ಸದಸ್ಯ:Vinay357

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ[ಬದಲಾಯಿಸಿ]

ನನ್ನ ಹೆಸರು ವಿನಯ್ ಕುಮಾರ್ ಗೌಡ.ನನ್ನ ತಂದೆಯ ಶಿವಕುಮಾರ್ , ತಾಯಿ ಸುಧಾರಾಣಿ.ನಾಲ್ಕು ಜನರಿಂದ ಕೂಡಿರುವ ಚಿಕ್ಕ ಕುಟುಂಬ. ನನ್ನ ತಂದೆ ವೃತ್ತಿಯಲ್ಲಿ ರೈತ, ತಾಯಿ ಗೃಯಿಣಿ. ನಾನು ಹುಟ್ಟಿ ಬೆಳದಿದ್ದು ಬೆಂಗಳೂರಿನಲ್ಲೆ. ಬೆಂಗಳೂರು ನನ್ನ ಜೀವನದ ಒಂದು ಮುಖ್ಯಂಶವಾಗಿದೆ.

ವಿದ್ಯಭ್ಯಾಸ[ಬದಲಾಯಿಸಿ]

ಮೊದಲನೆಯ ತರಗತಿಯಿಂದ ಹಿಡಿದು ಹತ್ತನೆಯ ತರಗತಿಯವರೆಗೆ "ಕಾಮೆ೯ಲ್ ಶಾಲೆಯಲ್ಲಿ" ವ್ಯಾಸಂಗ ಮಾಡಿದ್ದೇನೆ. ಪ್ರಥಮ ಮತ್ತು ದ್ವೀತಿಯ ಪಿ.ಯು.ಸಿ ಯನ್ನು ಆರ್.ಎನ್.ಎಸ್.ಐಟಿಯಲ್ಲಿ ಪೂಣ೯ಗೊಳಿಸಿದ್ದೇನೆ. ಉತ್ತಮ ಕಗಳನಲ್ಲದೇ, ಒಳ್ಳೆಯ ಗುಣಗಳನ್ನು ಬೆಳೆಸುವ ಕಾರ್ಯದಲ್ಲಿ ಈ ಎರಡು ಸಂಸ್ಥೆಗಳು ನನಗೆ ಅಡಿಪಾಯವಾಗಿವೆ.ನಾನು ಹುಟ್ಟಿದ್ದು , ಬೆಳದಿದ್ದು ಬೆಂಗಳೂರಿನಲ್ಲಿಯೇ.

ಆಸಕ್ತಿ[ಬದಲಾಯಿಸಿ]

ರಾಷ್ಟ್ರಕವಿ ಕುವೆಂಪು

ಸುಮಾರು ಹತ್ತನೇ ವಯಸ್ಸಿನಲ್ಲೇ ಕುವೆಂಪುರವರ ಲೇಖನಗಳು ನನ್ನ ಮೇಲೆ ಪ್ರಭಾವ ಮೂಡಿಸಿದವು.ಅವರ ಬಗ್ಗೆ ಮಾಹಿತಿ ಕಲೆಹಾಕುತ್ತಾ ಹೋದಾಗ ಅವರು ಕನ್ನಡದ "ರಾಷ್ಟ್ರಕವಿ" ಎಂಬುದು ಅರಿವಾಯಿತು. ಪದ್ಮಭೂಷಣ ಮುಂತಾದ ಗೌರವವುಳ್ಳ ಪ್ರಶಸ್ತಿ ವೀಜೆತರೆಂದು ಅರಿವಾಯಿತು. ಕೊಳಲು , ನವಿಲು , ಅಗ್ನಿಹಂಸ , ಪಕ್ಷಿಕಾಶಿ ,ಅನಿಕೇತನ, ಕಿಂಕಣಿ , ಪಾಂಚಜನ್ಯ ಮುಂತಾದವುಗಳು ಇವರ ಪ್ರಮುಖ ರಚನೆಗಳು.ಕನ್ನಡ ಸಾಹಿತ್ಯವನ್ನು ಶ್ರಿಮಂತಗೊಳಿಸಿದ ಕೀತಿ೯ ಕುವೆಂಪು ಅವರದು.ಇವರ ಬರಹಗಳಲ್ಲಿನ ಪದಗಳು ಸುಲಭವಾದ , ಆಕಷ೯ಣಿಯ , ಭಾಷೆಯಿಂದ ಕೂಡಿರುತ್ತವೆ. ಈ ಶೈಲಿ ಓದುಗಾರರನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.ಇವರು ಕನ್ನಡ ಮಾತೆಯ ಮೇಲೆ ಅಪಾರ ಪ್ರೀತಿ , ಅಭಿಮಾನ ಇಟ್ಟುಕೊಂಡಿದ್ದರು.ಇವರು ರಚಿಸಿರುವ ಕನ್ನಡ ನಾಡಗೀತೆ ಅಪ್ರತಿಮವಾದದ್ದು. ಈ ನಾಡಗೀತೆಯನ್ನು ಹಾಡುವಾಗ ಮೈ ರೋಮಾಂಚನವಾಗುತ್ತದೆ.

