ಸುಲಜ್ಜಾ ಫಿರೋಡಿಯ ಮೋಟ್ವಾನಿ

ವಿಕಿಪೀಡಿಯ ಇಂದ
Jump to navigation Jump to search

ಇವರು ಭಾರತೀಯ ಮಹಿಳಾ ಉದ್ಯಮಿ.ಇವರು ೧೯೭೦ರ ಆಗಸ್ಟ್ ೨೬ ರಂದು ಜನಿಸಿದರು.

ವಿದ್ಯಾಭ್ಯಾಸ[ಬದಲಾಯಿಸಿ]

೧೯೯೦ರಲ್ಲಿ ಬಿಹಾನ್ ಮಹಾರಾಷ್ಟ್ರ ವಾಣಿಜ್ಯ ಕಾಲೇಜು, ಪುಣೆ ವಿಶ್ವವಿದ್ಯಾಲಯದಿಂದ ಪಡೆದರು. ನಂತರ ತಮ್ಮ ಎಂಬಿಎ ಪದವಿಯನ್ನು ಪಿಟ್ಸ್‌ಬರ್ಗ್‌ನ ಕ್ರನೇಗಿ ಮೇಲನ್ ವಿಶ್ವವಿದ್ಯಾಲಯದಲ್ಲಿ ಪಡೆದರು. ಎಸ್ ಎಸ್ ಸಿ ಮತ್ತು ಹೆಚ್ ಎಸ್‌ ಸಿ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿ ಗಳಿಸಿದ್ದಾರೆ.

ವಯಕ್ತಿಕ ಜೇವನ[ಬದಲಾಯಿಸಿ]

ಫಿರೋಡಿಯಾ ರವರ ತಾಯಿ ಪದ್ಮಶ್ರೀ ಅರುಣಾ ಫಿರೋಡಿಯಾ. ಇವರು ಫಿರೋಡಿಯಾ ಸಂಸ್ಥೆಯ ಸ್ಥಾಪಕರು ಮತ್ತು ಇಗೀನ ಅಧ್ಯಕ್ಷರು. ಸುಲಜ್ಜಾರವರು ಹೆಚ್ ಕೆ ಫಿರೋಡಿಯಾರವರ ಮೊಮ್ಮಗಳು. ಸುಲಜ್ಜಾ ಫಿರೋಡಿಯಾರವರ ಪತಿ ಮನೀಶ್ ಮೊಟ್ವಾನಿ, ಮಗ ಸಿದ್ಧಾರ್ಥ್. ಇವರಿಗೆ ಬ್ಯಾಂಡ್ಮಿಡನ್ ಕ್ರೀಡೆಯಲ್ಲಿ ಆಸಕ್ತಿ ಇತ್ತು.[೧]

ವೃತ್ತಿ ಜೀವನ[ಬದಲಾಯಿಸಿ]

ಕೈನೆಟಿಕ್ ಮೋಟಾರ್ ಕಂಪನಿಗೆ ಸೇರುವ ಮೊದಲು ನಾಲ್ಕು ವರ್ಷಗಳ ಕಾಲ ಕ್ಯಾಲಿಫೋರ್ನಿಯಾದ ಇನ್ವೇಸ್ಟ್ ಅನಾಲಿಸಿಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸಿದ್ದರು. ಇವರು ಕೈನೇಟಿಕ್ ಮೋಟಾರ್ ಕಂಪೆನಿಯ ಪ್ರಮುಖ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ.ಕೈನೇಟಿಕ್ ಮೋಟರ್ ಕಂಪೆನಿ ಹಾಗು ಕೈನೇಟಿಕ್ ಗ್ರೀನ್ ಎನೇರ್ಜಿ ಲಿಮಿಟೆಡ್ ಕಂಪನಿಗಳ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಕಂಪನಿಯ ಹಲವಾರು ವ್ಯವಹಾರ ಬೆಳವಣಿಗೆ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

  • ಇವರಿಗೆ ಇಂಡಿಯನ್‌ ಟುಡೇಯಿಂದ ಈ ಯುಗದ ವ್ಯವಹಾರ ಮುಖವೆಂಬ ಬಿರುದು ಲಭಿಸಿದೆ.
  • ಇವರ ವ್ಯವಹಾರದಲ್ಲಿನ ಸಾಧನೆಗೆ ಸಾಮಾಜಿಕ ಯುವ ಸಾಧಕಿ ಎಂಬ ಪ್ರಶಸ್ತಿ ೨೦೦೨ ರಲ್ಲಿ ಪಡೆದಿದ್ದಾರೆ.
  • ೨೦೦೩ ರಲ್ಲಿ ಮಾರುಕಟ್ಟೆ ಮತ್ತು ನಿರ್ವಹಣಾ ಸಂಸ್ಥೆಯಿಂದ ಮಹಿಳಾ ನಿರ್ವಹಣಾ ಅಧಿಕಾರಿ ಎಂದು ಪ್ರಶಂಸೆ ಪಡೆದಿದ್ದಾರೆ.
  • ೨೦೦೩ ರಲ್ಲಿ ಬಿಸಿನೆಸ್ ಟುಡೇ ಯಿಂದ ಉತ್ತಮ ಯುವ ಸಾಧಕಿ ಎಂಬ ಬಿರುದು ಲಭಿಸಿದೆ.[೨]
  • ಎಂ ಟಿವಿಯು ಭಾರತೀಯ ಅತ್ಯಂತ ಸೊಗಸಾದ ವ್ಯವಹಾರಿಕ ಮಹಿಳೆ ಎಂದು ಗುರುತಿಸಿದೆ.
  • ಅಂತರಾಷ್ಟ್ರೀಯ ಆರ್ಥಿಕ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯುವ ನಾಯಕಿ ಮತ್ತು ಮುಂದಿನ ದಿನದ ಅಂತರ್ರಾಷ್ಟ್ರೀಯ ವ್ಯವಹಾರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]