ವಿಷಯಕ್ಕೆ ಹೋಗು

ಸದಸ್ಯ:Varun prakash-punk/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಸ್ಟ್ರೋಬಯಾಲಾಜಿ

[ಬದಲಾಯಿಸಿ]
ಅನ್ಯಗ್ರಹ ಜೀವಿಯ ಗ್ರಾಫಿಕ್ ಚಿತ್ರ।

ಆಸ್ಟ್ರೋಬಯಾಲಾಜಿ ಬ್ರಹ್ಮಾಂಡದಲ್ಲಿ ಜೀವ ರಾಶಿಗಳ ಅಸ್ತಿತ್ವವನ್ನು ಹುಡುಕುವ ವಿಜ್ಞಾನ.ಇತರ ಗ್ರಹಗಳಲ್ಲಿ ಜೀವ ರಾಶಿ ಯಾಕೆ ಇಲ್ಲ?,ಜೀವಿಸಲು ಬೇಕಾದ ಮೂಲ ಸೌಲಭ್ಯಗಳಾವುದು?, ಈ ಬ್ರಹ್ಮಾಂಡದಲ್ಲಿ ಮಾನವನಂತೆ ಬೇರೆ ಬುದ್ದಿವಂತ ಜೀವಿಗಳು ಯಾಕಿಲ್ಲ,ಎಂಬ ಹಲವು ಪ್ರಶ್ನೆಗಳನ್ನು ಸಂಶೋಧನೆಗೊಳಪಡಿಸಿ ನಿರೂಪಿಸಿದ ವಿಜ್ಞಾನ.ಹದಿನಾರನೇಯ ಶತಮಾನದಲೇ ಇಟಲಿಯ ಖ್ಯಾತ ವಿಜ್ಞಾನಿ "ಗಿಯೋರ್ಡಾನೋ ಬ್ರೂನೋರವರು"[೧] ಮಾನವನ ಹಾಗೆಯೇ ಬ್ರಹ್ಮಾಂಡದಲ್ಲಿ ಬೇರೆ ಜೀವಿಗಳಿವೆ ಎಂದು ಮೊಟ್ಟ ಮೊದಲ ಬಾರಿಗೆ ಹೇಳಿದರು.ಇದಕ್ಕೆ ಯಾವುದೇ ಸ್ಪಷ್ಟ ಪುರಾವೆ ಇಲ್ಲದ ಕಾರಣ ಅವರು ಹಲವಾರು ವಿವಾದಗಳಿಗೆ ಒಳಪಟ್ಟರು. ಅಂದಿನ ಕೆಲವು ತರ್ಕಬಾಹೀರರು ಈ ಕಾರಣಕ್ಕೆ ಜೀವಂತವಾಗಿ ಇವರನ್ನು ಸುಟ್ಟರು.ಇವರನ್ನು ಆಸ್ಟ್ರೋಬಯಾಲಾಜಿಯ ಪಿತಾಮಹ ಎಂದು ಕರೆಯುತ್ತಾರೆ.

