ಸಿಯೋನ್ ಆಶ್ರಮ,ಗಂಡಿಬಾಗಿಲು

ವಿಕಿಪೀಡಿಯ ಇಂದ
Jump to navigation Jump to search
ಸಿಯೋನ್ ಆಶ್ರಮ
ಸಿಯೋನ್ ಆಶ್ರಮ

ಸಿಯೋನ್ ಆಶ್ರಮ ದಕ್ಷಿಣ ಕನ್ನಡ ಜಿಲ್ಲೆಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ಗ್ರಾಮದಲ್ಲಿ ಇದೆ. ನೊಂದವರ ಕಣ್ಣೀರು ಒರೆಸುವ ದೇಗುಲವಾಗಿ, ಸಮಾಜದಲ್ಲಿನ ಶೋಷಿತರ, ದೀನದಲಿತರ, ವಿಕಲಚೇತನರ, ಅನಾಥರ, ಬಡವರ,ವಯೋವ್ರದ್ಧರ, ಮಾನಸಿಕ ಅಸ್ವಸ್ಥರ ಹಾಗೂ ವಿಧವೆಯರ ನೆಮ್ಮದಿಯ ಅವಾಸ ಸ್ಥಾನವಾಗಿದೆ.[೧]

ಭೂಗೋಳ[ಬದಲಾಯಿಸಿ]

ಸಿಯೋನ್ ಆಶ್ರಮ ತಲುಪಬೇಕೆಂದರೆ ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ಗ್ರಾಮಕ್ಕೆ ಬರಬೇಕು.ಮಂಗಳೂರು ಮೂಲಕ ಉಜಿರೆಗೆ ಬಂದಿಳಿದರೆ, ೨೦ಕೀ.ಮಿ ಅಂತರದಲ್ಲಿ,ಸ್ವಚಂದವಾದ ಪ್ರಕ್ರತಿಯ ಮಡಿಲಲ್ಲಿ ನೊಂದವರ ದೇಗುಲ ವೆಂದೆ ಪ್ರಸಿದ್ದವಾದ ಸಿಯೋನ್ ಆಶ್ರಮದ ದರ್ಶನವಾಗುತ್ತದೆ.[೨] ಉಜಿರೆಯಿಂದ ಚಾರ್ಮಾಡಿಗೆ ಹೋಗುವ ರಸ್ತೆಯಲ್ಲಿ ಕಕ್ಕಿಂಜೆ ಎಂಬ ಊರು ಸಿಗುತ್ತದೆ.ಅಲ್ಲಿಂದ ಸಾಕಷ್ಟು ಜೀಪ್ ಗಳು,ಸಮಯಕ್ಕೆನುಸಾರವಾಗಿ ಸರಕಾರಿ ಬಸ್ಸುಗಳು ಇಲ್ಲಿಗೆ ತಲುಪಲು ಲಭ್ಯವಿರುತ್ತವೆ.

ಇತಿಹಾಸ[ಬದಲಾಯಿಸಿ]

ಪರೋಪಕಾರವೇ ಪರಮ ಧರ್ಮವೆಂದು ನಂಬಿರುವ, ಹಗಲಿರುಳು ನೊಂದವರ ಸೇವೆಗಾಗಿ ತನ್ನ ಜೀವನವನ್ನು ಮುಡುಪಾಗಿಟ್ಟಿರುವ ಯು.ಸಿ.ಪೌಲೋಸ್,[೩] ಈ ಆಶ್ರಮದ ಸ್ಥಾಪಕದಾತರು. ಇಂತಹ ಆಶ್ರಮದ ಸ್ಥಾಪನೆಯ ಹಿಂದೆ ಮಾರ್ಮಿಕ ಕಥೆಯಿದೆ. ತನ್ನೊಂದು ಕಾರ್ಯದ ನಿಮಿತ್ತ ಕೇರಳಕ್ಕೆ ಬಂದಿದ್ದ ಯು.ಸಿ.ಪೌಲೋಸ್ ರೈಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತಿದ್ದಾಗ ಒಬ್ಬ ಮಾನಸಿಕ ಅಸ್ವಸ್ಥ ತನ್ನ ಹಸಿವನ್ನು ತಾಳಲಾರದೆ, ಕಸದ ತೊಟ್ಟಿಯಲ್ಲಿ ಎಸೆದ ಅಳಿದುಳಿದ ಪದಾರ್ಥವನ್ನು ತಿನ್ನುವ ದ್ರಶ್ಯವನ್ನು ಕಂಡರು. ಸೂಕ್ಷ ಸ್ವಭಾವದ ಪೌಲೋಸ್ ರ ಮೇಲೆ ಈ ಘಟನೆ ಮಾನಸಿಕ ಆಘಾತವನ್ನೆಸೆಗಿತ್ತು. ತಕ್ಷಣ ಅಲ್ಲಿಂದ ಹಿಂತಿರುಗಿದ ಪೌಲೋಸ್ ತನ್ನ ಸಹಧರ್ಮಿಣಿಯಲ್ಲಿ ನಡೆದ ವಿಚಾರ ತಿಳಿಸಿದರು. ತಮ್ಮ ಬಡತನದ ನಡುವೆಯು ಸಮಾಜದ ಅತ್ಯಂತ ಶೋಷಿತರ ಪಾಲನೆಗಾಗಿ ಪಣತೊಟ್ಟ ಪೌಲೋಸ್ ದಂಪತಿಗಳು ೧೯೯೯ರಲ್ಲಿ ಸಿಯೋನ್ ಆಶ್ರಮ ಸ್ಥಾಪಿಸಿದರು.

