ಸರ್ಕಾರಿ ವಸ್ತುಸಂಗ್ರಹಾಲಯ ಮತ್ತು ಕಲಾಮಂದಿರ, ಚಂಡೀಗಢ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಲಾ ಸಂಗ್ರಹಾಲಯ
ಸರ್ಕಾರಿ ಮ್ಯೂಸಿಯಂ ಮತ್ತು ಕಲಾಮಂದಿರ, ಚಂಡೀಗಢ್

ಸರ್ಕಾರಿ ವಸ್ತುಸಂಗ್ರಹಾಲಯ ಮತ್ತು ಕಲಾಮಂದಿರ, ಚಂಡೀಗಢ್ ಉತ್ತರ ಭಾರತದ ಒಂದು ಪ್ರಮುಖ ವಸ್ತುಸಂಗ್ರಹಾಲಯವಾಗಿದೆ. ಇದು ಗಾಂಧಾರ ಕಾಲದ ಶಿಲ್ಪಗಳು, ಪಹಾಡಿ ಮತ್ತು ರಾಜಸ್ಥಾನಿ ಚಿಕಣಿ ವರ್ಣಚಿತ್ರಗಳ ಸಂಗ್ರಹಗಳನ್ನು ಹೊಂದಿದೆ. ಆಗಸ್ಟ್, 1947 ರಲ್ಲಿ ಭಾರತದ ವಿಭಜನೆಯು ಇದರ ಅಸ್ತಿತ್ವಕ್ಕೆ ಕಾರಣವಾಗಿದೆ. ವಿಭಜನೆಗೆ ಮೊದಲು, ಕಲಾ ವಸ್ತುಗಳು, ವರ್ಣಚಿತ್ರಗಳು ಮತ್ತು ಶಿಲ್ಪಗಳ ಸಂಗ್ರಹಗಳನ್ನು ಅಂದಿನ ಪಂಜಾಬ್‌ನ ರಾಜಧಾನಿ ಲಾಹೋರ್‌ನ ಕೇಂದ್ರ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿತ್ತು.

ವಿಭಜನೆಯ ನಂತರ, ಸಂಗ್ರಹಗಳ ವಿಭಾಗ ಏಪ್ರಿಲ್ 10, 1948 ರಂದು ನಡೆಯಿತು. ನಲವತ್ತು ಪ್ರತಿಶತದಷ್ಟು ಸಂಗ್ರಹ ಭಾರತದ ಪಾಲಿಗೆ ಬಂದಿತು. ಇದನ್ನು ಫ಼್ರೆಂಚ್ ವಾಸ್ತುಶಿಲ್ಪಿ ಲೀ ಕೋರ್ಬೂಸಿಯೇ ವಿನ್ಯಾಸಗೊಳಿಸಿದರು.

ಕಟ್ಟಡ[ಬದಲಾಯಿಸಿ]

ಚಂಡೀಗಢ್ ವಾಸ್ತುಕಲಾ ಸಂಗ್ರಹಾಲಯ

ಈ ಕಟ್ಟಡವು ವಸ್ತುಸಂಗ್ರಹಾಲಯ ಮತ್ತು ಕಲಾಮಂದಿರವಾಗಿದ್ದು ವಿಸ್ತರಣೆಗಾಗಿ ಕಲಾ ಸ್ವಾಧೀನ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸುತ್ತದೆ. ಇದನ್ನು ಎರಡನೇ ಪಂಚವಾರ್ಷಿಕ ಯೋಜನೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಜ್ಞಾನದ ಪ್ರಸರಣದ ಸಾಧನವಾಗಿ ಕಲ್ಪಿಸಿಕೊಳ್ಳಲಾಯಿತು. ಇದು ಈ ಪ್ರದೇಶಕ್ಕೆ ಒಂದು ಅನನ್ಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಪನ್ಮೂಲವಾಗಿದೆ.ಇಲ್ಲಿಗೆ ಪ್ರವಾಸಿಗರು, ಕಲಾವಿದರು, ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ನಿಯಮಿತವಾಗಿ ಭೇಟಿ ನೀಡುತ್ತಾರೆ. ಲೀ ಕಾರ್ಬೂಸಿಯೇ ಮತ್ತು ಆಧುನೀಕರಣದ ಕುರಿತು ಸಂಶೋಧಕರು, ವಾಸ್ತುಶಿಲ್ಪಿಗಳು ಮತ್ತು ವಿದ್ವಾಂಸರು ಸಹ ಕಟ್ಟಡ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಆಗಾಗ್ಗೆ ಭೇಟಿ ನೀಡುತ್ತಾರೆ.