ಭೂಮಿಯಲ್ಲಿ ಜೀವರಾಶಿಯ ನಿರ್ಮಾಣ

[ಬದಲಾಯಿಸಿ]
ಡಿ.ಎನ್.ಎ ಯ ಡಬಲ್ ಹೆಲಿಕ್ಸ್ ಮಾದರಿ।

ಭೂಮಿಯನ್ನು ಬಿಟ್ಟು ಬೇರೆ ಯಾವ ಗ್ರಹದಲ್ಲೂ ಜೀವರಾಶಿಗಳ ಅಸ್ತಿತ್ವವನ್ನು ವೈಜ್ಞಾನಿಕವಾಗಿ ದೃಢಪಡಿಸುಲು ಸಾದ್ಯವಾಗಿಲ್ಲ. ಭೂಮಿಯಲ್ಲಿ ಜೀವ ಕಣಗಳ ನಿರ್ಮಾಣಕ್ಕೆ ಅಂದಿನ ವಾತಾವರಣವೇ[೨] ಕಾರಣ.ಭೂಮಿಯ ಹೊರಪದರವು(ಕ್ರಸ್ಟ್) ಸಾಕಷ್ಟು ತಂಪಾದ ನಂತರವೇ ಜೀವಜಾಲ ಅಸ್ಥಿತ್ವಕ್ಕೆ ಬಂತು.ಜ್ವಾಲಾಮುಖಿಯಿಂದ ಹೊರಬಂದ ನೀರಿನ ಆವಿ ಸಾಂದ್ರೀಕರಣವಾಗಿ ಮಳೆಯಾಗಿ ಸುರಿಯಿತು ಈ ನೀರು ಭೂಮಿಯ ಕುಳಿಯಲ್ಲಿ ಒಂದುಗಟ್ಟಿ ಜೀವ ಕಣಗಳ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿತು.ನೀರು ಸಾವತ್ರಿಕ ದ್ರಾವಕವಾಗಿದ್ದರಿಂದ ಬೇರೆ ರಾಸಾಯಿನಿಕಗಳೊಟ್ಟಿಗೆ ಮಿಶ್ರಣವಾಗಲು ಅವಕಾಶ ನೀಡುವುದಲ್ಲದೆ ನೀರಿನ ತಾಪಮಾನ ರಾಸಾಯಿನಿಕ ಪ್ರತಿಕ್ರಿಯೆಗಳಿಗೆ ಉತ್ತಮವಾಗಿದ್ದರಿಂದ ಭೂಮಿಯಲ್ಲಿ ಮೊದಲ ಜೀವ ಕಣ ನೀರಿನೊಳಗೆ ಸೃಷ್ಟಿಯಾಗಿರಬೇಕು ಎಂದು ವಿಜ್ಞಾನಿಗಳು ನಂಬಿದ್ದಾರೆ. ೩.೪-೨.೮ ಶತಕೋಟಿಯಷ್ಟು ಹಳೆಯದಾದ ಪಳೆಯುಳಿಕೆಯ ಆದಾರದಮೇಲೆ, ಆ ಕಾಲದಲ್ಲೇ ಭೂಮಿಯಲ್ಲಿ ಸಯನೋಬ್ಯಾಕ್ಟೀರಿಯ ಇತ್ತು ಎಂದು ಕಂಡು ಹಿಡಿದಿದ್ದಾರೆ. ಕೋಶಭಿತ್ತಿ ಮತ್ತು ಡಿ.ಎನ್.ಎ ವಿಕಸನಗೊಂಡಿರುವುದರಿಂದ ಮೊದಲ ಜೀವ ಕಣ ೩.೮ ಶತಕೋಟಿ ವರ್ಷ ಹಿಂದೆಯೇ ಸೃಷ್ಟಿಯಾಗಿರಬೇಕು ಎಂದು ಊಹಿಸಲಾಗಿದೆ. ಕಾರ್ಬನ್ ಡೈ ಆಕ್ಸೈಡ್ "ಗ್ರೀನ ಹೌಸ್ ಗ್ಯಾಸ್ " ಆಗಿದ್ದರಿಂದ ಸೂರ್ಯನ ಕಿರಣಗಳನ್ನು ಸೆರೆಹಿಡಿಯುವ ಕಾರ್ಯ ಮಾಡುತ್ತಿತ್ತು.