ಸಿ.ಪಿ.ಬ್ರೌನ್
ಗೋಚರ
ಚಾರ್ಲ್ಸ್ ಫ಼ಿಲಿಪ್ ಬ್ರೌನ್ | |
---|---|
ಜನನ | 10 ನವೆಂಬರ್ 1798 ಕಲ್ಕತ್ತಾ |
ಮರಣ | 12 ಡಿಸೆಂಬರ್ 1884 ಲಂಡನ್ |
ವೃತ್ತಿ | ನಾಗರಿಕ ಸೇವಕ |
ರಾಷ್ಟ್ರೀಯತೆ | ಬ್ರಿಟಿಷ್ |
ಜನಾಂಗೀಯತೆ | ವೈಟ್ |
ವಿದ್ಯಾಭ್ಯಾಸ | ಭಾರತೀಯ ನಾಗರಿಕ ಸೇವೆ |
ಸಾಹಿತ್ಯ ಚಳುವಳಿ | ತೆಲುಗು ಪುಸ್ತಕಗಳ ಸಂಗ್ರಹ |
ಪ್ರಮುಖ ಕೆಲಸ(ಗಳು) | ತೆಲುಗು ನಿಘಂಟು |
ಸಿ.ಪಿ.ಬ್ರೌನ್ ಅವರು ತೆಲುಗು ಪ್ರದೇಶದಲ್ಲಿ ಬ್ರಿಟಿಶ್ ಕಂಪನಿ ಸರಕಾರದ ಸೇವೆಯಲ್ಲಿದ್ದ ವಿದ್ವಾಂಸರು. ಜಿಲ್ಲಾ ನ್ಯಾಯಾಧೀಶರಾಗಿ ಕೆಲವು ವರ್ಷಗಳು ಸೇವೆ ಸಲ್ಲಿಸಿದರು. ತೆಲುಗು ಭಾಷೆಯ ನಿಘಂಟನ್ನು ರಚಿಸಿದ ಕೀರ್ತಿ ಇವರದು. ತೆಲುಗು ವ್ಯಾಕರಣ ಗ್ರಂಥವನ್ನು ಬರೆದ ಮೊದಲಿಗರು. ಅನೇಕ ಪ್ರಾಚೀನ ತೆಲುಗು ಗ್ರಂಥಗಳನ್ನು ಸಂಸ್ಕರಿಸಿ ಮೊಟ್ಟ ಮೊದಲಿಗೆ ಮುದ್ರಿಸಿ ಬೆಳಕಿಗೆ ತಂದರು.
ಕರ್ನಾಟಕದಲ್ಲಿ ರೆ.ಎಫ್. ಕಿಟಲ್ ಅವರಿಗಿರುವ ಸ್ಥಾನ ತೆಲುಗು ಪ್ರಾಂತ್ಯಗಳಲ್ಲಿ ಬ್ರೌನ್ ಅವರಿಗಿದೆ.
ಸಿ.ಪಿ. ಬ್ರೌನ್ ಅವರು ವೀರಶೈವ ಧರ್ಮದ ಬಗೆಗೆ ಬರೆದಿರುವ ಒಂದು ಪುಟ್ಟ ಪುಸ್ತಕವು ಅನೇಕ ಮಹತ್ವದ ವಿಷಯಗಳನ್ನು ಒಳಗೊಂಡಿದೆ. ಅದರ ಹೆಸರು ಜಂಗಮರ ಮತ, ಆಚಾರಗಳು ಮತ್ತು ಸಾಹಿತ್ಯ ಕುರಿತ ಪ್ರಬಂಧ ಎಂದಿದೆ. ಇದು ೧೮೪೦ ರಲ್ಲಿ ಪ್ರಥಮ ಮುದ್ರಣ ಕಂಡಿದೆ. ೧೮೯೭ರಲ್ಲಿ ಎರಡನೆಯ ಆವೃತ್ತಿಯನ್ನು, ಮದ್ರಾಸಿನ ಹಿಗ್ಗಿನ್ ಬಾಥೆಮ್ಸ್ ಸಂಸ್ಥೆ ಪ್ರಕಟಿಸಿದೆ. ಈ ಪುಸ್ತಕದಲ್ಲಿ ಬಸವಣ್ಣ ಹಾಗೂ ವೀರಶೈವ ಧರ್ಮದ ಬಗ್ಗೆ ಬರೆಯಲಾಗಿದೆ.