ಸುನಂದಾ ಬೆಳಗಾಂವಕರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುನಂದಾ ಬೆಳಗಾವಕರ ಇವರು ಧಾರವಾಡದ ಮಹಿಷಿ ಕುಟುಂಬದವರು. ವಿವಾಹದ ನಂತರ ಆಫ್ರಿಕಾ ಖಂಡದ ಝಾಂಬಿಯಾ ದೇಶದಲ್ಲಿ ತಮ್ಮ ಪತಿಯೊಡನೆ ಮೂವತ್ತು ವರ್ಷ ಕಳೆದು, ಬಳಿಕ ಭಾರತಕ್ಕೆ ಹಿಂತಿರುಗಿದರು.

ಸಾಹಿತ್ಯ[ಬದಲಾಯಿಸಿ]

ಸುನಂದಾ ಬೆಳಗಾವಕರರವರು ಬರೆದ “ಕಜ್ಜಾಯ” ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಲೇಖಕಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು. ಇದಲ್ಲದೆ ಇವರು "ಶಾಲ್ಮಲಿ" ಎನ್ನುವ ಕಾವ್ಯಸಂಕಲನವನ್ನು, “ನಾಸು”, “ಝವಾದಿ” ಹಾಗೂ "ಕಾಯಕ ಕೈಲಾಸ" ಎನ್ನುವ ಮೂರು ಕಾದಂಬರಿಗಳನ್ನು ಬರೆದಿದ್ದಾರೆ.

ಸುನಂದಾ ಬೆಳಗಾವಕರ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಕೃತಿಗಳು[ಬದಲಾಯಿಸಿ]

  • ಕಜ್ಜಾಯ (ಪ್ರಬಂಧಗಳು)(೧೯೭೯)
  • ನಾಸು(ಕಾದಂಬರಿ)(೧೯೮೯)
  • ಕೈತುತ್ತು(ಕಥಾ ಸಂಗ್ರಹ)(೧೯೯೧)
  • ಝವಾದಿ(ಕಾದಂಬರಿ)
  • ಕಾಯಕ ಕೈಲಾಸ(ಕಾದಂಬರಿ)

ಪ್ರಶಸ್ತಿ[ಬದಲಾಯಿಸಿ]

"ನಾಸು" ಕಾದಂಬರಿಗೆ ೧೯೯೦ ರಲ್ಲಿಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ ಲಭಿಸಿದೆ.