ಆರಂಭಿಕ ಸಯನೋಬ್ಯಾಕ್ಟೀರಿಯ ದ್ಯುತಿಸಂಶ್ಲೇಷಣೆಯ ಮೂಲಕ ಆಮ್ಲಜನಕ ಉತ್ಪಾದಿಸುವ ಮೊದಲ ಜೀವಿಗಳಾಗಿತ್ತು. ಆದುದರಿಂದ ವಾತಾವರಣದಲ್ಲಿದ್ದ ಕಾರ್ಬನ್ ಡೈ ಆಕ್ಸೈಡ್‍ನ ಅಂಶ ಕಡಿಮೆಯಾಗುತ್ತಲೇ ಭೂಮಿಯ ತಾಪಮಾನ ಕಡಿಮೆಯಾಯಿತು. ಆಮ್ಲಜನಕದ ಅಂಶ ಹೆಚ್ಚಾಗಿದ್ದರಿಂದ ಓಝೋನ್ ರಚನೆಯಾಯಿತು.ಸೂರ್ಯನಿಂದ ಬರುವ UV[೩] ಕಿರಣಗಳನ್ನು ತಡೆಯುವ ಕೆಲಸ ಓಝೋನ್ ಮಾಡುವುದರಿಂದ ಜೀವಿಗಳು ನೀರಿನಿಂದ ಹೊರಗೆ ಬರಲು ಪ್ರಾರಂಭಿಸಿತು.ಭೂಮಿಯು ಜೀವ ಕಣಗಳಿಗೆ ಸೂಕ್ತ ಗ್ರಹ ಎಂದು ಹೇಳುವುದಕ್ಕಿಂತ ಜೀವ ಕಣಗಳು ಭೂಮಿಯ ವಾತಾವರಣಕ್ಕೆ ಹೊಂದಿಕೊಂಡಿವೆ ಎಂದು ಹೇಳುವುದು ಸೂಕ್ತ,ಇದ್ದಕ್ಕೆ ಉದಾಹರಣೆಯಾಗಿ ಎಸಿಡೋಫೈಲ್(೩ ಅಥವಾ ಕೆಳಗಿರುವ ಪಿಹೆಚ್(ph) ಮಟ್ಟದಲ್ಲಿ ಅತ್ಯುತ್ತಮ ಬೆಳವಣಿಗೆ ಹೊಂದುವ ಸೂಕ್ಷ್ಮಾಣುಜೀವಿ),ಆಲ್ಕಾಲಿಫೈಲ್(೯ ಅಥವಾ ಇದರ ಮೇಲಿರುವ ಪಿಹೆಚ್ (ph) ಮಟ್ಟದಲ್ಲಿ ಅತ್ಯುತ್ತಮ ಬೆಳವಣಿಗೆ ಹೊಂದುವ ಸೂಕ್ಷ್ಮಾಣುಜೀವಿ),ಏನಿರೋಬ್( ಬೆಳವಣಿಗೆಗೆ ಆಮ್ಲಜನಕ ಅಗತ್ಯವಿರದ ಸೂಕ್ಷ್ಮಾಣುಜೀವಿ),ಹೈಪರ್ ಥರ್ಮೋಫೈಲ್(೮೦°C ಕ್ಕಿಂತ ಹೆಚ್ಚಿನ ತಾಪಮಾನದಲ್ಲೂ ಬೆಳೆಯಲು ಸಾಧ್ಯವಾಗುವ ಸೂಕ್ಷ್ಮಾಣುಜೀವಿ),ಓಲಿಗೋಟ್ರೋಪ್(ಪೌಷ್ಟಿಕಾಂಶ ಸೀಮಿತ ಪರಿಸರದಲ್ಲಿ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿರುವ ಸೂಕ್ಷ್ಮಾಣುಜೀವಿ),ಫಿಜ಼ೊಫೈಲ್(ಹೆಚ್ಚಿನ ಒತ್ತಡದಲ್ಲಿ ಅತ್ಯುತ್ತಮವಾಗಿ ಜೀವಿಸುವ ಸೂಕ್ಷ್ಮಾಣುಜೀವಿ) ಕೃಪ್ಟೋಯೆನ್ಡೋಲಿತ್(ಬಂಡೆಗಳ ನಡುವೆ ಇರುವ ಸೂಕ್ಷ್ಮ ಸ್ಥಳಗಳಲ್ಲಿ ಬೆಳವಣಿಗೆ ಹೊಂದುವ ಸೂಕ್ಷ್ಮಾಣುಜೀವಿ) ಇವೆಲ್ಲವು ತೀವ್ರವಾದ ವಾತಾವರಣದಲ್ಲಿ ಜೀವಿಸುವ ಸಾಮರ್ಥ್ಯ ಹೊಂದಿದೆ.

