ಸುನಿಲ್ ಛೇತ್ರಿ
ಗೋಚರ
(ಸುನಿಲ್ ಚೆಟ್ರಿ ಇಂದ ಪುನರ್ನಿರ್ದೇಶಿತ)
ವೈಯುಕ್ತಿಕ ಮಾಹಿತಿ | |
---|---|
ಪುರ್ಣ ಹೆಸರು | ಸುನಿಲ್ ಛೇತ್ರಿ |
ಅಡ್ಡ ಹೆಸರು(ಗಳು) | ಛೇತ್ರಿ |
ರಾಷ್ರೀಯತೆ | ಭಾರತೀಯ |
ಜನನ | ಸಿಕಂದರಾಬಾದು, ಭಾರತ | ೩ ಆಗಸ್ಟ್ ೧೯೮೪
ಎತ್ತರ | 1.70 m (5 ft 7 in) |
Sport | |
ದೇಶ | India |
ಕ್ರೀಡೆ | ಫುಟ್’ಬಾಲ್ |
ಸ್ಪರ್ಧೆಗಳು(ಗಳು) | striker(ಗೋಲು ಹೊಡೆಯುವವ) |
ಕ್ಲಬ್ | ಬೆಂಗಳೂರು ಫುಟ್’ಬಾಲ್’ ಕ್ಲಬ್ (ಮುಂಬಯಿಯಿಂದ ಎರವಲು) |
ತಂಡ | ಬೆಂಗಳೂರು ಫುಟ್ಬಾಲ್ ಕ್ಲಬ್ |
Achievements and titles | |
ವೈಯಕ್ತಿಕ ಪರಮಶ್ರೇಷ್ಠ | 89 ಪಂದ್ಯ-50 ಗೋಲು |
Updated on 5-6-2016. |
ಫುಟ್‍ಬಾಲ್ ಕ್ರೀಡಾಪಟು
[ಬದಲಾಯಿಸಿ]- ಸುನಿಲ್ ಛೇತ್ರಿ (ಸುನಿಲ್ ಚೆಟ್ರಿ) (ನೇಪಾಳಿ:Sunil Chhetri;( सुनिल छेत्री; ಆಗಸ್ಟ್ 1984 3 ಜನನ)ಬೆಂಗಳೂರು ಫುಟ್’ಬಾಲ್’ ಕ್ಲಬ್ (ಎಫ್’ಸಿ.)ನ ಐ-ಲೀಗ್ ಭಾರತೀಯ ಸೂಪರ್ ಲೀಗ್'ನ ಒಬ್ಬ ಫುಟ್’ಬಾಲ್ ಆಟಗಾರ. ಮುಂಬಯಿ ನಗರದಿಂದ ಬೆಂಗಳೂರು ಫುಟ್’ಬಾಲ್’ ಕ್ಲಬ್'ಗೆ ಎರವಲು ಮೇಲೆ ಬಂದವರು. ಅವರು ಸ್ಟ್ರೈಕರ್ ಆಗಿ(ಗೋಲು ಹೊಡೆಯುವವ) ಆಡುತ್ತಿದ್ದಾರೆ. ಭಾರತದ ಓರ್ವ ವೃತ್ತಿಪರ ಫುಟ್ಬಾಲ್ ಆಟಗಾರ. ಅವರು 89 ಪಂದ್ಯಗಳಲ್ಲಿ 50 ಗೋಲುಗಳನ್ನು ಹೊಡೆದಿದ್ದಾರೆ. ಪ್ರಸ್ತುತ ಬೆಂಗಳೂರು ತಂಡಕ್ಕೆ ನಾಯಕರಾಗಿದ್ದಾರೆ, ಮತ್ತು ಭಾರತ ರಾಷ್ಟ್ರೀಯ ತಂಡಕ್ಕೆ ಸಾರ್ವಕಾಲಿಕ ಗರಿಷ್ಠ ಗೋಲು ಗಳಿಸುವ ಕ್ರೀಡಾಪಟು ,
ಕ್ರೀಡಾಪಟು
[ಬದಲಾಯಿಸಿ]- ಭಾರತದ ಪರ ಅತ್ಯಧಿಕ ಗೋಲು ಗಳಿಸಿದ ದಾಖಲೆ ಸುನಿಲ್ ಚೆಟ್ರಿ ಹೆಸರಿನಲ್ಲಿದೆ. ಚೆಟ್ರಿ,ಉತ್ತಮ ಆಟಗಾರನಾಗಿ ಜೊತೆಗೆ ನಾಯಕತ್ವದ ಜವಾಬ್ದಾರಿ ಹೊತ್ತು ರಾಷ್ಟ್ರೀಯ ಮತ್ತು ಬಿಎಫ್‌ಸಿ ತಂಡವನ್ನು ಯಶಸ್ಸಿನ ಪಥದಲ್ಲಿ ಮುನ್ನಡೆಸಿದ್ದಾರೆ. ತಮ್ಮ ಕಾಲ್ಚಳಕದ ಮೂಲಕ ಎದುರಾಳಿ ತಂಡದ ರಕ್ಷಣಾಕೋಟೆಯನ್ನು ಧ್ವಂಸಗೊಳಿಸಬಲ್ಲ ಸಾಮರ್ಥ್ಯ ಚೆಟ್ರಿ ಅವರಿಗೆ ಕರಗತವಾಗಿದೆ. ಅವರ ಪಾದರಸದಂತಹ ಚಲನೆ ಮತ್ತು ಚೆಂಡನ್ನು ಡ್ರಿಬಲ್ ಮಾಡುತ್ತಾ ಎದುರಾಳಿ ಆವರಣದೊಳಗೆ ಲೀಲಾಜಾಲವಾಗಿ ನುಗ್ಗಿ ಚೆಂಡನ್ನು ಗುರಿ ಮುಟ್ಟಿಸುವಲ್ಲೂ ಚೆಟ್ರಿ ನಿಪುಣರು. ಅವರ ಆಟಕ್ಕೆ ಫುಟ್‌ಬಾಲ್ ಪ್ರೇಮಿಗಳು ಯಾರೇ ಆಗಲಿ ಮನಸೋಲುವರು.
