ಸುರೇಂದ್ರ ಕೌಲಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುರೇಂದ್ರ ಕೌಲಗಿ
ಜನನ೨೮ ಅಕ್ಟೋಬರ್, ೧೯೩೪
ಧಾರವಾಡ ಜಿಲ್ಲೆಯ ಗುಡಿಗೇರಿ
ವೃತ್ತಿಗಾಂಧಿವಾದಿ, ಲೇಖಕರು ಮತ್ತು ಸಮಾಜ ಸೇವಕರು
ಭಾಷೆಕನ್ನಡ
ರಾಷ್ಟ್ರೀಯತೆಭಾರತೀಯ
ಪೌರತ್ವಭಾರತೀಯ
ಮಕ್ಕಳುಸಂತೋಷ್ ಕೌಲಗಿ ಮತ್ತು ಸುಘೋಷ್ ಕೌಲಗಿ

#%20http://www.janapada.net/%20%0A#%20http://www.janapada.org/

ಶ್ರೀಯುತರಾದ ಸುರೇಂದ್ರ ಕೌಲಗಿ ಯವರು ನಾಡು ಕಂಡ ಅಪರೂಪದ ಗಾಂಧಿವಾದಿ ಹಾಗೂ ಸರ್ವೋದಯ ಆಂದೋಲನದ ಧುರೀಣ. ಶ್ರೀಯುತರು ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜನಪದ ಸೇವಾ ಟ್ರಸ್ಟ್ ನ್ನು ಸ್ಥಾಪಿಸಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದಕ್ಕೂ ಮುನ್ನ ೧೯೫೪-೧೯೫೯ ಅವಧಿಯಲ್ಲಿ ಶ್ರೀ ಜಯಪ್ರಕಾಶ ನಾರಾಯಣ ಅವರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಶ್ರೀ ಆಚಾರ್ಯ ವಿನೋಭಾ ಭಾವೆ ಅವರ ಜೊತೆಯಲ್ಲೂ ಕೆಲಸ ಮಾಡಿರುತ್ತಾರೆ. ಪ್ರಸ್ತುತ ಜನಪದ ವಿಚಾರ ಎಂಬ ಮಾಸಿಕವನ್ನು ಹೊರತರುತ್ತಿದ್ದಾರೆ. ಜೊತೆಗೆ ಖಾದಿಯನ್ನು ಜನಪ್ರಿಯಗೊಳಿಸಲು ಶ್ರಮಿಸುತ್ತಿದ್ದಾರೆ. ಶ್ರೀಯುತರಿಗೆ ಹೆಗ್ಗೋಡಿನ ದೇಸಿ ಸಂಸ್ಥೆ ೨೦೧೩ರ "ದಾಸಿಮಯ್ಯ ಪ್ರಶಸ್ತಿ" ನೀಡಿ ಗೌರವಿಸಿದೆ.[೧]. ಅಲ್ಲದೇ ೨೦೧೪ ರ ಸಾಲಿನ ರಾಷ್ಟ್ರೀಯ ಮಟ್ಟದ ‘ಜಮ್ನಲಾಲ್‌ ಬಜಾಜ್‌’ ಪ್ರಶಸ್ತಿ ಕೂಡ ಅವರಿಗೆ ಲಭಿಸಿದೆ.[೨].

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]