ಆಶ್ರಮದ ಚಟುವಟಿಕೆಗಳು[ಬದಲಾಯಿಸಿ]

ಬದುಕಿನ ಲಯವೇ ತಪ್ಪಿ ಹೋಗಿ, ಅಲ್ಲಲ್ಲಿ ಮಿಸುಕಾಡುವ ಜೀವಗಳನ್ನು ಮನುಷ್ಯರನ್ನಾಗಿ ಮಾಡಿ, ಅವರಿಗೆ ಎಲ್ಲಾ ಸ್ಥಾನ-ಮಾನ, ಘನತೆಯನ್ನು ತಂದು ಕೊಡಲು ಅನುಕ್ಷಣವು ಹೋರಾಡುತ್ತಿರುವ ಪೌಲೋಸ್ ದಂಪತಿಗಳ ತಾಳ್ಮೆಯನ್ನು ಮೆಚ್ಚಲೆಬೇಕು. ಇಲ್ಲಿರುವ ಪ್ರತಿಯೊಬ್ಬರು ಜೀವನದಲ್ಲಿ ಏರುಪೇರುಗಳನ್ನು ಕಂಡವರು.ಇವರಲ್ಲಿ ಜಾತಿಭೇದವಿಲ್ಲ, ಮೇಲು-ಕೀಳು ಎಂಬ ತಾರತಮ್ಯವಿಲ್ಲ. ತಮಗಾದ ಅನ್ಯಾಯ-ಅವಘಡಗಳ ಬಗ್ಗೆ ನೋವಿದ್ದರೂ ಅದೆಲ್ಲವನ್ನು ಮೆಟ್ಟಿನಿಲ್ಲಬೇಕು ಎಂಬ ಛಲ ಇವರಲ್ಲಿದೆ. ಸಿಯೋನ್ ಇಂತಹ ವಿಕಲಚೇತನರಿಗೆ ಬದುಕಲು ಬೇಕಾದ ಎಲ್ಲಾ ರೀತಿಯ ಜೀವನ ಶಿಕ್ಷಣದೊಂದಿಗೆ ಕರಕುಶಲ ತರಬೇತಿಯನ್ನೂ ನೀಡುತ್ತಿದೆ. ನಾವು ಆಶ್ರಮದ ಒಳಹೊಕ್ಕರೆ,ವಿಕಲಚೇತನರು ಒಂದೆಡೆ ಕಾಣಸಿಕ್ಕರೆ, ಇನ್ನೊಂದೆಡೆ ಅವರು (ಗುಣ ಮುಖರಾದ) ಬಿಡಿಸಿದ ಸುಂದರ ಚಿತ್ರಗಳು, ವಿವಿಧ ಬಗೆಯ ಗೊಂಬೆಗಳು, ಆಟಿಕೆಗಳು, ಮೇಣದ ಬತ್ತಿಗಳು ಕಾಣ ಸಿಗುತ್ತವೆ. ಇವು ಅಲ್ಲದೆ ಟೈಲರಿಂಗ್, ಸ್ಟಿಚ್ಚಿಂಗ್, ಹೈನುಗಾರಿಕೆ,ತೋಟಗಾರಿಕೆ ಕೆಲಸದಲ್ಲಿ ತೊಡಗಿದವರನ್ನು ನೋಡಬಹುದು.

