ವಿಷಯಕ್ಕೆ ಹೋಗು

ಸರಜೂ ಕಾಟ್ಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರಜೂ ಕಾಟ್ಕರ್ ಇವರು ೧೯೫೩ ಅಗಸ್ಟ ೧೪ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ೧೯೭೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಮ್.ಏ. ಪದವಿ ಪಡೆದರು. ಅನಂತರ “ಕನ್ನಡ ಮರಾಠಿ ದಲಿತ ಸಾಹಿತ್ಯ, ಒಂದು ತೌಲನಿಕ ಅಧ್ಯಯನ”ದ ಬಗೆಗೆ ಮಹಾಪ್ರಬಂಧ ರಚಿಸಿ ಪಿ.ಎಚ್‍ಡಿ. ಪದವಿ ಸಂಪಾದಿಸಿದರು.

ಉದ್ಯೋಗ

[ಬದಲಾಯಿಸಿ]

೧೯೭೫ರಿಂದ ೧೯೮೦ರವರೆಗೆ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಬಳಿಕ ೧೯೮೧ರಿಂದ ಇಂಡಿಯನ್ ಎಕ್ಸಪ್ರೆಸ್ ಪತ್ರಿಕಾಬಳಗದ ಸುದ್ದಿಗಾರರಾಗಿ ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಹಿತ್ಯ

[ಬದಲಾಯಿಸಿ]

ಸರಜೂ ಕಾಟ್ಕರರು ಒಂಬತ್ತು ಕಾವ್ಯಸಂಕಲನಗಳನ್ನು, ಒಂದು ಕಾದಂಬರಿಯನ್ನು, ಐದು ವೈಚಾರಿಕ ಕೃತಿಗಳನ್ನು, ಒಂದು ನಾಟಕ, ಒಂದು ಪ್ರವಾಸಕಥನ ಹಾಗು ಮೂರು ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಕೆಲವು ಕೃತಿಗಳು:

  • ಮ್ಯಾನಿಫೆಸ್ಟೊ
  • ಏಕಾಂತದ ಮನುಷ್ಯ
  • ಹಸಿದ ನೆಲ
  • ಗಾಂಧಿ ಸಿಕ್ಕ
  • ಸೂರ್ಯ
  • ಅವ್ವ

ಸನ್ಮಾನ

[ಬದಲಾಯಿಸಿ]

ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೦೧ನೆಯ ಸಾಲಿನ ಗೌರವ ಪ್ರಶಸ್ತಿ ಇವರಿಗೆ ಲಭಿಸಿದೆ. ೧೯೮೮ರಿಂದ ೧೯೯೮ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು.