ವಿಷಯಕ್ಕೆ ಹೋಗು

ಸಿಟಿ ಪ್ಯಾಲೇಸ್, ಜೈಪುರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿಟಿ ಪ್ಯಾಲೇಸ್‍ನ ಮುಂಪಾರ್ಶ್ವ


ಸಿಟಿ ಪ್ಯಾಲೇಸ್, ಜೈಪುರ್ ಅರಮನೆಯನ್ನು ಜೈಪುರ್ ನಗರವನ್ನು ಸ್ಥಾಪಿಸಿದ ಸಮಯದಲ್ಲೇ ಸ್ಥಾಪಿಸಲಾಯಿತು. 1727 ರಲ್ಲಿ ತನ್ನ ಆಸ್ಥಾನವನ್ನು ಅಂಬರ್‌ನಿಂದ ಜೈಪುರ್‌ಗೆ ಸ್ಥಳಾಂತರಿಸಿದ ಮಹಾರಾಜ ಸವಾಯಿ ಜೈ ಸಿಂಗ್ II ಇದನ್ನು ಸ್ಥಾಪಿಸಿದನು.[] ಜೈಪುರ ಇಂದಿನ ರಾಜಸ್ಥಾನದ ರಾಜಧಾನಿಯಾಗಿದ್ದು, 1949 ರವರೆಗೆ ಸಿಟಿ ಪ್ಯಾಲೇಸ್ ಜೈಪುರದ ಮಹಾರಾಜನ ಅಧಿಕೃತ ಮತ್ತು ಆಡಳಿತ ಪೀಠವಾಗಿತ್ತು. ಈ ಅರಮನೆಯು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಥಳವೂ ಆಗಿತ್ತು, ಜೊತೆಗೆ ಕಲೆ, ವಾಣಿಜ್ಯ ಮತ್ತು ಉದ್ಯಮದ ಆಶ್ರಯತಾಣವೂ ಆಗಿತ್ತು. ಇದು ಈಗ ಎರಡನೇ ಮಹಾರಾಜ ಸವಾಯಿ ಮನ್ ಸಿಂಗ್ ಸಂಗ್ರಹಾಲಯವನ್ನು ಹೊಂದಿದೆ ಮತ್ತು ಜೈಪುರ್ ರಾಜಮನೆತನದ ನಿವಾಸವಾಗಿ ಮುಂದುವರೆದಿದೆ. ಜೈಪುರದ ರಾಜಮನೆತನವು ಭಗವಾನ್ ರಾಮನ ವಂಶಸ್ಥರು ಎಂದು ಹೇಳಲಾಗುತ್ತದೆ. ಅರಮನೆ ಸಂಕೀರ್ಣವು ಹಲವಾರು ಕಟ್ಟಡಗಳು, ವಿವಿಧ ಪ್ರಾಂಗಣಗಳು, ದ್ವಾರಮಂಟಪಗಳು, ರೆಸ್ಟೋರೆಂಟ್‌ಗಳು ಮತ್ತು ವಸ್ತುಸಂಗ್ರಹಾಲಯ ನ್ಯಾಸದ ಕಚೇರಿಗಳನ್ನು ಹೊಂದಿದೆ. ಮಹಾರಾಜ ಸವಾಯಿ ಮಾನ್ ಸಿಂಗ್ ಸಂಗ್ರಹಾಲಯ ನ್ಯಾಸವು ವಸ್ತುಸಂಗ್ರಹಾಲಯವನ್ನು ಮತ್ತು ಅರಸೊತ್ತಿಗೆಯ ಸ್ಮಾರಕಗಳನ್ನು (ಛತ್ರಿ ಎಂದು ಕರೆಯಲ್ಪಡುತ್ತವೆ) ನೋಡಿಕೊಳ್ಳುತ್ತದೆ.

ವಾಸ್ತುಕಲೆ

[ಬದಲಾಯಿಸಿ]

ಚಂದ್ರ ಮಹಲ್, ಮುಬಾರಕ್ ಮಹಲ್, ಶ್ರೀ ಗೋವಿಂದ್ ದೇವ್ ದೇವಸ್ಥಾನ ಮತ್ತು ಸಿಟಿ ಪ್ಯಾಲೇಸ್ ಸಂಗ್ರಹಾಲಯ ಅರಮನೆ ಸಂಕೀರ್ಣದಲ್ಲಿನ ಅತ್ಯಂತ ಪ್ರಮುಖ ಮತ್ತು ಹೆಚ್ಚು ಭೇಟಿ ನೀಡಲಾಗುವ ರಚನೆಗಳಾಗಿವೆ.