ಇಲ್ಲಿ ಪ್ರತಿ ವಾರ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಗುಣಮುಖರಾದ ಆಶ್ರಮದ ಸದಸ್ಯರಿಂದ ಉಳಿದ ಸದಸ್ಯರಿಗೆ ಆಯೋಜಿಸಲಾಗುತ್ತದೆ.ಪ್ರತಿ ಹಬ್ಬವನ್ನು ಸರಳವಾಗಿ, ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿ ದಿನ ಯೋಗ,ಕ್ರೀಡೆ, ವ್ಯಾಯಾಮ ಮತ್ತು ಭಗವಂತನ ಸ್ಮರಣೆ ಇಲ್ಲಿನ ಆಶ್ರಮವಾಸಿಗಳ ನಿತ್ಯ ಕಾಯಕ. ತಿಂಗಳಿಗೊಮ್ಮೆ ದಾನಿಗಳಿಂದ ವಿಶೇಷ ಬೋಜನ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಪ್ರತಿ ರೋಗಿಗಳ ಹುಟ್ಟುಹಬ್ಬದ ಆಚರಣೆ ಇನ್ನೊಂದು ವಿಶೇಷತೆ.ಪೈಟಿಂಗ್, ಸಂಗೀತ, ಇಂಗ್ಲೀಷ್ ತರಗತಿಗಳು ಆಸಕ್ತರಿಗೆ. ಸಂಪೂರ್ಣ ಗುಣಮುಖರಾದ ಮಹಿಳಾ ಸದಸ್ಯರಿಂದ ಅಂಗವಿಕಲ ಮಕ್ಕಳ ಆರೈಕೆ.

ಆಶ್ರಮದ ಕಾರ್ಯವಿಸ್ತಾರ[ಬದಲಾಯಿಸಿ]

  1. ಸಿಯೋನ್ ಮಾನಸಿಕ ಆಸ್ಪತ್ರೆ

ಸುಮಾರು ೧೯೦ ಬೆಡ್ ಗಳನ್ನು ಹೊಂದಿರುವ ಸಿಯೋನ್ ಮಾನಸಿಕ ಆಸ್ಪತ್ರೆ ವಿವಿಧ ತರಹದ ಮಾನಸಿಕ ತೊಂದರೆಗಳ ರೋಗಿಗಳನ್ನು ಗುಣಮುಖವಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.ಇದುವರೆಗೆ ಸುಮಾರು ೫೦೭ ಮಾನಸಿಕ ಅಸ್ವಸ್ಥ ರೋಗಿಗಳು ಮನೆಗೆ ಹಿಂತಿರುಗಿ ಸುಂದರ ಜೀವನ ನಡೆಸುತ್ತಿದ್ದಾರೆ. ಈ ಮಾನಸಿಕ ಆಸ್ಪತ್ರೆಯಲ್ಲಿ ನುರಿತ ವೈದ್ಯರ ಸೌಲಭ್ಯವಿದ್ದು, ಸಕಲ ವೈದ್ಯಕೀಯ ಸೌಕರ್ಯಗಳನ್ನು ಒಳಗೊಂಡಿದೆ. ವಿವಿಧ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಮಾನಸಿಕ ತಜ್ಞರು, ರೋಗಿಗಳ ರೋಗದ ತೀವ್ರತೆಗಣುಗುಣವಾ#ಗಿ ಚಿಕಿತ್ಸೆಯನ್ನು ನೀಡುತ್ತಾರೆ.