ಹ್ಯಾಬಿಟೆಬಲ್ ಜ಼ೋನ್

[ಬದಲಾಯಿಸಿ]

ಬಾಹ್ಯಾಕಾಶದಲ್ಲಿ ಜೀವಕಣಗಳ ನಿರ್ಮಾಣಕ್ಕೆ ಅತ್ಯುತ್ತಮ ಪ್ರದೇಶಗಳನ್ನು ಹ್ಯಾಬಿಟೆಬಲ್ ಜ಼ೋನ್ ಎಂದು ಕರೆಯುತ್ತೇವೆ. ಈ ಪ್ರದೇಶದಲ್ಲಿರುವ ಗ್ರಹಗಳಲ್ಲಿ ಭೂಮ್ಯಾತೀತ ಜೀವನದ ಸಾಧ್ಯತೆಗಳಿವೆ.ಹ್ಯಾಬಿಟೆಬಲ್ ಜ಼ೋನ್ನನ್ನು 'ಲೈಪ್ ಜ಼ೋನ್', 'ಕಂಫರ್ಟ್ ಜ಼ೋನ್',' ಗ್ರಿನ್ ಬೆಲ್ಟ್',' ಗೋಲ್ಡಿಲಾಕ್ಸ್ ಜ಼ೋನ್', ಎಂದು ಕರೆಯಲಾಗುತ್ತದೆ.ಇಂತಹ ಪ್ರದೇಶಗಳಲ್ಲಿ ನೀರು ದ್ರವದ ರೊಪದಲ್ಲಿ ಇರಬೇಕು.ಹ್ಯಾಬಿಟೆಬಲ್ ಜ಼ೋನ್ ಒಂದು ಅವೆರಜ್ ನಕ್ಷತ್ರದ ಮಧ್ಯ ಕಕ್ಷದಲ್ಲಿ ಇರುತ್ತದೆ.ನಕ್ಷತ್ರದ ಗಾತ್ರ ದೊಡ್ಡದಾಗಿದ್ದರೆ ಹ್ಯಾಬಿಟೆಬಲ್ ಜ಼ೋನ್ ನಕ್ಷತ್ರದಿಂದ ದೂರದಲ್ಲಿರುತ್ತದೆ.'ಗ್ಲೇಸೀಸ್ 667cc'(ಭೂಮಿಯಿಂದ ೨೩.೬೨ ಜ್ಯೋತಿರ್ವರ್ಷ ದೂರದಲ್ಲಿರುವ ಗ್ರಹ), 'ಕೆಪ್ಲರ್-442b'(ಭೂಮಿಯಿಂದ ೨೩.೬೨ ಜ್ಯೋತಿರ್ವರ್ಷ ದೂರದಲ್ಲಿರುವ ಗ್ರಹ), 'ಕೆಪ್ಲರ್-1229b'(ಭೂಮಿಯಿಂದ ೭೬೯ ಜ್ಯೋತಿರ್ವರ್ಷ ದೂರದಲ್ಲಿರುವ ಗ್ರಹ), 'ವುಲ್ಫ್-1061c'(ಭೂಮಿಯಿಂದ ೧೩.೮ ಜ್ಯೋತಿರ್ವರ್ಷ ದೂರದಲ್ಲಿರುವ ಗ್ರಹ), 'ಕೆಪ್ಲರ್-62f'(ಭೂಮಿಯಿಂದ ~೧೨೦೦ ಜ್ಯೋತಿರ್ವರ್ಷ ದೂರದಲ್ಲಿರುವ ಗ್ರಹ), 'ಕೆಪ್ಲರ್-452b'(ಭೂಮಿಯಿಂದ ~೧೪೦೨ ಜ್ಯೋತಿರ್ವರ್ಷ ದೂರದಲ್ಲಿರುವ ಗ್ರಹ) ಮುಂತಾದ ಗ್ರಹಗಳು ಹ್ಯಾಬಿಟೆಬಲ್ ಜ಼ೋನ್ನಲ್ಲಿವೆ.ಈ ಗ್ರಹಗಳು ಭೂಮಿಯಿಂದ ತುಂಬಾ ದೂರದಲ್ಲಿರುವ ಕಾರಣ ಈ ಗ್ರಹಗಳಲ್ಲಿ ಅನ್ಯಗ್ರಹ ಜೀವಿಗಳಿವೆ ಎಂಬುದಕ್ಕೆ ಯಾವುದೇ ಸ್ಪಷ್ಟತೆಯಿಲ್ಲ.

