ಸದಸ್ಯ:Yakshitha.p.c/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

ಜುಬುಲಿ: ಜುಬುಲಿ[೧] ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಡುಗಿಯರು ಆಡುವ ಆಟ. ಇದು ಒಂದು ಒಳಾಂಗಣ ಆಟವಾಗಿದೆ[೨].

ಆಟದ ವಿಧ[ಬದಲಾಯಿಸಿ]

ಆಟದ ವಿಧಾನ[ಬದಲಾಯಿಸಿ]

ಮೊದಲಿಗೆ ನಾಲ್ಕು ಚೌಕಾಕಾರಗಳ ಒಂದು ಅಂಕಣವನ್ನು ಹಾಕಿಕೊಳ್ಳುತ್ತಾರೆ. ನಂತರದಲ್ಲಿ ಅಂಕಣದ ಯಾವುದೇ ಒಂದು ಬದಿಯಿಂದ ಚಪ್ಪಟೆಯಾದ ಕಲ್ಲನ್ನು ಅಂಕಣದ ಮೊದಲ ಚೌಕಕ್ಕೆ ಹಾಕುವುದರ ಮೂಲಕ ಆಟವನ್ನು ಆರಂಭಿಸುತ್ತಾರೆ. ಮೊದಲ ಚೌಕಕ್ಕೆ ಹಾಕಿದಂತಹ ಕಲ್ಲನ್ನು ಒಂಟಿಕಾಲಿನಿಂದ ತುಳಿದು ಮುಂದಿನ ಚೌಕಕ್ಕೆ ಹಾಕುತ್ತಾರೆ. ನಂತರ ಎರಡು,ಮೂರು ಹೀಗೆ ನಾಲ್ಕನೇ ಚೌಕದಿಂದ ಹೊರಕ‍್ಕೆ ಹಾಕಿ ಅದನ್ನು ಎರಡು ಕಾಲಿನಿಂದ ತುಳಿದು ನಂತರದಲ್ಲಿ ಕೈಯಲ್ಲಿ ತೆಗೆದು ಕಲ್ಲನ್ನು ಮುಂದಿನ ಚೌಕಾಕಾರದ ಅಂಕಣಕ್ಕೆ ಹಾಕುವ ಮೂಲಕ ಆಟವನ್ನು ಮುಂದುವರಿಸುತ್ತಾರೆ.ನಂತರದಲ್ಲಿ ಎರಡನೇ ಸುತ್ತಿನಲ್ಲಿ ಕಪ್ಪೆನಾ ಕುಷಿನಾ ಎಂದು ಎದುರಾಳಿ ಬಳಿ ಕೇಳಿ. ಅವರು ಕಪ್ಪೆ ಎಂದರೆ ಮೊದಲ ಚೌಕಕ್ಕೆ ಹಾಕಿದ ಕಲ್ಲು ಕಾಣದಂತೆ ಎರಡು ಕಾಲಿನಿಂದ ಮುಚ್ಚುತ್ತಾರೆ. ನಂತರ ಮುಂದಿನ ಅಂಕಣಕ್ಕೆ ಕಲ್ಲನ್ನು ಕಾಲಿನಿಂದ ಮುಂದೂಡುತ್ತಾ ಆಟವನ್ನು ಮುಂದುವರೆಸುತ್ತಾರೆ.ಕುಷಿ ಎಂದು ಹೇಳಿದರೆ ಕಲ್ಲು ಎರಡು ಕಾಲುಗಳ ಮದ್ಯಭಾಗದಲ್ಲಿರುವಂತೆ ಆಟವನ್ನು ಆಡುತ್ತಾರೆ. ಮುಂದೆ ಆಟವನ್ನು ಕಲ್ಲನ್ನು ಒಂದು, ಎರಡು, ಮೂರು ಬೆರಳು,ಅಂಗೈ,ಕಣ್ಣು,ಹಣೆ ಮೇಲಿಟ್ಟು ಕಣ್ಣನ್ನು ಮುಚ್ಚಿ ಚೌಕಾಕಾರದ ಅಂಕಣದ ಮೇಲೆ ಹೋಗಿ ಅಂಕಣದಿಂದ ಕಲ್ಲನ್ನು ಹೊರಹಾಕುವ ಮೂಲಕ ಆಟವನ್ನು ಪೂರ್ಣಗೊಳಿಸುತ್ತಾರೆ.

ನಿಯಮಗಳು[ಬದಲಾಯಿಸಿ]

  • ಮೊದಲ ಸುತ್ತಿನ ಆಟವನ್ನು ಒಂಟಿಕಾಲಿನಲ್ಲಿ ಆಡಬೇಕು.
  • ಆಟ ಆಡುವಾಗ ಕಲ್ಲು ಗೆರೆಗೆ ತಾಗಿದರೆ ಆಟಗಾರನು ಆ ಸುತ್ತಿನಿಂದ ಹೊರಹೋಗುತ್ತಾರೆ.
  • ಕಲ್ಲನ್ನು ಅಂಕಣದಿಂದ ಹೊರಹಾಕಿದ ನಂತರ ಮೊದಲು ಕಾಲಿನಿಂದ ತುಳಿದು ನಂತರ ಕೈಯಿಂದ ಹೆಕ್ಕಿಕೊಳ್ಳತ್ತಾರೆ
  • ಕಲ್ಲನ್ನು ಅಂಕಣದೊಳಗೆ ಹಾಕುವಾಗ ಕಲ್ಲು ಗೆರೆಗೆ ತಾಗೆದರೆ ಆಟಗಾರ ಆ ಸುತ್ತಿನಿಂದ ಹೊರ ಉಳಿಯುತ್ತಾನೆ.

ಉಲ್ಲೇಖ[ಬದಲಾಯಿಸಿ]

  1. http://shodhganga.inflibnet.ac.in/bitstream/10603/131817/5/05_table%20of%20content.pdf
  2. http://kanaja.in/?p=103277