ಸಿಂಹುಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿಂಹುಲಿ

ಸಿಂಹುಲಿ (ಆಂಗ್ಲ:Liger) ಗಂಡು ಸಿಂಹ ಮತ್ತು ಹೆಣ್ಣು ಹುಲಿಯ ಸಂತತಿ. ಇದು ಬೆಕ್ಕಿನ ಜಾತಿಯಲ್ಲಿಯ ಅತಿ ದೊಡ್ಡ ಗಾತ್ರದ ಪ್ರಾಣಿ. ಇದು ಹುಲಿಯಂತೆ ಪಟ್ಟಿಗಳನ್ನು ಹೊಂದಿದ್ದು, ಸಿಂಹದ ದೊಡ್ಡ ದೇಹವನ್ನು ಸಹ ಹೊಂದಿದೆ.

ಗಂಡು ಸಿಂಹುಲಿ(ಲೈಗರ್ )ಗೆ ಸಂತಾನೋತ್ಪಾದನಾಶಕ್ತಿಯನ್ನು ಹೊಂದಿರುವುದಿಲ್ಲ.ಹೆಣ್ಣು ಸಿಂಹುಲಿ (ಲೈಗ್ರೆಸ್ )ಗೆ ಇದು ಸಾಧ್ಯ. ಸಿಂಹಕ್ಕೆ ನೀರಿನಲ್ಲೀಜಲು ಆಗುವುದಿಲ್ಲ; ಹುಲಿ ನೀರಿನಲ್ಲಿ ಈಜಬಲ್ಲದು. ಸಿಂಹುಲಿಯೂ ಸಹ ನೀರಿನಲ್ಲಿ ಈಜಬಲ್ಲದು. ಸಿಂಹುಲಿ ತನ್ನ ಜೀವನದುದ್ದಕ್ಕೂ ಗಾತ್ರದಲ್ಲಿ ಬೆಳೆಯುತ್ತಿರಲು ಕಾರಣ ತಂದೆ ಸಿಂಹ ಹಾಗೂ ತಾಯಿ ಹುಲಿಯ ಶರೀರದಲ್ಲಿ ಬೆಳವಣಿಗೆಯನ್ನು ನಿಯಂತ್ರಿಸುವಂತಹ ಜೀನುಗಳು ಇಲ್ಲದಿರುವುದು. ಅಮೆರಿಕೆಯ ಒಂದು ಪ್ರಾಣಿ ಸಂಗ್ರಹಾಲಯವೊಂದರಲ್ಲಿ ಅರಿಯಾನಾ ಎಂಬ ಹೆಣ್ಣು ಸಿಂಹುಲಿಯನ್ನು ಸಾಕಲಾಗಿದೆ. ಇದು ಒಂದು ಹೊತ್ತಿಗೆ 23 ಕಿಲೋ ಮಾಂಸವನ್ನು ಕಬಳಿಸುತ್ತದೆಯಂತೆ. ತನ್ನನ್ನು ಸಾಕುವಾತನ ಬಗ್ಗೆ ಪ್ರೀತಿಯುಂಟಂತೆ; ಜೊತೆಗೆ ಸ್ವಲ್ಪ ತುಂಟಾಟದ ಪ್ರವೃತ್ತಿಯನ್ನು ತೋರುತ್ತದೆಯಂತೆ.

"https://kn.wikipedia.org/w/index.php?title=ಸಿಂಹುಲಿ&oldid=317577" ಇಂದ ಪಡೆಯಲ್ಪಟ್ಟಿದೆ