ಸರೋಜ ವೈದ್ಯನಾಥನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸರೋಜ ವೈದ್ಯನಾಥನ್

ಸರೋಜ ವೈದ್ಯನಾಥನ್ ರವರು ಭರತನಾಟ್ಯ ನೃತ್ಯಗುರು ಮತ್ತು ನೃತ್ಯನಿರ್ದೇಶಕರು.[೧] ಭಾರತ ಸರ್ಕಾರದಿಂದ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು.

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ರವರಿಂದ ಸಂಗೀತ ನಾಟಕ ಪ್ರಶಸ್ತಿ ಪಡೆಯುತ್ತಿರುವ ಸಂದರ್ಭದಲ್ಲಿ ಸರೋಜಾ ವೈದ್ಯನಾಥನ್ ರವರು.

ಆರಂಭಿಕ ಜೀವನ[ಬದಲಾಯಿಸಿ]

೧೯೩೭ ಸೆಪ್ಟೆಂಬರ್ ೧೯ ರಂದು ಜನಿಸಿದರು. ಮೂಲತಃ ಕರ್ನಾಟಕದ ಬಳ್ಳಾರಿಯವರು.

ವಿದ್ಯಾಭ್ಯಾಸ[ಬದಲಾಯಿಸಿ]

ಸರೋಜಾರವರು ಚೆನೈನ ಸರಸ್ವತಿ ಗಾನ ನಿಲಯದಲ್ಲಿ ಭರತನಾಟ್ಯ ತರಬೇತಿಯನ್ನು ಪಡೆದರು. ನಂತರ ತಂಜಾವೂರಿನ ಕಟ್ಟುಮನಾರ್ ಮುತ್ತುಕುಮಾರನ್ ಪಿಳ್ಳೈ ರವರಲ್ಲಿ ಹೆಚ್ಚಿನ ಭರತನಾಟ್ಯ ಅಭ್ಯಾಸ ಮಾಡಿದರು. ಮದರಾಸ್ ವಿಶ್ವವಿದ್ಯಾನಿಲಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪಿ.ಸಂಭಮೂರ್ತಿ ಯವರ ಮಾರ್ಗದರ್ಶನದಲ್ಲಿ ಕಲಿತರು. ಇಂದಿರ ಕಲಾ ಸಂಗೀತ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿಯನ್ನು ಪಡೆದಿದ್ದಾರೆ.[೨]

ನೃತ್ಯ ಜೀವನ[ಬದಲಾಯಿಸಿ]

ತಮ್ಮ ವಿವಾಹದ ನಂತರ ಭರತನಾಟ್ಯ ತರಗತಿಗಳನ್ನು ಆರಂಭಿಸಿದ್ದರು. ಸರೋಜರವರ ಪತಿಯವರು ದೆಹಲಿಗೆ ವರ್ಗಾವಣೆಯಾದ ನಂತರ, ದೆಹಲಿಯಲ್ಲಿ ೧೯೭೪ರಲ್ಲಿ ಗಣೇಶ ನೃತ್ಯಾಲಯವನ್ನು ಆರಂಭಿಸಿದರು.[೩] ಗಣೇಶ ನೃತ್ಯಾಲಯದಲ್ಲಿ ಭರತನಾಟ್ಯದೊಂದಿಗೆ ಹಿಂದಿ, ತಮಿಳು ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತಗಳ ತರಬೇತಿಯನ್ನು ನೀಡುತ್ತಾರೆ. ಇವರು ಹತ್ತುಕ್ಕೂ ಹೆಚ್ಚು ಬ್ಯಾಲೆಗಳನ್ನು ಮತ್ತು ೨೦೦೦ಕ್ಕೂ ಹೆಚ್ಚು ಏಕವ್ಯಕ್ತಿ ನೃತ್ಯಗಳನ್ನು ಸಂಯೋಜಿಸಿದ್ದಾರೆ. ಸುಬ್ರಹ್ಮಣಮ್ ಭಾರತಿಯವರ ಹಲವು ಪದ್ಯಗಳಿಗೆ ನೃತ್ಯ ಸಂಯೋಜಿಸಿದ್ದಾರೆ.[೪] ಸರೋಜಾರವರ ನಾಯಕತ್ವದಲ್ಲಿ ದಕ್ಷಿಣ ಪೂರ್ವ ಏಷ್ಯಿಯಾ ಸಾಂಸ್ಕೃತಿಕ ಪ್ರವಾಸವನ್ನು ೨೦೦೨ರಲ್ಲಿ ಹಮ್ಮಿಕೊಳ್ಳಲಾಗಿತ್ತು.

