ವಿಷಯಕ್ಕೆ ಹೋಗು

ಸುನಿಲ್ ಛೇತ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುನಿಲ್ ಛೇತ್ರಿ (सुनिल छेत्री)
ಸುನಿಲ್ ಛೇತ್ರಿ (ಸುನಿಲ್‌ ಚೆಟ್ರಿ)
Personal information
Full nameಸುನಿಲ್ ಛೇತ್ರಿ
Nicknameಛೇತ್ರಿ
Nationalityಭಾರತೀಯ
Born (1984-08-03) 3 August 1984 (age 41)
ಸಿಕಂದರಾಬಾದು, ಭಾರತ
Height1.70 m (5 ft 7 in)
Sport
Country India
Sportಫುಟ್’ಬಾಲ್
Eventstriker(ಗೋಲು ಹೊಡೆಯುವವ)
Clubಬೆಂಗಳೂರು ಫುಟ್’ಬಾಲ್’ ಕ್ಲಬ್ (ಮುಂಬಯಿಯಿಂದ ಎರವಲು)
Teamಬೆಂಗಳೂರು ಫುಟ್ಬಾಲ್ ಕ್ಲಬ್
Achievements and titles
Personal best89 ಪಂದ್ಯ-50 ಗೋಲು
Updated on 5-6-2016

ಫುಟ್‍ಬಾಲ್ ಕ್ರೀಡಾಪಟು

[ಬದಲಾಯಿಸಿ]
  • ಸುನಿಲ್ ಛೇತ್ರಿ (ಸುನಿಲ್ ಚೆಟ್ರಿ) (ನೇಪಾಳಿ:Sunil Chhetri;( सुनिल छेत्री; ಆಗಸ್ಟ್ 1984 3 ಜನನ)ಬೆಂಗಳೂರು ಫುಟ್’ಬಾಲ್’ ಕ್ಲಬ್ (ಎಫ್’ಸಿ.)ನ ಐ-ಲೀಗ್ ಭಾರತೀಯ ಸೂಪರ್ ಲೀಗ್'ನ ಒಬ್ಬ ಫುಟ್’ಬಾಲ್ ಆಟಗಾರ. ಮುಂಬಯಿ ನಗರದಿಂದ ಬೆಂಗಳೂರು ಫುಟ್’ಬಾಲ್’ ಕ್ಲಬ್'ಗೆ ಎರವಲು ಮೇಲೆ ಬಂದವರು. ಅವರು ಸ್ಟ್ರೈಕರ್ ಆಗಿ(ಗೋಲು ಹೊಡೆಯುವವ) ಆಡುತ್ತಿದ್ದಾರೆ. ಭಾರತದ ಓರ್ವ ವೃತ್ತಿಪರ ಫುಟ್ಬಾಲ್ ಆಟಗಾರ. ಅವರು 89 ಪಂದ್ಯಗಳಲ್ಲಿ 50 ಗೋಲುಗಳನ್ನು ಹೊಡೆದಿದ್ದಾರೆ. ಪ್ರಸ್ತುತ ಬೆಂಗಳೂರು ತಂಡಕ್ಕೆ ನಾಯಕರಾಗಿದ್ದಾರೆ, ಮತ್ತು ಭಾರತ ರಾಷ್ಟ್ರೀಯ ತಂಡಕ್ಕೆ ಸಾರ್ವಕಾಲಿಕ ಗರಿಷ್ಠ ಗೋಲು ಗಳಿಸುವ ಕ್ರೀಡಾಪಟು,

