ ಆಯ್ಕೆಯಾದರು. 'ಭಾವಸಂಗಮ' ಧ್ವನಿಸುರುಳಿಯ ಸುಲೋಚನಾ ಅವರ ’ಎಲ್ಲಿ ಜಾರಿತೋ ಮನವು’ ಭಾವಗೀತೆ ಜನಜನಿತವಾಯಿತು.

ಚಿತ್ರಗೀತೆಗಳು

[ಬದಲಾಯಿಸಿ]

ಸುಗಮಸಂಗೀತದಲ್ಲಿ ಗುರುತಿಸಿಕೊಳ್ಳುತ್ತಿದ್ದಂತೆ ಸುಲೋಚನಾ ಅವರಿಗೆ ಚಿತ್ರರಂಗದಿಂದ ಅವಕಾಶಗಳು ಬಂದವು. ಅವರ ಮೊದಲ ಹಾಡು ೧೯೭೭ರಲ್ಲಿ ಬಂದ ಕಾಕನ ಕೋಟೆ ಚಿತ್ರದ ನೇಸರ ನೋಡು ನೇಸರ ನೋಡು ಹಾಡು.[] ಸಿ. ಅಶ್ವತ್ ಅವರ ಸಂಯೋಜನೆಯ ಈ ಹಾಡು ಪ್ರಸಿದ್ಧವಾಯಿತು.

ಮುಂದೆ ರಾಜನ್ ನಾಗೇಂದ್ರ, ಉಪೇಂದ್ರಕುಮಾರ್ ಮುಂತಾದವರ ನಿರ್ದೇಶನದಲ್ಲಿ ಎಸ್. ಪಿ. ಬಾಲಸುಬ್ರಹ್ಮಣ್ಯಂ, ರಾಜಕುಮಾರ್ ಮುಂತಾದವರೊಡನೆ ಹಲವಾರು ಹಾಡುಗಳನ್ನು ಸುಲೋಚನಾ ಹಾಡಿದ್ದಾರೆ.

ಪ್ರಶಸ್ತಿಗಳು

[ಬದಲಾಯಿಸಿ]
  • ೧೯೯೬-೬೭: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 'ಕರ್ನಾಟಕ ಕಲಾಶ್ರೀ ಪ್ರಶಸ್ತಿ'

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸುಲೋಚನಾ, ೨೦೦೯ರ ಮಾರ್ಚ್ ೨ರಂದು ಮುಂಬೈನ ಆಸ್ಪತ್ರೆಯೊಂದರಲ್ಲಿ ನಿಧನರಾದರು.[] ಅವರಿಗೆ ೫೯ ವರ್ಷ ವಯಸ್ಸಾಗಿತ್ತು.

ಜನಪ್ರಿಯ ಹಾಡುಗಳು

[ಬದಲಾಯಿಸಿ]
ಚಿತ್ರಗೀತೆಗಳು

ಮುಂತಾದವು

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ 'ಕಣಜ ವಿಶ್ವಕೋಶ':'ಸುಲೋಚನಾ ವೆಂಕಟೇಶ್'
  2. ರಾಘವೇಂದ್ರ ಪದ್ಮಶಾಲಿ (6 September 2018). "ನಾವು ನೋಡಲೇಬೇಕಾದ ಚಿತ್ರ: ಕಾಕನಕೋಟೆ". News 13. Retrieved 22 April 2021.
  3. "Singer Sulochana dies in Mumbai". The New Indian Express. 3 March 2009. Retrieved 22 April 2021.