ಜನಪದ ಸೇವಾ ಟ್ರಸ್ಟ್
ಜನಪದ ಸೇವಾ ಟ್ರಸ್ಟ್,[೧] ಒಂದು 'ಸ್ವಯಂಸೇವಾ ಸಂಸ್ಥೆ', ಮಂಡ್ಯ ಜಿಲ್ಲೆಯ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ಮೇಲುಕೋಟೆಯಲ್ಲಿ ೧೯೬೦ ರಲ್ಲಿ ಹಿರಿಯ ಸರ್ವೋದಯ ಆಂದೋಲನದ ಧುರೀಣ ಶ್ರೀ ಸುರೇಂದ್ರ ಕೌಲಗಿ, ಯವರು ಈ ಸಂಸ್ಥೆಯನ್ನು ೧೯೬೦ ರಲ್ಲಿ ಸ್ಥಾಪಿಸಿದರು. ಸಂಸ್ಥೆಯು ಬಹು ಮುಖ್ಯವಾಗಿ ಶಿಕ್ಷಣ, ಗ್ರಾಮ ಕೈಗಾರಿಕೆ ಹಾಗು ಕೃಷಿ ರಂಗಗಳಲ್ಲಿ ಕೆಲಸ ಮಾಡುತ್ತಿದೆ.
ಟ್ರಸ್ಟ್'ನ ಕಾರ್ಯಕ್ರಮಗಳು
[ಬದಲಾಯಿಸಿ]- ಕರುಣಾಗ್ರಹ
- ಶಿಕ್ಷಣ
- ಖಾದಿ ಗ್ರಾಮೋದ್ಯೋಗ
- ಹೊಸ ಜೀವನದ ದಾರಿ
- ಪುಸ್ತಕ ಪ್ರಕಟಣೆ
- ಇತರೆ
ಜನಪದ ವಿಚಾರ
[ಬದಲಾಯಿಸಿ]ಇದು ಟ್ರಸ್ಟ್ ಹೊರತರುತ್ತಿರುವ, ಕರ್ನಾಟಕದಲ್ಲಿ ಸರ್ವೋದಯ ವಿಚಾರಗಳನ್ನು ಪ್ರಚಾರ ಮಾಡುತ್ತಿರುವ 'ಮಾಸಿಕ ಪತ್ರಿಕೆ'. 'ಮಹಾತ್ಮಗಂಧೀಜಿ'ಯವರ ತತ್ವಗಳಾದ ಸರ್ವೋದಯ, ಹಿಂಸಾರಹಿತ ಮತ್ತು ಸರ್ವಧರ್ಮದಜನರ ಉದ್ಧಾರಕ್ಕಾಗಿ ಶ್ರಮಿಸುತ್ತಿದೆ. ವಿದ್ಯಾಪ್ರಸಾರ, ಕಲ್ಯಾಣಯೋಜನೆ, ಗ್ರಾಂಮಾಂತರ ಪ್ರದೇಶಗಳಲ್ಲಿ ಪುರಾತನಕಾಲದಿಂದಲೂ ಪ್ರಚಲಿತದಲ್ಲಿರುವ ಗೃಹೋದ್ಯೋಗಗಳಿಗೆ ಬಢಾವ ಕೊಡುವ ದಿಶೆಯಲ್ಲಿ ಪರಿಸರ ಮತ್ತು ಬೇಸಾಯ, ಸ್ವಾವಲಂಬಿಗಳಾಗಿ ಜನರನ್ನು ಬೆಳೆಸಲು ನಿರಂತರವಾಗಿ ಶ್ರಮಿಸುತ್ತಿದೆ. ಮೇಲುಕೋಟೆ, ೧೦ ನೆಯ ಶತಮಾನದ ಗ್ರಾಮ. ಚೆಲುವರಾಯ ಸ್ವಾಮಿ ಮತ್ತು ಯೋಗಾನರಸಿಂಹ ದೇವರುಗಳು ಸ್ಥಳದ ಅಧಿದೇವತೆಗಳು. ೨೦ ನೆಯ ಶತಮಾನದ ಉತ್ತರಾರ್ಧದಲ್ಲಿ ಹಲವಾರು ಇಲ್ಲಿನ ಜನರಿಗೆ, ಗ್ರಾಮೋದ್ಯೋಗಗಳನ್ನು ಪುಷ್ಟಿಕೊಡುವ ನಿಟ್ಟಿನಲ್ಲಿ ಜನರ ಪುರಾತನ ಮನೆ ಕಸುಬುಗಳಾದ, ರೇಷ್ಮೆ ಮತ್ತು ಹತ್ತಿಬಟ್ಟೆಗಳನ್ನು ತಯಾರಿಸುವ ಕಲೆಗಳನ್ನು ಅವಲೋಕಿಸಿ, ಅವನ್ನು ಪ್ರೋತ್ಸಾಹಿಸಿ ಜನರಿಗೆ ಆಥಿಕವಾಗಿ ನೇರವಾಗಲು ಮುಂದೆಬಂದ ಮಹನೀಯರಲ್ಲಿ 'ಸುರೇಂದ್ರ ಕೌಲಗಿ' ಮತ್ತು ಅವರ ಪತ್ನಿ 'ಗಿರಿಜಾ ಕೌಲಗಿ' ಪ್ರಮುಖರು. ಈ ಅಭಿಯಾನವನ್ನು ಮುಂದುವರೆಸಲು ಈ ದಂಪತಿಗಳು ಮೇಲುಕೋಟೆಯಲ್ಲೇ ನೆಲಸಿದರು.
