ಗರಂ ಮಸಾಲಾ
ಗೋಚರ
ಗರಂ ಮಸಾಲಾ ಭಾರತ, ಪಾಕಿಸ್ತಾನ ಮತ್ತು ಇತರ ದಕ್ಷಿಣ ಏಷ್ಯಾದ ಪಾಕಪದ್ಧತಿಗಳಲ್ಲಿ ಸಾಮಾನ್ಯವಾದ ರುಬ್ಬಿದ ಸಂಬಾರ ಪದಾರ್ಥಗಳ ಒಂದು ಸಮ್ಮಿಶ್ರಣ. ಅದನ್ನು ಒಂಟಿಯಾಗಿ ಅಥವಾ ಇತರ ಮಸಾಲೆಗಳೊಂದಿಗೆ ಬಳಸಲಾಗುತ್ತದೆ. ಮೆಣಸಿನ ಕಾಳು, ಜಾಪತ್ರೆ, ದಾಲ್ಚಿನ್ನಿ, ಲವಂಗ, ಕಂದು ಮತ್ತು ಹಸಿರು ಏಲಕ್ಕಿ, ಜೀರಿಗೆ, ಜಾಯಿಕಾಯಿ ಗರಂ ಮಸಾಲಾದ ಸಾಮಾನ್ಯ ಘಟಕಾಂಶಗಳು ಅಥವಾ ಪದಾರ್ಥಗಳು. ಆದರೆ, ಇತರ ಪದಾರ್ಥಗಳನ್ನೂ ಬಳಸಬಹುದು.