ವಿಷಯಕ್ಕೆ ಹೋಗು

ಸೀಮಂತೋನ್ನಯನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೀಮಂತೋನ್ನಯನ (ಅಕ್ಷರಶಃ: ಕೂದಲನ್ನು ಬೇರ್ಪಡಿಸುವುದು) ಹಿಂದೂಗಳಿಂದ ಆಚರಿಸಲಾಗುವ ೧೬ ಸಂಸ್ಕಾರಗಳ ಪೈಕಿ ಮೂರನೆಯದು, ಇದರಲ್ಲಿ ಗರ್ಭಿಣಿ ಹೆಂಗಸಿನ ಕೂದಲನ್ನು ಧರ್ಮಾಚರಣೆಯ ಜೊತೆಗೆ ಬೇರಪಡಿಸಲಾಗುತ್ತದೆ. ಗೃಹ್ಯ ಸೂತ್ರಗಳ ಪ್ರಕಾರ, ಗರ್ಭಾವಸ್ಥೆಯ ನಾಲ್ಕನೇ ಅಥವಾ ಐದನೇ ತಿಂಗಳು ಈ ಸಂಸ್ಕಾರವನ್ನು ಆಚರಿಸಲು ಸರಿಯಾದ ಸಮಯ, ಆದರೆ ಸ್ಮೃತಿಗಳು ಮತ್ತು ಜ್ಯೋತಿಷ ಕೃತಿಗಳ ಪ್ರಕಾರ, ಈ ಅವಧಿಯನ್ನು ಎಂಟನೇ ತಿಂಗಳು ಅಥವಾ ಮಗುವಿನ ಜನ್ಮದವರೆಗೂ ವಿಸ್ತರಿಸಬಹುದು. ಈ ಸಂಸ್ಕಾರವನ್ನು ಪ್ರತಿ ಗರ್ಭಧಾರಣೆಯಲ್ಲಿ ಆಚರಿಸಬೇಕೋ ಅಥವಾ ಕೇವಲ ಮೊದಲ ಸಲದ ಗರ್ಭಧಾರಣೆಯಲ್ಲಿ ಆಚರಿಸಬೇಕೋ ಎಂಬುದರ ಬಗ್ಗೆ ವಿದ್ವಾಂಸರು ಏಕಾಭಿಪ್ರಾಯ ಹೊಂದಿಲ್ಲ.