ಸದಸ್ಯ:VIVEK.P(750)/sandbox
ಹಿಮಾಲಯನ್ ಲಾವಕ್ಕಿ
[ಬದಲಾಯಿಸಿ]ಹಿಮಾಲಯನ್ ಲಾವಕ್ಕಿಗಳು(Ophrysia supercilioa) ಫೆಸೆಂಟ್ ಕುಟುಂಬಕ್ಕೆ ಸೇರಿದ ಒಂದು ಮಧ್ಯಮ ಗಾತ್ರದ ಲಾವಕ್ಕಿಯಾಗಿದ್ದು, ೧೮೭೬ರಲ್ಲಿ ಇದರ ಕೊನೆಯ ವರದಿಯಾಗಿದೆ.ಈ ಜಾತಿಯ ಅಪರೂಪದ ಲಾವಕ್ಕಿಗಳು ಭಾರತದಲ್ಲಿ ಕೇವಲ ಉತ್ತರಾಖಂಡ್ ಹಾಗು ಪಶ್ಚಿಮ ಹಿಮಾಲಯಗಳಲ್ಲಿ ಕಾಣಬಹುದು. ನೈಸರ್ಗಿಕ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣಾ ಕೇಂದ್ರದ ಪ್ರಕಾರ ಕೆಂಪು ಪಟ್ಟಿಯ ಅಡಿಯಲ್ಲಿ ಬರುವ ಅಳಿವಿನಂಚಿನಲ್ಲಿರುವ ಪ್ರಭೇದ ಪಕ್ಷಿಗಳಲ್ಲಿ ಹಿಮಾಲಯನ್ ಲಾವಕ್ಕಿ ಕೂಡ ಒಂದಾಗಿದೆ[೧][೨].
ಲಕ್ಷಣಗಳು
[ಬದಲಾಯಿಸಿ]ಹಿಮಾಲಯನ್ ಲಾವಕ್ಕಿಗಳು ಸಾಮಾನ್ಯವಾಗಿ ನೋಡಲು ಮತ್ತಿತರ ಲಾವಕ್ಕಿಗಳಂತೆ ಒಂದೇ ರೀತಿಯಲ್ಲಿ ಇರುತ್ತವೆ, ಆದ್ದರಿಂದ ಇವುಗಳ ಜಾತಿಯನ್ನು ಗುರುತಿಸುವುದು ಕಷ್ಟವಾಗುತ್ತದೆ. ಹಿಮಾಲಯನ್ ಲಾವಕ್ಕಿಗಳ ಧ್ವನಿ ವಿಶಿಷ್ಟವಾಗಿದ್ದು, ಅವುಗಳ ಕೆಂಪು ಕೊಕ್ಕು,ಕಾಲುಗಳು ಹಾಗು ಕಣ್ಣಿನ ಹಿಂದೆ ಮುಂದಿರುವ ಬಿಳಿ ಚುಕ್ಕಿಗಳು ಇದರ ಜಾತಿಯನ್ನು ಗುರ್ತಿಸುತ್ತದೆ[೩]. ಬೇರೆ ಜಾತಿಯ ಲಾವಕ್ಕಿಗಳಿಗಿಂತ ಈ ಹಿಮಾಲಯನ್ ಲಾವಕ್ಕಿಗಳಿಗೆ ಉದ್ದವಾದ ಬಾಲವಿರುತ್ತದೆ. ಹೆಣ್ಣು ಹಕ್ಕಿಗಳು ,ಕಂದು-ಹಳದಿಯ ಬಣ್ಣದಲ್ಲಿದ್ದು, ಬೂದು ಬಣ್ಣದ ಕಣ್ಣುಬ್ಬುಗಳು, ಹಣೆ ಮತ್ತು ಕುತ್ತಿಗೆಯಿಂದ ಕೂಡಿರುತ್ತದ್ದೆ.ಗಂಡು ಹಿಮಾಲಯನ್ ಲಾವಕ್ಕಿಗಳು ಸ್ಲೇಟಿನ ಬೂದು ಬಣ್ಣವಾಗಿದ್ದು, ಬಿಳಿ ಹಣೆ ಮತ್ತು ಕಣ್ಣುಬ್ಬುಗಳಿಂದ ಕೂಡಿ, ಮೈಯೆಲ್ಲ ಕಪ್ಪು ಗೆರೆಗಳನ್ನು[೪] ಹೊಂದಿರುತ್ತದೆ.