  1. ಲಿಟಲ್ ಫ್ಲವರ್ ಶಾಲೆ

ಗಂಡಿಬಾಗಿಲಿನ ಆಶ್ರಮದಲ್ಲಿ ದಿನದಿಂದ ದಿನಕ್ಕೆ ನೊಂದವರ ಸಂಖ್ಯೆಯನ್ನು ಹೆಚ್ಚುದನ್ನ ಗಮನಿಸಿದ ಪೌಲೋಸ್, ಆಶ್ರಮದ ಮಕ್ಕಳಿಗಾಗಿ ಕಾರ್ಕಳದಲ್ಲಿ ಲಿಟಲ್ ಫ್ಲವರ ಎಂಬ ಇಂಗ್ಲೀಷ್ ಮಾಧ್ಯಮ ಶಾಲೆಯನ್ನು ಪ್ರಾರಂಬಿಸಿದರು. ಅಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ, ಜೀವನ ತರಬೇತಿಯನ್ನು ನೀಡಲಾಗುತ್ತಿದೆ. ಪ್ರಸ್ತುತ ಈ ಶಾಲೆಯಲ್ಲಿ ೩೦೦ ವಿದ್ಯಾರ್ಥಿಗಳು ವಿದ್ಯಾರ್ಜನೆಗಯೈತಿದ್ದಾರೆ. ಸಿಯೋನ್ ಆಶ್ರಮ ವಿದ್ಯಾರ್ಥಿಗಳನ್ನು ಪ್ರಾಥಮಿಕ ಹಾಗೂ ಫೌಢಶಿಕ್ಷಣಕ್ಕೆ ಸೀಮಿತಗೊಳಿಸದೆ, ಕೆಲವು ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೂ ಸಹಾಯ ನೀಡುತ್ತಿದೆ. ವಿದ್ಯಾರ್ಥಿ ದತ್ತು ಕಾರ್ಯಕ್ರಮದಡಿಯಲ್ಲಿ ಸ್ಥಳೀಯ ೩೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್, ಪುಸ್ತಕ, ಪೆನ್ನು,ಫೀಗಳ ರೂಪದಲ್ಲಿ ಸಹಕರಿಸುತ್ತದೆ.

  1. ಸಿಯೋನ್ ಸ್ವ-ಸಹಾಯ ಸಂಘಗಳ ಒಕ್ಕೂಟ

ಸ್ಥಳೀಯ ಜನತೆಯಲ್ಲಿ ಆರ್ಥಿಕ ಭದ್ರತೆಯನ್ನು ಗಟ್ಟಿಪಡಿಸುವ ನೆಲೆಯಲ್ಲಿ ಸಿಯೋನ್ ಸ್ವ-ಸಹಾಯ ಸಂಘಗಳ ಒಕ್ಕೂಟ ವನ್ನು ಸ್ಥಾಪಿಸಲಾಯಿತು. ಪ್ರಸ್ತುತ ೧೩೦ ಗುಂಪುಗಳಿದ್ದು, ೧೪೭೩ ಜನ ಆರ್ಥಿಕ ಸಭಲೀಕರಣದ ಸುಲಭ ಉಪಾಯ ಕಂಡುಕೊಂಡಿದ್ದಾರೆ.

ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ‍ಗಳು[ಬದಲಾಯಿಸಿ]

ಸಿಯೋನ್ ಆಶ್ರಮ ವಿದೇಶಿ ವಿದ್ಯಾರ್ಥಿಗಳನ್ನು ಇಲ್ಲಿಗೆ ವಿದ್ಯಾಭ್ಯಾಸಕ್ಕಾಗಿ ಆಕರ್ಷಿಸುತಿದ್ದು,ಹಲವು ದೇಶಗಳಿಂದ ವಿದ್ಯಾರ್ಥಿಗಳು, ಇಲ್ಲಿಗೆ ಬಂದು ಅಧ್ಯಯನ ಪೂರೈಸಿ ತೆರಳುತ್ತಾರೆ. ಸ್ಥಳೀಯ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತ್ತಕೋತ್ತರ ಕಾಲೇಜಿನ ಸಮಾಜ ಕಾರ್ಯ ನಿಕಾಯದ ವಿದ್ಯಾರ್ಥಿಗಳು ಈ ಆಶ್ರಮದಲ್ಲಿ ಬಾಹ್ಯ ವಿದ್ಯಾಭ್ಯಾಸವನ್ನು ಪಡೆಯುತ್ತಾರೆ

ಪ್ರಶಸ್ತಿಗಳು[ಬದಲಾಯಿಸಿ]

ತನ್ನ ಜೀವನವನ್ನೆ ಮನುಕಲದ ಸೇವೆಗಾಗಿ ಮೀಸಲಿಟ್ಟ ಯು.ಸಿ.ಪೌಲೋಸ್ ರವರಿಗೆ ವಿವಿಧ ಸಂಘ ಸಂಸ್ಥೆಗಳು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ಛಾಯಾಚಿತ್ರಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. http://www.deccanherald.com/content/508431/with-hope-care.html
  2. http://www.seonashram.in/
  3. http://www.daijiworld.com/chan/sponsors_view.asp?s_id=3364