ಸುಂದ ಮತ್ತು ಉಪಸುಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಂದ ಮತ್ತು ಉಪಸುಂದ
ಸಂಲಗ್ನತೆಅಸುರ
ಗ್ರಂಥಗಳುಮಹಾಭಾರತ

ಸುಂದ ಮತ್ತು ಉಪಸುಂದ ಹಿಂದೂ ಮಹಾಕಾವ್ಯವಾದ ಮಹಾಭಾರತದಲ್ಲಿ ಕಾಣಿಸಿಕೊಂಡಿರುವ ಅಸುರ ಸಹೋದರರು. ಅವರು ನಿಕುಂಭನ ಮಕ್ಕಳು. ಅವರು ಹಿರಣ್ಯಕಶಿಪುವಿನ ವಂಶಸ್ಥರು. [೧]

ದಂತಕಥೆ[ಬದಲಾಯಿಸಿ]

ಸುಂದ ಮತ್ತು ಉಪಸುಂದ ಸಹೋದರರು. ಅವರು ಒಮ್ಮೆ ವಿಂಧ್ಯ ಪರ್ವತಗಳ ಮೇಲೆ ಕಠಿಣ ತಪಸ್ಸನ್ನು ನಡೆಸಿದರು. ಅಂತಿಮವಾಗಿ ಬ್ರಹ್ಮನು ಸಹೋದರರಿಗೆ ವರವನ್ನು ನೀಡಲು ಒಪ್ಪಿಕೊಂಡನು ಮತ್ತು ಅವರು ಅಮರತ್ವವನ್ನು ಬಯಸಿದರು. ಈ ವರವನ್ನು ಕೊಡಲು ಬ್ರಹ್ಮನು ನಿರಾಕರಿಸಿದನು. ಬೇರ್ಪಡಿಸಲಾಗದ ಈ ಸಹೋದರರು ಪರಸ್ಪರವಾಗಿ ಮಾತ್ರ ಕೊಲ್ಲಲ್ಪಡಬಹುದೆಂಬ ವರವನ್ನು ಪಡೇದರು ಮತ್ತು ಸಂಪೂರ್ಣವಾಗಿ ಅಭೇದ್ಯರಾಗಿರುವ ವರವನ್ನು ಆರಿಸಿಕೊಂಡರು. ಪರ್ವತಗಳನ್ನು ತೊರೆದು ಸುಂದ ಮತ್ತು ಉಪಸುಂದರು ಹಲವಾರು ಬ್ರಾಹ್ಮಣರನ್ನು ಹತ್ಯೆಗೈದರು ಮತ್ತು ವೈದಿಕ ಧರ್ಮ ಅಸ್ತಿತ್ವಕ್ಕೆ ಅಪಾಯವನ್ನುಂಟುಮಾಡಿದರು. ಬ್ರಹ್ಮನು ಈಗ ಕಾರ್ಯಪ್ರವೃತ್ತನಾದನು. ಸುಂದರ ಅಪ್ಸರೆಯಾದ ತಿಲೋತ್ತಮೆಯನ್ನು ಸೃಷ್ಟಿಸಿದನು ಪರಿಪೂರ್ಣ ವೇಶ್ಯೆಯನ್ನು ತನ್ನ ಮುಂದೆ ಹಾಜರುಪಡಿಸುವಂತೆ ಅವನು ವಿಶ್ವಕರ್ಮನಿಗೆ ಸೂಚನೆ ನೀಡಿದನು. ತಿಲೋತ್ತಮೆಗೆ ಸಹೋದರರ ನಡುವೆ ಭಿನ್ನಾಭಿಪ್ರಾಯವನ್ನು ಉಂಟುಮಾಡುವಂತೆ ಸೂಚಿಸಲಾಯಿತು. ತಿಲೋತ್ತಮೆಯು ಸುಂದ ಮತ್ತು ಉಪಸುಂದರು ತಮ್ಮ ಕುಟುಂಬದೊಂದಿಗೆ ಮದ್ಯಪಾನ ಮಾಡಿ ತಮ್ಮ ವಿಜಯಗಳನ್ನು ಆಚರಿಸುತ್ತಿರುವುದನ್ನು ಕಂಡಳು. ತಿಲೋತ್ತಮಳನ್ನು ನೋಡುತ್ತಾ ಅವರು ತಕ್ಷಣವೇ ಅವಳ ಮೇಲೆ ಮುಗಿಬಿದ್ದರು ಮತ್ತು ಅವಳಿಗಾಗಿ ಅಂತಿಮವಾಗಿ ಒಬ್ಬರನ್ನೊಬ್ಬರು ಕೊಂದುಹಾಕಿದರು. ಆದ್ದರಿಂದ ಅಧಿಕಾರವನ್ನು ಮತ್ತೊಮ್ಮೆ ಸ್ಥಾಪಿಸಲಾಯಿತು. .[೨]

ಉಲ್ಲೇಖಗಳು[ಬದಲಾಯಿಸಿ]

  1. www.wisdomlib.org (2012-06-29). "Upasunda: 9 definitions". www.wisdomlib.org (in ಇಂಗ್ಲಿಷ್). Retrieved 2022-09-09.
  2. Buitenen, Johannes Adrianus Bernardus; Buitenen, J. A. B. van; Fitzgerald, James L. (1973). The Mahabharata, Volume 1: Book 1: The Book of the Beginning (in ಇಂಗ್ಲಿಷ್). University of Chicago Press. p. 392. ISBN 978-0-226-84663-7.