ಸದಸ್ಯ:VIVEK.P(750)
ಜನನ
[ಬದಲಾಯಿಸಿ]ನನ್ನ ಪ್ರೀತಿಯ ತಂದೆ ತಾಯಿಯಾದಂತ ಜ್ಯೋತಿ ಮತ್ತು ಪ್ರಕಾಶ್ ರವರ ಹಿರಿಯ ಮಗನಾದ ನನ್ನ ಹೆಸರು ವಿವೇಕ್. ನಾನು ೧೯೯೬ ರ ಜುಲೈ ೧೩ರಂದು ಬೆಂಗಳೂರಿನಲ್ಲಿ ಜನಿಸಿದೆ.ನನ್ನ ಅಮ್ಮನ ತವರಿನ ಮನೆಯವರ ಮತ್ತು ಅವರ ತಮ್ಮ ತಂಗಿಯಂದಿರ ಪೈಕಿ ನಾನೇ ಮೊದಲ ಗಂಡು ಮಗು ಅದೇ ರೀತಿ ನನ್ನ ತಂದೆಯವರ ಮನೆಯ ಸದಸ್ಯರಲ್ಲಿ ನಾನು ಮೊದಲ ಮೊಮ್ಮಗ ಈ ಕಾರಣಕ್ಕಾಗಿ ಮನೆಯಲ್ಲಿ ಬಹಳ ಸಂತೋಷ ಮತ್ತು ಉತ್ಸಾಹ ಕೂಡಿತ್ತು.
ಶಿಕ್ಷಣ
[ಬದಲಾಯಿಸಿ]ನನ್ನ ಮೊದಲ ಗುರುವಾದ ನನ್ನ ಅಮ್ಮ ನನಗೆ ಬಹಳಷ್ಟು ವಿದ್ಯಾ ಬುದ್ಧಿ ಹೇಳಿಕೊಟ್ಟು ನನ್ನನ್ನು ಪ್ರೀತಿಯಿಂದ ಬೆಳೆಸಿದ್ದಾರೆ.ನನ್ನ ಮೊದಲ ಶಾಲೆಯಾದ "ವಿಜಯ ಭಾರತಿ ಪಬ್ಲಿಕ್ ಸ್ಕೂಲ್"ನಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತ್ತಿಯಲ್ಲಿ ವ್ಯಾಸಾಂಗ ಮಾಡಿದೆ.ಆ ಚಿಕ್ಕ ವಯಸಿನ್ನಲ್ಲಿ ನನಗೆ ಬಹಳ ನೆನಪಾಗುವ ವಿಷಯವೆಂದರೆ, ನನ್ನ ಶಿಕ್ಷಕಿ ಕೇಳಿದ ಪ್ರಶ್ನೆಗಳಿಗೆ ಎಲ್ಲ ಸರಿಯಾಗಿ ಉತ್ತರ ಕೊಟ್ಟಿದ್ದಕ್ಕೆ ನನಗೆ ೨ ಮಿಠಾಯಿ ಕೊಟ್ಟರೆ ಬೇರೆ ಉಳಿದ ಎಲ್ಲಾ ವಿದ್ಯಾರ್ಥಿಗಳಿಗೆ ತಲ ೧ ಮಿಠಾಯಿ ಕೊಡುತಿದ್ದರು.