ಕ್ರೀಡಾಪಟು

[ಬದಲಾಯಿಸಿ]
  • ಭಾರತದ ಪರ ಅತ್ಯಧಿಕ ಗೋಲು ಗಳಿಸಿದ ದಾಖಲೆ ಸುನಿಲ್‌ ಚೆಟ್ರಿ ಹೆಸರಿನಲ್ಲಿದೆ. ಚೆಟ್ರಿ,ಉತ್ತಮ ಆಟಗಾರನಾಗಿ ಜೊತೆಗೆ ನಾಯಕತ್ವದ ಜವಾಬ್ದಾರಿ ಹೊತ್ತು ರಾಷ್ಟ್ರೀಯ ಮತ್ತು ಬಿಎಫ್‌ಸಿ ತಂಡವನ್ನು ಯಶಸ್ಸಿನ ಪಥದಲ್ಲಿ ಮುನ್ನಡೆಸಿದ್ದಾರೆ. ತಮ್ಮ ಕಾಲ್ಚಳಕದ ಮೂಲಕ ಎದುರಾಳಿ ತಂಡದ ರಕ್ಷಣಾಕೋಟೆಯನ್ನು ಧ್ವಂಸಗೊಳಿಸಬಲ್ಲ ಸಾಮರ್ಥ್ಯ ಚೆಟ್ರಿ ಅವರಿಗೆ ಕರಗತವಾಗಿದೆ. ಅವರ ಪಾದರಸದಂತಹ ಚಲನೆ ಮತ್ತು ಚೆಂಡನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ಆವರಣದೊಳಗೆ ಲೀಲಾಜಾಲವಾಗಿ ನುಗ್ಗಿ ಚೆಂಡನ್ನು ಗುರಿ ಮುಟ್ಟಿಸುವಲ್ಲೂ ಚೆಟ್ರಿ ನಿಪುಣರು. ಅವರ ಆಟಕ್ಕೆ ಫುಟ್‌ಬಾಲ್‌ ಪ್ರೇಮಿಗಳು ಯಾರೇ ಆಗಲಿ ಮನಸೋಲುವರು.
  • 2002ರಲ್ಲಿ ಮೋಹನ್‌ ಬಾಗನ್‌ ಕ್ಲಬ್‌ ಪರ ಆಡುವ ಮೂಲಕ ಫುಟ್‌ಬಾಲ್‌ ವಲಯಕ್ಕೆ ಪರಿಚಿತರಾದ ಚೆಟ್ರಿ, 2007, 2009 ಮತ್ತು 2012ರ ನೆಹರೂ ಕಪ್‌ ಟೂರ್ನಿಗಳಲ್ಲಿ ಭಾರತ ತಂಡ ಚಾಂಪಿಯನ್‌ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2008ರ ಎಎಫ್‌ಸಿ ಚಾಲೆಂಜ್‌ ಕಪ್‌ನಲ್ಲಿ ಅಮೋಘ ಆಟ ಆಡಿದ್ದ ಚೆಟ್ರಿ ಭಾರತ ತಂಡ ಪ್ರಶಸ್ತಿ ಜಯಿಸಿ 27 ವರ್ಷಗಳ ಬಳಿಕ ಎಎಫ್‌ಸಿ ಏಷ್ಯಾ ಕಪ್‌ಗೆ ಅರ್ಹತೆ ಗಳಿಸಲು ಕಾರಣರಾಗಿದ್ದರು.[]

[]

ಪರಿಚಯ

[ಬದಲಾಯಿಸಿ]

ಅವರ ತಂದೆ ಪೋಷಕರು : ಕೆ.ಬಿ. ಚೆಟ್ರಿ ಮತ್ತು ತಾಯಿ ಸುಶೀಲಾ ಚೆಟ್ರಿ. ಜನನ ಸ್ಥಳ ಸಿಕಂದರಾಬಾದ್‌. ಮೂಲತಃ ಅವರು ನೇಪಾಳಿಗಳು.ಅವರಿಗೆ ಇಬ್ಬರು ಸಹೋದರಿಯರು, ಸಶಾ ಮತ್ತು ಸುನಂದಾ. ಸುನಿಲ್‌ ಚೆಟ್ರಿ ಅವರ ಕುಟುಂಬದ ಎಲ್ಲರೂ ಫುಟ್‌ಬಾಲ್‌ ಆಟಗಾರರೇ. ಸುನಿಲ್‌ ಅವರ ತಂದೆ, ಭಾರತೀಯ ಸೇನಾ ತಂಡದಲ್ಲಿ ಆಡಿದ್ದರೆ, ತಾಯಿ ಮತ್ತು ಸಹೋದರಿಯರು ನೇಪಾಳ ರಾಷ್ಟ್ರೀಯ ಮಹಿಳಾ ತಂಡದ ಪರ ಹಲವು ಪಂದ್ಯಗಳನ್ನು ಆಡಿದ್ದಾರೆ.

