ವಿಷಯಕ್ಕೆ ಹೋಗು

ಸಮರೇಶ್ ಜಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಮರೇಶ್ ಜಂಗ್ (1970 ರ ಮೇ 5 ರಂದು ಜನಿಸಿದರು.) ಅವರು ಭಾರತೀಯ ಕ್ರೀಡಾ ಶೂಟರ್(ಗುರಿಕಾರ)ಆಗಿದ್ದಾರೆ. ಇವರು ಏರ್ ಪಿಸ್ತೂಲ್ (ಗಾಳಿ ರೈಫಲ್) ಬಳಕೆಯಲ್ಲಿ ಪ್ರವೀಣರಾಗಿದ್ದಾರೆ. ಮ್ಯಾಂಚೆಸ್ಟರ್ ನಲ್ಲಿ ನಡೆದ 2002 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಫ್ರೀ ಪಿಸ್ತೂಲ್ (ಜೋಡಿಗಳ) ಪಂದ್ಯದಲ್ಲಿ 25ಮಿ ಸ್ಟಾಂಡರ್ಡ್ ಪಿಸ್ತೂಲ್ (ಜೋಡಿಗಳ) ಓಪನ್ ಪಂದ್ಯದಲ್ಲಿ ಜಸ್ ಪಾಲ್ ರಾಣಾ ಜೊತೆಗೂಡಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅವರು ಬೀಜಿಂಗ್ ನಲ್ಲಿ ನಡೆದ 2008 ರ ಬೇಸಿಗೆ ಒಲಿಂಪಿಕ್ಸ್ ನಲ್ಲಿ 10ಮಿ ಏರ್ ಪಿಸ್ತೂಲ್ ಮತ್ತು 50ಮಿ ಪಿಸ್ತೂಲ್ ಪಂದ್ಯಗಳಲ್ಲಿ ಸ್ಪರ್ಧಿಸಿದರು, ಆದರೆ ಎರಡೂ ಪಂದ್ಯಗಳಲ್ಲಿ ಫೈನಲ್ಸ್ ತಲುಪಲು ವಿಫಲರಾದರು.

2002 ರಲ್ಲಿ ಇವರಿಗೆ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇವರು CISF ನಲ್ಲಿ (ಕೇಂದ್ರ ಕೈಗಾರಿಕಾ ಭದ್ರತಾ ಪಡೆ)ಕಾರ್ಯನಿರ್ವಹಿಸುತ್ತಿದ್ದು, ನವ ದೆಹಲಿಯಲ್ಲಿ ವಾಸವಾಗಿದ್ದಾರೆ.

2010 ರ ಅಕ್ಟೋಬರ್ 3 ರಂದು ಇವರು ದೆಹಲಿಯ 2010 ರ ಕಾಮನ್ ವೆಲ್ತ್ ಕ್ರೀಡಾಕೂಟಗಳಿಗಾಗಿ ಮೈದಾನದಲ್ಲಿ ನಡೆಯುತ್ತಿದ್ದ ಉದ್ಘಾಟನಾ ಸಮಾರಂಭ ದಲ್ಲಿ ಕ್ವೀನ್ಸ್ ಬ್ಯಾಟನ್ ರಿಲೇಯ ಧ್ವಜವಾಹಕರಾಗಿದ್ದರು.[][]

ಮಧ್ಯದಲ್ಲಿರುವವರು, ೨೦೧೬ರಲ್ಲಿ
ಸಮರೇಶ್ ಜಂಗ್
ಪದಕ ದಾಖಲೆ
Shooting
Commonwealth Games (2002)
Gold medal – first place Manchester Standard Pistol ( P )
Gold medal – first place Manchester Free Pistol ( P )
Silver medal – second place Manchester Air Pistol ( I )
Silver medal – second place Manchester Free Pistol ( I )
Commonwealth Games (2006)
Gold medal – first place Melbourne Men's 50m Pistol ( I )
Gold medal – first place Melbourne Men's 10m Air Pistol ( P )
Gold medal – first place Melbourne Men's 25m Cent. Pistol( P )
Gold medal – first place Melbourne Men's 10m Air Pistol ( P )
Gold medal – first place Melbourne Men's 25m Standard Pistol
Silver medal – second place Melbourne Men's 50m Pistol ( P )
Bronze medal – third place Melbourne Men's 25m Cent. Pistols

2006 ರ ಕಾಮನ್‌ ವೆಲ್ತ್‌ ಕ್ರೀಡಾಕೂಟ

[ಬದಲಾಯಿಸಿ]