ವಾಸಸ್ಥಾನದ ಹಂಚಿಕೆ
[ಬದಲಾಯಿಸಿ]ಹಿಮಾಲಯನ್ ಲಾವಕ್ಕಿಗಳು ಮಸ್ಸೂರಿಯಿಂದ ನೈನಿತಾಲ್ ವರೆಗೆ ವಿಸ್ತಾರಗೊಂಡಿದೆ. ಮಸ್ಸೂರಿಯಲ್ಲಿ(೧೮೩೬) ಮೊದಲ ಲಾವಕ್ಕಿಯ ಜಾತಿಯನ್ನು ಸಂಗ್ರಹಿಸಿದ್ದು , ಕೊನೆಯದಾಗಿ ನೈನಿತಾಲ್ನಲ್ಲಿ(೧೮೭೬) ಸಂಗ್ರಹಿಸಲಾಗಿದೆ. ಈ ಜಾತಿಯ ಹಕ್ಕಿಗಳು ವಿಸ್ತಾರವಾದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಸುಮಾರು ೧೨ ಜಾತಿಯ ಲಾವಕ್ಕಿಗಳನ್ನು ೧೮೩೬ ರಿಂದ ೧೮೭೬ ರವರೆಗೆ ಗರ್ವಾಲ್ ಎಂಬ ಪುಟ್ಟ ಪ್ರಾಂಥ್ಯದಲ್ಲಿ ಪತ್ತೆಯಚ್ಚಲಾಗಿತ್ತು. ರಾಸ್ಮುಸ್ಸೆನ್ ಮತ್ತು ಆಂಡರ್ಟನ್(೨೦೦೫)ರವರ ಪ್ರಕಾರ ಬರೀ ೯ ಜಾತಿಯ ಹಕ್ಕಿಗಳನ್ನು ೧೮೪೬ ರಿಂದ ೧೮೬೫ರವರೆಗೆ ಪತ್ತೆಯಚ್ಚಲಾಗಿತ್ತೆ ಹೊರತು ಸಂಗ್ರಹಿಸಿರಲಿಲ್ಲ, ತದನಂತರ ೧೮೬೫ರಲ್ಲಿ ಕೆನ್ನೆತ್ ಮ್ಯಾಕ್ಕಿನ್ನಾನ್ ರವರು ನವೆಂಬರ್ ತಿಂಗಳಲ್ಲಿ ಮಸ್ಸೂರಿ ಪ್ರಾಂಥ್ಯದ ಮಧ್ಯದಲ್ಲಿ ಬರುವ ಬುದ್ರಾಜ್ ಮತ್ತು ಬೆನಾಗ್ ಜಾಗದಲ್ಲಿ ಎರಡು ಲಾವಕ್ಕಿಯ ಜಾತಿಯನ್ನು ಸಂಗ್ರಹಿಸಿದ್ದಾರೆ.ಎರಡು ವರ್ಷಗಳ ನಂತರ ಮತ್ತೆ ಡೆಹ್ರಾಡೂನ್ ಬಳಿ ಜರಿಪಾನಿಯೆಂಬ ಸ್ಥಳದಲ್ಲಿ ೫ ಜಾತಿಯ ಲಾವಕ್ಕಿಗಳು ಪತ್ತೆಯಾದವು. ಕೊನೆಯದಾಗಿ ೭೦೦೦ ಅಡಿಗಳ ಎತ್ತರದ ಶೇರ್-ಕಾ-ದಂಡ ಬಳಿ ಸೆನಾನಿ ಕಾರ್ವಿತನ್ ರವರು ಡಿಸೆಂಬರ್ ೧೯೭೬ರಂದು ಈ ಹಿಮಾಲಯನ್ ಲಾವಕ್ಕಿಯ ಕೊನೆಯ ಜಾತಿಯನ್ನು ಆದಾರಿತವಾಗಿ ಪತ್ತೆಯಚ್ಚಿದ್ದರು[೫]. ಈ ಹಕ್ಕಿಯ ಜೀವನದಿ ಭಾರತವಾದರು, ಬದುಕುಳಿಯುವ ಶೇಖಡತೆ ಬಹಳ ಕಡಿಮೆ ಎಂದು ಅಂತಾರಾಷ್ಟ್ರೀಯ ಪಕ್ಷಿ ಜೀವಿ ಸಮಿತಿ ೨೦೦೧ರಲ್ಲಿ ಘೋಶಿಸಿದರು. ಸಿಡ್ನಿ ಡಿಲನ್ ರಿಪ್ಲೆರವರು ೧೯೫೨ರಲ್ಲಿ ಸನೊ ಕಲೊ ತಿತ್ರ ಎಂಬ ಹಿಮಾಲಯನ್ ಲಾವಕ್ಕಿಯ ಜಾತಿಯೊಂದನ್ನು ನೆಪಾಳ ದೇಶದ ದೈಲೆಕ್ ಜಿಲ್ಲೆಯಲ್ಲಿ ಪತ್ತೆಯಚ್ಚಿ ದಾಖಲಿಸಿದ್ದಾರೆ. ಈ ಹಕ್ಕಿಗಳು ಸಂಪೂರ್ಣವಾಗಿ ಗತಿಸಿದೆಯೆಂಬ ದಾಖಲೆಗಳು ಇನ್ನು ಸ್ಪಷ್ಟವಾಗಿ ರುಜುವಾಗಿಲ್ಲ. ರಿಪ್ಲೆಯವರು ಹೇಳುವ ಪ್ರಕಾರ, ಪೂರ್ವ ಕುಮಾನ್ ಹತ್ತಿರದ ಲೊಹಘಟ್ ಗ್ರಾಮದಲ್ಲಿ ಹಾಗು ದೈಲೆಕ್ ಜಿಲ್ಲೆಗಳಲ್ಲಿ ಗುಂಡೇಟಿಗೆ ಬಲಿಯಾದ ಲಾವಕ್ಕಿಗಳ ವರದಿಯನ್ನು ಸ್ಪಷ್ಟಗೊಳಿಸಿದ್ದಾರೆ[೫]. ನಂತರ ೧೯೯೨ರಲ್ಲಿ ನೇಗಿಯವರು ಮಸ್ಸೂರಿಯ ಬಳಿ ಲಾವಾಕ್ಕಿಯ ಗುಂಪನ್ನು ಪ್ರತ್ಯಕ್ಷದರ್ಶಿಯಾಗಿ ಪತ್ತೆಯಚ್ಚಿದ್ದಾರೆ ಎಂಬ ವರದಿಯಾಗಿದೆ. ಅಳಿವಿನಂಚಿನಲ್ಲಿರುವ ಹಿಮಾಲಯನ್ ಲಾವಕ್ಕಿಗಳನ್ನು ,ಪ್ರಮುಖ ಪಕ್ಷಿಶಾಸ್ತ್ರಜ್ಞರಾದ ರವಿಶಂಕರನ್, ರಾಹುಲ್ ಕೌಲ್, ಸಲೀಮ್ ಜವೀದ್ ಮತ್ತು ರಾಜಿವ್ ಕಲ್ಸಿರವರು ಇತ್ತೀಚಿನ ವರ್ಷಗಳಲ್ಲಿ ಶೋದನೆಯನ್ನು ಮುಂದುವರೆಸಿದ್ದಾರೆ[೬]. ಅಂತಾರಾಷ್ಟ್ರೀಯ ಪಕ್ಷಿ ಜೀವಿ ಸಮಿತಿಯ ಪ್ರಕಾರ ಈ ಜಾತಿಯ ಲಾವಕ್ಕಿಗಳು ಸುಮಾರು ೫೦ ಕ್ಕಿಂತ ಕೆಳಕ್ಕೆ ಕುಗ್ಗಬಹುದೆಂದು ಪರಿಘಣಿಸಿದ್ದಾರೆ[೪].
