ವಿಷಯಕ್ಕೆ ಹೋಗು

ಸದಸ್ಯ:Vinodbk1710160/WEP 2018-19

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೇವಿಂದರ್ ಅಹುಜಾ

ದೇವಿಂದರ್ ಅಹುಜಾ ಮಾಜಿ ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಡಿಸೆಂಬರ್ ೨೫ ೧೯೪೯ರಂದು ಅಮೃತ್ಸರ್ ಪಂಜಾಬ್ನಲ್ಲಿ ಜನಿಸಿದರು.

ವೃತ್ತಿಜೀವನ

[ಬದಲಾಯಿಸಿ]

ಅವರು ತಮ್ಮ ವೃತ್ತಿಜೀವನ್ನು ೧೫ನೇ ವಯಸ್ಸಿನಲ್ಲಿ ಬ್ಯಾಡ್ಮಿಂಟನ್ ಆಟದ ಮೂಲಕ ಪ್ರಾರಂಭಿಸಿದರು,ನಂತರ ತಮ್ಮ ೧೮ನೇ ವಯಸ್ಸಿನಲ್ಲಿ ಪಂಜಾಬ್ ಸ್ಟೇಟ್ ಜುನಿಯರ್ ಬಿರುದನ್ನು ಪಡೆದರು ನಂತರ ಅವರು ಸೀನಿಯರ್ ಚಾಂಪಿಯನ್ ಶಿಪ್ ನಲ್ಲಿ ಗೆದ್ದು ಅನೇಕ ತಜ್ನರಿಂದ ಅವರ ಕೀರ್ತಿಯನ್ನು ಹೆಚ್ಚಿಸಿದರು.

ಕೊಡುಗೆಗಳು

[ಬದಲಾಯಿಸಿ]

ದೇವಿಂದರ್ ಅಹುಜರವರು ಥಾಮಸ್ ಕಪ್ ಪಂದ್ಯಾವಳಿಗಳಲ್ಲಿ ಭಾರತವನ್ನು ಎರಡು ಬಾರಿ ಪ್ರತಿನಿಧಿಸಿ ಆಕ್ಲೆಂಡ್ ನಲ್ಲಿ[೧೯೭೨-೧೯೭೩] ನಡೆದ ನ್ಯೊಜಿಲ್ಯಾಂಡ್ ವಿರುದ್ದದ ಮತ್ತು ಲಾಹೋರ್ ನಲ್ಲಿ[೧೯೭೫-೧೯೭೬] ನಡೆದ ಪಾಕಿಸ್ತಾನದ ವಿರುದ್ದ ಪಂದ್ಯಗಳಲ್ಲಿ ಗೆಲುವು ಸಾಧಿಸಿದರು.೧೯೭೪ರಲ್ಲಿ ತೆಹರಾನ್ ಏಷ್ಯನ್ ಗೇಮ್ಸ್ ನಲ್ಲಿ ಕಂಚು ಪದಕ ಗೆದ್ದ ಭಾರತದ ತಂಡದಲ್ಲಿ ರೋಮನ್ ಗೋಶ್ ರವರ ಜೊತೆ ಇವರು ಭಾಗಿಯಾಗಿದ್ದರು.ದೇವಿಂದರ್ ಅಹುಜಾರವರು ಒಟ್ಟು ನಾಲ್ಕು ಬಾರಿ ರಾಷ್ಟ್ರೀಯ ಚಾಂಪಿಯನ್ ಶಿಪ್ಪಿನ ಏಕ ಫೈನಲ್ಸ್ ನಲ್ಲಿ ಪ್ರಕಾಶ್ ಪಡುಕೋಣೆಯ ವಿರುದ್ದ ಸೋಲು ಕಂಡರು. ದೇವಿಂದರ್ ಅಹುಜಾ ಒಬ್ಬ ಅಸಾಧಾರಣ ಆಟಗಾರ ಮತ್ತು ಬಹಳ ಸಂದರ್ಭಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದರು.

ಪ್ರಶಸ್ತಿಗಳು

[ಬದಲಾಯಿಸಿ]

ಅವರು ಏಷ್ಯನ್ ಇನ್ವಿಟೇಷನ್ ಚಾಂಪಿಯನ್ ಶಿಪ್,ಜಿನ್ನಾ ಸೆಂಟೆನರಿ ಚಾಂಪಿಯನ್ಶಿಪ್,ಹೈದರಬಾದಿನ ೧೯೭೬ರಲ್ಲಿ ನಡೆದ ಚಾಂಪಿಯನ್ಶಿಪ್ ಮತ್ತು ೧೯೭೪ನ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಕೂಡ ತಮ್ಮ ಟ್ಯಾಲೆಂಟ್ ಅನ್ನು ಪ್ರದರ್ಶಿಸಿದ್ದಾರೆ. ಇವೆಲ್ಲದರ ನಡುವೆ ೧೯೭೫ರಲ್ಲಿ ಭಾರತದ ಕ್ರೀಡ ಕ್ಷೇತ್ರದ ಅತಿ ಗೌರವವುಳ್ಳ ಅರ್ಜುನ ಪ್ರಶಸ್ತಿಯನ್ನು ಪಡೆದರು.

ಉಲ್ಲೇಖಗಳು

[ಬದಲಾಯಿಸಿ]

[] []

  1. https://www.wikidata.org/wiki/Q26932638
  2. https://upclosed.com/people/davinder-ahuja/