ಡ್ರೇಕ್ ಈಕ್ವೇಶನ್

[ಬದಲಾಯಿಸಿ]

೧೯೬೧ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞನಾದ ಫ್ರಾಂಕ್ ಡ್ರೇಕ್ 'ಡ್ರೇಕ್ ಈಕ್ವೇಶನ್'[೪] ಎಂಬ ಸಮೀಕರಣ ಕೊಟ್ಟನು. ಡ್ರೇಕ್ ಈಕ್ವೇಶನ್ ಆಕಾಶಗಂಗೆ ಗ್ಯಾಲಕ್ಸಿಯಲ್ಲಿ ಸಂಪರ್ಕಿಸಲು ಸಾದ್ಯವಾಗುವ ಭೂಮ್ಯಾತೀತ ನಾಗರೀಕತೆಗಳ ಸಂಖ್ಯೆ ಅಂದಾಜು ಮಾಡಲು ನೆರವಾಗುತ್ತದೆ.ಡ್ರೇಕ್ ಈಕ್ವೇಶನ್: N=R*fp*ne*fl*fi*fc*L, ಇಲ್ಲಿ
R=ನಮ್ಮ ಆಕಾಶಗಂಗೆ ಗ್ಯಾಲಕ್ಸಿಯಲ್ಲಿ ನಕ್ಷತ್ರ ರಚನೆಯ ಸರಾಸರಿಯ ದರ.
fp=ಗ್ರಹಗಳನ್ನು ಹೊಂದಿರುವ ನಕ್ಷತ್ರಗಳ ಅಪೂರ್ಣಾಂಕ.
ne=ಹ್ಯಾಬಿಟೆಬಲ್ ಜ಼ೋನ್ನಲ್ಲಿರುವ ಗ್ರಹಗಳ ಸರಾಸರಿ.
fl=ನಮ್ಮ ಭೂಮಿಯಂತೆ ಇರುವ ಗ್ರಹಗಳ ಸರಾಸರಿ.
fi=ನಾಗರೀಕತೆ ಹೊಂದಿರುವ ಅನ್ಯಗ್ರಹ ಜೀವಿಗಳ ಗ್ರಹಗಳ ಸರಾಸರಿ.
fc=ನಾಗರೀಕತೆ ಮತ್ತು ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದಿ ಬಾಹ್ಯಾಕಾಶಕ್ಕೆ ತಮ್ಮ ಅಸ್ತಿತ್ವದ ಬಗ್ಗೆ ಸಿಗ್ನಲ್ ಕಳುಹಿಸುವ ಗ್ರಹಗಳ ಸರಾಸರಿ.
L=ಇಂತಹ ನಾಗರೀಕತೆಗಳು ಬಾಹ್ಯಾಕಾಶಕ್ಕೆ ಪ್ರಸಾರಿಸಿದ ಸಿಗ್ನಲ್ ಬಾಹ್ಯಾಕಾಶದಲ್ಲಿ ಉಳಿದಿರುವ ಸಮಯ.
ಡ್ರೇಕ್ ಪ್ರಸ್ತಾಪಿಸಿರುವ ಈ ಅಂದಾಜುಗಳ ಆಧಾರದ ಮೇಲೆ ನಮ್ಮ ಆಕಾಶಗಂಗೆ ಗ್ಯಾಲಕ್ಸಿಯಲ್ಲಿ ೧೦,೦೦೦ ಗ್ರಹದಲ್ಲಿ ಮಾನವನಂತ ಬುದ್ಧಿ ಜೀವಿಗಳು ಇರಬೇಕು.ನಿರೀಕ್ಷಿಸಬಹುದಾದ ಬ್ರಹ್ಮಾಂಡದಲ್ಲಿ(೪೬.೬ ಶತಕೋಟಿ ಜ್ಯೋತಿರ್ವರ್ಷ) ೧೨೫-೨೫೦ ಶತಕೋಟಿ ಗ್ಯಾಲಕ್ಸಿಗಳಿವೆ.ಇದರಲ್ಲಿ ಕನಿಷ್ಟ ಹತ್ತು ಶೇಕಡ ಅಂದರೆ ೬.೨೫*೧೦೧೮ರಷ್ಟು ಸೂರ್ಯನಂತೆ ಇರುವ ನಕ್ಷತ್ರಗಳಿಗೆ ಗ್ರಹಗಳು ಇವೆ, ಈ ನಕ್ಷತ್ರಗಳ ಕಕ್ಷೆಯಲ್ಲಿ ಇರುವ ಒಂದು ಬಿಲಿಯನ್ ಗ್ರಹದಲ್ಲಿ ಒಂದಲ್ಲಾದರೂ ಅನ್ಯಗ್ರಹ ಜೀವಿಗಳು ಇದ್ದರೆ,೬.೨೫ ಬಿಲಿಯನ್ ಗ್ರಹದಲ್ಲಿ ಅನ್ಯಗ್ರಹ ಜೀವಿಗಳಿದೆ ಎಂದು ಡ್ರೇಕ್ ಈಕ್ವೇಶನ್ ಬಳಸಿ ವಿಜ್ಞಾನಿಗಳು ಅಂದಾಜು ಹಾಕಿದ್ದಾರೆ.

