ಸುಬ್ರಹ್ಮಣ್ಯಂ ವೆಂಕಟರಾವ್ ಮೀನಗುಂಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಬ್ರಹ್ಮಣ್ಯಂ ವೆಂಕಟರಾವ್ ಮೀನಗುಂಡಿ ೧೯೪೩ರಲ್ಲಿ ಜನಿಸಿದರು. ಬಳ್ಳಾರಿಯ ತಾರಾನಾಥ ಆಯರ್ವೇದ ವಿದ್ಯಾಪೀಠದಲ್ಲಿ ಎಲ್.ಎ.ಎಮ್.ಎಸ್.ಶಿಕ್ಷಣ ಮುಗಿಸಿದರು. ಸೈಕೋಥೆರಪಿ ರಂಗಕ್ಕೆ ೧೯೭೫ರಲ್ಲಿ ಪ್ರೊ.ರೂಪಿಕುಮಾರ್ ಪಾಂಡ್ಯರಿಂದ ಕ್ಲಿನಿಕಲ್ ಹಿಪ್ನಾಸಿಸ್ನಲ್ಲಿ ತರಬೇತಿ ಪಡೆಯುವುದರೊಂದಿಗೆ ಪ್ರವೇಶಿಸಿದರು. ೧೯೮೩ರಲ್ಲಿ ಕೊಚ್ಚಿನ್'ನ ಇನ್ಸ್ಟಿಟ್ಯೂಟ್ ಫಾರ್ ಕೌನ್ಸೆಲಿಂಗ್ ಆಂಡ್ ಟ್ರ್ಯಾನ್ಸ್ಯಾಕ್ಯನಲ್ ಅನಾಲಿಸಿಸ್ ರೆವರೆಂಡ್ ಫಾದರ್ ಜಾರ್ಜ್ ಕಂಡತಿಲ್ ಎಸ್.ಜೆ. ಮತ್ತು ಸಿಸ್ಟರ್ ಅನ್ನಿ ಮಾರಿಯಾ ಸಿ.ಎಮ್. ಅವರಿಂದ ಟ್ರಾನ್ಯಾಕನಲ್ ಅನಾಲಿಸಿಸ್, ಗ್ರೂಪ್ ಡೈನಾಮಿಕ್ಸ್, ಗೆಸ್ಟಾಲ್ಟ್ ಥೆರಪಿ ಮತ್ತು ನಾನ್ ಡೈರೆಕ್ಟಿವ್ ಕೌನ್ಸೆಲಿಂಗ್ನಲ್ಲಿ ತರಬೇತಿ ಪಡೆದರು. ಮಾನಸಿಕ ವಿಜ್ಞಾನದಲ್ಲಿ ರೋಗವನ್ನು ವಾಸಿ ಮಾಡುವ ಬದಲು ರೋಗಿ ವಿಶ್ಲೇಷಣೆ ಮಾಡುವ ಹಾಗೂ ಆತನ ಪ್ರಜ್ಞೆಯನ್ನು ವಿಶ್ಲೇಷಿಸುವ ನೂತನ ಪದ್ಧತಿ ೧೯೭೦ರಿಂದ ಆರಂಭಗೊಂಡಿತು. ಮೀನಗುಂಡಿಯವರು ಈ ಪದ್ಧತಿಯನ್ನು ಅಭ್ಯಸಿಸಿ ಕರ್ನಾಟಕದಲ್ಲಿ ವಿವಿಧೆಡೆ ತರಬೇತಿ ಶಿಬಿರಗಳನ್ನು ನಡೆಸಿ ಜನಪ್ರಿಯಗೊಳಿಸಿದರು. ೧೯೮೮ರಲ್ಲಿ ಮೀನಗುಂಡಿಯವರು ಮನಸ್ಸು ಇಲ್ಲದ ಮಾರ್ಗ ಕೃತಿಯನ್ನು ಪ್ರಕಟಿಸಿ ನೂತನ ಚಿಕಿತ್ಸಾ ಕ್ರಮವನ್ನು ಕನ್ನಡನಾಡಿನ ಜನತೆಗೆ ಪರಿಚಯಿಸಿದರು. ಈ ಕೃತಿಗೆ ೧೯೯೨-೯೩ನೇ ಸಾಲಿನ ಮೂಡಬಿದಿರೆಯ ವರ್ಧಮಾನ ಸಾಹಿತ್ಯ ಪ್ರಶಸ್ತಿ ಲಭಿಸಿತು. 'ಈ ವರ್ತನೆಗಳು ನಿಮ್ಮಲ್ಲಿ ಎಷ್ಟಿವೆ?' ಮೀನಗುಂಡಿಯವರ ಇನ್ನೊಂದು ಕೃತಿಯಾಗಿದೆ. ಮನಸ್ಸಿಗೆ ಸಂಬಂಧಿಸಿದ ದಾರ್ಶನಿಕ ಪರಿಕಲ್ಪನೆಗಳೇ ಹೆಚ್ಚಿರುವ ಸಂದರ್ಭದಲ್ಲಿ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುವ ಮಾನಸಿಕ ಕ್ರಿಯೆಯ ವೈಜ್ಞಾನಿಕವೆನಿಸುವ ಅರಿವನ್ನು ಇವರು ತಂದುಕೊಟ್ಟರು. ಟ್ರ್ಯಾನ್ಸಕನಲ್ ಅನಾಲಿಸಿಸ್ ನ ಆಧಾರದಿಂದ ತಾನೇ ಮಾಡಿದ ಪ್ರಯೋಗ, ಚಿಕಿತ್ಸಾ ವಿಧಾನಗಳ ದೃಷ್ಣಾಂತದಿಂದ ಮಾನಸಿಕ ಆರೋಗ್ಯದ ಕುರಿತು ನೂತನ ಅರಿವನ್ನು ಮೂಡಿಸುತ್ತಾರೆ.