ವಸ್ತುಸಂಗ್ರಹಾಲಯದ ಗ್ರಂಥಾಲಯವು ಕಲೆ, ವಾಸ್ತುಶಿಲ್ಪ ಮತ್ತು ಕಲೆಯ ಇತಿಹಾಸದ ವಿಷಯಗಳ ಪುಸ್ತಕಗಳ ಸಮೃದ್ಧ ಭಂಡಾರವಾಗಿದೆ.

ಕಟ್ಟಡವನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ.

ವಸ್ತುಸಂಗ್ರಹಾಲಯವು ಈ ಪ್ರದೇಶದ ಸಾಂಸ್ಕೃತಿಕ ಇತಿಹಾಸದ ಭಂಡಾರದ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಸಭಾಂಗಣವು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳಿಗಾಗಿ ಕಡಿಮೆ ಶುಲ್ಕಕ್ಕೆ ಲಭ್ಯವಿದೆ. ಇದು ಕಲಾವಿದರಿಗೆ ತಾತ್ಕಾಲಿಕ ವಸ್ತುಪ್ರದರ್ಶನಗಳಿಗೆ ಪ್ರದರ್ಶನ ಸಭಾಂಗಣವಾಗಿಯೂ ಕಾರ್ಯನಿರ್ವಹಿಸುತ್ತದೆ.[೧]

ಸಂಗ್ರಹ[ಬದಲಾಯಿಸಿ]

ಚಂಡೀಗಢ್ ವಾಸ್ತುಕಲಾ ಸಂಗ್ರಹಾಲಯ, ಚಂಡೀಗಢ್

ಭಾರತದ ಪಾಲಿನ ಗಮನಾರ್ಹ ಭಾಗವೆಂದರೆ ಗಾಂಧಾರ ಶಿಲ್ಪಗಳು. ಏಪ್ರಿಲ್ 1949 ರಲ್ಲಿ ಪಾಕಿಸ್ತಾನದಿಂದ ಪಡೆದ ಸಂಗ್ರಹಗಳನ್ನು ಮೊದಲು ಅಮೃತಸರ, ನಂತರ ಶಿಮ್ಲಾ, ಪಟಿಯಾಲದಲ್ಲಿ ಇರಿಸಲಾಗಿತ್ತು ಮತ್ತು ಅಂತಿಮವಾಗಿ 1968 ರಲ್ಲಿ ಮ್ಯೂಸಿಯಂ ಉದ್ಘಾಟನೆಯ ನಂತರ ಚಂಡೀಗಢ್‍ಕ್ಕೆ ಸ್ಥಳಾಂತರಿಸಲಾಯಿತು. ಕಾಲಾನಂತರದಲ್ಲಿ, ಡಾ. ಎಂ.ಎಸ್. ರಂಧಾವಾ ಅವರು ಪಹಾರಿ ಚಿಕಣಿ ಚಿತ್ರಗಳನ್ನು, ಆಧುನಿಕ ಮತ್ತು ಭಾರತೀಯ ಸಮಕಾಲೀನ ಕಲಾಕೃತಿಗಳನ್ನು ಸೇರಿಸಿದರು. ಸಂಗ್ರಹವನ್ನು ಈ ಕೆಳಗಿನ ವರ್ಗಗಳಾಗಿ ವಿಂಗಡಿಸಬಹುದು:

ಗಾಂಧಾರದ ಶಿಲ್ಪಗಳು[ಬದಲಾಯಿಸಿ]

ಬೋಧಿಸತ್ವ ಮೈತ್ರೇಯ, ಸು. ಕ್ರಿ.ಶ. 2 ನೇ ಶತಮಾನ, ಗಾಂಧಾರ
ಹರಿತಿ, ಸು. ಕ್ರಿ.ಶ. 2 ನೇ ಶತಮಾನ, ಗಾಂಧಾರ
ಬುದ್ಧ, ಸು. ಕ್ರಿ.ಶ. 2 ನೇ ಶತಮಾನ, ಗಾಂಧಾರ