- 2002ರಲ್ಲಿ ಮೋಹನ್ ಬಾಗನ್ ಕ್ಲಬ್ ಪರ ಆಡುವ ಮೂಲಕ ಫುಟ್‌ಬಾಲ್ ವಲಯಕ್ಕೆ ಪರಿಚಿತರಾದ ಚೆಟ್ರಿ, 2007, 2009 ಮತ್ತು 2012ರ ನೆಹರೂ ಕಪ್ ಟೂರ್ನಿಗಳಲ್ಲಿ ಭಾರತ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2008ರ ಎಎಫ್‌ಸಿ ಚಾಲೆಂಜ್ ಕಪ್‌ನಲ್ಲಿ ಅಮೋಘ ಆಟ ಆಡಿದ್ದ ಚೆಟ್ರಿ ಭಾರತ ತಂಡ ಪ್ರಶಸ್ತಿ ಜಯಿಸಿ 27 ವರ್ಷಗಳ ಬಳಿಕ ಎಎಫ್‌ಸಿ ಏಷ್ಯಾ ಕಪ್‌ಗೆ ಅರ್ಹತೆ ಗಳಿಸಲು ಕಾರಣರಾಗಿದ್ದರು.[೧]
ಪರಿಚಯ
[ಬದಲಾಯಿಸಿ]ಅವರ ತಂದೆ ಪೋಷಕರು : ಕೆ.ಬಿ. ಚೆಟ್ರಿ ಮತ್ತು ತಾಯಿ ಸುಶೀಲಾ ಚೆಟ್ರಿ. ಜನನ ಸ್ಥಳ ಸಿಕಂದರಾಬಾದ್. ಮೂಲತಃ ಅವರು ನೇಪಾಳಿಗಳು.ಅವರಿಗೆ ಇಬ್ಬರು ಸಹೋದರಿಯರು, ಸಶಾ ಮತ್ತು ಸುನಂದಾ. ಸುನಿಲ್ ಚೆಟ್ರಿ ಅವರ ಕುಟುಂಬದ ಎಲ್ಲರೂ ಫುಟ್‌ಬಾಲ್ ಆಟಗಾರರೇ. ಸುನಿಲ್ ಅವರ ತಂದೆ, ಭಾರತೀಯ ಸೇನಾ ತಂಡದಲ್ಲಿ ಆಡಿದ್ದರೆ, ತಾಯಿ ಮತ್ತು ಸಹೋದರಿಯರು ನೇಪಾಳ ರಾಷ್ಟ್ರೀಯ ಮಹಿಳಾ ತಂಡದ ಪರ ಹಲವು ಪಂದ್ಯಗಳನ್ನು ಆಡಿದ್ದಾರೆ.
