ವಿಷಯಕ್ಕೆ ಹೋಗು

ಸವಿತಾ ಎಸ್.ಭಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇವರು ಓರ್ವ ಉತ್ತಮ ಬರಹಗಾರ್ತಿ,ತಮ್ಮ ಜೀವನದಲ್ಲಿ ಸಾಧಿಸಬೇಕು ಎಂಬ ಉತ್ಸಾಹ,ಆಸಕ್ತಿ ಇವರದು,ಮಕ್ಕಳಿಗಾಗಿ ಕಥೆ ಕವನಗಳನ್ನು ನೇರ ಸರಳವಾಗಿ ಬರೆದಿದ್ದರೆ ಮತ್ತು ಗೃಹಿಣಿಯಾರಿಗೆ ನಿತ್ಯ ಕುತೂಹಲ,ನಿರಂತರ ಜೀವನೋತ್ಸಾಹ ಮತ್ತು ಪ್ರೋತ್ಸಾಹ ತುಂಬಿಸುವವರಾಗಿದ್ದಾರೆ.

ಇವರು ೨-೬-೧೯೫೩ರಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉರಿಮಜಲು ಗ್ರಾಮದಲ್ಲಿ ಜನಿಸಿದರು,ತಂದೆ ಗೋಪಾಲಕೃಷ್ಣ ಭಟ್ತಾ ತಾಯಿ ಗೌರಮ್ಮ,ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಂಬಳಬೆಟ್ಟು ಶಾಲೆಯಲ್ಲಿ ಪೂರೈಸಿ ಹೈಸ್ಕೂಲು ವಿಟ್ಲದಲ್ಲಿ ಮಾಡಿ ಕಾಲೇಜು ವಿದ್ಯಾಭ್ಯಾಸವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆಸಿದರು.ನಂತರ ಬಿ.ಎಸ್ಸಿಯಲ್ಲಿರುವಾಗ ವಿಟ್ಲ ಪೆರುವಾಯಿಯ ಅಡ್ವಾಯಿ ಸುಬ್ರಹಣ್ಯ ಭಟ್ಟರೊಂದಿಗೆ ವಿವಾಹವಾಯಿತು,ಹರ್ಷಕೃಷ್ಣ ಮತ್ತು ದೀಪ್ತಿ ಇವರ ಮಕ್ಕಳು, ನಂತರ ಬಿ.ಎ ಪರೀಕ್ಷೆ ಪದವಿಯಲ್ಲಿ ರ‌್ಯಾಂಕು ಪಡೆದರು.

ಹವ್ಯಾಸ

[ಬದಲಾಯಿಸಿ]
  • ಇವರಿಗೆ ರೇಖಿ,ಪ್ರಾಣಿಕ್ ಹೀಲಿಂಗ್,ಸಾವಯವ ಕೃಷಿ,ಸಾಹಿತ್ಯ,ಪಾಕಶಾಸ್ತ್ರ ಆಸಕ್ತಿ ವಿಷಯಗಳು
  • ಸಾಹಿತ್ಯದಲ್ಲಿ ಮಕ್ಕಳಿಗಾಗಿ ಕಥೆಗಳನ್ನು ಬರೆಯುವುದು
  • ಮಕ್ಕಳಿಗೆ ಆಪ್ತವಾಗುವಂತ ಕವನ ಬರೆಯುವುದು

ವೃತ್ತಿ

[ಬದಲಾಯಿಸಿ]
  • ಬಾರ್ಕೂರಿನಲ್ಲಿ ನಡೆದ ೭ನೇ [] ರ ಅಧ್ಯಕ್ಷ ಸ್ಥಾನ
  • ಕೆ.ಎಂ.ಎಫ್.ಹಾಲಿನ ಸೊಸೈಟಿ ಪೆರುವಾಯಿ ಘಟಕದ ಅಧ್ಯಕ್ಷೆ
  • ದಕ್ಷಿಣಕನ್ನಡ ಜಿಲ್ಲೆಯ ಮಹಿಳಾ ಪರಿಷತ್ತಿನ ಮೇಲ್ವಿಚಾರಕಿಯಾಗಿದ್ದರು

ಕೃತಿಗಳು

[ಬದಲಾಯಿಸಿ]
  1. ಸಾತ್ವಿಕ ಆಹಾರ ಮತ್ತು ಆರೋಗ್ಯ
  2. ಸವಿಯೂಟ
  3. ಪುಟ್ಟತ್ತೆ(ಪ್ರಕಟಿತ ಕಥಾ ಸಂಕಲನ)೧೯೮೭
  • ದೊಡ್ಡಮ್ಮ
  • ಪುಟ್ಟತ್ತೆ ಪಾಲು
  • ಬೆಳ್ಳಿ
  • ಪರೀಕ್ಷೆ
  • ಭ್ರೂಣ
  • ಬಂಜೆ

ಕವನ(ಸಂಕಲನಗಳು)

[ಬದಲಾಯಿಸಿ]
  1. ಚುಟುಕಿನ ಚೀಲ
  2. ಕನ್ನಡ ಕಸ್ತೂರಿ
  3. ತಾಯಿ ದೇವರು
  4. ನಾಳೆ ಬರುವೆ
  5. ಅಡುಗೆ ಮನೆಯ ಸಭೆ
  6. ಹೂ ಮಾಲೆ[]

ಉಲ್ಲೇಖ

[ಬದಲಾಯಿಸಿ]
  1. http://www.dravidianuniversity.ac.in/cvs/​kannada/lakshmidevi[ಶಾಶ್ವತವಾಗಿ ಮಡಿದ ಕೊಂಡಿ]
  2. ಚಂದ್ರಗಿರಿ,ನಾಡೋಜ ಡಾ. ಸಾರಾ ಅಬೂಬಕ್ಕರ್ ಅಭಿನಂದನ ಗ್ರಂಥ, ಸಂಪಾದಕರು ಡಾ ಸಬಿಹಾ, ಸಿರಿವರ ಪ್ರಕಾಶನ, ಬೆಂಗಳೂರು,ಮೊದಲ ಮುದ್ರಣ ೨೦೦೯ ,೩೮೬

<Reference />