ಸುಮಿತಾ ಪ್ರಭಾಕರ್
ಸುಮಿತಾ ಪ್ರಭಾಕರ್ | |
---|---|
Born | |
Nationality | ಭಾರತೀಯ |
Education | ಕೇಂದ್ರೀಯ ವಿದ್ಯಾಲಯ, ರಿಷಿಕೇಶ |
Alma mater | ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ರಾಯಲ್ ಕಾಲೇಜ್ ಆಫ್ ಒಬ್‌ಸ್ಟಿಟ್ರಿಶಿಯನ್ಸ್ ಆಂಡ್ ಗೈನಕಾಲಜಿಸ್ಟ್ |
Occupation | ವೈದ್ಯರು |
Spouse | ಗುರುದೀಪ್ ಸಿಂಗ್ |
Website | www |
ಸುಮಿತಾ ಪ್ರಭಾಕರ್ ಅವರು ಭಾರತೀಯ ಸ್ತ್ರೀರೋಗತಜ್ಞೆ, ಪ್ರಸೂತಿಶಾಸ್ತ್ರಜ್ಞೆ ಮತ್ತು ಸಾಮಾಜಿಕ ವೈದ್ಯಕೀಯ ಕಾರ್ಯಕರ್ತೆ.[೧] ಭಾರತದ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ನಂತರ, ಅವರು ೧೯೯೯ ರಿಂದ ೨೦೦೧ ರವರೆಗೆ ಮಲೇಷ್ಯಾದ ಕ್ವೀನ್ ಎಲಿಜಬೆತ್ ಆಸ್ಪತ್ರೆಯಲ್ಲಿ ಅಭ್ಯಾಸ ಮಾಡಿದರು.[೨] ನಂತರ ಅವರು ಭಾರತಕ್ಕೆ ಹಿಂದಿರುಗಿದರು ಮತ್ತು ದೆಹಲಿಯ ಸೀತಾರಾಮ್ ಭಾರ್ತಿಯಾ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ರಿಸರ್ಚ್‌ನಲ್ಲಿ ೨೦೦೧ ರಿಂದ ೨೦೦೨ ರವರೆಗೆ ಸಲಹೆಗಾರ ಸ್ತ್ರೀರೋಗತಜ್ಞರಾಗಿ ಅಭ್ಯಾಸವನ್ನು ಪ್ರಾರಂಭಿಸಿದರು. ಅವರು ಡೆಹ್ರಾಡೂನ್‌ನ ಸಿಎಮ್‌ಐ ಆಸ್ಪತ್ರೆಯಲ್ಲಿ ಸ್ತ್ರೀರೋಗ ಶಾಸ್ತ್ರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ೨೦೧೪ ರಿಂದ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್‌ನ ಕುರಿತು ಉಚಿತ ತಪಾಸಣೆ ಮತ್ತು ಜಾಗೃತಿ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ [೩] ಅವರು ಡೆಹ್ರಾಡೂನ್‌ನ ಭಾರತೀಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. [೪] ಐಎಂಎ ಡಾಕ್ಟರ್ ಅಚೀವ್‌ಮೆಂಟ್ ಅವಾರ್ಡ್, ಉಮಾ ಶಕ್ತಿ ಸಮ್ಮಾನ್, ಪಿಎನ್‌ಬಿ ಹಿಂದಿ ಗೌರವ್ ಸಮ್ಮಾನ್, ದೈನಿಕ್ ಜಾಗರಣ್ ವೈದ್ಯಕೀಯ ಶ್ರೇಷ್ಠ ಪ್ರಶಸ್ತಿ, ಡಿವೈನ್ ಶಕ್ತಿ ಲೀಡರ್‌ಶಿಪ್ ಪ್ರಶಸ್ತಿ, ಯೂತ್ ಐಕಾನ್ ಪ್ರಶಸ್ತಿ ಮತ್ತು ವೈದ್ಯಕೀಯ-ಸಾಮಾಜಿಕ ಕಾರ್ಯಕರ್ತ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.
