ಸುನಂದಾ ಬೆಳಗಾಂವಕರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಸುನಂದಾ ಬೆಳಗಾವಕರ ಇವರು ಧಾರವಾಡದ ಮಹಿಷಿ ಕುಟುಂಬದವರು. ವಿವಾಹದ ನಂತರ ಆಫ್ರಿಕಾ ಖಂಡದ ಝಾಂಬಿಯಾ ದೇಶದಲ್ಲಿ ತಮ್ಮ ಪತಿಯೊಡನೆ ಮೂವತ್ತು ವರ್ಷ ಕಳೆದು, ಬಳಿಕ ಭಾರತಕ್ಕೆ ಹಿಂತಿರುಗಿದರು.

ಸಾಹಿತ್ಯ[ಬದಲಾಯಿಸಿ]

ಸುನಂದಾ ಬೆಳಗಾವಕರರವರು ಬರೆದ “ಕಜ್ಜಾಯ” ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಲೇಖಕಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು. ಇದಲ್ಲದೆ ಇವರು "ಶಾಲ್ಮಲಿ" ಎನ್ನುವ ಕಾವ್ಯಸಂಕಲನವನ್ನು, “ನಾಸು” ಹಾಗು “ಝವೇರಿ” ಎನ್ನುವ ಎರಡು ಕಾದಂಬರಿಗಳನ್ನು ಬರೆದಿದ್ದಾರೆ.

ಸುನಂದಾ ಬೆಳಗಾವಕರ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಕೃತಿಗಳು[ಬದಲಾಯಿಸಿ]

  • ಕಜ್ಜಾಯ (ಪ್ರಬಂಧಗಳು)(೧೯೭೯)
  • ನಾಸು(ಕಾದಂಬರಿ)(೧೯೮೯)
  • ಕೈತುತ್ತು(ಕಥಾ ಸಂಗ್ರಹ)(೧೯೯೧)

ಪ್ರಶಸ್ತಿ[ಬದಲಾಯಿಸಿ]

"ನಾಸು" ಕಾದಂಬರಿಗೆ ೧೯೯೦ ರಲ್ಲಿಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ ಲಭಿಸಿದೆ.