ವಿಷಯಕ್ಕೆ ಹೋಗು

ಸುದರ್ಶನ ದೇಸಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುದರ್ಶನ ದೇಸಾಯಿ
ಜನನ(೧೯೪೫-೦೧-೧೪)೧೪ ಜನವರಿ ೧೯೪೫
ಧಾರವಾಡ, ಧಾರವಾಡ ಜಿಲ್ಲೆ, ಕರ್ನಾಟಕ, ಭಾರತ
ಮರಣ31 ಜುಲೈ 2012(2012-07-31)
ಧಾರವಾಡ, ಕರ್ನಾಟಕ, ಭಾರತ
ವೃತ್ತಿಕಾದಂಬರಿಕಾರ,ಕಥೆಗಾರರು, ಸಂಪಾದಕರು
ರಾಷ್ಟ್ರೀಯತೆಭಾರತ
ಪ್ರಕಾರ/ಶೈಲಿಕಾದಂಬರಿ
ವಿಷಯಕನ್ನಡ
ಸಾಹಿತ್ಯ ಚಳುವಳಿಕನ್ನಡ ಕಾದಂಬರಿ ಸಾಹಿತ್ಯ
ಸುದರ್ಶನ ದೇಸಾಯಿ
ಜನನಜನವರಿ 14, 1945
ಮರಣಜುಲೈ 31, 2012

ಸುದರ್ಶನ ದೇಸಾಯಿ ಇವರು ಧಾರವಾಡ ದಲ್ಲಿ ನೆಲೆಸಿದ ಪ್ರಸಿದ್ಧ ಕಾದಂಬರಿಕಾರರು. ಅವರ ಸಾಹಿತ್ಯರಚನೆ ಕೆಳಗಿನಂತಿದೆ.

ಸಾಹಿತ್ಯ[ಬದಲಾಯಿಸಿ]

