ಸಾಮ್ರಾಜ್ಯಶಾಹಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಮ್ರಾಜ್ಯಶಾಹಿ ಎಂಬುದು ಒಂದು ದೇಶ ಇನ್ನೊಂದು ದೇಶವನ್ನು ಅಥವಾ ಪ್ರದೇಶವನ್ನು ಆಕ್ರಮಿಸಿಕೊಳ್ಳುವ ನೀತಿ.ಸಾಮಾನ್ಯವಾಗಿ ರಾಜಕೀಯ ಲಾಭಕ್ಕಾಗಿ ಇಲ್ಲವೇ ಆರ್ಥಿಕ ಪ್ರಯೋಜನಕ್ಕಾಗಿ ಬಲಪ್ರಯೋಗಿಸಿ ಆಕ್ರಮಿಸುವುದು ಕಂಡುಬರುತ್ತದೆ. ಈ ನೀತಿಯನ್ನು ಅನುಸರಿಸಿದ ಸಾಮ್ರಾಜ್ಯಗಳ ಬಗ್ಗೆ ಚರಿತ್ರೆಯಲ್ಲಿ ನಾವು ಹಲವಾರು ಉದಾಹರಣೆಗಳನ್ನು ನೋಡಬಹುದು. ಪರ್ಶಿಯಾ,ರೋಮ್,ಬ್ರಿಟನ್ ಮತ್ತು ನಾಜಿಆಳ್ವಿಕೆಯಲ್ಲಿ ಜರ್ಮನಿಗಳ ಅಭ್ಯುದಯ ಹಾಗೂ ಪತನ ಈ ನೀತಿಯಿಂದಾಗಿದೆ .

ಚರಿತ್ರೆ[ಬದಲಾಯಿಸಿ]

ಉದ್ದೇಶ[ಬದಲಾಯಿಸಿ]

ಸಾಮ್ರಾಜ್ಯಶಾಹಿ ನೀತಿಯ ಅನುಸರಣೆಗೆ ಹಲವಾರು ಕಾರಣಗಳಿರುತ್ತವೆ. ಆರ್ಥಿಕ ಕಾರಣಗಳು ಅತ್ಯಂತ ಮುಖ್ಯ ಕಾರಣವಾಗಿದೆ. ಪಲವತ್ತಾದ ನೆಲ, ಖನಿಜ ಸಂಪತ್ತು, ಬಂಡವಾಳ ಹೂಡಿಕೆ ಮುಂತಾದವುಗಳು ಇವುಗಳಲ್ಲಿ ಸೇರಿವೆ. ಸೈನಿಕ ನೀತಿಯ ಭಾಗವಾಗಿ ಕೂಡಾ ಸಾಮ್ರಾಜ್ಯಶಾಹಿ ನೀತಿ ಪಾಲಿಸಲ್ಪಡುತ್ತದೆ. ದೇಶಭಕ್ತಿ, ಧರ್ಮ, ಸಾಂಕೃತಿಕಮತ್ತು ಜನಾಂಗೀಯ ಮೇಲಾಟ ಕೂಡಾ ಈ ನೀತಿಯ ಅನುಸರಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.