ಮಿಷನ್

[ಬದಲಾಯಿಸಿ]
ARECIBO ಪ್ರಸಾರಿಸಿದ ಸಂದೇಶ।

ಅನ್ಯಗ್ರಹ ಜೀವಿಗಳನ್ನು ಪತ್ತೆಹಚ್ಚುವುದಕ್ಕೆ ವಿಜ್ಞಾನಿಗಳು ಎಸ್.ಇ.ಟಿ.ಐ(SETI)[೫]"ಸರ್ಚ್ ಫ಼ೊರ್ ಎಕ್ಸಟ್ರಾಟೆರಸ್ಟ್ರಿಯಲ್ ಇನ್ಟಲಿಜನ್ಸ್" ಎಂಬ ಸಂಸ್ಥೆಯನ್ನು ಸ್ತಾಪಿಸಿದ್ದರು. ಇದರ ಕೆಳಗೆ ೧೯೭೩ರಲ್ಲಿ ಪಯೋನೀರ್ ೧೦ ಸ್ಪೇಸ್ ಕ್ರಾಫ್ಟ್‍ನಲ್ಲಿ ಗೋಲ್ಡ್ ಐಒನೈಸ್ಡ್ ಅಲ್ಯೂಮಿನಿಯಂ ಪ್ಲೆಕ್ಸ್ (ಅಗಲ:೨೨೯ಮಿಮೀ/೯ ಇಂಚುಗಳು, ಎತ್ತರ: ೧೫೨ ಮಿಮೀ /೬ ಇಂಚುಗಳು, ದಪ್ಪ: ೧.೨೭ ಮಿಮೀ /೦.೦೫ ಇಂಚು, ತೂಕ: ಅಂದಾಜು ೦.೦೧೨೫ ಕಿಲೋಗ್ರಾಂಗಳಷ್ಟು)ನಲ್ಲಿ ವ್ಯಕ್ತಿ ಮತ್ತು ಮಹಿಳೆಯ ಚಿತ್ರ ಹಾಗು ನಮ್ಮ ಆಕಾಶಗಂಗೆ ಗ್ಯಾಲಕ್ಸಿಯಲ್ಲಿ ಸೂರ್ಯನ ತುಲನಾತ್ಮಕ ದೂರ, ಮುಂತಾದ ವಿವರಗಳನ್ನು ಒಳಗೊಂಡಿತ್ತು.