ಆವಾಸಸ್ಥಾನ ಮತ್ತು ಪರಿಸರ ವಿಜ್ಞಾನ
[ಬದಲಾಯಿಸಿ]ಹಿಮಾಲಯನ್ ಲಾವಕ್ಕಿಗಳು ೧೬೫೦ ರಿಂದ ೨೪೦೦ಮೀ. ಎತ್ತರದ ಪ್ರದೇಶಗಳಲ್ಲಿ ವ್ಯಾಪ್ತಿಗೊಂಡಿರುತ್ತದೆ. ಫ್ರಾಂಕ್ ಫಿನ್(೧೯೧೧)ರವರ ಸಲಹೆಗಳ ಪ್ರಕಾರ ಹಿಮಾಲಯನ್ ಲಾವಕ್ಕಿಗಳು ಚಳಿಗಾಲದಲ್ಲಿ ಆಗಮಿಸುವ ವಲಸೆ ಹಕ್ಕಿಗಳಾಗಿದ್ದು, ಗಿಡ್ಡ ರೆಕ್ಕೆಗಳನ್ನು ಹೊಂದಿರುತ್ತದೆ ಎಂಬ ವವಿಷಯ ಸ್ಪಷ್ಟವಾಗಿಲ್ಲ. ಹಟ್ಟನ್ ಮತ್ತು ಮತ್ತಿತರ ಸಂಶೋಧಕರು ಗುರುತಿಸುವಂತೆ, ಈ ಲಾವಕ್ಕಿಗಳು, ೬-೧೦ ಪಕ್ಷಿಗಳು ಕೂಡಿದ ಸಣ್ಣ ಗುಂಪು[೪], ಹುಲ್ಲು ಮತ್ತೆ ಪೊದೆಗಳ ಮಧ್ಯೆ ವಾಸಿಸುತ್ತ, ಹುಲ್ಲು ಬೀಜಗಳನ್ನು ಆಹರವನ್ನಾಗಿ ಸ್ವೀಕರಿಸಿ, ಶಿಳ್ಳು ಶಬ್ದದಿಂದ ಚಿಗರೊಡೆಯುತಿತ್ತು ಎಂದು ದಾಖಲಿಸಿದ್ದಾರೆ.[೫]
ಪ್ರಾಣಾಪಾಯ
[ಬದಲಾಯಿಸಿ]ಅಭಿಪ್ರಾಯಗಳಂತೆ ಹಿಮಾಲಯನ್ ಲಾವಕ್ಕಿಗಳ ಅಳಿವಿನಂಚಿನಕ್ಕೆ ಮುಖ್ಯ ಕಾರಣವೆಂದರೆ, ಬೇಟೆ ಮತ್ತು ಆವಾಸಸ್ಥಾನ ಮಾರ್ಪಾಡುಗಳು[೧]. ಇದಲ್ಲದೆ ಅಪರೂಪದ ಹಕ್ಕಿಗಳಾಗಿರುವ ಹಿಮಾಲಯನ್ ಲಾವಕ್ಕಿಗಳು ಮಾನವನ ಒತ್ತಡ್ಡಕ್ಕಿಂತ ಮುಂಚಿತವಾಗಿಯೆ ಮರಣ ಹೊಂದುತ್ತವೆ. ಕೆಲವು ದಶಕಗಳ ಹಿಂದೆ, ಮಸ್ಸೂರಿಯ ಬಳಿ ಸುಣ್ಣದ ಗಣಿಗಾರಿಕೆಯನ್ನು ಪ್ರಚಲಿತಗೊಳಿಸಲಾಗಿತ್ತು, ಆದರೆ ಪ್ರಸ್ತುತವಾಗಿ ಸರ್ವೋಚ್ಚ ನ್ಯಾಯಲಯದ ಆದೇಶದಂತೆ ಗಣಿಗಾರಿಕೆಯನ್ನು ನಿಲ್ಲಿಸಲಾಗಿದೆ. ತೋಟದ ಪ್ರದೇಶಗಳನ್ನು ಮಾಡುವ ಸಲಹೆಯಿಂದ ಆವಾಸಸ್ಥಾನ ಮಾರ್ಪಾಡುಗಳು ಹೆಚ್ಚಾಗಿ , ಈ ಜಾತಿಯ ಲಾವಕ್ಕಿಗಲು ಅಳಿವಿನಂಚಿನಲ್ಲಿ ಸಿಲುಕಿಕೊಂಡಿದೆ.