ಲೇಖಕ ಸುದರ್ಶನ ದೇಸಾಯಿ ಅವರು ಮೂಲತಃ ಧಾರವಾಡದವರು. ತಂದೆ- ಕೃಷ್ಣರಾವ ರಾಮಾರಾವ ದೇಸಾಯಿ. ತಾಯಿ- ರಾಧಾಬಾಯಿ. ವಿದ್ಯಾಭ್ಯಾಸವನ್ನು ಧಾರವಾಡದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆ, ಮಾಳಮಡ್ಡಿಯ ಕೆ.ಇ.ಬೋರ್ಡ್ ಹೈಸ್ಕೂಲಿನಲ್ಲಿ ಪೂರ್ಣಗೊಳಿಸಿದರು. ಬಾಸೆಲ್ ಮಿಷನ್ ಟ್ರೈನಿಂಗ್ ಕಾಲೇಜಿನಿಂದ ಟಿ.ಸಿ.ಎಚ್. ತರಬೇತಿ ಪಡೆದು ಧಾರವಾಡದ ಗುಲಗುಂಜಿ ಕೊಪ್ಪದ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ದುಡಿದರು.1977ರಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡರು. ಪ್ರಜಾಮತ ವಾರಪತ್ರಿಕೆಯ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ತಮ್ಮ ಸಪ್ತಪದಿ ಕತೆಗೆ ಮೂರನೆ ಬಹುಮಾನ ಪಡೆದರು. ಆನಂತರದಲ್ಲಿ ಸುಮಾರು 60ಕ್ಕೂ ಹೆಚ್ಚು ಸಣ್ಣಕತೆಗಳನ್ನು ರಚಿಸಿದರು. ಅವರ ಕಥೆಗಳಾದ ಅಪರಿಚಿತ, ಕರಿನಾಯಿ, ನೆಲುವಿಗೆ ಹಾರದ ಬೆಕ್ಕು ಹಾಗೂ ನಿರ್ಣಯ ಮುಂತಾದ ಕಥೆಗಳು ರಾಜ್ಯದ ವಿವಿಧ ಪತ್ರಿಕೆಗಳ ಸ್ಪರ್ಧೆಯಲ್ಲಿ ಬಹಮಾನಗಳಿಸಿವೆ. ಸಣ್ಣ ಕಥೆಗಳಂತೆ ಹಲವಾರು ಹಾಸ್ಯ ಲೇಖನಗಳನ್ನೂ ಬರೆದಿದ್ದು ಇವು ಪ್ರಜಾಮತ, ಸುಧಾ, ಸಂಯುಕ್ತ ಕರ್ನಾಟಕ, ಕಸ್ತೂರಿ, ಮಂಗಳ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ರೂಪವತಿ ಭಾರ್ಯ ಶತ್ರು, ದುನಿಯಾ ಗೋಲ ಹೈ, ನಮಸ್ಕಾರ ಅಪಾಯದ ಸಂಕೇತ, ಉಳಿತಾಯ ಪ್ರಯಾಸ ಮುಂತಾದ ಹಾಸ್ಯ ಲೇಖನಗಳು. ಪತ್ರಿಕೆಗಳಿಗೆ ಆಗಾಗ್ಗೆ ಬರೆಯುತ್ತಿದ್ದ ರಸವತ್ತಾದ ಅಪರಾಧಿ ವರದಿ ಲೇಖನಗಳು. ಅಂದಿನ ದಿನಗಳಲ್ಲಿ ನಡೆಯುತ್ತಿದ್ದ ಭಯಾನಕ, ರಹಸ್ಯಮಯ, ಮೈನವಿರೇಳಿಸುವ ಘಟನೆಗಳನ್ನು ಸತ್ಯಕ್ಕೆ ಧಕ್ಕೆ ಬರದಂತೆ, ಪೊಲೀಸ್ ಇಲಾಖೆಯ ಅವಕೃಪೆಗೂ ಒಳಗಾಗದಂತೆ ಬರೆಯುವಲ್ಲಿ ಸಿದ್ಧಹಸ್ತರೆನಿಸಿದ್ದು, ಕೆಲವು ಪತ್ರಿಕೆಯ ಸಂಪಾದಕರುಗಳು ಇಂಥ ಲೇಖನಗಳನ್ನು ಬರೆಯಲು ಆಹ್ವಾನಿಸುತ್ತಿದ್ದರು. ಜೈಲಿನ ಕಥೆಗಳನ್ನು ಆಧರಿಸಿ ‘ಸುಧಾ’ ವಾರಪತ್ರಿಕೆಗೆ ಬರೆದ ‘ಮೃತ್ಯುವಿಗೆ ಮುತ್ತಿಟ್ಟವರು’ ಲೇಖನ ಮಾಲೆಯು ಇವರಿಗೆ ಹೆಸರು ತಂದುಕೊಟ್ಟ ಸಾಹಿತ್ಯ ಪ್ರಕಾರವಾಗಿತ್ತು. ಪತ್ತೇದಾರಿ ಕಾದಂಬರಿ ಕ್ಷೇತ್ರ. 1979ರಲ್ಲಿ ಬರೆದ ಮನೋವೈಜ್ಞಾನಿಕ ಕಾದಂಬರಿ ‘ತಿರುವು’ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡನಂತರ ಖ್ಯಾತ ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ರವರು ಇದೇ ಕಾದಂಬರಿಯನ್ನು ಆಧರಿಸಿ ‘ಮಾನಸ ಸರೋವರ’ ಎಂಬ ಹೆಸರಿನಿಂದ ಚಿತ್ರವನ್ನು ನಿರ್ದೇಶಿಸಿದರು. ಇವರ ಮೊದಲ ಸಾಮಾಜಿಕ ಕಾದಂಬರಿ ‘ಹಾಲಿನ ಕಡಲು ಜೀನಿನ ಒಡಲು’. ನಂತರ ‘ನೀರ ಮೇಲಿನ ಹೆಜ್ಜೆ’, ‘ಸಂಜೆ ಮಲ್ಲಿಗೆ’, ‘ಅಮರದೀಪ, ‘ಸೇವಕ’, ‘ಎಂಟೆದೆ ಬಂಟ’, ‘ಅಗ್ನಿ ಪರ್ವತ’ ಮುಂತಾದ 20ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಹಲವು ಬಗೆಯ ಸಾಧನೆಗಳನ್ನು ಮಾಡಿದ್ದ ಸುದರ್ಶನ ದೇಸಾಯಿಯವರಿಗೆ ಹಲವಾರು ಗೌರವ ಪ್ರಶಸ್ತಿಗಳು ಲಭಿಸಿವೆ 2012ರ ಜುಲೈ 31 ರಂದು ನಿಧನರಾದರು.

