ಸೀಖ್ ಕಬಾಬ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಟ್ಟೆಯಲ್ಲಿ ಬಡಿಸಲಾದ ಸೀಖ್ ಕಬಾಬ್‍ಗಳು

ಸೀಖ್ ಕಬಾಬ್ ದಕ್ಷಿಣ ಏಷ್ಯಾದಲ್ಲಿ ಜನಪ್ರಿಯವಾಗಿರುವ ಒಂದು ಬಗೆಯ ಕಬಾಬ್. ಇದನ್ನು ಮಸಾಲೆ ಸೇರಿಸಿದ ಕೊಚ್ಚಿದ ಅಥವಾ ರುಬ್ಬಿದ ಮಾಂಸದಿಂದ, ಸಾಮಾನ್ಯವಾಗಿ ಕುರಿಮರಿ ಮಾಂಸ, ಗೋಮಾಂಸ ಅಥವಾ ಕೋಳಿಮಾಂಸದಿಂದ ತಯಾರಿಸಲಾಗುತ್ತದೆ. ಮಾಂಸವನ್ನು ಲೋಹದ ಕೋಲುಗಳ ಮೇಲೆ ಉರುಳೆಯಾಕಾರವಾಗಿ ರೂಪಿಸಿ ಜಾಲರಿ ಕೆಂಡದ ಮೇಲೆ ಸುಡಲಾಗುತ್ತದೆ.[೧][೨] ಇದನ್ನು ಸಾಮಾನ್ಯವಾಗಿ ಮಂಗಲ್ ಅಥವಾ ಬಾರ್ಬಿಕ್ಯೂ ಮೇಲೆ ಅಥವಾ ಒಂದು ತಂದೂರ್‌ನಲ್ಲಿ ಬೇಯಿಸಲಾಗುತ್ತದೆ.

ಸೀಖ್ ಕಬಾಬ್‍ಗಳು ಮೃದು ಮತ್ತು ರಸವತ್ತಾಗಿರುತ್ತವೆ. ಇವುಗಳಿಗೆ ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ಖಾರದ ಪುಡಿ ಮತ್ತು ಗರಂ ಮಸಾಲಾದಂತಹ ವಿವಿಧ ಸಂಬಾರ ಪದಾರ್ಥಗಳು, ಜೊತೆಗೆ ನಿಂಬೆ ರಸ, ಕೊತ್ತಂಬರಿ ಮತ್ತು ಪುದೀನಾ ಎಲೆಗಳನ್ನು ಸೇರಿಸಿ ರುಚಿಗೊಳಿಸಲಾಗಿರುತ್ತದೆ.

ಕೆಲವು ಜನಪ್ರಿಯ ಸೀಖ್ ಕಬಾಬ್‍ಗಳೆಂದರೆ ಟುಂಡೆ ಕೇ ಕಬಾಬ್, ಕಾಕೋರಿ ಕಬಾಬ್ ಮತ್ತು ಗಿಲಾಫ಼ಿ ಸೀಖ್ ಕಬಾಬ್. ಭಾರತದಲ್ಲಿ ಸಸ್ಯಾಹಾರಿ ಸೀಖ್ ಕಬಾಬ್‍ಗಳು ಜನಪ್ರಿಯವಾಗಿವೆ ಮತ್ತು ಇವನ್ನು ಹುರುಳಿಕಾಯಿ, ಗಜ್ಜರಿ, ಆಲೂಗಡ್ಡೆ, ಹೂಕೋಸು ಮತ್ತು ಹಸಿರು ಬಟಾಣಿಗಳಿಂದ ತಯಾರಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Albala, Ken, ed. (2011). Food cultures of the world encyclopedia. Santa Barbara, Calif.: Greenwood. ISBN 9780313376276. OCLC 727739841.
  2. Mohiuddin, Yasmeen Niaz (2007). Pakistan: A Global Studies Handbook. ABC-CLIO. p. 325. ISBN 978-1-85109-801-9 – via Google Books.