ಪ್ರವಾಸ[ಬದಲಾಯಿಸಿ]

ಮೈಸೂರು ಅರಮನೆ

ಮೈಸೂರು ಒಂದು ಪ್ರವಾಸ ತಾಣವಾಗಿದ್ದು, ಅದನ್ನು ನೋಡಲು ಒಂದು ಸಲ ಮೈಸೂರಿಗೆ ಹೋಗಿದ್ದೆ.ಮೈಸೂರು ನೋಡಲು ತುಂಬಾ ಸುಂದರವಾದ , ಸ್ವಚ್ಚತೆಯ ನಗರ ಎಂದು ಹೆಸರು ವಾಸಿಯಾಗಿದೆ.ಮೃಗಾಲಯ, ಅನೆಕಟ್ಟು, ಬೃಂದಾವನ, ಉದ್ಯಾನವನಗಳಿಗೆ ಭೇಟಿ ನೀಡಿದ್ದೆ.ಅಲ್ಲಿನ ತಾಯಿ ಚಾಮುಂಡಿಯ ಬೆಟ್ಟದಲ್ಲಿ ಇರುವ ದೇವಾಲಯ ನನ್ನ ಮೈ , ಮನಸ್ಸನ್ನು ರೋಮಾಚನಗೋಳಿಸಿತು. ಸಹಜವಾಗಿ ಮೈಸೂರು ಮಲ್ಲಿಗೆಗೆ, ಉದ್ಯಾನವನಕ್ಕೆ, ಮತ್ತು ವಿಳ್ಳೆದೆಲೆಗೆ ಪ್ರಸಿದ್ದಿಯಾಗಿದೆ ಹಾಗೂ ಅರಮನೆಯ ಇತಿಹಾಸವನ್ನು ತಿಳಿಸುತ್ತದೆ .ಮೈಸೂರಿಗೆ ಭೇಟಿ ಕೊಡುವವರು ಹೋಗಲೆಬೇಕಿರುವ ಸ್ಥಳಗಳಲ್ಲಿ ಅರಮನೆಯು ಒಂದು.ಅಲ್ಲಿನ ವಾತಾವರಣ , ಚಿನ್ನದ ಅಂಬಾರಿ, ಬೆಳೆಯುಳ್ಳ ವಸ್ತುಗಳು ನಮ್ಮ ನಾಡಿನ ಮಹತ್ವವನ್ನು ತೋರುತ್ತದೆ.ಅದರಲ್ಲೂ ನಮ್ಮ ನಾಡ ಹಬ್ಬವಾದ "ದಸರಾ"ದ ಸಮಯದಲ್ಲಿ ಅರಮನೆಯನ್ನು ನೋಡುವುದೆ ಕಣ್ಣಿಗೆ ಹಬ್ಬವಿದ್ದಂತೆ .ನಮ್ಮ ನಾಡಿನ ಸಂಸ್ಕಾರ , ಪದ್ಧತಿಯನ್ನು ತೋರಿಸುತ್ತದೆ.ಇದನ್ನು ನೋಡಲು ಜನಸಾಗರವೇ ಹರಿದುಬರುತ್ತದೆ.ಅಂದು ಅಂಬಾರಿಯ ಮೇಲೆ "ನಾಡ ದೇವತೆಯಾದ ತಾಯಿ ಚಾಮುಂಡಿ"ಯನ್ನು ಇರಿಸಿ ಮೆರವಣಿಗೆ ಮಾಡುತ್ತಾರೆ. ಇಡೀ ಮೈಸೂರು ಬಣ್ಣ-ಬಣ್ಣ ಬೆಳಕಿನಿಂದ ನೋಡುಗರ ಕಣ್ಮನ ಸೆಳೆಯುತ್ತದೆ,ಮನಸ್ಸಿಗೆ ಮುದ ನೀಡುತ್ತದೆ.

ಬೆಂಗಳೊರು ನಗರ

ಬೆಂಗಳೂರು[ಬದಲಾಯಿಸಿ]

ಬೆಂದಕಾಳೂರು ಎಂದೆ ಪ್ರಸಿದ್ದವಾದ ನಗರ ಇಂದು ಹಲವಾರು ಮೈಲುಗಳವರೆಗೆ ತನ್ನನ್ನು ತಾನು ಚಾಚಿಕೊಂಡಿದೆ. ನಮ್ಮ ನಗರವು ವಿಧಾನಸೌಧ, ಲಾಲ್ ಬಾಗ್, ಕಬ್ಬನ್ ಪಾರ್ಕ್ , ಬೆಂಗಳೂರು ಅರಮನೆ, ಟಿಪ್ಪು ಅರಮನೆ, ಸ್ವಾತಂತ್ರ್ಯ ಉದ್ಯಾನ ಮುಂತಾದ ಹಲವು ಪ್ರವಾಸಿ ಸ್ಥಳಗಳನ್ನು ಹೊಂದಿದೆ.ಇತ್ತೀಚೆಗೆ ಮೆಟ್ರೊ ಸೇವೆಯು, ನಗರದಲ್ಲಿ ಗಾಡಿ ಸಂಚಾರವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡಿದೆ. ಬೆಂಗಳೂರಿನ ಹವಾಮಾನವು ತುಂಬಾ ಆಹ್ಲಾದಕರ ಮತ್ತು ಹಿತಕರವಾಗಿರುತ್ತದೆ. ಇದು ತನ್ನ ಸೌಂದರ್ಯವನ್ನು ಭೇಟಿ ಮಾಡಲು ಮತ್ತು ರುಚಿಸಲು ಅನೇಕ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.