ಶಿಕ್ಷಣ ಮತ್ತು ವೃತ್ತಿ
[ಬದಲಾಯಿಸಿ]೧೯೯೪ ರಲ್ಲಿ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ತನ್ನ ಎಮ್‌ಬಿಬಿಎಸ್ ಅನ್ನು ಪೂರ್ಣಗೊಳಿಸಿದರು. ೧೯೯೬ ರಲ್ಲಿ ಅವರು ಎಮ್‌ಡಿ (ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಷಯದಲ್ಲಿ) ಯನ್ನು ಪೂರ್ಣಗೊಳಿಸಿದರು. ಅವರು ೧೯೯೮ ರಲ್ಲಿ ಅವರ ಎಮ್ಆರ್‌ಸಿಒಜಿ (ಲಂಡನ್) ಅನ್ನು ರಾಯಲ್ ಕಾಲೇಜ್ ಆಫ್ ಒಬ್‌ಸ್ಟಿಟ್ರಿಶಿಯನ್ಸ್ ಆಂಡ್ ಗೈನಕಾಲಜಿಸ್ಟ್ ಕಾಲೇಜಿನಿಂದ ಗಳಿಸಿದರು. [೫]
ಸುಮಿತಾ ಪ್ರಭಾಕರ್ ಅವರು ೨೦೦೪ ರಲ್ಲಿ ಡೆಹ್ರಾಡೂನ್‌ನಲ್ಲಿ ಪ್ರಾರಂಭಿಸಿದ ಐವಿಎಫ್ ಇಂಡಿಯಾ ಕೇರ್‌ನ ಸಂಸ್ಥಾಪಕಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ. ಅವರು ಗರ್ಭಕಂಠದ ಕ್ಯಾನ್ಸರ್ ಸ್ಕ್ರೀನಿಂಗ್‌ಗಾಗಿ ನಿರ್ಮಿಸಿಲಾದ ಕಾಲ್ಪಸ್ಕೊಪಿ ಕೇಂದ್ರದ ಸ್ಥಾಪಕರಾಗಿದ್ದಾರೆ. ಇದು ೨೦೦೨ ರಲ್ಲಿ ಎಫ್‌ಒಜಿಎಸ್ಐ ಯಿಂದ ಉತ್ತರಾಖಂಡದಲ್ಲಿ ಕಾಲ್ಪಸ್ಕೊಪಿಯ ಬಗ್ಗೆ ವೈದ್ಯರ ತರಬೇತಿಗಾಗಿ ಗುರುತಿಸಲ್ಪಟ್ಟ ಏಕೈಕ ಕೇಂದ್ರವಾಗಿದೆ. [೬] ಸುಮಿತಾ ಅವರು ಕ್ಯಾನ್ ಪ್ರೊಟೆಕ್ಟ್ ಫೌಂಡೇಶನ್, [೭] ಮಹಿಳಾ ಆರೋಗ್ಯ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಜಾಗೃತಿಗಾಗಿ ಕೆಲಸ ಮಾಡುವ ಎನ್‌ಜಿಒ ಸ್ಥಾಪಕ ಅಧ್ಯಕ್ಷರಾಗಿದ್ದಾರೆ.
ಕ್ಯಾನ್ ಪ್ರೊಟೆಕ್ಟ್ ಫೌಂಡೇಶನ್‌ನ ಅಧ್ಯಕ್ಷರಾಗಿ, ಸುಮಿತಾ ಅವರು ಉತ್ತರಾಖಂಡ ಮತ್ತು ಹತ್ತಿರದ ರಾಜ್ಯಗಳಲ್ಲಿ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಜಾಗೃತಿಗಾಗಿ ಉಚಿತ ಸ್ಕ್ರೀನಿಂಗ್, ಶೈಕ್ಷಣಿಕ ಮತ್ತು ತರಬೇತಿ ಶಿಬಿರಗಳನ್ನು ಆಯೋಜಿಸುವಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಅವರು ಆಶಾ ಕಿ ಕಿರಣ್ ಎಂಬ ಅಭಿಯಾನದ ಸ್ಥಾಪಕರಾಗಿದ್ದಾರೆ.[೮] ಇದು ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆಗಾಗಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಉಚಿತ ತರಬೇತಿ ಮತ್ತು ಸಂವೇದನೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಜೀವನಚರಿತ್ರೆ
[ಬದಲಾಯಿಸಿ]ಅವರ ತಾಯಿ ಶಿಕ್ಷಕಿ ಮತ್ತು ತಂದೆ ಐಡಿಪಿಎಲ್‍ನಲ್ಲಿ ಆಡಳಿತ ಅಧಿಕಾರಿಯಾಗಿದ್ದರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಐಡಿಪಿಎಲ್‍ನ ಕೇಂದ್ರೀಯ ವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಅವರಿಗೆ ಒಬ್ಬ ಮಗನಿದ್ದಾನೆ. ಅವರ ಪತಿ ಗುರುದೀಪ್ ಸಿಂಗ್, ಒಬ್ಬ ಮೂಳೆ ಶಸ್ತ್ರಚಿಕಿತ್ಸಕರಾಗಿದ್ದಾರೆ.