2006 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಇವರು ಎಂಟು ಪದಕಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಮೊದಲಾರ್ಧದಲ್ಲಿ ಬೆಳ್ಳಿಯನ್ನು ಗೆದ್ದುಕೊಂಡರು. ಅಂತಿಮವಾಗಿ ಅವರು ಐದು ಚಿನ್ನದ ಪದಕ, ಒಂದು ಬೆಳ್ಳಿಯ ಪದಕ ಮತ್ತು ಒಂದು ಕಂಚಿನ ಪದಕವನ್ನು ಗೆದ್ದುಕೊಂಡರು. 25ಮಿ ನ ಸೆಂಟರ್ ಫೈರ್ ಪಿಸ್ತೂಲ್ ವೈಯಕ್ತಿಕ ಪಂದ್ಯದಲ್ಲಿ ಕೇವಲ ಕಂಚಿನ ಪದಕ ಗಳಿಸಿದ ಅವರಿಗೆ ಅನಂತರದ ಸ್ಪರ್ಧೆಗಳಲ್ಲಿ ಒಂದು ಬೆಳ್ಳಿ ಮತ್ತು ಐದು ಚಿನ್ನದ ಪದಕಗಳನ್ನು ಗಳಿಸಿದ ನಂತರ ತೃಪ್ತಿಯಾಯಿತು. ಸ್ಟಾಂಡರ್ಡ್ ಫೈರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಅವರ ಬಂದೂಕು,ಗನ್ನು ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದರಿಂದ ಆ ಪಂದ್ಯದಲ್ಲಿ ಪದಕಕ್ಕಾಗಿ ಸ್ಪರ್ಧಿಸದೆ ಹೊರನಡೆಬೇಕಾಯಿತು. ಇವರಿಗೆ "18ನೇ ಕಾಮನ್ ವೆಲ್ತ್ ಕ್ರೀಡಾಕೂಟದ ಅತ್ಯುತ್ತಮ ಕ್ರೀಡಾಪಟು"ವಿಗೆ ನೀಡುವ ಡೇವಿಡ್ ಡಿಕ್ಸನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರಿಗೆ [೧] ಕ್ರೀಡಾಕೂಟದಲ್ಲಿದ್ದ ಸ್ವಯಂ ಸೇವಕರು "ಗೋಲ್ಡ್ ಫಿಂಗರ್ " ಜೊತೆ ಇವರನ್ನು ಹೋಲಿಕೆ ಮಾಡಿದರು.

ಆರಂಭಿಕ ಜೀವನ

[ಬದಲಾಯಿಸಿ]

ಸಮರೇಶ್ ಜಂಗ್, 1970 ರ ಮೇ 5 ರಂದು ಹರಿಪುರ್ ಖಾಲ್ ನಲ್ಲಿ ಜನಿಸಿದರು. ಇದು ಗೌಜು-ಗಲಾಟೆಗಳಿಲ್ಲದ ಶಾಂತ ಗ್ರಾಮವಾಗಿದ್ದು, ಹಿಮಾಚಲ ಪ್ರದೇಶದ ಶಿವಾಲಿಕ್ ಪರ್ವತದ ಕೆಳಭಾಗದ,ಫೂಟ್ ಹಿಲ್ಸ್ ನಲ್ಲಿರುವ ಸಿರ್ಮೌರ್ ಜಿಲ್ಲೆಯಿಂದ 175 ಕಿಲೋ ಮೀಟರ್ ದೂರದಲ್ಲಿದೆ. ಇವರು ಭಾರತದ ರಕ್ಷಣಾ ಪಡೆಯ ನಿವೃತ್ತ ಕರ್ನಲ್ ರವರ ಪುತ್ರರಾಗಿದ್ದು, ಜಂಗ್ ಅವರ ಅಜ್ಜ ಶೇರ್ ಜಂಗ್ ರವರಿಂದ ಶೂಟಿಂಗ್ ಕಲೆ ಕರಗತ ಮಾಡಿಕೊಂಡರು. ಇವರು ಶೂಟರ್ ಆಗಿದ್ದರಲ್ಲದೇ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು. ಜಂಗ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ದೆಹಲಿಯ ಮಾಡ್ರನ್ ಶಾಲೆಯಲ್ಲಿ ಮುಗಿಸಿದರು. ತರುವಾಯ, ಹೈದ್ರಾಬಾದ್ ನ ಉಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ಅವರು ಡಿಗ್ರಿಪದವಿ ಪಡೆದರು. ಇವರು ಅತ್ಯುತ್ತಮ ಚೆಸ್ ಆಟಗಾರರು ಕೂಡ ಹೌದು ಎಂಬುದು ಕೇವಲ ಕೆಲವು ಜನರಿಗೆ ಮಾತ್ರ ತಿಳಿದಿದೆ.