ನನ್ನ ಮುಂದಿನ ವಿದ್ಯಾಭ್ಯಾಸ ನನ್ನ ತಂದೆಯವರ ಕೆಲಸ ವರ್ಗಾವಣೆ ಆದ ಕಾರಣ ನಾನು ಬೇರೆಯೊಂದು ಶಾಲೆ ಸೇರಬೇಕಾಗಿತ್ತು.ಹೊಸೂರು ರಸ್ತೆಯಲ್ಲಿರುವ ಬೇಗೂರು ಗ್ರಾಮಂತರದ ಹೊಂಗಸಂದ್ರದಲ್ಲಿರುವ ಶಾಲೆಯಾದ "ಬ್ಲೋಸ್ಸೋಮ್ಸ್ "ಎಂಬ ಶಾಲೆಯಲ್ಲಿ ೧ನೇ ತರಗತಿಯಿಂದ ೩ನೇ ತರಗತಿಯವರೆಗೆ ಓದಿದೆ.ಇಲ್ಲಿ ನೆನಪಾಗುವ ಸಿಹಿ ವಿಷಯಗಳೆಂದರೇ, ಆ ಶಾಲೆಯ ದಿನಾಚಾರಣೆಗೆ ನಾನು ೩ ರಿಂದ ೪ ಹಾಡುಗಳಿಗೆ ಕುಣಿದು ಬಹಳಷ್ಟು ಆನಂದಿಸಿದೆ. ಇನ್ನೊಂದು ವಿಷಯವೆಂದರೆ ಅಲ್ಲಿ ನನಗೆ ದೊರಕಿದ ಶಿಕ್ಷಕರು ಮತ್ತು ಸ್ನೇಹಿತರು.ಅವರು ನನ್ನ ಜೀವನದಲ್ಲಿ ಮರೆಯಲಾಗದಷ್ಟು ಒಳ್ಳೆಯತನವನ್ನು ಮತ್ತು ಸ್ನೇಹಿತರ ಹಾಗು ಶಿಕ್ಷಕರ ಪ್ರೀತಿಯನ್ನು ಅನುಕಂಪಿಸಿದರು.ಅದೊಂದು ಸಣ್ಣ ಶಾಲೆಯಾದರಿಂದ ಮೊತ್ತ ವಿದ್ಯಾರ್ಥಿಗಳ ಸಂಖ್ಯೆ ೧೦೦ನ್ನೂ ಕೂಡ ದಾಟಿರಲಿಲ್ಲ.ನನ್ನ ತರಗತಿಯಲ್ಲಿ ಓದುತ್ತಿದ್ದವರ ಸಂಖ್ಯೆ ೫. ಕಾರ್ತಿಕ್, ಯೆಶ್ವಂತ್, ಅರ್ಫಾಥ್, ಪಲ್ಲವಿ ಎಲ್ಲರೂ ನನ್ನ ಅಚ್ಚು ಮೆಚಿನ್ನ ಸ್ನೇಹಿತರು.ನನ್ನ ತರಗತಿಯ ಶಿಕ್ಷಕಿಯಾದ ಆಶಾರವರೆಂದರೆ ನನಗೆ ಬಹಳಷ್ಟು ಗೌರವ.ಈ ಸಮಯದಲ್ಲಿ ನೆನಪಾಗುವ ಮತ್ತೊಂದು ವಿಷಯವೆಂದರೆ ನಮ್ಮ ಪ್ರವಾಸೋದ್ಯಮ. ನಮ್ಮ ಶಿಕ್ಷಣ ಪ್ರವಾಸ "ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ"ವೆಂದು ನಿರ್ಧಾರಮಾಡಿದರು.ಮೊದಲ ಬಾರಿಗೆ ಈ ರೀತಿಯಾದ ಪ್ರವಾಸವನ್ನು ಅನುಭವಿಸಿದ ನಾನು ಬಹಳಷ್ಟು ಆನಂದಿಸಿದೆ.
ಮುಂದಿನ ವಿದ್ಯಾಭ್ಯಾಸ ಇನ್ನೂ ಉನ್ನತವಾದ ಶಿಕ್ಷಣವನ್ನು ಪಡೆಯಲು ನಾನು ಮತ್ತೊಮ್ಮೆ ಶಾಲೆಯನ್ನು ಬದಲಾಯಿಸಿದೆ. ನನ್ನ ಮನೆಯಿಂದ ೧ ಮೈಲು ದೂರದಲ್ಲಿ ಇರುವಂತಹ "ಸಂತ ಮೇರೀಸ್ ಶಾಲೆ" ಯಲ್ಲಿ ೪ನೇ ತರಗತಿಯಿಂದ ೧೦ನೇ ತರಗತಿಯವರೆಗೆ ಓದಿದೆ.ಇಲ್ಲಿ ನನಗೆ ಬಹಳಷ್ಟು ಸ್ನೇಹಿತರ ಪರಿಚಯವಾಹಿತು. ಇದರ ಜೊತೆ ಜೊತೆಗೆ ನನ್ನ ವಿದ್ಯಾಭ್ಯಾಸ ಕೂಡ ಉನ್ನತವಾಗಿ ಮುಂದುವರೆಯಿತು.ನನ್ನ ಸ್ನೇಹಿತರಾದ ಲಕ್ಷ್ಮೀ ನಾರಾಯನ, ಅಭಿಶೇಕ್, ಶಕ್ತಿ , ನವೀನ್ ಹೀಗೆ ಹಲವಾರು ಮಂದಿ ನನಗೆ ಪ್ರಾಣ ಸ್ನೇಹಿತರಾದರು.೧೦ನೇ ತರಗತಿಯಲ್ಲಿ ಬಹಳ ಸಿಹಿ ನೆನಪಿನ ವಿಷಯವೆಂದರೆ ನಮ್ಮ ಪ್ರವಾಸೋದ್ಯಮ. ಕೇರಳದ ಕೊಚ್ಚಿ ನಗರದ ಸಮುದ್ರ ತೀರದಲ್ಲಿರುವ ಪ್ರವಾಸೊದ್ಯಮ ಸ್ಥಳಗಲು ಮತ್ತು ವಂಡರ್-ಲಾ ಅಮ್ಯೂಸ್ಮೆಂಟ್ ಪಾರ್ಕ್ ನಮ್ಮ ಪ್ರವಾಸೊದ್ಯಮ ಸ್ಥಳಗಳಾಗಿದ್ದವು. ಬೆಂಗಳೂರಿನಿಂದ ೫೪೯ ಕಿ.ಮೀ ದೂರದ ಕೊಚ್ಚಿಗೆ ನಾವು ಬಸ್ಸಿನಲ್ಲಿ ಪ್ರಯಾಣ ಮಾಡಿದೆವು. ಪ್ರಯಾಣದ ಹಿಡೀ ಸಮಯ ನಾನು ಮತ್ತು ನನ್ನ ಸ್ನೇಹಿತರು ಹಾಡುಗಳನ್ನು ಹಾಡುತ್ತ ಕುಣಿದು ಕುಪ್ಪಳಿಸಿದೆವು. ಕೊಚ್ಚಿ ನೌಕಾ ನಿಲ್ದಾಣದ ಒಂದು ತೀರದಿಂದ ಇನ್ನೊಂದು ತೀರಕ್ಕೆ ಒಂದು ದೊಡ್ಡ ಹಡಗಿನಲ್ಲಿ ಹೋದೆವು. ಸಮುದ್ರದ ನಡುವೆ ಹಡಗಿನ ಚಲನೆ ನಮ್ಮ ಮನಸ್ಸಿನ ಉತ್ಸಾಹ ಮತ್ತು ಆನಂದವನ್ನು ಹೆಚ್ಚಿಸಿತು. ಒಂದು ಕಡೆ ವಿಶಾಲವಾದ ಸಮುದ್ರದಲ್ಲಿ ಹಂದಿ ಮೀನುಗಳ ಜಿಗಿದಾಟ ಮತ್ತೊಂದು ಕಡೆ ಬೃಹದಾಕಾರವಾದ ಸರಕು ಸಾಗಾಣಿಕೆ ಯಂತ್ರಗಳು ಯಲ್ಲವು ನಮ್ಮ ಮನಸ್ಸನ್ನು ಸೆಳೆಹಿತು. ವಂಡರ್-ಲಾ ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ನಮ್ಮ ಆಟ ಓಟಗಳು ಜೀವನದಲ್ಲೆ ಮರೆಯಲಾಗದ ಆನಂದದ ದಿನ. ೨೦೧೨ ಮೇ ತಿಂಗಳಿನಲ್ಲಿ ನಮ್ಮ ಎಸ್.ಎಸ್.ಎಲ್.ಸಿ ಪರೀಕ್ಷೆ. ಉನ್ನತ ವಿದ್ಯಾರ್ಥಿಯಾದ ನಾನು ೮೬% ನಿಂದ ಶ್ರೇಷ್ಟ ದರ್ಜೆಯಲ್ಲಿ ಉತೀರ್ಣನಾದೆ.