೧೯೭೪ರಲ್ಲಿ ARECIBO ರೇಡಿಯೋ ದೂರದರ್ಶಕ ಬಳಸಿ ARECIBO ಸಂದೇಶವನ್ನು ಬಾಹ್ಯಾಕಾಶಕ್ಕೆ ಪ್ರಸಾರ ಮಾಡಿದ್ದರು. ಇದರಲ್ಲಿ ಒಂದರಿಂದ ಹತ್ತುವರೆಗಿನ ಸಂಖ್ಯೆಗಳು(1 to 10), ಜಲಜನಕ, ಇಂಗಾಲ, ಸಾರಜನಕ, ಆಮ್ಲಜನಕ, ಮತ್ತು ಫಾಸ್ಪರಸ್‍ನ ಪರಮಾಣು ಸಂಖ್ಯೆಗಳು,ಡಿ.ಎನ್‍.ಎ ನ್ಯೂಕ್ಲಿಯೋಟೈಡ್ ಶುಗರ್ ಮತ್ತು ಬೇಸ್ನ ವೈಜ್ಞಾನಿಕ ಸೂತ್ರಗಳು, ಡಿ.ಎನ್.ಎ ಯ ಡಬಲ್ ಹೆಲಿಕ್ಸ್ ರಚನೆಯ ಒಂದು ಗ್ರಾಫಿಕ್ ಚಿತ್ರ,ಮಾನವನ ಗ್ರಾಫಿಕ್ ಚಿತ್ರ, ಆಕಾಶಗಂಗೆ ಗ್ಯಾಲಕ್ಸಿಯ ವಿವರ,ಮತ್ತು ಈ ಸಂದೇಶವನ್ನು ಕಳುಹಿಸಿದ್ದ ARECIBO ರೇಡಿಯೋ ದೂರದರ್ಶಕದ ಗ್ರಾಫಿಕ್ ಚಿತ್ರ ಒಳಗೊಂಡಿತ್ತು.

ವಾವ್ ಸಿಗ್ನಲ್

[ಬದಲಾಯಿಸಿ]
ವಾವ್ ಸಿಗ್ನಲ್।

ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಬಿಗ್ ಇಯರ್ ರೇಡಿಯೋ ದೂರದರ್ಶಕ ಎಸ್.ಇ.ಟಿ.ಐ(SETI) ಯೋಜನೆಯಲ್ಲಿ ಕೆಲಸ ಮಾಡುವಾಗ ಖಗೋಳಶಾಸ್ತ್ರಜ್ಞನಾದ 'ಜೆರಿ ಆರ್.ಇಮನ್' ಆಗಸ್ಟ್ ೧೫, ೧೯೭೭ರಂದು,ಕಾನ್ಸ್ಟೆಲ್ಲೇಷನ್ ಸಗಿಟ್ಟಾರೆಸ್‍ನಿಂದ ಬಲವಾದ ನ್ಯಾರೋಬ್ಯಾಂಡ್ ರೇಡಿಯೋ ಸಿಗ್ನಲ್ ಪತ್ತೆ ಮಾಡಿದರು.ಈ ಸಿಗ್ನಲ್ ಡೀಕೋಡ್ ಮಾಡಿದ ಅವರು ಅದರಲ್ಲಿ "Wow" ಎಂದು ಬರೆದಿದ್ದರಿಂದ ಆ ಸಿಗ್ನಲ್‍ನನ್ನು "Wow signal" ಎಂದು ಕರೆಯತೊಡಗಿದರು.ಇದು ಅನ್ಯಗ್ರಹ ಜೀವಿಗಳು ನಮ್ಮೊಡನೆ ಸಂಪರ್ಕಿಸಲು ಕಳುಹಿಸಿದ ಸಿಗ್ನಲ್ ಆಗಿರಬೇಕು ಎಂದು ಕೆಲವರು ನಂಬಿದ್ದರೆ. ಈ ಸಿಗ್ನಲ್ ಕೇವಲ ೭೨ ಸೆಕೆಂಡ್ ಮಾತ್ರ ಇತ್ತು ನಂತರ ಈ ಸಿಗ್ನಲ್ ಪತ್ತೆಯಾಗಲಿಲ್ಲ.

ಫರ್ಮಿ ಪ್ಯಾರಡಾಕ್ಸ್

[ಬದಲಾಯಿಸಿ]

ಎನ್ರಿಕೊ ಫೆರ್ಮಿ," ಈ ಬ್ರಹ್ಮಾಂಡದಲ್ಲಿ ಸೂರ್ಯನನ್ನು ಹೋಲುವ ಶತಕೋಟಿ ನಕ್ಷತ್ರಗಳಿವೆ,ಇದರಲ್ಲಿ ಅನೇಕ ನಕ್ಷತ್ರಗಳು ಭೂಮಿಗಿಂತ ಶತಕೋಟಿ ವರ್ಷ ಹಳೆಯದಾಗಿದ್ದು.ನಮ್ಮ ಅಸ್ತಿತ್ವದ ಮುಂಚೇನೆ ಬೇರೆ ಗ್ರಹದಲ್ಲಿ ಜೀವರಾಶಿಯಿದ್ದಿದ್ದರೆ ಅವುಗಳು ನಮಗಿಂತಲು ವೈಜ್ಞಾನಿಕವಾಗಿ ಮುಂದುವರೆದಿರಬೇಕು,ಅವುಗಳೇ ನಮ್ಮನ್ನು ಭೇಟಿಮಾಡುವ ಸಾಧ್ಯತೆ ಹೆಚ್ಚಾಗಿರಬೇಕಿತ್ತು, ಇಂದಿನವರೆಗೆ ಇದರ ಬಗ್ಗೆ ಯಾವುದೇ ಸುಳಿವು ಸಿಗದ ಕಾರಣ, ನಮ್ಮ ಬ್ರಹ್ಮಾಂಡದಲ್ಲಿ ನಾವು ಏಕಾಂಗಿ" ಎಂದು ಪ್ರಸ್ತಾಪಿಸಿದರು.ಇದನ್ನು "ಫರ್ಮಿ ಪ್ಯಾರಡಾಕ್ಸ್"[೬] ಎಂದು ಕರೆಯುತ್ತೇವೆ, ಇದಕ್ಕೆ ಉತ್ತರವಾಗಿ:
೧)ಅನ್ಯಗ್ರಹ ಜೀವಿಗಳಿಗೆ ಆಧುನಿಕ ತಂತ್ರಜ್ಞಾನದ ಕೊರತೆಯಿರಬೇಕು
೨)ನೈಸರ್ಗಿಕ ಘಟನೆಗಳಿಂದ ಅವುಗಳು ಅಳಿದುಹೋಗಿರಬೇಕು
೩)ಅನ್ಯಗ್ರಹ ಜೀವಿಗಳು ತುಂಬಾ ದೂರದಲ್ಲಿ ಇರಬಹುದು
೪)ನಾವು ಹುಡುಕಲು ಪ್ರಾರಂಭಿಸಿ ಕೇವಲ ೪ ದಶಕವಾಗಿರುವುದು
೫)ಇಲ್ಲವೇ ಅನ್ಯಗ್ರಹ ಜೀವಿಗಳು ನಮ್ಮೊಡನೆ ಭೂಮಿಯಲ್ಲಿರಬಹುದು ಎಂದು ಕೆಲವು ಕಾಲ್ಪನಿಕ ವಿವರಣೆಗಳನ್ನು ವಿಜ್ಞಾನಿಗಳು ನೀಡಿದ್ದಾರೆ.

ಉಲ್ಲೇಖನಗಳು

[ಬದಲಾಯಿಸಿ]


https://www.britannica.com/biography/Giordano-Bruno
http://www.space.com/25219-drake-equation.html
http://www.physicsoftheuniverse.com/topics_life_early.html
http://waitbutwhy.com/2014/05/fermi-paradox.html
http://www.seti.org/
http://earthobservatory.nasa.gov/Features/UVB/