ಕಂಡೆನ್ಸ್ ಕೋರ್ಸ್
[ಬದಲಾಯಿಸಿ](೧೯೬೪-೧೯೭೪): ಹೆಣ್ಣುಮಕ್ಕಳಿಗೆ ಕುಶಲಕಲೆಗಾರಿಕೆಯ ತರಬೇತಿ ಶಿಬಿರಗಳನ್ನು ಹಮ್ಮಿಕೊಂಡರು. ಅಲ್ಲಿ ಅವರಿಗೆ ಊಟ ವಸತಿ ೨ ವರ್ಷಗಳ ವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಸಿದ್ಧತೆಗೆ ನೆರವಾಯಿತು. ಹತ್ತು ವರ್ಷಗಳಲ್ಲಿ ೨೦ ಮಹಿಳೆಯರ ೫ ಬ್ಯಾಚ್ ಗಳನ್ನು ಸಿದ್ಧಪಡಿಸಲಾಯಿತು. ಸುಮಾರು ೧೦೦ ಗ್ರಾಮೀಣ ಮಹಿಳೆಯರ ಜೀವನವನ್ನು ಉತ್ತಮಪಡಿಸಲು ಸಹಾಯವಾಯಿತು.
ಅಂಗವಿಕಲ ಮಕ್ಕಳ ಕಲ್ಯಾಣ
[ಬದಲಾಯಿಸಿ](೧೯೬೩-೨೦೦೦): ಸತತವಾಗಿ ೩೭ ವರ್ಷ ಈ ಅಬಿಯಾನ ಜಾರಿಯಲ್ಲಿದೆ. ಕರುಣಗೃಹ, ಹಲವಾರು ನಿರ್ಗತಿಕ ಪರಿವಾರದ ಮಕ್ಕಳಿಗೆ, ಮತ್ತು ಪೋಲಿಯೋ ಪೀಡಿತ ಮಕ್ಕಳ ಕಲ್ಯಾಣಕ್ಕಾಗಿ ಮೈಸೂರು ರಾಜ್ಯದಲ್ಲೇ ಪ್ರಥಮವಾಗಿ ಆಯೋಜಿಸಿದ ಕಲ್ಯಾಣ ಕಾರ್ಯಕ್ರಮ. ೩೦೦ ಕಿಂತ ಮಿಗಿಲಾಗಿ ಆ ತರಹದ ಮಕ್ಕಳಿಗೆ ಅನ್ನ-ಬಟ್ಟೆ-ವಸತಿ, ವಿದ್ಯಾಭ್ಯಾಸ, ಮತ್ತು ಔಷಧಿ ಸೌಲಭ್ಯ,ಗಳನ್ನು ಒದಗಿಸಲಾಯಿತು. ಸ್ವಾವಲಂಬಿಗಳಾಗಿ ಜೀವನ ನಿರ್ವಹಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ.
ಪ್ರಿಂಟಿಂಗ್ ಪ್ರೆಸ್
[ಬದಲಾಯಿಸಿ](೧೯೭೪-೧೯೯೨): ಅನಾಥ ಮಹಿಳಿಯರಿಗೆ ನೆರವಾಗಲು, ಮತ್ತು ಯಾರ ನೆರವಿಲ್ಲದೆ ಅವರೇ ತಮ್ಮಕಾಲಿನ ಮೇಲೆ ನಿಂತು ಮರ್ಯಾದೆಯ ಜೀವನಸಾಗಿಸಲು ಅನುಕೂಲ ೧೮ ವರ್ಷ ಜನಪದ ಮುದ್ರಣಾಲಯ ಕೆಲಸಮಾಡಿತು.