ಸಾಹಿತಿಯಾಗಿ ಪ್ರಸಿದ್ಧಿಯಾಗುವುದರ ಜೊತೆಗೆ 1965ರಿಂದ 1988ರ ವರೆಗೆ ಸುದರ್ಶನ ದೇಸಾಯಿಯವರು ಸುಮಾರು 200 ನಾಟಕಗಳಲ್ಲಿ ಅಭಿನಯಿಸಿದ್ದರು. 1974ರಲ್ಲಿ ಭಾಗ್ಯೋದಯ ನಾಟ್ಯ ಸಂಘ ಹಾಗೂ ಸರಸ್ವತಿ ಕಲಾ ನಿಕೇತನ ಸಂಘಗಳನ್ನು ಕಟ್ಟಿ, ಎಲ್ಲೆಡೆಯಲ್ಲಿ ನಾಟಕ ಆಡಿದರು. ಉತ್ತರ ಕರ್ನಾಟಕದ ರಂಗಭೂಮಿ ಸಂಗತಿಗಳನ್ನು ನಾಡಿಗೆ ತಿಳಿಸಬೇಕೆಂದು 'ರಂಗತೋರಣ' ಮಾಸಿಕ ಪತ್ರಿಕೆಯನ್ನು ನಿರಂತರವಾಗಿ ಪ್ರಕಟಿಸುತ್ತಿದ್ದರು.

ಕೇಂದ್ರ ಸರ್ಕಾರದಿಂದ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದ ಸುದರ್ಶನ ದೇಸಾಯಿ ಅವರು ಸಾಹಿತ್ಯ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳನ್ನು ಪಡೆದಿದ್ದರು. ಅವರ ಸಾಧನೆಯನ್ನು ಗುರುತಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಧಾರವಾಡ ನಗರದ ಸಾರಸ್ವತಪುರ ಬಳಿಯ ಕಾಲೋನಿಗೆ 'ಸುದರ್ಶನ ದೇಸಾಯಿ ಕಾಲೋನಿ' ಎಂದೇ ನಾಮಕರಣ ಮಾಡಿದೆ.

ಕೃತಿಗಳು[ಬದಲಾಯಿಸಿ]

ಮನೋವೈಜ್ಞಾನಿಕ ಕಾದಂಬರಿಗಳು[ಬದಲಾಯಿಸಿ]

 • ತಿರುವು
 • ವಿಚಿತ್ರ ಅಪರಾಧಿ
 • ಅಪಹರಣ

ವೈಜ್ಞಾನಿಕ ಕಾದಂಬರಿಗಳು[ಬದಲಾಯಿಸಿ]

 • ಕೆಂಪು ಜೇಡ
 • ಯಮದೂತರು

ಸಾಮಾಜಿಕ[ಬದಲಾಯಿಸಿ]