ಗೋವಿಂದ್ ದೇವ್ ಜಿ ದೇವಸ್ಥಾನ

[ಬದಲಾಯಿಸಿ]

ಇದು ಹಿಂದೂ ದೇವರು ಭಗವಾನ್ ಕೃಷ್ಣನಿಗೆ ಸಮರ್ಪಿತವಾಗಿದೆ.

ಪ್ರವೇಶ ದ್ವಾರಗಳು

[ಬದಲಾಯಿಸಿ]
ರಾಜೇಂದ್ರ ಪೋಲ್

ಜಲೇಬ್ ಚೌಕ್ ಹತ್ತಿರದ ಉದಯ್ ಪೋಲ್, ಜಂತರ್ ಮಂತರ್ ಹತ್ತಿರದ ವೀರೇಂದ್ರ ಪೋಲ್, ಮತ್ತು ತ್ರಿಪೋಲಿಯಾ ಸಿಟಿ ಪ್ಯಾಲೇಸ್‍ನ ಮೂರು ಮುಖ್ಯ ಪ್ರವೇಶದ್ವಾರಗಳಾಗಿವೆ.

ಸಭಾ ನಿವಾಸ್ (ದಿವಾನ್-ಎ-ಆಮ್)

[ಬದಲಾಯಿಸಿ]
ಸಭಾ ನಿವಾಸ್

ಮೊಘಲ್ ಪ್ರೇಕ್ಷಕರ ಸಭಾಂಗಣದ ಮಾದರಿಯಲ್ಲಿ ರೂಪಿಸಲಾದ ದಿವಾನ್-ಎ-ಆಮ್, ಸಭಾ ನಿವಾಸ್ ಸಾರ್ವಜನಿಕ ಪ್ರೇಕ್ಷಕರ ಸಭಾಂಗಣವಾಗಿದೆ. ಇದು ಅಮೃತಶಿಲೆಯ ಸ್ತಂಭಗಳ ಮೇಲೆ ಆಧಾರಿತವಾದ ಅನೇಕ ಬಿಂದುಗಳುಳ್ಳ ಕಮಾನುಗಳು ಮತ್ತು ಸುಂದರವಾಗಿ ಚಿತ್ರಿಸಲ್ಪಟ್ಟ ಪ್ಲ್ಯಾಸ್ಟರ್ ಚಾವಣಿಯನ್ನು ಹೊಂದಿದೆ.

ಸರ್ವತೋ ಭದ್ರಾ ( ದಿವಾನ್-ಎ-ಖಾಸ್ )

[ಬದಲಾಯಿಸಿ]
ಸರ್ವತೋ ಭದ್ರಾ
ಎಡಕ್ಕೆ: ಸರ್ವತೋ ಭದ್ರಾ. ಬಲಕ್ಕೆ: ಗಂಗಾಜಾಲಿ (ಬೆಳ್ಳಿಯ ಬೂದಿಗಡಿಗೆ)

ಸರ್ವತೋ ಭದ್ರಾ ಒಂದು ವಿಶಿಷ್ಟ ವಾಸ್ತುಕಲಾ ರೂಪವಾಗಿದೆ. ಈ ಅಸಾಮಾನ್ಯ ಹೆಸರು ಕಟ್ಟಡದ ರೂಪವನ್ನು ಸೂಚಿಸುತ್ತದೆ: ಸರ್ವತೋ ಭದ್ರಾ ಒಂದೇ ಅಂತಸ್ತಿನ, ಚೌಕಾಕಾರದ, ತೆರೆದ ಸಭಾಂಗಣವಾಗಿದ್ದು, ನಾಲ್ಕು ಮೂಲೆಗಳಲ್ಲಿ ಸುತ್ತುವರಿಯಲ್ಪಟ್ಟ ಕೊಠಡಿಗಳನ್ನು ಹೊಂದಿದೆ.[]

ಪ್ರೀತಮ್ ನಿವಾಸ್ ಚೌಕ್

[ಬದಲಾಯಿಸಿ]

ಇದು ಒಳ ಪ್ರಾಂಗಣವಾಗಿದ್ದು, ಚಂದ್ರ ಮಹಲ್‌ಗೆ ಪ್ರವೇಶವನ್ನು ಒದಗಿಸುತ್ತದೆ.

