ಸಾ.ಶಿ.ಮರುಳಯ್ಯ

ವಿಕಿಪೀಡಿಯ ಇಂದ
Jump to navigation Jump to search

ಸಾ.ಶಿ. ಮರುಳಯ್ಯ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು.

ಜನನ[ಬದಲಾಯಿಸಿ]

ಸಾ.ಶಿ. ಮರುಳಯ್ಯನವರು (28-01-1931 / 05-02-2016) ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಸಾಸಲು ಗ್ರಾಮದಲ್ಲಿ 1931ರಲ್ಲಿ ಜನಿಸಿದರು. ತಂದೆ ಶಿವರುದ್ರಯ್ಯ, ತಾಯಿ ಸಿದ್ದಮ್ಮ.

ಶಿಕ್ಷಣ[ಬದಲಾಯಿಸಿ]

ಪ್ರಾಥಮಿಕ ವಿದ್ಯಾಭ್ಯಾಸ ಸಾಸಲು ಗ್ರಾಮದಲ್ಲಿ. ಕಾಲೇಜು ಕಲಿತಿದ್ದು ಚಿತ್ರದುರ್ಗದಲ್ಲಿ. ಇಂಟರ್‌ಮೀಡಿಯಟ್‌ ಮುಗಿಸಿ ಮ್ಯಾಂಗನೀಸ್ ಗಣಿಯ ಕಂಟ್ರಾಕ್ಟರ್ ಬಳಿ ಕೆಲಕಾಲ ಗುಮಾಸ್ತರಾಗಿ ಕೆಲಸ ಮಾಡಿದರು.ಕೂಡಿಟ್ಟ ಹಣದಿಂದ ಸ್ನಾತಕೋತ್ತರ ಪದವಿ ಪಡೆಯಲು ಮೈಸೂರಿಗೆ ಬಂದ ಸಾ.ಶಿ.ಮ ಅವರಿಗೆ ಬಿ.ಎ ಆನರ್ಸ್‌ನಲ್ಲಿ ಡಿ.ಎಲ್.ಎನ್, ತ.ಸು.ಶಾಮರಾಯ, ಎಸ್.ವಿ.ಪರಮೇಶ್ವರ ಭಟ್ಟ, ಎಸ್.ವಿ.ರಂಗಣ್ಣ, ಕುವೆಂಪು, ದೇಜಗೌ ರಂಥ ವಿದ್ವಾಂಸರ ಮಾರ್ಗದರ್ಶನ ದೊರೆಯಿತು. ಎಂ.ಎ. ಓದಲು ಅಡಚಣೆಯಾಗಿ ಮತ್ತೆ ಉದ್ಯೋಗಕ್ಕೆ ಸೇರಿದರು. ಚಾಮರಾಜನಗರ ಕಾಲೇಜಿನ ಅರೆಕಾಲಿಕ ಶಿಕ್ಷಕರಾಗಿ ಕೆಲ ಕಾಲ ಕಾರ್ಯನಿರ್ವಹಿಸಿದರು. ನಂತರ ಇವರು 1956 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಪದವಿಯನ್ನು 1971 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ 'ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ' ಕುರಿತ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ. ಪದವಿಯನ್ನೂ ಪಡೆದರು.

ಬೋಧನಾ ವೃತ್ತಿ ಮತ್ತು ಸಾಹಿತ್ಯ ಸೇವೆ[ಬದಲಾಯಿಸಿ]

 • ಅವರು ಎಂ.ಎ ಪೂರ್ಣಗೊಳಿಸಿ ತುಮಕೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಾಮರಾಜನಗರ, ಚನ್ನಪಟ್ಟಣ, ಮಂಗಳೂರು, ಬೆಂಗಳೂರುಗಳ ಕಾಲೇಜುಗಳಲ್ಲಿ ಅಧ್ಯಾಪಕರಾಗಿ,ಬೋಧನಾ ವೃತ್ತಿ ಮುಂದುವರಿಸಿದರು. ಪ್ರಾಂಶುಪಾಲರಾಗಿ, ಪ್ರವಾಚಕರಾಗಿ,ಪ್ರಾಧ್ಯಾಪಕರಾಗಿ,ಮೂವತ್ತು ವರ್ಷಗಳ ಬೋಧನಾನುಭವವನ್ನು ಹೊಂದಿದ್ದಾರೆ. ಜೊತೆಗೆ ಆಡಳಿತಾನುಭವವನ್ನು ಹೊಂದಿರುವ ಅವರ ಅಧ್ಯಯನ - ಬರವಣಿಗೆಗಳಲ್ಲಿ ಆಳ ಹರಹುಗಳಿವೆ. ವಿಷಯ ವೈವಿಧ್ಯಮಯವಾದದ್ದು ಅಂದರೆ ಕಾವ್ಯ, ಪ್ರಹಸನ, ಜೀವನ ಚಿತ್ರಣ, ಕಾದಂಬರಿ, ಸಣ್ಣಕಥೆ, ನಾಟಕ, ವಿಮರ್ಶೆ, ಸಂಶೋಧನೆ, ಜಾನಪದ, ವ್ಯಾಕರಣ ಮುಂತಾದ ಪ್ರಕಾರಗಳಲ್ಲಿ ತೊಂಬತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
 • 1995ರಿಂದ 1998ರವರೆಗೆ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ರಾಜ್ಯಭಾಷಾ ಆಯೋಗದ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದರು.