ಸಂರಕ್ಷಣಾ ಕ್ರಮಗಳು
[ಬದಲಾಯಿಸಿ]ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ(೧೯೭೨) ಪ್ರಕಾರ ಹಿಮಾಲಯನ್ ಲಾವಕ್ಕಿಗಳು, ವೇಳಾಪಟ್ಟಿ ೧ರ ಅಡಿಯಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಆದರೆ ಅವುಗಳ ಆವಾಸಸ್ಥಾನ ರಕ್ಷಣೆ ಮಾತ್ರ ಇನ್ನು ಸಂಪೂರ್ಣವಾಗಿಲ್ಲ.ಮೂರು ದಶಕಗಳ ಹಿಂದೆ ಕಾರ್ಯ ನಿರ್ವಯಿಸುತ್ತಿದ್ದ ಗಣಿಗಾರಿಕೆ, ಸರ್ವೋಚ್ಚ ನ್ಯಾಯಲಯದ ಆದೇಶದಂತೆ ಪ್ರಸ್ತುತ ಸ್ತಗಿತಗೊಳಿಸಿಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಿರ್ದಿಷ್ಟವಾದ ಮಸ್ಸೂರಿಯ ಸುತ್ತಮುತ್ತ ಪ್ರದೇಶಗಳಲ್ಲಿ, ಲಾವಕ್ಕಿಗಳ ಆವಾಸಸ್ಥಾನ ಮಾರ್ಪಾಡುಗಳು ಹೆಚ್ಚುತಿದ್ದು, ಸೇನೆಯ ಪರಿಸರ ಕಾರ್ಯಾಪಡೆ ಮಸ್ಸೂರಿಯ ಬೆಟ್ಟಗಳ್ಳಲ್ಲಿ ಗಿಡಮರಗಳನ್ನು ನೆಟ್ಟಿ ಪೋಶಿಸುತ್ತಿದ್ದಾರೆ.ಬುದ್ರಾಜ್,ಬೆನಾಗ್ ಮತ್ತು ಜರಿಪಾನಿ ವನ್ಯಜೀವಿ ಅಭಯಾರಣ್ಯಗಳನ್ನು ಪ್ರಮುಖ ಹಕ್ಕಿ ಪ್ರದೇಶಗಳನ್ನಾಗಿ ಗುರುತಿಸಲಾಗಿದ್ದು ಅವುಗಳ ರಕ್ಷಣೆಯನ್ನು ಮಾಡುವ ಪ್ರಯತ್ನದಲ್ಲಿದ್ದಾರೆ.
ಶಿಫಾರಸು
[ಬದಲಾಯಿಸಿ]ಕಲ್ಸಿರವರ ಸಲಹೆಗಳ ಪ್ರಕಾರ ಹಿಲಾಲುದ್ದಿನ್ರವರು ಮಾಡಿರುವ ಕಿರುಪಟ್ಟಿಗೆ ಸೇರಿಸಲಾಗಿರುವ ಪ್ರದೇಶಗಳಲ್ಲಿ ಅಗತ್ಯವಾದ ಸರಣೀಯ ಮೀಸಲಾದ ಮತ್ತು ಯೋಜಿತ ಸಮೀಕ್ಷೆಯನ್ನು ನಡೆಸಬೇಕಾಗಿದೆ.ಈ ಎಲ್ಲಾ ಪ್ರದೇಶಗಳಲ್ಲಿ ಸಮೀಕ್ಷೆಯನ್ನು ಕೈಗೊಳ್ಳುತ್ತ, ಇಲ್ಲಿ ಸಿಕ್ಕಂತ ಗರಿಗಳು ಅಥವ ಮೊಟ್ಟೆ ಚಿಪ್ಪುಗಳನ್ನು ಹಿಮಾಲಯನ್ ಲಾವಕ್ಕಿಗಳದ್ದೇ ಎಂದು ಶಂಕಿಸಿ ಆಣ್ವಿಕ ಮತ್ತು ಆನುವಂಶಿಕ ವಿಶ್ಲೇಷಣೆಯನ್ನು ಕೈಗೊಳ್ಳಬೇಕಾಗಿದೆ.
ಉಲ್ಲೇಖನಗಳು
[ಬದಲಾಯಿಸಿ]- ↑ ೧.೦ ೧.೧ http://www.sciencelog.net/2015/03/himalayan-quail-facts.html
- ↑ http://m.gulfnews.com/78-indian-bird-species-face-extinction-1.436841?utm_referrer=
- ↑ https://archive.org/stream/birdsindia04oaterich#page/104/mode/2up
- ↑ ೪.೦ ೪.೧ ೪.೨ http://www.wwfindia.org/about_wwf/priority_species/threatened_species/himalayan_quail/
- ↑ ೫.೦ ೫.೧ ೫.೨ http://www.birdlife.org/datazone/speciesfactsheet.php?id=235
- ↑ http://www.planetofbirds.com/the-himalayan-quail-ophrysia-superciliosa-extinct-or-evasive