ಸಾಧನೆಗಳು
[ಬದಲಾಯಿಸಿ]ಸೀನಿಯರ್ ವಿಭಾಗದಲ್ಲಿ ಛೇತ್ರಿ ಸಾಧನೆ | |||
ಇಸವಿ | ತಂಡ | ಆಡಿದ ಪಂದ್ಯ | ಗಳಿಸಿದ ಗೋಲು |
---|---|---|---|
2002-2005 | ಮೋಹನ್ ಬಾಗನ್ | 18 | 8 |
2005-2008 | ಜೆಸಿಟಿ | 58 | 2 |
2008-2009 | ಈಸ್ಟ್ ಬೆಂಗಾಲ್ | 14 | 9 |
2009-2010 | ಡೆಂಪೋಎಸ್.ಸಿ. | 13 | 8 |
2010 | ಕನ್ಸಾಸ್ ಸಿಟಿ ವಿಜರ್ಡಸ್ | 0 | 0 |
2011 | ಚಿರಾಗ್ ಯುನೈಟೆಡ್ | 7 | 7 |
2011-2012 | ಮೋಹನ್ ಬಾಗನ್ | 14 | 8 |
2012-2013 | ಸ್ಪೋರ್ಟಿಂಗ್ ಕ್ಲಬ್ ಡಿ.ಪೋರ್ಚುಗಲ್ ಬಿ | 3 | ೦ |
2013 | ಚರ್ಚಿಲ್ ಬ್ರದರ್ಸ್ | 8 | 4 |
2013-2015 | ಬೆಂಗಳೂರು ಎಫ್.ಸಿ. | 43 | 16 |
2015 | ಮುಂಬಯಿ ಸಿಟಿ. | 11 | 7 |
2016. | ಬೆಂಗಳೂರು ಎಫ್ ಸಿ. | 14 | 5 |
ರಾಷ್ಟ್ರೀಯ ತಂಡದಲ್ಲಿ ಸಾಧನೆ | |||
2004. | ಭಾರತ 20ವರ್ಷದೊಳಗಿನವರು | 3 | 2 |
2005-2016. | ಭಾರತ ಸೀನಿಯರ್ | 89 | 50 |
ವಿವಿದ ಪಂದ್ಯಗಳ ಸಾಧನೆ
[ಬದಲಾಯಿಸಿ]ಆಡಿದ ಒಟ್ಟು ಲೀಗ್ ಪಂದ್ಯಗಳು | 127 |
ಅದರಲ್ಲಿ ಗಳಿಸಿದ ಗೋಲುಗಳು | 64 |
ಆಡಿದ ಕಪ್ ಪಂದ್ಯಗಳು | 18 |
ಅದರಲ್ಲಿ ಗಳಿಸಿದ ಗೋಲುಗಳು | 11 |
ಕಾಂಟಿನೆಂಟಲ್ ಟೂರ್ನಿ ಪಂದ್ಯಗಳು | 15 |
ಅದರಲ್ಲಿ ಗಳಿಸಿದ ಗೋಲುಗಳು | 8 |
ಕ್ಲಬ್’ಗಳ ಪರ ಆಡಿದ ಪಂದ್ಯಗಳು | 160 |
ಅದರಲ್ಲಿ ಗಳಿಸಿದ ಗೋಲುಗಳು | 83 |
ಸಾಧನೆಗೆ ಸಂದ ಗೌರವಗಳು
[ಬದಲಾಯಿಸಿ]ಛೇತ್ರಿ ಸಾಧನೆಗೆ ಸಂದ ಗೌರವಗಳು | ||
ವರ್ಷ | ಉದ್ದೇಶ ವಿವರ | ಸಂದ ಗೌರವ |
---|---|---|
2007; 2011; 2013; 2014. | ಎ ಐ ಎಫ್ ಎಫ್ | ವರ್ಷದ ಆಟಗಾರ |
2008. | ಎ ಎಫ್. ಸಿ.ಛಾಲೇಂಜ್ ಕಪ್ | ಮೌಲ್ಯಯುತ ಆಟಗಾರ |
2012 | ಗರಿಷ್ಠ ಗೋಲು ಗಳಿಸಿದ ಆಟಗಾರ | ನೆಹರೂ ಕಪ್ |
2011 | ಗರಿಷ್ಠ ಗೋಲು ಗಳಿಸಿದ ಆಟಗಾರ | ಸ್ಯಾಫ್ ಛಾಂಪಿಯನ್ಷಿಪ್ |
2011 | ವರ್ಷದ ಶ್ರೇಷ್ಠ ಆಟಗಾರ | ಸ್ಯಾಫ್ ಛಾಂಪಿಯನ್ಷಿಪ್ |
2019 | (ಕ್ರೀಡಾ ಪಟು) ಕಾಲ್ಚೆಂಡು ಆಟಗಾರ | ಪದ್ಮಶ್ರೀ |
ಹೆಚ್ಚಿನ ಓದಿಗೆ
[ಬದಲಾಯಿಸಿ]- ಫುಟ್ಬಾಲ್ ಅಂಗಳದ ಮಿನುಗುತಾರೆ -ಗಿರೀಶ ದೊಡ್ಡಮನಿ - 18 Mar, 2018:[೧] Archived 2018-03-17 ವೇಬ್ಯಾಕ್ ಮೆಷಿನ್ ನಲ್ಲಿ.
ನೋಡಿ
[ಬದಲಾಯಿಸಿ]- ಕರ್ನಾಟಕ ಮತ್ತು ಕ್ರೀಡೆ
- ಸೌತ್ ಏಷ್ಯನ್ ಕ್ರೀಡಾಕೂಟ--2016 ದಕ್ಷಿಣ ಏಷ್ಯನ್ ಕ್ರೀಡಾಕೂಟ
- ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್
- ಅಖಿಲ ಭಾರತ ಫುಟ್ಬಾಲ್ ಫೆಡರೇಷನ್
ಉಲ್ಲೇಖ
[ಬದಲಾಯಿಸಿ]- ↑ "Sunil Chhetri career stats". Soccerway. Retrieved 27 January 2016
- ↑ ದಿ.೬-೬-೨೦೧೬:www/prajavani.net/article/ಭಾರತ-ಫುಟ್‌ಬಾಲ್‌ಗೆ-ಚೆಟ್ರಿ-ಹೊಳಪು