ಪ್ರಿ ಯೂನಿವರ್ಸಿಟಿ ಕೋರ್ಸ್
[ಬದಲಾಯಿಸಿ](೧೯೮೫-೨೦೦೫): ಕಾಲೇಜಿನ ವಿದ್ಯಾಭ್ಯಾಸಕ್ಕೆ ಪದವಿಯನ್ನು ಕೊಡಿಸಲು ಆರ್ಥಿಕ ಸೌಕರಯವಿಲ್ಲದ ಹಳ್ಳಿಗಾಡಿನ ಯುವಜನಾಂಗಕ್ಕೆ ಇದು ವರದಾನವಾಯಿತು. ನಂತರದದಿನಗಳಲ್ಲಿ ರಾಜ್ಯ ಸರಕಾರ ಈ ಕೆಲಸವನ್ನು ತೆಗೆದುಕೊಂಡಿತು.
ಪ್ರಾಥಮಿಕ ಶಾಲೆ
[ಬದಲಾಯಿಸಿ](೧೯೮೨-೨೦೦೨): ೨೦ ವರ್ಷ ನಡೆಸಿದರು. ಸರಕಾರ ತೆಗೆದುಕೊಂಡಿತು ಟ್ರಸ್ಟ್ ಮುಚ್ಚಲು ಒತ್ತಾಯಮಾಡಿತು.
ಎಡಿನ್ಬರೊ ಸಂಸ್ಥೆಯ ಆರ್ಥಿಕ ಸಹಕಾರದೊಂದಿಗೆ
[ಬದಲಾಯಿಸಿ]೧೯೮೯-೨೦೦೪): ಇಂಗೆಂಡ್ ನ ನೆರವಿನಿಂದ 'ಎಡಿನ್ ಬರೊ ವಿಶ್ವವಿದ್ಯಾಲಯದ ಅಡಿಯಲ್ಲಿ ೧೩ ವರ್ಷ ಕೆಲಸ. ೫ ವಾರಗಳ ಕೊರ್ಸ್ ಪ್ರತಿವರ್ಷ ೧೦ ಜನ ವಿದ್ಯಾರ್ಥಿಗಳು ಎಡಿನ್ ಬಾರೋ ನಿಂದ ಬರುತ್ತಿದ್ದರು. ಗ್ರಾಮೀಣ ಭಾರತದ ಜೀವನ ಶೈಲಿಯ ಪರಿಚಯ. ಅಭಿವೃದ್ದಿಯ ಬಗ್ಗೆ, ಪರಿಸರ, ಕೈಗೆಲಸ ಸ್ವಂತವಾಗಿ ಗ್ರಾಮದಲ್ಲಿ ನೆಲೆಸಲು ಕೆಲವು ಸಹಾಯಗಳನ್ನು ಒದಗಿಸುತ್ತಿದ್ದರು.
ಮಕ್ಕಳಿಗೆ ಸಮ್ಮರ್ ಕ್ಯಾಂಪ್
[ಬದಲಾಯಿಸಿ](೧೯೯೫-೨೦೧೦): ಪ್ರತಿವರ್ಷವೂ ಬೇಸಿಗೆ ರಜದಲ್ಲಿ ಮಕ್ಕಳಿಗೆ ೨೦ ದಿನ, ಒಂದು ಕಮ್ಮಟವನ್ನು ಮೇಲುಕೋಟೆ ಮತ್ತು ಅಕ್ಕಪಕ್ಕದ ಗ್ರಾಮದಮಕ್ಕಳಿಗೆ ಆಯೋಜಿಸಲಾಯಿತು. ಸಾಮೂಹಿಕ ನಾಟ, ಹಾಡು,ನೃತ್ಯ, ಪೇಪರ್ ಕೆಲಸ, ಅಭಿನಯ ಕಲೆ, ಮೊದಲಾದವುಗಳನ್ನು ಕಲಿಸಲು, ರಾಜ್ಯ ಮತ್ತು ರಾಷ್ಟ್ರಮಟ್ಟದ ಹೆಸರಾಂತ ಕಲಾವಿದರು, ಪ್ರಾಧ್ಯಾಪಕರು, ರಂಗಕರ್ಮಿಗಳು ಬರುತ್ತಾರೆ. ೬೦ ಜನ ಮಕ್ಕಳು ಪ್ರತಿವರ್ಷವೂ ಇಂತಹ ಕಮ್ಮಟಗಳಲ್ಲಿ ಭಾಗವಹಿಸುತ್ತಾರೆ.