ಚಂದ್ರ ಮಹಲ್

[ಬದಲಾಯಿಸಿ]
ಸರ್ವತೋ ಭದ್ರಾ ಪ್ರಾಂಗಣದಿಂದ ಚಂದ್ರ ಮಹಲ್‍ನ ನೋಟ. ಮೇಲ್ಭಾಗದಲ್ಲಿ ರಾಜಮನೆತನದ ಧ್ವಜವನ್ನು ನೋಡಬಹುದು.

ಚಂದ್ರ ಮಹಲ್ ಸಿಟಿ ಪ್ಯಾಲೇಸ್ ಸಂಕೀರ್ಣದ ಅತ್ಯಂತ ಹಳೆಯ ಕಟ್ಟಡಗಳಲ್ಲಿ ಒಂದು. ಇದು ಏಳು ಅಂತಸ್ತುಗಳನ್ನು ಹೊಂದಿದೆ, ಸಂಖ್ಯೆ ಏಳನ್ನು ರಜಪೂತ ಅರಸರು ಮಂಗಳಕರವೆಂದು ಪರಿಗಣಿಸುತ್ತಿದ್ದರು.

ಎಡಕ್ಕೆ: ಜಲ್ ನಿವಾಸ್ ಉದ್ಯಾನದಿಂದ ಚಂದ್ರ ಮಹಲ್, ೧೮೮೫. ಬಲಕ್ಕೆ: ಈಗ ಪ್ರೀತಮ್ ನಿವಾಸ್ ಚೌಕ್‍ನಿಂದ ಚಂದ್ರ ಮಹಲ್.

ಮುಬಾರಕ್ ಮಹಲ್

[ಬದಲಾಯಿಸಿ]
ಮುಬಾರಕ್ ಮಹಲ್

ಸಿಟಿ ಪ್ಯಾಲೇಸ್‌ನಲ್ಲಿರುವ ಮುಬಾರಕ್ ಮಹಲ್ ಪ್ರಾಂಗಣವನ್ನು 1900 ರ ಇತ್ತೀಚೆಗೆ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಯಿತು.

ಗಡಿಯಾರ ಗೋಪುರ

[ಬದಲಾಯಿಸಿ]
ಕ್ಲಾಕ್ ಟವರ್, ಸಿಟಿ ಪ್ಯಾಲೇಸ್, ಜೈಪುರ

ಗಡಿಯಾರ ಗೋಪುರವು ಸಭಾ ನಿವಾಸ್‌ನ ದಕ್ಷಿಣಕ್ಕಿರುವ ಒಂದು ರಚನೆಯಾಗಿದೆ. 1873 ರಲ್ಲಿ ಮೊದಲೇ ಅಸ್ತಿತ್ವದಲ್ಲಿದ್ದ ಗೋಪುರದಲ್ಲಿ ಗಡಿಯಾರವನ್ನು ಸ್ಥಾಪಿಸಿದ್ದರಿಂದ ಇದು ರಜಪೂತ ಆಸ್ಥಾನದಲ್ಲಿ ಐರೋಪ್ಯ ಪ್ರಭಾವದ ಸಂಕೇತವಾಗಿದೆ.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Sachdev, Vibhuti (2008). Jaipur City Palace. Tillotson, G. H. R. (Giles Henry Rupert), 1960–, Chowdhury, Priyanka., Chowdhary, Eman. New Delhi: Lustre Press, Roli Books. p. 7. ISBN 8174365699. OCLC 276406345.
  2. Sachdev, Vibhuti (2008). Jaipur City Palace. Tillotson, G. H. R. (Giles Henry Rupert), 1960–, Chowdhury, Priyanka., Chowdhary, Eman. New Delhi: Lustre Press, Roli Books. ISBN 8174365699. OCLC 276406345.

ಉಲ್ಲೇಖಗಳು

[ಬದಲಾಯಿಸಿ]

ಹೆಚ್ಚಿನ ಓದಿಗೆ

[ಬದಲಾಯಿಸಿ]