ಸುನಿಲ್‌ ಚೆಟ್ರಿ ೨೦೦೮ ಎ.ಎಫ್.ಸಿ. ಛಾಲೇಂಜ್ ಕಪ್'ನಲ್ಲಿ ಗೋಲು ಹೊಡೆದಾಗ.(2008 AFC Challenge Cup)

ಸಾಧನೆಗಳು

[ಬದಲಾಯಿಸಿ]
ಸೀನಿಯರ್ ವಿಭಾಗದಲ್ಲಿ ಛೇತ್ರಿ ಸಾಧನೆ
ಇಸವಿತಂಡಆಡಿದ ಪಂದ್ಯಗಳಿಸಿದ ಗೋಲು
2002-2005ಮೋಹನ್ ಬಾಗನ್188
2005-2008ಜೆಸಿಟಿ582
2008-2009ಈಸ್ಟ್ ಬೆಂಗಾಲ್149
2009-2010ಡೆಂಪೋಎಸ್.ಸಿ.138
2010ಕನ್ಸಾಸ್ ಸಿಟಿ ವಿಜರ್ಡಸ್00
2011ಚಿರಾಗ್ ಯುನೈಟೆಡ್77
2011-2012ಮೋಹನ್ ಬಾಗನ್148
2012-2013ಸ್ಪೋರ್ಟಿಂಗ್ ಕ್ಲಬ್ ಡಿ.ಪೋರ್ಚುಗಲ್ ಬಿ3
2013ಚರ್ಚಿಲ್ ಬ್ರದರ್ಸ್84
2013-2015ಬೆಂಗಳೂರು ಎಫ್.ಸಿ.4316
2015ಮುಂಬಯಿ ಸಿಟಿ.117
2016.ಬೆಂಗಳೂರು ಎಫ್ ಸಿ.145
ರಾಷ್ಟ್ರೀಯ ತಂಡದಲ್ಲಿ ಸಾಧನೆ
2004.ಭಾರತ 20ವರ್ಷದೊಳಗಿನವರು32
2005-2016.ಭಾರತ ಸೀನಿಯರ್8950

ವಿವಿದ ಪಂದ್ಯಗಳ ಸಾಧನೆ

[ಬದಲಾಯಿಸಿ]
ಆಡಿದ ಒಟ್ಟು ಲೀಗ್ ಪಂದ್ಯಗಳು127
ಅದರಲ್ಲಿ ಗಳಿಸಿದ ಗೋಲುಗಳು64
ಆಡಿದ ಕಪ್ ಪಂದ್ಯಗಳು18
ಅದರಲ್ಲಿ ಗಳಿಸಿದ ಗೋಲುಗಳು11
ಕಾಂಟಿನೆಂಟಲ್ ಟೂರ್ನಿ ಪಂದ್ಯಗಳು15
ಅದರಲ್ಲಿ ಗಳಿಸಿದ ಗೋಲುಗಳು8
ಕ್ಲಬ್’ಗಳ ಪರ ಆಡಿದ ಪಂದ್ಯಗಳು160
ಅದರಲ್ಲಿ ಗಳಿಸಿದ ಗೋಲುಗಳು83

ಸಾಧನೆಗೆ ಸಂದ ಗೌರವಗಳು

[ಬದಲಾಯಿಸಿ]
ಛೇತ್ರಿ ಸಾಧನೆಗೆ ಸಂದ ಗೌರವಗಳು
ವರ್ಷಉದ್ದೇಶ ವಿವರಸಂದ ಗೌರವ
2007; 2011; 2013; 2014.ಎ ಐ ಎಫ್ ಎಫ್ವರ್ಷದ ಆಟಗಾರ
2008.ಎ ಎಫ್. ಸಿ.ಛಾಲೇಂಜ್ ಕಪ್ಮೌಲ್ಯಯುತ ಆಟಗಾರ
2012ಗರಿಷ್ಠ ಗೋಲು ಗಳಿಸಿದ ಆಟಗಾರನೆಹರೂ ಕಪ್
2011ಗರಿಷ್ಠ ಗೋಲು ಗಳಿಸಿದ ಆಟಗಾರಸ್ಯಾಫ್ ಛಾಂಪಿಯನ್ಷಿಪ್
2011ವರ್ಷದ ಶ್ರೇಷ್ಠ ಆಟಗಾರಸ್ಯಾಫ್ ಛಾಂಪಿಯನ್ಷಿಪ್
2019 (ಕ್ರೀಡಾ ಪಟು) ಕಾಲ್ಚೆಂಡು ಆಟಗಾರ ಪದ್ಮಶ್ರೀ

ಹೆಚ್ಚಿನ ಓದಿಗೆ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Sunil Chhetri career stats". Soccerway. Retrieved 27 January 2016
  2. ದಿ.೬-೬-೨೦೧೬:www/prajavani.net/article/ಭಾರತ-ಫುಟ್‌ಬಾಲ್‌ಗೆ-ಚೆಟ್ರಿ-ಹೊಳಪು