ಕೃತಿಗಳು[ಬದಲಾಯಿಸಿ]

ಅವರು 40ಕ್ಕೂ ಹೆಚ್ಚು ನೃತ್ಯ ರೂಪಕಗಳನ್ನು ರಚಿಸಿದ್ದಾರೆ ಕನ್ನಡದಲ್ಲಿ ವಿಶಿಷ್ಟ ಪರಂಪರೆಯನ್ನು ಹುಟ್ಟಿಹಾಕಿದರು.

ಅವರ ಪ್ರಮುಖ ಕೃತಿಗಳು:

ಕಾವ್ಯ[ಬದಲಾಯಿಸಿ]

 1. ಶಿವತಾಂಡವ
 2. ಕೆಂಗನಕಲ್ಲು
 3. ರಾಸಲೀಲೆ
 4. ರೂಪಸಿ

ಕಾದಂಬರಿ[ಬದಲಾಯಿಸಿ]

 1. ಪುರುಷಸಿಂಹ
 2. ಹೇಮಕೂಟ
 3. ಸಾಮರಸ್ಯದ ಶಿಲ್ಪ
 4. ನಟ್ಯ ಮಯೂರಿ

ನಾಟಕ[ಬದಲಾಯಿಸಿ]

 1. ವಿಜಯವಾತಾಪಿ
 2. ಎರಡು ನಾಟಕಗಳು
 3. ಮರೀಬೇಡಿ

ಕಥಾಸಂಕಲನ[ಬದಲಾಯಿಸಿ]

 1. ನೆಲದ ಸೊಗಡು

ಸಂಶೋಧನಾ ಕೃತಿಗಳು[ಬದಲಾಯಿಸಿ]

 1. ವಚನ ವೈಭವ
 2. ಸ್ಪಂದನ
 3. ಅವಲೋಕನ

ವಿಮರ್ಶೆ[ಬದಲಾಯಿಸಿ]

 1. ಮಾಸ್ತಿಯವರ ಕಾವ್ಯಸಮೀಕ್ಷೆ
 2. ಅಭಿವ್ಯಕ್ತ
 3. ಅನುಶೀಲನ

ಪ್ರಶಸ್ತಿಗಳು[ಬದಲಾಯಿಸಿ]

 • ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ
 • ರಾಜ್ಯೋತ್ಸವ ಪ್ರಶಸ್ತಿ
 • ದೇವರಾಜ ಬಹದ್ದೂರ್ ಪ್ರಶಸ್ತಿ
 • ಎಚ್.ನರಸಿಂಹಯ್ಯ ಪ್ರಶಸ್ತಿ
 • ‘ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ’ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಸಂದಿತ್ತು.

ವಿಧಿವಶ[ಬದಲಾಯಿಸಿ]

 • ಸಾ.ಶಿ. ಮರುಳಯ್ಯನವರು (85) ಶುಕ್ರವಾರ ೫-೨-೨೦೧೬ ಬೆಳಿಗ್ಗೆ ನಿಧನರಾದರು.[೧] ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಕೆಲ ದಿನಗಳಿಂದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. (ಸಾ.ಶಿ.ಮ ಇಚ್ಛೆಯಂತೆ ಅವರ ಪಾರ್ಥಿವ ಶರೀರವನ್ನು ಮೈಸೂರಿನ ಜೆ.ಎಸ್.ಎಸ್‌ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗುವುದು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ).[೨]

ಉಲ್ಲೇಖಗಳು[ಬದಲಾಯಿಸಿ]

ಟೆಂಪ್ಲೇಟ್ ದೊಡ್ಡದಾಗಿರುವುದರಿಂದ ಇನ್ನು ಮುಂದೆ ಸಾಹಿತಿಗಳು ಟೆಂಪ್ಲೇಟನ್ನು ಬಳಸಲಾಗುವುದಿಲ್ಲ. ಈ ಟೆಂಪ್ಲೇಟ್ ಲೇಖನವೊಂದರಲ್ಲಿ ನಿಮಗೆ ಕಂಡುಬಂದಲ್ಲಿ ಲೇಖನ ಪುಟದಿಂದ {{ಸಾಹಿತಿಗಳು}}ಎಂಬ ಸೇರ್ಪಡೆಯನ್ನು ತೆಗೆದುಹಾಕಿ.