ವಿಷಯಕ್ಕೆ ಹೋಗು

ಸಿ. ಆನಂದರಾಮ ಉಪಾಧ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ. ಸಿ. ಆನಂದರಾಮ ಉಪಾಧ್ಯ[೧] ಕನ್ನಡ ವಿದ್ವಾಂಸ, ವಿಮರ್ಶಕ, ಪ್ರಬಂಧ ಬರಹಗಾರ ಮತ್ತು ಕರ್ನಾಟಕದ ಬೆಂಗಳೂರಿನಲ್ಲಿರುವ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. ಯಕ್ಷಗಾನ ಸಾಹಿತ್ಯ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಇವರು ಕನ್ನಡ ಸಾಹಿತ್ಯದ ಕುರಿತು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಯಕ್ಷಗಾನ ಮಹಾಭಾರತದ ಪ್ರಸಂಗಗಳು[೨] ಕೃತಿಯ ಕುರಿತು ಅವರು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು.

ಅವರು ಕನ್ನಡದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಮೊದಲ ಪಿಎಚ್‌ಡಿ ಪದವಿ ಪಡೆದಿದ್ದಾರೆ[೩]. ಇವರು ಹುಟ್ಟಿದ್ದು ಉಡುಪಿ ಜಿಲ್ಲೆಯ ಚಿತ್ರಪಾಡಿಯಲ್ಲಿ. ಅವರ ಕೆಲವು ಪುಸ್ತಕಗಳು: "ಯಕ್ಷ ಚಿಂತನೆ"[೪], "ಯಕ್ಷ ದರ್ಶನ[೫]", "ಪ್ರತಿಬಿಂಬ- ಮೊಹಮ್ಮದ್ ಜಮಾನ್ ಅಜುರ್ದಾ ಅವರ ಪ್ರಶಸ್ತಿ ವಿಜೇತ ಕಾಶ್ಮೀರಿ ಪ್ರಬಂಧಗಳು (ಕನ್ನಡ ಅನುವಾದ)[೬]" ಇತರವುಗಳು.

ಅವರು 2007 ರಲ್ಲಿ ಕನ್ನಡ ಸಾಹಿತ್ಯಕ್ಕಾಗಿ ಆರ್ಯಭಟ್ಟ ಪ್ರಶಸ್ತಿ[೭] ಮತ್ತು 2019 ರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ[೮] ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಡಿಜಿಟಲೀಕರಣದ[೯] ಮೂಲಕ ಯಕ್ಷಗಾನ ಸಾಹಿತ್ಯವನ್ನು ಉತ್ತೇಜಿಸುವ ಯಕ್ಷವಾಹಿನಿ ಪ್ರತಿಷ್ಠಾನದ ಅಧ್ಯಕ್ಷರೂ[೧೦] ಆಗಿದ್ದಾರೆ.

ಜನನ, ಜೀವನ:[ಬದಲಾಯಿಸಿ]

ಆರಂಭಿಕ ಜೀವನ ಮತ್ತು ಶಿಕ್ಷಣ:[ಬದಲಾಯಿಸಿ]

ಡಾ. ಎಚ್. ಎಸ. ವೆಂಕಟೇಶ ಮೂರ್ತಿ ಮತ್ತು ಎಚ್. ಡುಂಡಿರಾಜ್ ಜೊತೆ.
ಡಾ. ಎಚ್. ಎಸ. ವೆಂಕಟೇಶ ಮೂರ್ತಿ ಮತ್ತು ಎಚ್. ಡುಂಡಿರಾಜ್ ಜೊತೆ.

ನಾರಾಯಣ ಉಪಾಧ್ಯ ಮತ್ತು ಕಾವೇರಮ್ಮರಿಗೆ ಜನಿಸಿದ ಉಪಾಧ್ಯರು ಚಿತ್ರಪಾಡಿಯಲ್ಲಿ ಬೆಳೆದರು (ಜನನ 14 ಜನವರಿ 1952). ಅವರು ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಕೋಟಾದ ವಿವೇಕ ಪ್ರೌಢಶಾಲೆಯಲ್ಲಿ ಮುಗಿಸಿದರು. ನಂತರ ಕನಕಪುರದ ರೂರಲ್ ಕಾಲೇಜಿನಲ್ಲಿ ಕಾಲೇಜು ವ್ಯಾಸಂಗ ಮಾಡಿದರು. ಅವರು ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ M.A, M.Phl ಮತ್ತು Ph.D ನಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದರು.