ಪುಸ್ತಕಗಳು[ಬದಲಾಯಿಸಿ]

ಸರೋಜಾರವರು ಭರತನಾಟ್ಯ ಮತ್ತು ಶಾಸ್ತ್ರೀಯ ಸಂಗೀತಕ್ಕೆ ಸಂಬಂಧಿಸಿದ ಹಳವು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿರುವ ಪುಸ್ತಕಗಳೆಂದರೆ,

 • ದಿ ಕ್ಲಾಸಿಕಲ್ ಡ್ಯಾನ್ಸಸ್ ಆಫ್ ಇಂಡಿಯ.
 • ಭರತನಾಟ್ಯಂ - ಆನ್ ಇನ್ ಡೆಪ್ತ್ ಸ್ಟಡಿ.
 • ಕರ್ನಾಟ್ಕ ಸಂಗೀತಂ.

ಕುಟುಂಬ[ಬದಲಾಯಿಸಿ]

ಇವರ ಪತಿ ವೈದ್ಯನಾಥನ್ ರವರು ಐ.ಎ.ಎಸ್ ಅಧಿಕಾರಿಯಾಗಿದ್ದರು. ಇವರ ಪುತ್ರ ಕಾಮೇಶ್ ಮತ್ತು ಸೊಸೆ ರಮಾ ವೈದ್ಯನಾಥನ್. ರಮಾ ವೈದ್ಯನಾಥನ್ ರವರು ಇವರ ಶಿಷ್ಯೆ ಜೊತೆಗೆ ಅಂತರ್ ರಾಷ್ಟ್ರೀಯ ನೃತ್ಯಗಾರ್ತಿ. ಸರೋಜಾರವರ ಮೊಮ್ಮಗಳು ದಕ್ಷಿಣ ವೈದ್ಯನಾಥನ್ Archived 2019-09-27 ವೇಬ್ಯಾಕ್ ಮೆಷಿನ್ ನಲ್ಲಿ., ಇವರು ಇವರ ಶಿಷ್ಯೆ ಮತ್ತು ನೃತ್ಯಾಗಾರ್ತಿ.

ಮನ್ನಣೆಗಳು[ಬದಲಾಯಿಸಿ]

 1. ಸರೋಜಾರವರು ೨೦೦೨ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದರು.
 2. ೨೦೧೩ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದರು.
 3. ಡೆಹಲಿ ಸರ್ಕಾರ ಸಾಹಿತ್ಯ ಕಲಾ ಪರಿಷತ್ ಸನ್ಮಾನ ನೀಡಿ ಗೌರವಿಸಿದೆ.
 4. ೨೦೦೬ರಲ್ಲಿ ಭರತ ಕಲಾ ಸುಂದರ್ ಬಿರುದಿಗೆ ಪಾತ್ರರಾಗಿದ್ದಾರೆ.
 5. ಇಯಾಲ್ ಸಂಗೀತ ನಾಟಕ ಫೌಂಡೇಶನವು ಕಲಾಮ್ಮಣಿ ಮತ್ತು ಸಂಗೀತ ನಾಟಕ ಅಕಾದೆಮಿ ಪ್ರಶಸ್ತಿ ನೀಡಿದೆ.[೫]

ಉಲ್ಲೇಖಗಳು[ಬದಲಾಯಿಸಿ]

 1. https://web.archive.org/web/20130415005909/http://www.ccrtindia.gov.in/SarojaVaidyanathan.htm
 2. "ಆರ್ಕೈವ್ ನಕಲು". Archived from the original on 2020-08-13. Retrieved 2019-09-27.
 3. "ಆರ್ಕೈವ್ ನಕಲು". Archived from the original on 2019-09-27. Retrieved 2019-09-27.
 4. https://www.thehindu.com/todays-paper/tp-features/tp-fridayreview/adding-poetry-to-dance/article2272937.ece
 5. "ಆರ್ಕೈವ್ ನಕಲು". Archived from the original on 2018-05-29. Retrieved 2019-09-27.