ಕಾಲೇಜು ದಿನಗಳು
[ಬದಲಾಯಿಸಿ]ಮುಂದಿನ ವಿದ್ಯಾಭ್ಯಾಸವನ್ನು ಹೊಸೂರು ರಸ್ತೆಯಲ್ಲಿರುವ ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಂದುವರೆಸಿದೆ. ಹೊಸ ಪ್ರಪಂಚಕ್ಕೆ ಕಾಲಿಟ್ಟಿದ ನಾನು ಬಹಳ ಕಲಿತೆ. ಪಿ.ಸಿ.ಎಮ್.ಬಿ ಪಠ್ಯಕ್ರಮವನ್ನು ಹಾರಿಸಿಕೊಂಡೆ. ಕನ್ನಡ ಭಾಷೆಯಲ್ಲಿರುವ ಪ್ರೀತಿಯಿಂದ ನಾನು ಕನ್ನಡವನ್ನು ಎರಡನೇ ಭಾಷೆಯನ್ನಾಗಿ ಆರಿಸಿಕೊಂಡೆ.೧ನೇ ವರ್ಷದ ಪಿ.ಯುವಿನಲ್ಲಿ ಬಹಳ ಮಂದಗತಿಯಾದೆ,ಇದರ ಪ್ರಭಾವ ನನ್ನ ಶಿಕ್ಷಣ ಹಾಗು ಫಲಿತಾಂಶದಲ್ಲಿ ಏರು ಪೇರು ಉಂಟುಮಾಡಿತು. ಕೊನೆಯ ಮುಖ್ಯ ಪರೀಕ್ಷೆಯಲ್ಲಿ ತೃಪ್ತೀಕರವಾದ ಪಲಿತಾಂಶ ಸಿಗದಿದ್ದರೂ ಒಂದು ಮಟ್ಟಕ್ಕೆ ತೇರ್ಗಡೆಯಾದೆಂಬ ಸಂತೊಷವಿತ್ತು. ೨ ನೇ ಪಿ.ಯುವಿನಲ್ಲಿ ಕೊಂಚ ಮಟ್ಟಿಗೆ ಚೆನ್ನಾಗಿ ಓದಿ, ಮುಖ್ಯ ಪರೀಕ್ಷೆಯಲ್ಲಿ ೮೦% ರಷ್ಟು ಅಂಖಗಳೊಂದಿಗೆ ಉತ್ತೀರ್ಣನಾದೆ. ನನ್ನ ಕಾಲೇಜಿನ ದಿನಗಳಲ್ಲಿ ನನಗೆ ಸಿಹಿ ನೆನಪೆಂದರೇ ನಾನು ಪಡೆದಂತಹ ಪ್ರಮಾಣಪತ್ರಗಲು ಹಾಗು ಮುಖ್ಯವಾಗಿ ನನ್ನ ಸ್ನೇಹಿತರು. ಮಂದಗತಿಯಾಗಿ ಇದ್ದ ನನಗೆ ಅರಿವನ್ನು ಮೂಡಿಸಿದ ನನ್ನ ತರಗತಿಯ ಶಿಕ್ಷಕ "ಜಾರ್ಜ್ ವರ್ಗೀಸ್"ಅವರನ್ನು ನಾನೆಂದು ಮರೆಯುವುದಿಲ್ಲ. ನಮ್ಮ ತರಗತಿಯಲ್ಲಿ ಇದ್ದಂತ ಕಿರಣ್ ಮತ್ತು ನಿತಿನ್ ಕನ್ನಡ ಭಾಷೆಯಲ್ಲಿ ಬಹಳಷ್ಟು ಪ್ರೀತಿಯನ್ನೋಂದಿದ್ದರು. ಈಗ ನನ್ನ ಡಿಗರೀ ಪದವಿಯನ್ನು ಪಡೆಯಲು ಅದೇ ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಉಸುರಿಯ ಚಳಕದರಿಮೆ (ಬಯೋಟೆಕ್ನಾಲಜಿ) ಕೊರ್ಸಿನಲ್ಲಿ ವ್ಯಾಸಾಂಗ ಮಾಡುತಿದ್ದೆನೆ.
This user is a member of WikiProject Education in India |
ಉಪಪುಟಗಳು
[ಬದಲಾಯಿಸಿ]In this ಸದಸ್ಯspace:
VIVEK.P(750) |