ಪ್ರಶಸ್ತಿಗಳು ಮತ್ತು ಪದಕಗಳು

[ಬದಲಾಯಿಸಿ]

2002

  • ಅರ್ಜುನ ಪ್ರಶಸ್ತಿ
  • ಕಾಮನ್ ವೆಲ್ತ್ ಕ್ರೀಡಾಕೂಟ: 2 ಚಿನ್ನದ ಪದಕಗಳು (ಪುರುಷರ ಫ್ರೀ ಪಿಸ್ತೂಲ್ (ಜೋಡಿ) ಮತ್ತು ಓಪನ್ ಸ್ಟ್ಯಾಂಡರ್ಡ್ ಪಿಸ್ತೂಲ್ (ಜೋಡಿ), ಎರಡನ್ನು ಜಸ್ ಪಾಲ್ ರಾಣಾರವರೊಂದಿಗೆ ಗಳಿಸಿದ್ದಾರೆ) ಹಾಗು 3 ಬೆಳ್ಳಿಯ ಪದಕಗಳು (ಏರ್ ಪಿಸ್ತೂಲ್ ವೈಯಕ್ತಿಕ ಪಂದ್ಯ, ಫ್ರೀ ಪಿಸ್ತೂಲ್ ವೈಯಕ್ತಿಕ ಪಂದ್ಯ, ಮತ್ತು ಫ್ರೀ ಪಿಸ್ತೂಲ್ (ಜೋಡಿ), ಕೊನೆಯದನ್ನು ರಾಣಾರವರೊಂದಿಗೆ ಗಳಿಸಿದ್ದಾರೆ)

2004

  • SAF ಕ್ರೀಡಾಕೂಟ: 1 ಬೆಳ್ಳಿಯ ಪದಕ (25ಮಿ ಸ್ಟ್ಯಾಂಡರ್ಡ್ ಪಿಸ್ತೂಲ್)

2005

  • ಐದನೆ ಕಾಮನ್ ವೆಲ್ತ್ ಕ್ರೀಡಾಕೂಟ ಶೂಟಿಂಗ್ ಚಾಂಪಿಯನ್ಷಿಪ್ : 2 ಚಿನ್ನದ ಪದಕಗಳು, 2 ಬೆಳ್ಳಿಯ ಪದಕಗಳು, ಮತ್ತು 1 ಕಂಚಿನ ಪದಕ
  • ಭಾರತದ ರಾಷ್ಟ್ರೀಯ ಕ್ರೀಡಾಕೂಟಗಳು: 1 ಚಿನ್ನದ ಪದಕ (10ಮಿ ಏರ್ ಪಿಸ್ತೂಲ್)

2006

  • ಕಾಮನ್ ವೆಲ್ತ್ ಕ್ರೀಡಾಕೂಟ: ಡೇವಿಡ್ ಡಿಕ್ಸನ್ ಪ್ರಶಸ್ತಿ (ಕ್ರೀಡಾಕೂಟದ ಅತ್ಯುತ್ತಮ ಕ್ರೀಡಾಪಟು); 5 ಚಿನ್ನದ ಪದಕಗಳು (ಪುರುಷರ 50ಮಿ ಪಿಸ್ತೂಲ್, ಪುರುಷರ 10ಮಿ ಏರ್ ಪಿಸ್ತೂಲ್, ಪುರುಷರ 25ಮಿ ಸೆಂಟರ್ ಫೈರ್ ಪಿಸ್ತೂಲ್ (ಜೋಡಿ) (ರಾಣಾರವರೊಂದಿಗೆ), ಪುರುಷರ 10ಮಿ ಏರ್ ಪಿಸ್ತೂಲ್ (ಜೋಡಿ) (ವಿವೇಕ್ ಸಿಂಗ್ ರವರೊಂದಿಗೆ, ಮತ್ತು ಪುರುಷರ 25ಮಿ ಸ್ಟ್ಯಾಂಡರ್ಡ್ ಪಿಸ್ತೂಲ್ (ಜೋಡಿ) (ರೋನಕ್ ಪಂಡಿತ್ ರವರೊಂದಿಗೆ), 1 ಬೆಳ್ಳಿಯ ಪದಕ (ಪುರುಷರ 50ಮಿ ಪಿಸ್ತೂಲ್ (ಜೋಡಿ) ಸಿಂಗ್ ರವರೊಂದಿಗೆ), ಹಾಗು 1 ಕಂಚಿನ ಪದಕ (ಪುರುಷರ 25ಮಿ ಸೆಂಟರ್ ಫೈರ್ ಪಿಸ್ತೂಲ್)

ಉಲ್ಲೇಖಗಳು

[ಬದಲಾಯಿಸಿ]

ಸಾಮಾನ್ಯ ಆಕರಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. CBC, 2010ರ ಕಾಮನ್ ವೆಲ್ತ್ ಕ್ರೀಡಾಕೂಟ, ಉದ್ಘಾಟನ ಸಮಾರಂಭಗಳು, ಏರ್ ಡೇಟ್ 2010 ರ ಅಕ್ಟೋಬರ್ 3, 9:00am-12:30pm (ಪೂರ್ವದ), ಸರ್ಕಾ 2h20m ಮಾರ್ಕ್, CBC ದೂರದರ್ಶನ ಪ್ರಧಾನ ಸಂಪರ್ಕ
  2. "CWG ಓಪನಿಂಗ್ ಸೆರಮನೀಸ್: ಲೈವ್ ಬ್ಲಾಗ್", ಗೀತಿಕಾ ರುಸ್ತಗಿ , 2010 ರ ಅಕ್ಟೋಬರ್ 3 (2010 ರ ಅಕ್ಟೋಬರ್ 5 ರಂದು ಪ್ರವೇಶಿಸಲಾಯಿತು)