ಬಿರುದುಗಳು
[ಬದಲಾಯಿಸಿ]- ೨೦೦೮ ರಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿನ ವಿಶಿಷ್ಟ ಸೇವೆಯನ್ನು ಗುರುತಿಸಿ ಭಾರತೀಯ ವೈದ್ಯಕೀಯ ಸಂಘದಿಂದ ಐಎಮ್‍ಎ ಡಾಕ್ಟರ್ ಅಚೀವ್‌ಮೆಂಟ್ ಪ್ರಶಸ್ತಿ. [೯]
- ೨೦೧೩ ರಲ್ಲಿ ಮಹಿಳಾ ಆರೋಗ್ಯ ಕ್ಷೇತ್ರದಲ್ಲಿನ ವಿಶಿಷ್ಟ ಸೇವೆಯನ್ನು ಗುರುತಿಸಿ ಉತ್ತರಾಖಂಡದ ರಾಜ್ಯಪಾಲರಿಂದ ಉಮಾ ಶಕ್ತಿ ಸಮ್ಮಾನ್. [೧೦]
- ಬಂಜೆತನ ಚಿಕಿತ್ಸೆ ಕ್ಷೇತ್ರದಲ್ಲಿನ ವಿಶಿಷ್ಟ ಸೇವೆಯನ್ನು ಗುರುತಿಸಿ ಅಮರ್ ಸಿಂಗ್ ಅವರಿಂದ ಗ್ಲೋಬಲ್ ಬ್ಯುಸಿನೆಸ್ ಮತ್ತು ಎಕ್ಸಲೆನ್ಸ್ ಪ್ರಶಸ್ತಿ [೧೧]
- ೨೦೧೪ ರಲ್ಲಿ ಮುಟ್ಟಿನ ನೈರ್ಮಲ್ಯ ಮತ್ತು ಸ್ತನದ ಕ್ಯಾನ್ಸರ್‌ನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ವಿಶಿಷ್ಟ ಸೇವೆಯನ್ನು ಗುರುತಿಸಿ ಯೂತ್ ಐಕಾನ್ ಪ್ರಶಸ್ತಿ. [೧೨]
- ೨೦೧೪ ರಲ್ಲಿ ಮಹಿಳಾ ಆರೋಗ್ಯ ಕ್ಷೇತ್ರದಲ್ಲಿನ ವಿಶಿಷ್ಟ ಸಾಮಾಜಿಕ ಸೇವೆಯನ್ನು ಗುರುತಿಸಿ ಅಮರ್ ಉಜಾಲಾ ಪಬ್ಲಿಕೇಷನ್ಸ್‌ನ ಅಮರ್ ಉಜಾಲಾ ಸಮರ್ಪಣ್ ಔರ್ ಸಮ್ಮಾನ್ ಪ್ರಶಸ್ತಿ.
- ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಲ್ಲಿ ಮಹಿಳೆಯರ ಆರೋಗ್ಯ ಸೇವೆಯ ವಿಶಿಷ್ಟ ಸೇವೆಯನ್ನು ಗುರುತಿಸಿ ಟೈಮ್ಸ್ ಆಫ್ ಇಂಡಿಯಾದಿಂದ ಹೆಲ್ತ್ ಐಕಾನ್ ಪ್ರಶಸ್ತಿ [೧೩]
- ಉತ್ತರಾಖಂಡದ ದೂರದ ಪ್ರದೇಶಗಳಲ್ಲಿ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆಗಾಗಿ ಇವರು ಮಾಡಿದ ವಿಶೇಷ ಕಾರ್ಯವನ್ನು ಗುರುತಿಸಿ ಪರಮಾರ್ಥ ಆಶ್ರಮದ ಸ್ವಾಮಿ ಚಿದಾನಂದರಿಂದ ಡಿವೈನ್ ಶಕ್ತಿ ನಾಯಕತ್ವ ಪ್ರಶಸ್ತಿ. [೧೪]
- ೨೦೧೮ ರಲ್ಲಿ ನಡೆದ ದೈನಿಕ್ ಜಾಗರಣ್ ಅವರ ಉತ್ತರಾಖಂಡ್‌ನ ಮೆಡಿಕಲ್ ಪಿಲ್ಲರ್ಸ್‌ನಲ್ಲಿ ಇವರು ಕಾಣಿಸಿಕೊಂಡಿದ್ದಾರೆ. [೧೫]
- ವೈದ್ಯಕೀಯ ವೃತ್ತಿ ಮತ್ತು ಸಮಾಜಕ್ಕೆ ಅವರ ಅನುಕರಣೀಯ ಕೊಡುಗೆ, ಬದ್ಧತೆಗಳು ಮತ್ತು ಸಮರ್ಪಿತ ಸೇವೆಗಾಗಿ ಭಾರತೀಯ ವೈದ್ಯಕೀಯ ಸಂಘ ಉತ್ತರಾಕಾನ್ ೨೦೧೮, ಇವರಿಗೆ ವೈದ್ಯಕೀಯ-ಸಾಮಾಜಿಕ ಕಾರ್ಯಕರ್ತ ಪ್ರಶಸ್ತಿಯನ್ನು ನೀಡಿದೆ. [೧೬]
ಉಲ್ಲೇಖಗಳು
[ಬದಲಾಯಿಸಿ]- ↑ "Rise in breast cancer cases worries doctors". The Times of India. Retrieved 14 February 2019.
- ↑ "The 3rd Ministry of Health-Academy of Medicine Malaysia Scientific Meeting & International Congress of Medicine in the Tropics was held at the Shangri-La Hotel, Kuala Lumpur from 1st to 4th November 2000" (PDF). Mjpath.org.my. Retrieved 14 February 2019.
- ↑ "FREE BREAST CANCER SCREENING CAMP IN DEHRADUN". Pioneeredge.in. 22 April 2018. Archived from the original on 23 ಜನವರಿ 2019. Retrieved 14 February 2019.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "53rd Annual Report and Statement of Accounts" (PDF). Fogsi.org. Retrieved 14 February 2019.
- ↑ "SUMITA PRABHAKAR, MD". Breastcancerhub.org. Retrieved 14 February 2019.
- ↑ "LIST OF COLPOSCOPY TRAINING CENTERS" (PDF). Fogsi.org. Archived from the original (PDF) on 19 ಫೆಬ್ರವರಿ 2018. Retrieved 14 February 2019.
- ↑ "Can Protect Foundation - Free Breast and Cervical Cancer Screening Programs". Canprotectfoundation.com. Retrieved 14 February 2019.
- ↑ "Asha ki Kiran: Workshop organized for 400 ASHA and Anganwadi Workers". Canprotectfoundation.com. 9 March 2018. Retrieved 14 February 2019.
- ↑ "Dr. Sumita Prabhakar Gynecologist in 54 - DrRiight". www.drriight.com. Archived from the original on 24 January 2019. Retrieved 17 January 2022.
- ↑ "महिला सशक्तीकरण की अवधारणा बदलें : राज्यपाल- Amarujala". Amarujala.com. Retrieved 14 February 2019.
- ↑ "Prime Time Presented Global Business and Service Excellence Awards, 2013 to IVF India Care". YouTube. 18 November 2013. Retrieved 14 February 2019.
- ↑ "72 शख्सियतों को मिला नेशनल यूथ आइकॉन अवॉर्ड". Inextlive.jagran.com. Retrieved 14 February 2019.
- ↑ "TOI presents 1st Health Icon awards to doctors". The Times of India. Retrieved 14 February 2019.
- ↑ "International Women's Day 2018 - Parmarth Niketan". Parmarth.org. Retrieved 14 February 2019.
- ↑ "IVF India CARE". Facebook.com. Retrieved 14 February 2019.
- ↑ "Dr Sumita Prabhakar conferred with Medico-Social Activist Award by IMA Uttaracon 2018". Canprotectfoundation.com. 17 December 2018. Retrieved 14 February 2019.