ಮ್ಯೂಸಿಯಂನಲ್ಲಿ ಬುದ್ಧನ ವಿವಿಧ ಶಿಲ್ಪಗಳಿವೆ. ಕೆಲವು ಶಿಲ್ಪಗಳಲ್ಲಿ ಬುದ್ಧನು ಉದ್ದವಾದ, ತೆರೆದ ಕೂದಲನ್ನು ಹೊಂದಿದ್ದರೆ, ಕೆಲವೆಡೆ ಅವನು ಸುರುಳಿಯಾಕಾರದ ಗುಂಗುರು ಕೂದಲಿನ ಮೀಸೆ ಹೊಂದಿದ್ದಾನೆ. ಹಿಂದಿನ ದಿನಗಳಲ್ಲಿ ಬುದ್ಧನ ಅನುಯಾಯಿಗಳು ಬುದ್ಧನ ಸಾಂಕೇತಿಕ ಪ್ರಾತಿನಿಧ್ಯಗಳನ್ನು ಪೂಜಿಸುತ್ತಿದ್ದರು. ಈ ಪ್ರಾತಿನಿಧ್ಯಗಳು ಬುದ್ಧ ಅಥವಾ ಚಕ್ರದ ಪ್ರತಿನಿಧಿ ಹೆಜ್ಜೆಗುರುತನ್ನು ಒಳಗೊಂಡಿವೆ. ನಂತರ, ಅನುಯಾಯಿಗಳು ಬುದ್ಧನನ್ನು ಮಾನವ ರೂಪದಲ್ಲಿ ಚಿತ್ರಿಸಲು ಬಯಸಿದಾಗ, ಅವರು ಅವನನ್ನು ಸುಂದರವಾದ ಗ್ರೀಕ್ ದೇವರಂತಹ ರೂಪದಲ್ಲಿ ಚಿತ್ರಿಸಿದರು. ಆ ಯುಗದಲ್ಲಿ ಇಂಡೋ-ಗ್ರೀಕ್ ಪ್ರಭಾವ ಇದಕ್ಕೆ ಕಾರಣವೆಂದು ಹೇಳಬಹುದು.

ಆಧುನಿಕ ಮತ್ತು ಭಾರತೀಯ ಸಮಕಾಲೀನ ಕಲೆ[ಬದಲಾಯಿಸಿ]

ಬುದ್ಧ ಮತ್ತು ಇತರ ದೈವಗಳು, ಸು. ಕ್ರಿ.ಶ. 2 ನೇ ಶತಮಾನ, ಗಾಂಧಾರ

ವಸ್ತುಸಂಗ್ರಹಾಲಯದ ಇತರ ಭಾಗಗಳು[ಬದಲಾಯಿಸಿ]

  • ಪ್ರಾಕೃತಿಕ ಇತಿಹಾಸದ ವಸ್ತುಸಂಗ್ರಹಾಲಯ, ಸೆಕ್ಟರ್ 10, ಚಂಡೀಗಢ್
  • ಚಂಡೀಗಢ್ ವಾಸ್ತುಕಲಾ ಸಂಗ್ರಹಾಲಯ, ಸೆಕ್ಟರ್ 10, ಚಂಡೀಗಢ್
  • ರಾಷ್ಟ್ರೀಯ ರೇಖಾಚಿತ್ರಗಳ ಗ್ಯಾಲರಿ, ಸೆಕ್ಟರ್ 17, ಚಂಡೀಗಢ್
  • ಅಂತರರಾಷ್ಟ್ರೀಯ ಗೊಂಬೆ ಸಂಗ್ರಹಾಲಯ, ಸೆಕ್ಟರ್ 23, ಚಂಡೀಗಢ್

ಉಲ್ಲೇಖಗಳು[ಬದಲಾಯಿಸಿ]

  1. "Official Museum Website". Archived from the original on 23 May 2017. Retrieved 1 January 2020.

ಹೊರಗಿನ ಕೊಂಡಿಗಳು[ಬದಲಾಯಿಸಿ]