 • ಹಾಲಿನ ಕಡಲು ಜೇನಿನ ಒಡಲು
 • ಅಮರದೀಪ
 • ಸಂಜೆ ಮಲ್ಲಿಗೆ
 • ಅಗ್ನಿಪರ್ವತ
 • ನೀರ ಮೇಲಿನ ಹೆಜ್ಜೆಗಳು
 • ಸೇವಕ
 • ಸೂರ್ಯ ಚಂದ್ರ ಸಾಕ್ಷಿ
 • ಅಪೂರ್ವ ಕನಸುಗಾರ
 • ಕಾಡು ಮಲ್ಲಿಗೆ
 • ಎಂಟೆದೆ ಭಂಟ
 • ವಿಷ ಮಂಥನ
 • ದೇವ ಮಾನವ
 • ಪ್ರೇಮಲೋಕದ ಮಕರಾಕ್ಷ
 • ದುರಂತ ನಾಯಕ
 • ಕಮಲ ಅರಳಿತು ನಯನದಲಿ
 • ಪ್ರೇಮ ಸುರಭಿ
 • ನಯನ

ಪತ್ತೇದಾರಿ[ಬದಲಾಯಿಸಿ]

 • ಕೆರಳಿದ ಸರ್ಪ
 • ಚೋರಾಗ್ರ ಸೇನ
 • ಹಾವಿನ ಕಣ್ಣು
 • ವೈಪರ
 • ಐರಾವತ
 • ಹೊಲಿದ ತುಟಿಗಳು
 • ಕೆಲ್ಲಿ
 • ರಿಂಗೊ
 • ಬ್ರೌನ್ ಶುಗರ್
 • ಬಣ್ಣದ ಬೆಕ್ಕು
 • ನೀಲಿ ಕಣ್ಣುಗಳು
 • ಆರನೆ ವ್ಯಕ್ತಿ
 • ಬೆಂಕಿ ಮಡಿಲಲ್ಲಿ ಮೇಜರ್ ಹೇಮಂತ
 • ದೇಶದ್ರೋಹಿ
 • ಪೋಲೀಸ್ ಡಾಗ್
 • ಸೀಳು ನಾಲಿಗೆ
 • ಚಿನ್ನದ ಬೆರಳು
 • ಶೀತಲ ಕೋಳಿ
 • ಸಿಡಿಮದ್ದು
 • ಮುಚ್ಚಿದ ಫೈಲು
 • ಸುಪಾರಿ
 • ಎಕೆ-೫೬
 • ಸರ್ಪಗಂಧ
 • ಮೂರನೇ ಉಯಿಲು
 • ಹಳದಿ ಚೇಳು
 • ಮೃತ್ಯುವಿಗೆ ಮುತ್ತಿಟ್ಟವರು
 • ಹಸಿರು ನೊಣಗಳು
 • ಸಾಮ್ರಾಟ ಕುಳ್ಳ
 • ಅಸ್ಥಿಪಂಜರ

ನಾಟಕ[ಬದಲಾಯಿಸಿ]

 • ಕರಿನಾಯಿ

ರೇಡಿಯೊ ನಾಟಕ[ಬದಲಾಯಿಸಿ]

 • ತಪ್ಪಿದ ಲೆಕ್ಕ
 • ಅಪಹರಣ
 • ನೇಣು

ಪ್ರಬಂಧ[ಬದಲಾಯಿಸಿ]

 • ಕನ್ನಡ ಪತ್ತೇದಾರಿ ಸಾಹಿತ್ಯ
 • ಅಂದು – ಇಂದು
 • ಮಕ್ಕಳ ಕಥೆ
 • ಬಂಡೆಗಲ್ಲಿನ ರಾಜಕುಮಾರಿ

ಕಥಾಸಂಕಲನ[ಬದಲಾಯಿಸಿ]

 • ಕೆಂಚವ್ವನ ಮಗಳ ಕೆಂಪು ಲೋಲಕ್ಕು
 • ಮತ್ತೊಬ್ಬ ಅಂಗುಲಿಮಾಲಾ