ವೃತ್ತಿ:[ಬದಲಾಯಿಸಿ]

ಅವರು ಶಾಂತಿ ಕಾಲೇಜು, ಸೇಂಟ್ ಜೋಸೆಫ್ ಕಾಲೇಜು ಮತ್ತು ಬೆಂಗಳೂರಿನ ಶೇಷಾದರಿಪುರಂ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ಮಾಡಿದರು. ಅವರು 1977 ರಲ್ಲಿ ಕರ್ನಾಟಕ ಬ್ಯಾಂಕ್‌ಗೆ ಸೇರಿದರು ಮತ್ತು ಅಲ್ಲಿ 34 ವರ್ಷಗಳ ಕಾಲ ಕೆಲಸ ಮಾಡಿದರು ಮತ್ತು 2012 ರಲ್ಲಿ ಸಹಾಯಕ ಜನರಲ್ ಮ್ಯಾನೇಜರ್ ಮತ್ತು ಪ್ರಾದೇಶಿಕ ಮುಖ್ಯಸ್ಥರಾಗಿ ನಿವೃತ್ತರಾದರು. ಅವರು 2019 ರಲ್ಲಿ ಕನ್ನಡಕ್ಕಾಗಿ ಸಂದರ್ಶಕ ಪ್ರಾಧ್ಯಾಪಕರಾಗಿ ಪಿಇಎಸ್ ವಿಶ್ವವಿದ್ಯಾಲಯಕ್ಕೆ ಸೇರಿದರು.

ಗ್ರಂಥಸೂಚಿ:[ಬದಲಾಯಿಸಿ]

ಪುಸ್ತಕಗಳು:[ಬದಲಾಯಿಸಿ]

 • ಯಕ್ಷ ಚಿಂತನೆ
 • ಯಕ್ಷಗಾನ ಮಹಾಭಾರತ ಪ್ರಸಂಗಗಳು
 • ಯಕ್ಷ ದರ್ಶನ
 • ಯಕ್ಷಗಾನ ರಾಮಾಯಣ ಪ್ರಸಂಗಗಳು[೧೧]
 • ಯಕ್ಷ ಪಥ[೧೨]
 • ಸಮಾಹಿತ[೧೩]

ಸಂಪಾದನೆಗಳು:[ಬದಲಾಯಿಸಿ]

 • ಕೋದಂಡ
ಡಾ. ಉಪಾಧ್ಯಅವರು ಯಕ್ಷಗಾನ ಅಕಾಡಮಿ ಗೌರವ ಪ್ರಶಸ್ತಿ ಸ್ವೀಕರಿಸುತ್ತಿದ್ದಾರೆ

ಪ್ರಶಸ್ತಿಗಳು ಮತ್ತು ಗೌರವಗಳು:[ಬದಲಾಯಿಸಿ]

 • 2007 ರಲ್ಲಿ ಕನ್ನಡ ಸಾಹಿತ್ಯಕ್ಕಾಗಿ ಆರ್ಯಭಟ್ಟ ಪ್ರಶಸ್ತಿ
 • 2007ರಲ್ಲಿ ನರಸಿಂಹ ಪ್ರಶಸ್ತಿ
 • 2019 ರಲ್ಲಿ ಯಕ್ಷಗಾನ ಅಕಾಡೆಮಿ ಪ್ರಶಸ್ತಿ (ಕರ್ನಾಟಕ ಸರ್ಕಾರ)[೮][೧೪]
 • 2017ರಲ್ಲಿ ಕೆರೆಮನೆ ಶಂಬು ಹೆಗಡೆ ಪ್ರಶಸ್ತಿ


ಉಲ್ಲೇಖಗಳು[ಬದಲಾಯಿಸಿ]

 1. ಆನಂದರಾಮ ಉಪಾಧ್ಯ - BookBramha
 2. ಯಕ್ಷಗಾನ ಮಹಾಭಾರತ ಪ್ರಸಂಗಗಳು - Google Books
 3. ಯಕ್ಷಗಾನದಲ್ಲಿ ಪ್ರಥಮ ಪಿಎಚ್‌ಡಿ- The Hindu
 4. ಯಕ್ಷ ಚಿಂತನೆ - SapnaBooks
 5. ಯಕ್ಷ ದರ್ಶನ- Google Books
 6. ಪ್ರತಿಬಿಂಬ- ExoticIndia
 7. ಆರ್ಯಭಟ ಪ್ರಶಸ್ತಿ- DaijiWorld
 8. ೮.೦ ೮.೧ ದಿ ಹಿಂದೂ-ಲೇಖನ
 9. ಮೊದಲು ಡಿಜಿಟಲೀಕರಣಗೊಂಡ ಯಕ್ಷಗಾನ ಲಿಪಿಗಳು
 10. ಯಕ್ಷವಾಹಿನಿಯ ಸದಸ್ಯರು - The Hindu
 11. ಯಕ್ಷಗಾನ ರಾಮಾಯಣ ಪ್ರಸಂಗಗಳು- Google Books
 12. ಯಕ್ಷವಹಿನಿ ಪ್ರತಿಷ್ಠಾನದ ಒಂದು ಲೇಖನ
 13. ಸಮಾಹಿತ
 14. ವಿಜಯ ಕರ್ನಾಟಕ ಪತ್ರಿಕೆಯ ಒಂದು ಲೇಖನ